ಜ್ಞಾನವಿಜ್ಞಾನಯೋಗಃ

ಶ್ರೀ ಭಗವಂತನು ಹೀಗೆಂದನು: ಅರ್ಜುನ! ನನ್ನಲ್ಲಿಯೇ ಆಸಕ್ತಚಿತ್ತನಾಗಿ ನನ್ನನ್ನೇ ಆಶ್ರಯವೆಂದು ತಿಳಿದು ಯೋಗಾಭ್ಯಾಸ ಮಾಡುತ್ತಿದ್ದರೆ, ನೀನು ನನ್ನ ಸಮಗ್ರ ಸ್ವರೂಪವನ್ನು (ಸಗುಣ ಮತ್ತು ನಿರ್ಗುಣ ರೂಪಗಳೆರಡೂ)ನಿಃಸಂಶಯವಾಗಿ ಹೇಗೆ ತಿಳಿದುಕೊಳ್ಳಬಹುದೋ ಅದನ್ನು ಹೇಳುತ್ತೇನೆ ಕೇಳು.

ಭಗವದ್ಗೀತೆ

Aum
ಅಧ್ಯಾಯಗಳು
  1. ಅರ್ಜುನ ವಿಷಾದ ಯೋಗ
  2. ಸಾಂಖ್ಯಯೋಗಃ
  3. ಕರ್ಮಯೋಗಃ
  4. ಜ್ಞಾನಯೋಗಃ
  5. ಸಂನ್ಯಾಸಯೋಗಃ
  6. ಧ್ಯಾನಯೋಗಃ
  7. ಜ್ಞಾನವಿಜ್ಞಾನಯೋಗಃ
  8. ಅಕ್ಷರಬ್ರಹ್ಮಯೋಗಃ
  9. ರಾಜವಿದ್ಯಾರಾಜಗುಹ್ಯಯೋಗಃ
  10. ವಿಭೂತಿಯೋಗಃ
  11. ವಿಶ್ವರೂಪದರ್ಶನಯೋಗಃ
  12. ಭಕ್ತಿಯೋಗಃ
  13. ಕ್ಷೇತ್ರಕ್ಷೇತ್ರಜ್ಞಯೋಗಃ
  14. ಗುಣತ್ರಯವಿಭಾಗಯೋಗಃ
  15. ಪುರುಷೋತ್ತಮಯೋಗಃ
  16. ದೈವಾಸುರಸಂಪದ್ವಿಭಾಗಯೋಗಃ
  17. ಶ್ರದ್ಧಾತ್ರಯವಿಭಾಗಯೋಗಃ
  18. ಮೋಕ್ಷಸಂನ್ಯಾಸಯೋಗಃ

ಶ್ರೀಭಗವಾನುವಾಚ:
ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ಮದಾಶ್ರಯಃ ।
ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛೃಣು ।।೧।।
ಜ್ಞಾನಂ ತೇಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ ।
ಯಜ್ಞಾತ್ವಾ ನೇಹ ಭೂಯೋನ್ಯಜ್ಞ್ಜಾತವ್ಯಮವಶಿಷ್ಯತೇ ।।೨।।

ನಾನು ನಿನಗೆ ವಿಜ್ಞಾನ ಸಹಿತವಾದ ಜ್ಞಾನವನ್ನು ಪೂರ್ತಿಯಾಗಿ ತಿಳಿಸಿಕೊಡುವೆನು. ಅದನ್ನು ತಿಳಿದಮೇಲೆ ಈ ಲೋಕದಲ್ಲಿ ಮತ್ತೆ ತಿಳಿಯಬೇಕಾದದ್ದು ಏನೂ ಉಳಿಯುವುದಿಲ್ಲ.

ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ ।
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ।।೩।।

ಎಷ್ಟೋ ಸಾವಿರಜನರಲ್ಲಿ ಯಾವನೋ ಒಬ್ಬನು ಸಿದ್ಧಿಯನ್ನು ಪಡೆಯುವುದಕ್ಕಾಗಿ ಪ್ರಯತ್ನಿಸುತ್ತಾನೆ. ಹಾಗೆ ಪ್ರಯತ್ನಿಸುತ್ತಿರುವ ಸಿದ್ಧರಲ್ಲಿ ಯಾವನೋ ಒಬ್ಬನು ನನ್ನನ್ನು ಸರಿಯಾಗಿ ಅರಿತುಕೊಳ್ಳುತ್ತಾನೆ.


