ಡೆಪೆಷ್‌ ಮೋಡ್‌ (pronounced /dɛˈpɛʃ/, de-pesh) ಎಂಬುದು, ಇಂಗ್ಲಿಷ್ ಮೂಲದ‌ ವಿದ್ಯುನ್ಮಾನ ಸಂಗೀತ‌ ವಾದ್ಯತಂಡ. ಇದು 1980ರಲ್ಲಿ ಇಂಗ್ಲೆಂಡ್‌ನ ಎಸೆಕ್ಸ್‌ ಕೌಂಟಿಯ ಬೆಸಿಲ್ಡನ್‌ನಲ್ಲಿ ರಚನೆಯಾಯಿತು. ವಾದ್ಯದ ಮೂಲ ತಂಡದಲ್ಲಿ ಡೇವ್‌ ಗಹನ್‌ (ಪ್ರಮುಖ ಗಾಯನ), ಮಾರ್ಟಿನ್‌ ಗೋರ್‌ (ಕೀಬೋರ್ಡ್‌ ವಾದ್ಯಗಳು, ಗಿಟಾರ್‌, ಗಾಯನ, 1981ರ ನಂತರ ಪ್ರಮುಖ ಗೀತೆರಚನಕಾರ), ಆಂಡ್ರ್ಯೂ ಫ್ಲೆಚರ್‌ (ಕೀಬೋರ್ಡ್‌) ಮತ್ತು ವಿನ್ಸ್‌ ಕ್ಲಾರ್ಕ್‌ (ಕೀಬೋರ್ಡ್‌, 1980–81ಕಾಲದಲ್ಲಿ ಪ್ರಮುಖ ಗೀತೆರಚನಕಾರ) ಸೇರಿದ್ದರು. 1981ರಲ್ಲಿ ಡೆಪೆಷ್‌ ಮೋಡ್‌ ತಂಡದ ಮೊಟ್ಟಮೊದಲ ಅಲ್ಬಮ್‌ ಸ್ಪೀಕ್‌ & ಸ್ಪೆಲ್‌ ಬಿಡುಗಡೆಯಾದ ನಂತರ ವಿನ್ಸ್‌ ಕ್ಲಾರ್ಕ್‌ ತಂಡದಿಂದ ನಿರ್ಗಮಿಸಿದರು. ಇವರ ಸ್ಥಾನದಲ್ಲಿ ಅಲ್ಯಾನ್‌ ವೈಲ್ಡರ್ ಕೀಬೋರ್ಡ್ಸ್‌ ಮತ್ತು ಡ್ರಮ್ಸ್‌ ವಾದಕರಾಗಿ ಡೆಪೆಷ್‌ ತಂಡಕ್ಕೆ ಸೇರ್ಪಡೆಯಾದರು. ಗೋರ್‌ ಹಾಡು ರಚನೆಯಲ್ಲಿ ತೊಡಗಿದರು. 1995ರಲ್ಲಿ ವೈಲ್ಡರ್ ವಾದ್ಯತಂಡದಿಂದ ನಿರ್ಗಮಿಸಿದರು. ಅಂದಿನಿಂದಲೂ, ಗಹನ್‌, ಗೋರ್‌ ಮತ್ತು ಫ್ಲೆಚರ್‌ ಈ ಮೂವರೂ ಡೆಪೆಷ್‌ ಮೋಡ್‌ ತಂಡದ 'ತ್ರಿಮೂರ್ತಿ'ಗಳಾಗಿ ಸಕ್ರಿಯರಾಗಿದ್ದಾರೆ.

ಡೆಪೆಷ್‌ ಮೋಡ್‌
Depeche Mode in 2006
ಹಿನ್ನೆಲೆ ಮಾಹಿತಿ
ಮೂಲಸ್ಥಳBasildon, Essex, England
ಸಂಗೀತ ಶೈಲಿNew Wave
Synthpop
Alternative Dance
ಸಕ್ರಿಯ ವರ್ಷಗಳು1980–present
L‍abelsMute Records
EMI Music
Associated actsYazoo, Erasure, Recoil
ಅಧೀಕೃತ ಜಾಲತಾಣdepechemode.com
ಸಧ್ಯದ ಸದಸ್ಯರುDavid Gahan
Martin Gore
Andrew Fletcher
ಮಾಜಿ ಸದಸ್ಯರುVince Clarke
Alan Wilder

ಡೆಪೆಷ್‌ ಮೋಡ್‌ ತಂಡದ ಹಾಡುಗಳು ಬಹಳ ಜನಪ್ರಿಯವಾಗಿದ್ದವು. UK ಏಕಗೀತೆಗಳ ಪಟ್ಟಿಯಲ್ಲಿ ನಲವತ್ತೆಂಟು ಹಾಡುಗಳಿದ್ದವು. ತಂಡವು ರಚಿಸಿ ಬಿಡುಗಡೆಗೊಳಿಸಿದ ಬಹಳಷ್ಟು ಅಲ್ಬಮ್‌ಗಳು UK, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಹಾಗೂ ಯುರೋಪಿನಾದ್ಯಂತ ಆಲ್ಬಮ್‌ಗಳ ಜನಪ್ರಿಯತಾ ಪಟ್ಟಿಗಳಲ್ಲಿ ಅಗ್ರಸ್ಥಾನದಲ್ಲಿದ್ದವು(#1). ಇಎಂಐ (ಧ್ವನಿಮುದ್ರಣಾ ಸಂಸ್ಥೆ) ಪ್ರಕಾರ, ಡೆಪೆಷ್ ಮೋಡ್‌ ಸಂಗೀತದ ಅಲ್ಬಮ್‌ಗಳು ಮತ್ತು ಏಕಗೀತೆಗಳು ಸುಮಾರು 100 ದಶಲಕ್ಷಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗಿವೆ.[] ಇದರಿಂದಾಗಿ ಡೆಪೆಷ್‌ ಮೋಡ್‌ ಸಂಗೀತದ ಇತಿಹಾಸದಲ್ಲಿ ಅತಿ-ಯಶಸ್ವೀ ವಿದ್ಯುನ್ಮಾನ ವಾದ್ಯತಂಡವೆನಿಸಿದೆ.[] ಕ್ಯೂ ಪತ್ರಿಕೆಯ ಪ್ರಕಾರ, ಡೆಪೆಷ್‌ ಮೋಡ್‌ ವಿಶ್ವದಲ್ಲಿ ಅತಿ ಜನಪ್ರಿಯ ವಿದ್ಯುನ್ಮಾನ ವಾದ್ಯತಂಡ'.[]

ಇತಿಹಾಸ

ಬದಲಾಯಿಸಿ

ತಂಡದ ರಚನೆ ಮತ್ತು ಮೊಟ್ಟಮೊದಲ ಅಲ್ಬಮ್‌ (1977-1981)

ಬದಲಾಯಿಸಿ

ಡೆಪೆಷ್‌ ಮೋಡ್‌ ತಂಡದ ಮೂಲವು 1977ರಷ್ಟು ಹಿಂದಿನದ್ದು. ಶಾಲಾ ಸಹಪಾಠಿಗಳಾದ ವಿನ್ಸ್‌ ಕ್ಲಾರ್ಕ್‌ ಮತ್ತು ಆಂಡ್ರ್ಯೂ ಫ್ಲೆಚರ್‌, ದಿ ಕ್ಯೂರ್‌ ವಾದ್ಯತಂಡದಿಂದ ಪ್ರಭಾವಿತರಾಗಿ, 'ನೊ ರೊಮ್ಯಾನ್ಸ್‌ ಇನ್‌ ಚೈನಾ' ಎಂಬ ವಾದ್ಯತಂಡ ರಚಿಸಿದರು. ಕ್ಲಾರ್ಕ್‌ ಗಾಯಕರಾಗಿದ್ದರು ಹಾಗೂ ಗಿಟಾರ್ ನುಡಿಸುತ್ತಿದ್ದರು ಮತ್ತು ಫ್ಲೆಚರ್‌ ಬಾಸ್‌ ವಾದ್ಯ ನುಡಿಸುತ್ತಿದ್ದರು.[] 1979ರಲ್ಲಿ, ಅಲ್ಟ್ರಾವಾಕ್ಸ್‌ನ ಅಣಕು ವಾದ್ಯತಂಡವಾದ ದಿ ಪ್ಲ್ಯಾನ್‌ನಲ್ಲಿ, ಕ್ಲಾರ್ಕ್‌ ರಾಬರ್ಟ್‌ ಮಾರ್ಲೊ ಮತ್ತು ಪಾಲ್‌ ಲ್ಯಾಂಗ್ವಿತ್‌ರೊಂದಿಗೆ ಗಿಟಾರ್ ವಾದ್ಯ ನುಡಿಸಿದರು.[] 1978-79ರಲ್ಲಿ, ನಾರ್ಮನ್ ಮತ್ತು ದಿ ವರ್ಮ್ಸ್‌ ಎಂಬ ಎರಡು ಧ್ವನಿತರಂಗದ ವಾದ್ಯಗೋಷ್ಠಿಯಲ್ಲಿ ತಮ್ಮ ಶಾಲಾ ಮಿತ್ರ, ಗಾಯಕ ಫಿಲಿಪ್‌ ಬರ್ಡೆಟ್‌ರೊಂದಿಗೆ ಸೇರಿದ ಮಾರ್ಟಿನ್‌ ಗೋರ್‌, ಗಿಟಾರ್‌ ನುಡಿಸಿದರು.[] 1979ರಲ್ಲಿ, ಮಾರ್ಲೊ, ಗೋರ್‌ ಹಾಗೂ ಸ್ನೇಹಿತ ಪಾಲ್‌ ರೆಡ್ಮಂಡ್‌ ದಿ ಫ್ರೆಂಚ್‌ ಲುಕ್‌ ಎಂಬ ವಾದ್ಯತಂಡವನ್ನು ರಚಿಸಿದರು. ಮಾರ್ಲೊ ಗಾಯಕ ಮತ್ತು ಕೀಬೋರ್ಡ್ ವಾದಕರಾಗಿದ್ದರೆ, ಗೋರ್‌ ಗಿಟಾರ್‌ ವಾದಕ ಹಾಗೂ ರೆಡ್ಮಂಡ್ ಕೀಬೋರ್ಡ್‌ ವಾದಕರಾಗಿದ್ದರು. 1980ರ ಮಾರ್ಚ್‌ ತಿಂಗಳಲ್ಲಿ, ಕ್ಲಾರ್ಕ್‌, ಗೋರ್‌ ಮತ್ತು ಫ್ಲೆಚರ್‌, ಕಾಂಪೊಸಿಷನ್‌ ಆಫ್‌ ಸೌಂಡ್‌ ಎಂಬ ವಾದ್ಯತಂಡ ರಚಿಸಿದರು. ಇದರಲ್ಲಿ ಕ್ಲಾರ್ಕ್‌ ಗಾಯಕ ಹಾಗೂ ಗಿಟಾರ್ ವಾದಕ, ಗೋರ್‌ ಕೀಬೋರ್ಡ್‌ ವಾದಕ ಹಾಗೂ ಫ್ಲೆಚರ್‌ ಬಾಸ್‌ ವಾದಕರಾಗಿದ್ದರು.

ಕಾಂಪೊಸಿಷನ್‌ ಆಫ್‌ ಸೌಂಡ್‌ ವಾದ್ಯತಂಡದ ರಚನೆಯ ನಂತರ, ಕ್ಲಾರ್ಕ್‌ ಮತ್ತು ಫ್ಲೆಚರ್ ಸಂಯೋಜಕ ವಾದ್ಯ ನುಡಿಸಿದರು. ಇವರಿಬ್ಬರಿಗೆ ಈ ವಾದ್ಯಗಳನ್ನು ಕೊಳ್ಳಲು ಅಥವಾ ಸ್ನೇಹಿತರಿಂದ ಎರವಲು ಪಡೆಯಲು ದುಡ್ಡಿನ ಅಗತ್ಯವಿದ್ದು, ಮರಗೆಲಸದ ವೃತ್ತಿ ಸೇರಿದಂತೆ ವಿಲಕ್ಷಣ ನೌಕರಿಗಳನ್ನು ಮಾಡಿದರು. ಸ್ಥಳೀಯ ಸ್ಕೌಟ್‌ ಬಿಡಾರದ ಆಶು ಜ್ಯಾಸ್ ಗೋಷ್ಠಿಯೊಂದರಲ್ಲಿ ಡೇವ್‌ ಗಹನ್‌ ಡೇವಿಡ್ ಬೊವಿಯವರ ಹೀರೊಸ್‌ ಗೀತೆ ಹಾಡಿದ್ದನ್ನು ಕ್ಲಾರ್ಕ್ ಕೇಳಿದ ನಂತರ ಡೇವ್ ಗಹನ್ ವಾದ್ಯತಂಡವನ್ನು 1980ರಲ್ಲಿ ಸೇರಿದರು. ಇದರ ಫಲವಾಗಿ, ಡೆಪೆಷ್ ಮೋಡ್ ಹುಟ್ಟಿಕೊಂಡಿತು. ಫ್ರೆಂಚ್‌ ಉಡುಪು-ವಿನ್ಯಾಸದ ಪತ್ರಿಕೆಯೊಂದರಿಂದ ಡೆಪೆಷ್‌ ಮೋಡ್‌ ಎಂಬ ಹೆಸರು ಆಯ್ದುಕೊಳ್ಳಲು ಕಾರಣ ವಿವರಿಸಿದ ಮಾರ್ಟಿನ್‌ ಗೋರ್‌ : 'ಇದರ ಅರ್ಥ, ಬಹಳ ತ್ವರಿತ ಉಡುಪು ವಿನ್ಯಾಸ ಅಥವಾ ಉಡುಪು ವಿನ್ಯಾಸದ ವಿತರಣೆ. ನನಗೆ ಅದರ ಅಂತರಾರ್ಥ ಇಷ್ಟವಾಯಿತು.'[] ಡೆಪೆಷ್‌ ಮೋಡ್‌ ಎಂಬ ಹೆಸರು ಪಡೆದ ವಾದ್ಯತಂಡವು ತನ್ನ ಮೊದಲ ವಾದ್ಯಗೋಷ್ಠಿಯನ್ನು 1980ರ ಮೇನಲ್ಲಿ ಒಂದು ಶಾಲೆಯಲ್ಲಿ ನಡೆಸಿತು.[] ವಾದ್ಯತಂಡವು ತಮ್ಮ ಮೊಟ್ಟಮೊದಲ ಧ್ವನಿಮುದ್ರಣವನ್ನು 1980ರಲ್ಲಿ ಸಮ್‌ ಬಿಜೇರ್‌ ಅಲ್ಬಮ್ ‌ಗಾಗಿ 'ಫೊಟೊಗ್ರಫಿಕ್‌' ಎಂಬ ಹಾಡಿನೊಂದಿಗೆ ಆರಂಭಿಸಿತು. ಆನಂತರ ತಮ್ಮ ಚೊಚ್ಚಲ ಆಲ್ಬಮ್‌ ಸ್ಪೀಕ್‌ & ಸ್ಪೆಲ್ ‌ಗಾಗಿ ಈ ಹಾಡನ್ನು ಮರುಧ್ವನಿಮುದ್ರಿಸಲಾಯಿತು.

ವಾದ್ಯತಂಡವು ಕ್ಯಾನಿಂಗ್‌ ಟೌನ್‌ನ [] ಬ್ರಿಡ್ಜ್‌ ಹೌಸ್‌ನಲ್ಲಿ ಜಾಸ್ ವಾದ್ಯಗೋಷ್ಠಿ ನಡೆಸುತ್ತಿರುವಾಗ, ವಿದ್ಯುನ್ಮಾನ ಸಂಗೀತಗಾರ ಮತ್ತು ಮ್ಯೂಟ್‌ ರೆಕಾರ್ಡ್ಸ್‌ನ ಸಂಸ್ಥಾಪಕರಾದ ಡೇನಿಯಲ್‌ ಮಿಲ್ಲರ್‌ ವಾದ್ಯತಂಡದವರನ್ನು ಸಂಪರ್ಕಿಸಿ, ತಮ್ಮ ಮುದ್ರಣ ಸಂಸ್ಥೆಗಾಗಿ ಏಕಗೀತೆಯೊಂದನ್ನು ರಚಿಸಿಕೊಡಬೇಕೆಂದು ಆಸಕ್ತಿತಾಳಿದರು.[೧೦] ಮೌಖಿಕ ಕರಾರಿನ ಫಲವಾಗಿ ವಾದ್ಯತಂಡದ ಮೊದಲ ಏಕಗೀತೆ 'ಡ್ರೀಮಿಂಗ್‌ ಆಫ್ ಮಿ' ಡಿಸೆಂಬರ್‌ 1980ರಲ್ಲಿ ಮುದ್ರಣವಾಗಿ, 1981ರ ಫೆಬ್ರವರಿಯಲ್ಲಿ ಬಿಡುಗಡೆಯಾಯಿತು. ಈ ಹಾಡು ಯುಕೆ ಜನಪ್ರಿಯ ಏಕಗೀತೆಗಳ ಪಟ್ಟಿಯಲ್ಲಿ 57ನೆಯ ಸ್ಥಾನ ಗಳಿಸಿತು. ಇಂತಹ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಉತ್ತೇಜಿತವಾದ ಡೆಪೆಷ್‌ ಮೋಡ್‌ ವಾದ್ಯತಂಡವು, ತಮ್ಮ ಎರಡನೆಯ ಏಕಗೀತೆ 'ನ್ಯೂ ಲೈಫ್‌'ನ ಧ್ವನಿಮುದ್ರಣ ನಡೆಸಿತು. ಇದು UK ಏಕಗೀತೆಗಳ ಪಟ್ಟಿಯಲ್ಲಿ 11ನೆಯ ಸ್ಥಾನಕ್ಕೆ ಏರಿತು. 'ಜಸ್ಟ್‌ ಕಾಂಟ್‌ ಗೆಟ್‌ ಎನಫ್‌' ಎಂಬುದು ವಾದ್ಯತಂಡದ ಮೂರನೆಯ ಏಕಗೀತೆಯಾಗಿತ್ತು. ನಿರಂತರ ಲಘುತಾಳದ 'ಸಿಂಥ್‌ಪಾಪ್'‌ ಶೈಲಿಯ ಸಂಗೀತ ಹೊಂದಿದ ಈ ಹಾಡು ಮೊದಲ ಬಾರಿಗೆ UK ಅಗ್ರ ಹತ್ತು ಜನಪ್ರಿಯ ಗೀತೆಗಳ ಪೈಕಿ ವಾದ್ಯತಂಡದ ಮೊದಲ ಹಾಡೆನಿಸಿತು ಹಾಗೂ ಇದು ಅವರ ಅತ್ಯುತ್ತಮ ಪ್ರಸಿದ್ಧ ಹಾಡುಗಳಲ್ಲಿ ಒಂದಾಗಿ ಉಳಿಯಿತು. ಸಂಗೀತ ವೀಡಿಯೊ ಹೊಂದಲು ಇದು ಡೆಪೆಷ್‌ ಮೋಡ್‌ನ ಮೊಟ್ಟಮೊದಲ ಹಾಡಾಗಿತ್ತು. ವಿನ್ಸ್‌ ಕ್ಲಾರ್ಕ್‌ ಕಾಣಿಸಿಕೊಂಡ ವಾದ್ಯತಂಡದ ಏಕೈಕ ವೀಡಿಯೊ ಇದಾಗಿತ್ತು. ಡೆಪೆಷ್‌ ಮೋಡ್‌ ತಂಡದ ಚೊಚ್ಚಲ ಅಲ್ಬಮ್‌ ಆದ ಸ್ಪೀಕ್‌ & ಸ್ಪೆಲ್‌ ನ್ನು 1981ರ ನವೆಂಬರ್‌ ತಿಂಗಳಲ್ಲಿ ಬಿಡುಗಡೆಗೊಳಿಸಲಾಯಿತು. UK ಜನಪ್ರಿಯ ಅಲ್ಬಮ್‌ಗಳ ಪಟ್ಟಿಯಲ್ಲಿ ಹತ್ತನೆಯ ಸ್ಥಾನಕ್ಕೆ ಮೇಲೇರಿತು. ಈ ಆಲ್ಬಂ ಕುರಿತು ಮಿಶ್ರ ರೀತಿಯ ವಿಮರ್ಶೆಗಳು ವ್ಯಕ್ತವಾದವು - 'ಬಹಳ ಉತ್ತಮವಾದ ಅಲ್ಬಮ್‌... ಹೊಸ ಶ್ರೋತೃಗಳನ್ನು ಆಕರ್ಷಿಸಲು ಮತ್ತು ಸಾಕಷ್ಟು ಹಾಡುಗಳಿಂದ ತೃಪ್ತಿ ಪಡೆಯದ ಅಭಿಮಾನಿಗಳನ್ನು ಮೆಚ್ಚಿಸಲು ಅವರು ನಿರ್ಮಿಸಬೇಕಾಯಿತು' ಎಂದು ಮೆಲೊಡಿ ಮೇಕರ್ ಬಣ್ಣಿಸಿತು.ಇದು "PG-ಮೌಲ್ಯ ಅಂದಾಜಿನ ಪ್ರಮಾದ" ಎಂದು ರೋಲಿಂಗ್‌ ಸ್ಟೋನ್ ‌ನಿಂದ ಹೆಚ್ಚು ಟೀಕೆಗೆ ಗುರಿಯಾಯಿತು. ‌[೧೧]

ನಿರ್ಗಮಿಸಿದ ಕ್ಲಾರ್ಕ್‌,ವೈಲ್ಡರ್‌ ಸೇರ್ಪಡೆ(1981-1982)

ಬದಲಾಯಿಸಿ

ಸ್ಪೀಕ್‌ & ಸ್ಪೆಲ್‌ ಅಲ್ಬಮ್‌ಗಾಗಿ ಪ್ರವಾಸ ಹಾಗು ಪ್ರಚಾರ ನಡೆಸುತ್ತಿರುವಾಗ, ವಾದ್ಯತಂಡವು ಸಾಗುತ್ತಿದ್ದ ಮಾರ್ಗ ಕುರಿತು ಕ್ಲಾರ್ಕ್ ತಮ್ಮ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದರು. ಆನಂತರ ಅವರು ತಮ್ಮ ಅತೃಪ್ತಿ ವ್ಯಕ್ತಪಡಿಸಿ, 'ಏನು ಮಾಡಲಿಕ್ಕೂ ಸಮಯ ಸಾಲುತ್ತಿರಲಿಲ್ಲ' ಎಂದರು.[೧೨] ತಾವು ಡೆಪೆಷ್‌ ಮೋಡ್‌ ತಂಡದಿಂದ ನಿರ್ಗಮಿಸುತ್ತಿರುವುದಾಗಿ ಕ್ಲಾರ್ಕ್‌ 1981ರ ನವೆಂಬರ್‌ನಲ್ಲಿ ಸಾರ್ವಜನಿಕ ಹೇಳಿಕೆ ನೀಡಿದರು.[೧೩] ಇದಾದ ಕೂಡಲೇ, ಅವರು ಬ್ಲೂಸ್‌ ಗಾಯಕಿ ಅಲಿಸನ್‌ ಮೊಯೆಟ್‌ರೊಂದಿಗೆ ಸೇರಿ, ಯಾಝೂ (ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಯಾಝ್‌), ನಂತರ,ಇವರಿಬ್ಬರು ಆಂಡಿ ಬೆಲ್‌ರೊಂದಿಗೆ ಎರೇಸರ್‌ ಎಂಬ ವಾದ್ಯತಂಡ ರಚಿಸಿದರು. ಡೆಪೆಷ್‌ ಮೋಡ್‌ಗಾಗಿ ಕ್ಲಾರ್ಕ್‌ ಹಾಡು ಬರೆಯಲು ಮುಂದುವರೆಸುವ ಆರಂಭಿಕ ಮಾತುಕತೆ ವಿಫಲವಾಯಿತು. ಒನ್ಲಿ ಯು ಎಂಬ ಹಾಡು ಬರೆದುಕೊಡುವೆನೆಂದು ಕ್ಲಾರ್ಕ್‌ ತಂಡದ ಉಳಿದ ಸದಸ್ಯರೊಂದಿಗೆ ಪ್ರಸ್ತಾಪಿಸಿದರು. ಆದರೆ ಅವರು ಇದನ್ನು ಬೇಡವೆಂದು ನಿರಾಕರಿಸಿದರು. ಈ ಹಾಡು ಯಾಝೂಗಾಗಿ ಯುಕೆ ಟಾಪ್‌ 3 ಜನಪ್ರಿಯ ಗೀತೆಯೆನಿಸಿತು.[೧೪] ಗೋರೆ ಬರೆದ "ತೋರಾ ತೋರಾ! ತೋರಾ!" ಎಂಬ ಹಾಡು ಹಾಗೂ ಸ್ಪೀಕ್‌ & ಸ್ಪೆಲ್‌ ಅಲ್ಬಮ್‌ಗಾಗಿ 'ಬಿಗ್‌ ಮಫ್'‌ ಎಂಬ ವಾದ್ಯಸಂಗೀತ ರಚಿಸಿದ್ದ ಗೋರ್‌, ವಾದ್ಯತಂಡದ ಹೊಸ ಗೀತೆರಚನೆಕಾರರಾಗಬೇಕಾಯಿತು.[೧೫]

