ಡುಗಾಂಗ್ (ಕೆಂಪು ಸಮುದ್ರದಲ್ಲಿರುವ ಸಸ್ಯಾಹಾರಿ ಸಸ್ತನಿ)

Dugong[೧]
Temporal range: Early Eocene–Recent
Dugong Marsa Alam.jpg
Conservation status
Egg fossil classification
Kingdom:
Animalia
Phylum:
Class:
Order:
Family:
Gray, 1821
Subfamily:
Dugonginae

Simpson, 1932
Genus:
Dugong

Species:
D. dugon
Binomial nomenclature
Dugong dugon
(Müller, 1776)
Dugong-range.png
Natural range of D. dugon.

ಡುಗಾಂಗ್ (ಡುಗಾಂಗ್ ಡುಗೊನ್ ) ಒಂದು ದೊಡ್ಡ ಗಾತ್ರದ ಸಮುದ್ರ ಸಸ್ತನಿ;ಇದು, ಕಡಲುಹಸುಗಳ,ಜೊತೆ ಸೇರುವ ನಾಲ್ಕುಬೃಹತ್ ಸಮುದ್ರಜೀವಿಗಳ ಜಾತಿಗೆ ಸೇರಿದೆ. ಒಂದು ಕಾಲದಲ್ಲಿ ಡುಗೊಂಗಿಡೆಯ್ ಕುಟುಂಬದ ಸದಸ್ಯನಾಗಿದ್ದ ಇದು ಆ ತಳಿಯ ಪ್ರತಿನಿಧಿಯಾಗಿದೆ.ಇದರ ಅತ್ಯಂತ ನಿಕಟ ಆಧುನಿಕ ತಳಿ ಎಂದರೆ ಸ್ಟೆಲ್ಲರ್ಸ್ ಸೀ ಕೌ (ಹೈಡ್ರೊಡಾಮಾಲಿಸ್ ಗಿಗಾಸ್ ಇದನ್ನು 18 ನೆಯ ಶತಮಾನದಲ್ಲಿ ಬೇಟೆಯಾಡಿ ಅದರ ತಳಿ ವಿನಾಶದ ಹಾದಿ ಹಿಡಿಯಿತು. ಈ ದೊಡ್ಡ ಗಾತ್ರದ ಸೈರಿನಿಯನ್ ಸಸ್ತನಿ ಜಾತಿಯ ತಳಿಯು ಕನಿಷ್ಟ 37 ದೇಶಗಳ ಸಮುದ್ರ ನೀರಿನಲ್ಲಿ ದೊರೆಯುತ್ತದೆ.ಇಂಡೊ-ಪ್ಯಾಸಿಫಿಕ್[೩] ದಂಡೆಯುದ್ದಕ್ಕೂ ಅದರ ನೆಲೆವಾಸವಿದೆ.ಆದರೂ ಕೂಡಾ ಡುಗಾಂಗ್ ಪ್ರಾಣಿಯು ಅತಿ ಹೆಚ್ಚಾಗಿ ಆಸ್ಟ್ರೇಲಿಯಾದ ಶಾರ್ಕ್ ಕೊಲ್ಲಿ ಮತ್ತು ಮೊರೆಟೊನ್ ಕೊಲ್ಲಿ ನಡುವೆ ದೊರೆಯುತ್ತದೆ.[೪] ಡುಗಾಂಗ್ ಮಾತ್ರ ಕಟುನಿಟ್ಟಾದ ಸಸ್ಯಾಹಾರಿ ಸಮುದ್ರ ಜೀವಿಯಾಗಿದೆ,ಇನ್ನುಳಿದ ಜೀವಿಗಳು ಅಲ್ಲಿನ ಶುದ್ದ ನೀರಿನ ಬಳಕೆಯನ್ನು ಸರಿಯಾಗಿ ಮಾಡಿಕೊಳ್ಳುತ್ತವೆ.[೩]

ಸಮುದ್ರದ ಎಲ್ಲಾ ಆಧುನಿಕ ಜೀವಿಗಳಂತೆ ಡುಗೊಂಗ್ ಸಹ ಎರಡೂ ಕಡೆ ಮೊನಚಾದ ಭಾಗವುಳ್ಳ ಶರೀರ ರಚನೆಯಿದೆ.ಇದಕ್ಕೆ ಬೆನ್ನಿನ ಏಣಿಯ ರೆಕ್ಕೆ ಅಥವಾ ಹಿಂಗಾಲುಗಳು ಮುಂಗಾಲುಗಳು ಇದಕ್ಕಿಲ್ಲ.ಆದರೆ ಮುದಿನ ಕಿರಿಭಾಗವನ್ನೇ ತನ್ನನ್ನು ತಾನು ತಳ್ಳಲು ಅದು ಬಳಸುತ್ತದೆ. ಇದನ್ನು ಕಡಲು ಹಸುಗಳಿಂದ ಸ್ಪಷ್ಟವಾಗಿ ಪ್ರತ್ಯೇಕಿಸಬಹುದು,ಅದರ ವಕ್ರಾಕಾರದ ಶರೀರ,ಡಾಲ್ಫಿನ್ ನಂತಹ ಬಾಲ ಅಲ್ಲದೇ ಅಪರೂಪದ ತಲೆಬುರಡೆ ಮತ್ತು ದಂತಗಳನ್ನು ಹೊಂದಿದೆ.[೫] ಡುಗಾಂಗ್ ಬಹುತೇಕ ಸಮುದ್ರ ಹುಲ್ಲುಗಳೇ ಅದಕ್ಕೆ ಆಹಾರ ಆದ್ದರಿಂದ ಇದು ಕರಾವಳಿಯ ಸಸ್ಯಜೀವಿಗಳ ಮೇಲೆ ಅವಲಂಬಿಸಿದೆ.ಹೀಗಾಗಿ ಅದು ದೊಡ್ಡ ಬೃಹತ್ ರಕ್ಷಿತ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.ಅದರ ಇರುವ ತಾಣಗಳೆಂದರೆ ಉದಾಹರಣೆಗೆ ಕೊಲ್ಲಿಗಳು,ಮರದ ತೋಪು,ಕಾಪು ತಾಣ ವಿಶಾಲ ಒಳಸಮುದ್ರ ದಂಡೆಗಳು,ದ್ವೀಪ ಪ್ರದೇಶಗಳು ಇತ್ಯಾದಿ.[೩] ಅದರ ಉದ್ದನೆಯ ಮೂತಿಯು ಮೊನಚಾಗಿ ಕೆಳಕ್ಕೆ ಬಾಗಿರುತ್ತದೆ,ಇದು ಹುಲ್ಲು ಮೇಯಲು ಅನುಕೂಲವಾಗಿದೆ.ಕೆಳಗಿನ ಭಾಗದಲ್ಲಿನ ತಳಸ್ಪರ್ಶಿ ಜೀವಿಗಳನ್ನು ಕಿತ್ತುಹಾಕಲು ಈ ಭಾಗ ನೆರವಾಗುತ್ತದೆ.

