ಧ್ಯಾನಯೋಗಃ
ಶ್ರೀ ಭಗವಂತನು ಹೀಗೆಂದನು: ಕರ್ಮಫಲವನ್ನು ಆಶ್ರಯಿಸದೆ ಮಾಡಬೇಕಾದ ಕರ್ಮವನ್ನು ಯಾವನು ಮಾಡುತ್ತಿರುವನೋ ಅವನು ಸಂನ್ಯಾಸಿಯೆಂದೂ ಯೋಗಿಯೆಂದೂ ತಿಳಿಯಬೇಕು. ಕೇವಲ ನಿರಗ್ನಿಯೂ ಅಕ್ರಿಯನೂ ಆದವನಲ್ಲ. ನಿರಗ್ನಿ - ಗಾರ್ಹಪತ್ಯ, ಆಹವನೀಯ, ಅನ್ವಾಹಾರ್ಯ - ಎಂಬ ತ್ರೇತಾಗ್ನಿಗಳನ್ನು ತ್ಯಜಿಸಿದವ. ಅಕ್ರಿಯ - ದಾನ, ಅಧ್ಯಾಪನಾದಿಕ್ರಿಯೆಗಳನ್ನು ಬಿಟ್ಟವನು. ಸಂನ್ಯಾಸಾಶ್ರಮಿಯು ನಿರಗ್ನಿಯೂ ಅಕ್ರಿಯನೂ ಆಗಿರುತ್ತಾನೆಂಬುದು ಶಾಸ್ತ್ರಸಿದ್ದವಾಗಿದೆ. ಆದ್ದರಿಂದ ನ ನರಗ್ನಿರ್ನಚಾಕ್ರಿಯಃ ಎಂದು ಹೇಳಿದ್ದು ಕರ್ಮಯೋಗವನ್ನು ಹೊಗಳುವುದಕ್ಕಾಗಿ ಮಾತ್ರ.
ಅಧ್ಯಾಯಗಳು
|
ಶ್ರೀಭಗವಾನುವಾಚ ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ । ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ ।।೧।।
ಅಗ್ನಿಹೋತ್ರ ಮುಂತಾದ ಕರ್ಮಗಳನ್ನು ನಿತ್ಯಕರ್ಮವೆಂದು ತಿಳಿದು ಮಾಡಿದ ಹೊರತು ಕಾಮ್ಯಕರ್ಮವಾಗಿ ಮಾಡುವುದು ಯೋಗಿಯ ಲಕ್ಷಣವಲ್ಲ. (ಶೃತಿ-ಸ್ಮೃತಿಗಳಲ್ಲಿ ನಿರಗ್ನಿಯೂ ಅಕ್ರಿಯನೂ ಆದವ ಸಂನ್ಯಾಸಿ ಮತ್ತು ಯೋಗಿಯೆಂದು ಹೇಳಿದ್ದರೂ ಇಲ್ಲಿ ಕರ್ಮಫಲವನ್ನು ಸಂನ್ಯಾಸ ಮಾಡಿದವನಿಗೆ ಸಂನ್ಯಾಸಿಯೆಂದು ಶ್ರೀಕೃಷ್ಣನು ಕರೆದಿದ್ದಾನೆ. ಯೋಗವನ್ನು ದೊರಕಿಸಲು ಕರ್ಮವನ್ನು ಮಾಡತಕ್ಕವನಿಗೆ ಯೋಗಿಯೆಂದು ಕರೆದಿದ್ದಾನೆ.)
ಯಂ ಸಂನ್ಯಾಸಮಿತಿ ಪ್ರಾಹುರ್ಯೋಗಂ ತಂ ವಿದ್ಧಿ ಪಾಂಡವ । ನ ಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ ।।೨।।
ಪಾಂಡವ(ಇಲ್ಲಿ ಅರ್ಜುನ), ಯಾವುದನ್ನು ಸಂನ್ಯಾಸವೆಂದು ಶಾಸ್ತ್ರಜ್ಞರು ಹೇಳುತ್ತಾರೋ ಅದು ಯೋಗವೆಂದು ತಿಳಿ. ಏಕೆಂದರೆ ಫಲವಿಷಯಕವಾಗಿ ಅಭಿಲಾಷೆಯನ್ನು ಯಾವನು ಸಂನ್ಯಾಸಮಾಡಿಲ್ಲವೋ ಅವನು ಯಾವನೂ ಯೋಗಿಯಾಗಿರಲಾರನು.
ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ । ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ ।।೩।।
ಧ್ಯಾನಯೋಗವನ್ನು ಏರಲೆಳಸುವ ಮುನಿಗೆ ಕರ್ಮವು ಸಾಧನವೆನಿಸುತ್ತದೆ. ಧ್ಯಾನಯೋಗಾರೂಢನಾದ ಅವನಿಗೆ ಕರ್ಮಗಳ ಶಮವು (ತ್ಯಾಗವು) ಯೋಗಾರೂಢನಾಗಿರುವುದಕ್ಕೆ ಸಾಧನವೆನಿಸುತ್ತದೆ.
For one who is not adept at Dhyana Yoga, action(ಕರ್ಮ) is said to be the means to adeptness. For one who has attained it(ಯೋಗಾರೂಢನಾದವನು), abstaining from action(ಶಮ) is the means to his end.
ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ । ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ ।।೪।।
ಯೋಗಿಯು ಇಂದ್ರಿಯಾರ್ಥಗಳಾದ ಶಬ್ದಾದಿವಿಷಯಗಳಲ್ಲಿಯೂ ನಿತ್ಯನೈಮಿತ್ತಿಕಾದಿಕರ್ಮಗಳಲ್ಲಿಯೂ ಯಾವಾಗ ಆಸಕ್ತಿಯನ್ನು ತೊರೆಯುವನೋ ಆಗ ಸರ್ವಸಂಕಲ್ಪಸಂನ್ಯಾಸಿಯಾದ jಆತನು ಯೋಗಾರೂಢನೆನಿಸುತ್ತಾನೆ.
When one, renouncing all thoughts(become a ಸರ್ವಸಂಕಲ್ಪಸಂನ್ಯಾಸಿ), is not attached to sense objects(ಇಂದ್ರಿಯ + ಅರ್ಥ) and actions one is said to have become a Yogarudha.
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ । ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮಾನಃ ।।೫।।
ತನ್ನನ್ನು ತಾನೇ ಉದ್ಧಾರಮಾಡಿಕೊಳ್ಳಬೇಕು. ತನ್ನನ್ನೂ ಕೆಳಕ್ಕೆ ತಳ್ಳಿಬಿಡಬಾರದು. ಏಕೆಂದರೆ, ತಾನೊಬ್ಬನೇ ತನಗೆ ಬಂಧು. ತಾನೊಬ್ಬನೇ ತನಗೆ ವೈರಿ.