ಇನ್ನೊಬ್ಬ ಸಂಗೀತಗಾರನ ಅಗತ್ಯವಿದೆಯೆಂದು ವಾದ್ಯತಂಡವು 1981ರ ಅಪರಾರ್ಧದಲ್ಲಿ ಮೆಲೊಡಿ ಮೇಕರ್ ‌ನಲ್ಲಿ ಅಜ್ಞಾತ ಜಾಹೀರಾತನ್ನು ಪ್ರಕಟಿಸಿತು. ಪಶ್ಚಿಮ ಲಂಡನ್‌ ಮೂಲದ 22-ವರ್ಷ ವಯಸ್ಸಿನ ಕೀಬೋರ್ಡ್ ವಾದಕ ಅಲ್ಯಾನ್‌ ವಿಲ್ಡರ್ ಈ ಜಾಹೀರಾತಿಗೆ ಪ್ರತಿಕ್ರಿಯಿಸಿದರು. ಎರಡು ಬಾರಿ ಧ್ವನಿಪರೀಕ್ಷೆಗಳ ನಂತರ, 1982ರ ಪೂರ್ವಾರ್ಧದಲ್ಲಿ ಪ್ರಯೋಗದ ಆಧಾರದ ಮೇರೆಗೆ ಪ್ರವಾಸಿ ಸದಸ್ಯರನ್ನಾಗಿ ಆರಂಭದಲ್ಲಿ ಸೇರಿಸಿಕೊಳ್ಳಲಾಯಿತು.‌ [೧೬] 1982ರ ಜನವರಿ ತಿಂಗಳಲ್ಲಿ ವಾದ್ಯತಂಡವು 'ಸೀ ಯು ಎಂಬ ಏಕಗೀತೆಯನ್ನು ಬಿಡುಗಡೆಗೊಳಿಸಿತು. ಕ್ಲಾರ್ಕ್‌ ನಿರ್ಗಮನದ ನಂತರ ಇದು ಡೆಪೆಷ್‌ ಮೋಡ್‌ ತಂಡದ ಮೊದಲ ಏಕಗೀತೆಯಾಗಿತ್ತು. ಮುಂಚೆ ಕ್ಲಾರ್ಕ್‌ ರಚಿಸಿದ್ದ ಡೆಪೆಷ್‌ ಮೋಡ್‌ ಏಕಗೀತೆಗಳ ಜನಪ್ರಿಯತೆಯನ್ನು ಮೀರಿ, ಯುಕೆಯ ಜನಪ್ರಿಯ ಏಕಗೀತೆಗಳ ಪಟ್ಟಿಯಲ್ಲಿ ಆರನೆಯ ಸ್ಥಾನ ಗಳಿಸಿತು.[೧೭] ಈ ಏಕಗೀತೆ ಬಿಡುಗಡೆಯ ನಂತರ ವಾದ್ಯತಂಡವು ಉತ್ತರ ಅಮೆರಿಕಾಗೆ ಪ್ರವಾಸ ನಡೆಸಿ ಮೊದಲ ಪ್ರದರ್ಶನಗಳನ್ನು ನೀಡಿತು. ವಾದ್ಯತಂಡದ ಎರಡನೆಯ ಸ್ಟೂಡಿಯೊ ಅಲ್ಬಮ್‌ಗೆ ಮುಂಚೆಯೇ, 'ದಿ ಮೀನಿಂಗ್‌ ಆಫ್‌ ಲವ್'‌ ಹಾಗೂ 'ಲೀವ್‌ ಇನ್‌ ಸೈಲೆನ್ಸ್'‌ ಎಂಬ ಇನ್ನೂ ಎರಡು ಏಕಗೀತೆಗಳು ಬಿಡುಗಡೆಯಾದವು. 1982ರ ಜುಲೈ ತಿಂಗಳಲ್ಲಿ ಡೆಪೆಷ್‌ ಮೋಡ್‌ ತಮ್ಮ ಎರಡನೆಯ ಅಲ್ಬಮ್‌ ನಿಮಿತ್ತ ಚಟುವಟಿಕೆ ಆರಂಭಿಸಿತು. ವಿನ್ಸ್‌ ಕ್ಲಾರ್ಕ್‌ ಇಲ್ಲದೆಯೇ ಯಶಸ್ವಿಯಾಗಬಹುದು ಎಂದು ಸಾಧಿಸಿ ತೋರಿಸಲು ವಾದ್ಯತಂಡ ಬಯಸಿದ್ದರಿಂದ, ಈ ಅಲ್ಬಮ್‌ ಧ್ವನಿಮುದ್ರಣಕ್ಕಾಗಿ ತಮ್ಮ ಅಗತ್ಯವಿಲ್ಲ ಎಂದು ಡೇನಿಯಲ್‌ ಮಿಲ್ಲರ್‌ ವೈಲ್ಡರ್‌ಗೆ ತಿಳಿಸಿದರು.[೧೮] ಸೆಪ್ಟೆಂಬರ್‌ ತಿಂಗಳಲ್ಲಿ ಎ ಬ್ರೊಕನ್‌ ಫ್ರೇಮ್ ‌ ಬಿಡುಗಡೆಯಾಯಿತು. ಇದರ ಮುಂದಿನ ತಿಂಗಳಲ್ಲಿ ಡೆಪೆಷ್‌ ಮೋಡ್‌ 1982ರ ವರ್ಷದ ಎರಡನೆಯ ಪ್ರವಾಸ ನಡೆಸಿತು. ಅಲ್ಬಮ್‌ಯೇತರ ಏಕಗೀತೆ 'ಗೆಟ್‌ ದಿ ಬ್ಯಾಲೆನ್ಸ್‌ ರೈಟ್‌!',

1983ರ ಜನವರಿ ತಿಂಗಳಲ್ಲಿ ಬಿಡುಗಡೆಯಾಯಿತು ಹಾಗೂ ವೈಲ್ಡರ್‌ರೊಂದಿಗೆ ಧ್ವನಿಮುದ್ರಿತವಾದ ಮೊದಲ ಡೆಪೆಷ್‌ ಮೋಡ್‌ ಹಾಡಾಗಿತ್ತು.

ಕಂಸ್ಟ್ರಕ್ಷನ್‌ ಟೈಮ್‌ ಎಗೇನ್‌ (1983)

ಬದಲಾಯಿಸಿ

ತಮ್ಮ ಮೂರನೆಯ ದೀರ್ಘಾವಧಿಯ ಫೋನೋಗ್ರಾಫ್ (ಎಲ್‌ಪಿ) ಕ‌ನ್‌ಸ್ಟ್ರಕ್ಷನ್ ಟೈಮ್‌ ಎಗೇನ್‌ ಗಾಗಿ, ಡೆಪೆಷ್‌ ಮೋಡ್‌ ನಿರ್ಮಾಪಕ ಗ್ಯಾರೆತ್‌ ಜೋನ್ಸ್‌ರೊಂದಿಗೆ, ಜಾನ್ ಫಾಕ್ಸ್‌ ಗಾರ್ಡನ್‌ ಸ್ಟೂಡಿಯೊಸ್‌ ಹಾಗೂ ಪಶ್ಚಿಮ ಬರ್ಲಿನ್‌ನ ಹ್ಯಾನ್ಸಾ ಸ್ಟೂಡಿಯೊಸ್‌ನಲ್ಲಿ ಕಾರ್ಯಪ್ರವೃತ್ತವಾಯಿತು. ಬ್ರಯನ್‌ ಇನೊರನ್ನು ಒಳಗೊಂಡಿರುವ ಡೇವಿಡ್‌ ಬೊವೀಯವರ ಪ್ರಾರಂಭಿಕ ಸ್ಥಿತಿಯ ವಿದ್ಯುನ್ಮಾನ ಅಲ್ಬಮ್‌ಗಳ ಕೃತಿತ್ರಯಗಳಲ್ಲಿ ಬಹುಪಾಲನ್ನು ಈ ಸ್ಟುಡಿಯೊಗಳಲ್ಲಿ ನಿರ್ಮಿಸಲಾಗಿತ್ತು. ವೈಲ್ಡರ್ ಪರಿಚಯಿಸಿದ ಸಿಂಕ್ಲೆವಿಯರ್‌ ಮತ್ತು ಇ-ಮು ಎಮ್ಯುಲೇಟರ್‌ ಮಾದರಿ ಸಂಗ್ರಹಗಳಿಂದಾಗಿ, ಈ ಅಲ್ಬಮ್‌ ತಂಡದ ಧ್ವನಿಯಲ್ಲಿ ಗಮನಾರ್ಹ ಪಲ್ಲಟವನ್ನು ಕಂಡಿತು.[೧೯] ಪ್ರತಿದಿನದ ವಸ್ತುಗಳ ಶಬ್ದಗಳ ಮಾದರಿಯನ್ನು ಸಂಗ್ರಹಿಸುವ ಮೂಲಕ ವಾದ್ಯತಂಡವು ಸರಾಗವಾದ, ಕೈಗಾರಿಕಾ-ಪ್ರಭಾವಿತ ಧ್ವನಿಯನ್ನು ಸೃಷ್ಟಿಸಿತು. ಆರ್ಟ್‌ ಆಫ್‌ ನಾಯ್ಸ್‌ ಹಾಗೂ ಈನ್ಸ್ಟುರ್ಜೆಂಡ್‌ ನೊಬಾಟೆನ್‌ನಂತಹ ವಾದ್ಯತಂಡಗಳ ಧ್ವನಿಗಳೊಂದಿಗೆ ಹೋಲಿಕೆಯಿತ್ತು. ಈನ್ಸ್ಟುರ್ಜೆಂಡ್‌ ನ್ಯುಬಾಟೆನ್ ನಂತರ ಮ್ಯೂಟ್‌ ಸಂಗೀತ ಧ್ವನಿಮುದ್ರಣ ಕಂಪೆನಿಯಲ್ಲಿ ತಮ್ಮ ಕೃತಿಯನ್ನು ಬಿಡುಗಡೆಗೊಳಿಸುವುದಿತ್ತು.[೨೦]

ಸಂಗೀತದೊಂದಿಗೆ, ಗೋರ್‌ರವರ ಹಾಡು ರಚನೆಯೂ ಸಹ ವಿಕಸನ ಹೊಂದುತ್ತಿತ್ತು. ಅವರ ಗೀತೆಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳು ಹೆಚ್ಚು ಪ್ರತಿಬಿಂಬಿತವಾಗುತ್ತಿದ್ದವು. ಎವೆರಿತಿಂಗ್‌ ಕೌಂಟ್ಸ್‌ ಎಂಬ ಅಲ್ಬಮ್‌ನಿಂದ ಮೊದಲ ಏಕಗೀತೆಯು ಹೊಸ ಶಬ್ದದ ಉತ್ತಮ ಉದಾಹರಣೆಯಾಗಿದೆ. ಬಹುರಾಷ್ಟ್ರೀಯ ಉದ್ದಿಮೆಗಳ ಆಸೆಬಡುಕತನವನ್ನು ಈ ಗೀತೆಯು ಟೀಕಿಸುತ್ತದೆ.[೨೧] ಈ ಹಾಡು UKಯಲ್ಲಿ ಆರನೆಯ ಸ್ಥಾನ, ಹಾಗೂ ಐರ್ಲೆಂಡ್‌, ದಕ್ಷಿಣ ಆಫ್ರಿಕಾ, ಸ್ವಿಟ್ಜರ್ಲೆಂಡ್‌, ಸ್ವೀಡೆನ್‌ ಹಾಗೂ ಪಶ್ಚಿಮ ಜರ್ಮನಿ ದೇಶಗಳಲ್ಲಿ 30 ಜನಪ್ರಿಯ ಹಾಡುಗಳಲ್ಲಿ ಸ್ಥಾನಗಳಿಸಿತು. ಈ ಅಲ್ಬಮ್‌ಗೆ ವೈಲ್ಡರ್‌ 'ದಿ ಲ್ಯಾಂಡ್‌ಸ್ಕೇಪ್‌ ಇಸ್‌ ಚೇಂಜಿಂಗ್‌' ಮತ್ತು ಟೂ-ಮಿನುಟ್‌ ವಾರ್ನಿಂಗ್‌' ಎಂಬ ಎರಡು ಹಾಡುಗಳನ್ನು ಕೊಡುಗೆಯಾಗಿ ನೀಡಿದರು.

ಕಂಸ್ಟ್ರಕ್ಷನ್‌ ಟೈಮ್‌ ಎಗೇನ್‌ ಅಲ್ಬಮ್‌ನ್ನು ಉತ್ತೇಜಿಸಲು, ವಾದ್ಯತಂಡವು 1983ರ ಸೆಪ್ಟೆಂಬರ್‌ ತಿಂಗಳಲ್ಲಿ ಯುರೋಪಿನಾದ್ಯಂತ ಕಂಸ್ಟ್ರಕ್ಷನ್‌ ಟೈಮ್‌ ಎಗೇನ್‌ ಟೂರ್‌ ವಾದ್ಯಗೋಷ್ಠಿ ಪ್ರವಾಸ ನಡೆಸಿತು.

ಸಮ್ ಗ್ರೇಟ್ ರಿವಾರ್ಡ್‌ (1984)

ಬದಲಾಯಿಸಿ

ತನ್ನ ಆರಂಭಿಕ ವರ್ಷಗಳಲ್ಲಿ, ಡೆಪೆಷ್‌ ಮೋಡ್‌ ಯುರೋಪ್‌ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಆಗಷ್ಟೇ ನೈಜ ಯಶಸ್ಸು ಗಳಿಸಿತ್ತು. ಆದರೆ, 1994ರ ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾದ 'ಪೀಪಲ್‌ ಆರ್‌ ಪೀಪಲ್‌' ಎಂಬ ಏಕಗೀತೆಯೊಂದಿಗೆ ಇವೆಲ್ಲವೂ ಬದಲಾದವು. ಈ ಹಾಡು ಐರ್ಲೆಂಡ್‌‌ನಲ್ಲಿ #2ನೇ ಸ್ಥಾನ,ಯುಕೆ, ಸ್ವಿಟ್ಜರ್ಲೆಂಡ್‌‌ನಲ್ಲಿ #4ನೇ ಸ್ಥಾನ ಹಾಗು ಪಶ್ಚಿಮ ಜರ್ಮನಿಯಲ್ಲಿ #1ನೆಯ ಸ್ಥಾನ ಗಳಿಸಿತು. ಪಶ್ಚಿಮ ಜರ್ಮನಿಯಲ್ಲಿ 1984ರ ಒಲಿಂಪಿಕ್ಸ್‌ ಕ್ರೀಡಾಕೂಟದ TV ಪ್ರಸಾರಕ್ಕಾಗಿ ಈ ಹಾಡನ್ನು ವಿಷಯವಸ್ತುವಾಗಿ ಬಳಸಲಾಯಿತು.[೨೨] 1985ರ ಮಧ್ಯಕಾಲದಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ಜನಪ್ರಿಯ ಹಾಡುಗಳ ಪಟ್ಟಿಯಲ್ಲಿ ಬಹಳ ತಡವಾಗಿ,#13ನೆಯ ಸ್ಥಾನ ಗಳಿಸಿತು. ಎಲ್‌ಜಿಬಿಟಿ ಸಮುದಾಯಗಳಿಗೆ ಈ ಹಾಡು ಗೀತೆಯಾಯಿತು. ಸಲಿಂಗಕಾಮಿಗಳು ಸೇರುವ ಸ್ಥಳಗಳು ಹಾಗೂ ಗೇ ಪ್ರೈಡ್‌ಗಳಲ್ಲಿ ಈ ಹಾಡನ್ನು ನಿಯಮಿತವಾಗಿ ನುಡಿಸಲಾಯಿತು[೨೩] ಡೆಪೆಷ್‌ ಮೋಡ್‌ ವಾದ್ಯತಂಡದ ಉತ್ತರ ಅಮೆರಿಕನ್‌ ಧ್ವನಿಮುದ್ರಣಾ ಸಂಸ್ಥೆಯು ಅದೇ ಹೆಸರಿನ ಸೈರ್‌ ಇದೇ ಹೆಸರಿನ ಸಂಕಲನ ಬಿಡುಗಡೆಗೊಳಿಸಿತು. ಇದರಲ್ಲಿ ಎ ಬ್ರೋಕನ್ ಫ್ರೇಮ್‌ ಹಾಗೂ ಕಂಸ್ಟ್ರಕ್ಷನ್‌ ಟೈಮ್‌ ಎಗೇನ್‌ ಹಾಗೂ ಹಲವು B-ಸೈಡ್‌(ಫೋನೋಗ್ರಾಫ್ ಧ್ವನಿಮುದ್ರಿಕೆಯ ಹಿಂಬದಿ) ಹಾಡುಗಳ ಸಂಕಲನ ಹೊಂದಿತ್ತು.

1984ರ ಸೆಪ್ಟೆಂಬರ್‌ ತಿಂಗಳಲ್ಲಿ ಸಮ್‌ ಗ್ರೇಟ್‌ ರಿವಾರ್ಡ್ ‌ ಬಿಡುಗಡೆಯಾಯಿತು. ಈ ಅಲ್ಬಮ್‌ನ ಹಾಡುಗಳು ನಿಮ್ಮನ್ನು ಎಚ್ಚರಗೊಳಿಸಿ, ನಿಮ್ಮ ಸನಿಹದಲ್ಲಿ ಏನೇನು ನಡೆಯುತ್ತಿವೆಯೆಂಬುದನ್ನು ನಿಮ್ಮ ಗಮನಕ್ಕೆ ತರುತ್ತದೆ ಎಂದು ಮೆಲೊಡಿ ಮೇಕರ್ ‌ ಪ್ರಶಂಸಿಸಿದೆ.[೨೪] ರಾಜಕೀಯ ಮತ್ತು ಪರಿಸರೀಯ ವಿಚಾರಗಳ ಬಗ್ಗೆ ಗಮನ ಸೆಳೆದ ಹಿಂದಿನ ಅಲ್ಬಮ್‌ಗೆ ತದ್ವಿರುದ್ಧವಾಗಿ, ಸಮ್‌ ಗ್ರೇಟ್‌ ರಿವಾರ್ಡ್ ‌ ಅಲ್ಬಮ್‌ನಲ್ಲಿನ ಹಾಡುಗಳು, ಲೈಂಗಿಕ ರಾಜಕೀಯ ('ಮಾಸ್ಟರ್‌ ಅಂಡ್‌ ಸರ್ವೆಂಟ್‌'), ವ್ಯಭಿಚಾರದ ಸಂಬಂಧಗಳು ('ಲೈ ಟು ಮಿ') ಹಾಗೂ ಸ್ವೇಚ್ಛಾನುಸಾರದ ದೈವಿಕ ನ್ಯಾಯ ('ಬ್ಲ್ಯಾಸ್ಫೆಮಸ್‌ ರೂಮರ್ಸ್') ಇಂತಹ‌ ಇನ್ನಷ್ಟು ವೈಯಕ್ತಿಕ ವಿಷಯಗಳತ್ತ ಗಮನ ಸೆಳೆದವು. ಮೊದಲ ಬಾರಿಗೆ ಮಾರ್ಟಿನ್‌ ಗೋರ್‌ರ ಹಾಡುಕಥೆ(ಬಲ್ಲಾಡ್) ('ಸಂಬಡಿ') ಸಹ ಈ ಅಲ್ಬಮ್‌ನಲ್ಲಿತ್ತು. ಇಂತಹ ಹಾಡುಗಳು ಮುಂಬರುವ ಎಲ್ಲಾ ಅಲ್ಬಮ್‌ಗಳಲ್ಲಿ ಒಳಗೊಂಡಿವೆ. 'ಸಂಬಡಿ' ಹಾಡನ್ನು 'ಬ್ಲ್ಯಾಸ್ಫೆಮಸ್‌ ರೂಮರ್ಸ್'‌ನೊಂದಿಗೆ ಎರಡೂ ಬದಿಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಹಾಡನ್ನು ಮಾರ್ಟಿನ್‌ ಗೋರ್ ಮೊದಲ ಬಾರಿಗೆ ಪ್ರಧಾನ ಗಾಯಕರಾಗಿ ಹಾಡಿದರು. ಸಮ್‌ ಗ್ರೇಟ್‌ ರಿವಾರ್ಡ್ ‌, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅಲ್ಬಮ್ ಪಟ್ಟಿಗಳಲ್ಲಿ ಪ್ರವೇಶಿಸಿದ ಮೊದಲ ಡೆಪೆಷ್‌ ಮೋಡ್‌ ಅಲ್ಬಮ್‌ ಆಗಿತ್ತು. ಹಲವು ಯುರೋಪಿಯನ್‌ ದೇಶಗಳಲ್ಲಿ ಜನಪ್ರಿಯ ಹತ್ತು ಹಾಡುಗಳಲ್ಲಿ ಕಾಣಿಸಿಕೊಂಡಿತು.

ದಿ ವರ್ಲ್ಡ್‌ ವಿ ಲಿವ್‌ ಇನ್‌ ಅಂಡ್‌ ಲೈವ್‌ ಇನ್‌ ಹ್ಯಾಂಬರ್ಗ್ ‌ ಡೆಪೆಷ್‌ ಮೋಡ್‌ನ ಮೊಟ್ಟಮೊದಲ ವೀಡಿಯೊ ಬಿಡುಗಡೆಯಾಗಿತ್ತು. 1984ರಲ್ಲಿ ವಾದ್ಯತಂಡವು ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಸಮ್‌ ಗ್ರೇಟ್‌ ರಿವಾರ್ಡ್ ಟೂರ್‌‌ ವಾದ್ಯಗೋಷ್ಠಿಯ ಸಂಪೂರ್ಣ ಚಲನಚಿತ್ರವಾಗಿತ್ತು.

1985ರ ಜುಲೈ ತಿಂಗಳಲ್ಲಿ, ವಾದ್ಯತಂಡವು ಕಬ್ಬಿಣದ ಪರದೆ(ಸೋವಿಯಟ್ ಒಕ್ಕೂಟ ಮತ್ತು ಪಶ್ಚಿಮ ಯುರೋಪ್ ನಡುವೆ ವಿಭಜನೆ)ಹಿಂದೆ, ಹಂಗೆರಿಯ ರಾಜಧಾನಿ ಬುಡಪೆಸ್ಟ್‌ ಮತ್ತು ಪೊಲೆಂಡ್‌ ರಾಜಧಾನಿ ವಾರ್ಸಾದಲ್ಲಿ ಮೊಟ್ಟಮೊದಲ ವಾದ್ಯಗೋಷ್ಠಿ ಕಾರ್ಯಕ್ರಮ ನಡೆಸಿತು.[೨೫]

1985ರ ಅಕ್ಟೊಬರ್‌ ತಿಂಗಳಲ್ಲಿ, ಮ್ಯೂಟ್‌ ರೆಕಾರ್ಡ್ಸ್‌ ದಿ ಸಿಂಗಲ್ಸ್‌ 81>85 (ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕ್ಯಾಚಿಂಗ್‌ ಅಪ್‌ ವಿತ್‌ ಡೆಪೆಷ್‌ ಮೋಡ್‌ ) ಎಂಬ ಸಂಕಲನ ಬಿಡುಗಡೆಗೊಳಿಸಿತು. ಇದರಲ್ಲಿ ಅಲ್ಬಮ್‌ಗೆ ಸೇರಿರದ 'ಷೇಕ್ ದಿ ಡಿಸೀಸ್'‌ ಮತ್ತು 'ಇಟ್ಸ್‌ ಕಾಲ್ಡ್‌ ಎ ಹಾರ್ಟ್' ಎರಡು ಏಕಗೀತೆಗಳ‌ನ್ನು ಒಳಗೊಂಡಿದ್ದವು.