ಸಾವಿರಾರು ವರ್ಷಗಳಿಂದ ಡುಗಾಂಗ್ ನ್ನುಮೌಂಸ ಮತ್ತು ತೈಲಕ್ಕಾಗಿ ಬೇಟೆಯಾಡಲಾಗುತ್ತದೆ.ಇದರ ಬೇಟೆಯನ್ನು ಒಂದು ಸಾಂಸ್ಕೃತಿಕ ಪದ್ದತಿಯೆಂದು ತಿಳಿಯಲಾಗುತ್ತದೆ.[೬][೭] ಸದ್ಯ ಡುಗಾಂಗ್ ನ ಸಂಖ್ಯೆ ವಿರಳವಾಗಿದ್ದು ಹಲವೆಡೆ ಅದರ ಅಸಮರ್ಪಕ ವಾಸಸ್ಥಾನ ಗಮನಿಸಿದರೆ ಅದು ಅಳಿವಿನಂಚಿಗೆ ಬಂದಿದೆ.[೩] ಅಂತಾರಾಷ್ಟ್ರೀಯ ವಲಯದ IUCN ಸಂಸ್ಥೆಯು ಡುಗಾಂಗ್ ನ್ನು ಒಂದು ವಿನಾಶದಂಚಿನಲ್ಲಿರುವ ಪ್ರಾಣಿಕುಲಕ್ಕೆ ಸೇರಿಸಿದೆ.ಇತ್ತೀಚಿಗೆ ನಡೆದ ಇಂಟರ್ ನ್ಯಾಶನಲ್ ಟ್ರೇಡ್ ಇನ್ ಎಂಡೇಜರ್ಡ್ ಸ್ಪಿಸಿಸ್ ನ ಕುರಿತ ಸಮಾವೇಶದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.ಹೀಗೆ ಈ ಪ್ರಾಣಿ ಸಂಕುಲದ ಸಂಖ್ಯೆ ಪರಿಗಣಿಸಿ ಅದನ್ನು ಪರಿಗಣಿಸಲಾಗುತ್ತದೆ. ಇವುಗಳು ಕಾನೂನಿನಡಿಯಲ್ಲಿ ರಕ್ಷಣೆ ಕೊಡಲಾಗಿದ್ದರೂ ಹಲವಾರು ದೇಶಗಳಲ್ಲಿ ಮಾನವ ನಿರ್ಮಿತ ಕಾರಣಗಳಿಂದ ಇವು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ.ಅದರ ಕಾರಣವೆಂದರೆ ಬೇಟೆಯಾಡುವುದು,ವಾಸಸ್ಥಾನಗಳ ನಾಶ ಮತ್ತು ಮೀನು ಹಿಡಿಯುವಾಗ ಉಂಟಾಗುವ ಅವಘಡಗಳಿಗೆ ಇವು ಸಿಲುಕಿ ಸಾವನ್ನಪ್ಪುತ್ತಿವೆ.[೮] ಅದರ ದೀರ್ಘ ಜೀವಿತಾವಧಿ ಸುಮಾರು 70 ವರ್ಷ ಮತ್ತು ಮರುಜನ್ಮ ನೀಡಿಕೆಯಲ್ಲಿನ ನಿಧಾನಗತಿ ಅವುಗಳ ಶೋಷಣೆಗೆ ಕಾರಣವಾಗಿದೆ.[೩] ಡುಗೊಂಗ್ ಗಳಿಗೆ ಇನ್ನಿತರ ಭಯಗಳೂ ಕಾಡುತ್ತಿವೆ;ಬಿರುಗಾಳಿಗಳು,ರೋಗಕಾರಕ ಜೀವಿಗಳು ಅವುಗಳ ನೈಸರ್ಗಿಕ ಬೇಟೆ ಭಕ್ಷಕಗಳಾದ ಶಾರ್ಕ್ ಗಳು,ಹತ್ಯಾಕಾರಿ ದೊಡ್ಡ ತಿಮಿಂಗಲುಗಳು, ಮತ್ತು ಮೊಸಳೆಗಳು[೮]

ವ್ಯುತ್ಪತ್ತಿ ಶಾಸ್ತ್ರ ಮತ್ತು ಜೀವಿವರ್ಗೀಕರಣದ ವಿಜ್ಞಾನಸಂಪಾದಿಸಿ

ಡುಗೊಂಗ್ ನ್ನು ಮೊದಲು ಮುಲ್ಲರ್ ಅವರು 1776 ರಲ್ಲಿ ವರ್ಗೀಕರಿಸಿ ಇದನ್ನು ಸಮುದ್ರ ಜೀವಿಗಳ ವಿಧದ ಡುಗಾನ್ [೯] ಎಂದು ಕರೆದರು.ಇದು ಕಡಲು ಹಸುವಿನ ತಳಿಗೆ ಸೇರಿದೆ ಎಂಬುದನ್ನು ಲಿನ್ನಿಯಸ್ ಎಂಬ ಸ್ವಿಡಿಶ್ ಸಸ್ಯ ಶಾಸ್ತ್ರಜ್ಞರು ತಿಳಿಸಿದ್ದಾರೆ.[೧೦] ನಂತರ ಇದನ್ನು ವಿಭಿನ್ನ ಜೀವಿಗಳ ಸಂಕುಲಕ್ಕೆ ಅಂದರೆ ಡುಗೊಂಗ್ ಗೆ ಲಾಸೆಪೆಡೆ [೧೧] ಎಂಬುವವರು ಸೇರಿಸಿದರು.ಅದರದೇ ಸಂಕುಲದ ಕುಟುಂಬದಲ್ಲಿ ಇದನ್ನು ಮತ್ತೆ ಗ್ರೆ [೧೨] ಎಂಬುವವರು ವರ್ಗೀಕರಿಸಿದರು.ತರುವಾಯ ಸಿಂಪ್ಸನ್ ಇದನ್ನು ಅದರದೇ ಜಾತಿಯ ಉಪಕುಟುಂಬಕ್ಕೆ ಸೇರಿಸಿದರು.[೧೩]

ಈ ಪದ "ಡುಗಾಂಗ್ "ನ್ನು ಟ್ಯಾಗಲಾಗ್ ಪದ ಗುಚ್ಚ ಡುಗೊಂಗ್ ನಿಂದ ಪಡೆಯಲಾಗಿದೆ.ಮೂಲತಃ ಇದು ಮಲಯಾ ಭಾಷೆಯ ಡುಯುಂಗ್ ಎಂಬುದರಿಂದ ಬಂದಿದ್ದು ಇವೆರಡರ ಅರ್ಥ"ಸಮುದ್ರದ ಸ್ತ್ರೀ"ಎಂದಾಗುತ್ತದೆ.[೧೪] ಇನ್ನುಳಿದ ಸಾಮಾನ್ಯ ಸ್ಥಳೀಯ ಅರ್ಥಗಳೆಂದರೆ "ಕಡಲಾಕಳು," "ಸಮುದ್ರ ಹಂದಿ" ಮತ್ತು "ಸಮುದ್ರ ಒಂಟೆ"ಎಂದು ಕರೆಯುತ್ತಾರೆ.[೮]

ದೇಹರಚನೆ ಮತ್ತು ರೂಪವಿಜ್ಞಾನಸಂಪಾದಿಸಿ

 
ಈಜು ರೆಕ್ಕೆಗಳುಳ್ಳ ಕಡಲು ಮೀನಿನೊಂದಿಗೆ ಡುಗಾಂಗ್ (ಲಾಮೆನ್ ಐಲ್ಯಾಂಡ್,ಇಪಿಐ ವಾನುತ್ಯಾ)

