ಜೆ.ಆರ್.ಡಿ. ಟಾಟ
ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ [೧][೨] ಬೃಹತ್ ಟಾಟಾ ಸಂಸ್ಥೆಯನ್ನು ೫೩ ವರ್ಷಗಳ ಕಾಲ ಸಮರ್ಥವಾಗಿ ನಡೆಸಿ, ಭಾರತದ ಕೈಗಾರಿಕಾ ನಕ್ಷೆಯಲ್ಲಿ ಮಹತ್ವದ ಛಾಪನ್ನು ಮೂಡಿಸಿದ ಭಾರತೀಯರಲ್ಲೊಬ್ಬರು. ಟಾಟಾರವರ ಉತ್ಪಾದನೆ, ಉಕ್ಕಿನಿಂದ ಪ್ರಾರಂಭಿಸಿ,[೩] ವಿದ್ಯುತ್ ಶಕ್ತಿ, ಮೊಟಾರ್ ಕಾರು ಮತ್ತು ಲಾರಿಗಳು, ಸಿಮೆಂಟ್, ರಸಾಯನಿಕ ವಸ್ತುಗಳು, ವಸ್ತ್ರೋದ್ಯಮ, ಪೇಪರ್, ಮಾಹಿತಿ ತಂತ್ರಜ್ಞಾನ, ದಿನನಿತ್ಯದ ಬಳಕೆಯ, ಉಪ್ಪು, ಸಾಬೂನ್, ಶ್ಯಾಂಪೂ, ಟೀ, ಕಾಫೀ, ಹೆಂಗಳೆಯರ ಸೌಂದರ್ಯವರ್ಧಕ ಪರಿಕರಗಳು, ಇತ್ಯಾದಿಗಳ ವರೆಗೆ ಇದೆ. ಜೆ.ಆರ್.ಡಿ ಟಾಟಾ ಅವರು, ಆರ್.ಡಿ ಟಾಟಾ ಅವರ ಪುತ್ರರು. 'ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ' ಅವರು ತಮ್ಮ ಮಕ್ಕಳಾದ 'ಸರ್ ದೊರಾಬ್ ಟಾಟ 'ಹಾಗೂ 'ಸರ್ ರತನ್ ಟಾಟಾ' ಅವರಷ್ಟೇ ಪ್ರಾಮುಖ್ಯತೆಯನ್ನು 'ಆರ್.ಡಿ.ಟಾಟಾ' ರವರಿಗೂ, ಕೊಡುತ್ತಿದ್ದರು. ಆರ್.ಡಿ.ಯವರ ವ್ಯವಹಾರಜ್ಞಾನ, ಮೇಧಾವಿತನ, ಮತ್ತು ಉದ್ಯಮವನ್ನು ಪ್ರಗತಿಯತ್ತ ಒಯ್ಯುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡು ಪ್ರಗತಿ ಸಾಧಿಸುತ್ತಿದ್ದ ಪರಿ, ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟರಿಗೆ ಪ್ರಿಯವಾಗಿತ್ತು. ತಮ್ಮ ತರುವಾಯ, ಟಾಟಾ ಉದ್ಯಮದ ಜವಾಬ್ದಾರಿಯನ್ನು ಹೊರಬಲ್ಲ ಒಬ್ಬ ಸಮರ್ಥ ಪ್ರವರ್ತಕನಂತೆ ಅವರಿಗೆ ಗೋಚರಿಸಿದರು. ಜೆ.ಆರ್.ಡಿ ಅವರಿಗೆ ತಂದೆಯವರ ಗುಣಗಳೆಲ್ಲ ರಕ್ತಗತವಾಗಿ ಬಂದಿತ್ತು.
ಜಹಾಂಗೀರ್ ರತನ್‍ಜಿ ದಾದಾಭಾಯಿ ಟಾಟ | |
---|---|
ಜನನ | |
ಮರಣ | 29 ನವೆಂಬರ್ 1993 |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | Ex-Chairman of ಟಾಟ ಗ್ರೂಪ್ |
ಗಮನಾರ್ಹ ಕೆಲಸಗಳು | ಟಿಸಿಎಸ್ ಸಂಸ್ಥಾಪಕ ಟಾಟ ಮೋಟಾರ್ಸ್ ಸಂಸ್ಥಾಪಕ ಟೈಟನ್ ಇಂಡಸ್ಟ್ರೀಸ್ ಸಂಸ್ಥಾಪಕ ಟಾಟ ಟೀ ಸಂಸ್ಥಾಪಕ ವೋಲ್ಟಾಸ್ ಸಂಸ್ಥಾಪಕ ಏರ್ ಇಂಡಿಯಾ ಸಂಸ್ಥಾಪಕ "ಜಹಾಂಗೀರ್ ರತನ್‍ಜಿ ದಾದಾಭಾಯಿ ಟಾಟಾ" (ಜುಲೈ ೨೯, ೧೯೦೪-ನವೆಂಬರ್ ೨೯, ೧೯೯೩) |
ಸಂಗಾತಿ | ಥೆಕ್ಮಾ ವೈಕೆಜಿ ಟಾಟಾ |
ಪೋಷಕ | ಆರ್.ಡಿ. and ಸುಝಾನೆ ಟಾಟ nee Brière |
ಜನನ ಹಾಗೂ ಬಾಲ್ಯ
ಬದಲಾಯಿಸಿ'ಜೆಹಾಂಗೀರ್ ರತನ್ ಜಿ ದಾದಾಭಾಯ್ ಟಾಟಾ,' ಅವರು ಪಾರ್ಸಿ, ' ಝೊರಾಸ್ಟ್ರಿಯನ್ ಮತ,' ಕ್ಕೆ ಸೇರಿದವರು. ತಂದೆ ಬಹಳ ಮಡಿವಂತರು. ಆರ್.ಡಿ ಟಾಟಾ ಮತ್ತು ಸೂನಿ (ಮೂಲ ಫ್ರೆಂಚ್ ಹೆಸರು ಸುಝಾನ್ ಬ್ರೈರ್ ) ದಂಪತಿಗಳ ೫ ಜನ ಮಕ್ಕಳಲ್ಲಿ ಎರಡನೆಯವರಾಗಿ ಜೆಹಾಂಗೀರ್ ೨೯ ಜುಲೈ ೧೯೦೪ ರಲ್ಲಿ ಪ್ಯಾರಿಸ್ ನಲ್ಲಿ ಹುಟ್ಟಿದರು. ಇವರ ಅಕ್ಕ, 'ಸಿಲ್ಲ', ೧೯೦೩ ರಲ್ಲಿ ಜನಿಸಿದರು. 'ರೋಡಾಬೆ,' (೧೯೦೯ ), 'ದರಾಬ್,' (೧೯೧೨) ಮತ್ತು 'ಜಿಮ್ಮಿ,' (೧೯೧೬) ಇವರ ಇತರ ಒಡಹುಟ್ಟಿದವರು. ಜೆಹಾಂಗೀರ್ (ಎಲ್ಲರು ಅವರನ್ನು 'ಜೆ' ಎಂದು ಸಂಬೋಧಿಸುತ್ತಿದ್ದರು) ಎನ್ನುವುದಕ್ಕೆ ಪರ್ಷಿಯನ್ ಭಾಷೆಯಲ್ಲಿ ವಿಶ್ವವಿಜೇತ ಎನ್ನುವುದು ಹತ್ತಿರದ ಅರ್ಥ. 'ಆರ್.ಡಿ.ಟಾಟಾ, ' 'ಜೆಮ್ ಸೆಟ್ ಜಿ ಟಾಟಾ' ಅವರ ಸೋದರಮಾವ, 'ದಾದಾಭಾಯ್' ಅವರ ಮಗ. ಜೆಮ್ ಸೆಟ್ ಜಿಯವರು ಭಾರತದ ಪ್ರಪ್ರಥಮ ಔದ್ಯೋಗಿಕ ಕ್ಷೇತ್ರಗಳನ್ನು ಪ್ರಾರಂಭಿಸಿದ್ದೇ ಅಲ್ಲದೆ ಅದಕ್ಕೆ ಭದ್ರವಾದ ಬುನಾದಿಯನ್ನು ಹಾಕಿದವರು. ಅದಕ್ಕಾಗಿ ಜಮ್ ಸೆಟ್ ಜಿಯವರನ್ನು, " ಭಾರತದ ಕೈಗಾರಿಕಾ ಕ್ಷೇತ್ರದ ಜನಕ " ನೆಂದು ಕರೆಯುತ್ತಾರೆ. ೧೮೯೫ ರಿಂದಲೂ ಆರ್. ಡಿ, ಅವರು, ಜಮ್ ಸೆಟ್ ಜಿ ಮತ್ತು ದೊರಬ್ ಟಾಟಾ ರವರ ಜೊತೆಗೆ ಪಾಲುದಾರರಾಗಿದ್ದರು. ಒಳ್ಳೆಯ ನಂಬಿಕಸ್ತರು ಹಾಗೂ ಕೆಲಸದಲ್ಲಿ ಅತ್ಯಂತ ದಕ್ಷರು. ಜೆಮ್ ಸೆಟ್ ಜಿ ಅವರು ಸ್ಥಾಪಿಸಿದ ಮೂಲಭೂತ ತಂತ್ರಜ್ಞಾನಗಳು ಹಾಗೂ ಮೂಲ ಉತ್ಪಾದನಾ ಘಟಕಗಳು ಅತ್ಯಂತ ಮಹತ್ವದ ದೈನಂದಿನ ಜೀವನಾವಶ್ಯಕ ವಸ್ತುಗಳನ್ನೊಳಗೊಂಡಿವೆ. ಉದಾಹರಣೆಗೆ : ಕಬ್ಬಿಣ ಮತ್ತು ಉಕ್ಕು, ಜವಳಿ, ವಿದ್ಯುತ್ , ಸಿಮೆಂಟ್, ಚಹಾ ಇತ್ಯಾದಿ. ಜಮ್ ಸೆಟ್ ಜಿಯವರು ಮೂಲಪುರುಷರಾದರೆ, ಜೆ.ಆರ್.ಡಿ ಯವರು [೪] ಅದರ ಸಮಕ್ಷಮ ಸಂರಕ್ಷಕರು, ಹಾಗೂ ಪ್ರವರ್ತಕರು. ಸುಮಾರು ೫೩ ವರ್ಷಗಳ ತಮ್ಮ ಸುದೀರ್ಘ ಯಜಮಾನಿಕೆಯಲ್ಲಿ, ಹೊಸ ಹೊಸ ಉದ್ಯಮ ಕ್ಷೇತ್ರಗಳನ್ನು ಚೆನ್ನಾಗಿ ಅಭ್ಯಸಿಸಿ ತೆಗೆದುಕೊಂಡು, ಅದರಲ್ಲಿ ಅತ್ಯಂತ ಭಾರಿ ಪ್ರಮಾಣದ ಯಶಸ್ಸನ್ನು ಪಡೆದರು. ಮೂಲ ಟಾಟಾ ಅವರ ಹೆಸರನ್ನು ಅಮರಗೊಳಿಸಿದ ಟಾಟಾಸಂಸ್ಥೆಯ ಹಲವು ನಿಷ್ಠ ಕಾರ್ಯಶೀಲರಲ್ಲಿ ಅಗ್ರಗಣ್ಯರು.
