ರಾಜವಿದ್ಯಾರಾಜಗುಹ್ಯಯೋಗಃ

ಭಗವಂತನು ಇಂತೆಂದನು - ಅರ್ಜುನ, ನೀನು ಅಸೂಯಾರಹಿತನಾಗಿ ಇರುವುದರಿಂದ ಗುಹ್ಯದಲ್ಲಿ ಗುಹ್ಯವಾದ ಈ ವಿಜ್ಞಾನಸಹಿತ ಜ್ಞಾನವನ್ನು ನಿನಗೆ ಹೇಳುವೆನು. ಇದನ್ನು ತಿಳಿದುಕೊಂಡರೆ ಅಶುಭವಾದ ಸಂಸಾರಬಂಧನದಿಂದ ಬಿಡುಗಡೆ ಹೊಂದುವೆ.

ಭಗವದ್ಗೀತೆ

Aum
ಅಧ್ಯಾಯಗಳು
  1. ಅರ್ಜುನ ವಿಷಾದ ಯೋಗ
  2. ಸಾಂಖ್ಯಯೋಗಃ
  3. ಕರ್ಮಯೋಗಃ
  4. ಜ್ಞಾನಯೋಗಃ
  5. ಸಂನ್ಯಾಸಯೋಗಃ
  6. ಧ್ಯಾನಯೋಗಃ
  7. ಜ್ಞಾನವಿಜ್ಞಾನಯೋಗಃ
  8. ಅಕ್ಷರಬ್ರಹ್ಮಯೋಗಃ
  9. ರಾಜವಿದ್ಯಾರಾಜಗುಹ್ಯಯೋಗಃ
  10. ವಿಭೂತಿಯೋಗಃ
  11. ವಿಶ್ವರೂಪದರ್ಶನಯೋಗಃ
  12. ಭಕ್ತಿಯೋಗಃ
  13. ಕ್ಷೇತ್ರಕ್ಷೇತ್ರಜ್ಞಯೋಗಃ
  14. ಗುಣತ್ರಯವಿಭಾಗಯೋಗಃ
  15. ಪುರುಷೋತ್ತಮಯೋಗಃ
  16. ದೈವಾಸುರಸಂಪದ್ವಿಭಾಗಯೋಗಃ
  17. ಶ್ರದ್ಧಾತ್ರಯವಿಭಾಗಯೋಗಃ
  18. ಮೋಕ್ಷಸಂನ್ಯಾಸಯೋಗಃ

ಶ್ರೀಭಗವಾನುವಾಚ:
ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ ।
ಜ್ಞಾನಂ ವಿಜ್ಞಾನಸಹಿತಂ ಯಜ್ಞಾತ್ವಾ ಮೋಕ್ಷ್ಯಸೇಶುಭಾತ್ ।।೧।।
ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ ।
ಪ್ರತ್ಯಕಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್ ।।೨।।

ಈ ಬ್ರಹ್ಮವಿದ್ಯೆಯು ಎಲ್ಲ ವಿದ್ಯೆಗಳ ರಾಜ. ಗೋಪ್ಯವಸ್ತುಗಳಿಗೆ ರಾಜ. ಪರಮಪಾವನ. ಅಲ್ಲದೆ ಪ್ರತ್ಯಕ್ಷವಾಗಿ ಅನುಭವಕ್ಕೆ ಬರುವಂತಹದ್ದು. ಧರ್ಮಪೂರ್ವಕವೇ ಲಭ್ಯವಾದದ್ದು. ಮಾಡುವುದು ಸುಲಭ. ಅಲ್ಲದೆ ಈ ಜ್ಞಾನವು ಶಾಶ್ವತವಾದ ಫಲವನ್ನು ನೀಡತಕ್ಕದ್ದಾಗಿದೆ.

ಅಶ್ರದ್ಧಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ ।
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ ।।೩।।

ಪರಂತಪ - ಅರ್ಜುನ, ಆತ್ಮಜ್ಞಾನವೆಂಬ ಈ ಧರ್ಮದಲ್ಲಿ ಯಾರಿಗೆ ಶ್ರದ್ಧೆಯಿಲ್ಲವೋ ಅವರು ನನ್ನನ್ನು ಪಡೆಯದೆ - ನನ್ನನ್ನು ಪಡೆಯುವ ಸಂಕೆಯೇ ಇಲ್ಲವಾದ್ದರಿಂದ ಜ್ಞಾನಸಾಧನವಾದ ಭಕ್ತಿಯನ್ನು ಕೂಡ ಪಡೆಯದೆ - ಮೃತ್ಯುವೇ ಕಾದು ನಿಂತಿರುವ ಸಂಸಾರಮಾರ್ಗಕ್ಕೆ ಹಿಂದಿರುಗೆ ಬರುತ್ತಾರೆ.

ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ ।
ಮತ್ ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ ।।೪।।

ಅವ್ಯಕ್ತಸ್ವರೂಪನಾದ ನಾನು ಈ ಸಮಸ್ತ ಜಗತ್ತನ್ನು ವ್ಯಾಪಿಸಿಕೊಂಡಿರುವೆನು. ಬ್ರಹ್ಮಾದಿಸ್ತಂಬಪರ್ಯಂತವಾದ ಸಮಸ್ತ ಭೂತಗಳು ನನ್ನಲ್ಲಿವೆ. ಆದರೆ ನಾನು ಆ ಭೂತವಸ್ತುಗಳಲ್ಲಿಲ್ಲ.