ರೂಪಾ ದಿವಾಕರ್ ಮೌದ್ಗೀಲ್ (ಡಿ. ರೂಪಾ) ಕರ್ನಾಟಕದಾವಣಗೆರೆ ಯಿಂದ ಬಂದ ಒಬ್ಬ ಭಾರತೀಯ ಪೊಲೀಸ್ ಸೇವಾ (ಐಪಿಎಸ್) ಅಧಿಕಾರಿಯಾಗಿದ್ದಾರೆ. ಇವರು ಭಾರತೀಯ ಪೊಲೀಸ್ ಸೇವಾ (ಐಪಿಎಸ್) ಅಧಿಕಾರಿಯಾದ ಕರ್ನಾಟಕದ ಪ್ರಥಮ ಮಹಿಳೆಯಾಗಿದ್ದಾರೆ. ರಾಜಕೀಯ ವ್ಯಕ್ತಿಗಳ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಇದರ ಪರಿಣಾಮವಾಗಿ ಇವರ ವೃತ್ತಿಯಲ್ಲಿ ೪೦ ಕ್ಕೂ ಅಧಿಕ ಬಾರಿ ವರ್ಗಾವಣೆಗೊಂಡಿದ್ದಾರೆ.[] ಪ್ರಸ್ತುತ ಅವರು ಕರ್ನಾಟಕ ಮತ್ತು ಬೆಂಗಳೂರಿನ ಎರಡನೇ ಅತ್ಯುನ್ನತ ಸ್ಥಾನವಾದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿಪಿ) ಅಧಿಕಾರಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಗೃಹ ರಕ್ಷಕ ದಳದ ಹೆಚ್ಚುವರಿ ಕಮಾಂಡೆಂಟ್ ಜನರಲ್ ಮತ್ತು ನಾಗರಿಕ ರಕ್ಷಣಾ ವಿಭಾಗದಲ್ಲಿ ಎಕ್ಸ್-ಅಫ಼ೀಸಿಯೋ ಹೆಚ್ಚುವರಿ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಇದಕ್ಕಿಂತಲೂ ಮೊದಲು ಅವರು ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗಕ್ಕೆ ಕಮೀಷನರ್ ಆಗಿಯೂ ಮತ್ತು ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು.[]

ಡಿ. ರೂಪಾ
ಭಾರತೀಯ ಪೊಲೀಸ್ ಸೇವಾ (ಐಪಿಎಸ್) ಅಧಿಕಾರಿ
ಜನನ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಮನಃಶಾಸ್ರ್ತ ವಿಭಾಗದಲ್ಲಿ ಎಂ.ಎ.
ಶಿಕ್ಷಣ ಸಂಸ್ಥೆಬೆಂಗಳೂರು ವಿಶ್ವವಿದ್ಯಾಲಯ
ವೃತ್ತಿಐಪಿಎಸ್ ಅಧಿಕಾರಿ
ಗಮನಾರ್ಹ ಕೆಲಸಗಳುಐಪಿಎಸ್ ಅಧಿಕಾರಿಯಾದ ಕರ್ನಾಟಕದ ಪ್ರಥಮ ಮಹಿಳೆ

ಬಾಲ್ಯ ಮತ್ತು ಜೀವನ

ಬದಲಾಯಿಸಿ

ಡಿ. ರೂಪಾ ಹುಟ್ಟಿದ್ದು ಕರ್ನಾಟಕದ ದಾವಣಗೆರೆಯಲ್ಲಿ. ಅವರ ತಂದೆ ಜೆ. ಎಚ್. ದಿವಾಕರ್, ಒಬ್ಬ ನಿವೃತ್ತ ಇಂಜಿನಿಯರ್. ತಾಯಿ ಹೇಮಾವತಿ ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ತಂಗಿ ರೋಹಿಣಿ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.[] ಅವರು ತಮ್ಮ ಬಿ.ಎ. ಪದವಿಯನ್ನು ಕರ್ನಾಟಕದ ಕುವೆಂಪು ವಿಶ್ವವಿದ್ಯಾಲಯದಿಂದ ಸ್ವರ್ಣ ಪದಕದೊಂದಿಗೆ ಮುಗಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಮನಃಶಾಸ್ರ್ತ ವಿಭಾಗದಲ್ಲಿ ಎಂ.ಎ. ಪದವಿಯನ್ನು ಪಡೆದರು.[] ಡಿ. ರೂಪಾ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ನೃತ್ಯಗಾರ್ತಿಯಾಗಿಯೂ ತರಬೇತಿ ಪಡೆದಿದ್ದಾರೆ. ಇತ್ತೀಚೆಗೆ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರಲ್ಲಿ ಸ್ಪೂರ್ತಿ ತುಂಬುವಂತಹ ಮ್ಯೂಸಿಕ್ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.[] ೨೦೧೩ ರಲ್ಲಿ ಅವರು ಮುನೀಶ್ ಮೌದ್ಗೀಲ್ ಅವರನ್ನು ಮದುವೆಯಾದರು. ಮುನೀಶ್ ಐಐಟಿ ಮುಂಬೈನಲ್ಲಿ ಓದಿದ್ದವರು. ಅವರು ಐ.ಎ.ಎಸ್.ನಲ್ಲಿ ೮ ನೇ ಶ್ರೇಣಿ ಪಡೆದಿದ್ದರು. ಪ್ರಸ್ತುತ, ಐ.ಎ.ಎಸ್. ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಅನಘಾ ಮತ್ತು ರೊಶಿಲ್ ಇಬ್ಬರು ಮಕ್ಕಳಿದ್ದಾರೆ.