ಡುಗಾಂಗ್ ಶರೀರವು ವಿಶಾಲ ಮತ್ತು ಬೃಹತ್ ರೂಪ ಪಡೆದಿದ್ದು ದಪ್ಪ,ಮೆದು ಚರ್ಮವು ತಿಳಿ ಕೆನೆಬಣ್ಣವನ್ನು ಜನ್ಮಕಾಲದಲ್ಲಿ ಪಡೆದಿದ್ದರೆ ವಯಸ್ಸಾದಂತೆ ಅದು ನೇರಳೆಯಿಂದ ಕಡು ನೇರಳೆಯ ಕಪ್ಪು ಬಣ್ಣಕ್ಕೆ ತಿರುಗುತ್ತದೆ.[೧೫] ಶರೀರದ ತುಂಬೆಲ್ಲ ವಾತಾವರಣಕ್ಕೆ ತಕ್ಕಂತೆ ಸಣ್ಣ ಪ್ರಮಾಣದ ಕೇಶವಿರುತ್ತದೆ.ಸಮುದ್ರದ ಜೀವಿಗಳಲ್ಲಿರುವ ಸಾಮಾನ್ಯ ಸ್ಪರ್ಶಗುಣಲಕ್ಷಣಗಳಿರುತ್ತವೆ.[೧೬] ಡುಗಾಂಗ್ ನ ಪೆಡಲ್ ನಂತಹ ನಾಲ್ಕು ಪಾದಭಾಗಗಳು ಅದಕ್ಕೆ ಚಲನೆ ಆಹಾರ ಸೇವನೆ ಮತ್ತು ಅದು ಲಂಬೀಯವಾಗಿ ಚಲಿಸಲು ಬಾಲದಂತಹ ಅಂಗ ಕೂಡಾ ಸಹಾಯಕವಾಗಿದೆ. ಅದರ ಕೆಚ್ಚಲು ಭಾಗವು ಆನೆಗಳಲ್ಲಿಯಂತೆಯೇ ಹಿಗಾಲಿನ ಮಧ್ಯೆ ಇರುತ್ತದೆ. ಆದರೆ ಅಮೇಜೊನಿಯನ್ ಕಡಲುಹಸುಗಳಿಗಿರುವಂತೆ ಡುಗಾಂಗ್ ತನ್ನ ಹಿಂಗಾಲುಗಳಲ್ಲಿ ಮೊಳೆಗಳ ಹೊಂದಿಲ್ಲ.

ಕಡಲು ಹಸುಗಳಂತೆ ಡುಗಾಂಗ್ ನ ಹಿಮ್ಮುಖ ದವಡೆ ಹಲ್ಲುಗಳು ನಿರಂತರವಾಗಿ ಒಂದು ಬಿದ್ದು ಹೋದ ನಂತರ ಇನ್ನೊಂದರಂತೆ ಬೆಳೆಯಲಾರವು.[೧೭] ಡುಗಾಂಗ್ ಗೆ ಎರಡು ಕೋರೆ ಹಲ್ಲುಗಳಿರುತ್ತವೆ.(ಆನೆಗೆ ಇರುವಂತೆ ಕೋರೆ ದಂತಗಳು) ಇವು ವಯಸ್ಕವಾದ ನಂತರ ಅವು ಕಾಣಿಸುತ್ತವೆ,ಅದರಲ್ಲೂ ಮೊದಲು ಗಂಡು ಪ್ರಾಣಿಯಲ್ಲಿ ಕಾಣುತ್ತವೆ. ಹೆಣ್ಣು ಡುಗಾಂಗ್ ನ ಕೋರೆಗಳು ಅದು ಕೊಂಚನ್ ಪ್ರೌಢಾವಸ್ಥೆಗೆ ತಲುಪಿದಾಗ ಬೆಳೆಯಲಾರಂಭಿಸುತ್ತವೆ.[೬] 2.0.3.33.1.3.3ಡುಗಾಂಗ್ ಗಳ ಸಂಪೂರ್ಣ ದಂತ ಬೆಳೆಯುವ ಸ್ಥಿತಿಯೆಂದರೆ2.0.3.33.1.3.3:

ಇನ್ನುಳಿದ ಕಡಲು ಪ್ರಾಣಿಗಳಂತೆ ಡುಗಾಂಗ್ ಕೂಡಾ ಶರೀರ ಸ್ನಾಯು ಬೆಳೆಯುವ ಪೂರ್ವ ಸ್ಥಿತಿಯಲ್ಲಿ ಒಂದೇ ಪರಿಸ್ಥಿತಿ ಅನುಭವಿಸುತ್ತದೆ.ಅದರ ಸ್ನಾಯುಗಳು ಮತ್ತು ದಂತ ಕವಚವು ಗಟ್ಟಿ ಮತ್ತು ಘನವಾಗಿರುತ್ತದೆ. ಇಂತಹ ಭಾರದ ಸ್ನಾಯುಗಳು ಸಮುದ್ರ ಪ್ರಾಣಿ ಲೋಕದಲ್ಲಿ [೧೮] ಅವುಗಳಿಗೆ ತಳಭಾಗದಲ್ಲಿ ಗಟ್ಟಿಯಾಗಿರಲು ಸಹಾಯ ಮಾಡುತ್ತವೆ.[೧೯]

ಡುಗಾಂಗ್ ಗಳು ಸಾಮಾನ್ಯವಾಗಿ ಕಡಲು ಹಸುಗಳಿಗಿಂತ ಗಾತ್ರದಲ್ಲಿ ಚಿಕ್ಕವು.(ಆದರೆ ಅಮೇಜೊನಿಯನ್ ಕಡಲು ಹಸುಗಳು ಅಪವಾದ)ಪ್ರೌಢವಾಸ್ಥೆಯ ಉದ್ದ 2.7 metres (8.9 ft) ಮತ್ತು ಭಾರವು150 to 300 kilograms (330 to 660 lb)ರಷ್ಟಾಗಿರುತ್ತದೆ.[೨೦] ಒಂದು ಪ್ರೌಢಾವಸ್ಥೆ ಪ್ರಾಣಿಯ ಉದ್ದವು ಅಪರೂಪವಾಗಿ 3 metres (9.8 ft)ಕ್ಕೆ ಹೆಚ್ಚುತ್ತದೆ.ಹೆಣ್ಣುಗಳು ಗಂಡುಗಳಿಗಿಂತ ವಿಶಾಲವಾಗಿರುತ್ತವೆ.[೬] ಇತ್ತೀಚಿಗೆ ಅತಿ ದೊಡ್ಡ ಹೆಣ್ಣು ಡುಗಾಂಗ್ ಪಶ್ಚಿಮ ಭಾರತದ ಸೌರಾಷ್ಟ್ರ ಕರಾವಳಿಯಲ್ಲಿ ದೊರೆತಿದೆ.ಇದರ ಅಳತೆ 4.03 metres (13.2 ft)ಇದ್ದು ಭಾರವು 1,018 kilograms (2,244 lb)ರಷ್ಟಿದೆ.[೨೧]

