ತಕ್ಷಶಿಲಾ
ತಕ್ಷಶಿಲಾ ಪಾಕಿಸ್ತಾನದಲ್ಲಿನ ಪಂಜಾಬ್ ಪ್ರಾಂತ್ಯದ ರಾವಲ್‍ಪಿಂಡಿ ಜಿಲ್ಲೆಯಲ್ಲಿನ ಒಂದು ಪಟ್ಟಣ ಮತ್ತು ಮಹತ್ವದ ಪುರಾತತ್ವ ನಿವೇಶನ. ತಕ್ಷಶಿಲಾ ಇಸ್ಲಾಮಾಬಾದ್ ಮತ್ತು ರಾವಲ್‍ಪಿಂಡಿಯ ವಾಯವ್ಯಕ್ಕೆ ಸುಮಾರು ೩೨ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ; ಪ್ರಸಿದ್ಧ ಗ್ರ್ಯಾಂಡ್ ಟ್ರಂಕ್ ರಸ್ತೆಯ ಹತ್ತಿರ. ಈ ಪಟ್ಟಣ ಸಮುದ್ರ ಮಟ್ಟಕ್ಕಿಂತ ೫೪೯ ಮಿ. ಮೇಲಿದೆ.
ತಕ್ಷಶಿಲಾ ವಿದ್ಯಾಪೀಠ’
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಅತೀ ದೊಡ್ಡ ವಿದ್ಯಾಪೀಠ (ವಿಶ್ವವಿದ್ಯಾಲಯ)ಗಳು ಅಸ್ತಿತ್ವದಲ್ಲಿದ್ದವು. ಅವುಗಳಲ್ಲಿ ತಕ್ಷಶೀಲಾ, ನಾಲಂದಾ, ವಿಕ್ರಮಶಿಲಾ, ನಾಗಾರ್ಜುನ, ಕಾಶಿ ಪ್ರತಿಷ್ಠಾನ, ಉಜ್ಜಯಿನಿ, ವಲ್ಲಭಿ, ಕಾಂಚಿ, ಮದುರಾ, ಅಯೋಧ್ಯೆ, ಈ ವಿದ್ಯಾಪೀಠಗಳು ಪ್ರಸಿದ್ಧವಾಗಿದ್ದವು. ಕಾಲಕ್ರಮಾನುಸಾರ ತಕ್ಷಶೀಲಾ ವಿಶ್ವವಿದ್ಯಾಲಯವು ಇವುಗಳಲ್ಲಿನ ಅತ್ಯಂತ ಪ್ರಾಚೀನ ವಿದ್ಯಾಪೀಠವಾಗಿದೆ. ತಕ್ಷಶಿಲಾ ಈ ಪಟ್ಟಣವು ಕ್ರಿಸ್ತಪೂರ್ವ ೮೦೦ ರಿಂದ ಕ್ರಿಸ್ತಪೂರ್ವ ೪೦೦ ರ ಕಾಲದಲ್ಲಿ ಇತ್ತೀಚಿನ ಪಾಕಿಸ್ತಾನದ ರಾವಲ್ಪಿಂಡಿ ಪಟ್ಟಣದ ಪಶ್ಚಿಮದಲ್ಲಿ ೨೦ ಮೈಲು ದೂರದಲ್ಲಿತ್ತು. ಅದು ಪ್ರಾಚೀನ ಗಂಧಾರದ, ಅಂದರೆ ಈಗಿನ ಅಫಗಾನಿಸ್ತಾನದ ರಾಜಧಾನಿಯಾಗಿತ್ತು. ಅರಾಯನ ಎಂಬ ಗ್ರೀಕ ಇತೀಹಾಸಕಾರನ ಪ್ರಕಾರ ಸಿಕಂದರನ ಕಾಲದಲ್ಲಿ ಈ ಪಟ್ಟಣವು ಹೆಚ್ಚು ವೈಭವಶಾಲಿಯಾಗಿತ್ತು.