'ಕೇನ್ ಬಂಗಲೆಯ ವಾಸಿ'
ಬದಲಾಯಿಸಿಜೆ.ಆರ್.ಡಿ. ಅಲ್ಟಾಮೌಂಟ್ ರೋಡಿನ ಕೇನ್, ಎಂಬ ಬಂಗಲೆಯಲ್ಲಿ ಪತ್ನಿ, ಥೆಲ್ಮಾರೊಡನೆ ವಾಸವಾಗಿದ್ದರು. ಇದು ಬಾಡಿಗೆ ಮನೆಯಾಗಿತ್ತು.[೫]
ವಿದ್ಯಾಭ್ಯಾಸ
ಬದಲಾಯಿಸಿ'ಜೆ.ಆರ್.ಡಿಯವರ [೬] ವಿದ್ಯಾಭ್ಯಾಸ ಮೊದಲು ಫ್ರಾನ್ಸ್, ಜಪಾನ್ ಮತ್ತು ಭಾರತದಲ್ಲಿ ನಡೆಯಿತು. ಜೆ ಅವರಿಗೆ ಮಾತೃ ಭಾಷೆ ಫ್ರೆಂಚ್ ಭಾಷೆ ಬಿಟ್ಟರೆ ಬೇರೆಯೇನೂ ಬರುತ್ತಿರಲಿಲ್ಲ. ಜೆ ಅವರ ಇಂಗ್ಲೀಷ್ ಭಾಷೆಯನ್ನು ಉತ್ತಮ ಪಡಿಸಲು, ಒಂದು ವರ್ಷ ಇಂಗ್ಲೆಂಡಿನಲ್ಲಿ 'ಕ್ರಾಮರ್' ಶಾಲೆಯಲ್ಲಿ ಭರ್ತಿಮಾಡಲಾಗಿತ್ತು. ಕ್ರಾಮರ್ ಶಾಲೆ, ಸಫೊಕ್ ಉತ್ತರ ಸಮುದ್ರದ ಬಳಿಯಿತ್ತು. ಅತ್ಯಂತ ಶೀತ ಪ್ರದೇಶ. ಸೌತ್ ವೊಲ್ಡ್, ಸ್ಕೂಲಿನ ತರುವಾಯ ಅವರಿಗೆ, ಫ್ರೆಂಚ್ ಸೈನ್ಯದಲ್ಲಿ ಒಂದು ವರ್ಷ, ರೆಜಿಮೆಂಟ್ ಡಿ ಸ್ಪಾಹಿಸ್ ಗೆ ಸೇರಿದರು. ಇನ್ನು ೬ ತಿಂಗಳು ಅಲ್ಲೇ ಕೆಲಸಮಾಡಿದ್ದರೆ, ಸೈನ್ಯದಲ್ಲಿ ಆಫೀಸರ್ ಕೆಲಸ ಸಿಕ್ಕುವುದು ಖಂಡಿತವಾಗಿತ್ತು. ಕೇಂಬ್ರಿಡ್ಜ್ ನಲ್ಲಿ ಇಂಜಿನಿಯರಿಂಗ್ ಓದಲು ಏರ್ಪಾಟು ಮಾಡಿದ್ದರು. ಆರ್.ಡಿ.ಟಾಟಾ ಅವರು, ಬೊಂಬಾಯಿನಲ್ಲಿ ಸೂನಿಯ ಆಸೆಗೆ ತಕ್ಕಂತಹ " ಸುನಿತ," ಎಂಬ ಬಂಗಲೆಯೊಂದನ್ನು ಬೊಂಬಾಯಿನ ಮಲಬಾರ್ ಹಿಲ್ಸ್ ನಲ್ಲಿ ಖರೀದಿಸಿದರು. ೧೯೨೦ ರಲ್ಲಿ ಬೊಂಬಾಯಿನ ನೇರಳ್ ರೈಲ್ವೆ ನಿಲ್ದಾಣದ ಬಳಿ ಇದ್ದ ಗಿರಿಧಾಮ 'ಮಾಥೆರಾನ್' ನಲ್ಲಿ 'ದಿನ್ ಶಾ ಪೆಟಿಟ್' ಅವರ ಬಂಗಲೆಯಲ್ಲಿ ಸ್ವಲ್ಪ ಕಾಲ ತಂಗಲು ವ್ಯವಸ್ಥೆಯಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ದಿಢೀರನೆ ಕೆಲವೊಂದು ಬದಲಾವಣೆಗಳಾದವು. ತಂದೆಯವರು ಮನಸ್ಸು ಬದಲಾಯಿಸಿ, 'ಜೆ' ರವರನ್ನು ಬೊಂಬಾಯಿಗೆ ಹೋಗಲು ಆಗ್ರಹ ಮಾಡಿದರು. ೧೯೨೩ ರಲ್ಲಿ ಸೂನಿಯವರ ಆರೋಗ್ಯದಲ್ಲಿ ಏರುಪೇರು ಆಗಿ, ಭಾರತಕ್ಕೆ ಬರುವ ಸ್ಥಿತಿಯಲ್ಲಿರಲಿಲ್ಲ. ೧೯೨೩ ನೆಯ ಇಸವಿಯಲ್ಲಿ, ಸೂನಿಯವರು ತಮ್ಮ ೪೩ ನೆ ವಯಸ್ಸಿನಲ್ಲೇ, ಇಹಲೋಕವನ್ನು ತ್ಯಜಿಸಿದರು. ಈ ಸುದ್ದಿಯನ್ನು ತಂತಿಮೂಲಕ ತಿಳಿದ ಆರ್. ಡಿ ಯವರು, ಪ್ಯಾರಿಸ್ ತಲುಪುವ ವೇಳೆಗೆ ಸೂನಿಯವರ ಅಂತಿಮ ಸಂಸ್ಕಾರಗಳೆಲ್ಲಾ ಮುಗಿದಿದ್ದವು. ಭಾರತದಲ್ಲಿ ಸರ್. ದೊರಾಬ್ ಟಾಟಾ ಅವರ ಆರೋಗ್ಯ ದಿನೇ ದಿನೇ ಹದಗೆಡುತ್ತಿತ್ತು. ಆರ್. ಡಿಯವರೂ ಸಹಿತ ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ಹೊತ್ತುಕೊಳ್ಳುವಷ್ಟು ಶಕ್ತರಾಗಿರಲಿಲ್ಲ. 'ಸೂನಿ 'ಯವರ ಮರಣದ ನಂತರ, ಅಜ್ಜಿ, 'ಮಿಸೆಸ್. ಬ್ರೈರ್', ಅವರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.