ವಿತರಣೆಸಂಪಾದಿಸಿ

 
ಮೊರ್ಟೊನ್ ಕೊಲ್ಲಿನಲ್ಲಿನ ಒ6ದೇ ತೆರನಾದ ಡುಗಾಂಗ್ ನಲ್ಲಿನ ಮೇಯುವ ಪ್ರದೇಶ
 
ಈಜಿಪ್ತ್ ನ ಮರ್ಸಾ ಅಲಮ್ ಸಮುದ್ರ ದಂಡೆ ಮೇಲೆ ಡುಗಾಂಗ್

ಡುಗಾಂಗ್ ನ ಸಂಖ್ಯೆ ಬಹಳಷ್ಟು ಕ್ಷೀಣಿಸುತ್ತಿದೆ.ಈ ಮೊದಲು ಅವು ದಕ್ಷಿಣ ಪ್ಯಾಸಿಫಿಕ್ ಮತ್ತು ಭಾರತೀಯ ಸಮುದ್ರಗಳಲ್ಲಿ ವಾಸಿಸುತ್ತಿದ್ದವು.[ಸೂಕ್ತ ಉಲ್ಲೇಖನ ಬೇಕು] ಅವುಗಳ ಇತಿಹಾಸದಲ್ಲಿ ಸಂಭಂಧಿತ ಅಂಶಗಳನ್ನು ಕಾಣಬೇಕೆಂದರೆ ಅದು ಸಮುದ್ರ ಹುಲ್ಲುಗಳಲ್ಲಿ ದೊರೆಯುತ್ತದೆ.[೩] ಸದ್ಯ ಅವುಗಳ 10,000 ಕ್ಕೂ ಅಧಿಕ ಪ್ರಭೇದಗಳು ಗ್ರೇಟ್ ಬ್ಯಾರಿಯರ್ ದಂಡೆ ಆಸ್ಟ್ರೇಲಿಯಾದಲ್ಲಿ ಅಂದರೆ ಶಾರ್ಕ್ ಕೊಲ್ಲಿ ಮತ್ತು ಟೊರೆಸ್ ಸ್ಟ್ರೇಟ್ ನ ದಕ್ಷಿಣದ ನಿವ್ ಗಯಾನಾದಲ್ಲಿ ದೊರೆಯುತ್ತವೆ. ಆದರೆ 1970 ಕ್ಕಿಂತ ಮುಂಚೆ ಇವುಗಳ ದೊಡ್ಡ ಪ್ರಮಾಣದ ಸಂಖ್ಯೆಯು ಮೊಜಾಂಬಿಕ್ ಕರಾವಳಿ ಮತ್ತು ಕೀಣ್ಯದಲ್ಲಿ ದೊರೆಯುತ್ತದೆ ಎನ್ನಲಾಗಿತ್ತು ಆದರೆ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಪಾಲಾಯು(ದ್ವೀಪ) ಕೂಡಾ ಸಣ್ಣ ಸಂಖ್ಯೆ ಹೊಂದಿದೆ. ಇತ್ತೀಚಿಗೆ ತಾಂಜೇನಿಯಾದ ಕರಾವಳಿಯಲ್ಲಿ ಒಂದೇ ಒಂದು (300 ಕಿ,ಗ್ರಾ.ತೂಕ,ಉದ್ದ 2 ಮೀ)ಪ್ರಾಣಿ ಕಾಣಸಿಕ್ಕಿತು.[ಸೂಕ್ತ ಉಲ್ಲೇಖನ ಬೇಕು]

ಆಸ್ಟ್ರೇಲಿಯಾದ ಬ್ರಿಸ್ ಬೇನ್ ನಲ್ಲಿನ ಮೊರೆಟೊನ್ ಕೊಲ್ಲಿಯಲ್ಲಿ ಡುಗಾಂಗ್ ಗೆ ಹಲವಾರು ನೆಲೆವಾಸಾಳಿವೆ.ಇಲ್ಲಿ ದೊರೆಯುವ ಶುದ್ದ ನೀರು,ಉತ್ತಮ ಆಳದ ನೀರು,ಉತ್ತಮ ಆಹಾರ ಮತ್ತು ಸಮುದ್ರದ ಬೆಚ್ಚನೆಯ ವಾತಾನುಕೂಲ ಅವುಗಳಿಗೆ ಆಶ್ರಯವಾಗಿದೆ. ಅಲ್ಲಿನ ದೊಡ್ಡ ಪ್ರಮಾಣದ ಅಲೆಗಳು ಸಾಕಷ್ಟು ಬಲಯುತವಾಗಿದ್ದು ಪರಿಣಾಮಕಾರಿಯಾಗಿದ್ದರೂ ಡುಗಾಂಗ್ ಗಳು ಅವುಗಳಿಂದ ತಪ್ಪಿಸಿಕೊಂಡು,ಜೊತೆಗೆ ಶಾರ್ಕ್ ಗಳಿಂದಲೂ ಪಾರಾಗುವ ಅವಕಾಶಗಳಿವೆ. ಈ ಡುಗಾಂಗ್ ಗಳ ನೆಲೆವಾಸವು ಸುಮಾರು 200 ಕಿ.ಮೀ ಉದ್ದವಾಗಿ ವಿಶಾಲ ತಳಹದಿ ಮೇಲಿದೆ.ಮಾನವ ನಿಬಿಡ ಪ್ರದೇಶದಿಂದ ದೂರವಿದೆ.ಇದರ ಜೀವನ ಅಧ್ಯಯನಕ್ಕೆ ಮತ್ತು ಉತ್ತಮ ರಕ್ಷಣೆಗೆ ಅನುಕೂಲ ದೊರಕುತ್ತದೆ.

ಸಣ್ಣ ಪ್ರಮಾಣದ ಸಂಖ್ಯೆಯಲ್ಲಿ ಡುಗಾಂಗ್ ದೊರೆಯುವ ಸ್ಥಳಗಳು: ಜೊಹರ್ ನೇರ ತೀರಗಳು (ಇದು ಜೊಹರ್ ಪ್ರದೇಶದಿಂದ ಮಲೆಷ್ಯಾ ಮತ್ತುಸಿಂಗಾಪೂರ್ಗಳನ್ನು ಪ್ರತ್ಯೇಕಿಸುತ್ತದೆ.), ಫಿಲಿಪೈನ್ಸ್ ಪಲವಾನ್,ನ ಪ್ರಾಂತಗಳು ರೊಂಬ್ಲೊನ್,ಗಿಮಾರಾಸಾ,ಅರೇಬಿಯನ್ ಸಮುದ್ರದಡೇವೊ ಒರಿಯೆಂಟಲ್ ಜೊತೆಗೆ ಪಾಕಿಸ್ತಾನ ಮತ್ತುಈಜಿಪ್ತ್ನ ಕೆಂಪು ಸಮುದ್ರದ ಪ್ರಾಂತಗಳು ಮರಾಸಾ ಅಬು ಧಾಬಿಯಲ್ಲಿನಮರಾಸಾ ಅಲಮ್ಇತ್ಯಾದಿ. ಪರ್ಸಿಯನ್ ಕೊಲ್ಲಿಯಲ್ಲಿರುವ ಇನ್ನುಳಿದ ಡುಗಾಂಗ್ ಗಳು ಮತ್ತೆ ವಿನಾಶದಂಚಿನಲ್ಲಿವೆ.ಪದೇ ಪದೇ U.S.-ಇರಾಕ್ ನಡುವಿನ ಸಂಘರ್ಷಗಳು ಸಮುದ್ರಕ್ಕೆ ಬೃಹತ್ ಪ್ರಮಾಣದ ತೈಲ ಸುರುವಂತಾಗಿ ಅದರಲ್ಲಿನ ಪ್ರಾಣಿಗಳು ಜೀವ ತೆರುವ ಸಂದರ್ಭ ಉಂಟಾಯಿತು. ಆದರೆ ಪರ್ಸಿಯನ್ ಕೊಲ್ಲಿಯಿರುವ ಇವುಗಳ ಸದ್ಯ ಸಂಖ್ಯೆಯು 7500 ರಷ್ಟಿದೆ ಎನ್ನಲಾಗಿದೆ ಆದರೆ ನಿಖರ ಮಾಹಿತಿ ಕೊರತೆ ಇದೆ.[೨೨]