Let one raise oneself by oneself(ಉದ್ಧಾರ), and let not one slip lower(ನ ಅವಸಾದಯೇತ್). For one alone is one's friend(ಬಂಧುಃ) and also the only true enemy(ರಿಪುಃ).
ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈವಾತ್ಮನಾ ಜಿತಃ । ಅನಾತ್ಮನಸ್ತು ಶತ್ರುತ್ವೇ ವರ್ತೇತಾತ್ಮೈವ ಶತ್ರುವತ್ ।।೬।।
ಯಾವನು ತನ್ನನ್ನು ತಾನೇ ಜಯಿಸಿಕೊಂಡಿರುವನೋ ಅವನು ತನಗೆ ತಾನೇ ಬಂಧು. ಆದರೆ ಅನಾತ್ಮನಾದರೋ ತನಗೆ ತಾನೇ ಶತ್ರುವಿನಂತೆ ವೈರಭಾವದಲ್ಲಿರುವನು.
To one who has control over the his body and senses(conquered(ಜಿತಃ) oneself by oneself), one is one's best friend, but to one who does not possess that self-control, one is one's own foe(ಶತ್ರುಃ)
ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ । ಶೀತೋಷ್ಣಸುಖದುಃಖೇಷು ತಥಾ ಮಾನಾಪಮಾನಯೋಃ ।।೭।।
ಜಿತಾತ್ಮನೂ ಪ್ರಶಾಂತಚಿತ್ತನೂ ಆದ ಯೋಗಿಗೆ ಪರಮಾತ್ಮನು ಸಮಾಹಿತನಾಗಿ ಇರುವನು - ಎಂದರೆ ತನ್ನ ಆತ್ಮವಾಗಿಯೇ ತೋರುತ್ತ ಇರುವನು. ಶೀತೋಷ್ಣಸುಖದುಃಖಗಳಲ್ಲಿಯೂ ಮಾನಾಪಮಾನಪ್ರಸಂಗಗಳಲ್ಲಿಯೂ ಸಂತೃಪ್ತನಾಗಿರುವನು.
To one who is self-controlled(ಜಿತಾತ್ಮನಃ) and serene(ಪ್ರಶಾಂತ) and is unaffected by heat or cold(ಶೀತ + ಉಷ್ಣ) and happiness and grief(ಸುಖ + ದುಃಖ) and honour and disgrace(ಮಾನ + ಅಪಮಾನ), then the Supreme Self becomes one with one's Self(ಪರಮಾತ್ಮಾ ಸಮಾಹಿತಃ).
ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋವಿಜಿತೇಂದ್ರಿಯಃ । ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನ ।।೮।।
ಯಾವ ಯೋಗಿಯು ಜ್ಞಾನ-ವಿಜ್ಞಾನಗಳಿಂದ ಸಂತೃಪ್ತನಾಗಿರುತ್ತಾನೋ, ಕೂಟಸ್ಥನೂ ಜಿತೇಂದ್ರಿಯನೂ ಆಗಿ ಮಣ್ಣು ,ಹೆಂಟೆ, ಕಲ್ಲು, ಚಿನ್ನ ಇವುಗಳನ್ನು ಸಮಭಾವದಿಂದ ಕಾಣುತ್ತಾನೋ, ಆತನು ಯುಕ್ತನು, ಸಮಾಹಿತನೆನಿಸುತ್ತಾನೆ.
The Yogi who is satisfied with knowledge and wisdom, remains steadfast and self-controlled, for whom earth, stone and gold are all but the same, he is said to be a yukta.
ಸುಹೃನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂಧುಷು । ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ ।।೯।।
ಸುಹೃತ್ - ಪ್ರತ್ಯುಪಕಾರವನ್ನು ಬಯಸದೆ ಉಪಕಾರವನ್ನು ಮಾಡುವವನು, one who helps without expecting anything in return
ಮಿತ್ರ - ಗೆಳೆಯ, friend
ಆರಿ - ಶತ್ರು, enemy
ಉದಾಸೀನ - ಯಾರ ಪಕ್ಷವನ್ನೂ ವಹಿಸದವನು, one who chooses no sides
ಮಧ್ಯಸ್ಥ - ಆಗದೇ ಇರುವ ಇಬ್ಬರಿಗೂ ಹಿತವನ್ನು ಬಯಸುವವನು, mediator
ದ್ವೇಷಿ - ತನಗೆ ಪ್ರಿಯನಲ್ಲದೇ ಇರುವವನು, someone not liked by you
ಬಂಧು - ನೆಂಟ, relative
ಇವೆಲ್ಲರನ್ನೂ ಮತ್ತು ಸಾಧುಗಳನ್ನೂ ಹಾಗೂ ಪಾಪಿಗಳನ್ನೂ ಸಮಬುದ್ಧಿಯಿಂದ, ಅವರ ಕಾರ್ಯಗಳಿಂದ ವಿಕಾರಗೊಳ್ಳದ ಬುದ್ದಿಯಿಂದ ನೋಡುವವನು ಯೋಗ್ಯತೆಯುಳ್ಳವನು.
He is esteemed who is same-minded to all the kinds of people mentioned.
ಯೋಗೀ ಯುಂಜೀತ ಸತತಮಾತ್ಮಾನಂ ರಹಸಿ ಸ್ಥಿತಃ । ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ।।೧೦।।
ಯೋಗಿಯು ಏಕಾಂತದಲ್ಲಿದ್ದುಕೊಂಡು ತನ್ನ ಅಂತಃಕರಣವನ್ನು ತೆರಪಿಲ್ಲದೆ ಬ್ರಹ್ಮದಲ್ಲಿ ಏಕಾಗ್ರವಾಗಿ ನಿಲ್ಲಿಸಬೇಕು. ಅವನು ಏಕಾಂತಿಯಾಗಿದ್ದು ಚಿತ್ತವನ್ನೂ ದೇಹವನ್ನೂ ನಿಯಂತ್ರಿಸಿ, ಆಸೆಯೆಲ್ಲವನ್ನು ತೊರೆದು, ತನ್ನದೆನ್ನುವುದು ಇಲ್ಲದವನಾಗತಕ್ಕದ್ದು.
Let the Yogi stay in seclusion(ಏಕಾಂತ), trying constantly to keep the mind steady, controlling mind and body(ಯತಚಿತ್ತಾತ್ಮಾ), free from desires(ನಿರಾಶೀಃ) and having no possessions to call one's own(ಅಪರಿಗ್ರಹಃ).
ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ । ನಾತ್ಯುಚ್ಛ್ರಿತಂ ನಾತಿನೀಚಂ ಚೈಲಾಜಿನಕುಶೋತ್ತರಮ್ ।।೧೧।।
ಶುಚಿಯಾದ ಪ್ರದೇಶದಲ್ಲಿ ತನ್ನ ಧ್ಯಾನಕ್ಕಾಗಿ ಒಂದು ಆಸನವನ್ನು ಕಲ್ಪಿಸಿಕೊಂಡು ಅದು ಅಲ್ಲಾಡದಿರುವುದೂ ಹೆಚ್ಚು ಎತ್ತರವಿಲ್ಲದ್ದೂ ಹಾಗೂ ಹೆಚ್ಚು ತಗ್ಗು ಇಲ್ಲದ್ದೂ ಆಗಿರಬೇಕು. ಆಸನದ ಮೇಲೆ ದರ್ಭೆಗಳನ್ನು ಹರಡಿ, ಅದರ ಮೇಲೆ ಮೃಗದಚರ್ಮವನ್ನು ಹಾಸಿ, ಅದರ ಮೇಲೆ ಒಂದು ಬಟ್ಟೆಯನ್ನು ಹಾಸಬೇಕು.
Having in a clean spot, established a firm seat that is neither too high nor too low, with cloth, skin and darbha grass on it.
ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಃ । ಉಪವಿಶ್ಯಾಸನೇ ಯುಂಜ್ಯಾದ್ಯೋಗಮಾತ್ಮವಿಶುದ್ಧಯೇ ।।೧೨।।
ಆ ಆಸನದಲ್ಲಿ ಕುಳಿತುಕೊಂಡು ಚಿತ್ತ ಮತ್ತು ಇಂದ್ರಿಯಗಳ ವ್ಯಾಪಾರಗಳನ್ನು ಬಿಗಿಹಿಡಿದು ಮನಸ್ಸನ್ನು ಏಕಾಗ್ರತೆಯಿಂದ ಆತ್ಮನಲ್ಲಿ ನಿಲ್ಲಿಸಿ ಅಂತಃಕರಣಶುದ್ಧಿಗಾಗಿ ಯೋಗವನ್ನಾಚರಿಸಬೇಕು.
Sitting thus, holding one's senses and mind from wandering, practise Yoga for the purification of the self.
ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ । ಸಂಪ್ರೇಕ್ಷ್ಯನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್ ।।೧೩।।
ತನ್ನ ದೇಹ ತಲೆ ಕುತ್ತಿಗೆಗಳನ್ನು ಸಮರೇಖೆಯಲ್ಲಿ ನೆಟ್ಟಗೆ ನಿಲ್ಲಿಸಿ, ಅತ್ತಿತ್ತ ಸರಿಯದೆ ಸ್ಥಿರನಾಗಿ ಸುತ್ತಲೂ ದಿಕ್ಕುಗಳನ್ನು ನೋಡದೆ ತನ್ನ ನಾಸಿಕಾಗ್ರವನ್ನು ಮಾತ್ರ ನೋಡುವಂತೆ ದೃಷ್ಟಿಯನ್ನಿಡಬೇಕು.
Holding one's body, head and neck firm and erect, gazing on the tip of one's nose(ನಾಸಿಕಾಗ್ರ) without looking around,
ಪ್ರಶಾಂತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಃ । ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ।।೧೪।।
ಪ್ರಶಾಂತಾತ್ಮನೂ ಭಯರಹಿತನೂ ಆಗಿ, ಬ್ರಹ್ಮಚಾರಿವ್ರತದಲ್ಲಿದ್ದು, ಮನೋವ್ಯಾಪಾರಗಳನ್ನು ತಡೆದು ಚಿತ್ತವನ್ನು ಪರಮೇಶ್ವರನಾದ ನನ್ನಲ್ಲಿಟ್ಟು ನಾನೇ(ಎಂದರೆ ಭಗವಂತನು!) ಪರಮೋತ್ತಮನೆಂದು ಮತ್ಪರನಾಗಿರಬೇಕು.
Serene and fearless, firm in the ways of a Brahmachari, having a restrained mind, thinking of Me, let one look up to Me as the Supreme.
ಯುಂಜನ್ನೇವಂ ಸದಾತ್ಮಾನಂ ಯೋಗೀ ನಿಯತಮಾನಸಃ । ಶಾಂತಿಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ ।।೧೫।।
ನಿಯತಮಾನಸನಾಗಿ ಹೀಗೆ ಸತತವೂ ತನ್ನ ಚಿತ್ತವನ್ನು ಏಕಾಗ್ರವಾಗಿ ನಿಲ್ಲಿಸುತ್ತಿರುವ ಯೋಗಿಯು ಮೋಕ್ಷವೇ ಕಡೆಯ ನಿಲ್ದಾಣವಾಗಿರುವ ನನಗೆ ಅಧೀನವಾಗಿರುವ ಪರಮಶಾಂತಿಯನ್ನೈದುವನು.
Thus keeping the mind balanced, the Yogi attains the peace abiding in Me, or nirvana.
ನಾತ್ಯಶ್ನತಸ್ತು ಯೋಗೋಸ್ತಿ ನಚೈಕಾಂತಮನಶ್ನತಃ । ನ ಚಾತಿ ಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ।।೧೬।।
ಅರ್ಜುನ, ಅವಶ್ಯಕತೆಗಿಂತ ಅತಿಯಾಗಿ ತಿನ್ನತಕ್ಕವನಿಗೂ ಏನೂ ತಿನ್ನದೆ ಇರತಕ್ಕವನಿಗೂ ಬಹಳ ನಿದ್ದೆಬಡಕನಿಗೂ ನಿದ್ದೆ ಇಲ್ಲದೆ ಜಾಗರಣೆ ಮಾಡತಕ್ಕವನಿಗೂ ಯೋಗವು ಸಿದ್ಧಿಸುವುದಿಲ್ಲ.
Arjuna, Yoga is not possible for one who eats too much, nor for one who does not eat at all, nor for one who sleeps too much , nor for one who is ever wakeful.
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು । ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ।।೧೭।।
ಹಿತಮಿತವಾಗಿ ಆಹಾರವಿಹಾರಗಳನ್ನು ಮಾಡತಕ್ಕವನೂ ಕರ್ಮಗಳಲ್ಲಿ ಮಿತವಾದ ದೈಹಿಕಕ್ರಿಯೆಯುಳ್ಳವನೂ ಮಿತವಾದ ನಿದ್ರೆ-ಎಚ್ಚರಗಳು ಉಳ್ಳವನೂ ಆದವನಿಗೆ ಯೋಗವು ಸಂಸಾರದುಃಖನಾಶಿಯಾಗಿ ಸಿದ್ಧಿಸುವುದು.