'ಅಪ್ರೆಂಟಿಸ್' ಆಗಿ
ಬದಲಾಯಿಸಿತಂದೆಯವರ ಆದೇಶದಂತೆ, ನವ ಯುವಕ 'ಜೆ',[೭] 'ಟಾಟಾ ಸನ್ಸ್ ಕಂಪೆನಿ' ಯ ಅಪ್ರೆಂಟಿಸ್ ಆಗಿ, ಬೊಂಬಾಯಿಗೆ ಪಾದಾರ್ಪಣೆ ಮಾಡಿದರು. "ಜೆ " ೧೯೨೫ ರಲ್ಲಿ, ಬೊಂಬಾಯಿಗೆ ಬಂದು ಟಾಟ ಕಂಪೆನಿಯಲ್ಲಿ 'ಅಪ್ರೆಂಟಿಸ್,' ಆಗಿ ಭರ್ತಿಯಾದರು. ಆಗ ತಾನೆ ಬಂದು ಸೇರಿದ ಜೆ,ಯವರಿಗೆ, ದೇಶ-ಭಾಷೆಗಳೆಲ್ಲಾ ಹೊಸದು. ಗುಜರಾತಿ, ಹಿಂದಿ ಸರಿಯಾಗಿ ಬರುತ್ತಿರಲಿಲ್ಲ. ಅವರು ವಿಮಾನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ಬೇರೆ ಕೆಲಸಗಳಿಗೆ ಇನ್ನೂ ಅವರಿಗೆ ಬಹಳ ತರಭೇತಿಯ ಅಗತ್ಯವಿತ್ತು. ಜೆ.ಎನ್ ಅವರ ವಿಲ್ ನಂತೆ, ದೊರಾಬ್ ಅವರಿಗೆ, ೩ ಲಕ್ಷರೂಪಾಯಿ, ವಾರ್ಷಿಕ ವೇತನ, ಆರ್. ಡಿಯವರಿಗೆ, ೨ ಲಕ್ಷರೂ. ಜೆ ಅವರಿಗೆ, ೩,೦೦೦, ದುರಾಬ್, ೨,೦೦೦ ಜಿಮ್ಮಿ ೧೦೦೦, ಮತ್ತು ಕೊನೆಯವರಿಗೆ, ೫ ರಲ್ಲಿ ಒಂದು ಭಾಗ ಹಣ ಸಂದಾಯವಾಗುತ್ತಿತ್ತು. ಆದರೆ, ಜೆ ಎಲ್ಲರಿಗೂ ಸಮಭಾಗ ಕೊಡಲು ಆಶಿಸಿದರು. ಟಾಟಾ ಕಂಪೆನಿ ಅವರಿಗೆ ಮಾಸಿಕ ೭೫೦/- ರೂ ವೇತನವನ್ನು ನಿರ್ಧರಿಸಿತ್ತು. ೧೯೨೬-೧೯೩೧ ರವರೆಗೆ, ಬರ್ದೋರ್ಜಿ ಪದ್ ಶ ರವರು ಡೈರೆಕ್ಟರ್. ಆಗ ಟಾಟಾ ಹೌಸ್ ನಲ್ಲಿ, ಒಬ್ಬ ನಿವೃತ್ತ ಐ. ಸಿ. ಎಸ್ ಅಧಿಕಾರಿ, ಟಾಟಸಂಸ್ಥೆಯ ಕಾರ್ಯಭಾರವನ್ನು ನೋಡಿಕೊಳ್ಳುತ್ತಿದ್ದರು. ಅವರೇ ಸ್ಕಾಟ್ ಮನ್, 'ಜಾನ್ ಪೀಟರ್ ಸನ್'. ಜೆ ಅವರ ಆತ್ಮಕಥೆಯಲ್ಲಿ ಹಲವು ಬಾರಿ ಪೀಟರ್ ಸನ್ ರನ್ನು ನೆನೆಯುತ್ತಾರೆ. ಪ್ರಾರಂಭಿಕ ಹಂತದಲ್ಲಿ ಟಾಟಾ ಕಂಪೆನಿಯಂತಹ ಒಂದು ಬೃಹತ್ ಉದ್ಯಮ ಸಂಸ್ಥೆಯ ವೈವಿಧ್ಯಮಯ ಉತ್ಪಾದನಾ ಸಾಮರ್ಥ್ಯವನ್ನೂ, ಕಾರ್ಯಕ್ಷೇತ್ರಗಳ ವಹಿವಾಟುಗಳನ್ನೂ, ಅರ್ಥ ಮಾಡಿಕೊಳ್ಳಲು, ಆಳದಲ್ಲಿ ಹೋಗಿ, ಅಂತರಂಗವನ್ನು ಹೊಕ್ಕು ತಿಳಿದುಕೊಳ್ಳಲು ಅವರಿಗೆ ಸಹಾಯವಾಯಿತು. ಆರ್. ಡಿ ಟಾಟಾ ಅವರು, ಪೀಟರ್ ಸನ್ ರನ್ನು ಮಗ, 'ಜೆ'ಗೆ ಪರಿಚಯಿಸಿ, ಅವರ ಕೊಠಡಿಯಲ್ಲಿ ಒಂದು ಮೂಲೆಯಲ್ಲಿ ಡೆಸ್ಕ್ ಒಂದನ್ನು ಹಾಕಿಸಿಕೊಟ್ಟರು. ಪೀಟರ್ ಸನ್, ಪತ್ರಗಳಿಗೆ ಸಹಿ ಹಾಕುವ ಮೊದಲು, ಜೆ ಆಫೀಸಿನ ಪ್ರತಿ ಪತ್ರವನ್ನೂ ಓದಿ ಅವುಗಳನ್ನು ಪೀಟರ್ ಸನ್ ಅವಗಾಹನೆಗೆ ಮಂಡಿಸುತ್ತಿದ್ದರು. ಹೀಗೆ ಜೆ. ಆರ್. ಡಿ ಯವರಿಗೆ ಕಂಪೆನಿಯಲ್ಲಿ ನಡೆಯುವ ಪತ್ರ ವ್ಯವಹಾರಗಳು ಮತ್ತು ಅದಕ್ಕೆ ಸ್ಪಂದಿಸುವ ಬಗೆ ಹೇಗೆ ಎನ್ನುವ ಸ್ಥೂಲ ಪರಿಚಯವಾಯಿತು. ಇದಾದ ಬಳಿಕ, ರತನ್ ತಮ್ಮ ಮಗನಿಗೆ, 'ಟಾಟ ಸ್ಟೀಲ್ ಪ್ಲಾಂಟ್ ' ನಲ್ಲಿ ಕೆಲಸ ಕಲಿಯಲು 'ಜಮ್ ಶೆಟ್ ಪುರ' ಕ್ಕೆ, ಅಪ್ರೆಂಟಿಸ್ ಆಗಿ ಕಳಿಸಿಕೊಟ್ಟರು. ಅದೇ ವರ್ಷ, ಅಂದರೆ ೧೯೨೫ ರಲ್ಲಿ ಜೆ, ಯವರ ತಂದೆ ಆರ್. ಡಿಟಾಟಾ, ಪ್ಯಾರಿಸ್ ನಲ್ಲಿ ತೀರಿಕೊಂಡರು. ಸರ್ ದೊರಾಬ್, ಮಧುಮೇಹದ ಕಾಯಿಲೆಯಿಂದ ನರಳಿ ಕೃಶರಾದರು. ಟಾಟ ಕಂಪೆನಿಯ ಜವಬ್ದಾರಿ ದಿನೇ-ದಿನೇ ಹೆಚ್ಚಾಗುತ್ತಿತ್ತು. ವಯಸ್ಸು ಅವರನ್ನು ಹಣ್ಣುಮಾಡಿತ್ತು. ತಮಗಿಂತ ಕೇವಲ ೩ ವರ್ಷಹಿರಿಯರಾದ ಆರ್.ಡಿಯವರ ಮರಣ, ದೊರಾಬ್ ಟಾಟಾ ಮತ್ತು ಟಾಟಾ ಪರಿವಾರಕ್ಕೆ ಒಂದು ಅಘಾತದಂತೆ, ಅನುಭವವಾಯಿತು.
ಸಾಲದ ಹೊರೆಯ ಆತಂಕ
ಬದಲಾಯಿಸಿತಂದೆ, 'ಆರ್.ಡಿ.ಟಾಟಾ' ಅವರು ಮಾಡಿದ, ಸಾಲದ ಹೊರೆ ತೀರಿಸುವುದು 'ಜೆ.ಆರ್.ಡಿ.' ಯವರ ಆದ್ಯ ಕರ್ತವ್ಯವಾಗಿತ್ತು. ೨೨ ವರ್ಷದ ಜೆ ಮನೆಯ ಹಾಗೂ ಟಾಟಾ ಸನ್ಸ್ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು. ಪಾರಂಪರಿಕವಾಗಿ ತಂದೆಯವರು ನಿಭಾಯಿಸುತ್ತಿದ್ದ ಟಾಟಾ ಸನ್ಸ್ ನ ನಿರ್ದೇಶಕ ಪದವಿಯನ್ನು' ಜೆ' ಒಪ್ಪಿಕೊಂಡು ಕಂಪೆನಿಯ ಜವಾಬ್ದಾರಿಯನ್ನು ಕೂಡಲೆ ತೆಗೆದುಕೊಳ್ಳಬೇಕಾಯಿತು. ತಂದೆಯವರು ಮಾಡಿಕೊಂಡ ಸಾಲ ಹೆಚ್ಚಾಗಿತ್ತು ; ಅಲ್ಲದೆ, ಅವರು ಟಾಟಾ ಕಂಪೆನಿಯಿಂದಲೂ ಬಹಳ ಸಾಲ ಪಡೆದಿದ್ದರು. ಹಾಗೂ ಸರ್ ದೊರಾಬ್ ರವರ ಬಳಿ ಕೂಡ ಸಾಲ ಮಾಡಿಕೊಂಡಿದ್ದರು. ಮೇಲಾಗಿ ಹಣ-ಕಾಸಿನ ವಿಷಯದಲ್ಲಿ ಸರ್. ದೊರಾಬ್ ಟಾಟ ಬಹಳ ಕಟ್ಟುನಿಟ್ಟಾಗಿ ವ್ಯವಹರಿಸುತ್ತಿದ್ದರು. ಸ್ವಲ್ಪ ದುಂದು ವೆಚ್ಚದ ಸ್ವಭಾವದ ಆರ್. ಡಿ, ಹೆಂಡತಿಯ ಅನಾರೋಗ್ಯಕ್ಕೆ, ಮತ್ತು ವಿದೇಶದಲ್ಲಿ ಮನೆಯನ್ನು ಬಾಡಿಗೆ ಪಡೆದು ಮಾಡಿದ ವ್ಯವಸ್ಥೆಗಳಿಗೆ ಬಹಳ ಹಣಸಾಲಮಾಡಬೇಕಾಯಿತು. ಇವೆಲ್ಲಾ ಸಾಲದ ಹಣವನ್ನು ತೀರಿಸುವುದು ಜೆ ಅವರಿಗೆ ವಿಪರೀತ ಕಷ್ಟವಾಯಿತು. ಸರ್. ದೊರಾಬ್ ಎಷ್ಟೋ ಪಾಲು ಹಣ ಮಾಫಿಮಾಡಿದಾಗ್ಯೂ ಸಾಲದ ಹೊರೆ ಹೆಚ್ಚಾಗಿತ್ತು. ಜೆ ಯೋಚಿಸಿ, ಕೊನೆಗೆ, ತಮ್ಮ ಪ್ಯಾರಿಸ್ ನ 'ಹಾರ್ಡ್ ಲಾಟ್', ನಲ್ಲಿದ್ದ ಸ್ವಂತ ಮನೆ, ಹಾಗೂ ಅಲ್ಲಿನ ವ್ಯವಹಾರಗಳನ್ನೆಲ್ಲಾ ಮಾರಿದರು. ಬೊಂಬಾಯಿನ 'ಸುನಿತ', ಮತ್ತು ಇನ್ನೊಂದು ಮನೆಯನ್ನೂ ಮಾರಿ, ಬಂದ ಹಣದಿಂದ ಸಾಲವನ್ನೆಲ್ಲಾ ತೀರಿಸಿ, 'ತಾಜ್ ಮಹಲ್ ಹೋಟೆಲ್', ನಲ್ಲಿ ಸ್ವಲ್ಪ ದಿನ ವಾಸ್ತವ್ಯಕ್ಕೆ ಏರ್ಪಾಡು ಮಾಡಿ ಕೊಂಡರು. ಜೆ ತಮ್ಮ ೧೫ ನೆಯ ವರ್ಷದಲ್ಲೇ ಪ್ಯಾರಿಸ್ ನಗರದಲ್ಲಿ ಒಂದು ಸುತ್ತು ಸುತ್ತಿಸುವ ವಿಮಾನದಲ್ಲಿ ಸುತ್ತಿ ಅದರ ಸ್ಥೂಲ ಅನುಭವವನ್ನು ಪಡೆದು ಆನಂದಿಸಿದ್ದರು. ಅವರಿಗೆ ವಿಮಾನಯಾನದಲ್ಲಿ ತೀವ್ರವಾದ ಆಸಕ್ತಿ. ಅಂದಿನ ದಿನಗಳಲ್ಲಿ ಜೆ ಭಾರತದಲ್ಲಿ, ಪೈಲೆಟ್ ಲೈಸೆನ್ಸ್ ಪಡೆದ ಪ್ರಥಮ ಭಾರತೀಯರಾಗಿದ್ದರು.