ಆದರೆ ಒಕಿನವಾದಲ್ಲಿ ವಿನಾಶದಂಚಿಗೆ ತಲುಪಿರುವ ಡುಗಾಂಗ್ ಗಳ ಸಂಖ್ಯೆ 50 ಅಥವಾ ಅದಕ್ಕಿಂತ ಕಡಿಮೆ ಎನ್ನಲಾಗಿದೆ.[೨೩]

ಪರಿಸರ ವಿಜ್ಞಾನ ಮತ್ತು ಜೈವಿಕ ಇತಿಹಾಸಸಂಪಾದಿಸಿ

ಆಹಾರ ಸೇವನೆಸಂಪಾದಿಸಿ

 
ಮುಂದಿನ ಕಾಲಿನ ಸ್ನಾಯುಗಳು ವಯಸ್ಸಾದಂತೆ ವಿಭಿನ್ನತೆ ಪಡೆಯುತ್ತವೆ.

ಡುಗಾಂಗ್ ಗಳನ್ನು"ಸಮುದ್ರದ ಹಸುಗಳೊಂದಿ"ಗೆ ಉಲ್ಲೇಖಿಸಲಾಗುತ್ತದೆ,ಯಾಕೆಂದರೆ ಅವುಗಳ ಪ್ರಧಾನ ಆಹಾರವೆಂದರೆ ಸಮುದ್ರ ಹುಲ್ಲು. ಅವು ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನವಹಿಸುತ್ತವೆ.ಕೆಲವೇ ಕೆಲವು "ವಲಯದಲ್ಲಿ"ಅವುಗಳ ಸಮುದ್ರ ಹುಲ್ಲು ದೊರೆಯುತ್ತದೆ. ಕಡಲಾಕಳುಗಳಂತೆ ಡುಗಾಂಗ್ ಗಳು ಸಮುದ್ರ ಭಾಗದ ತಲಸ್ಪರ್ಶಿ ಸಸ್ಯಗಳ ಮೇಲೆ ಅವಲಂಬಿತವಾಗಿವೆ. ತಮ್ಮ ಸೌಟಿನಂತಹ ಮೂತಿಯಿಂದ ಅವು ತಳಭಾಗದ ಹುಲ್ಲನ್ನು ಬೇರುಸಮೇತ ಕಿತ್ತಿ ತಿನ್ನುವ ವಿಧಾನ ಬಳಸುತ್ತವೆ. ಇಲ್ಲಿ ಕಡಲಾಕಳಿಗಿಂತ ಡುಗಾಂಡ್ ನ ಹಲ್ಲುಗಳು ಆಹಾರ ಜಗಿಯಲು ಹೆಚ್ಚು ಅನುಕೂಲಕರವಾಗಿವೆ.

ಆಸ್ಟ್ರೇಲಿಯಾದ ಮೊರೆಟೊನ್ ಕೊಲ್ಲಿಯಲ್ಲಿನ ಡುಗಾಂಗ್ ಗಳು ಎರಡನ್ನೂ ಸಸ್ಯಾಹಾರ ಮತ್ತು ಮಾಂಸಾಹಾರ ಸೇವಿಸುತ್ತವೆ,ಸಮುದ್ರ ತಳದಲ್ಲಿ ಹುಲ್ಲಿನ ಕೊರತೆಯಾದಾಗ ಪಾಲಿಚಿಟಸ್ ಎಂಬ ಕ್ರಿಮಿ-ಕೀಟಗಳನ್ನು ಅದು ತಿನ್ನುತ್ತದೆ.[೨೪] ಅವು ಯಾವುದೇ ಸ್ಥಳದ ಶುದ್ದ ನೀರು ಕುಡಿಯಲು ಅವು ಹೊರಡುತ್ತವೆ. ಶುದ್ದ ನೀರು ಸಿಗದಿದ್ದರೆ ಅವು ಬದುಕುವುದು ಕಷ್ಟಕರ. ಆದರೆ ಈ ಶುದ್ದ ನೀರಿನ ಮೂಲಗಳ ಪ್ರದೇಶಗಳು ಕಡಿಮೆಯಾಗಿವೆ. ಡುಗಾಂಗ್ ಸಂಖ್ಯೆಯು ಬರಬರುತ್ತಾ ಇಳಿಮುಖವಾಗುತ್ತಿದೆ.[ಸೂಕ್ತ ಉಲ್ಲೇಖನ ಬೇಕು]

ಸಂತಾನೋತ್ಪತ್ತಿಸಂಪಾದಿಸಿ

ಎಡ |ಬೆರಳಿನ ಗುರುತು|ಡುಗಾಂಗ್ ತಾಯಿ ಮತ್ತು ಮರಿ ಈಸ್ಟ್ ತೈಮೂರ್ ನಿಂದ.

ಡುಗಾಂಗ್ ಗಳು ಒಂದು ಬಾರಿಗೆ ಒಂದೇ ಮರಿಗೆ ಜನ್ಮ ನೀಡುತ್ತವೆ.ಅವು ಗರ್ಭಾವಸ್ಥೆ ತಲುಪಲು 13 ತಿಂಗಳ ಕಾಲ ಸಮಯ ತೆಗೆದುಕೊಳ್ಳುತ್ತವೆ. ಮರಿಯು ಎರಡು ವರ್ಷಗಳ ಕಾಲ ತಾಯಿ ಪೋಷಣೆಯಲ್ಲಿದ್ದು 8-18 ರ ವಯಸ್ಸಿಗೆ ಪ್ರೌಢಾವಸ್ಥೆ ತಲುಪುತ್ತದೆ.ಇನ್ನಿತರ ಸಸ್ತನಿಗಲಿಗಿಂತ ಹೆಚ್ಚು ಸಮಯ ಇದಾಗಿದೆ. ಡುಗಾಂಗ್ ಗಳಿಗೆ ಸುದೀರ್ಘ ಕಾಲ ಅಂದರೆ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಬದುಕಿದರೂ ಹೆಚ್ಚು ಮರಿಗಳಿಗೆ ಜನ್ಮ ನೀಡುವಲ್ಲಿ ವಿಫಲವಾಗುತ್ತದೆ.[೨೫]