ಈ ಕಾಲಾವಧಿಯಲ್ಲಿ, 1970ರ ದಶಕದ ಅಪರಾರ್ಧದಲ್ಲಿ ಬ್ರಿಟನ್‌ನಲ್ಲಿ ಆರಂಭಗೊಂಡಿದ್ದ ಗೊತಿಕ್ ಉಪಸಂಸ್ಕೃತಿಯೊಂದಿಗೆ ವಾದ್ಯತಂಡವು ಕೆಲವೆಡೆ ಹೊಂದಿಕೊಂಡಿತು. ಈ ಸಂಸ್ಕೃತಿಯು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲೂ ಸಹ ಜನಪ್ರಿಯತೆ ಗಳಿಸಿಕೊಳ್ಳಲಾರಂಭಿಸಿತ್ತು. ಅಲ್ಲಿ ಮೊದಲಿಗೆ ವಾದ್ಯತಂಡದ ಸಂಗೀತವು ಕಾಲೇಜ್‌ನ ರೇಡಿಯೊ, ಹಾಗೂ, ಲಾಸ್‌ ಏಂಜೆಲೀಸ್‌ನಲ್ಲಿರುವ KROQ, ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ KQAK ("ದಿ ಕ್ವೇಕ್‌") ಹಾಗೂ ನ್ಯೂಯಾರ್ಕ್‌ನ ಲಾಂಗ್‌ ಐಲೆಂಡ್‌ನಲ್ಲಿರುವ WLIR ಸೇರಿದಂತೆ ಆಧುನಿಕ ರಾಕ್‌ ಶೈಲಿಯ ಸಂಗೀತ ಪ್ರಸಾರ ಕೇಂದ್ರಗಳಲ್ಲಿಯೂ ಜನಪ್ರಿಯತೆ ಗಳಿಸಿತು. ಇದರಿಂದಾಗಿ, ರೇಡಿಯೊದಲ್ಲಿ'ಸಾಫ್ಟ್‌ ರಾಕ್‌ ಶೈಲಿಯ ಸಂಗೀತ ಹಾಗೂ ಡಿಸ್ಕೊ ಕರ್ಕಶ ಸಂಗೀತ'ದ ಮೇಲುಗೈನೊಂದಿಗೆ [೨೬] ಕಡೆಗಣಿತರಾಗಿದ್ದ ಪರ್ಯಾಯ ಶ್ರೋತೃಗಳು ಡೆಪೆಷ್‌ ಮೋಡ್‌ ವಾದ್ಯತಂಡದ ಸಂಗೀತದತ್ತ ಒಲವು ತೋರಿದರು. ವಾದ್ಯತಂಡದ ಹಾಡುಗಳಲ್ಲಿ ಹೆಚ್ಚು ಗಾಢ ಮತ್ತು ಗಂಭೀರ ದ್ವನಿಯ ನಡುವೆಯೂ ವಾದ್ಯತಂಡದ ಈ ಅಭಿಪ್ರಾಯವು ಯುರೋಪ್‌ನಲ್ಲಿ ವಾದ್ಯತಂಡವನ್ನು ಹೇಗೆ ಗುರುತಿಸಲಾಯಿತು ಎನ್ನುವುದಕ್ಕೆ ತದ್ವಿರುದ್ಧವಾಗಿದೆ. ಜರ್ಮನಿ ಮತ್ತು ಯುರೋಪ್‌ನ ಇತರೆ ದೇಶಗಳಲ್ಲಿ, ಡೆಪೆಷ್‌ ಮೋಡ್‌ ತಂಡವನ್ನು ಹದಿಹರೆಯದವರ ಆದರ್ಶಗಳು ಎಂದು ಪರಿಗಣಿಸಲಾಗಿತ್ತು. ಯುರೋಪ್‌ನ ಹಲವು ಹದಿಹರೆಯದವರ ಪತ್ರಿಕೆಗಳಲ್ಲಿ ಡೆಪೆಷ್‌ ಮೋಡ್‌ ತಂಡದವರ ಬಗ್ಗೆ ಆಗಾಗ್ಗೆ ಅಂಕಣಗಳು ಮುದ್ರಿತವಾಗುತ್ತಿದ್ದವು.

ಬ್ಲ್ಯಾಕ್‌ ಸೆಲೆಬ್ರೇಷನ್‌ (1986)

ಬದಲಾಯಿಸಿ

1986ರಲ್ಲಿ, 'ಸ್ಟ್ರಿಪ್ಡ್‌' ಎಂಬ ಹದಿನೈದನೆಯ ಏಕಗೀತೆ ಹಾಗೂ ಅದನ್ನು ಜತೆಗೂಡಿದ ಬ್ಲ್ಯಾಕ್‌ ಸೆಲೆಬ್ರೇಷನ್ ‌ ಅಲ್ಬಮ್‌ ಬಿಡುಗಡೆಯೊಂದಿಗೆ, ಡೆಪೆಷ್‌ ಮೋಡ್‌ ವಾದ್ಯತಂಡದ ಸಂಗೀತ ಶೈಲಿಯು ಪುನಃ ಬದಲಾಯಿತು. ತಮ್ಮ ಕಾಲ್ಪನಿಕ ಮಾದರಿ ಸಂಗ್ರಹವನ್ನು ಉಳಿಸಿಕೊಂಡು, ತಮ್ಮ ಹಿಂದಿನ ಎರಡು ದೀರ್ಘಾವಧಿಯ ಫೋನೊಗ್ರಾಮ್ ಧ್ವನಿಮುದ್ರಣ(ಎಲ್‌ಪಿ)ಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿದ್ದ ಕೈಗಾರಿಕಾ ಶೈಲಿ ಎಂಬಂತಹ ಪಾಪ್‌ ಧ್ವನಿಯ ಬಳಕೆಯನ್ನು ಕೈಬಿಟ್ಟು, ವಾದ್ಯತಂಡವು ಭಯಸೂಚಕ, ಅತ್ಯಂತ ಬಾವಾತ್ಮಕ ಪರಿಸರ ಮತ್ತು ನಾದಗುಣದ ಶಬ್ದವನ್ನು ಪರಿಚಯಿಸಿತು. ರಾಬರ್ಟ್‌ ಗೊರ್‌ ರಚಿಸಿದ ಗೀತೆಗಳು ಸಹ ಗಾಢವಾದ ಧ್ವನಿ ಹೊಂದಿ, ಇನ್ನಷ್ಟು ನಿರಾಶಾವಾದ ತೋರಿತು. ಆದರೂ, ಕೊನೆಯ ಎರಡು ಧ್ವನಿಮುದ್ರಿಕೆಗಳಲ್ಲಿ ಕಾಣಿಸಿಕೊಂಡಿದ್ದ, ಕಳೆದ ಬಾರಿ ಅವರು ಪ್ರಯತ್ನಿಸಿದ ಮುಕ್ತ ಸಾಮಾಜಿಕ ವಿಮರ್ಶೆಯ ಗುರಿಯನ್ನು 'ನ್ಯೂ ಡ್ರೆಸ್‌' ಹೊಂದಿತ್ತು. [ಸೂಕ್ತ ಉಲ್ಲೇಖನ ಬೇಕು]

ಆಂಟನ್ ಕಾರ್ಬಿನ್‌ [೨೭] ನಿರ್ದೇಶಿಸಿದ 'ಎ ಕ್ವೆಶ್ಚನ್‌ ಆಫ್‌ ಟೈಮ್‌' ಎಂಬ ಸಂಗೀತ ವೀಡಿಯೊ, ದುಡಿಮೆಯ ಸ್ಥಳದ ಸಂಬಂಧಕ್ಕೆ ನಾಂದಿಯಾಗಿದ್ದು, ಇಂದಿನ ದಿನದವರೆಗೆ ಮುಂದುವರಿದಿದೆ. ಕಾರ್ಬಿನ್‌ ಡೆಪೆಷ್‌ ಮೋಡ್‌ಗಾಗಿ ಇನ್ನೂ 19 ವೀಡಿಯೊಗಳನ್ನು ನಿರ್ದೇಶಿಸಿದರು. 2006ರ 'ಸಫರ್‌ ವೆಲ್'‌ ಎಂಬುದು ಅವರ ಇತ್ತೀಚಿನ ವೀಡಿಯೊ ಆಗಿದೆ. ಅವರು ಡೆಪೆಷ್‌ ತಂಡದ ಕೆಲವು ವಾದ್ಯಗೋಷ್ಠಿಗಳ ನೇರ ಪ್ರದರ್ಶನಗಳನ್ನು ಚಿತ್ರೀಕರಿಸಿದರಲ್ಲದೇ, ವೇದಿಕೆ ಸೆಟ್‌ಗಳು ಮತ್ತು ಆಲ್ಬಮ್ ಮತ್ತು ಏಕಗೀತೆಗಳ ಪ್ರಥಮ ಧ್ವನಿಮುದ್ರಣಗಳನ್ನು ವಿನ್ಯಾಸಗೊಳಿಸಿದರು.

ಮ್ಯೂಸಿಕ್‌ ಫಾರ್‌ ದಿ ಮಾಸಸ್‌ ಹಾಗೂ 101 (1987–1988)

ಬದಲಾಯಿಸಿ

1987ರಲ್ಲಿ ಬಿಡುಗಡೆಯಾದ ಮ್ಯೂಸಿಕ್‌ ಫಾರ್‌ ದಿ ಮಾಸೆಸ್ ‌ನಲ್ಲಿ ವಾದ್ಯತಂಡದ ಸಂಗೀತ ಶೈಲಿ ಮತ್ತು ವಿನ್ಯಾಸ ವಿಧಾನಗಳು ಬದಲಾಗಿದ್ದವು. ಧ್ವನಿಮುದ್ರಣಾ ಕಾರ್ಯಗಳಲ್ಲಿ ಸಹಯೋಗ ನೀಡಲೆಂದು, ಮೊದಲ ಬಾರಿಗೆ, ಮ್ಯೂಟ್‌ ಧ್ವನಿಮುದ್ರಣಾ ಕೇಂದ್ರದೊಂದಿಗೆ ಯಾವುದೇ ಸಂಬಂಧ ಹೊಂದಿರದ ನಿರ್ಮಾಪಕರಾದ ಡೇವಿಡ್‌ ಬಾಸ್ಕೊಂಬ್‌ರಿಗೆ ಕರೆ ನೀಡಲಾಯಿತು. ಆದರೂ, ಅಲ್ಯಾನ್‌ ವೈಲ್ಡರ್ ತಿಳಿಸುವಂತೆ, ಡೇವಿಡ್‌ರ ಪಾತ್ರ ಧ್ವನಿ ತಾಂತ್ರಿಕ ವಿಜ್ಞಾನಿಗಿಂತಲೂ ಹೆಚ್ಚಿನದಾಗಿತ್ತು.[೨೮] ಈ ಅಲ್ಬಮ್‌ ನಿರ್ಮಾಣಕಾರ್ಯದಲ್ಲಿ, ವಾದ್ಯತಂಡವು ಮಾದರಿ ಸಂಗ್ರಹವನ್ನು ಕೈಬಿಟ್ಟು, ಇನ್ನಷ್ಟು ಸಂಯೋಜಕ ವಾದ್ಯದ ಪ್ರಯೋಗಗಳಲ್ಲಿ ಮಗ್ನವಾಯಿತು.[೨೮] 'ಸ್ಟ್ರೇಂಜ್‌ಲವ್‌', 'ನೆವರ್‌ ಲೆಟ್‌ ಮಿ ಡೌನ್‌ ಎಗೇನ್‌' ಹಾಗೂ 'ಬಿಹೈಂಡ್‌ ದಿ ವೀಲ್‌' ಏಕಗೀತೆಗಳು UKಯಲ್ಲಿ ನಿರಾಶೆಗೊಳಿಸಿದವು. ಆದರೆ ಇವು ಕೆನಡಾ, ಬ್ರೆಜಿಲ್‌, ಪಶ್ಚಿಮ ಜರ್ಮನಿ, ದಕ್ಷಿಣ ಆಫ್ರಿಕಾ, ಸ್ವೀಡನ್‌ ಹಾಗೂ ಸ್ವಿಟ್ಜರ್ಲೆಂಡ್‌ ದೇಶಗಳಲ್ಲಿ ಜನಪ್ರಿಯತೆ ಗಳಿಸಿ, ಅಗ್ರ 10 ಪಟ್ಟಿಯಲ್ಲಿ ಸ್ಥಾನ ಗಳಿಸಿದವು. ಮ್ಯೂಸಿಕ್‌ ಫಾರ್ ದಿ ಮಾಸೆಸ್ ‌ ಬಹಳಷ್ಟು ಮಹತ್ವದ ಹಾಗೂ ಇದುವರೆಗಿನ ಅತ್ಯಾಕರ್ಷಕ ಮೋಡ್ ಅಲ್ಬಮ್‌ ಎಂದು ರೆಕಾರ್ಡ್‌ ಮಿರರ್‌ ವಿವರಿಸಿದೆ. ಅಮೆರಿಕನ್ ಮಾರುಕಟ್ಟೆಯಲ್ಲಿ ವಾದ್ಯತಂಡ ತನ್ನ ಮುಂಚಿನ ಆಲ್ಬಮ್‌ಗಳೊಂದಿಗೆ ಸಾಧಿಸಲು ವಿಫಲವಾಗಿದ್ದ ಗಮನಾರ್ಹ ಯಶಸ್ಸನ್ನು ಗಳಿಸಿತು.[೨೯]

ಈ ಅಲ್ಬಮ್‌ ಬಿಡುಗಡೆಯಾದ ನಂತರ ಮ್ಯೂಸಿಕ್‌ ಫಾರ್‌ ದಿ ಮಾಸೆಸ್ ಟೂರ್‌ ಪ್ರವಾಸ ನಡೆಯಿತು. 1988ರ ಮಾರ್ಚ್‌ 7ರಂದು ಪೂರ್ವವ ಬರ್ಲಿನ್‌ನ ವರ್ನರ್‌-ಸೀಲೆನ್ಬಿಂಡರ್‌ ಹ್ಯಾಲ್‌ನಲ್ಲಿ ತಂಡವು ಅನೌಪಚಾರಿಕ ವಾದ್ಯಗೋಷ್ಠಿ ನೀಡಿತು. ಏಕೆಂದರೆ ಆ ರಾತ್ರಿ ಡೆಪೆಷ್‌ ಮೋಡ್‌ ವಾದ್ಯಗೋಷ್ಠಿ ಪ್ರದರ್ಶನ ನೀಡುತ್ತದೆಂದು ಅಧಿಕೃತ ಘೋಷಣೆ ನೀಡಿರಲಿಲ್ಲ.[೩೦] ಆ ಸಮಯ, ಕಮ್ಯುನಿಸ್ಟ್ ಸರ್ಕಾರ ಆಡಳಿತದಲ್ಲಿತ್ತು. ಅಂದಿನ ಜಿಡಿಆರ್‌(ಜರ್ಮನ್ ಪ್ರಜಾತಾಂತ್ರಿಕ ಗಣರಾಜ್ಯ)ನಲ್ಲಿ ಬಹಳಷ್ಟು ಬಾರಿ ವಾದ್ಯಗೋಷ್ಠಿ ನೀಡಿದ ಕೆಲವೇ ವಾದ್ಯತಂಡಗಳಲ್ಲಿ ಡೆಪೆಷ್‌ ಮೋಡ್‌ ಸಹ ಒಂದು. ಇದೇ ಕಾಲಾವಧಿಯಲ್ಲಿ (1988) [೩೧] ಡೆಪೆಷ್‌ ಮೋಡ್‌ ಆಗಿನ್ನೂ ಕಮ್ಯುನಿಸ್ಟ್ ಆಡಳಿತದಲ್ಲಿದ್ದ ಹಂಗೆರಿ ಮತ್ತು ಜೆಕೊಸ್ಲೊವಾಕಿಯಾ ದೇಶಗಳ ಬುಡಪೆಸ್ಟ್‌ ಮತ್ತು ಪ್ರಾಗ್‌ನಲ್ಲಿ ಸಹ ವಾದ್ಯಗೋಷ್ಠಿ ನೀಡಿತು.

ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಪಸಡೆನಾ ರೋಸ್‌ ಬೌಲ್‌ನಲ್ಲಿ, 60,453 [೩೨] ಜನ ಪ್ರೇಕ್ಷಕರ ಹಾಜರಾತಿಯಲ್ಲಿ ನೀಡಿದ ವಾದ್ಯಗೋಷ್ಠಿಯೊಂದಿಗೆ, 1988ರ ಜೂನ್‌ 18ರಂದು ಡೆಪೆಷ್‌ ಮೋಡ್ ತಂಡದ ವಿಶ್ವಪ್ರವಾಸವು ಸಂಪೂರ್ಣವಾಯಿತು. (ಈ ಸ್ಥಳದಲ್ಲಿ ಎಂಟು ವರ್ಷಗಳಲ್ಲೇ ಅತಿ ಹೆಚ್ಚಿನ ಹಾಜರಾತಿಯಾಗಿತ್ತು). ಈ ಪ್ರವಾಸವು ವಾದ್ಯತಂಡಕ್ಕೆ ಮಹತ್ವದ ತಿರುವು ನೀಡಿತು ಹಾಗು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಭಾರೀ ಯಶಸ್ಸು ಗಳಿಸಿತು. ಡಿ. ಎ. ಪೆನ್ಬೆಕರ್‌ ನಿರ್ಮಿಸಿದ 101 ಎಂಬ ವಾದ್ಯಗೋಷ್ಠಿ ಬಗೆಗಿನ ಕಿರುಚಿತ್ರದಲ್ಲಿ ಹಾಗು ಅದನ್ನು ಜತೆಗೂಡಿದ ಧ್ವನಿಮುದ್ರಣ ಆಲ್ಬಂನಲ್ಲಿ ಇದನ್ನು ಸಮರ್ಪಕವಾಗಿ ದಾಖಲಿಸಲಾಗಿದೆ. ಅಭಿಮಾನಿ ಅಂತರಸಂಪರ್ಕದ ಚಿತ್ರಣಕ್ಕೆ ಚಲನಚಿತ್ರವು ಗಮನಾರ್ಹವಾಗಿದೆ.[೩೩][೩೪] ಹೆಸರಿನ ಕಲ್ಪನೆಯನ್ನು ಮುಂದಿಟ್ಟ ಹಿರಿಮೆ ಅಲ್ಯಾನ್‌ ವೈಲ್ಡರ್‌ಗೆ ಸೇರುತ್ತದೆ. ಈ ಪ್ರದರ್ಶನವು 101ನೆಯ ಹಾಗೂ ಪ್ರವಾಸದ ಕೊನೆಯ ಪ್ರದರ್ಶನವಾಗಿತ್ತು.[೩೫]

ವಯಲೇಟರ್‌ (1989–1992)

ಬದಲಾಯಿಸಿ

1989ರ ಮಧ್ಯಕಾಲದಲ್ಲಿ, ನಿರ್ಮಾಪಕ ಫ್ಲಡ್‌ ಹಾಗೂ ತಾಂತ್ರಿಕ ವಿಜ್ಞಾನಿ ಫ್ರಾಂಕೊಯ್ ಕೆವೊರ್ಕಿಯನ್‌ರೊಂದಿಗೆ ವಾದ್ಯತಂಡವು ಮಿಲ್ಯಾನ್‌ನಲ್ಲಿ ಧ್ವನಿಮುದ್ರಣ ಆರಂಭಿಸಿತು. ಇದರ ಫಲವಾಗಿ 'ಪರ್ಸನಲ್‌ ಜೀಸಸ್‌' ಎಂಬ ಏಕಗೀತೆಯು ಬಿಡುಗಡೆಯಾಯಿತು. ಇದರ ಬಿಡುಗಡೆಯ ಮುಂಚೆ, UKಯ ಪ್ರಾದೇಶಿಕ ವಾರ್ತಾಪತ್ರಿಕೆಗಳ ವೈಯಕ್ತಿಕ ಅಂಕಣಗಳಲ್ಲಿ"Your own personal Jesus" ಎಂಬ ಪದಗಳುಳ್ಳ ಜಾಹೀರಾತುಗಳೊಂದಿಗೆ ಮಾರುಕಟ್ಟೆ ಅಭಿಯಾನ ಆರಂಭಿಸಲಾಯಿತು. ನಂತರ, ಈ ಜಾಹೀರಾತುಗಳಲ್ಲಿ ದೂರವಾಣಿ ಸಂಖ್ಯೆಯನ್ನು ನಮೂದಿಸಲಾಯಿತು. ಈ ಸಂಖ್ಯೆಯನ್ನು ಡಯಲ್‌ ಮಾಡಿದವರು ಈ ಹಾಡು ಕೇಳಬಹುದಾಗಿತ್ತು. ಇದರ ಫಲವಾದ ಉತ್ಸಾಹವು ಈ ಏಕಗೀತೆಯ ಜನಪ್ರಿಯತೆಯು UK ಸಂಗೀತ ಪಟ್ಟಿಗಳಲ್ಲಿ 13ನೆಯ ಸ್ಥಾನ ಗಳಿಸಲು ನೆರವಾಗಿ, ಇದುವರೆಗೂ ಬಹಳಷ್ಟು ಮಾರಾಟವಾದ ಏಕಗೀತೆಗಳಲ್ಲಿ ಒಂದೆನಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇದು ಮೊಟ್ಟಮೊದಲ ಸ್ವರ್ಣ ಏಕಗೀತೆ ಹಾಗೂ 'ಪೀಪಲ್ ಆರ್‌ ಪೀಪಲ್‌' ನಂತರ ಮೊಟ್ಟಮೊದಲ ಟಾಪ್‌ 40 ಜನಪ್ರಿಯ ಗೀತೆಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಮೊದಲ ಹಾಡಾಗಿತ್ತು. ಕ್ರಮೇಣ, ವಾರ್ನರ್‌ ಬ್ರದರ್ಸ್‌ ರೆಕಾರ್ಡ್ಸ್‌ ಇತಿಹಾಸದಲ್ಲಿ ಅತಿ ಹೆಚ್ಚು ಮಾರಾಟವಾದ 12-ಅಂಗುಲದ ಏಕಗೀತೆ ಎನಿಸಿತು.[೩೬]

"I think in a way we've been at the forefront of new music; sort of chipping away at the standard rock format stations."