ತಕ್ಷಶಿಲಾ : ಹಿಂದೂಗಳ ಹೃದಯವನ್ನು ಹೆಮ್ಮೆಯಿಂದ ಅರಳಿಸುವ ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳಲ್ಲೊಂದು
ವಿದ್ಯಾಪೀಠದ ಪರಿಸರವು ಅತ್ಯಂತ ಭವ್ಯ ಹಾಗೂ ನಿಸರ್ಗರಮಣೀಯವಾಗಿತ್ತು. ವಿಶಾಲವಾದ ಕಟ್ಟಡದಲ್ಲಿ ೧೦ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳಬಹುದಾಷ್ಟು ವ್ಯವಸ್ಥೆಯಿತ್ತು. ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಕೀರ್ತಿಯನ್ನು ಪಡೆದ ಈ ವಿದ್ಯಾಪೀಠದಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ಸಾಲು ನಿಂತಿರುತ್ತಿತ್ತು. ಈ ವಿದ್ಯಾರ್ಥಿಗಳಲ್ಲಿ ಭಾರತದ, ಹಾಗೆಯೇ ಪೂರ್ವದಲ್ಲಿ ಇಂಡೊನೆಶಿಯಾ, ವಿಎತ್ನಾಮ್, ಚೀನಾ, ಜಪಾನ, ಪಶ್ಚಿಮದಲ್ಲಿ ಇರಾನ, ಇರಾಕನಿಂದ ಗ್ರೀಸ ಹಾಗೂ ರೋಮ ವರೆಗಿನ ವಿಧ್ಯಾರ್ಥಿಗಳು ಬರುತ್ತಿದ್ದರು ಹಾಗೂ ಇಲ್ಲಿ ೮ ರಿಂದ ೧೦ ವರ್ಷಗಳ ವರೆಗೆ ಇದ್ದು ಶಿಕ್ಷಣ ಪಡೆಯುತ್ತಿದ್ದರು. ಇಲ್ಲಿನ ಅಭ್ಯಾಸಕ್ರಮವು ೧೮ ಶಾಸ್ತ್ರ ಹಾಗೂ ೧೮ ಕಲೆಗಳನ್ನು ಒಳಗೊಂಡಿತ್ತು. ಧರ್ಮ ಹಾಗೂ ತತ್ತ್ವಜ್ಞಾನ ಇವುಗಳು ಆಗಿನ ಕಾಲದ ಮಹತ್ತ್ವದ ವಿಷಯಗಳಾಗಿದ್ದವು. ತಕ್ಷಶಿಲೆಯಲ್ಲಿ ನೀಡಲಾಗುತ್ತಿದ್ದ ಶಿಲ್ಪಕಲೆ ಹಾಗೂ ಸ್ಥಾಪತ್ಯಕಲೆಯ ಶಿಕ್ಷಣವು ಇಂದಿನ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ನೀಡಲಾಗುತ್ತಿರುವ ವಿಷಯಗಳಿಗೆ ಹೊಂದಾಣಿಕೆಯಾಗುತ್ತಿದ್ದವು. ತಕ್ಷಶಿಲೆಗೆ ಇಷ್ಟೊಂದು ಮಹತ್ತ್ವದ ಸ್ಥಾನವು ಪ್ರಾಪ್ತಿಯಾಗಲು ಪ್ರಮುಖಕಾರಣವೆಂದರೆ ಈ ವಿದ್ಯಾಪೀಠಕ್ಕೆ ಲಭಿಸಿದ ವಿದ್ವಾಂಸರು, ಚಟುವಟಿಕೆಯುಳ್ಳ ಹಾಗೂ ಋಷಿಗಳಿಗೆ ಸಮಾನವಾದ ಶಿಕ್ಷಕರು. ಈ ಶಿಕ್ಷಕರನ್ನು ಆಗಿನ ಕಾಲದ ಸೀಸರೊ, ಪ್ಲೀನಿಯವರಂತಹ ಪಾಶ್ಚಾತ್ಯ ಪಂಡಿತರು ಪ್ರಶಂಶಿಸಿದ್ದಾರೆ. ಈ ವಿಶ್ವವಿದ್ಯಾಲಯಕ್ಕೆ ಒಳ್ಳೆಯ ಹೆಸರು ತರುವ ಕೆಲಸವನ್ನು ಚಾಣಕ್ಯ (ಉರ್ಫ) ಕೌಟಿಲ್ಯ ಇವರು ಮಾಡಿದ್ದರು.
ಈ ವಿದ್ಯಾಕೇಂದ್ರದ ಮೇಲೆ ಇರಾನ, ಗ್ರೀಕ, ಶಕ, ಕುಶಾಣ, ಹೂಣರಂತಹ ಪರಕೀಯರು ಸತತವಾಗಿ ಆಘಾತ ಮಾಡಿ ಕ್ರಿಸ್ತ ಶಕೆ ೫೦೦ ರ ಸುಮಾರು ಈ ವಿಶ್ವವಿದ್ಯಾಲಯವನ್ನು ನಾಶಗೊಳಿಸಿದರು.
ಆಧಾರ : (ದೈನಿಕ ದೇಶೋನ್ನತಿ, ಅಕೋಲಾ, ೪. ೧೨. ೨೦೦೫)
ಬಾಹ್ಯ ಸಂಪರ್ಕಗಳು ಬದಲಾಯಿಸಿ
ವಿಕಿಟ್ರಾವೆಲ್ ನಲ್ಲಿ ತಕ್ಷಶಿಲಾ ಪ್ರವಾಸ ಕೈಪಿಡಿ (ಆಂಗ್ಲ)
- Explore Taxila with Google Earth Archived 2011-08-17 ವೇಬ್ಯಾಕ್ ಮೆಷಿನ್ ನಲ್ಲಿ. on Global Heritage Network
- Guide to Historic Taxila by Ahmad Hasan Dani in 10 chapters
- "Taxila", by Jona Lendering Archived 2004-10-13 ವೇಬ್ಯಾಕ್ ಮೆಷಿನ್ ನಲ್ಲಿ.
- Map of Gandhara archaeological sites, from the Huntington Collection, Ohio State University (large file)
- Taxila: An Ancient Indian University Archived 2017-05-16 ವೇಬ್ಯಾಕ್ ಮೆಷಿನ್ ನಲ್ಲಿ. by S. Srikanta Sastri
- John Marshall, A guide to Taxila (1918) on Archive.org
- Telapatta Jataka also known as the Takkasila Jataka