ತಾಪ್ತಿ ನದಿ

ತಪತೀ ನದಿಸಂಪಾದಿಸಿ

ತಾಪ್ತಿ ನದಿ ಮಧ್ಯ ಭಾರತದ ಒಂದು ನದಿ. ಇದರ ಮೂಲ ಹೆಸರು ತಾಪಿ ನದಿ ಎಂದು. ಭಾರತ ಜಂಬೂದ್ವೀಪದ ಮುಖ್ಯ ನದಿಗಳಲ್ಲಿ ಒಂದಾದ ತಾಪ್ತಿ ನದಿಯ ಉದ್ದ ಸುಮಾರು ೭೨೪ ಕಿ.ಮೀ.ಗಳು. ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಮೂರು ದೊಡ್ಡ ನದಿಗಳಲ್ಲಿ ತಾಪ್ತಿ ಒಂದು. ನರ್ಮದಾ ನದಿ ಮತ್ತು ಮಾಹಿ ನದಿಗಳು ಉಳಿದೆರಡು. ತಾಪ್ತಿ ನದಿಯು ಮಧ್ಯ ಪ್ರದೇಶ ರಾಜ್ಯದ ದಕ್ಷಿಣ ಭಾಗದಲ್ಲಿ ಸಾತ್ಪುರ ಪರ್ವತಗಳಲ್ಲಿ ಉಗಮಿಸುವುದು. ತಾಪ್ತಿ ನದಿಯ ಜಲಾನಯನ ಪ್ರದೇಶಗಳು ಮಧ್ಯ ಪ್ರದೇಶದ ನಿಮಾರ್ ಪ್ರದೇಶ, ಮಹಾರಾಷ್ಟ್ರವಿದರ್ಭ ಮತ್ತು ಕಾಂದೇಶ್ ಹಾಗೂ ದಕ್ಷಿಣ ಗುಜರಾತ್. ತಾಪ್ತಿ ನದಿಯು ಸೂರತ್ ಬಳಿ ಖಂಭಾಟ್ ಕೊಲ್ಲಿಯನ್ನು ಸೇರುತ್ತದೆ. ಪೂರ್ಣಾ, ಗಿರ್ನಾ ಮತ್ತು ಪನ್ಜಾರಾ ನದಿಗಳು ತಾಪ್ತಿ ನದಿಯ ಮುಖ್ಯ ಉಪನದಿಗಳು. ತಾಪ್ತಿ ನದಿಗೆ ಅಡ್ಡಲಾಗಿ ಮಹಾರಾಷ್ಟ್ರದ ಜಳಗಾಂವ್ ಬಳಿ ಹಾತ್ನೂರ್ ಆಣೆ ಮತ್ತು ಗುಜರಾತ್‌ನ ಸೋನ್‌ಗಢದ ಬಳಿ ಉಕಾಯ್ ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ.

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

  • ??

ಬಾಹ್ಯ ಸಂಪರ್ಕಗಳುಸಂಪಾದಿಸಿ

[[zh:达布蒂