ಭೂಮಿರಾಪೋನಲೋ ವಾಯುಃ ಖಂ ಮನೋ ಬುದ್ಧಿರೇವ ಚ ।
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ।।೪।।

ಪೃಥ್ವಿ, ಆಪ್, ಅಗ್ನಿ, ವಾಯು, ಆಕಾಶ - ಈ ಪಂಚಭೂತಗಳ ಸೂಕ್ಷ್ಮತನ್ಮಾತ್ರೆಗಳು ಐದು, ಮನಃಕಾರಣವಾದ ಅಹಂಕಾರ, ಅಹಂಕಾರಕ್ಕೆ ಕಾರಣವಾದ ಬುದ್ಧಿಯೆಂಬ ಮಕತ್ತತ್ತ್ವ, ಅಹಂಕಾರವೆಂಬ ಅವಿದ್ಯೆಯಿಂದ ಕೂಡಿದ ಅವ್ಯಕ್ತ ಹೀಗೆ ನನ್ನ ಪ್ರಕೃತಿಯು ಎಂದರೆ ಮಾಯಾಶಕ್ತಿಯು ಎಂಟು ವಿಧವಾಗಿದೆ.

ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿಮೇ ಪರಾಮ್ ।
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ ।।೫।।

ಮಹಾಬಾಹು, ಈ ಎಂಟು ವಿಧವಾದದ್ದು ಅಪರಾ(ಕೀಳು) ಪ್ರಕೃತಿ. ಇದಿಲ್ಲದೇ ನನ್ನ ಪರಾ(ಉತ್ತಮ) ಪ್ರಕೃತಿಯೊಂದಿದೆ. ಅದನ್ನು ತಿಳಿದುಕೊ. ಅದು ಜೀವ ಎನಿಸಿಕೊಂಡು ಈ ಜಗತ್ತನ್ನೇ ಧರಿಸಿದೆ.


ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ ।
ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ ।।೬।।

ನನ್ನ ಈ ಎರಡು ಪ್ರಕೃತಿಗಳಿಂದ ಸಕಲಭೂತಗಳೂ ಆಗಿವೆಯೆಂದು ನಿಶ್ಚಯಿಸು. ಆದ್ದರಿಂದ ನಾನು ಸಮಸ್ತ ಜಗತ್ತಿನ ಉತ್ಪತ್ತಿ ಪ್ರಳಯಗಳಿಗೆ ಕಾರಣನಾಗಿದ್ದೇನೆ.


ಮತ್ತಃ ಪರತರಂ ನಾನ್ಯತ್ಕಿಂಚಿದಸ್ತಿ ಧನಂಜಯ ।
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ ।।೭।।

ಅರ್ಜುನ, ನನಗಿಂತಲೂ ಬೇರೆಯಾದ ಇನ್ನೊಂದು ಹೆಚ್ಚಿನ ಕಾರಣವು ಈ ಜಗತ್ತಿಗೆ ಯಾವುದೂ ಇಲ್ಲ. ದಾರದಲ್ಲಿ ಮಣಿಗಳ ಗುಂಪು ಅನುಸ್ಯೂತವಾಗಿರುವಂತೆ ಸಮಗ್ರವೂ ನನ್ನಲ್ಲಿ ಪೂಣಿಸಲ್ಪಟ್ಟಿದೆ.


ರಸೋಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ ।
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು ।।೮।।

ಕೌಂತೇಯ, ಜಲದಲ್ಲಿ ರಸವು ನಾನು, ಅಂತೆಯೇ ಚಂದ್ರಸೂರ್ಯರಲ್ಲಿ ಪ್ರಭೆಯಾಗಿದ್ದೇನೆ. ವೇದಗಳಲ್ಲಿ ಪ್ರಣವ ನಾನು. ಆಕಾಶದಲ್ಲಿ ಶಬ್ದವೂ ಪುರುಷರಲ್ಲಿ ಪೌರುಷವೂ ನಾನೇ.


ಪುಣ್ಯೋ ಗಂಧಃ ಪೃಥಿವ್ಯಾಂ ಚ ತೆಜಶ್ಚಾಸ್ಮಿ ವಿಭಾವಸೌ ।
ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು ।।೯।।

ಪೃಥಿವಿಯಲ್ಲಿ ಪುಣ್ಯಗಂಧವೂ ಅಗ್ನಿಯಲ್ಲಿ ತೇಜಸ್ಸೂ ಆಗಿದ್ದೇನೆ. ಸರ್ವಪ್ರಾಣಿಗಳಲ್ಲಿ ಜೀವಶಕ್ತಿಯು ನಾನೇ. ತಪಸ್ವಿಗಳಲ್ಲಿ ತಪಸ್ಸು ನಾನೇ.