 —Martin Gore, stated to NME - July 1990.[೩೭]

1990ರ ಜನವರಿ ತಿಂಗಳಲ್ಲಿ ಬಿಡುಗಡೆಯಾದ 'ಎಂಜಾಯ್‌ ದಿ ಸೈಲೆನ್ಸ್‌' ಡೆಪೆಷ್‌ ಮೋಡ್‌ ತಂಡದ ಇದುವರೆಗಿನ ಅತಿ ಯಶಸ್ವಿ ಏಕಗೀತೆಗಳಲ್ಲಿ ಒಂದಾಯಿತು. ಇದು UKಯ ಜನಪ್ರಿಯ ಪಟ್ಟಿಯಲ್ಲಿ ಆರನೆಯ ಸ್ಥಾನ ಗಳಿಸಿತು. ಕೆಲ ತಿಂಗಳುಗಳ ನಂತರ ಇದು ಅಮೆರಿಕಾ ದೇಶದಲ್ಲಿ ಡೆಪೆಫ್ ಮೋಡ್‌ನ ಅತ್ಯಂತ ಜನಪ್ರಿಯ ಗೀತೆಯೆನಿಸಿ,8ನೇ ಸ್ಥಾನವನ್ನು ತಲುಪಿ, ವಾದ್ಯತಂಡಕ್ಕೆ ಏಕಗೀತೆಯ ಎರಡನೆಯ ಸ್ವರ್ಣ ಪ್ರಶಸ್ತಿ ದೊರಕಿತು. 1991ರ ಬ್ರಿಟ್‌ ಪ್ರಶಸ್ತಿಗಳಲ್ಲಿ 'ಅತ್ಯುತ್ತಮ ಬ್ರಿಟಿಷ್ ಏಕಗೀತೆ' ಪ್ರಶಸ್ತಿ ಗಳಿಸಿತು.[೩೮] ತಮ್ಮ ಹೊಸ ಅಲ್ಬಮ್‌ ವಯಲೇಟರ್‌ ಗೆ ಪ್ರಚಾರ ನೀಡಲು ವಾದ್ಯತಂಡದ ಸದಸ್ಯರು ಲಾಸ್‌ ಏಂಜಲೀಸ್‌ನ ವೇರ್‌ಹೌಸ್ ಎಂಟರ್ಟೇನ್ಮೆಂಟ್‌ನಲ್ಲಿ ಆಟೋಗ್ರಾಫ್ ಹಸ್ತಾಕ್ಷರ ನಡೆಸಿತು. ಇದರಿಂದಾಗಿ ಸುಮಾರು 20,000ಕ್ಕೂ ಹೆಚ್ಚು ಅಭಿಮಾನಿಗಳು ಇಲ್ಲಿ ಕಿಕ್ಕಿರಿದು,ಬಹುಮಟ್ಟಿಗೆ ಗಲಭೆಗೆ ತಿರುಗಿತು. ಹಾಜರಾಗಿದ್ದ ಕೆಲವು ಮಂದಿಯನ್ನು ಗುಂಪು ಮಳಿಗೆಯ ಗಾಜಿಗೆ ಅಮುಕಿದ್ದರಿಂದ ಕೆಲವರು ಗಾಯಗೊಂಡರು.[೩೯] ಗಾಯಗೊಂಡ ಅಭಿಮಾನಿಗಳಿಗೆ ಕ್ಷಮೆ ಕೋರುವ ಪ್ರಯುಕ್ತ,ವಾದ್ಯತಂಡವು ಲಾಸ್‌ ಏಂಜೆಲೀಸ್‌ನಲ್ಲಿ ವಾಸಿಸುತ್ತಿದ್ದ ಅಭಿಮಾನಿಗಳಿಗೆ ಸೀಮಿತ ಆವೃತ್ತಿಯ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿತು. ವೇರ್ಹೌಸ್‌ ಸಮಾರಂಭದ ಪ್ರಾಯೋಜಕ KROQ ರೇಡಿಯೊ ಕೇಂದ್ರದ ಮೂಲಕ ಇದರ ವಿತರಣೆಯಾಯಿತು. UK ಮತ್ತು ಅಮೆರಿಕಾ ದೇಶಗಳಲ್ಲಿ ವಯೊಲೇಟರ್‌ ಟಾಪ್‌ ಟೆನ್‌ ಪಟ್ಟಿಯಲ್ಲಿ ಸ್ಥಾನ ಗಳಿಸಿತು. ಬಿಲ್ಬೋರ್ಡ್‌ 200 ಪಟ್ಟಿಯಲ್ಲಿ #7 ಸ್ಥಾನ ಗಳಿಸಿ 74 ವಾರಗಳ ಕಾಲ ಪಟ್ಟಿಯಲ್ಲಿ ಉಳಿದುಕೊಂಡ ವಯಲೇಟರ್‌, ಡೆಪೆಷ್‌ ಮೋಡ್‌ ಪಾಲಿಗೆ, ಬಿಲ್ಬೋರ್ಡ್‌‌ 200 ಟಾಪ್ ಟೆನ್ ಪಟ್ಟಿಗೆ ಪ್ರವೇಶ ಪಡೆದ ಮೊದಲ ಅಲ್ಬಮ್‌ ಆಗಿತ್ತು. ಅಮೆರಿಕಾ ದೇಶದಲ್ಲಿ 4.5 ದಶಲಕ್ಷ ಪ್ರತಿಗಳು ಮಾರಾಟವಾಗಿ, ಮೂರು ಪ್ಲ್ಯಾಟಿನಮ್‌ ಪ್ರಶಸ್ತಿ ಪ್ರಮಾಣಿತವಾದವು. ಇದುವರೆಗೂ, ಇದು ಡೆಪೆಷ್‌ ಮೋಡ್‌ ಪಾಲಿಗೆ ವಿಶ್ವದಾದ್ಯಂತ ಅತಿಹೆಚ್ಚು ಮಾರಾಟವಾದ ಅಲ್ಬಮ್‌ ಆಗಿ ಉಳಿದಿದೆ.[೪೦] ಈ ಅಲ್ಬಮ್‌ನಿಂದ ಇನ್ನೂ ಎರಡು ಏಕಗೀತೆಗಳಾದ 'ಪಾಲಿಸಿ ಆಫ್‌ ಟ್ರೂತ್‌' ಹಾಗೂ 'ವರ್ಲ್ಡ್‌ ಇನ್‌ ಮೈ ಐಯ್ಸ್‌' UK ಮತ್ತು ಅಮೆರಿಕಾ ದೇಶಗಳಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸಿದವು ಹಾಗು ಮೊದಲನೆಯದು US ಪಟ್ಟಿಯಲ್ಲಿ ಸ್ಥಾನ ಪಡೆಯಿತು.

"I remember going to see them in Giants Stadium, and they broke the merchandising record; of Bon Jovi, U2 — all these bands — Depeche Mode were the biggest!."

 —Flood, on Giants Stadium concert.[೪೧]

ವರ್ಲ್ಡ್‌ ವಯಲೇಷನ್‌ ಟೂರ್‌ ಡೆಪೆಷ್‌ ಮೋಡ್‌ನ ಜನಪ್ರಿಯತೆಯಲ್ಲಿ ಇನ್ನೊಂದು ಉನ್ನತ ಘಳಿಗೆಯಾಯಿತು. ಅಮೆರಿಕಾ ದೇಶದಲ್ಲಿ ಹಲವು ಕ್ರೀಡಾಂಗಣಗಳಲ್ಲಿ ಡೆಪೆಷ್‌ ಮೋಡ್‌ ತಂಡವು ಸಂಗೀತ ಗೋಷ್ಠಿ ನಡೆಸಿದವು. ಜಯಂಟ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕಾಗಿ ನಾಲ್ಕು ತಾಸಿನಲ್ಲಿ 42,000 ಟಿಕೆಟ್‌ಗಳು ಮಾರಾಟವಾದವು. ಡಾಡ್ಜರ್‌ ಕ್ರೀಡಾಂಗಣದಲ್ಲಿನ ಕಾರ್ಯಕ್ರಮಕ್ಕಾಗಿ ಮಾರಾಟ ಆರಂಭಗೊಂಡ ಅರ್ಧತಾಸಿನಲ್ಲೇ 48,000 ಟಿಕೆಟ್‌ಗಳು ಮಾರಾಟವಾಗಿದ್ದವು.[೪೨]

1991ರಲ್ಲಿ, ಡೆಪೆಷ್‌ ಮೋಡ್‌ ಸಂಯೋಜಿಸಿದ 'ಡೆತ್ಸ್‌ ಡೋರ್‌', ಅಂಟಿಲ್ ದಿ ಎಂಡ್‌ ಆಫ್‌ ದಿ ವರ್ಲ್ಡ್ ‌ ಚಲನಚಿತ್ರಕ್ಕಾಗಿ ವಾರ್ನರ್ ಬ್ರದರ್ಸ್‌ರ ಅಲ್ಬಮ್‌ ಅಂಟಿಲ್‌ ದಿ ಎಂಡ್ ಆಫ್‌ ದಿ ವರ್ಲ್ಡ್: ಒರಿಜಿನಲ್‌ ಮೊಷನ್‌ ಪಿಕ್ಚರ್‌ ಸೌಂಡ್‌ಟ್ರ್ಯಾಕ್ ‌ ಒಂದಿಗೆ ಬಿಡುಗಡೆಯಾಯಿತು.

ಸಾಂಗ್ಸ್‌ ಆಫ್‌ ಫೇಯ್ತ್‌ ಅಂಡ್‌ ಡಿವೊಷನ್ ‌ ಹಾಗೂ ವೈಲ್ಡರ್ಸ್‌ರ ನಿರ್ಗಮನ (1993–1995)

ಬದಲಾಯಿಸಿ

1992ರ ಜನವರಿ ತಿಂಗಳಲ್ಲಿ ಡೆಪೆಷ್‌ ಮೋಡ್‌ ಸದಸ್ಯರು ಮ್ಯಾಡ್ರಿಡ್‌ನಲ್ಲಿ ಪುನಃ ಒಟ್ಟಿಗೆ ಸೇರಿದರು. ಆ ಕಾಲದಲ್ಲಿ ಗ್ರಂಜ್‌ ಶೈಲಿಯ ಸಂಗೀತ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಜನಪ್ರಿಯವಾಗಿದ್ದನ್ನು ಡೇವ್‌ ಗಹನ್ ಗಮನಿಸಿ, ಆಸಕ್ತಿ ವಹಿಸಿದರು. ಜೇನ್ಸ್‌ ಅಡಿಕ್ಷನ್ ಮತ್ತು ನಿರ್ವಾನಮುಂತಾದವುಗಳಿಂದ ಡೇವ್‌ ಗಹನ್‌ ಪ್ರಭಾವಿತರಾಗಿದ್ದರು.[೪೩] 1993ರಲ್ಲಿ, ನಿರ್ಮಾಪಕ ಫ್ಲಡ್‌ರೊಂದಿಗೆ ಪುನಃ ಸೇರಿ, ಸಾಂಗ್ಸ್‌ ಆಫ್‌ ಫೇಯ್ತ್‌ ಅಂಡ್ ಡಿವೊಷನ್‌ ಅಲ್ಬಮ್‌ನಲ್ಲಿ, ಡೆಪೆಷ್‌ ಮೋಡ್‌ ಇನ್ನಷ್ಟು ಸುಸಂಘಟಿತ ವ್ಯವಸ್ಥೆಗಳೊಂದಿಗೆ ಪ್ರಯೋಗ ನಡೆಸಿತು. ಇನ್ನಷ್ಟು ವಿಸ್ವರ ಹೊರಡಿಸುತ್ತಿದ್ದ ವಿದ್ಯುತ್‌ ಗಿಟಾರ್‌ಗಳು ಮತ್ತು ಲೈವ್‌ ಡ್ರಮ್ಸ್‌ ವಾದ್ಯಗಳನ್ನು ಇದು ಹೆಚ್ಚು ಅವಲಂಬಿಸಿತ್ತು.(ವಯೊಲೇಟರ್ ‌ ಅಲ್ಬಮ್‌ನ ಹಾಡು 'ಕ್ಲೀನ್‌'ನಲ್ಲಿ ಅಲ್ಯಾನ್‌ ವೈಲ್ಡರ್ ಮೊದಲ ಬಾರಿಗೆ ಸ್ಟುಡಿಯೋ ಡ್ರಮ್ ವಾದಕರಾಗಿದ್ದರು.) [೪೪] ವಾದ್ಯತಂಡದ ಧ್ವನಿಗೆ ತಂತಿಗಳು, ಉಯಿಲಿಯನ್‌ ಪೈಪ್‌ಗಳು ಹಾಗೂ ಮಹಿಳೆಯ ಸುವಾರ್ತೆ ಹಾಡಿನ ಧ್ವನಿಯನ್ನು ಸೇರಿಸಲಾಯಿತು. ಈ ಅಲ್ಬಮ್‌ UK ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಜನಪ್ರಿಯ ಅಲ್ಬಮ್‌ ಪಟ್ಟಿಗಳಲ್ಲಿ ಅಗ್ರಸ್ಥಾನ ಗಳಿಸಿತು.ಇಂತಹ ಹಿರಿಮೆಯನ್ನು ಇದುವರೆಗೆ ಗಳಿಸಿದ 6ನೇ ಬ್ರಿಟಿಷ್ ಪ್ರದರ್ಶನವೆನಿಸಿತು.[೪೧] ಗ್ರಂಜ್‌ ಪ್ರಭಾವಿತ ಹಾಡು 'ಐ ಫೀಲ್‌ ಯು' ಅಲ್ಬಮ್‌ನ ಮೊದಲ ಏಕಗೀತೆಯಾಗಿತ್ತು. ಅಲ್ಬಮ್‌ನ ಮೂರನೆಯ ಏಕಗೀತೆ 'ಕಂಡೆಮ್ನೇಷನ್‌'ನಲ್ಲಿ ಸುವಾರ್ತೆ ಪ್ರಭಾವಗಳನ್ನು ಗುರುತಿಸಬಹುದಾಗಿದೆ.

ಇದಾದ ನಂತರ ಡಿವೊಷನಲ್‌ ವಿಶ್ವ ಪ್ರವಾಸ ನಡೆಯಿತು. ಈ ಪ್ರವಾಸದ ವಾದ್ಯಗೋಷ್ಠಿ ಚಲನಚಿತ್ರದ ಮೂಲಕ ಇದೇ ಹೆಸರಿನಡಿ ದಾಖಲಿಸಲಾಯಿತು. ಆಂಟನ್‌ ಕಾರ್ಬಿನ್‌ ಈ ಚಲನಚಿತ್ರವನ್ನು ನಿರ್ದೇಶಿಸಿದರು. 1995ರಲ್ಲಿ ಇದು ವಾದ್ಯತಂಡಕ್ಕಾಗಿ ಮೊಟ್ಟಮೊದಲ ಗ್ರ್ಯಾಮಿ ನಾಮನಿರ್ದೇಶನ ಗಳಿಸಿತು.[೪೫] ವಾದ್ಯತಂಡದ ಎರಡನೆಯ ಲೈವ್‌ ಅಲ್ಬಮ್‌ ಸಾಂಗ್ಸ್‌ ಆಫ್‌ ಫೇಯ್ತ್‌ ಅಂಡ್‌ ಡಿವೊಷನ್‌ 1993ರ ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆಯಾಯಿತು.

ಈ ಪ್ರವಾಸವು 1994ರಲ್ಲಿ ಮುಂದುವರೆಯಿತು. ಎಕ್ಸೊಟಿಕ್‌ ಟೂರ್‌ 1994ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆರಂಭಗೊಂಡು, ಏಪ್ರಿಲ್‌ ತಿಂಗಳಲ್ಲಿ, ಮೆಕ್ಸಿಕೊದಲ್ಲಿ ಅಂತ್ಯಗೊಂಡಿತು. ಹೆಚ್ಚು ಉತ್ತರ ಅಮೆರಿಕ ದಿನಾಂಕಗಳನ್ನು ಹೊಂದಿದ್ದ,ಪ್ರವಾಸದ ಅಂತಿಮ ಹಂತವು ಕ್ಷಿಪ್ರವಾಗಿ ಅನುಸರಿಸಿತು ಹಾಗು ಜುಲೈವೆರೆಗೆ ಓಡಿತು. ಒಟ್ಟಾರೆ, ಡಿವೊಷನಲ್‌ ಟೂರ್‌ ಡೆಪೆಷ್‌ ಮೋಡ್‌ ಪಾಲಿಗೆ ಅತಿ ದೀರ್ಘಾವಧಿಯ ಹಾಗೂ ಭೌಗೋಳಿಕವಾಗಿ ವೈವಿಧ್ಯಮಯ ಪ್ರವಾಸವಾಗಿತ್ತು. ಹದಿನಾಲ್ಕು ತಿಂಗಳುಗಳ ಕಾಲ ನಡೆದು, 159 ವೈಯಕ್ತಿಕ ಪ್ರದರ್ಶನಗಳನ್ನು ಒಳಗೊಂಡಿದ್ದವು. 1993ರಲ್ಲಿ ನಡೆದ ಡಿವೊಷನಲ್‌ ಟೂರ್‌ನ್ನು ಅತಿ ನೀತಿಗೆಟ್ಟ ರಾಕ್‌-ರೋಲ್‌ ಶೈಲಿಯ ಪ್ರವಾಸ ಎಂದು Q ಪತ್ರಿಕೆ ಪಟ್ಟಿ ಮಾಡಿತು.[೪೬]

ಡೇವ್‌ ಗಹನ್‌ಗೆ ಹೆರೋಯಿನ್‌ ದುಶ್ಚಟ ವು, ಅವರ ನಡತೆಯ ಮೇಲೆ ಕೆಟ್ಟ ಪ್ರಭಾವ ಬೀರಲಾರಂಭಿಸಿತು. ಇದರಿಂದಾಗಿ ಅವರು ವಿಕ್ಷಿಪ್ತ ಮತ್ತು ಅಂತರ್ಮುಖೀಯ ನಡತೆ ತೋರಲಾರಂಭಿಸಿದರು. ಮಾರ್ಟಿನ್‌ ಗೋರ್‌ ಪಾರ್ಶ್ವವಾಯುಗಳನ್ನು ಅನುಭವಿಸಿದರು. ಆಂಡಿ ಫ್ಲೆಷರ್‌ 'ಮಾನಸಿಕ ಅಸ್ಥಿರತೆ'ಹಿನ್ನೆಲೆಯಲ್ಲಿ ಎಕ್ಸೊಟಿಕ್‌ ಟೂರ್‌ನ ಉತ್ತರಾರ್ಧದಲ್ಲಿ ಭಾಗವಹಿಸಲು ನಿರಾಕರಿಸಿದರು. ಈ ಅವಧಿಯಲ್ಲಿ ಡೆರಿಲ್‌ ಬೆಮೊಂಟ್‌ ಅವರ ಸ್ಥಾನದಲ್ಲಿ ವೇದಿಕೆಯಲ್ಲಿ ಭಾಗವಹಿಸಿದರು. ಇವರು ಹಲವು ವರ್ಷಗಳ ಕಾಲ ವಾದ್ಯತಂಡದಲ್ಲಿ ವೈಯಕ್ತಿಕ ಸಹಾಯಕರಾಗಿದ್ದರು.[೪೭]

1995ರ ಜೂನ್‌ ತಿಂಗಳಲ್ಲಿ, ತಾವು ಡೆಪೆಷ್‌ ಮೋಡ್‌ ತಂಡದಿಂದ ನಿರ್ಗಮಿಸುತ್ತಿರುವುದಾಗಿ ಅಲ್ಯಾನ್‌ ವೈಲ್ಡರ್ ಘೋಷಿಸಿದರು. ಅವರು ವಿವರಿಸಿದ್ದು ಹೀಗೆ:

Since joining in 1982, I have continually striven to give total energy, enthusiasm and commitment to the furthering of the group's success and in spite of a consistent imbalance in the distribution of the workload, willingly offered this. Unfortunately, within the group, this level of input never received the respect and acknowledgement that it warrants.[೪೮]

ಅವರು ತಮ್ಮ ವೈಯಕ್ತಿಕ ಅಲ್ಬಮ್‌ ರಿಕಾಯ್ಲ್‌ ನಿಮಿತ್ತ ಕಾರ್ಯ ಮುಂದುವರೆಸಿದರು. 1997ರಲ್ಲಿ ಅನ್ಸೌಂಡ್‌ ಮೆಥಡ್ಸ್‌ ಎಂಬ ನಾಲ್ಕನೆಯ ಅಲ್ಬಮ್ ಬಿಡುಗಡೆಗೊಳಿಸಿದರು.

ವೈಲ್ಡರ್ ನಿರ್ಗಮಿಸಿದ ನಂತರ, ಡೆಪೆಷ್‌ ಮೋಡ್‌ ಪುನಃ ಧ್ವನಿಮುದ್ರಣ ಮಾಡುತ್ತದೋ ಇಲ್ಲವೋ ಎಂದು ಅನೇಕ ಮಂದಿ ಸಂಶಯ ವ್ಯಕ್ತಪಡಿಸಿದರು. ಗಹನ್‌ ಮಾದಕ ವಸ್ತು ದುಶ್ಚಟ ಹಾಗೂ ಮಾನಸಿಕ ಸ್ಥಿತಿ ಕಳವಳದ ಮುಖ್ಯ ಮೂಲವಾಯಿತು. ಲಾಸ್‌ ಏಂಜಲೀಸ್‌ ಹೊಟೆಲ್‌ನಲ್ಲಿ ತಂಗಿದ್ದಾಗ ಸಾವಿಗೆ ಸಮೀಪವಾದ ಅತಿ ಸೇವನೆ ಮಾಡಿಬಿಟ್ಟಿದ್ದರು.

ಅಲ್ಟ್ರಾ (1997–2000)

ಬದಲಾಯಿಸಿ

ಗಹನ್‌ರ ವೈಯಕ್ತಿಕ ಸಮಸ್ಯೆಗಳು ಹೆಚ್ಚುತ್ತಲೇ ಇದ್ದರೂ, 1995 ಮತ್ತು 1996 ಅವಧಿಗಳಲ್ಲಿ ವಾದ್ಯತಂಡವು ಪುನಃ ಧ್ವನಿಮುದ್ರಣ ಕಾರ್ಯದಲ್ಲಿ ತೊಡಗಿಸಲು ಗೋರ್ ಪದೇ ಪದೇ ಯತ್ನಿಸಿದರು. ಆದರೂ, ಗಹನ್‌ ನಿಗದಿತ ಧ್ವನಿಮುದ್ರಣಾ ಕಾರ್ಯಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿರಲಿಲ್ಲ. ಒಂದು ವೇಳೆ ಬಂದರೂ, ಧ್ವನಿ ಮುದ್ರಣ ನಡೆಸಲು ಹಲವು ವಾರಗಳ ಕಾಲಾವಧಿ ತೆಗೆದುಕೊಳ್ಳುತ್ತಿತ್ತು. ನ್ಯೂಯಾರ್ಕ್‌ನ ಎಲೆಕ್ಟ್ರಿಕ್ ಲೇಡಿಯಲ್ಲಿ ಆರು ವಾರಗಳ ಕಾಲ ನಡೆದ ಧ್ವನಿ ಮುದ್ರಣಾ ಕಾರ್ಯದಲ್ಲಿ ಕೇವಲ ಒಂದು ಹಾಡು ಮಾತ್ರ ಸಫಲವಾಗಿ ಧ್ವನಿಮುದ್ರಣ ಮಾಡಲಾಯಿತು(ಸಿಸ್ಟರ್ ಆಫ್ ನೈಟ್‌ಗೆ) ಅದನ್ನು ಕೂಡ ಬಹು ಪರೀಕ್ಷೆಗಳಿಂದ ಒಟ್ಟಿಗೆ ಜೋಡಿಸಲಾಗಿತ್ತು.[೪೯] ಗೋರ್‌ ವಾದ್ಯತಂಡವನ್ನು ಒಡೆದು, ತಾವು ಬರೆದ ಹಾಡುಗಳನ್ನು ತನಿ-ಅಲ್ಬಮ್‌ ರೂಪದಲ್ಲಿ ತರಲು ಯೋಚಿಸಿವಂತಾಯಿತು.[೫೦]‌ 1996ರ ಮಧ್ಯಕಾಲದಲ್ಲಿ, ಹೆರೋಯಿನ್‌ ಚಟ ಬೆಳೆಸಿಕೊಂಡು ಅತಿಯಾದ ಸೇವನೆಯಿಂದ ಸಾವಿನಂಚಿಗೆ ಬಂದಿದ್ದ ಗಹನ್,‌ ನ್ಯಾಯಾಲಯದ ಆದೇಶದಂತೆ, ಮಾದಕ ವಸ್ತು ದುಶ್ಚಟ ಪುನಶ್ಚೈತನ್ಯ ಚಿಕಿತ್ಸೆಗೆ ಒಳಗಾಗಬೇಕಾಯಿತು.[೫೧] 1996ರಲ್ಲಿ ಗಹನ್‌ ಮಾದಕವಸ್ತು ಚಟಕ್ಕೆ ಪುನಶ್ಚೈತನ್ಯ ಚಿಕಿತ್ಸೆ ಮುಗಿಸಿ ಹೊರಬಂದ ನಂತರ, ನಿರ್ಮಾಪಕ ಟಿಮ್‌ ಸಿಮೆನೊನ್‌ರೊಂದಿಗೆ ಡೆಪೆಷ್‌ ಮೋಡ್‌ ಧ್ವನಿಮುದ್ರಣಾ ಚಟುವಟಿಕೆ ನಡೆಸಿತು. ಅಲ್ಟ್ರಾ ಎಂದು ಹೆಸರಿಸಲಾದ ಈ ಅಲ್ಬಮ್‌ 1997ರ ಏಪ್ರಿಲ್‌ ತಿಂಗಳಲ್ಲಿ ಬಿಡುಗಡೆಯಾಯಿತು. ಇದರ ಬಿಡುಗಡೆಯ ಮುಂಚೆ, 'ಬ್ಯಾರೆಲ್‌ ಆಫ್‌ ಎ ಗನ್‌' ಹಾಗೂ 'ಇಟ್ಸ್‌ ನೊ ಗುಡ್'‌ ಎಂಬ ಎರಡು ಏಕಗೀತೆಗಳು ಬಿಡುಗಡೆಯಾದವು. ಈ ಅಲ್ಬಮ್‌ UKಯಲ್ಲಿ #1 ಹಾಗೂ ಅಮೆರಿಕಾದಲ್ಲಿ #5ಸ್ಥಾನದೊಂದಿಗೆ ಚೊಚ್ಚಲ ಪ್ರವೇಶ ಗಳಿಸಿತು. ಆದರೆ, ಈ ಆಲ್ಬಂಗೆ ಬೆಂಬಲವಾಗಿ ವಾದ್ಯತಂಡವು ಪ್ರವಾಸ ಮಾಡಲಿಲ್ಲ. ಇದರ ಬಿಡುಗಡೆಯ ಪ್ರಚಾರಕ್ಕೆಂದು ವಾದ್ಯತಂಡವು ಲಂಡನ್‌ ಮತ್ತು ಲಾಸ್‌ ಏಂಜೆಲೀಸ್‌ ನಗರಗಳಲ್ಲಿ 'ಅಲ್ಟ್ರಾ ಪಾರ್ಟೀಸ್‌' ಎಂಬ ಎರಡು ಸಣ್ಣ ಸಂಗೀತ ಗೋಷ್ಠಿಗಳನ್ನು ನಡೆಸಿತು.[೫೨] ಅಲ್ಟ್ರಾ ದ ಯಶಸ್ಸಿನಿಂದಾಗಿ, 'ಹೋಮ್'‌ ಮತ್ತು 'ಯೂಸ್ಲೆಸ್‌' ಎಂಬ ಇನ್ನೂ ಎರಡು ಏಕಗೀತೆಗಳು ಬಿಡುಗಡೆಯಾದವು.

