ಸಾಂಖ್ಯಯೋಗಃ
ಈ ಪ್ರಕಾರದಲ್ಲಿ ಕರುಣೆಯಿಂದ ವ್ಯಾಪ್ತನಾಗಿ ವಿಷಾದಗೊಂಡು ಕಣ್ಣೀರು ಸುರಿಸುತ್ತಾ ಚಿಂತಾಕುಲನಾದ ಅರ್ಜುನನನ್ನು ಕುರಿತು ಶ್ರೀಕೃಷ್ಣನು ಹೀಗೆಂದನು.
ಅಧ್ಯಾಯಗಳು
|
ಸಂಜಯ ಉವಾಚ ತಂ ತಥಾ ಕೃಪಯಾವಿಷ್ಟಮಶ್ರುಪೂರ್ಣಾಕುಲೇಕ್ಷಣಮ್ । ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ ।।೧।।
ಶ್ರೀಭಗವಾನುವಾಚ ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ । ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ ।।೨।।
ಅರ್ಜುನ, ಯುದ್ಧದ ಈ ಸಂಕಟಸಮಯದಲ್ಲಿ ನಿನಗೇಕೆ ಈ ಕಶ್ಮಲಭಾವನೆ ಬಂದು ಸೇರಿತಯ್ಯ? ಸತ್ಪುರುಷರಿಗೆ ಸಲ್ಲದ ಮನೋಭಾವವಿದು. ಸ್ವರ್ಗದ ದಾರಿಯಲ್ಲ. ಇದು ಕೀರ್ತಿಯನ್ನು ಕೆಡಿಸುವಂತಹದ್ದು.
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ । ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ।।೩।।
ಪಾರ್ಥ! ಹೇಡಿತನಕ್ಕೆ ಈಡಾಗಬೇಡ. ಇದು ನಿನಗೆ ಸಮುಚಿತವಲ್ಲ. ಇದೊಂದು ಮನಸ್ಸಿನ ದೌರ್ಬಲ್ಯ. ಹೇ ಪರಂತಪ, ಕ್ಷುದ್ರವಾದ ಈ ದೌರ್ಬಲ್ಯವನ್ನು ಕಿತ್ತೆಸೆದು ಯುದ್ಧಕ್ಕಾಗಿ ಎದ್ದು ನಿಲ್ಲು.
"ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ | ಇಷುಭಿಃ ಪ್ರತಿಯೋತ್ಸ್ತಾಮಿ ಪೂಜಾರ್ಹಾವರಿಸೂದನ || ೪ || "