ಬೀಜಂ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್ ।
ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ।।೧೦।।

ಪಾರ್ಥ, ಸರ್ವಭೂತಗಳಿಗೂ ನಾನು ಸನಾತನವಾದ ಬೀಜವೆಂದು ತಿಳಿ. ಬುದ್ದಿವಂತರಲ್ಲಿ ಬುದ್ಧಿಯೂ ತೇಜಸ್ವಿಗಳಲ್ಲಿ ತೇಜಸ್ಸೂ ಆಗಿದ್ದೇನೆ.


ಬಲಂ ಬಲವತಾಂ ಚಾಹಂ ಕಾಮರಾಗವಿವರ್ಜಿತಮ್ ।
ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ ।।೧೧।।

ಬಲವಂತರಲ್ಲಿ ನಾನು ಕಾಮರಾಗವರ್ಜಿತವಾದ(ದೇಹಧಾರಣಕ್ಕೆ ಬೇಕಾದ) ಶಕ್ತಿಯಾಗಿದ್ದೇನೆ. ಪ್ರಾಣಿಗಳಲ್ಲಿ ಧರ್ಮಕ್ಕೆ ವಿರುದ್ದವಲ್ಲದ ಕಾಮವಾಗಿದ್ದೇನೆ.


ಯೇ ಚೈವ ಸಾತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ ।
ಮತ್ತ ಏವೇತಿ ತಾನ್ವಿದ್ಧಿ ನ ತ್ವಹಂ ತೇಷು ತೇ ಮಯಿ ।।೧೨।।

ಅಲ್ಲದೆ ವಿವೇಕಾದಿಸಾತ್ವಿಕಾಭಾವಗಳೂ ಲೋಭಾದಿರಾಜಸಭಾವಗಳೂ ಪ್ರಮಾದಾದಿ ತಾಮಸಭಾವಗಳೂ ನನ್ನಿಂದಲೇ ಹುಟ್ಟುತ್ತವೆಯೆಂದು ತಿಳಿ. ಆದರೆ ನಾನು ಅವುಗಳ ವಶದಲ್ಲಿಲ್ಲ. ಅವು ನನ್ನ ವಶದಲ್ಲಿವೆ. ಸಂಸಾರಿಗಳು ಮಾತ್ರ ಆ ಭಾವಗಳಿಗೆ ವಶರಾಗಿರುತ್ತಾರೆ.


ತ್ರಿಭಿರ್ಗುಣಮಯೈರ್ಭಾವೈರೇಭಿಃ ಸರ್ವಮಿದಂ ಜಗತ್ ।
ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್ ।।೧೩।।

ಗುಣಮಯವಾದ ಈ ಸಾತ್ವಿಕಾದಿಭಾವಗಳಿಂದ ಜಗತ್ತೆಲ್ಲವೂ ಮೋಹಗೊಂಡಿದೆ. ಈ ಭಾವಗಳಿಗೆ ವ್ಯತಿರಿಕ್ತನೂ ವ್ಯಯಗಳೆಂಬ ವಿಕಾರಗಳಿಂದ ರಹಿತನೂ ಆದ ನನ್ನನ್ನು ಈ ಜಗತ್ತು ಗುರುತಿಸದೆ ಹೋಗಿದೆ.

ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ ।
ಮಾಮೇವ ಯೇ ಪ್ರೆಪದ್ಯಂತೇ ಮಾಯಾಮೇತಾಂ ತರಂತಿ ತೇ ।।೧೪।।
ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ ।
ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ ।।೧೫।।
ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋರ್ಜುನ ।
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ ।।೧೬।।
ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ ।
ಪ್ರಿಯೋ ಹಿ ಜ್ಞಾನಿನೋತ್ಯರ್ಥಮಹಂ ಸ ಚ ಮಮ ಪ್ರಿಯಃ ।।೧೭।।
ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್ ।
ಅಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ ।।೧೮।।
ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ ।
ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸದುರ್ಲಭಃ ।।೧೯।।
ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇನ್ಯದೇವತಾಃ ।
ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ।।೨೦।।