ವಿವಿಧ ಏಕಗೀತೆಗಳ ಸಂಕಲನವಾದ ದಿ ಸಿಂಗಲ್ಸ್‌ 86-98 ನ್ನು 1998ರಲ್ಲಿ ಬಿಡುಗಡೆಗೊಳಿಸಲಾಯಿತು. ಇದಕ್ಕೆ ಮುಂಚೆ ಒನ್ಲಿ ವೆನ್‌ ಐ ಲೂಸ್‌ ಮೈಸೆಲ್ಫ್‌ ಎಂಬ ಹೊಸ ಏಕಗೀತೆ ಬಿಡುಗಡೆಯಾಗಿತ್ತು. ಅಲ್ಟ್ರಾ ಧ್ವನಿಮುದ್ರಣ ಕಾಲದಲ್ಲಿ ಈ ಏಕಗೀತೆಯ ಧ್ವನಿಮುದ್ರಣ ನಡೆಸಲಾಯಿತು. 1998ರ ಏಪ್ರಿಲ್ ತಿಂಗಳಲ್ಲಿ ಡೆಪೆಷ್‌ ಮೋಡ್‌ ಕೊಲ್ನ್‌ನ ಹ್ಯಾಟ್‌ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, ದಿ ಸಿಂಗಲ್ಸ್‌ ಟೂರ್‌ ಘೋಷಿಸಿದರು.[೫೩] ಇದು ಮೊದಲ ಬಾರಿಗೆ ಅಲ್ಯಾನ್‌ ವೈಲ್ಡರ್ ಸ್ಥಾನದಲ್ಲಿ, ಆಸ್ಟ್ರಿಯಾ ದೇಶದ ಡ್ರಮ್ಮರ್‌ ಕ್ರಿಷ್ಚಿಯನ್‌ ಎಗ್ನರ್‌ ಮತ್ತು ಬ್ರಿಟಿಷ್‌ ಕೀಬೋರ್ಡ್‌ ವಾದಕ ಪೀಟರ್ ಗೊರ್ಡೆನೊರನ್ನು ಇಬ್ಬರು ಸಹಾಯಕ ಸಂಗೀತಗಾರರನ್ನು ಒಳಗೊಂಡಿತ್ತು.

ಎಕ್ಸೈಟರ್‌ (2001–2004)

ಬದಲಾಯಿಸಿ
 
2001ರ ಅಕ್ಟೊಬರ್‌ನಲ್ಲಿ ಒಬರ್ಹಾಸೆನ್‌ನಲ್ಲಿ ನಡೆದ ಎಕ್ಸೈಟರ್‌ ಪ್ರವಾಸ ಸಂಗೀತ ಪ್ರದರ್ಶನ

2001ರಲ್ಲಿ, ಡೆಪೆಷ್‌ ಮೋಡ್‌ ಎಕ್ಸೈಟರ್ ‌ ಎಂಬ ಅಲ್ಬಮ್‌ ಬಿಡುಗಡೆಗೊಳಿಸಿತು. ಎಲ್‌ಎಫ್‌ಒ ಎಂಬ ತಾಂತ್ರಿಕ ಗುಂಪಿನ ಸದಸ್ಯ ಮಾರ್ಕ್‌ ಬೆಲ್‌ ಈ ಅಲ್ಬಮ್‌ನ ನಿರ್ಮಾಪಕರಾಗಿದ್ದರು. ಅಲ್ಬಮ್‌ನ ಬಹಳಷ್ಟು ಹಾಡುಗಳಿಗೆ ಬೆಲ್‌ ಕನಿಷ್ಠತೆಯ, ಡಿಜಿಟಲ್‌ ತಂತ್ರಜ್ಞಾನದ ಧ್ವನಿಯನ್ನು ಪರಿಚಯಿಸಿದರು. ಈ ಪ್ರಯೋಗವು ಐಡಿಎಂ ಮತ್ತು ಗ್ಲಿಚ್‌ ಇಂದ ಪ್ರಭಾವಿತವಾಗಿತ್ತು. "ಡ್ರೀಮ್‌ ಆನ್‌", "ಐ ಫೀಲ್‌ ಲವ್ಡ್‌", "ಫ್ರೀಲವ್‌" ಮತ್ತು "ಗುಡ್‌ನೈಟ್‌ ಲವರ್ಸ್‌" 2001 ಮತ್ತು 2002ರಲ್ಲಿ ಏಕಗೀತೆಗಳಾಗಿ ಬಿಡುಗಡೆಯಾದವು.

ಈ ಅಲ್ಬಮ್‌ಗೆ ಮಿಶ್ರಿತ ವಿಮರ್ಶಾತ್ಮಕ ಪ್ರತಿಕ್ರಿಯೆ ದೊರಕಿತು.  ಎನ್‌ಎಂಇ , ರೊಲಿಂಗ್‌ ಸ್ಟೋನ್ ‌ ಮತ್ತು ಎಲ್‌‌ಎ ವೀಕ್ಲಿ  ಸೇರಿದಂತೆ ಕೆಲವು ಪತ್ರಿಕೆಗಳು ಸಕಾರಾತ್ಮಕ ವಿಮರ್ಶೆ ನೀಡಿದವು. ಇನ್ನೊಂದೆಡೆ, ಇದು ಸಮರ್ಪಕವಾಗಿ ನಿರ್ಮಾಣವಾಗಿಲ್ಲ, ಮಂದ ಮತ್ತು ನೀರಸಾಗಿದೆ ಎಂದು ಕ್ಯೂ  ಪತ್ರಿಕೆ, ಪಾಪ್‌ಮ್ಯಾಟರ್ಸ್‌, ಪಿಚ್ಫೊರ್ಕ್‌ ಮೀಡಿಯಾ ಸೇರಿದಂತೆ ಇತರೆ ಪತ್ರಿಕೆಗಳು ಟೀಕಿಸಿದವು.[೫೪]

ಎಕ್ಸೈಟರ್‌ ಟೂರ್‌ ಘೋಷಿಸಲೆಂದು, 2001ರ ಮಾರ್ಚ್‌ ತಿಂಗಳಲ್ಲಿ ಡೆಪೆಷ್‌ ಮೋಡ್‌ ಜರ್ಮನಿಯ ಹ್ಯಾಂಬರ್ಗ್‌ನ ವ್ಯಾಲೆಂಟಿನೊ ಹೋಟೆಲ್‌ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿತು.[೫೫] ಒಟ್ಟು, ಈ ಪ್ರವಾಸದಲ್ಲಿ, 24 ದೇಶಗಳಲ್ಲಿ, 1.5 ದಶಲಕ್ಷ ಅಭಿಮಾನಿಗಳಿಗಾಗಿ 84 ಪ್ರದರ್ಶನಗಳನ್ನು ನೀಡಲಾಯಿತು.[೫೬] ಪ್ಯಾರಿಸ್‌ನ ಪ್ಯಾಲೆ ಆಮ್ನಿಸ್ಪೋರ್ಟ್ಸ್‌ ಡಿ ಪ್ಯಾರಿಸ್‌-ಬರ್ಸಿ ಸ್ಥಳದಲ್ಲಿ ವಾದ್ಯಗೋಷ್ಠಿಗಳು ನಡೆದವು. ಇವುಗಳನ್ನು ಚಿತ್ರೀಕರಿಸಿ 2002ರ ಮೇ ತಿಂಗಳಲ್ಲಿ ಒನ್‌ ನೈಟ್‌ ಇನ್‌ ಪ್ಯಾರಿಸ್‌ ಎಂಬ ಲೈವ್‌ ಡಿವಿಡಿಯ ರೂಪದಲ್ಲಿ ಹೊರತರಲಾಯಿತು.

2002ರ ಅಕ್ಟೊಬರ್‌ ತಿಂಗಳಲ್ಲಿ ವಾದ್ಯತಂಡಕ್ಕೆ ಮೊಟ್ಟಮೊದಲ ಕ್ಯೂ ಮ್ಯಾಗಝೀನ್‌ ನಾವೀನ್ಯತಾ ಪ್ರಶಸ್ತಿ ದೊರಕಿತು.[೫೭]

2003ರಲ್ಲಿ ಡೇವ್‌ ಗಹನ್‌ 'ಪೇಪರ್‌ ಮಾನ್ಸ್ಟರ್ಸ್ ‌' ಎಂಬ ತಮ್ಮ ಮೊದಲ ತನಿ-ಅಲ್ಬಮ್‌ ಬಿಡುಗಡೆಗೊಳಿಸಿದರು. ಈ ಅಲ್ಬಮ್‌ ಪ್ರಚಾರಕ್ಕೆ ಪ್ರವಾಸ ನಡೆಸಿದರು. ಅದೇ ವರ್ಷ, ಅಂದರೆ 2003ರಲ್ಲಿ ಮಾರ್ಟಿನ್‌ ಗೋರ್‌ರ ಎರಡನೆಯ ತನಿ-ಅಲ್ಬಮ್‌ ಕೌಂಟರ್‌ಫೀಟ್‌² ಬಿಡುಗಡೆಯಾಯಿತು.[೫೮] ಆಂಡ್ರ್ಯೂ ಫ್ಲೆಷರ್‌ ಸಹ ತಮ್ಮದೇ ಆದ 'ಟೋಸ್ಟ್‌ ಹವಾಯ್‌' ಎಂಬ ಧ್ವನಿಮುದ್ರಣ ಸಂಸ್ಥೆಯನ್ನು ಆರಂಭಿಸಿದ್ದರು. ವಿದ್ಯುನ್ಮಾನ ಸಂಗೀತಕ್ಕೆ ಪ್ರಚಾರ ನೀಡುವಲ್ಲಿ ಪರಿಣತಿ ಗಳಿಸುವುದು ಇದರ ಉದ್ದೇಶವಾಗಿತ್ತು.

2004ರಲ್ಲಿ ರಿಮಿಕ್ಸೆಸ್‌ 81-04 ಎಂಬ ಶೀರ್ಷಿಕೆಯಡಿ, ಹೊಸ ರಿಮಿಕ್ಸ್‌ ಸಂಕಲನದ ಅಲ್ಬಮ್‌ ಬಿಡುಗಡೆಯಾಯಿತು. ಇದರಲ್ಲಿ, 1981ರಿಂದ 2004ರ ಕಾಲಾವಧಿಯ ಹೊಸ ಮತ್ತು ಬಿಡುಗಡೆಯಾಗಿರದ ಉತ್ತೇಜನಾ ರಿಮಿಕ್ಸ್‌ ಶೈಲಿಯ ವಾದ್ಯತಂಡದ ಏಕಗೀತೆಗಳಿದ್ದವು. 'ಎಂಜಾಯ್‌ ದಿ ಸೈಲೆನ್ಸ್'‌ ಹಾಡಿನ ಹೊಸ ಆವೃತ್ತಿಯನ್ನು ಮೈಕ್‌ ಷಿನೊಡಾ ಮರುಮಿಶ್ರಣ ಮಾಡಿ 'ಎಂಜಾಯ್‌ ದಿ ಸೈಲೆನ್ಸ್‌ 04' ಶೀರ್ಷಿಕೆಯಡಿ ಏಕಗೀತೆಯಾಗಿ ಬಿಡುಗಡೆ ಮಾಡಿದರು. ಇದು UKನ ಜನಪ್ರಿಯ ಪಟ್ಟಿಗಳಲ್ಲಿ ಏಳನೆಯ ಸ್ಥಾನ ಗಳಿಸಿತು.

ಪ್ಲೇಯಿಂಗ್‌ ದಿ ಏಂಜೆಲ್‌ (2005–2008)

ಬದಲಾಯಿಸಿ
 
2006ರ ಜೂನ್‌ ತಿಂಗಳಲ್ಲಿ ಬ್ರೆಮೆನ್‌ನಲ್ಲಿ ಟೂರಿಂಗ್‌ ದಿ ಏಂಜಲ್‌ ಸಂಗೀತ ಕಾರ್ಯಕ್ರಮ

2005ರ ಅಕ್ಟೊಬರ್‌ ತಿಂಗಳಲ್ಲಿ, ವಾದ್ಯತಂಡವು ತನ್ನ ಹನ್ನೊಂದನೆಯ ಸ್ಟೂಡಿಯೊ ಅಲ್ಬಮ್‌ 'ಪ್ಲೇಯಿಂಗ್‌ ದಿ ಏಂಜೆಲ್ ‌'ನ್ನು ಬಿಡುಗಡೆಗೊಳಿಸಿತು. ಬೆನ್‌ ಹಿಲ್ಲಿಯರ್‌ ನಿರ್ಮಾಣದ ಈ ಅಲ್ಬಮ್‌ 17 ದೇಶಗಳಲ್ಲಿ #1ನೇ ಸ್ಥಾನ ಗಳಿಸಿ, ಬಹಳಷ್ಟು ಜನಪ್ರಿಯವಾದ 'ಪ್ರೆಸಿಯಸ್‌' ಎಂಬ ಏಕಗೀತೆ ಹೊಂದಿತ್ತು. ಗಹನ್‌ ಗೀತೆ ರಚಿಸಿದ ಮೊದಲ ಡೆಪೆಷ್ ಮೋಡ್‌ ಅಲ್ಬಮ್ ಆಗಿದೆ. ಇದರ ಫಲವಾಗಿ, ಗೋರ್‌ ಬರೆದಿರದ ಹಾಡುಗಳನ್ನು ಒಳಗೊಂಡ, 1984ರ ಸಮ್‌ ಗ್ರೇಟ್‌ ರಿವಾರ್ಡ್‌ ಅಲ್ಬಮ್‌ ನಂತರ ಇದೇ ಮೊದಲ ಅಲ್ಬಮ್‌ ಆಗಿತ್ತು. 'ಸಫರ್‌ ವೆಲ್' ಎಂಬುದು ಕ್ಲಾರ್ಕ್‌ ನಂತರದ ಗೋರ್ ಬರೆದಿರದ ಮೊಟ್ಟಮೊದಲ ಡೆಪೆಷ್‌ ಮೋಡ್‌ ಏಕಗೀತೆಯಾಗಿತ್ತು. ( ಗಹನ್ ಸಂಗೀತನಾಟತ ಹಾಗು ಸಂಗೀತ ನೀಡಿದವರು ಫಿಲ್ಪೊಟ್‌/ಎಗ್ನರ್‌ ) ಈ ಅಲ್ಬಮ್‌ನ ಅಂತಿಮ ಏಕಗೀತೆ 'ಜಾನ್‌ ದಿ ರೆವೆಲೇಟರ್‌' ಎಂಬುದು ಏರುಗತಿಯ ವಿದ್ಯುನ್ಮಾನ ಹಾಡಾಗಿತ್ತು. ಇದು ಧಾರ್ಮಿಕ ವಿಷಯವನ್ನು ಒಳಗೊಂಡು, ಇದರೊಂದಿಗೆ, ಸಮೃದ್ಧವಾಗಿರುವ 'ಲಿಲಿಯನ್' ಎಂಬ ಹಾಡಿತ್ತು. ಇದು ವಿಶ್ವದಾದ್ಯಂತ ಹಲವು ಕ್ಲಬ್‌ಗಳಲ್ಲಿ ಜನಪ್ರಿಯತೆ ಗಳಿಸಿತು.

ಪ್ಲೇಯಿಂಗ್‌ ದಿ ಏಂಜೆಲ್ ‌' ಪ್ರಚಾರಕ್ಕೆ, ವಾದ್ಯತಂಡವು 'ಟೂರಿಂಗ್‌ ದಿ ಏಂಜೆಲ್‌' ಎಂಬ ಯುರೋಪ್ ಮತ್ತು ಉತ್ತರಅಮೆರಿಕದ ಸಂಗೀತ ಗೋಷ್ಠಿ ಪ್ರವಾಸವನ್ನು ಆರಂಭಿಸಿತು. ನವೆಂಬರ್‌ 2005ರಲ್ಲಿ ಆರಂಭಗೊಂಡು ಒಂಬತ್ತು ತಿಂಗಳುಗಳ ಕಾಲ ಓಡಿತು. ಪ್ರವಾಸದ ಕೊನೆಯ ಎರಡು ಹಂತಗಳಲ್ಲಿ, ಕೊಚೆಲಾ ವ್ಯಾಲಿ ಮ್ಯುಸಿಕ್‌ ಅಂಡ್‌ ಆರ್ಟ್ಸ್‌ ಫೆಸ್ಟಿವಲ್‌ ಹಾಗೂ O2 ವೈರ್ಲೆಸ್‌ ಫೆಸ್ಟಿವಲ್‌ ಸೇರಿದಂತೆ, ಹಲವು ಉತ್ಸವಗಳಲ್ಲಿ ಡೆಪೆಷ್‌ ಮೋಡ್‌ ವ್ಯಾಪಕ ಪ್ರಚಾರ ಗಳಿಸಿತು. ಒಟ್ಟಾರೆ, ವಾದ್ಯತಂಡವು ಸುಮಾರು 31 ದೇಶಗಳಲ್ಲಿ 2.8 ದಶಲಕ್ಷ ಪ್ರೇಕ್ಷಕರ ಮುಂದೆ ವಾದ್ಯಗೋಷ್ಠಿ ನಡೆಸಿತು. ಈ ಪ್ರವಾಸವು ಅತಿ ಹೆಚ್ಚು ಹಣಗಳಿಕೆ ಹಾಗೂ 2005/06 ವರ್ಷದ ವಿಮರ್ಶಾತ್ಮಕವಾಗಿ ಶ್ಲಾಘನೀಯ ಪ್ರವಾಸಗಳಲ್ಲಿ ಒಂದಾಗಿತ್ತು.[] ಗಹನ್‌ ಪ್ರವಾಸದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ, ಇದುವರೆಗೂ ಭಾಗವಹಿಸಿದ ಪ್ರವಾಸಗಳಲ್ಲಿ ಅತ್ಯಂತ ಸಂತೋಷಕರ, ಹಿಂದೆಂದೂ ನಿರ್ವಹಿಸಿರದ ನೇರ ಪ್ರದರ್ಶನಗಳು ಎಂದು ಹೇಳಿದರು. . ನೇರ ಪ್ರದರ್ಶನ ನಡೆಸುವುದಕ್ಕೆ ಹೊಸ ಸಾಮಗ್ರಿಗಳು ಕಾಯುತ್ತಿದ್ದಂತೆ ಕಂಡಿತು. ಇದು ಸ್ವಯಂ ಜೀವವನ್ನು ಹೊಂದಿತು. ಪ್ರೇಕ್ಷಕರ ಬಲದಿಂದ ನಮಗೆ ಸ್ಪೂರ್ತಿ ಉಕ್ಕಿ, ಹಾಡಿಗೆ ಜೀವ ತುಂಬಿದಂತಾಯಿತು .[೫೯] ಮಿಲ್ಯಾನ್‌ನ ಫಿಲಾ ಫೊರಮ್‌ನಲ್ಲಿ ಎರಡು ಕಾರ್ಯಕ್ರಮಗಳನ್ನು ಚಿತ್ರೀಕರಣ ಮಾಡಿ, ವಾದ್ಯಗೋಷ್ಠಿ ಚಿತ್ರವಾಗಿ ಸಂಪಾದಿಸಲಾಯಿತು ಹಾಗು ಅದು ಡಿವಿಡಿ Touring the Angel: Live in Milan ರೂಪದಲ್ಲಿ ಬಿಡುಗಡೆಗೊಳಿಸಲಾಯಿತು.[೬೦]

2006ರ ನವೆಂಬರ್‌ ತಿಂಗಳಲ್ಲಿ ಅತ್ಯುತ್ತಮ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ದಿ ಬೆಸ್ಟ್‌ ಆಫ್‌ ವಾಲ್ಯೂಮ್‌ 1 ಶೀರ್ಷಿಕೆಯಡಿ, ಮಾರ್ಟರ್‌ ಎಂಬ ಹೊಸ ಏಕಗೀತೆಯನ್ನು ಒಳಗೊಂಡಿತ್ತು. ಇದು ಪ್ಲೇಯಿಂಗ್‌ ದಿ ಏಂಜೆಲ್‌ ಧ್ವನಿಮುದ್ರಣಾ ಅವಧಿಯಲ್ಲಿ ಆಯ್ದ ಹಾಡಾಗಿತ್ತು. ಅದೇ ತಿಂಗಳ ಅಪರಾರ್ಧದಲ್ಲಿ, ಡೆಪೆಷ್‌ ಮೋಡ್‌ಗೆ 'ಅತ್ಯುತ್ತಮ ವಾದ್ಯತಂಡ ವಿಭಾಗ'ದಲ್ಲಿ ಎಂಟಿವಿ ಯುರೋಪ್‌ ಮ್ಯೂಸಿಕ್‌ ಅವಾರ್ಡ್‌ ಲಭಿಸಿತು.[೬೧]

2004ರಲ್ಲಿ ದಿ ಕಂಪ್ಲೀಟ್‌ ಯು2 , 2005ರಲ್ಲಿ ದಿ ಕಂಪ್ಲೀಟ್‌ ಸ್ಟೀವೀ ವಂಡರ್‌ ಹಾಗೂ 2006ರ ಪೂರ್ವಾರ್ಧದಲ್ಲಿ Bob Dylan: The Collection ನಂತರ, ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ, ಐಟ್ಯೂನ್ಸ್‌ 'ದಿ ಕಂಪ್ಲೀಟ್ ಡೆಪೆಷ್‌ ಮೋಡ್‌ 'ನ್ನು ನಾಲ್ಕನೆಯ ಡಿಜಿಟಲ್‌ ಸಂಪುಟದ ರೂಪದಲ್ಲಿ ಬಿಡುಗಡೆಗೊಳಿಸಿತು.[೬೨]

ಸೌಂಡ್ಸ್‌ ಆಫ್‌ ದಿ ಯುನಿವರ್ಸ್‌ (2009–2010)

ಬದಲಾಯಿಸಿ

2007ರ ಆಗಸ್ಟ್‌ ತಿಂಗಳಲ್ಲಿ, ಡೇವ್‌ ಗಹನ್‌ರ ಹವರ್‌‌ಗ್ಲಾಸ್ ‌ ಎಂಬ ಎರಡನೆಯ ತನಿ-ಅಲ್ಬಮ್‌ ಮಾರಾಟ ಪ್ರಚಾರ ಸಮಾರಂಭದಲ್ಲಿ, 2008ರಲ್ಲಿ ಹೊಸ ಅಲ್ಬಮ್‌ ನಿಮಿತ್ತ ಡೆಪೆಷ್‌ ಮೋಡ್‌ ಸ್ಟೂಡಿಯೊದಲ್ಲಿ ಪುನಃ ಕಾರ್ಯಪ್ರವೃತ್ತವಾಗುವುದೆಂದು ಘೋಷಿಸಲಾಯಿತು.[೬೩]

2008ರ ಮೇ ತಿಂಗಳಲ್ಲಿ, ವಾದ್ಯತಂಡವು ನಿರ್ಮಾಪಕ ಬೆನ್‌ ಹಿಲಿಯರ್‌ರೊಂದಿಗೆ ಸ್ಟೂಡಿಯೊಗೆ ಮರಳಿತು. ಕ್ಯಾಲಿಫೊರ್ನಿಯಾದ ಸ್ಯಾಂಟಾ ಬಾರ್ಬರಾದಲ್ಲಿರುವ ತಮ್ಮ ಗೃಹ ಸ್ಟೂಡಿಯೊದಲ್ಲಿ ಮಾರ್ಟಿನ್‌ ಗೋರ್‌ ಪ್ರಾಯೋಗಿಕವಾಗಿ ರಚಿಸಿದ ಕೆಲವು ಹಾಡುಗಳ ಬಗ್ಗೆ ಅವರು ಕಾರ್ಯಪ್ರವೃತ್ತರಾದರು. ಅದೇ ವರ್ಷದ ಅಪರಾರ್ಧದಲ್ಲಿ, ಡೆಪೆಷ್‌ ಮೋಡ್‌ ಹಾಗೂ ಅಮೆರಿಕಾ ಮೂಲದ ವಾರ್ನರ್‌ ಮ್ಯೂಸಿಕ್‌ನಿಂದ ಬೇರ್ಪಟ್ಟು, ಇಎಂಐ ಮ್ಯೂಸಿಕ್ಒಂದಿಗೆ ವಿಶ್ವಾದ್ಯಂತ ಹೊಸ ಸಹಯೋಗಕ್ಕೆ ಅಂಕಿತ ಹಾಕಲಾಗುವುದೆಂದು ಘೋಷಿಸಲಾಯಿತು.[೬೪]

 
2009ರ ಡಿಸೆಂಬರ್‌ನಲ್ಲಿ ಲಂಡನ್‌ನ ಒ2 ಅರೆನಾದಲ್ಲಿ ನಡೆದ ಟೂರ್‌ ಆಫ್‌ ದಿ ಯುನಿವರ್ಸ್‌ ವಾದ್ಯಗೋಷ್ಠಿ.