ಉದ್ಯೋಗ

ಬದಲಾಯಿಸಿ
 
ಡಿ. ರೂಪಾ

ಡಿ. ರೂಪಾ ಅವರು ೨೦೦೦ ದಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಭಾರತದಲ್ಲಿ ೪೩ ನೇ ಶ್ರೇಣಿಯೊಂದಿಗೆ ಉತ್ತೀರ್ಣರಾದರು. ಹೈದರಾಬಾದಿನ, ಸರದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾದೆಮಿಯಲ್ಲಿ ತರಬೇತಿಯನ್ನು ಪಡೆದರು. ಅವರು ತರಬೇತಿ ಗುಂಪಿನಲ್ಲಿಯೇ ೫ ನೇ ಶ್ರೇಣಿಯೊಂದಿಗೆ ಉತ್ತೀರ್ಣರಾಗಿ ಕರ್ನಾಟಕ ಕೆಡೇರ್ ಆದರು. ತರಬೇತಿಯ ನಂತರ ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ಸುಪರಿಂಟೆಂಡೆಂಟ್ (ಎಸ್.ಪಿ) ಆಗಿ ನೇಮಕಗೊಂಡರು. ಬೆಂಗಳೂರಿಗೆ ವರ್ಗಾವಣೆಯಾಗುವ ಮೊದಲು ಅವರು ಬೀದರ್ ನ ಗದಗ ಜಿಲ್ಲೆಯಲ್ಲಿ ಎಸ್.ಪಿ.ಯಾಗಿ, ಕೊನೆಗೆ ಯಾದಗಿರಿಯಲ್ಲಿ ಸೇವೆ ಸಲ್ಲಿಸಿದ್ದರು. ೨೦೦೭ ರಲ್ಲಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಮತ್ತು ಪ್ರಸ್ತುತ ಕೇಂದ್ರ ಸಚಿವೆಯಾಗಿರುವ ಉಮಾಭಾರತಿಯವರನ್ನು, ಹುಬ್ಬಳ್ಳಿಯ ಕೋರ್ಟ್ ಕೇಸಿನ ವಿಚಾರವಾಗಿ ಬಂಧಿಸುವ ಅಧಿಕಾರವನ್ನು ನೀಡಲಾಗಿತ್ತು. ೨೦೦೮ ರಲ್ಲಿ ಮಾಜಿ ಸಚಿವರಾದ ಯಾವಗಲ್ ರನ್ನು ಬಂಧಿಸಿದ್ದರು. ಇದೇ ಕೇಸ್ ವಿಚಾರವಾಗಿ ಅವರ ಜೊತೆ ಸಹುದ್ಯೋಗಿಯಾಗಿದ್ದ ಡಿ.ಎಸ್.ಪಿ ಮಸೂತಿಯವರನ್ನು ಯವಗಲ್ ಅವರಿಗೆ ರಕ್ಷಣೆ ನೀಡುತ್ತಿದ್ದಾರೆಂಬ ಕಾರಣಕ್ಕೆ ಅಮಾನತುಗೊಳಿಸಲಾಗಿತ್ತು. ೨೦೧೩ ರಲ್ಲಿ ಸೈಬರ್-ಕ್ರೈಮ್ ಪೊಲೀಸ್ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರಿಂದಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಭಾರತದ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಎನಿಸಿಕೊಂಡರು. ಬೆಂಗಳೂರಿನಲ್ಲಿ, ಸಿಟಿ ಆರ್ಮ್ಡ್ ರಿಸರ್ವ್ ವಿಭಾಗದ ಡಿ.ಎಸ್.ಪಿ. ಆಗಿದ್ದಾಗ, ೮೧ ರಾಜಕೀಯ ವ್ಯಕ್ತಿಗಳ ೨೧೬ ಮಂದಿ ಅನಧಿಕೃತ ಬಂದೂಕುಧಾರಿ (ಗನ್ ಮೆನ್) ಗಳನ್ನು ಹಿಂಪಡೆದುಕೊಂಡರು. ಅಷ್ಟು ಮಾತ್ರವಲ್ಲದೇ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳ ಬಳಿಯಿದ್ದ ಅನಧಿಕೃತ ೮ ಹೊಸ ಎಸ್.ಯು.ವಿ. ಗಳನ್ನು ವಿಭಾಗಕ್ಕೆ ಹಿಂತೆಗೆದುಕೊಂಡರು. ೨೦೧೭ ರ ಜುಲೈ, ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಾಗಿ ನೇಮಕಗೊಂಡರು. ಐಐಎಡಿಎಂಕೆ (ಅಮ್ಮ) ದ ಕಾರ್ಯದರ್ಶಿ, ವಿ.ಕೆ. ಶಶಿಕಲಾ ಅವರು ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸವಲತ್ತುಗಳನ್ನು ಹೊಂದುತ್ತಿದ್ದಾರೆ ಎಂಬ ಮಾಹಿತಿಯನ್ನು ಡಿ. ರೂಪಾ ಅವರು ಬಯಲಿಗೆಳೆದರು. ಮಾತ್ರವಲ್ಲದೆ, ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನೀರೀಕ್ಷಕ ಸತ್ಯನಾರಾಯಣರಾವ್ ಅವರಿಗೆ ಒಪ್ಪಿಸಿದ ವರದಿಯಲ್ಲಿ, ಶಶಿಕಲಾ ಅವರಿಗೆ ಜೈಲಿನ ಒಳಗೆ ವಿಶೇಷ ವ್ಯವಸ್ಥೆಗಳನ್ನು ನೀಡಿದ್ದು ಮಾತ್ರವಲ್ಲದೆ, ಅಡುಗೆ ಮನೆಯ ವ್ಯವಸ್ಥೆ ಮತ್ತು ಆರಾಮ ಸಂದರ್ಶನ ಸಮಯವನ್ನು ೨ ಕೋಟಿ ಲಂಚ ತೆಗೆದುಕೊಂಡು ಜೈಲು ಅಧಿಕಾರಿಗಳು ಅವ್ಯವಹಾರ ಮಾಡಿದ್ದನ್ನು ಬಯಲಿಗೆಳೆದಿದ್ದಾರೆ.[]