ಮಾನವರಿಗೆ ಉಪಯುಕ್ತವಾದವುಗಳುಸಂಪಾದಿಸಿ

ಪುರಾತನ ಪರಸ್ಪರ ಪ್ರತಿಕ್ರಿಯೆಸಂಪಾದಿಸಿ

 
ಇಪೊಹ್ ನ ಗುವಾ ತಾಂಬುನ್-ಡುಗಾಂಗ್ ನಿಯೊಲಿಥಿಕ್ ವಾಲ್ ಪೇಂಟಿಂಗ್

ಮಲೆಷ್ಯಾದ ಪೆರೆಕ್ ರಾಜ್ಯದ ಇಪೊಹ್ ನಗರದ ತಾಂಬುನ್ ಗವಿಯಲ್ಲಿ ಸುಮಾರು 5,000-ವರ್ಷಗಳಷ್ಟು ಹಳೆಯದಾದ ಪುರಾತನ ಚಿತ್ರವೊಂದು ನವಶಿಲಾಯುಗದಲ್ಲಿ ಬಿಡಿಸಿದ್ದು ಡುಗಾಂಗ್ ನನ್ನು ಬಿಂಬಿಸಿದೆ. ಇದನ್ನು ನಿಯಮಿತ ಕಾವಲು ಕಾಯುವ ಸಂದರ್ಭದಲ್ಲಿ 1959 ರಲ್ಲಿ ಲೆಫ್ಟಿನಂಟ್ ರಾವಲಿಂಗ್ ಅವರಿಂದ ಪತ್ತೆಯಾಯಿತು.

ಉಮ್ಮ್ ಅಲ್ -ಕ್ವೆವೇನ್ (UAE)ನಲ್ಲಿ ಜಲಜೀವಿ ಸಂಗ್ರಾಹಾರದಲ್ಲಿ ಡುಗಾಂಗ್ ನ 40 ತಲೆ ಬುರೆಡೆಗಳು ಫ್ರೆಂಚ್ ಪುರಾತತ್ವ ಮಿಶನ್ 2009 ರಲ್ಲಿ ನಡೆಸಿದ ಉತ್ಖನನದಲ್ಲಿ ದೊರೆತಿವೆ. 5140 BP (ಅಕಬ್ ಕಿರುದ್ವೀಪ).

ಆಗಿನ ಪ್ರಾಚೀನ ನವಯುಗ ಮತ್ತು ಬಾರೊಕ್ ಸಮಯದಲ್ಲಿ ವುಂಡರ್ಕುಮ್ಮೆರ್ ಗಳಲ್ಲಿ(ಇತಿಹಾಸದ ಸಂಗ್ರಾಹಾರ) ಡುಗಾಂಗ್ ಗಳ ಪ್ರದರ್ಶನ ನಡೆಯುತಿತ್ತು, ಅವುಗಳನ್ನು ಫಿಜಿ ಮನರಂಜನೆಗಳಲ್ಲಿ ಸೈಡ್ ಶೊಗಳಾಗಿ ತೋರಿಸಲಾಗುತಿತ್ತು.

ಡುಗಾಂಗ್ ಗಳು ಅಥವಾ ಕಡಲಾಕಳು ಕೊರೆದ ಬಿಲಗಳಲ್ಲಿ ಜನರು ಅವಿತುಕೊಳ್ಳುವ ಪರಿಪಾಠವಿತ್ತು.ಆಗಿನ ಹಳೆಯ ಕಾಲದ ಪರೀಕ್ಷೆಗಳಿಗೊಡ್ಡಲಾಗದವರು ಇದನ್ನು ಮಾಡುತ್ತಿದ್ದರು,ಇವುಗಳನ್ನು ತಾತ್ಕಾಲಿಕ ಪೂಜಾ ಟೆಂಟ್ ಗಳೆಂದೇ ಹೇಳಲಾಗುತಿತ್ತು.ಇದರ ಬಗ್ಗೆ ಬೈಬಲ್ ನಲ್ಲಿ "ಎಲ್ಲೆಲ್ಲೂ ನೀರಿನಲ್ಲಿರುವ ರೆಕ್ಕೆಗಳು ಮತ್ತು ಇನ್ನಿತರ ಪ್ರಾಣಿಗಳ ಬಿಟ್ಟು ಅಲ್ಲಿ ಇಸ್ರೇಲಿಯರ ಪೂಜಾ ದೇವತೆ ಇತ್ತೆಂದು ನಂಬುತ್ತಾರೆ."

ಸೆರೆಯಲ್ಲಿರುವ ಡುಗಾಂಗ್ಸಂಪಾದಿಸಿ

ವಿಶ್ವಾದ್ಯಾಂತ ಕೇವಲ ಆರು ಡುಗಾಂಗ್ ಗಳನ್ನು ಮಾತ್ರ ಸೆರೆಯಲ್ಲಿಡಲಾಗಿದೆ. ಎರಡು ಅತ್ಯಂತ ಆಕರ್ಷಣೀಯ ಅಂದರೆ ತೊಬಾ ಅಕ್ವೆರಿಯಮ್ತೊಬಾ, ಮಿಯೆ, ನಲ್ಲಿವೆ.(ಜಪಾನ್ ); ಇನ್ನೊಂದು ಗ್ರೇಸಿ ಎಂಬ ಹೆಸರಿನ,ಅಂಡರ್ ವಾಟರ್ ವರ್ಲ್ಡ್ ಸಿಂಗಾಪೂರ್ ನಲ್ಲಿದೆ.; a ನಾಲ್ಕನೆಯದ್ದು ಸೀ ವರ್ಲ್ಡ್ ಇಂಡೊನೇಶಿಯಾ,ಸ್ಥಳೀಯ ಮೀನುಗಾರನೊಬ್ಬನಿಗೆ ಇದು ದೊರೆತ ನಂತರ ಇದನ್ನು ಸೆರೆ ಹಿಡಿಯಲಾಗಿದೆ.ಇನ್ನೂ ಕೊನೆಯ ಎರಡೆಂದರೆ [೨೬](ಪಿಗ್, a 10-ವರ್ಷ-ವಯಸ್ಸಿನ ಗಂಡು, ಮತ್ತು ವುರು, a ನಾಲ್ಕು-ವರ್ಷದ-ಹೆಣ್ಣು) ಇವು ಮೊದಲು ಆಸ್ಟ್ರೇಲಿಯಾದಸೀ ವರ್ಲ್ಡ್ ನಗೊಲ್ಡ್ ಕೋಸ್ಟ್ ಕ್ವೀನ್ ಲ್ಯಾಂಡ್ನಲ್ಲಿದ್ದವು, ಅದರೆ ಕಳೆದ ಡಿಸೆಂಬರ್, 2008,ರಲ್ಲಿ ಸಿಡ್ನಿ ಅಕ್ವೇರಿಯಮ್.ಗೆ ಸ್ಥಳಾಂತರಿಸಲಾಗಿದೆ.[೨೭]