ಡೆಪೆಷ್‌ ಮೋಡ್‌ ವಾದ್ಯತಂಡದ 12ನೆಯ ಅಲ್ಬಮ್‌ನ ಹೆಸರನ್ನು ಸೌಂಡ್ಸ್‌ ಆಫ್‌ ದಿ ಯುನಿವರ್ಸ್ ‌' ಎಂದು ಕರೆಯಲಾಗುವುದು ಎಂದು ತಂಡದ ಅಧಿಕೃತ ಅಂತರಜಾಲತಾಣವು 2009ರ ಜನವರಿ 15ರಂದು ಘೋಷಿಸಿತು.[೬೫] ಅಲ್ಬಮ್‌ನ್ನು 2009ರ ಏಪ್ರಿಲ್‌ ತಿಂಗಳಲ್ಲಿ ಬಿಡುಗಡೆಗೊಳಿಸಲಾಯಿತು.ಅವು ಐಟ್ಯೂನ್ಸ್‌ ಪಾಸ್‌ ಮೂಲಕವೂ ಲಭ್ಯವಾದವು. ಇದರ ಮೂಲಕ ಖರೀದಿದಾರ ಅಧಿಕೃತ ಬಿಡುಗಡೆಯ ಕೆಲ ವಾರಗಳ ಮುಂಚೆಯೇ ಅಲ್ಬಮ್‌ನ ಹಾಡುಗಳನ್ನು ಸ್ವೀಕರಿಸಬಹುದು. ಐಟ್ಯೂನ್ಸ್‌ ಪಾಸ್ ಕಲ್ಪನೆಯು ವಾದ್ಯತಂಡ ಹಾಗೂ ಐಟ್ಯೂನ್ಸ್‌ನ ಸಂಯೋಜನೆಯಿಂದ ಆಗಿದೆ ಎಂದು ಆಂಡಿ ಫ್ಲೆಷರ್‌ ತಿಳಿಸಿದರು. ಡಿಜಿಟಲ್‌ ಮತ್ತು ಧ್ವನಿಮುದ್ರಣಾ ಸಂಸ್ಥೆಗಳು ಒಟ್ಟಿಗೆ ಕೆಲಸ ಆರಂಭಿಸುತ್ತೆಂದು ಭಾವಿಸಿದ್ದೇನೆ. ಡೌನ್ಲೋಡ್‌ಗಳ ಕಾಲ ಬಂದಾಗ ಮೊದಲ ಹತ್ತು ವರ್ಷಗಳಲ್ಲಿ ಅವು ಸೊಂಬೇರಿತನದ ಧೋರಣೆ ಪ್ರದರ್ಶಿಸುತ್ತಿದ್ದವು. ಈಗ ಅವು ಬಹಳಷ್ಟು ಸಹಯೋಗದ ಮನೋಭಾವ ತೋರಿ, ಅಭಿಮಾನಿಗಳು ಹಾಡುಗಳನ್ನು ಕೊಳ್ಳಲು ಹೊಸ ಕಲ್ಪನೆಗಳನ್ನು ಮುಂದಿಡುತ್ತಿವೆ .' [೬೬] ಈ ಅಲ್ಬಮ್‌ 21 ದೇಶಗಳಲ್ಲಿ ಅಗ್ರಸ್ಥಾನ ಗಳಿಸಿತು. ವಿಮರ್ಶಾತ್ಮಕ ಪ್ರತಿಕ್ರಿಯೆಯು ಒಟ್ಟಾರೆ ಸಕಾರಾತ್ಮಕವಾಗಿತ್ತು. 'ಅತ್ಯುತ್ತಮ ಪರ್ಯಾಯ ಅಲ್ಬಮ್‌'ಗಾಗಿ ಗ್ರ್ಯಾಮಿ ನಾಮನಿರ್ದೇಶನ ಪಡೆಯಿತು.[೬೭]

2009ರ ಫೆಬ್ರವರಿ ತಿಂಗಳಲ್ಲಿ ಡಿಜಿಟಲ್‌ ಆವೃತ್ತಿಯಲ್ಲಿ ಬಿಡುಗಡೆಯಾದ ರಾಂಗ್‌ ಎಂಬುದು ಈ ಅಲ್ಬಮ್‌ನ ಮೊದಲ ಏಕಗೀತೆಯಾಗಿತ್ತು. ಇದಾದ ನಂತರ, ಪೀಸ್‌ ಮತ್ತು ಎರಡೂ ಬದಿಯಲ್ಲಿರುವ 'ಫ್ರೆಗೈಲ್‌ ಟೆನ್ಷನ್‌ / ಹೋಲ್‌ ಟು ಫೀಡ್‌' ಹಾಡುಗಳು ನಂತರ ಬಿಡುಗಡೆಯಾದವು. ಜೊತೆಗೆ, ಪರ್ಫೆಕ್ಟ್ ಎಂಬುದನ್ನು ಅಮೆರಿಕಾ ದೇಶದಲ್ಲಿ ಕೇವಲ ಪ್ರಚಾರಾರ್ಥ ಏಕಗೀತೆಯಾಗಿ(ವಾಣಿಜ್ಯೇತರ) ಬಿಡುಗಡೆ ಮಾಡಲಾಯಿತು.

'ಜಿಮ್ಮಿ ಕಿಮೆಲ್‌ ಲೈವ್‌!' ಕಾರ್ಯಕ್ರಮದಲ್ಲಿ ಡೆಪೆಷ್‌ ಮೋಡ್‌ ತಂಡವು ವಾದ್ಯಗೋಷ್ಠಿ ನಡೆಸಿತು. 2009ರ ಏಪ್ರಿಲ್‌ 23ರಂದು ಕ್ಯಾಲಿಫೊರ್ನಿಯಾದ ಲಾಸ್‌ ಏಂಜೆಲೀಸ್‌ನ ಹಾಲಿವುಡ್‌ ಬೋಲ್ವಾರ್ಡ್‌ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ 12,000ಕ್ಕಿಂತಲೂ ಹೆಚ್ಚು ಅಭಿಮಾನಿಗಳು ಹಾಜರಿದ್ದರು. 2003ರಲ್ಲಿ ಪ್ರಥಮಪ್ರದರ್ಶನದ ನಂತರ ಇದು ಅತಿದೊಡ್ಡ ಪ್ರೇಕ್ಷಕವರ್ಗವಾಗಿತ್ತು.[೬೮][೬೯]

2009ರ ಮೇ ತಿಂಗಳಲ್ಲಿ, ಅಲ್ಬಮ್‌ ಉತ್ತೇಜನಕ್ಕಾಗಿ ವಾದ್ಯತಂಡವು 'ಟೂರ್‌ ಆಫ್‌ ದಿ ಯುನಿವರ್ಸ್‌' ಎಂಬ ವಾದ್ಯಗೋಷ್ಠಿ ಪ್ರವಾಸ ನಡೆಸಿತು. ಇದರ ನಿಮಿತ್ತ ಬರ್ಲಿನ್‌‌ನ ಒಲಿಂಪಿಯಾಸ್ಟೇಡಿಯನ್‌ನಲ್ಲಿ 2008ರ ಅಕ್ಟೊಬರ್‌ ತಿಂಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಯಿತು.[೭೦] ಲಕ್ಸೆಂಬೊರ್ಗ್‌ನಲ್ಲಿ ಇದರ ಪೂರ್ವಸಿದ್ಧತಾ ಕಾರ್ಯಕ್ರಮ ನಡೆಯಿತು. 2009ರ ಮೇ 10ರಂದು ಟೆಲ್‌ ಅವಿವ್‌ನಲ್ಲಿ ವಾದ್ಯಗೋಷ್ಠಿ ಅಧಿಕೃತವಾಗಿ ಆರಂಭವಾಯಿತು. ಡೇವ್‌ ಗಹನ್‌ಗೆ ಜಠರ-ಕರುಳಿನ ಉರಿಯೂತ ತಗುಲಿದ ಕಾರಣ ಪ್ರವಾಸದ ಮೊದಲ ಹಂತವು ಅಸ್ತವ್ಯಸ್ತಗೊಂಡಿತು. ಚಿಕಿತ್ಸೆಯ ಸಮಯ ವೈದ್ಯರು ಗಹನ್‌ನ ಮೂತ್ರಕೋಶದಿಂದ ಸಣ್ಣ ಪ್ರಮಾಣದ ದುರ್ಮಾಂಸವನ್ನು ತೆಗೆದರು. ಗಹನ್‌ನ ಈ ಬೇನೆಯಿಂದಾಗಿ 16 ಗೋಷ್ಠಿಗಳನ್ನು ರದ್ದುಗೊಳಿಸಬೇಕಾಯಿತು, ಆದರೆ ಈ ಕಾರ್ಯಕ್ರಮಗಳಲ್ಲಿ ಹಲವನ್ನು 2010ರಲ್ಲಿನ ದಿನಾಂಕಗಳಿಗೆ ಮುಂದೂಡಲಾಯಿತು.[೭೧] ಪ್ರವಾಸದ ಉತ್ತರ ಅಮೆರಿಕಾ ಹಂತದಲ್ಲಿ ಲೊಲಾಪಲೂಝಾ ಉತ್ಸವದಲ್ಲಿ ವಾದ್ಯತಂಡವು ವಾದ್ಯಗೋಷ್ಠಿ ನಡೆಸಿತು. 1994ರ ಎಕ್ಸೊಟಿಕ್‌ ಟೂರ್‌ನಂತರ ವಾದ್ಯತಂಡವು ದಕ್ಷಿಣ ಅಮೆರಿಕಾ ಖಂಡಕ್ಕೆ ಪ್ರಯಾಣಿಸಿದ್ದು ಇದೇ ಮೊದಲ ಬಾರಿ. ಪ್ರವಾಸದ ಅಂತಿಮ ಹಂತವಾದ ಯುರೋಪ್‌ ಪ್ರವಾಸದಲ್ಲಿ, ವಾದ್ಯತಂಡವು ಲಂಡನ್‌ನ ರಾಯಲ್‌ ಅಲ್ಬರ್ಟ್‌ ಹಾಲ್‌ನಲ್ಲಿ ಟೀನೇಜ್‌ ಕ್ಯಾನ್ಸರ್‌ ಟ್ರಸ್ಟ್‌ ಸಹಾಯಾರ್ಥವಾಗಿ ವಾದ್ಯಗೋಷ್ಠಿ ನಡೆಸಿತು. ಮಾಜಿ ಸದಸ್ಯ ಅಲ್ಯಾನ್‌ ವೈಲ್ಡರ್ ಮಾರ್ಟಿನ್‌ ಗೋರ್‌ರೊಂದಿಗೆ ವೇದಿಕೆಯ ಮೇಲೆ ಬಂದು ಸಂಬಡಿ ಗೀತೆಯನ್ನು ನುಡಿಸಿದರು.[೭೨][೭೩] ಒಟ್ಟಾರೆ, ವಾದ್ಯತಂಡವು 40 ದೇಶಗಳಲ್ಲಿ 2.7 ದಶಲಕ್ಷಕ್ಕಿಂತಲೂ ಹೆಚ್ಚು ಪ್ರೇಕ್ಷಕರ ಮುಂದೆ ವಾದ್ಯಗೋಷ್ಠಿಗಳನ್ನು ನಡೆಸಿತು. 2009ರಲ್ಲಿ ಅತಿ ಹೆಚ್ಚು ಲಾಭದಾಯಕ ಪ್ರವಾಸಗಳ ಪೈಕಿ ಇದೂ ಒಂದಾಗಿತ್ತು.[೭೪][೭೫]

2010ರ ಮಾರ್ಚ್‌ ತಿಂಗಳಲ್ಲಿ ಜರ್ಮನಿಯಲ್ಲಿ ನಡೆದ ಇಕೊ ಅವಾರ್ಡ್ಸ್‌ನಲ್ಲಿ 'ಅತ್ಯುತ್ತಮ ಅಂತರರಾಷ್ಟ್ರೀಯ ರಾಕ್‌/ಪಾಪ್‌ ಸಮೂಹ ಪ್ರಶಸ್ತಿ' ಗಳಿಸಿತು.[೭೬]

ಪರಂಪರೆ ಹಾಗೂ ಪ್ರಭಾವ

ಬದಲಾಯಿಸಿ

ಕ್ಯೂ ಪತ್ರಿಕೆಯ ಪ್ರಕಾರ, ಡೆಪೆಷ್‌ ಮೋಡ್‌ ಇಡೀ ವಿಶ್ವದಲ್ಲಿ ಹಿಂದೆಂದೂ ಇರದ ಅತಿ ಜನಪ್ರಿಯ ವಿದ್ಯುನ್ಮಾನ ವಾದ್ಯತಂಡವೆನಿಸಿತು.

ಪ್ರಕಾರ ಡೆಪೆಷ್‌ ಮೋಡ್‌ ಬ್ರಿಟಷ್‌ ಮೂಲದ ಸರ್ವಕಾಲಿಕ ಅತ್ಯುತ್ತಮ ವದ್ಯತಂಡಗಳಲ್ಲಿ ಒಂದು ಎಂದು ಸಂಡೇ ಟೆಲೆಗ್ರಾಫ್ ‌ ಬಣ್ಣಿಸಿತು.[೭೭][೭೮]

ಕಳೆದ ಮುವತ್ತು ವರ್ಷಗಳಲ್ಲಿ ಅತಿ ಪ್ರಭಾವಿ ತಂಡಗಳಲ್ಲಿ ಒಂದಾಗಿದ್ದ ಡೆಪೆಷ್‌ ಮೋಡ್‌, ಹಲವು ಹೊಸ ಸಂಗೀತಪ್ರತಿಭೆಗಳ ತಲೆಮಾರುಗಳಿಗೆ ಸ್ಪೂರ್ತಿ ನೀಡಿತಲ್ಲದೆ ಅವರ ಪ್ರಖ್ಯಾತಿಯನ್ನು ಬಲಪಡಿಸಿತು. ಈ ಪ್ರಕ್ರಿಯೆಯಲ್ಲಿ ತಂಡದ ಸುಮಾರು 100 ದಶಲಕ್ಷ ಧ್ವನಿಮುದ್ರಣಗಳನ್ನು ಮಾರಾಟ ಮಾಡಿತು ಹಾಗೂ 30 ದಶಲಕ್ಷಕ್ಕೂ ಮೀರಿದ ಅಭಿಮಾನಿಗಳ ಮುಂದೆ ತಂಡವು ವಾದ್ಯಗೋಷ್ಠಿ ನಡೆಸಿದೆ.[][]

ಇಂದಿನ ಜನಪ್ರಿಯ ಧ್ವನಿಮುದ್ರಣಾ ಕಲಾವಿದರಲ್ಲಿ ಹಲವರ ಮೇಲೆ ಡೆಪೆಷ್‌ ಮೋಡ್‌ ಪ್ರಭಾವ ಬೀರಿದೆ. ತಂಡದ ಧ್ವನಿಮುದ್ರಣಾ ವಿಧಾನಗಳು ಹಾಗೂ ಧ್ವನಿಮಾದರಿಗಳ ಬಳಕೆಯಲ್ಲಿ ನವೀನತೆ ಇದಕ್ಕೆ ಭಾಗಶಃ ಕಾರಣವಾಗಿದೆ. ಉದಾಹರಣೆಗೆ, ಬಿಹೇವಿಯರ್ ‌ ಎಂಬ ವಿಮರ್ಶಾತ್ಮಕ ಪ್ರಶಂಸೆ ಪಡೆದ ಅಲ್ಬಮ್‌ ರಚಿಸಿದ ಪೆಟ್‌ ಷಾಪ್‌ ಬಾಯ್ಸ್‌ ತಂಡದವರು, ಅಲ್ಬಮ್‌ ಧ್ವನಿಮುದ್ರಣದ ಹಿಂದೆ ವಯೊಲೇಟರ್ ‌ (ಹಾಗೂ ವಿಶೇಷವಾಗಿ ಎಂಜಾಯ್‌ ದಿ ಸೈಲೆನ್ಸ್‌) ಅಲ್ಬಮ್‌ಗಳು ಸ್ಫೂರ್ತಿಗೆ ಮುಖ್ಯ ಮೂಲಗಳಲ್ಲಿ ಒಂದಾಗಿದೆ ಎಂದು ಉದಾಹರಿಸಿದ್ದಾರೆ. 'ನಾವು ಡೆಪೆಷ್‌ ಮೋಡ್‌ ತಂಡದ ವಯೊಲೇಟರ್‌ ಹಾಡುಗಳನ್ನು ಕೇಳುತ್ತಿದ್ದೆವು, ಇದು ಬಹಳ ಅತ್ಯುತ್ತಮ ಅಲ್ಬಮ್‌, ಇದರ ಬಗ್ಗೆ ನಮಗೆ ಮಾತ್ಸರ್ಯವೂ ಆಗಿತ್ತು' ಎಂದು ನೀಲ್‌ ಟೆನೆಂಟ್‌ ಹೇಳಿದ್ದರು. 'ಅವರು ಗುಣಮಟ್ಟವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದಾರೆ' ಎಂದು ತಂಡದ ಸಹ-ಸದಸ್ಯ ಕ್ರಿಸ್‌ ಲೋವ್‌ ದನಿಗೂಡಿಸಿದರು.[೭೯][೮೦]

1980ರ ದಶಕದ ಮಧ್ಯದಲ್ಲಿ ಡೆಟ್ರಾಯ್ಟ್‌ ಟೆಕ್ನೊ ಆಸ್ಫೋಟದ ಆರಂಭದಲ್ಲಿ, ಅಲ್ಲಿನ ಟೆಕ್ನೊ-ಹರಿಕಾರರಾದ ಡೆರಿಕ್‌ ಮೇ, ಕೆವಿನ್‌ ಸಾಂಡರ್ಸನ್‌ ಮತ್ತು ಜುವಾನ್‌ ಅಟ್ಕಿನ್ಸ್‌ ಟೆಕ್ನೊ ಸಂಗೀತದ ಬೆಳವಣಿಗೆಯ ಮೇಲೆ ಡೆಪೆಷ್‌ ಮೋಡ್‌ನ ಪ್ರಭಾವವನ್ನು ಆಗಾಗ್ಗೆ ಉಲ್ಲೇಖಿಸುತ್ತಿದ್ದರು.[೮೧] ಇಂದಿನ ವಿದ್ಯುನ್ಮಾನ ಸಂಗೀತ ಕ್ಷೇತ್ರದಲ್ಲಿ, ಡೆಪೆಷ್ ಮೋಡ್‌ ತಂಡದ ಹಲವು ಹಾಡುಗಳನ್ನು ಮರುಮಿಶ್ರಿತ ಧ್ವನಿಮುದ್ರಣ ಮಾಡುವ ಮೂಲಕ ಪ್ರಶಂಸಿಸಲಾಗಿದೆ. ಸಮಕಾಲೀನ ಡಿಜೆಗಳಲ್ಲಿ ರಿಕಾರ್ಡೊ ವಿಲಾಲೊಬೊಸ್‌ 'ದಿ ಸಿನ್ನರ್‌ ಇನ್‌ ಮಿ' ಮರುಮಿಶ್ರಿತ ಧ್ವನಿಮುದ್ರಣ ಮಾಡಿದ್ದರೆ, ಕ್ರುಡರ್‌ & ಡಾರ್ಫ್‌ಮೇಸ್ಟರ್‌ ಯುಸ್ಲೆಸ್‌ನ ಮರುಮಿಶ್ರಿತ ಧ್ವನಿಮುದ್ರಣ ಮಾಡಿದ್ದಾರೆ.