One who is moderate in food and recreation, whose exertion in actions is moderate, whose sleep and waking are moderate, he attains Yoga which is the destroyer of worldly sorrow.
ಯದಾ ವಿನಿಯತಂ ಚಿತ್ತಮಾತ್ಮನ್ಯೇವಾವತಿಷ್ಠತೇ । ನಿಃಸ್ಪೃಹಃ ಸರ್ವಕಾಮೇಭ್ಯೋ ಯುಕ್ತ ಇತ್ಯುಚ್ಯತೇ ತದಾ ।।೧೮।।
ನಿಯಂತ್ರಿತವಾದ ಚಿತ್ತವು ಯಾವಾಗ ಆತ್ಮನಲ್ಲಿಯೇ ಸ್ಥಿರವಾಗಿ ನಿಂತುಕೊಳ್ಳುತ್ತದೆಯೋ ಆಗ ಸರ್ವಕಾಮನೆಗಳಲ್ಲಿಯೂ ನಿಸ್ಪೃಹನಾದ ಸಾಧಕನು ಯುಕ್ತನು ನಿಜವಾದ ಯೋಗಿ ಎನಿಸಿಕೊಳ್ಳುತ್ತಾನೆ.
When the well-restrained thought is established in the Self only, without longing for the any of the objects of desire, then he is said to be a Yogi or a yukta.
ಯಥಾ ದೀಪೋ ನಿವಾತಸ್ಥೋ ನೇಂಗತೇ ಸೋಪಮಾ ಸ್ಮೃತಾ । ಯೋಗಿನೋ ಯತಚಿತ್ತಸ್ಯ ಯುಂಜತೋ ಯೋಗಮಾತ್ಮನಃ ।।೧೯।।
ಸಮಾಧಿಸ್ಥನಾಗಿರುವ ನಿಯತಚಿತ್ತನಾದ ಯೋಗಿಗೆ, ಗಾಳಿಯಿಲ್ಲದೆಡೆಯಲ್ಲಿ ಇರುವ ದೀಪವು ಹೇಗೆ ಅಲ್ಲಾಡುವುದಿಲ್ಲವೋ ಹಾಗೆ ಎಂಬ ಹೋಲಿಕೆ ಸಲ್ಲುತ್ತದೆ.
As a lamp(ದೀಪ) in a sheltered place(ನಿವಾತಸ್ಥಃ) burns without flickering(ನ + ಇಂಗತೇ), a Yogi's thoughts are similarly constant practising Yoga in the Self.
ಯತ್ರೋಪರಮತೇ ಚಿತ್ತಂ ನಿರುದ್ಧಂ ಯೋಗಸೇವಯಾ । ಯತ್ರ ಚೈವಾತ್ಮನಾತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ ।।೨೦।।
ಯೋಗಾನುಷ್ಥಾನದಿಂದ ನಿರುದ್ಧವಾದ ಚಿತ್ತವು ಯಾವಾಗ ವ್ಯಾಪಾರವಿಲ್ಲದೆ ಸುಮ್ಮನಾಗುವುದೋ, ಯಾವಾಗ ಸಾಧಕನು ಶುದ್ಧಾಂತಃಕರಣದಿಂದ ಪರಮಾತ್ಮನನ್ನು ಕಂಡು ತನ್ನಲ್ಲಿಯೇ ತೃಪ್ತನಾಗುವುನೋ -
When(ಯತ್ರ) thought becomes subdued(ಉಪರಮತೇ), restrained(ನಿರುದ್ಧಂ) by the practice of Yoga, when seeing the Supreme Self(ಆತ್ಮಾನಂ) in oneself(ಆತ್ಮನಾ), one becomes content(ತುಷ್ಯತಿ) in oneself, (contd.)
ಸುಖಮಾತ್ಯಂತಿಕಂ ಯತ್ತದ್ಬುದ್ಧಿಗ್ರಾಹ್ಯಮತೀಂದ್ರಿಯಮ್ । ವೇತ್ತಿ ಯತ್ರ ನ ಚೈವಾಯಂ ಸ್ಥಿತಶ್ಚಲತಿ ತತ್ತ್ವತಃ ।।೨೧।।
ಅತೀಂದ್ರಿಯವೂ ಕೇವಲ ಬುದ್ಧಿಗ್ರಾಹ್ಯವೂ ಆದ ಅನಂತಸುಖವನ್ನು ಯಾವಾಗ ಯೋಗಿಯು ಅನುಭವಿಸುವನೋ, ಈ ಜ್ಞಾನಿಯು ಯಾವಾಗ ತತ್ವಸ್ವರೂಪದಲ್ಲಿ ನಿಂತು ಅದರಿಂದ ಚಲಿಸದೇ ಇರುವನೋ -
When the Yogi experiences/gains the endless joy(ಸುಖಂ + ಆತ್ಯಂತಿಕಮ್) which is beyond one's senses(ಅತಿ + ಇಂದ್ರಿಯ, ಅಪ್ರಮೇಯ)and grasped only by reason(ಬುದ್ಧಿಗ್ರಾಹ್ಯಂ), and is then steady in the Self, without hesitation (in movement), (contd.)
ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ । ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ ।।೨೨।।
ಈತನು ಯಾವ ಆತ್ಮಲಾಭವನ್ನು ಪಡೆದು ಇದಕ್ಕಿಂತ ಉತ್ತಮವಾದ ಇನ್ನೊಂದಿಲ್ಲವೆಂದು ಯಾವಾಗ ಭಾವಿಸುವನೋ ಮತ್ತು ಆತ್ಮತತ್ತ್ವದಲ್ಲಿ ನಿಂತು ಮಹತ್ತರವಾದ ದುಃಖಪ್ರಸಂಗದಲ್ಲಿಯೂ ಇತ್ತ ಚಲಿಸದಿರುವನೋ -
When, having obtained it(ಯಂ ಲಬ್ಧ್ವಾ), he knows no other acquisition superior(ನ + ಅಧಿಕಂ) to it, and once in that position is unmoved(ನ + ವಿಚಾಲ್ಯತೇ) even in the presence of great sorrow/pain,
ತಂ ವಿದ್ಯಾದ್ದುಖಸಂಯೋಗವಿಯೋಗಂ ಯೋಗಸಂಜ್ಞಿತಮ್ । ಸ ನಿಶ್ಚಯೇನ ಯೋಕ್ತವ್ಯೋ ಯೋಗೋನಿರ್ವಿಣ್ಣ ಚೇತಸಾ ।।೨೩।।
ಅಂತಹ ಅವಸ್ಥಾವಿಶೇಷವು ಯೋಗವೆನಿಸುತ್ತದೆಯೆಂದು ತಿಳಿಯಬೇಕು. ಅದು ದುಃಖಸಂಯೋಗಕ್ಕೆ ವಿಯೋಗವಾಗಿದ್ದರೂ ಯೋಗವೇ!. ಮನಸ್ಸಿಗೆ ಬೇಸರವಿಲ್ಲದೆ ದೃಢಸಂಕಲ್ಪದಿಂದ ಆ ಯೋಗವನ್ನು ಸಾಧಿಸಬೇಕು.