ಪೈಲೆಟ್ ಆಗುವ ಕನಸು ನನಸಾದಾಗ
ಬದಲಾಯಿಸಿ೧೯೩೦ ರಲ್ಲಿ ನೆವಿಲ್ ವಿನ್ಸೆಂಟ್ ಎಂಬ ಅಂಗ್ಲ ಪೈಲೆಟ್, ಭಾರತದ ಸ್ಥಳೀಯ ಜನರನ್ನು ತಮ್ಮ ಪುಟ್ಟ ವಿಮಾನದಲ್ಲಿ ಕುಳ್ಳಿರಿಸಿ ಕೊಂಡು ನಗರ ಪ್ರದಕ್ಷಿಣೆ ಮಾಡಿಸುವುದರಲ್ಲಿ ಆಸಕ್ತಿ ತೋರಿಸುತ್ತಿದ್ದರು. ಸಾಹಸಿ, ಹಾಗೂ ಮಹತ್ವಾಕಾಂಕ್ಷಿಯಾಗಿದ್ದ ಅವರು, ವಿಮಾನಾಸಕ್ತ ಜೆ ಅವರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದರು. 'ಜೆ' ಆಗಿನ್ನೂ ತಮ್ಮ ಅಸ್ಪಷ್ಟ ಹೆಜ್ಜೆಗಳನ್ನು ಟಾಟಾ ಸಾಮ್ರಾಜ್ಯದಲ್ಲಿ ಇಡುತ್ತಿದ್ದ ಕಾಲವದು. ಟಾಟಾ ಸಂಸ್ಥೆಯ ಆಗಿನ ಡೈರೆಕ್ಟರ್ ಆಗಿದ್ದ 'ಸರ್ ದೊರಾಬ್ ಟಾಟಾ' ಅವರಿಗೆ ವಿಮಾನಯಾನದ ಸೌಕರ್ಯಗಳ ಬಗ್ಗೆ, ಮುಂದಿನ ದಿನಗಳಲ್ಲಿ ಅದರ ಬೆಳವಣಿಗೆಯ ಅಗಾಧ ಸಾಧ್ಯತೆಗಳ ವಿಚಾರಗಳನ್ನು ಪೀಟರ್ ಸನ್ ಮುಖಾಂತರ ದೊರಾಬ್ ಟಾಟರವರಿಗೆ ಮಾಹಿತಿ ನೀಡಿ ಮನವರಿಕೆ ಮಾಡಿದರು. ಒಂದು ವಿಮಾನಯಾನ ಕಂಪೆನಿಯನ್ನು ಸ್ಥಾಪಿಸಲು ಕರೆಯಿತ್ತರು. ಪೈಲೆಟ್ ಆಗುವ ಕನಸು, ಹಾಗೂ "ಸಾರ್ವಜನಿಕ-ವಿಮಾನಯಾನ", ಬಾಲ್ಯದಲ್ಲೇ ಮನಸ್ಸಿನಲ್ಲಿ ಹುದುಗಿದ್ದ ಆಸೆ, ಮೂರ್ತರೂಪು ಪಡೆಯಿತು. ಹೀಗೆ, "ಟಾಟಾ ಏರ್ಲೈನ್ಸ್", ಅಸ್ತಿತ್ವಕ್ಕೆ ಬಂತು. ಈ ಹೊಸ ಸಂಸ್ಥೆ, ಮೊದಲಿಗೆ, 'ಟಾಟಾ ಸನ್ಸ್' ಸಂಸ್ಥೆಯ ಒಂದು ಚಿಕ್ಕ ಅಂಗವಾಗಿ ಪ್ರಾರಂಭವಾಗಿತ್ತು. ೧೫, ಅಕ್ಟೋಬರ್ ೧೯೩೨ ಭಾರದ ವಿಮಾನಯಾನದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯದಿನ. ಆ ದಿನ ಜೆರವರು ತಾವೊಬ್ಬರೇ ಕರಾಚಿಯಿಂದ ಅಹ್ಮದಾಬಾದ್ ಮುಖಾಂತರವಾಗಿ ಬೊಂಬಾಯಿಗೆ ಪುಸ್ ವಿಮಾನದ ಹಾರಾಟದ ವ್ಯವಸ್ಥೆ ಮಾಡಲಾಗಿತ್ತು. ಸೂಕ್ಷ್ಮಮತಿ, ಸಮಯಪ್ರಜ್ಞೆ ಹಾಗೂ ದೂರದೃಷ್ಟಿ ಯನ್ನು ಹೊಂದಿದ್ದ ಜೆಯವರು, ವಿಮಾನಯಾನದ ಬಹುಮುಖ ಸವಲತ್ತುಗಳನ್ನು ಗ್ರಹಿಸಿದ್ದರು. ಸರ್. ದೊರಾಬ್ ಟಾಟಾ ಮತ್ತು ತಂದೆಯವರು ಆಗಲೇ ಭಾರಿ ಉದ್ಯಮಗಳನ್ನು ಸ್ಥಾಪಿಸಿದ್ದರು. ತಮಗೆ ಅವುಗಳಲ್ಲಿ ಪೂರ್ಣಕ್ಷಮತೆ ಇರಲಿಲ್ಲ. ತಮ್ಮ ಕ್ಷೇತ್ರವೇನಿದ್ದರೂ ವಿಮಾನಯಾನಕ್ಕೆ ಸಂಬಂಧಿಸಿದ್ದು. ಅದರಲ್ಲಿ ಅತಿ ಹೆಚ್ಚಿನ ಯೋಗದಾನ ಮಾಡುವ ಆಸೆ ಅವರಿಗೆ ಗೋಚರಿಸಿತು.
'ಥೆಲ್ಮಿಯವರ ಭೇಟಿ'
ಬದಲಾಯಿಸಿಯುವ ಜೆ.ಆರ್.ಡಿ.ಯವರಿಗೆ, 'ಸ್ಪೋರ್ಟ್ಸ್ ಕಾರು 'ಗಳನ್ನು ವೇಗವಾಗಿ ಓಡಿಸುವ ಒಂದು ಹುಚ್ಚಿತ್ತು. ೧೯೨೦ ರಲ್ಲಿ ಅವರ ತಂದೆ "ಬ್ಯುಗಾಟ" ಕಾರನ್ನು ಹುಟ್ಟು ಹಬ್ಬದ ಬಳುವಳಿಯಾಗಿ ಕೊಟ್ಟರು. ಜೆ' ತಮ್ಮ ಬ್ಯುಗೋಟ ದಲ್ಲಿ ಬೊಂಬಾಯಿನ ರಸ್ತೆಗಳಲ್ಲಿ ಭರ್ರನೆ ಓಡಾಡುವುದನ್ನು ಬ್ರಿಟಿಷ್ ಪೋಲಿಸ್ ಅಧಿಕಾರಿಗಳು ಸಹಿಸಲಿಲ್ಲ. ಕಾರಿನ ವೇಗದ ಎಲ್ಲೆ ಮೀರಿದರೆಂಬ ಸುಳ್ಳು-ಆಪಾದನೆಯನ್ನು 'ಜೆ' ಮೇಲೆಹಾಕಿ, ಕೇಸ್ ಬುಕ್ ಮಾಡಿದರು. ಆಗ, 'ಜೆ' ಅವರಿಗೆ ತಿಳಿದ ಆಗಿನ ಕಾಲದ ಅತ್ಯಂತ ಹೆಸರುವಾಸಿಯಾದ ಲಾಯರ್, 'ಜ್ಯಾಕ್ ವೈಕೆಜಿ' ಯವರನ್ನು ಭೇಟಿಯಾಗಿ, ಅವರ ಸಹಾಯದಿಂದ ಕೇಸ್ ಗೆದ್ದರು. ಅವರ ಮನೆಗೆ ಹೋದಾಗ ಒಬ್ಬ ಸುಂದರ ಅತ್ಯಾಕರ್ಷಕ ಆಧುನಿಕ ತರುಣಿಯ ಭೇಟಿಯಾಯಿತು. ಈಕೆಯ ಚಿಕ್ಕಪ್ಪನೇ 'ವೈಕೆಜಿ'ಯವರು. ಹೀಗೆಯೇ ಅವರ ಭೇಟಿ ಪ್ರೇಮದಲ್ಲಿ ತಿರುಗಿ, ೧೯೩೦ ರಲ್ಲಿ ಜೆ, 'ಥೆಲ್ಮ' ಅವರನ್ನು ಮದುವೆಯಾದರು. ತಂದೆಯವರು ಬಹುಮಾನವಾಗಿ ಕೊಟ್ಟ 'ಬ್ಯುಗಾಟೊ ವೇಗಿಕಾರ್','ಥೆಲ್ಮಾ ವೈಕೆಜಿ,'ಯವರ ಮಿಲನಕ್ಕೆ ಕಾರಣವಾಯಿತು. 'ಥೆಲ್ಲಿ,' ಅಮೆರಿಕದಲ್ಲಿ ಜನಿಸಿದ್ದರು. ಆಕೆಯ ಪ್ರಾಥಮಿಕ ಶಾಲೆಯ ಕಲಿಕೆ ಇಟಲಿಯಲ್ಲಾಗಿತ್ತು. ತಾಯಿ, 'ಮುರೆಲ್,' ಅಕ್ಕ,'ಕಿಟ್ಟಿ', ಥೆಲ್ಲಿ ಗಿಂತ ಕೆಲವೇ ವರ್ಷ ದೊಡ್ಡವಳು. ಬೊಂಬಾಯಿನ,'ಜೆ. ಜೆ. ಸ್ಕೂಲ್ ಆಫ್ ಅರ್ಟ್' ನಲ್ಲಿ ಕಲಿಕೆ. ಬಣ್ಣದ ಚಿತ್ರಗಳು, ' ಪೋರ್ಟ್ರೇಟ್ಸ್' ಬರೆಯಲು ವಿಶೇಷ ಆಸಕ್ತಿ. ಈಜುವುದು ಹಾಗೂ ನೃತದಲ್ಲಿ ಪರಿಣತಿ ಇತ್ತು. 'ಸ್ಕರ್ಟ್' ಅಥವಾ 'ಸಾಡಿ'ಯಲ್ಲಿ ಆಕೆ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿದ್ದಳು. 'ಜೆ'ಸಹಜವಾಗಿ ಮನಸೋತರು.
