ಜ್ಯೋತಿ ಸ್ವರೂಪಿಣಿ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಜ್ಯೋತಿ ಸ್ವರೂಪಿಣಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬8 ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಜ್ಯೋತಿರಾಗಅಥವಾ ಜ್ಯೋತಿ ಎಂದು ಹೆಸರಿಸಿದ್ದಾರೆ.[೧][೨] .
ರಾಗ ಸ್ವರೂಪ ಮತ್ತು ಲಕ್ಷಣ
ಬದಲಾಯಿಸಿಇದು ಹನ್ನರಡನೆಯ ಆದಿತ್ಯ ಚಕ್ರದ ಎರಡನೆಯ ರಾಗ.ಇದರ ನೆನೆಪಿನ ಹೆಸರು ಆದಿತ್ಯ-ಶ್ರಿ ನೆನಪಿನ ನುಡಿಕಟ್ಟು:ಸ ರು ಗು ಮಿ ಪ ಧ ನಿ [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೩ ಗ೩ ಮ೨ ಪ ದ೧ ನಿ೨ ಸ
ಅವರೋಹಣ ಸ ನಿ೨ ದ೧ ಪ ಮ೨ ಗ೩ ರಿ೩ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಷಟ್‍ಶೃತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕೈಶಿಕಿ ನಿಷಾಧ.ಇದು ೩೨ನೆಯ ಮೇಳಕರ್ತ ರಾಗವಾದ ರಾಗವರ್ಧಿನಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
ಬದಲಾಯಿಸಿಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.
ಜನಪ್ರಿಯ ರಚನೆಗಳು
ಬದಲಾಯಿಸಿಈ ರಾಗದಲ್ಲಿ ಹಲವಾರು ರಚನೆಗಳಿದ್ದು, ಕೆಲವು
- ಆನಂದಮಾಯಮನವೆ- (ವಾಲಾಜಪೇಟೆ ವೆಂಕಟರಮಣ ಭಾಗವತರ್)
- ಗಾನಾಮೃತ ಪಾನಮ್- ಕೋಟೀಶ್ವರ ಅಯ್ಯರ್
- ಜ್ಯೋತಿಸ್ವರೂಪಿಣಿ- ಪೆರಿಯಸಾಮಿ ತೂರನ್
- ಶ್ರೀ ಗಾಯತ್ರಿ ಭಕ್ತ ದುರಿತ- ಎಂ. ಬಾಲಮುರಳಿ ಕೃಷ್ಣ
- ನನ್ನಬ್ರೋವು ಕಾಮಾಕ್ಷಿ
ಸಂಬಂಧಿತ ರಾಗಗಳು
ಬದಲಾಯಿಸಿಗ್ರಹಭೇದಮ್ ಸೂತ್ರವನ್ನು ಜ್ಯೋತಿ ಸ್ವರೂಪಿಣಿ ರಾಗಕ್ಕೆ ಅನ್ವಯಿಸಿದಾಗ ಯಾವುದೇ ರಾಗಗಳು ದೊರೆಯುವುದಿಲ್ಲ.