ಆಧುನಿಕ ರೇಡಿಯೊ ಸ್ಟೇಷನ್‌ KROQ‌‌ನ ಮಾಜಿ ಸಂಗೀತ ನಿರ್ದೇಶಕ ಮ್ಯಾಟ್‌ ಸ್ಮಿತ್‌ ಪ್ರಕಾರ, 'ದಿ ಕಿಲ್ಲರ್ಸ್‌, ದಿ ಬ್ರೇವರಿ, ಫ್ರಾನ್ಜ್‌ ಫರ್ಡಿನಂಡ್‌ — ಇಂತಹ ಇಡೀ ಸಂಗೀತ ಅಲೆಗಳು ಡೆಪೆಷ್‌ ಮೋಡ್‌ಗೆ ಚಿರಋಣಿಯಾಗಿವೆ.' [೮೨]

ದಿ ನ್ಯೂಯಾರ್ಕರ್ ಒಂದಿಗಿನ ಸಂದರ್ಶನವೊಂದರಲ್ಲಿ, ಅಮೆರಿಕಾ ದೇಶದ ಮಾರುಕಟ್ಟೆಯಲ್ಲಿ ಬ್ರಿಟಿಷ್‌ ವಾದ್ಯತಂಡಗಳ ಪ್ರಭಾವವನ್ನು ವಿಶ್ಲೇಷಿಸಿದ ಸಾಷಾ ಫ್ರೆರ್‌-ಜೋನ್ಸ್‌, 'ಬಹುಶಃ ಇತ್ತೀಚೆಗೆ ಡೆಪೆಷ್‌ ಮೋಡ್‌ ಬಹಳಷ್ಟು ಬ್ರಿಟಿಷ್‌ ಪ್ರಭಾವ ಬೀರಿದೆ. ಕಾಲಾನಂತರದಲ್ಲಿ ಪ್ರಭಾವವು ಬಹಳಷ್ಟು ಗಮನಾರ್ಹವಾಗುವುದು ಎಂದು ಹೇಳಿದರು.[೮೩]

ಲಿಂಕಿನ್‌ ಪಾರ್ಕ್‌ನ ಗಾಯಕ ಚೆಸ್ಟರ್‌ ಬೆನಿಂಗ್ಟನ್‌ ಸಹ ಡೆಪೆಷ್‌ ಮೋಡ್‌ ವಾದ್ಯತಂಡವು ಸ್ಫೂರ್ತಿಯ ಮೂಲ ಎಂದು ಉಲ್ಲೇಖಿಸಿದ್ದಾರೆ.[೮೪][೮೫] ಇನ್ನೊಬ್ಬ ಲಿಂಕಿನ್‌ ಪಾರ್ಕ್‌ ಸದಸ್ಯ ಮೈಕ್‌ ಷಿನೊಡಾ ಹೇಳಿದ್ದು, 'ಡೆಪೆಷ್‌ ಮೋಡ್‌ ನಮ್ಮ ಕಾಲದ ಪ್ರಭಾವೀ ವಾದ್ಯತಂಡಗಳಲ್ಲೊಂದು. ಅವರ ಸಂಗೀತವು ನನಗೆ ಸ್ಫೂರ್ತಿಯಾಗಿದೆ'.[೮೬]

ಲಾಸ್‌ ಏಂಜೆಲೀಸ್‌ ಮೂಲದ ವಿದ್ಯುನ್ಮಾನ ಇಬ್ಬರು ಸಂಗೀತಗಾರರ ತಂಡ ದಿ ಕ್ರಿಸ್ಟಲ್‌ ಮೆಥಡ್‌ ಸದಸ್ಯ ಕೆನ್‌ ಜೊರ್ಡಾನ್‌ ಸಂಗೀತದಲ್ಲಿ ಡೆಪೆಷ್‌ ಮೋಡ್‌ ತಮ್ಮ ಮೇಲಿನ ಪ್ರಮುಖ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.[೮೭] ಕ್ರಿಶ್ಚಿಯನ್‌ ರಾಕ್‌ ವಾದ್ಯತಂಡ ಮ್ಯಾಡ್‌ ಅಟ್‌ ದಿ ವರ್ಲ್ಡ್‌ ಪ್ರಮುಖ ಗಾಯಕ ರೊಜರ್‌ ರೋಸ್‌ ಸಹ ತಮ್ಮ ಸಂಗೀತ ಸಂಯೋಜನೆಗಳ ಮೇಲೆ ಡೆಪೆಷ್‌ ಮೋಡ್‌ ತಂಡದ ಪ್ರಭಾವವಿದೆ ಎಂದಿದ್ದರು.[೮೮]

ಹೆವಿ ಮೆಟಲ್‌ ಸಂಗೀತ ವಾದ್ಯತಂಡ ಫಿಯರ್‌ ಫ್ಯಾಕ್ಟರಿ ಡ್ರಮ್‌ ವಾದಕ ರೇಮಂಡ್ ಹೆರೆರಾ ಹೇಳಿದ್ದು, 'ನಾನು ನುಡಿಸುವ ಸಂಗೀತವು ಬಹಳ ವೈವಿಧ್ಯಮಯ ಸಂಗೀತಗಳಿಂದ ಪ್ರಭಾವಿತವಾಗಿವೆ. ಡೆಪೆಷ್‌ ಮೋಡ್‌ ವಾದ್ಯತಂಡದ ರೀತಿಯಲ್ಲಿ. ನಾನು ಡೆಪೆಷ್‌ ಮೋಡ್‌ನಂತೆ ಧ್ವನಿ ವಿನ್ಯಾಸ ಮಾಡಿ, ಸ್ಲೇಯರ್‌ ತರಹ ವೇಗದ ಸಂಗೀತ ನೀಡಿದ್ದಲ್ಲಿ, ನನ್ನ ಸಂಗೀತದಲ್ಲಿ ವಿಶೇಷತೆ ಕಂಡುಬರುವುದರಲ್ಲಿ ಯಾವುದೇ ಸಂಶಯವಿಲ್ಲ.' [೮೯] ಪೋಸ್ಟ್‌ ಹಾರ್ಡ್‌ಕೋರ್‌ ವಾದ್ಯತಂಡ ಫನರಲ್‌ ಫಾರ್‌ ಎ ಫ್ರೆಂಡ್‌ನ ಗಿಟಾರ್‌ ವಾದಕ ಡ್ಯಾರೆನ್‌ ಸ್ಮಿತ್‌, ತಮ್ಮ ತಂಡವು ವಿನ್ಯಾಸಿಸಿದ ಕರಾಳ-ಭಾವನೆಯ ಸಂಗೀತಶೈಲಿಯು ಡೆಪೆಷ್‌ ಮೋಡ್‌ನಿಂದ ಪ್ರೇರಿತವಾದದ್ದು ಎಂದು ಹೇಳಿದ್ದಾರೆ.[೯೦]

ವಿಶ್ವ ಕಪ್‌ ಫುಟ್ಬಾಲ್ (2010) ಪಂದ್ಯಾವಳಿಯ 'ವಾಕಾ ವಾಕಾ' ಹಾಡು ಖ್ಯಾತಿಯ ಕೊಲಂಬಿಯಾ ದೇಶದ ಗಾಯಕಿ ಷಕಿರಾ ಸಹ ಡೆಪೆಷ್‌ ಮೋಡ್‌ ವಾದ್ಯತಂಡದಿಂದ ಬಹಳಷ್ಟು ಪ್ರಭಾವಿತರಾಗಿದ್ದಾರೆ. ಷಕಿರಾ - ವಿಮನ್‌ ಫುಲ್‌ ಆಫ್‌ ಗ್ರೇಸ್ ‌ ಗ್ರಂಥದ ಕರ್ತೃ ಕ್ಸಿಮೆನಾ ಡೀಗೊ ಬರೆದ ಪ್ರಕಾರ, 'ಷಕಿರಾ ತಮ್ಮ ಹದಿಮೂರನೆಯ ವಯಸ್ಸಿನಲ್ಲಿ ಗ್ರೇಟ್‌ ಬ್ರಿಟನ್‌ ಮೂಲದ ರಾಕ್‌ ಸಂಗೀತ ವಾದ್ಯತಂಡ ಡೆಪೆಷ್‌ ಮೋಡ್‌ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ಒಂದು ದಿನ ಅವರು ಡೆಪೆಷ್‌ ತಂಡದ 'ಎಂಜಾಯ್‌ ದಿ ಸೈಲೆನ್ಸ್‌' ಹಾಡು ಕೇಳುತ್ತಿದ್ದರು. ಅವರು ಹಾಡು ಕೇಳುತ್ತಿದ್ದರಷ್ಟೇ ಅಲ್ಲ, ಅವರಿಗೇ ತಮ್ಮ ದೇಹದಲ್ಲಿ ಸ್ವತಃ ಹಾಡಿನ ಗಾಢ ಅನುಭವವಾಗುತ್ತಿತ್ತು. 'ಗಿಟಾರಿನ ಈ ಪುನರಾವರ್ತಿಸುವ ಗೀತಭಾಗ (ಲಯಬದ್ಧ ಸಂಗೀತ ಭಾಗ) ಕೇಳಿದಾಗೆಲ್ಲ ನನ್ನ ಉದರದಲ್ಲಿ ವಿಲಕ್ಷಣ ಅನುಭವವಾಗುತ್ತದೆ' ಎಂದು ಅವರು ತಮ್ಮ ತಾಯಿಗೆ ಹೇಳಿದರಂತೆ.[೯೧]

2008ರ ಆಗಸ್ಟ್‌ ತಿಂಗಳಲ್ಲಿ, ಕೋಲ್ಡ್‌ಪ್ಲೇ ತಂಡವು ತಮ್ಮ ಏಕಗೀತೆ ವಿವಾ ಲಾ ವಿಡಾಗಾಗಿ ಪರ್ಯಾಯ ವೀಡಿಯೊ ಬಿಡುಗಡೆಗೊಳಿಸಿತು. ಇದು 'ಎಂಜಾಯ್‌ ದಿ ಸೈಲೆನ್ಸ್‌' ವೀಡಿಯೊವನ್ನು ಆಧರಿಸಿದೆ. ತಮ್ಮ ಅಂತರಜಾಲತಾಣದಲ್ಲಿ ಈ ವಾದ್ಯತಂಡವು ಈ ರೀತಿ ಹೇಳಿಕೆ ನೀಡಿದೆ - 'ಡೆಪೆಷ್‌ ಮೋಡ್‌ ತಂಡ ಹಾಗೂ ಆಂಟನ್‌ ಕಾರ್ಬಿನ್‌ ಪ್ರತಿಭೆ ಬಗ್ಗೆ ನಮ್ಮ ಅಭಿಮಾನವು ಈ ಹೊಸ ವೀಡಿಯೊ ಆವೃತ್ತಿಯನ್ನು ಮಾಡಲು ಪ್ರೇರಣೆ ನೀಡಿತು...' ಈ ವೀಡಿಯೋದಲ್ಲಿ ಕ್ರಿಸ್‌ ಮಾರ್ಟಿನ್‌ ದೊರೆಯ ಪೋಷಾಕಿನಲ್ಲಿ ನೆದರ್ಲೆಂಡ್‌ ದೇಶದ ಹೇಗ್‌ನಲ್ಲಿ ನಡೆದುಹೋಗುತ್ತಿರುವುದನ್ನು ಕಾಣಬಹುದು.

ಆ-ಹಾ ಎಂಬ ವಾದ್ಯತಂಡದ ಗಿಟಾರ್‌ ಮತ್ತು ಕೀಬೋರ್ಡ್‌ ವಾದಕ ಮ್ಯಾಗ್ನ್‌ ಫರ್ಹೊಲ್ಮನ್‌ ಹೇಳಿದಂತೆ, '1980ರ ದಶಕದ ಕಾಲಾವಧಿಯ ಇತರೆ ತಂಡಗಳಿಗೆ ಹೋಲಿಸಿದರೆ, ನನಗೂ ಡೆಪೆಷ್‌ ಮೋಡ್‌ಗೂ ವಿಶೇಷ ನಂಟಿದೆ. 2009ರ ಜುಲೈ ತಿಂಗಳಲ್ಲಿ, ಬಿಬಿಸಿ ರೇಡಿಯೊ 2 ವಾಹಿನಿಯಲ್ಲಿ ಪ್ರಸಾರವಾದ ದಿ ಡರ್ಮಟ್‌ ಒ'ಲಿಯರಿ ಷೋ ನೇರ ಕಾರ್ಯಕ್ರಮದಲ್ಲಿ ಆ-ಹಾ ವಾದ್ಯತಂಡವು ಎ ಕ್ವೆಶ್ಚನ್‌ ಆಫ್‌ ಲಸ್ಟ್‌ ಹಾಡಿನ ಹೊಸ ಪ್ರದರ್ಶನವನ್ನು ನೀಡಿತು.[೯೨]

ಸಾಂಸ್ಕೃತಿಕ ಉಲ್ಲೇಖಗಳು

ಬದಲಾಯಿಸಿ

ಸ್ಕೈ ಸರಣಿ ಆನ್‌ ಇಡಿಯಟ್‌ ಅಬ್ರಾಡ್‌ ಎಂಬ ಸ್ಕೈ ಸರಣಿಯ ನಾಲ್ಕನೆಯ ಕಂತಿನಲ್ಲಿ, ನಿರೂಪಕ ಕಾರ್ಲ್‌ ಪಿಲ್ಕಿಂಗ್ಟನ್‌ ಚಿಚನ್‌ ಇಟ್ಜಾದಲ್ಲಿರುವಾಗ ಡೆಪೆಷ್ ಮೋಡ್‌ ತಂಡದ 'ಜಸ್ಟ್ ಕಾಂಟ್‌ ಗೆಟ್‌ ಎನಫ್‌' ಹಾಡನ್ನು ಆಲಿಸುತ್ತಿದ್ದುದನ್ನು ನೋಡಬಹುದಾಗಿತ್ತು.

ಲೆಫ್ಟ್‌ 4 ಡೆಡ್‌ 2 ವೀಡಿಯೊ ಕ್ರೀಡೆಯಲ್ಲಿ, ಬದುಕುಳಿದವರಲ್ಲಿ ಒಬ್ಬಳಾದ ರೊಷೆಲ್‌, ನಸುಗೆಂಪು ಬಣ್ಣದ ಡೆಪೆಷ್ ಮೋಡ್‌ ಅಂಗಿ ಧರಿಸಿರುತ್ತಾಳೆ.[೯೩]

ದಿ ವೆಂಚರ್‌ ಬ್ರದರ್ಸ್‌ ವ್ಯಂಗ್ಯಚಿತ್ರ ಸರಣಿಯ 'ಟ್ಯಾಗ್‌ ಸೇಲ್‌, ಯು'ರ್‌ ಇಟ್‌'ಪ್ರಸಂಗದಲ್ಲಿ, 'ಡೆಪೆಷ್‌ ಮೋಡ್‌ ವಾದ್ಯತಂಡದ ಆ ವ್ಯಕ್ತಿ ಯಾರೋ ಮಹಿಳೆಯೊಂದಿಗಿರುವುದನ್ನು' ದಿ ಮೊನಾರ್ಕ್‌ ಮತ್ತು ಡಾ. ಗರ್ಲ್‌ಫ್ರೆಂಡ್‌ ಪಾತ್ರಗಳು ನೋಡುತ್ತವೆ. 'ಆ ಮನುಷ್ಯ ಸಲಿಂಗಕಾಮಿ' ಎಂದು ದಿ ಮೋನಾರ್ಕ್‌ ಯೋಚಿಸುತ್ತಾನೆ, 'ಇಲ್ಲ, ಅವನು ಸಂಪೂರ್ಣ ನೇರ ಎಂದು ಡಾ. ಗರ್ಲ್‌ಫ್ರೆಂಡ್‌ ಅಭಿಪ್ರಾಯಪಡುತ್ತಾಳೆ.ಅವಳು ವಿಎಚ್‌1 ವಾಹಿನಿಯಲ್ಲಿ ಏನನ್ನೋ ನೋಡುತ್ತಾಳೆ'.

ಧ್ವನಿಮುದ್ರಿಕೆ ಪಟ್ಟಿ

ಬದಲಾಯಿಸಿ
  • ಸ್ಪೀಕ್ & ಸ್ಪೆಲ್‌ (Speak & Spell) (1981)
  • ಎ ಬ್ರೊಕನ್‌ ಫ್ರೇಮ್‌ (A Broken Frame) (1982)
  • ಕಂಸ್ಟ್ರಕ್ಷನ್‌ ಟೈಮ್‌ ಎಗೇನ್‌ (Construction Time Again) (1983)
  • ಸೊಮ್‌ ಗ್ರೇಟ್‌ ರಿವಾರ್ಡ್‌ (Some Great Reward) (1984)
  • ಬ್ಲ್ಯಾಕ್‌ ಸೆಲೆಬ್ರೇಷನ್‌ (Black Celebration) (1986)
  • ಮ್ಯೂಸಿಕ್‌ ಫಾರ್‌ ದಿ ಮಾಸೆಸ್‌ (Music for the Masses) (1987)
  • ವಯೊಲೆಟರ್‌ (Violator) (1990)
  • ಸಾಂಗ್ಸ್‌ ಆಫ್‌ ಫೇಯ್ತ್‌ ಅಂಡ್‌ ಡಿವೊಷನ್‌ (Songs of Faith and Devotion) (1993)
  • ಅಲ್ಟ್ರಾ (Ultra) (1997)
  • ಎಕ್ಸೈಟರ್‌ (Exciter) (2001)
  • ಪ್ಲೇಯಿಂಗ್‌ ದಿ ಏಂಜೆಲ್‌ (Playing the Angel) (2005)
  • ಸೌಂಡ್ಸ್‌ ಆಫ್‌ ದಿ ಯುನಿವರ್ಸ್‌ (Sounds of the Universe) (2009)

ಇವನ್ನೂ ನೋಡಿ

ಬದಲಾಯಿಸಿ
  • ಡೆಪೆಷ್‌ ಮೋಡ್‌ ಗಳಿಸಿದ ಪ್ರಶಸ್ತಿ ಮತ್ತು ನಾಮನಿರ್ದೇಶನಗಳ ಪಟ್ಟಿ
  • ಡೆಪೆಷ್‌ ಮೋಡ್‌ ಪ್ರವಾಸಗಳು
  • ಅತಿಹೆಚ್ಚು ಬೇಡಿಕೆಯಲ್ಲಿರುವ ಸಂಗೀತ ಕಲಾವಿದರ ಪಟ್ಟಿ.
  • ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ನೃತ್ಯ-ಪ್ರಧಾನ ಜನಪ್ರಿಯ ಗೀತೆಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದವರ ಪಟ್ಟಿ
  • ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಆಧುನಿಕ ರಾಕ್ ಸಂಗೀತ ಪಟ್ಟಿಯಲ್ಲಿ ಮೊದಲ ಸ್ಥಾನ ತಲುಪಿದ ಕಲಾವಿದರ ಪಟ್ಟಿ