ಟಾಟಾ ಸಂಸ್ಥೆಗೆ ಪಾದಾರ್ಪಣೆ
ಬದಲಾಯಿಸಿಟಾಟಾ ಸನ್ಸ್ ಕಂಪೆನಿಯ ಡೈರೆಕ್ಟರ್ ಆಗಿದ್ದ, ಅನುಭವಿ, 'ಸರ್ ನವರೊಸ್ ಜಿ ಸಕ್ಲಾಟ್ ವಾಲ', ರವರು ೧೯೩೮ ರಲ್ಲಿ ಲಂಡನ್ ನಲ್ಲಿ ಮರಣ ಹೊಂದಿದರು. ಸರ್. ದೊರಾಬ್ಜಿ ಅವರ ನಂತರ ಟಾಟಾ ಸನ್ಸ್ ಕಂಪೆನಿಯ ಡೈರೆಕ್ಟರ್ ಆಗಿದ್ದರು. ಅವರ ಮರಣದ ನಂತರ ಬೃಹತ್ ಪ್ರಮಾಣದಲ್ಲಿ ಬೆಳೆದಿದ್ದ ಟಾಟಾ ಸನ್ಸ್ ಕಂಪೆನಿಯನ್ನು ನಡೆಸಲು ಒಬ್ಬ ಸಮರ್ಥ ವ್ಯಕ್ತಿಯ ಅವಶ್ಯಕತೆಯಿತ್ತು. ಟಾಟ ಸನ್ಸ್, ಡೈರೆಕ್ಟರ್ ಗಳೆಲ್ಲಾ ಸಮಾಲೋಚಿಸಿ, ಜೆ ರವರನ್ನು ಟಾಟಾ ಸನ್ಸ್ ನ ಪ್ರಧಾನ ಡೈರೆಕ್ಟರ್ , ಆಗಿ ಚುನಾಯಿಸಿದರು. ಹಾಗೆ ೨೬, ಜುಲೈ, ೧೯೩೮ ರಂದು ಶುರುವಾದ ಟಾಟಾ ಸಂಸ್ಥೆಯ ನಂಟು, ೨೫, ಮಾರ್ಚ್, ೧೯೯೧ ರ ವರೆಗೆ ಸತತವಾಗಿ ಮುಂದುವರೆಯಿತು. ತಮ್ಮ ಕೊನೆಯ ದಿಗಳವರೆಗೆ 'ಟಾಟಾಸಂಸ್ಥೆ' ಯ ಏಳಿಗೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು.
'ಟಾಟಾ ಏರ್ಲೈನ್ಸ್',ಸ್ಥಾಪನೆ
ಬದಲಾಯಿಸಿ೧೯೪೬ ರಲ್ಲಿ, ಜೆ. ಆರ್. ಡಿ. ಟಾಟಾರವರ, ಪ್ರೀತಿಯ ಕಂಪೆನಿ ,ಟಾಟಾ ಏರ್ಲೈನ್ಸ್ ಸ್ವತಂತ್ರ ಕಂಪೆನಿಯಾಯಿತು. ೨ ವರ್ಷಗಳ ನಂತರ, ಜೆ 'ಟಾಟಾ ಏರ್ ಲೈನ್ಸ್ (ಇಂಟರ್ನ್ಯಾಷನಲ್)', ಸ್ಥಾಪಿಸಿದರು. ೧೯೫೩ ರಲ್ಲಿ ಭಾರತದ ಉದ್ಯಮಗಳು ರಾಷ್ಟ್ರೀಕರಣ ವಾದಾಗ ಜೆ ಎರಡು ಕಂಪೆನಿಗಳ ನಿರ್ದೇಶಕತ್ವಕ್ಕೆ ರಾಜೀನಾಮೆ ಕೊಟ್ಟರು. ಜೆ, ಒಬ್ಬ ಸಾಹಸಿ, ವಾಣಿಜ್ಯೋದ್ಯಮಿ, ತಾಂತ್ರಿಕ ವಿಷಯಗಳನ್ನು ಚೆನ್ನಾಗಿ ಅರಿತವರು, ಮೇಲಾಗಿ ಅದರ ಆಡಳಿತದಲ್ಲಿ ಚೆನ್ನಾಗಿ ನುರಿತವರು. ವಿಮಾನಯಾನದ ಬಗ್ಗೆ, ಕಾರ್ ರೇಸ್ ಬಗ್ಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು, ಆಧುನಿಕ ಮ್ಯಾಗಜೈನ್ ಗಳನ್ನು ಓದಿ ವಿಷಯ ಸಂಗ್ರಹಿಸಿದ್ದರು. ೧೯೮೨ ರಲ್ಲಿ ತಮ್ಮ '೭೮ ನೇ ಹುಟ್ಟುಹಬ್ಬ' ದ ದಿನದಂದು, ಟಾಟಾ ತಮ್ಮ (೧೯೩೨ ರಲ್ಲಿ ನಡೆಸಿದ ಸೋಲೋ ವಿಮಾನ ಹಾರಾಟದಂತಹ) ಚಾರಿತ್ರ್ಯಿಕ ಹಾರಾಟವನ್ನು ಇನ್ನೊಮ್ಮೆ, ಮಾಡಿ ತೋರಿಸಿದರು. ಇದು ಅಂದಿನ ನವ ಯುವಕರನ್ನು ಹುರಿದುಂಬಿಸಲು, ಹಾಗೂ ಅವರಿಗೆ ವಿಮಾನಯಾನದಲ್ಲಿ ಆಸಕ್ತಿ ಮೂಡಿಸಲು ತೆಗೆದುಕೊಂಡ ಒಂದು ಕ್ರಮವಾಗಿತ್ತು. ಆಗ ಟಾಟಾ ಕಂಪೆನಿಯ ಸುಪರ್ದಿನಲ್ಲಿ ಒಟ್ಟು ೧೪ ಕಂಪೆನಿಗಳಿದ್ದವು. ವಾಣಿಜ್ಯ ವಾಹನಗಳು, ಇಂಜಿನಿಯರಿಂಗ್, ಹೋಟೆಲ್ಗಳು, ಏರ್ ಕಂಡೀಶನರ್ ಹಾಗೂ ರೆಫ್ರಿಜರೇಟರ್ಗಳು, ಕನ್ಸಲ್ ಟೆನ್ಸಿ ಸರ್ವಿಸಸ್, ಇನ್ ಫರ್ಮೇಶನ್ ಟೆಕ್ನೊಲೊಜಿ, ಕನ್ಸುಮರ್ಸ್ ಸರ್ವಿಸಸ್, ಕನ್ಸೂಮರ್ಸ್ ಡ್ಯುರಬಲ್ಸ್, ಟಿ. ಸಿ. ಎಸ್ ಇತ್ಯಾದಿ. ಜೆ ಈಗಿನವರೆಗೆ ಮಂಚೂಣಿಯಲ್ಲಿ ಹಿರಿಯ ಹಲವು ಪ್ರಮುಖ ಸಂಸ್ಥೆಗಳನ್ನು ಪೋಷಿಸಿ ಕೊಂಡು ಬಂದರು. ಅದರಲ್ಲಿ ಅನೇಕ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಉತ್ಪಾದನೆಯಲ್ಲಿ ಮತ್ತು ಗುಣಮಟ್ಟದಲ್ಲಿ ಅಧಿಕ ಪ್ರಗತಿಯನ್ನು ತರಲು ಸದಾ ಪ್ರಯತ್ನಿಸಿದರು. ಭಾರತದ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಅಂತ್ಯಗೊಳಿಸಲು ತಾವು ಸ್ವತಃ ಕಂಕಣಬದ್ಧರಾಗಿ ಕೆಲಸಮಾಡಿದ್ದು. ಭಾರತದ ಸ್ತ್ರೀಯರ ವಿದ್ಯಾಭ್ಯಾಸ ಹಾಗೂ ಅವರನ್ನು ಪೋಷಿಸುವ ಸೇವಾ ಸಂಸ್ಥೆಗಳ ಸುವ್ಯಸ್ಥಿತ ಕೆಲಸ ಕಾರ್ಯಗಳ ಮಹತ್ವದ ಬಗ್ಗೆ ಒತ್ತು ಕೊಟ್ಟರು.