ಸಂರಕ್ಷಣೆಸಂಪಾದಿಸಿ

ಡುಗಾಂಗ್ ಗಳನ್ನು ಬಹುತೇಕ ಆಹಾರಕ್ಕಾಗಿ ಬೇಟೆಯಾಡಲಾಗುತ್ತದೆ,ಅವುಗಳ ವನ್ಯಜೀವಿ ವಲಯದಲ್ಲಿ ಅವುಗಳ ಮಾಂಸ ಮತ್ತು ಶರೀರದಲ್ಲಿನ ಎಣ್ಣೆಯನ್ನು ಬಳಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಡುಗಾಂಗ್ ಬೇಕಾಗುವ ಹುಲ್ಲುಹಾಸುಗಳು ಆಮ್ಲಜನಿಕದ ಕೊರತೆಯಿಂದ ನಶಿಸಿ ಹೋಗುತ್ತಿವೆ.ಇದು ಕೃಷಿ,ಕೈಗಾರಿಕೆಗಳ ಮಾಲಿನ್ಯದಿಂದ ಉಂಟಾಗುತ್ತದೆ.ಡುಗಾಂಗ್ ಗಳ ತ್ಯಾಜ್ಯಪದಾರ್ಥವು ಎಷ್ಟೋ ಪ್ರಾಣಿಗಳಿಗೆ ಆಹಾರವಾಗಿದೆ. ಅವುಗಳು ಜಲಭಾಗದ ಮೇಲ್ಭಾಗದಲ್ಲಿ ಸಂಚರಿಸುವಾಗ ಜಲಮೋಟಾರ್ ಗಳ ಪೈಪೋಟಿ ಸ್ಪರ್ಧೆಗಳಿಗೆ ಸಿಗುವ ಇವು ಗಾಯಗೊಂಡು ಮರಣವನ್ನಪ್ಪುತ್ತವೆ. ಅವುಗಳ ವಿಶಾಲ ಗಾತ್ರದಿಂದಾಗಿ ಅವುಗಳನ್ನು ಭಕ್ಷಿಸುವ ಕೆಲವೇ ಕೆಲವು ಪ್ರಾಣಿಗಳಿವೆ. ಅವುಗಳಲ್ಲಿಶಾರ್ಕ್ಗಳು,ಕೊಲ್ಲುವ ತಿಮಿಂಗಲುಗಳು ಮತ್ತುಉಪ್ಪು ನೀರಿನ ಮೊಸಳೆಗಳು.

U.S.ಮತ್ತು ಜಪಾನೀ ಸರ್ಕಾರಗಳು ಒಕಿನವಾದ ವಜ್ರದ ಹರಳುಗಳ ದೊರೆವ ಹತ್ತಿರದ ಜಾಗ ನಾಗೊದ ಹೆನೊಕೊ ಬಳಿ ತಮ್ಮ ಮಿಲಿಟರಿ ಮೂಲಗಳನ್ನು ಸ್ಥಾಪಿಸಲು ಸಜ್ಜಾಗಿವೆ. ಆದರೆ ಒಕಿನವಾದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳ ಹುಟ್ಟಿಗೆ ಕಾರಣವಾಗಿದೆ,ಪರಿಸರ ರಕ್ಷಣೆ ಮತ್ತು ಡುಗಾಂಗ್ ಗಳ ಅಪರೂಪದ ತಾಣವಾಗಿರುವ ಇಲ್ಲಿ ಈ ಮಿಲಿಟರಿ ಬೇಸ್ ಬೇಡ ಎಂದು ಅಲ್ಲಿನ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ಗ್ರೀನ್ ಪೀಸ್ ಕೂಡಾ ಅಲ್ಲಿ ಬೇಸ್ ಗಳ ಮತ್ತು ವಿಮಾನ ತಳಗಳ ನಿರ್ಮಾಣಕ್ಕೆ ತಮ್ಮ ತೀವ್ರ ವಿರೋಧ ಮಾಡಿವೆ.ಇದು ಒಕಿನವಾದ ಪರಿಸರಕ್ಕೆ ಹಾನಿ ಮತ್ತು ಜೈವಿಕ ಲೋಕಕ್ಕೆ ಒಂದು ಅಪಾಯಕಾರಿ ಬೆಳವಣಿಗೆ ಎಂದು ಒಕ್ಕೊರಲಿನಿಂದ ಪ್ರತಿಭಟಿಸುತ್ತಿವೆ.[೨೮]

ಪಾಪುವಾ ನಿವ್ ಗಯಾನಾದ ಸುತ್ತಮುತ್ತಲಿನ ಜಲಾವೃತ್ತ ಪ್ರದೇಶದಲ್ಲಿ ಜನರು ಡುಗಾಂಗ್ ಮತ್ತು ಅದರ ಭಕ್ಷಕಗಳನ್ನೂ ಒಟ್ಟಿಗೇ ಬೇಟೆಯಾಡುತ್ತಿದ್ದಾರೆ.ಉದಾಹರಣೆಗೆ ಶಾರ್ಕಗಳು.