ಟಿಪ್ಪಣಿಗಳು ಮತ್ತು ಆಕರಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ನ್ಯೂ ಡೆಪೆಷ್‌ ಮೋಡ್‌ ಅಲ್ಬಮ್‌ ನಂಬರ್‌ ಒನ್‌ ಇನ್‌ 20 ಕಂಟ್ರೀಸ್‌ Archived 27 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.", EMI ಮ್ಯೂಸಿಕ್‌.com. ಮೇ 1, 2009
  2. ೨.೦ ೨.೧ ೨.೨ ಮೇಸನ್‌, ಕೆರಿ: "ಡೆಪೆಷ್‌ ಮೋಡ್‌ ಪ್ರಿಪೇರ್ಸ್‌ ಫಾರ್ ಟೂರ್‌ ಆಫ್‌ ಯನಿವರ್ಸ್‌" Billboard.com. ಮಾರ್ಚ್ 23, 2009
  3. ೩.೦ ೩.೧ "Depeche Mode - The Best Of Depeche Mode Volume One". Mute.com. Archived from the original on 6 ಜನವರಿ 2012. Retrieved 22 ಜುಲೈ 2010.
  4. [27] ^ ಮಿಲ್ಲರ್, ಪುಟ 14
  5. ದಿ ಎರೆಸರ್‌ ಇನ್‌ಫರ್ಮೇಷನ್‌ ಸರ್ವಿಸ್‌, "ಇಂಟರ್ವ್ಯೂ ವಿತ್‌ ರಾಬರ್ಟ್‌ ಮಾರ್ಲೊ Archived 23 October 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.", 2007ರ ಡಿಸೆಂಬರ್‌ 10ರಂದು ಮರುಸಂಪಾದಿಸಲಾಯಿತು.
  6. philburdett.com, ಫಿಲ್‌ ಬರ್ಡೆಟ್‌ ಬಯೋಗ್ರಫಿ Archived 15 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  7. ಮ್ಯಾಕ್ಸ್‌ ಬೆಲ್‌, "ಮಾರ್ಟಿನ್‌ ಗೋರ್‌ – ದಿ ಡೆಕೆಡೆಂಟ್‌ ಬಾಯ್‌ Archived 13 March 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.", ನಂಬರ್‌1 ಮ್ಯಾಗಝಿನ್‌ , 1985ರ ಮೇ 11ರಂದು. 2007 ರ ಅಕ್ಟೋಬರ್ 29 ರಂದು ಮರುಸಂಪಾದಿಸಲಾಯಿತು.
  8. ಡೊರಾನ್‌, ಜೆ., "ಡೆಪೆಷ್‌ ಮೋಡ್‌ ಇಂಟರ್ವ್ಯೂಡ್‌: ಯುನಿವರ್ಸಲ್‌ ಟ್ರೂತ್ಸ್‌ ಅಂಡ್‌ ಸೌಂಡ್ಸ್‌", ದಿ ಕ್ವಯೆಟಸ್‌ , 2009ರ ಏಪ್ರಿಲ್ 20ರಂದು
  9. ಟಿಕೆಲ್‌, ಪಾಲ್‌: "ಎ ಇಯರ್‌ ಇನ್‌ ದಿ ಲೈಫ್‌ ಆಫ್‌ ಡೆಪೆಷ್‌ ಮೋಡ್‌" ದಿ ಫೇಸ್‌ , ಜನವರಿ 1982. 2010ರ ಅಕ್ಟೋಬರ್‌ 4ರಂದು ಮರುಸಂಪಾದಿಸಲಾಯಿತು.
  10. ಪೇಜ್‌, ಬೆಟ್ಟಿ: "ದಿಸ್‌ ಇಯರ್ಸ್‌ ಮೋಡ್‌ (L)" ಸೌಂಡ್ಸ್ ಮ್ಯಾಗಝೀನ್‌ , 1981ರ ಜನವರಿ 31. 2010ರ ಅಕ್ಟೋಬರ್ 4ರಂದು ಮರುಸಂಪಾದಿಸಲಾಯಿತು.
  11. ಫ್ರಿಕ್‌ ಡಿ., "ಸ್ಪೀಕ್‌ & ಸ್ಪೆಲ್‌", ರೊಲಿಂಗ್‌ ಸ್ಟೋನ್‌ , ಮೇ 1982. 2007ರ ಫೆಬ್ರವರಿ 6ರಂದು ಮರುಸಂಪಾದಿಸಲಾಯಿತು.
  12. ಎಲೆನ್‌, ಮಾರ್ಕ್‌: "ಎ ಕ್ಲೀನ್‌ ಬ್ರೇಕ್‌", ಷ್ಮ್ಯಾಷ್‌ ಹಿಟ್ಸ್‌ , ಫೆಬ್ರವರಿ 1982. 2010ರ ಅಕ್ಟೊಬರ್‌4ರಂದು ಮರುಸಂಪಾದಿಸಲಾಯಿತು.
  13. [27] ^ ಮಿಲ್ಲರ್, ಪುಟ 103
  14. [27] ^ ಮಿಲ್ಲರ್, ಪುಟ 107
  15. [27] ^ ಮಿಲ್ಲರ್, ಪುಟ 125
  16. [27] ^ ಮಿಲ್ಲರ್, ಪುಟ 121
  17. [27] ^ ಮಿಲ್ಲರ್, ಪುಟ 113
  18. [27] ^ ಮಿಲ್ಲರ್, ಪುಟ 134
  19. "ಎಡಿಟೊರಿಯಲ್ಸ್‌: ದಿ ಸಿಂಗಲ್ಸ್‌ 81–85" Archived 7 March 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಷಂಟ್‌. 10 ಅಕ್ಟೋಬರ್,2010ರ ಅಕ್ಟೊಬರ್‌ 16ರಂದು ಮರುಸಂಪಾದಿಸಲಾಯಿತು.
  20. Von: Benne. "''Inga Humpe – Mit Depeche Mode in einer 2raumwohnung'' (German). Retrieved on 15 November 2007". Muna.de. Archived from the original on 10 ನವೆಂಬರ್ 2007. Retrieved 22 ಜುಲೈ 2010.
  21. ಮೂರ್‌, ಎಕ್ಸ್‌., "ರೆಡ್‌ ರಾಕರ್ಸ್‌ ಒವರ್‌ ದಿ ಎಮೆರಾಲ್ಡ್‌ ಐಲ್‌", ಎನ್ಎಂಇ , 17 ಸೆಪ್ಟೆಂಬರ್‌ 1983
  22. ಮಲಿನ್ಸ್‌, ಪುಟ. 82
  23. "ಮಾಸ್ಟರ್ಸ್‌ ಆಫ್‌ 'ದಿ ಯುನಿವರ್ಸ್‌' – ಡೆವಿಡ್‌ ಅಟ್ಲಾಂಟಾ ಮ್ಯಾಗಝಿನ್". Archived from the original on 9 ಜೂನ್ 2009. Retrieved 9 ನವೆಂಬರ್ 2010. {{cite web}}: no-break space character in |title= at position 32 (help)
  24. ಮೆಕಿಲ್ಹೆನೀ, ಬಿ., "ಗ್ರೇಟ್ನೆಸ್‌ ಅಂಡ್‌ ಪರ್ಫೆಕ್ಷನ್‌", ಮೆಲೊಡಿ ಮೇಕರ್‌ , 29 ಸೆಪ್ಟೆಂಬರ್‌ 1984
  25. ಮಲಿನ್ಸ್‌, ಪಿ. 95
  26. "ಅಲ್ಯಾನ್‌ ವಿಲ್ಡರ್ಸ್‌ ಹಿಸ್ಟರಿ - ಹಿಸ್ಟಾರಿಕಲ್‌ ಎವಿಡೆನ್ಸ್‌ ಪಾರ್ಟ್‌ 1" ಷಂಟ್‌. 2010ರ ಅಕ್ಟೋಬರ್ 19ರಂದು ಮರುಸಂಪಾದಿಸಲಾಯಿತು.
  27. [27] ^ ಮಿಲ್ಲರ್, ಪುಟ 236
  28. ೨೮.೦ ೨೮.೧ "ಎಡಿಟೊರಿಯಲ್ಸ್‌ ಸಿಂಗಲ್ಸ್‌ 86-98: MUSIC FOR THE MASSES‌ Archived 3 February 2014[Date mismatch] ವೇಬ್ಯಾಕ್ ಮೆಷಿನ್ ನಲ್ಲಿ." ಷಂಟ್‌. 2010ರ ಅಕ್ಟೋಬರ್ 16ರಂದು ಮರುಸಂಪಾದಿಸಲಾಯಿತು.
  29. ಲೆವಿ, ಇ., "ಮ್ಯೂಸಿಕ್‌ ಫಾರ್‌ ದಿ ಮಾಸೆಸ್‌", ರೆಕಾರ್ಡ್‌ ಮಿರರ್‌ , 3 ಅಕ್ಟೊಬರ್‌ 1987
  30. ಎರ್ಬ್‌, ನಾಡ್ಯಾ ಮತ್ತು ಗೆಯರ್‌, ಸ್ಟೀವೆನ್‌: "ಆಂಡಿ ಫ್ಲೆಚರ್‌ ಇನ್‌ ಇಂಟರ್ವ್ಯೂ: Wir wären besser nicht aufgetreten" ಫ್ರ್ಯಾಂಕ್ಫರ್ಟ್‌ ರಂಡ್ಷಾ. 2009 ಅಕ್ಟೊಬರ್‌ 27 2010ರ ಅಕ್ಟೋಬರ್ 21ರಂದು ಮರುಸಂಪಾದಿಸಲಾಯಿತು.
  31. "[೧]" ಡೆಪೆಷ್‌ ಮೋಡ್‌ ವೆಬ್‌: ಸರ್ನ್ಯಾ ರೆವೊಲ್ಯೂಸ್‌ : ಪ್ರಾಹಾ 1988 (ಡಿಲ್‌ 4.) 2010ರ ಅಕ್ಟೋಬರ್ 24ರಂದು ಮರುಸಂಪಾದಿಸಲಾಯಿತು.
  32. [27] ^ ಮಿಲ್ಲರ್, ಪುಟ 265. ಜೊನಾಥನ್‌ ಕೆಸ್ಲರ್‌ 101 ಫಿಲ್ಮ್‌ನಲ್ಲಿ ಉಲ್ಲೇಖಿಸಿದಂತೆ. ಅವರು ನಿಖರವಾದ ಪದಗಳು: "$1,360,192.50. 1988ರ ಜೂನ್‌ 18ರಂದು, ಪ್ಯಾಸಡೆನಾದ ರೋಸ್‌ ಬೌಲ್‌ನಲ್ಲಿ 60,453 ಜನರು ಹಾಜರಿದ್ದರು. ನಮಗೆ ಹಣದ ಹೊರೆಯೇ ಬರುತ್ತಿದೆ. ಬಹಳಷ್ಟು ಹಣ; ಹಣದ ಹೊರೆ – ಟನ್‌ ಗಟ್ಟಲೆ ಹಣ!"
  33. Víctor Rodríguez 1 de abril de 2009 (22 ಫೆಬ್ರವರಿ 1999). "Especial Depeche Mode: 101". Hipersonica.com. Retrieved 22 ಜುಲೈ 2010.{{cite web}}: CS1 maint: numeric names: authors list (link)
  34. Pimpf (23 ಜುಲೈ 1961). "Pimpf / Depeche Mode in France". Pimpfdm.com. Retrieved 22 ಜುಲೈ 2010.
  35. [28] ^ http://www.imdb.com/title/tt0299537/
  36. [27] ^ ಮಿಲ್ಲರ್, ಪುಟ 291
  37. Tobler, p. 472
  38. "ದಿ "The BRITs1991 - ದಿ ಬ್ರಿಟ್‌ ಅವಾರ್ಡ್ಸ್‌ ಹಿಸ್ಟರಿ Archived 13 January 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ." Brits.co.uk. 2010ರ ಅಕ್ಟೊಬರ್‌ 14ರಂದು ಮರುಸಂಪಾದಿಸಲಾಯಿತು.
  39. ಸ್ಯಾನರ್‌, ಎಸ್‌.: "ಡೆಪೆಷ್ ಹ್ಯಾಸ್‌ ಫೇಯ್ತ್‌ ಇನ್‌ ನ್ಯೂ 'ಸಾಂಗ್ಸ್'" ವರೈಟಿ. 22 ಮಾರ್ಚ್‌ 1993.
  40. RIAA ಗೋಲ್ಡ್‌ ಅಂಡ್‌ ಪ್ಲ್ಯಾಟಿನಮ್‌ ಅಲ್ಬಮ್‌ ಸರ್ಚ್‌ ಫಾರ್‌ ವಯೊಲೇಟರ್ Archived 24 September 2015[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. RIAA. 2010ರ ಅಕ್ಟೊಬರ್‌ 12ರಂದು ಮರುಸಂಪಾದಿಸಲಾಯಿತು.
  41. ೪೧.೦ ೪೧.೧ Miller, p. 299
  42. ಮಿಲ್ಲರ್‌, ಪಿಪಿ. 299-300
  43. http://www.sputnikmusic.com/review/10306/Depeche-Mode-Songs-of-Faith-and-Devotion/
  44. ಎಡಿಟೊರಿಯಲ್ಸ್‌: ದಿ ಸಿಂಗಲ್ಸ್‌ 86–98 - ಸಾಂಗ್ಸ್‌ ಆಫ್‌ ಫೇಯ್ತ್‌ ಅಂಡ್‌ ಡಿವೊಷನ್‌ Archived 7 March 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಷಂಟ್‌. 2010ರ ಅಕ್ಟೋಬರ್ 19ರಂದು ಮರುಸಂಪಾದಿಸಲಾಯಿತು.
  45. "37th Grammy Awards – 1995". RockOnTheNet.com. Retrieved 24 ಫೆಬ್ರವರಿ 2009.
  46. ಅಲಿ, ಒಮರ್‌: "ಇನ್‌ ದಿ ಮೋಡ್‌ ಫಾರ್ ಲವ್‌ Archived 24 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ." ಟೈಮ್‌ ಔಟ್‌. ಏಪ್ರಿಲ್‌‌ 4, 2001.
  47. ಎಡಿಟೊರಿಯಲ್ಸ್‌: ದಿ ಸಿಂಗಲ್ಸ್‌ 86–98 - ಸಾಂಗ್ಸ್‌ ಆಫ್‌ ಫೇಯ್ತ್‌ ಅಂಡ್‌ ಡಿವೊಷನ್‌ (ಪಿ. Archived 7 March 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.25) Archived 7 March 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಷಂಟ್‌. 2010ರ ಅಕ್ಟೋಬರ್ 18ರಂದು ಮರುಸಂಪಾದಿಸಲಾಯಿತು.
  48. Alan's Leaving Archived 4 February 2014[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., Jaakko's Depeche Mode page. Retrieved 10 February 2007.
  49. [27] ^ ಮಿಲ್ಲರ್, ಪುಟ 413
  50. ಬ್ರೌನ್‌, ಮಾರ್ಕ್‌: "ಡೆಪೆಷ್ ವರ್ಸಸ್‌ ಡ್ರಗ್ಸ್‌ Archived 26 January 2017[Date mismatch] ವೇಬ್ಯಾಕ್ ಮೆಷಿನ್ ನಲ್ಲಿ." ವಿನಿಪೆಗ್ ಫ್ರೀ ಪ್ರೆಸ್‌. ಮೇ 1, 1997
  51. ಕ್ಯಾಮರಾನ್‌, ಕೇತ್‌: "ಡೆಡ್‌ ಮ್ಯಾನ್‌ ಟಾಕಿಂಗ್‌" ಎನ್‌ಎಂಇ. ಜನವರಿ 18, 1997.
  52. [27] ^ ಮಿಲ್ಲರ್, ಪುಟ 429
  53. "Press Conference, Hyatt Hotel, Cologne Germany (April 20, 1998)". Depechemode.com. Archived from the original on 10 ಮಾರ್ಚ್ 2012. Retrieved 18 ಅಕ್ಟೋಬರ್ 2010.
  54. "ಡೆಪೆಷ್‌ ಮೋಡ್‌: ಎಕ್ಸೈಟರ್ (2001): ರಿವಿವ್ಸ್" Archived 24 December 2001[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಮೆಟಾಕ್ರಿಟಿಕ್ . 12 ಫೆಬ್ರುವರಿ 2007ಯಲ್ಲಿ ಮರುಸಂಪಾದಿಸಲಾಯಿತು.
  55. "Press Conference, Valentino Hotel, Hamburg Germany (March 13, 2001)". Depechemode.com. Archived from the original on 10 ಮಾರ್ಚ್ 2012. Retrieved 18 ಅಕ್ಟೋಬರ್ 2010.
  56. http://onipdvd.depechemode.com/press_release01.html
  57. "depeche mode dot com". Depechemode.com. Archived from the original on 15 ಫೆಬ್ರವರಿ 2013. Retrieved 22 ಜುಲೈ 2010.
  58. Daniel Barassi. "Martin L. Gore - Counterfeit²". Martingore.com. Archived from the original on 24 ಜೂನ್ 2012. Retrieved 22 ಜುಲೈ 2010.
  59. "``DEPECHE MODE: TOURING THE ANGEL, LIVE IN MILAN'' to Premiere Nationwide in a One-Night Big Screen Concerts(SM) Event". Businesswire.com. 11 ಸೆಪ್ಟೆಂಬರ್ 2006. Retrieved 22 ಜುಲೈ 2010.
  60. Daniel Barassi. "Touring The Angel: Live In Milan". Liveinmilan.depechemode.com. Retrieved 22 ಜುಲೈ 2010.
  61. "depeche mode dot com". Depechemode.com. Archived from the original on 15 ಫೆಬ್ರವರಿ 2013. Retrieved 22 ಜುಲೈ 2010.
  62. http://thecomplete.depechemode.com/
  63. "New Depeche Mode album in the pipeline for 2008". Side-line.com. 27 ಜುಲೈ 2007. Retrieved 22 ಜುಲೈ 2010.
  64. "ಡೆಪೆಷ್‌ ಮೋಡ್‌ ಸೈನ್ಸ್‌ ವರ್ಲ್ಡ್‌ವೈಡ್‌ ಎಕ್ಸ್‌ಕ್ಲೂಸಿವ್‌ ಡೀಲ್‌ ವಿತ್‌ ಇಎಂಐ ಮ್ಯೂಸಿಕ್‌ - ಟು ಇಂಕ್ಲೂಡ್‌ ದಿ ಯುಎಸ್‌ ಫಾರ್‌ ದಿ ಫಸ್ಟ್‌ ಟೈಮ್‌" Archived 23 June 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., EMI ಮ್ಯೂಸಿಕ್‌.com. , ಅಕ್ಟೋಬರ್‌ 7, 2008.
  65. "DEPECHE MODE ANNOUNCES THE RELEASE OF SOUNDS OF THE UNIVERSE 21 APRIL 2009". Depechemode.com. Archived from the original on 28 ಜೂನ್ 2012. Retrieved 22 ಜುಲೈ 2010.
  66. ದಿ ಹೂಯಿಸ್‌ ನ್ಯೂಸ್‌ ಬ್ಲಾಗ್‌, 21 ಏಪ್ರಿಲ್‌ 2009
  67. "depeche mode dot com". Depechemode.com. Archived from the original on 28 ಜೂನ್ 2012. Retrieved 22 ಜುಲೈ 2010.
  68. http://www.vh1.com/search/?q=depeche%20mode[ಶಾಶ್ವತವಾಗಿ ಮಡಿದ ಕೊಂಡಿ]
  69. http://www.1iota.com/events,4183,Depeche-Mode-at-Hollywood-and-Vine.html
  70. "BBC – Depeche Mode tour". Bbc.co.uk. 7 ಅಕ್ಟೋಬರ್ 2008. Retrieved 19 ಅಕ್ಟೋಬರ್ 2010.
  71. ಪೇಯ್ನ್‌, ಆಂಡ್ರೆ: "ಡೆಪೆಷ್‌ ಮೋಡ್‌ ಕ್ಯಾನ್ಸೆಲ್ಸ್‌ ಮೋರ್‌ ಡೇಟ್ಸ್‌ ಆಸ್‌ ಸಿಂಗರ್‌ ರಿಕವರ್ಸ್‌ ಫ್ರಮ್‌ ಸರ್ಜರಿ" Billboard.com. ಮೇ 28, 2009
  72. "ಡೆಪೆಷ್‌ ಮೋಡ್‌ ಜಾಯಿನ್ಡ್‌ ಬೈ ಫಾರ್ಮರ್‌ ಬ್ಯಾಂಡ್‌ ಮೆಂಬರ್‌ ಅಟ್‌ ಟೀನೇಜ್‌ ಕ್ಯಾನ್ಸರ್‌ ಟ್ರಸ್ಟ್‌ ಷೊ" Nme.com. ಫೆಬ್ರವರಿ 18, 2010.
  73. ಹಾರ್ಪರ್‌, ಕೇಟ್‌: "ಅಲ್ಯಾನ್‌ ವೈಲ್ಡರ್ ರಿಜಾಯಿನ್ಸ್‌ ಡೆಪೆಷ್‌ ಮೋಡ್‌ ಫಾರ್‌ ಒನ್‌ ಸಾಂಗ್‌ ಇನ್‌ ಲಂಡನ್‌ Archived 21 February 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ." Chartattack.com. ಫೆಬ್ರವರಿ 18, 2010.
  74. "'Tour of the Universe - Live In Barcelona' - New Live Video". depeche mode dot com. 23 ಸೆಪ್ಟೆಂಬರ್ 2010. Archived from the original on 28 ಜೂನ್ 2012. Retrieved 26 ಸೆಪ್ಟೆಂಬರ್ 2010.
  75. http://www.billboard.com/#/features/top-25-tours-of-2009-1004053062.story
  76. "Robbie Williams Und Depeche Mode Gewinnen Echo 2010". Echopop.de. Archived from the original on 19 ಜುಲೈ 2011. Retrieved 22 ಜುಲೈ 2010.
  77. "Music for the Masses Collectors Edition Gatefold LP - Depeche Mode". Whatrecords.co.uk. 5 ಮಾರ್ಚ್ 2007. Archived from the original on 24 ಜುಲೈ 2011. Retrieved 22 ಜುಲೈ 2010.
  78. "Depeche Mode Fanclub Israel (îåòãåï ãôù îåã éùøàì)". Depechemode.co.il. Archived from the original on 4 ಏಪ್ರಿಲ್ 2007. Retrieved 22 ಜುಲೈ 2010.
  79. "10 ಇಯರ್ಸ್‌ ಆಫ್‌ ಬೀಯಿಂಗ್‌ ಬೊರಿಂಗ್‌". 2007ರ ಸೆಪ್ಟೆಂಬರ್ 9ರಂದು ಮರುಸಂಪಾದಿಸಲಾಯಿತು.
  80. "ಇಂಟರ್ವ್ಯೂಸ್‌ - ಬಿಹೆವಿಯರ್‌ - ದಿ ಎಂಡ್‌ ಆಫ್‌ ದಿ ವರ್ಲ್ಡ್‌ Archived 13 October 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.", ಅಬ್ಸೊಲ್ಯೂಟ್ಲಿ ಪೆಟ್‌ ಷಾಪ್‌ ಬಾಯ್ಸ್‌ . 2007ರ ಸೆಪ್ಟೆಂಬರ್ 9ರಂದು ಮರುಸಂಪಾದಿಸಲಾಯಿತು.
  81. ಮೆಕ್‌ಕ್ರೀಡಿ ಜೆ., "ಮೊಡಸ್‌ ಅಪೆರಾಂಡಮ್‌", ದಿ ಫೇಸ್‌ , ಫೆಬ್ರವರಿ 1989
  82. "ಡೆಪೆಷ್‌ ಮೋಡ್‌ Archived 14 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.", ವಾಷಿಂಗ್ಟನ್‌ ಪೋಸ್ಟ್‌ (11 ಸೆಪ್ಟೆಂಬರ್‌ 2005). 2007ರ ಸೆಪ್ಟೆಂಬರ್ 29ರಂದು ಮರುಸಂಪಾದಿಸಲಾಯಿತು.
  83. "[೨]", ನ್ಯೂಯಾರ್ಕರ್‌ (5 ಜೂನ್‌ 2006). 2008ರ ಡಿಸೆಂಬರ್‌ 10ರಂದು ಪುನರ್ಪಡೆಯಲಾಯಿತು.
  84. "ಚೆಸ್ಟರ್‌ ಬೆನಿಂಗ್ಟನ್‌ Archived 14 June 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.", mtv.com . 2007ರ ಸೆಪ್ಟೆಂಬರ್ 9ರಂದು ಮರುಸಂಪಾದಿಸಲಾಯಿತು.
  85. "ಲಿಂಕಿನ್‌ ಪಾರ್ಕ್‌ ಸಿಂಗರ್‌ ಸೇಯ್ಸ್‌ ಸೊಲೊ ಅಲ್ಬಮ್‌ ವಿಲ್‌ ಹ್ಯಾವ್‌ 'ದ್ರೈವಿಂಗ್‌ ಬೀಟ್ಸ್‌ ಅಂಡ್‌ ವಾಲ್ಸ್‌ ಆಫ್‌ ಗಿಟಾರ್ಸ್‌' – ಆಗಸ್ಟ್‌ 19, 2005 Archived 17 November 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.", BLABBERMOUTH.NET . 2007ರ ಸೆಪ್ಟೆಂಬರ್‌ 9ರಂದು ಮರುಸಂಪಾದಿಸಲಾಯಿತು.
  86. "ಡೆಪೆಷ್‌ ಮೋಡ್‌ "ರಿಮಿಕ್ಸೆಸ್‌ 81–04" Archived 11 October 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.", [ಮ್ಯೂಟ್‌] . 2007ರ ಸೆಪ್ಟೆಂಬರ್ 9ರಂದು ಮರುಸಂಪಾದಿಸಲಾಯಿತು.
  87. "The Crystal Method: Information from". Answers.com. Retrieved 22 ಜುಲೈ 2010.
  88. "Depeche Mode | Biography". Lyricsfreak.com. Archived from the original on 25 ಮೇ 2006. Retrieved 22 ಜುಲೈ 2010.
  89. ಆಂಟನಿ ರೊಲ್ಡಾನ್‌, "ಅನ್ ಎಕ್ಸ್‌ಕ್ಲುಸಿವ್‌ ಇಂಟರ್ವ್ಯೂ ವಿತ್‌ ಫಿಯರ್‌ ಫ್ಯಾಕ್ಟರಿ'ಸ್‌ ರೇಮಂಡ್‌ ಹೆರೆರಾ Archived 5 January 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.", PROG4YOU . 2007ರ ಸೆಪ್ಟೆಂಬರ್‌ 12ರಂದು ಮರುಸಂಪಾದಿಸಲಾಯಿತು.
  90. ಟೊನಿ ಪ್ಯಾಸ್ಕರೆಲಾ, "ಡ್ಯಾರೆನ್‌ ಸ್ಮಿತ್‌ ಆಫ್‌ ಫ್ಯೂನೆರಲ್‌ ಫಾರ್‌ ಎ ಫ್ರೆಂಡ್‌ Archived 4 October 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.", ದಿ ಟ್ರೇಡ್ಸ್‌ . 2007ರ ಸೆಪ್ಟೆಂಬರ್ 12ರಂದು ಮರುಸಂಪಾದಿಸಲಾಯಿತು.
  91. Krohn, Katherine (2007). ShakiraBiography (A & E)Biography Series. Twenty-First Century Books. ISBN 9780822571599.
  92. ಡರ್ಮಟ್‌ ಒ'ಲಿಯರಿ: 25 ಜುಲೈ 2009ಬಿಬಿಸಿ ಐಪ್ಲೇಯರ್‌ Archived 29 July 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  93. http://www.joystiq.com/2009/07/29/depeche-mode-is-all-over-left-4-dead-2/

ಗ್ರಂಥಸೂಚಿ

ಬದಲಾಯಿಸಿ
  • ಮಲಿನ್ಸ್‌, ಸ್ಟೀವ್‌. ಡೆಪೆಷ್‌ ಮೋಡ್‌ :ಎ ಬಯೊಗ್ರಫಿ . ಆಂಡ್ರೆ ಡಾಯ್ಚ್‌, 2001. ISBN 978-0-233-99430-7
  • ಮಿಲ್ಲರ್‌, ಜೊನಥನ್‌. ಸ್ಟ್ರಿಪ್ಡ್‌: ದಿ ಟ್ರೂ ಸ್ಟೊರಿ ಆಫ್‌ ಡೆಪೆಷ್‌ ಮೋಡ್‌ . ಆಮ್ನಿಬಸ್‌ ಪ್ರೆಸ್‌, 2004. ಐಎಸ್‌ಬಿಎನ್ 1-84449-415-2
  • ಟಾಬ್ಲರ್‌, ಜಾನ್‌. ಎನ್‌ಎಂಇ ರಾಕ್‌'ಎನ್‌'ರೋಲ್‌ ಇಯರ್ಸ್‌ (ಮೊದಲ ಆವೃತ್ತಿ.) . ಲಂಡನ್‌: ರೀಡ್‌ ಇಂಟರ್ನ್ಯಾಷನಲ್‌ ಬುಕ್ಸ್‌ ಲಿಮಿಟೆಡ್‌, 1992. ಸಿಎನ್‌ 5585. ಐಎಸ್‌ಬಿಎನ್‌ 0-600-57602-7

ಹೆಚ್ಚಿನ ಓದಿಗಾಗಿ

ಬದಲಾಯಿಸಿ
  • ಕಾರ್ಬಿನ್‌, ಆಂಟನ್‌. ಡೆಪೆಷ್‌ ಮೋಡ್‌: ಸ್ಟ್ರೇಂಜರ್ಸ್‌ . ಪ್ರೆಂಟಿಸ್‌ ಹಾಲ್‌, 2002. ಐಎಸ್‌ಬಿಎನ್‌ 0-7119-2493-7
  • ಥಾಮ್ಸನ್‌, ಡೇವ್‌. ಡೆಪೆಷ್‌ ಮೋಡ್‌ : ಸಮ್‌ ಗ್ರೇಟ್‌ ರಿವಾರ್ಡ್‌ . ಪ್ಯಾನ್‌ ಮೆಕ್ಮಿಲೆನ್‌, 1995. ಐಎಸ್‌ಬಿಎನ್‌ 0-283-06243-6
  • ಝಿಲ್‌, ಡಿಡಿ. ಡೆಪೆಷ್‌ ಮೋಡ್‌. ಫೊಟೊಗ್ರ್ಯಾಫ್ಸ್‌ 1982-87 . ಷ್ವಾರ್ಜ್‌ಕಾರ್ಫ್‌ & ಷ್ವಾರ್ಜ್‌ಕಾರ್ಫ್‌, 2004. ಐಎಸ್‌ಬಿಎನ್‌ 3-89602-491-4

ಬಾಹ್ಯ ಕೊಂಡಿಗಳು

ಬದಲಾಯಿಸಿ