'ಜೆ.ಅರ್.ಡಿ.ಟಾಟಾ' ಟಾಟಾ ಕಂಪೆನಿಯ ಡೈರೆಕ್ಟರ್ ಆಗಿ
ಬದಲಾಯಿಸಿಭಾರತದ ಅತ್ಯಂತ ದೊಡ್ಡ ಕಂಪೆನಿಯ ೪ ನೆಯ ಡೈರೆಕ್ಟರ್, ಆಗಿ ಜೆ. ಚುನಾಯಿಸಲ್ಪಟ್ಟರು. ೧೯೩೯ ರಲ್ಲಿ ಇದ್ದ ಆಸ್ತಿ -೬೨ ಕೋಟಿ ಅಥವಾ ೬೨೦. ಮಿಲಿಯ ರುಪಾಯಿಗಳು. ೧೯೬೦ ರಲ್ಲಿ ೧೦,೦೦೦ ಕೋಟಿ ಅಥವಾ, ೧೦೦ ಬಿಲಿಯನ್. ೧೪ ಕಂಪೆನಿಗಳಿಂದ, ಮಾರಾಟ ೨೮೦ ಕೋಟಿ, ೨.೮ ಬಿ. ೧೯೯೩ ರಲ್ಲಿ ೧೫,೦೦೦ ಕೋಟಿ -೧೫೦ ಬಿ.೫೦ ಕ್ಕಿಂತ ಹೆಚ್ಚು ಸಂಸ್ಥೆಗಳು ಹಾಗೂ ಲೆಕ್ಕವಿಲ್ಲದಷ್ಟು ಚಿಕ್ಕಪುಟ್ಟ ಕಂಪೆನಿಗಳು. ಏರ್ ರ್ಲೈನ್ಸ್ ನಿಂದ ಹೋಟೆಲ್, ಟ್ರಕ್ ನಿಂದ ಲೋಕೋಮೋಟಿವ್, ಸೋಡ ಅಶ್, ಔಷಧಿ, ಐರ್ ಕಂಡೀಶನ್, ಲಿಪ್ಸ್ಟಿಕ್, ಕಲೋನ್, ಸಿಮೆಂಟ್ ಕಂ ಸೇರಿ, ಎ. ಸಿ. ಸಿ. ಕಂಪೆನಿಯವರೆಗ. ಈಗಿರುವ ಕಂಪೆನಿಗಳನ್ನು ಧೃಢಪಡಿಸಿ, ಹೊಸ ಉದ್ಯೋಗಗಳನ್ನು ಪ್ರಾರಂಭಿಸಿದರು. ಅಡುಗೆ ಉಪ್ಪು, ಮೊದಲಾದವುಗಳು. ೧೯೬೪-೧೯೯೧, ವೇಳೆಯಲ್ಲಿ, ಭಾರತ ಸರ್ಕಾರದ ಕಂಟ್ರೋಲ್ ನೀತಿಯಿಂದ ಟಾಟಾ ಸಂಸ್ಥೆ ಅಷ್ಟೊಂದು ಗಮನಾರ್ಹ ಪ್ರಮಾಣದಲ್ಲಿ ಬೆಳೆಯಲು ಸಹಾಯವಾಗಲಿಲ್ಲ. ಜೆ.ಆರ್.ಡಿ.ಟಾಟಾರವರಿಗೆ, ಇದರ ಬಗ್ಗೆ ಸ್ವಲ್ಪ ಅಸಮಧಾನವಿತ್ತು. ಸರ್ಕಾರದ ಅನುಕೂಲವಿದ್ದಿದ್ದರೆ, ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾಗಿತ್ತು, ಎಂದು ಜೆ.ಆರ್.ಡಿ ಹೇಳುತ್ತಿದ್ದರು.
ಟಾಟ ಉದ್ಯಮದಲ್ಲಿ ಉತ್ಕರ್ಷ
ಬದಲಾಯಿಸಿಜೆ.ಆರ್.ಡಿ.ಯವರು, ಟಾಟಾ ಉದ್ಯಮ ಕ್ಷೇತ್ರದ ಬೇರೆ ಪ್ರಮುಖ ಡೈರೆಕ್ಟರ್ ಗಳ ಕಾರ್ಯವನ್ನು ಪರಿಶೀಲಿಸಿ, ಪ್ರಶಂಸೆಗೆ ಪಾತ್ರರಾದ ಅಧಿಕಾರಿಗಳಿಗೆ ಪ್ರೋತ್ಸಾಹ ಕೊಟ್ಟು, ಅವರಿಗೆ ಮುಂದುವರೆಯಲು ಅಗತ್ಯವಾದ ಸಹಾಯವನ್ನು ಮಾಡುತ್ತಿದ್ದರು. ತಮ್ಮ ಕಾರ್ಯಾವಧಿಯಲ್ಲಿ ಅನೇಕ ಪ್ರತಿಷ್ಠಿತ ಪ್ರತಿಭೆಗಳನ್ನು ಗುರುತಿಸಿದರು. ಕೆಲವರು ಟಾಟಾ ಸಂಸ್ಥೆಯಲ್ಲಿ ದಶಕಗಳಿಂದ ಕೆಲಸ ಮಾಡಿದ ನಿಷ್ಠಾವಂತ ಅಧಿಕಾರಿಗಳು. ಅವರಲ್ಲಿ 'ಸರ್ ಹೋಮಿ ಮೋದಿ', 'ಸರ್ ಅರ್ದೆಶಿರ್ ಜಲಾಲ್', 'ಸರ್ ಜೆಹಾಂಗೀರ್ ಘಾಂಧಿ', 'ರೂಸ್ಸಿಮೋಡಿ', ವಿಜ್ಞಾನಿಗಳಾದ 'ಹೋಮಿ ಭಾಭ', ಲಾಯರ್, 'ಜೆ. ಡಿ. ಚೋಕ್ಸಿ', 'ನಾನಿ ಪಾಲ್ಕಿವಾಲ', 'ಜೆ. ಎನ್. ಮಥಾಯ್', ಎಕೋನೊಮಿಸ್ಟ್ಸ್, 'ಏ. ಡಿ. ಶ್ರಾಫ್', 'ಡಿ. ಆರ್. ಪೆಂಡ್ಸೆ', 'ಫ್ರೆಡ್ಡಿಮೆಹ್ತ', ಮುಂತಾದವರು ಮುಖ್ಯರು. ಅವರಲ್ಲಿ ಕೆಲವರು ರೋಲ್ ಮಾಡೆಲ್ ಆಗಿ ಮೆರೆದರು. 'ದರ್ಬಾರಿ ಸೇಠ್ ', 'ಸುಮಂತ್ ಮೂಲ್ಗಾಂವ್ ಕರ್ ' ಮುಂತಾದವರು, ಅತ್ಯಂತ ಪ್ರಭಾವೀ ಕುಶಲಕರ್ಮಿಗಳು. ಟಾಟಾ ಕಂಪೆನಿಗಳನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಈ ಮಹಾರಥಿಗಳ ಪಾತ್ರ , ಅತಿಮುಖ್ಯವಾಗಿತ್ತು. ಟಾಟಾ ಅಡ್ಮಿನಿಸ್ಟ್ರೆಟಿವ್ ಸರ್ವಿಸೀಸ್, ಟಾಟಾ ಮ್ಯಾನೆಜ್ಮೆಂಟ್ ಸೆಂಟರ್, ಪ್ರೊಫೆಶನಲ್ಸ್, ಮುಂದೆ ಮುಂದೆ ಹೋಗಲು ಇಂತಹ ನಿಸ್ವಾರ್ಥ ವ್ಯಕ್ತಿಗಳು ಕಾರಣರಾದರು. ಹೌರಸೇತುವೆಗೆ ಬೇಕಾದ ಅತಿ ಗಟ್ಟಿಯಾದ ಉಕ್ಕು, 'ಟಿಸ್ಕ್ರೋಮ್', ತಯಾರು ಮಾಡಲಾಯಿತು. 'ಟಿಸ್ಕೊರ್', (ಎನ್ನುವ ಅತಿ ಗಟ್ಟಿಯಾದ ಉಕ್ಕಿನ ಅಲಾಯ್) ನ್ನು ಭಾರತೀಯ ರೈಲ್ವೆ ಕೋಚ್ ಗಳಿಗೆ ಬಳಸುವ, ಸ್ಟೀಲ್,ಟಾಟಾ ಕಂಪೆನಿ ತಯಾರು ಮಾಡಿತು. ಬೇರೆ ಕಂಪೆನಿಗಳಿಗೆ ಹೋಲಿಸಿದರೆ, ಟಾಟಾ ಸಂಸ್ಥೆ ಪ್ರಾರಂಭದಲ್ಲೇ ಕೆಲಸಗಾರರಿಗೆ ಅನೇಕ ಸೌಕರ್ಯಗಳನ್ನು ಕಲ್ಪಿಸಿದ್ದರು. ೧೯೧೨ ರಲ್ಲೆ ಟಾಟಾ ಸಂಸ್ಥೆಯವರು, ತಮ್ಮ ಕಾರ್ಮಿಕರಿಗೆ, ೮ ಗಂಟೆ ಕೆಲಸದ ಶಿಫ್ಟ್ ನ್ನು ಆಯೋಜಿಸಿದ್ದರು. ಆದರೆ, ಆ ದಿನಗಳಲ್ಲಿ ಯೂರೋಪ್ ನಲ್ಲೂ ೧೨ ಗಂಟೆ ಕಾಲದ ಕೆಲಸದ ನಿಯಮವಿತ್ತು. ೧೯೨೦ ರಲ್ಲೇ ತಮ್ಮ ಕರ್ಮಚಾರಿಗಳಿಗೆ 'Leave with pay', 'Provident fund', ಮುಂತಾದ ಸೌಲಭ್ಯಗಳನ್ನು ಕೊಟ್ಟಿದ್ದರು. ಇನ್ನಿತರ ಕಂಪೆನಿಗಳು ಇಂತಹ ಸೌಲಭ್ಯಗಳ ಬಗ್ಗೆ, ಯೋಚಿಸಲೂ ಸಾಧ್ಯವಿಲ್ಲದ ಕಾಲವದು. ಆದ್ದರಿಂದ ಟಾಟಾ ಸಂಸ್ಥೆ, ನಮ್ಮದೇಶದ ಅತ್ಯಂತ ಭಾರಿ ಉದ್ಯಮಗಳನ್ನು ಪ್ರ ಪ್ರಥಮವಾಗಿ ಸ್ಥಾಪಿಸುವದರ ಜೊತೆಗೆ, ಅನೇಕ ಹೊಸ ಹೊಸ ಉದ್ಯಮ ಕ್ಷೇತ್ರಗಳನ್ನು ಜನತೆಗೆ ಕೊಟ್ಟು, ಭಾರತದ ಉದ್ಯಮ ವಲಯದಲ್ಲಿ ಮಂಚೂಣಿಯಲ್ಲಿ ಮುಂದುವರೆಯಲು ಸಹಾಯವಾಯಿತು.