Understand that the separation(ವಿಯೋಗಂ) from involvement with samsara(ದುಃಖಸಂಯೋಗಂ) is called Yoga. This must be done with determination(ನಿಶ್ಚಯೇನೆ) and without getting depressed(ಅನಿರ್ವಿಣ್ಣಚೇತಸಾ)!
ಸಂಕಲ್ಪಪ್ರಭವಾನ್ ಕಾಮಾನ್ ತ್ಯಕ್ತ್ವಾ ಸರ್ವಾನಶೇಷತಃ । ಮನಸೈವೇಂದ್ರಿಯಗ್ರಾಮಂ ವಿನಿಯಮ್ಯ ಸಮಂತತಃ ।।೨೪।। ಶನೈಃ ಶನೈರುಪರಮೇತ್ ಬುದ್ಧ್ಯಾ ಧೃತಿಗೃಹೀತಯಾ । ಆತ್ಮ ಸಂಸ್ಥಂ ಮನಃ ಕೃತ್ವಾ ನ ಕಿಂಚದಪಿ ಚಿಂತಯೇತ್ ।।೨೫।।
ಸಂಕಲ್ಪದಿಂದ ಹುಟ್ಟಿದ ಎಲ್ಲ ಕಾಮಗಳನ್ನೂ ನಿಶ್ಶೇಷವಾಗಿ ಹೊರದೂಡಿ, ಮನಸ್ಸಿನಿಂದಲೇ ಇಂದ್ರಿಯಸಮೂಹವನ್ನು ಎಲ್ಲ ಕಡೆಗಳಿಂದಲೂ ಹಿಡಿದು ನಿಲ್ಲಿಸಿ, ಧೈರ್ಯಯುಕ್ತವಾದ ಬುದ್ಧಿಯಿಂದ ಮೆಲ್ಲಮೆಲ್ಲನೆ ಶಾಂತಿಯನ್ನು ತಳೆಯಬೇಕು. ಮನಸ್ಸನ್ನು ಆತ್ಮನಲ್ಲಿ ನಿಲ್ಲಿಸಿ, ಮತ್ತೇನನ್ನೂ ಚಿಂತಿಸಬಾರದು.
Desires that are born from thoughts(directed towards the fruits of one's actions, termed ಸಂಕಲ್ಪ) must be abandoned completely(ಅಶೇಷತಃ : not even one remaining) and in this blissful state, the set of senses must be restrained. Thus, gradually(ಶನೈಃಶನೈಃ) a state of absence of noise must be obtained with a mind controlled determinedly. This must be done with the mind set in the Self without any deviance.
ಯತೋ ಯತೋ ನಿಶ್ಚರತಿ ಮನಶ್ಚಂಚಲಮಸ್ಥಿರಮ್ । ತತಸ್ತತೋ ನಿಯಮ್ಯೈತದಾತ್ಮನ್ಯೇವ ವಶಂ ನಯೇತ್ ।।೨೬।।
ಒಂದೆಡೆ ನಿಲ್ಲಲಾರದ ಚಂಚಲಸ್ವಭಾವದ ಮನಸ್ಸು ಬೇರೆ ಯಾವ ವಿಷಯದ ಕಡೆಗೆ ಹೊರಳುತ್ತದೆಯೋ, ಆಯಾ ವಿಷಯಗಳಿಂದ ಜಗ್ಗಿ ಎಳೆದು ಆ ಮನಸ್ಸನ್ನು ಆತ್ಮನಲ್ಲಿಯೇ ನಿಲ್ಲಿಸಿ ವಶದಲ್ಲಿಟ್ಟುಕೊಳ್ಳಬೇಕು.
The restless(ಚಂಚಲ, ಅಸ್ಥಿರ) mind may ever pursue sense-objects(ವಿಷಯಗಳು), but one must forcibly bring it back under control to rest in the Self.
ಪ್ರಶಾಂತಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಮ್ । ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಷಮ್ ।।೨೭।।
ಪ್ರಶಾಂತಚಿತ್ತನೂ ಧೂಳಿಯ ಲೇಶವೂ ಇಲ್ಲದವನೂ ಅಧರ್ಮಾದಿ ದೋಷವರ್ಜಿತನೂ ಸರ್ವವೂ ಬ್ರಹ್ಮವೆಂದು ತಿಳಿದು ಬ್ರಹ್ಮಸ್ವರೂಪನೇ ಆಗಿರುವ ಈ ಯೋಗಿಗೆ ಪರಮಾನಂದವು ಪ್ರಾಪ್ತವಾಗುವುದು.
With a tranquil mind(ಪ್ರಶಾಂತಮನಸಂ), this Yogi attains bliss, with his passions calmed(ಶಾಂತರಜಸಂ), who has become Brahma and is faultless(ಅಕಲ್ಮಶಮ್).
ಯುಂಜನ್ನೇವಂ ಸದಾತ್ಮಾನಂ ಯೋಗೀ ವಿಗತಕಲ್ಮಶಃ । ಸುಖೇನಬ್ರಹ್ಮಸಂಸ್ಪರ್ಶಮತ್ಯಂತಂ ಸುಖಮಶ್ನುತೇ ।।೨೮।।
ಹೀಗೆ ಸರ್ವದಾ ಯೋಗಾಭ್ಯಾಸದಲ್ಲಿ ತೊಡಗಿರುವ ಯೋಗಿಯು ಪಾಪರಹಿತನಾಗಿ ಬ್ರಹ್ಮಸ್ಪರ್ಶವೆಂಬ ಪರಮಸುಖವನ್ನು ಅನಾಯಾಸವಾಗಿ ಪಡೆಯುತ್ತಾನೆ.
Thus keeping the self steadfast, the Yogi freed from sins attains the bliss of contact with Brahma.
ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ । ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ ।।೨೯।।
ಸ್ಥಾವರಾದಿ ಸಮಸ್ತಭೂತಗಳಲ್ಲಿಯೂ ನಿರ್ವಿಶೇಷವಾದ ಬ್ರಹ್ಮವನ್ನು ಕಂಡಿರತಕ್ಕ ಯೋಗಯುಕ್ತಾತ್ಮನು, ಸರ್ವಪ್ರಾಣಿಗಳಲ್ಲಿಯೂ ಆತ್ಮನು ಇದ್ದಾನೆಂಬುದನ್ನೂ ಸರ್ವಪ್ರಾಣಿಗಳೂ ಆತ್ಮನಲ್ಲಿ ನೆಲೆಸಿವೆ ಎಂಬುದನ್ನು ಸ್ಪಷ್ಟವಾಗಿ ಕಂಡುಕೊಳ್ಳುತ್ತಾನೆ.
The Yogi, sees the Self in all beings and all beings in the Self, and everywhere sees the same.
ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ । ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ।।೩೦।।
ಯಾವನು ನನ್ನನ್ನು ಸದಾ ಎಲ್ಲೆಲ್ಲಿಯೂ ಕಾಣುವನೋ ಸರ್ವವೂ ನನ್ನಲ್ಲಿದೆಯೆಂದು ಕಾಣುವನೋ ಆ ಜ್ಞಾನಿಗೆ ನಾನು ಕಾಣದೇ ಪರೋಕ್ಷನಾಗಿರುವುದಿಲ್ಲ. ಅವನೂ ನನಗೆ ಕಾಣದೇ ಹೋಗುವುದಿಲ್ಲ.
One who sees Me everywhere and sees everything in Me, for that jnani I will never be absent(ನ + ಪ್ರಣಶ್ಯಾಮಿ), neither to Me would (s)he ever be absent.
ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ । ಸರ್ವಥಾ ವರ್ತಮಾನೋಪಿ ಸ ಯೋಗೀ ಮಯಿ ವರ್ತತೇ ।।೩೧।।
ಸರ್ವಭೂತಗಳಲ್ಲಿಯೂ ನೆಲೆಸಿರುವ ನನ್ನನ್ನು, ಯಾವ ಯೋಗಿಯು ಏಕತ್ವವನ್ನು ನಿಶ್ಚಯಿಸಿ ಭಜಿಸುತ್ತಾನೋ ಆತನು ಯಾವ ಪ್ರಕಾರದಲ್ಲಿದ್ದರೂ ನನ್ನಲ್ಲಿ ಪರಮಪದದಲ್ಲಿ ಇರುತ್ತಾನೆ.
One who, intent on unity(ಏಕತ್ವಮಾಸ್ಥಿತಃ), worships(ಭಜತಿ) Me who is present in all beings, that Yogi dwells in Me no matter what his mode of life(ಸರ್ವಥಾವರ್ತಮಾನೋಪಿ).
ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋರ್ಜುನ । ಸುಖಂ ವಾ ಯದಿ ವಾ ದುಃಖಂ ಸ ಯೋಗಿ ಪರಮೋ ಮತಃ ।।೩೨।।
ಅರ್ಜುನ, ಯಾವಾತನು ತನ್ನ ಹೋಲಿಕೆಯಿಂದ ಸರ್ವಪ್ರಾಣಿಗಳಲ್ಲಿಯೂ ಸುಖವನ್ನಾಗಲಿ ದುಃಖವನ್ನಾಗಲಿ ತನಗೆ ಸಮಾನವಾದದ್ದೆಂದು ತಿಳಿಯುವನೋ ಅವನು ಪರಮಯೋಗಿಯೆಂದು ನನ್ನ ಮತ.
One, who by comparison with oneself(ಆತ್ಮೌಪಮ್ಯದಿಂದ), sees the same in all beings, in pleasure or pain, is deemed to be the highest Yogi.
ಅರ್ಜುನ ಉವಾಚ ಯೋಯಂ ಯೋಗಸ್ತ್ವಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ । ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಂ ಸ್ಥಿರಾಮ್ ।।೩೩।।
ಅರ್ಜುನನು ಹೀಗೆಂದನು: ಮಧುಸೂದನ, ಸಮತ್ವದಿಂದ ಕೂಡಿದ ಯೋಗವೆಂಬುದನ್ನು ಹೇಳಿದೆಯಲ್ಲ, ಈ ಯೋಗದಲ್ಲಿ ಸ್ಥಿರವಾದ ಸ್ಥಿತಿ ಹೇಗೆಂಬುದನ್ನು ನಾನು ಕಾಣದೆ ಹೋಗಿದ್ದೇನೆ. ಏಕೆಂದರೆ, ಮನಸ್ಸು ಬಹು ಚಂಚಲವಾದದ್ದು.
Arjuna says: Oh Madhusudana, this Yoga in equanimity(sameness) that you teach, I cannot see its continuance, for the mind is restless.
ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ದೃಢಮ್ । ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ।।೩೪।।
ಶ್ರೀಕೃಷ್ಣ, ಮನಸ್ಸೆಂಬುದು ಚಂಚಲವಲ್ಲವೇ? ಅದು ಮನುಷ್ಯನನ್ನು ಕಡಿದುಹಾಕುವುದಂತಹದು. ಬಲಶಾಲಿಯೂ ದೃಢವೂ ಆಗಿದೆ. ಅದನ್ನು ನಿಗ್ರಹಿಸುವುದೆಂದರೆ, ಗಾಳಿಯನ್ನು ಕಟ್ಟಿಹಾಕುವಂತೆ, ದುಷ್ಕರವೆಂದು ನನಗೆ ತೋರುತ್ತದೆ.
Krishna, the mind is flighty, turbulent and obstinate. Restraining it is like tying down the wind! Most difficult I think.
ಶ್ರೀಭಗವಾನುವಾಚ ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ । ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ।।೩೫।।
ಭಗವಂತನು ಹೇಳಿದನು: ಮಹಾಬಾಹು, ಚಂಚಲವಾದ ಮನಸ್ಸನ್ನು ನಿಗ್ರಹಿಸಿ ಹಿಡಿಯುವುದು ಬಹುಕಷ್ಟವಾದದ್ದು. ಸಂದೇಹವೇ ಇಲ್ಲ. ಆದರೆ ಅಭ್ಯಾಸ ಮಾಡುವುದರಿಂದಲೂ ವೈರಾಗ್ಯದಿಂದಲೂ ಅದು ಹಿಡಿತಕ್ಕೆ ಸಿಗುತ್ತದೆ.
Shri Krishna says: Doubtless, O Arjuna. Restraining the mind is hard. But with practice and by indifference (to worldly matters) it can be achieved.
ಅಸಂಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ । ವಶ್ಯಾತ್ಮನಾ ತು ಯತತಾ ಶಕ್ಯೋವಾಪ್ತುಮುಪಾಯತಃ ।।೩೬।।
ಆತ್ಮನಿಗ್ರಹವಿಲ್ಲದವನಿಗೆ ಯೋಗವು ದಕ್ಕುವುದು ಕಷ್ಟವೆಂದು ನನ್ನ ಅಭಿಪ್ರಾಯವಿದೆ. ಆತ್ಮನಿಗ್ರಹವುಳ್ಳವನು ಪ್ರಯತ್ನಿಸುತ್ತಿದ್ದರೆ ಉಪಾಯವಾಗಿ ಅದನ್ನು ದಕ್ಕಿಸಿಕೊಳ್ಳಲು ಸಾಧ್ಯವಿದೆ.
For one whose mind is untrained(ಅಸಂಯತಾತ್ಮ), Yoga is hard to attain, but by one who is self-controlled and strives hard, it may be attained.
ಅರ್ಜುನ ಉವಾಚ: ಅಯತಿಃ ಶ್ರದ್ಧಯೋಪೇತೋ ಯೋಗಾಚ್ಚಲಿತಮಾನಸಃ । ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ ।।೩೭।।
ಅರ್ಜುನನು: ಶ್ರೀಕೃಷ್ಣ, ಒಬ್ಬನು ಶ್ರದ್ಧಾವಂತನಾಗಿ ಇರುತ್ತಾನೆ. ಆದರೆ ಸಾಕಷ್ಟು ಪ್ರಯತ್ನ ಮಾಡಿರುವುದಿಲ್ಲ. (ಮರಣಕಾಲದಲ್ಲಿ) ಮನಸ್ಸು ಯೋಗವನ್ನು ಬಿಟ್ಟು ಚಲಿಸುತ್ತದೆ. ಇತ್ತಲಾಗಿ ಯೋಗಸಿದ್ಧಿಯನ್ನು ಪಡೆದಿರುವುದಿಲ್ಲ. ಅಂಥವನು ಯಾವ ಗತಿಯನ್ನು ಪಡೆಯುತ್ತಾನೆ?
Arjuna says: Shri Krishna, if a man has faith in Yoga(ಶ್ರದ್ಧಯೋಪೇತಃ), but does not strive hard enough(ಅಯತಿಃ), and as he nears his end, his mind wanders(ಚಲಿತಮಾನಸಃ) away from Yoga, thus not obtaining Yoga-siddhi. What becomes of such a man?
ಕಚ್ಚಿನ್ನೋಭಯವಿಭ್ರಷ್ಟಶ್ಛಿನ್ನಾಭ್ರಮಿವ ನಶ್ಯತಿ । ಅಪ್ರತಿಷ್ಠೋ ಮಹಾಬಾಹೋ ವಿಮೂಢೋ ಬ್ರಹ್ಮಣಃ ಪಥಿ ।।೩೮।।
ಆತನು ಬ್ರಹ್ಮಪ್ರಾಪ್ತಿಯ ಮಾರ್ಗದಲ್ಲಿ ದಿಕ್ಕುತೋರದೆ ನಿರಾಶ್ರಯನಾಗಿ ಬಿಡುತ್ತಾನೆ. ಆ ಸಂದರ್ಭದಲ್ಲಿ ಕರ್ಮಮಾರ್ಗಯೋಗಮಾರ್ಗಗಳು ಎರಡರಿಂದಲೂ ಭ್ರಷ್ಟನಾಗಿ ತುಂಡುಮೋಡದಂತೆ ನಾಶವಾಗಿ ಹೋಗಲಿಕ್ಕಿಲ್ಲವೇ?
Having failed in both (Karma and Yoga)(ಉಭಯವಿಭ್ರಷ್ಟ), doesn't he become like a riven cloud(ಛಿನ್ನಾಭ್ರಮಿವ), and discouraged(ಅಪ್ರತಿಷ್ಠಃ) and perplexed(ವಿಮೂಢಃ) in the way to Brahma, perish?
ಏತನ್ಮೇ ಸಂಶಯಂ ಕೃಷ್ಣ ಛೇತ್ತುಮರ್ಹಸ್ಯಶೇಷತಃ । ತ್ವದನ್ಯ ಸಂಶಯಸ್ಯಾಸ್ಯ ಛೇತ್ತಾ ನ ಹ್ಯುಪಪದ್ಯತೇ ।।೩೯।।
ಈ ನನ್ನ ಸಂಶಯವನ್ನು, ಶ್ರೀಕೃಷ್ಣ, ನೀನು ಪೂರ್ತಿಯಾಗಿ ನಿವಾರಿಸಬೇಕು. ನಿನ್ನನ್ನು ಬಿಟ್ಟರೆ ಈ ಸಂಶಯವನ್ನು ಹೋಗಲಾಡಿಸತಕ್ಕವನು ಇನ್ನೊಬ್ಬನಿಲ್ಲ.
Krishna, you must resolve(ಛೇತ್ತುಂ) this doubt of mine completely(ಅಶೇಷತಃ). No one but you can possibly dispel this doubt.
ಶ್ರೀಭಗವಾನುವಾಚ ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ । ನ ಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಂ ತಾತ ಗಚ್ಛತಿ ।।೪೦।।
ಭಗವಂತನು: ಪಾರ್ಥ, ಈ ಲೋಕದಲ್ಲಾಗಲಿ ಪರಲೋಕದಲ್ಲಾಗಲಿ ಯೋಗಚ್ಯುತನಾದವನಿಗೆ ವಿನಾಶವೆಂಬುದಿಲ್ಲ. ಅಪ್ಪ ಅರ್ಜುನ, ಕಲ್ಯಾಣಕಾರ್ಯವನ್ನು ಮಾಡತಕ್ಕವನಾದವನೂ ದುರ್ಗತಿಯನ್ನು ಹೊಂದುವುದಿಲ್ಲ.
Krishna says: Partha, neither in this world nor the next is there destruction for one who does good, he never comes to grief.
ಪ್ರಾಪ್ಯ ಪುಣ್ಯಕೃತಾಂ ಲೋಕಾನುಷಿತ್ವಾ ಶಾಶ್ವತೀಃ ಸಮಾಃ । ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋಭಿಜಾಯತೇ ।।೪೧।।
ಯೋಗಭ್ರಷ್ಟನಾದವನು ಪುಣ್ಯವಂತರಿಗೆ ಅರ್ಹವಾದ ಲೋಕಗಳನ್ನು ಪಡೆದು, ಅಲ್ಲಿ ಬಹಳ ವರ್ಷಗಳವರೆಗಿದ್ದು ಸಚ್ಛೀಲರಾದ ಶ್ರೀಮಂತರ ಮನೆಯಲ್ಲಿ ಹುಟ್ಟುವನು.