ಪ್ರಶಸ್ತಿಗಳು

ಬದಲಾಯಿಸಿ
  • ಡಿ. ರೂಪಾ ಅವರು ೨೦೧೬ ಮತ್ತು ೨೦೧೭ ರಲ್ಲಿ ಎರಡು ಬಾರಿ ರಾಷ್ಟ್ರಪತಿ ಪೊಲೀಸ್ ಪದಕ ವನ್ನು ಪಡೆದಿರುತ್ತಾರೆ.[]
  • ಜಿ-ಫೈಲ್ಸ್ ಗವರ್ನೆನ್ಸ್ ಪ್ರಶಸ್ತಿ ೨೦೧೮. (ಎಕ್ಸೆಪ್ಷನಲ್ ಕಾಂಟ್ರಿಬ್ಯೂಷನ್ ಅವಾರ್ಡ್) []

ಬಾಹ್ಯ ಸಂಪರ್ಕ

ಬದಲಾಯಿಸಿ
  • ಡಿ. ರೂಪಾ ಅವರು ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರಲ್ಲಿ ಸ್ಪೂರ್ತಿ ತುಂಬಲು ತಯಾರಿಸಿದ ಮ್ಯೂಸಿಕ್ ವೀಡಿಯೋ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2018-09-10. Retrieved 2018-09-25.
  2. https://www.prajavani.net/news/article/2017/07/17/506881.html
  3. https://kannada.oneindia.com/literature/people/2012/0308-woman-of-substance-d-roopa-moudgil-aid0038.html
  4. "ಆರ್ಕೈವ್ ನಕಲು". Archived from the original on 2017-08-07. Retrieved 2018-09-25.
  5. https://www.ndtv.com/karnataka-news/ips-officer-who-took-on-sasikala-releases-music-video-on-womens-day-1821964
  6. https://www.udayavani.com/english/news/state/226006/sasikala-jail-bribery-case-d-roopa-served-notice
  7. https://timesofindia.indiatimes.com/city/bengaluru/presidents-medal-for-roopa-who-exposed-alleged-jail-irregularities/articleshow/60713529.cms
  8. https://kannada.oneindia.com/news/new-delhi/ips-officer-d-roopa-gets-g-files-award-155910.html
"https://kn.wikipedia.org/w/index.php?title=ಡಿ._ರೂಪಾ&oldid=1055606" ಇಂದ ಪಡೆಯಲ್ಪಟ್ಟಿದೆ