ಕಟ್ಟಿಬೆಳೆಸಿದ ಸಂಸ್ಥೆಗಳು
ಬದಲಾಯಿಸಿ೧೯೮೦ ಭಾರತದ ಭವಿತವ್ಯಕ್ಕೆ ನಾಗರಿಕ-ವಿಮಾನಯಾನದ ಶುಭಾರಂಭ ಅತ್ಯಂತ ಆಶಾದಾಯಕವೂ, ಅವಶ್ಯಕವೂ ಆಗಿತ್ತು. ಜೆ [೮] ಅವರಿಗೆ, 'Indian Airlines' ಮತ್ತು , 'Air India', ಎರಡಕ್ಕೂ ಚೆರ್ಮನ್ ಆಗಲು ಕರೆ ಬಂತು. ಅವರು ೧೯೭೮ ರ ವರೆಗೆ ಹೇಗೋ ಏರ್ ಇಂಡಿಯದಲ್ಲಿ ಇದ್ದರು. ೧೯೮೦ ರಲ್ಲಿ ಅವರಿಗೆ ಪುನಃ ಕೇಳಿ ಕೊಳ್ಳಲಾಯಿತು. ಅವರೊಬ್ಬ " ಐತಿಹಾಸಿಕ ಪುರುಷರು ". ಅಷ್ಟುಹೊತ್ತಿಗೆ ಭಾರತದಲ್ಲಿ ವಿಮಾನಯಾನದ ಶಕೆ, ಪ್ರಾರಂಭವಾಗಿದ್ದರೂ ರಾಜಕೀಯದಿಂದಾಗಿ,' ಜೆ' ಯವರ ಆಸಕ್ತಿಯ ತೀವ್ರತೆಯನ್ನು ಕಳೆದು ಕೊಂಡಿತ್ತು. ಜೆ ರವರಿಗೇನೋ, ವಿಮಾನಯಾನ ಹಾಗೂ ವಾಯು ಸಾಗಾಣಿಕೆಯ ಪ್ರಕ್ರಿಯೆಗಳ ಪ್ರತಿ ಹಂತದಲ್ಲೂ ಕಳಕಳಿಯಿತ್ತು. ಏಕೆಂದರೆ ಅವರಿಗೆ ಪ್ರತಿ ವಿಚಾರಗಳು ಚೆನ್ನಾಗಿ ತಿಳಿದಿದ್ದವು. ೧೯೮೨ ರಲ್ಲಿ, "ಭಾರತದಲ್ಲಿ ವಾಯುಯಾನದ ಬಂಗಾರದ ಹಬ್ಬ" ವನ್ನು ಆಚರಿಸಲು ಅವರು ಕೈಗೊಂಡ ಕಾರ್ಯವೆಂದರೆ, ಪುನಃ ೧೯೩೨ ರ ಕಾರ್ಯವನ್ನು ಪುನರಾಚರಣೆ ಮಾಡುವುದರಿಂದ. ಕರಾಚಿಯಿಂದ ಅಹಮದಾಬಾದ್ ಮೂಲಕ, ಮುಂಬಯಿ ಯಾನ-ಯುವ ಜನರಿಗೆ ಪ್ರೇರಣೆ ಸಿಗಲೆಂದು.
'ಸುಮಂತ್ ಮೂಲ್ಗಾಂವ್ ಕರ್'ಜೊತೆ
ಬದಲಾಯಿಸಿ೧೯೧೨ ರಲ್ಲಿಯೇ, ದೊರಾಬ್ ಟಾಟಾ ಮತ್ತು, ಆರ್. ಡಿ. ಟಾಟಾರವರು, ಪ್ರಥಮ ಸೆಮೆಂಟ್ ಕಂಪೆನಿಯನ್ನು ತೆರೆದರು. ೧೯೨೧ ರಲ್ಲಿ ಎರಡನೆಯ, ಸೆಮೆಂಟ್ ಫ್ಯಾಕ್ಟರಿಯನ್ನು ಕರ್ನಾಟಕದ ಶಹಾಬಾದ್ ನಲ್ಲಿ ಪ್ರಾರಂಬಿಸಿದರು. ೧೯೩೬ ರಲ್ಲಿ, ಮತ್ತೆ ೩ ಕಂಪೆನಿಗಳು ಇವಕ್ಕೆ ಸೇರ್ಪಡೆಯಾಗಿ ಅದರ ಹೆಸರು 'ACC', (Associated Cement Co;) ಆಯಿತು. ಬಾಯ್ಲರ್, ರೈಲ್ವೆ ಎಂಜಿನ್ ಗಳ ತಯಾರಿಕೆ, ಬಿಟ್ಟು, ಮೋಟರ್ ಕಾರ್, ಟ್ರಕ್ಸ್ ಗಳ ತಯಾರಿಕೆಯಲ್ಲಿ ತಮ್ಮ ಗಮನ ಹರಿಸಿದರು. ಆಗ, ಸುಮಂತ್ ಮೂಲ್ಗಾಂವ್ ಕರ್ ಎಂಬ ಯುವಕ, 'Imperial College of Science & Technology', ಲಂಡನ್, ನಿಂದ 'Mechanical Engineering' ನಲ್ಲಿ, ಪದವಿ ಪಡೆದು, ೧೯೨೯ ರಲ್ಲಿ ಭಾರತಕ್ಕೆ ವಾಪಸ್ ಬಂದಿದ್ದರು. ಅವರು, ಗುಜರಾತ್ ರಾಜ್ಯದ ದ್ವಾರಕದಲ್ಲಿ, 'C. P Cement Works', ಎಂಬ ಸಂಸ್ಥೆ ಯಲ್ಲಿ ೨೫೦ ರೂ. ಸಂಬಳ ಕ್ಕೆ ದುಡಿಯುತ್ತಿದ್ದರು. ೨ ನೆಯ World war ನಿಂದಾಗಿ ವಿದೇಶಗಳಿಂದ ಆಮದು ಬಂದಾಗಿತ್ತು ಆಗ ಮೂಲ್ಗಾಂಕರ್, Chaibasa,Cement ಕಂ ಯಲ್ಲಿ ತಾವೇ, ತಮಗೆ ಬೇಕಾದ ಸಿಮೆಂಟ್ ಯಂತ್ರಗಳನ್ನು ನಿರ್ಮಿಸಿ, ಕೆಲಸವನ್ನು ಚಾಲನೆಯಲ್ಲಿಟ್ಟರು. 'ಸುಮಂತ್ ಮೂಲ್ಗಾಂಕರ್' ರವರ ಪ್ರಾಮಾಣಿಕತೆ, ಉನ್ನತ ವ್ಯಾಸಂಗ, ಮತ್ತು ಕೆಲಸದಲ್ಲಿ ದಕ್ಷತೆಗಳು 'ಜೆ.ಆರ್.ಡಿ' ಯವರನ್ನು ಆಕರ್ಷಿಸಿದವು. ಇಂತಹ ವ್ಯಕ್ತಿತ್ವವನ್ನು ಹೊಂದಿದ ಸುಮಂತ್, ತುಂಬ ಹಿಡಿಸಿದರು. ಜೆ.ಆರ್.ಡಿ, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿದರು. ಸುಮಂತ್, ಜೆ.ಆರ್.ಡಿಯವರ ಬಗ್ಗೆ ಕೇಳಿದ್ದರು. ಇದು ಅವರಿಬ್ಬರ ಸ್ನೇಹವನ್ನು ಬೆಸೆಯಲು ಸಹಾಯಕವಾಯಿತು ಜೆ. ಆರ್. ಡಿ ರವರ ಕೆಲಸ ಮಾಡಿಸುವ ವೈಖರಿ ಎಲ್ಲರಿಗೂ ಬೆರಗುಗೊಳಿಸುವಂತಿತ್ತು. ಮೊದಲು, ತಕ್ಕ ಮನುಷ್ಯರನ್ನು ಹುಡುಕುವುದು, ಅವರಲ್ಲಿ ಆಸಕ್ತಿ ಮನಗಂಡ ನಂತರ, ಅವರಿಗೆ, ಹಣಸಹಾಯ, ಪದವಿಗಳನ್ನು ಕೊಟ್ಟು, ವಿದೇಶದಲ್ಲಿ ಪ್ರಶಿಕ್ಷಣ ಕೊಡಿಸಿ, ಅವರಿಗೆ ಅಧಿಕಾರವನ್ನು ಒಪ್ಪಿಸಿ ದೂರದಲ್ಲಿ ನಿಂತು ಅವರ ಪ್ರಗತಿಯನ್ನು ಗಮನಿಸುವ ಸ್ವಭಾವ,ಜೆ ರವರದು. ತಾವು ಕಾಲೇಜ್ ವಿದ್ಯಾಭ್ಯಾಸವನ್ನು ಮಾಡದೆ ಇದ್ದರೂ, ತಮ್ಮದೇ ಆದ ಶೈಲಿಯಲ್ಲಿ ಕಾರ್ಯ-ಸಾಧಿಸುವ ಕಲೆ ಅವರಿಗೆ ಕರಗತವಾಗಿತ್ತು. ಅವರ ನಿಕಟದಲ್ಲಿ ದುಡಿದು, ಹಾಗೆ ಮುಂದೆ ಬಂದ ವ್ಯಕ್ತಿಗಳಿಗೇನು ಕಡಿಮೆಯಿಲ್ಲ. ಮೂಲ್ಗಾಂಕರ್ ಕೂಡಲೇ ಟಾಟಾ ಸಿಮೆಂಟ್ ಕಂಪೆನಿಯ 'Executive Director', ಆದರು. ಅವರನ್ನು , USA ಮತ್ತು England ಗೆ ಹೆಚ್ಚಿನ ಪ್ರಶಿಕ್ಷಣಕ್ಕಾಗಿ ಕಳಿಸಿಕೊಟ್ಟರು. ೧೯೪೯ ರಲ್ಲಿ, 'TELCO' ಪಾದಾರ್ಪಣೆ ಮಾಡಿತು. ಮೊದಲು Boilers ಮತ್ತು ನಂತರದಲ್ಲಿ 'Locomotives', ಮಾಡಲು ಮೊದಲುಮಾಡಿದರು. ಮೂಲ್ಗಾವ್ಕರ್ 'Director and Incharge', ಆಗಿ ನೇಮಿಸಲ್ಪಟ್ಟರು.