Having attained to the worlds of the righteous and having dwelt there for may years, he who failed in Yoga is reborn in a house of the pure and wealthy.
ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಮ್ । ಏತದ್ಧಿ ದುರ್ಲಭತರಂ ಲೋಕೇ ಜನ್ಮ ಯದೀದೃಶಮ್ ।।೪೨।।
ಅಥವ ಧೀಮಂತರಾದ ಯೋಗಿಗಳ ಕುಲದಲ್ಲಿಯೇ ಹುಟ್ಟುವನು. ಪ್ರಕಾರವಾದ ಜನ್ಮವು ಲೋಕದಲ್ಲಿ ಅತಿ ದುರ್ಲಭವೇ ಸರಿ.
Else, he is born in a family of Yogis. This kind of birth is truly hard to obtain in the world.
ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೇಹಿಕಮ್ । ಯತತೇ ಚ ತತೋ ಭೂಯಃ ಸಂಸಿದ್ಧೌ ಕುರುನಂದನ ।।೪೩।।
ಅಲ್ಲಿ ಆತನು ಪೂರ್ವ ಜನ್ಮದಲ್ಲಿ ಸಾಧಿಸಿದ ಬುದ್ಧಿಸಂಸ್ಕಾರವನ್ನು ಪಡೆದುಕೊಳ್ಳುತ್ತಾನೆ. ಅನಂತರ, ಮೊದಲಿಗಿಂತಲೂ ಹೆಚ್ಚಾಗಿ ಯೋಗಸಿದ್ಧಿಯನ್ನು ಪಡೆಯಲು ಯತ್ನಿಸುತ್ತಾನೆ.
There, he gains touch with the knowledge(ಬುದ್ಧಿಸಂಯೋಗ) that was acquired in the former body and strives even harder for perfection, O Son of the Kurus (Arjuna).
ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋಪಿ ಸಃ । ಜಿಜ್ಞಾಸುರಪಿ ಯೋಗಸ್ಯ ಶಬ್ದಬ್ರಹ್ಮಾತಿವರ್ತತೇ ।।೪೪।।
ಹಿಂದಿನ ಜನ್ಮದಲ್ಲಿ ಮಾಡಿದ ಅಭ್ಯಾಸಬಲದಿಂದ ಆ ಯೋಗಭ್ರಷ್ಟನು ತನಗೆ ಇಷ್ಟವಿಲ್ಲದಿದ್ದರೂ ಯೋಗಮಾರ್ಗದ ಕಡೆಗೆ ಸಳೆಯಲ್ಪಡುತ್ತಾನೆ. ಯೋಗಮಾರ್ಗವನ್ನು ತಿಳಿಯಲಿಚ್ಛಿಸದವನೂ ಸಹ ಶಬ್ದಬ್ರಹ್ಮವನ್ನು ಎಂದರೆ ವೇದೋಕ್ತಕರ್ಮಾನುಷ್ಠಾನಫಲವನ್ನು ದಾಟಿಹೋಗುತ್ತಾನೆ.
By the former practice one is borne on, even if he is unwilling. Even one who merely wishes to know about Yoga rises beyond the Shabda-Brahma.
ಪ್ರಯತ್ನಾದ್ಯತಮಾನಸ್ತು ಯೋಗೀ ಸಂಶುದ್ಧಕಿಲ್ಬಿಷಃ । ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂ ಗತಿಮ್ ।।೪೫।।
ಅನೇಕಜನ್ಮಗಳಲ್ಲಿ ಸಿದ್ಧನಾಗದಿರುವ ಯೋಗಿಯು ಪ್ರಯತ್ನದಿಂದ ಪಟ್ಟುಹಿಡಿದು ಅಭ್ಯಾಸಮಾಡಿ, ಹಿಂದಿನ ಕಿಲ್ಬಿಷಗಳೆಲ್ಲವನ್ನೂ ಕಳೆದು ಶುದ್ಧನಾಗಿ ಪರಮಗತಿಯನ್ನು ಹೊಂದುತ್ತಾನೆ.
Truly, a Yogi who strives with assiduity, purified from the sins(ಸಂಶುದ್ಧಕಿಲ್ಬಿಷಃ) and perfected in the course of many births(ಅನೇಕಜನ್ಮಸಂಸಿದ್ಧಃ) then reaches the Supreme Goal.
ತಪಸ್ವಿಭ್ಯೋಧಿಕೋ ಯೋಗೀ ಜ್ಞಾನಿಭ್ಯೋಪಿ ಮತೋಧಿಕಃ । ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ಯೋಗೀ ಭವಾರ್ಜುನ ।।೪೬।।
ತಪಸ್ವಿಗಳಿಗಿಂತಲೂ ಯೋಗಿಯು ಹೆಚ್ಚಿನವನು. ಶಾಸ್ತ್ರಾರ್ಥಪಂಡಿತರಿಗಿಂತಲೂ ಅವನು ಹೆಚ್ಚಿನವನು. ಕರ್ಮಿಗಳಿಗಿಂತಲೂ ಯೋಗಿಯೂ ಅಧಿಕನಾದವನು. ಆದ್ದರಿಂದ, ಅರ್ಜುನ, ನೀನು ಯೋಗಿಯಾಗುವುದಕ್ಕೆ ಯತ್ನಿಸು.
A Yogi is deemed superior to men of austerity, and superior to men of knowledge and to men of action. Therefore Arjuna, strive to be a Yogi.
ಯೋಗಿನಾಮಪಿ ಸರ್ವೇಷಾಂ ಮದ್ಗತೇನಾಂತರಾತ್ಮನಾ । ಶ್ರದ್ಧಾವಾನ್ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ ।।೪೭।।
ನನ್ನಲ್ಲಿಯೇ ಅಂತರಾತ್ಮವನ್ನಿಟ್ಟು ಶ್ರದ್ದಾವಂತನಾಗಿ ಯಾವಾತನು ನನ್ನನ್ನು ಭಜಿಸುತ್ತಾನೋ ಅವನು ಎಲ್ಲ ಯೋಗಿಗಳಿಗಿಂತಲೂ ಶ್ರೇಷ್ಠನಾದ ಯೋಗಿಯೆಂಬುದು ನನಗೆ ಸಮ್ಮತವಾಗಿದೆ.
Of all the Yogis, the one who, full of faith, worships Me with his inner self abiding in Me, he is deemed by Me as most devout.