ಇವನ್ನೂ ನೋಡಿಸಂಪಾದಿಸಿ

 • ಎವುಲುಶನ್ ಆಫ್ ಸೈರೆನಿಯನ್ಸ್
 • ಡುಗಾಂಗ್(ವೀಬಲ್ಸ್ ಕಾರ್ಟೂನ್)
 • ಡಿವ್ ಗಾಂಗ್

ಉಲ್ಲೇಖಗಳುಸಂಪಾದಿಸಿ

 1. Shoshani, J. (2005). "Order Sirenia". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. p. 92. ISBN 978-0-8018-8221-0. OCLC 62265494.CS1 maint: ref=harv (link)
 2. Marsh, H. (2008). Dugong dugon. In: IUCN 2008. IUCN Red List of Threatened Species. Retrieved 29 December 2008.
 3. ೩.೦ ೩.೧ ೩.೨ ೩.೩ ೩.೪ ೩.೫ ಮಾರ್ಶ್ et al. 2002. ಡುಗಾಂಗ್: ಸ್ಟೇಟಸ್ ರಿಪೊರ್ಟ್ಸ್ ಅಂಡ್ ಆಕ್ಷನ್ ಪ್ಲ್ಯಾನ್ಸ್ ಫಾರ್ ಕಂಟ್ರೀಸ್ ಅಂಡ್ ಟೆರಿಟೆರೀಸ್ Archived 2007-05-08 at the Wayback Machine.. IUCN.
 4. ಲಾಲೆರ್ et al. 2002. ಡುಗಾಂಗ್ಸ್ ಇನ್ ದಿ ಗ್ರೇಟ್ ಬ್ಯಾರಿಯರ್ ರೀಫ್:ಕರೆಂಟ್ ಸ್ಟೇಟ್ ಆಫ್ ನಾಲೇಜ್ Archived 2014-02-21 at the Wayback Machine.. CRCಫಾರ್ ದಿಗ್ರೇಟ್ ಬ್ಯಾರಿಯರ್ ರೀಫ್ ವರ್ಲ್ಡ್ ಹೆರಿತೇಜ್ ಏರಿಯಾ.
 5. ಮೇಯರ್ಸ್, P. 2002. ಡುಗಾಂಗಿಡೆ. ಯುನ್ವರಸಿಟಿ ಆಫ್ ಮಿಚಿಗನ್ ಮ್ಯುಜಿಯಮ್ ಆಫ್ ಜೂವಾಲಜಿ. 2007ರ ಮಾರ್ಚ್ 30ರಂದು ಗುರುತಿಸಲಾಯಿತು.
 6. ೬.೦ ೬.೧ ೬.೨ ಮಾರ್ಶ್, ಹೆಲೆನಾ. ಫೌನಾ ಆಫ್ ಆಸ್ಟ್ರೇಲಿಯಾ: ವಾಲ್ಯುಮ್ 1B ಮಮ್ಮಲಿಯಾ: ಚಾಪ್ಟರ್ 57 ಡುಗಾಂಗಿಡೆ. CSIRO. ISBN 978-0-644-06056-1.
 7. ಸ್ಪೀಸಿಸ್ ಡುಗಾಂಗ್ Archived 2010-01-11 at the Wayback Machine. ಕಾಂಜರ್ವೇಶನ್ ಮ್ಯಾನೇಜ್ ಮೆಂಟ್ ಇನ್ ಸ್ಟಿಟುಟ್.
 8. ೮.೦ ೮.೧ ೮.೨ ರೀವ್ಸ್ ಎಟ್ ಅಲ್. 2002. ನ್ಯಾಶನಲ್ ಔದುಬೊನ್ ಸೊಸೈಟಿ ಗಐಡ್ ಟು ಮರೀನ್ ಮಮ್ಮಲ್ಸ್ ಆಫ್ ದಿ ವರ್ಲ್ಡ್ . ನಾಪ್. ಐಎಸ್‌ಬಿಎನ್ 0-7195-5756-9, ಪಿಪಿ. 77-81
 9. ಡುಗಾಂಗ್ ಡುಗಾನ್ . ದಿ ಪಾಲಿಯೊಬಯಾಲಜಿ ಡಾಟಾಬೇಸ್ ೨೦೦೮ ರ ಜುಲೈ 22.
 10. ಟ್ರೆಚೆಸಸ್. ದಿ ಪಾಲಿಯೊಬಯಾಲಜಿ ಡಾಟಾಬೇಸ್ ೨೦೦೮ ರ ಜುಲೈ 22.
 11. ಡುಗಾಂಗ್. ದಿ ಪಾಲಿಯೊಬಯಾಲಜಿ ಡಾಟಾಬೇಸ್ ೨೦೦೮ ರ ಜುಲೈ 22.
 12. ಡುಗಾಂಗಿಡೆ. ದಿ ಪಾಲಿಯೊಬಯಾಲಜಿ ಡಾಟಾಬೇಸ್ ೨೦೦೮ ರ ಜುಲೈ 22.
 13. ಡುಗಾಂಗಿನೆ. ದಿ ಪಾಲಿಯೊಬಯಾಲಜಿ ಡಾಟಾಬೇಸ್. ೨೦೦೮ ರ ಜುಲೈ 22.
 14. ವಿಂಗರ್, ಜೆನ್ನಿಫರ್. 2000. ವಾಟೀಸ್ ಇನ್ ಎ ನೇಮ್ ಮನಟೀಸ್ ಅಂಡ್ ಡುಗಾಂಗ್ಸ್. ಸ್ಮಿತ್ ಸೊನಿಯನ್ ನ್ಯಾಶನಲ್ ಜೂವಾಲಾಜಿಕಲ್ ಪಾರ್ಕ್. ೨೦೦೮ ರ ಜುಲೈ 22.
 15. Fox, David L. (1999). "ADW: Dugong dugon: Information". Animal Diversity Web. University of Michigan Museum of Zoology. Retrieved 2007-04-29.
 16. ರೀಪ್,ಆರ್.ಎಲ್. ಎಟ್ ಆಲ್. (2002). "ಟ್ಯಾಕ್ಟೈಲ್ ಹೇಯರ್ಸ್ ಆನ್ ದಿ ಪೊಸ್ಟ್ ಕ್ರೇನಿಯಲ್ ಬಾಡಿ ಇನ್ ಫ್ಲೊರಿಡಾ ಮನಾಟೀಸ್: ಎ ಮಮ್ಮಲಿಯನ್ ಲ್ಯಾಟರಲ್ ಲೈನ್?". ಬ್ರೇನ್, ಬಿವೇಹಿವಿಯರ್ ಅಂಡ್ ಎವ್ಯುಲುಶನ್ 59 , 141-154.
 17. ಸೆಲ್ಫ್-ಸಲ್ಲ್ವನ್, ಕಾರಿನ್. ಎವುಲುಶನ್ ಆಫ್ ಸೈರೆನಿಯಾ Archived 2006-12-31 at the Wayback Machine.. www.sirenian.org. 2007ರ ಮಾರ್ಚ್ 30ರಂದು ಗುರುತಿಸಲಾಯಿತು.
 18. ವಾಲರ್ ಎಟ್ ಅಲ್. 1996. ಸೀಲೈಫ್: ಎ ಕಂಪ್ಲೀಟ್ ಗಐಡ್ ಟು ದಿ ಮರೀನ್ ಎನ್ವಿರಾನ್ ಮೆಂಟ್ . ಸ್ಮಿತ್ ಸೊನಿಯನ್ ಇನ್ ಸ್ಟಿಟುಶನ್. ISBN 1-56098-633-6. pp. 413-420
 19. Myers, Phil (2000). "ADW: Sirenia: Information". Animal Diversity Web. University of Michigan Museum of Zoology. Retrieved 2007-05-13.
 20. ಡುಗಾಂಗ್ Archived 2008-04-19 at the Wayback Machine.. IFAW ಮರುಪಡೆದದ್ದು 25 ಫೆಬ್ರವರಿ 2007.
 21. [13]ವುಡ್‌ರವರ ದಿ ಗಿನ್ನಿಸ್‌ ಬುಕ್‌ ಆಫ್‌ ಎನಿಮಲ್ ಫ್ಯಾಕ್ಟ್ಸ್‌ ಆಂಡ್‌ ಫೀಯಟ್ಸ್‌. ಸ್ಟೆರ್ಲಿಂಗ್ ಪಬ್ ಕಂ ಇಂಕಾ(1983), ISBN 978-0-85112-235-9
 22. "Case Study". American.edu. Retrieved 2009-07-10.
 23. Galvin, Peter. "Saving the Okinawa dugong". Center for Biological Diversity web site. Center for Biological Diversity. Retrieved 2008-05-15. Cite has empty unknown parameter: |coauthors= (help); External link in |work= (help)
 24. ಬೆರ್ಟಾ,ಅನ್ನಾಲಿಸಾ,ಜೇಮ್ಸ್ ಎಲ್.ಸುಮಿಕ್, ಕಿಟ್ ಎಂ. ಕೊವಕ್ಸ್:ಮರೀನ್ ಮಮ್ಮಲ್ಸ್: ಇವ್ಯುಲುಶನರಿ ಬೈಲಯಾಜಿ ,ಅಮೆಸ್ಟರ್ ಡ್ಯಾಮ್ ಎಲ್ಸವೆರ್: ISBN 0-14-130220-8.
 25. Anderson, Paul K. (1984). Macdonald, D. (ed.). The Encyclopedia of Mammals. New York: Facts on File. pp. 298–299. ISBN 0-87196-871-1.
 26. "Discover a New World at SeaWorld Indonesia - Dugong". Seaworldindonesia.com. 2005-03-16. Archived from the original on 2009-12-02. Retrieved 2009-07-10.
 27. "Dugongs in Sydney Aquarium". Sydneyaquarium.com.au. Archived from the original on 2009-10-17. Retrieved 2009-07-10.
 28. "Take Action: Save the dugongs | Greenpeace International". Greenpeace.org. 2003-03-17. Archived from the original on 2008-09-06. Retrieved 2009-07-10.

ಬಾಹ್ಯ ಕೊಂಡಿಗಳುಸಂಪಾದಿಸಿ