'ಟೆಲ್ಕೊ ಕಂಪೆನಿಯ ಸ್ಥಾಪನೆ'
ಬದಲಾಯಿಸಿ೧೯೫೦ ರಲ್ಲಿ Germany ಯ, Daimler-Benz, ಕಂಪೆನಿಯ ಜೊತೆ ಸೇರಿ, Tata Locomotive and Engineering Co;(TELCO) ಸ್ಥಾಪಿಸಿದರು. ೧೫ ವರ್ಷಗಳ ಇದರ ಕಾರ್ಯ ಚಟುವಟಿಕೆಗಳು ಬದಲಾಗಿ, ನಂತರ, TELCO, Tata Engineering & Locomotive Co; ಎಂದು ೨೪, ಸೆಪ್ಟೆಂಬರ್, ೧೯೬೦ ಯಲ್ಲಿ ಹೆಸರಿಸರಾಯಿತು. ಮೊದಲು, ೨೫,೦೦೦ ಮಿಲಿಯನ್ ರೂಪಾಯಿಗಳ, ಹಾಗೂ ,TISCO, ಕಂಪೆನಿಯ ೨೧,೦೦೦ ಮಿ. ರೂಪಾಯಿಗಳ ಟರ್ನ್ ಓವರ್, ಆಯಿತು. ೧೯೬೦ ರಲ್ಲಿ ಪುಣೆಯಲ್ಲಿನ TELCO ಫ್ಯಾಕ್ಟೊರಿ ಯನ್ನು ಆಧುನಿಕರಿಸಲಾಯಿತು. ೧೯೮೮ ರಲ್ಲಿ, ಸುಮಂತ್ ಮೂಲ್ಗಾಂವ್ ಕರ್ ರವರು, ಹೊಸದಾಗಿ ನೇಮಿಸಲ್ಪಟ್ಟ ಟಾಟಾ ಡೈರೆಕ್ಟರ್, ರತನ್ ಟಾಟಾ, ರವರಿಗಾಗಿ ತಮ್ಮ ಸ್ಥಳವನ್ನು ತೆರೆವು ಮಾಡಿಕೊಟ್ಟು, ನಿವೃತ್ತರಾದರು. ಕೆಲವೇ ತಿಂಗಳುಗಳಲ್ಲಿ ಮೃತರಾದರು. ಸುಮಂತ್ ಮೂಲ್ಗವ್ ಕರ್ ರನ್ನು ಜೆ. ಆರ್.ಡಿ ಯವರು, ತಮ್ಮ ೬೮ ನೆ ವಯಸ್ಸಿನಲ್ಲಿ ಟೆಲ್ಕೊ ಚೇರ್ಮನ್ ಶಿಪ್ ನಿಂದ ಕೆಳಗಿಳಿದು, ಛೇರ್ಮನ್ ಆಗಿ ನೇಮಿಸಿದ್ದರು. ದರ್ಬಾರಿ ಸೇಠ್ ರವರಿಗೆ ತಮ್ಮ ೭೮ ನೆಯ ವಯಸ್ಸಿನಲ್ಲಿ, ಟಾಟಾ ಕೆಮಿಕಲ್ಸ್ ಛೇರ್ ಮನ್ ಅಗಿ ಜವಾಬ್ದಾರಿಯ ಅಧಿಕಾರವನ್ನು ವಹಿಸಿ ಕೊಟ್ಟಿದ್ದರು. ಹಾಗೆಯೇ ರುಸ್ಸಿಯವರಿಗೆ ತಮ್ಮ ೮೦ ನೆಯ ವಯಸ್ಸಿನಲ್ಲಿ, ಟಾಟಾ ಸ್ಟೀಲ್ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಟ್ಟರು. ೧೯೮೧ ರಲ್ಲಿ ರತನ್ ಟಾಟಾ ರವರನ್ನು Chairman of Tata Industries ಆಗಿ ನೇಮಕ ಮಾಡಿ ತಾವು ಹೊರಗಡೆಯಿದ್ದು ಗಮನಿಸುತ್ತಿದ್ದರು. ೧೯೯೧-೧೯೯೩ ಟಾಟಾ ಡೈರೆಕ್ಟರ್, 'ಸರ್ ನವರೋಜಿ ಸಕ್ಲಾಟ್ ವಾಲ' ತೀರಿಕೊಂಡ ಮೇಲೆ, ಟಾಟಾ ಸನ್ಸ್ ಗೆ ನೇಮಿಸಲ್ಪಟ್ಟ ಸಮಯ, ಜುಲೈ ೨೬, ೧೯೩೮ ನಲ್ಲಿ. ಜೆ ಶುರು ಮಾಡಿದಾಗ ೧೪ ಕಂಪೆನಿಗಳು Tata & Sons; ನಲ್ಲಿದ್ದವು. ಅವರ ಮುಂದಾಳತ್ವದಲ್ಲಿ ಅನೇಕ ಮೊಟ್ಟ ಮೊದಲ ಚಟುವಟಿಕೆಗಳಿಗೆ ನಾಂದಿಯಾಯಿತು. ಕಮರ್ಷಿಯಲ್ ವಾಹನಗಳು, ವೆಹಿಕಲ್ಸ್ , ಇಂಜಿನಿಯರಿಂಗ್, ಹೋಟೆಲ್, ಏರ್ ಕಂಡಿಶನಿಂಗ್ ಮತ್ತು ರೆಫ್ರಿಜರೇಶನ್, ಕನ್ಸೂಮರ್ ಸರ್ವೀಸಸ್ ಮತ್ತು ಐ.ಟಿ, ಕನ್ಸೂಮರ್ ಪದಾರ್ಥಗಳು, ಡ್ಯೂರಬಲ್ಸ್, ಇಂಡಸ್ಟ್ರಿಯಲ್ ಪ್ರಾಡಕ್ಟ್ಸ್. ಟಿ.ಸಿ.ಎಸ್. ಮೊದಲು, ಟಾಟ ಮತ್ತು ಸನ್ಸ್ ಗೆ ಸಾಫ್ಟ್ ವೇರೆ ಒದಗಿಸಲು ಪ್ರಾರಂಭವಾದದ್ದು, ೧೯೬೮ ಈಗ ದೇಶದ ಅತಿ ಭಾರಿ ಸಂಸ್ಥೆಯಾಗಿ ರೂಪುಗೊಂಡಿದೆ. ಜೆ, ದೇಶದ ಹಲವರು ಸಮಸ್ಯೆಗಳಿಗೆ ಸ್ಪಂದಿಸಿ ತಮ್ಮ ಯೋಗದಾನ ಮಾಡಿದ್ದಾರೆ. 'ಫ್ಯಾಮಿಲಿ ಪ್ಲಾನಿಂಗ್ , ಅಂಡ್ ಪಾಪ್ಯುಲೇಶನ್ ಕಂಟ್ರೋಲ್'. ವಿಶ್ವಸಂಸ್ಥೆ, ಅವರಿಗೆ ಸೆಪ್ಟೆಂಬರ್, ೧೯೯೨ ರಲ್ಲಿ ಪ್ರಶಸ್ತಿ ಪ್ರದಾನ ಮಾಡಿದೆ. ದೇಶದಾದ್ಯಂತ ವಿದ್ಯಾಪ್ರಸಾರ, ಅನಕ್ಷರತೆಯ ನಿರ್ಮೂಲನೆ ಅವರ ಗುರಿಯಾಗಿತ್ತು. ಮಕ್ಕಳು ಹಾಗೂ ಅಬಲ ಸ್ತ್ರೀಯರ ಯೋಗಕ್ಷೇಮ, ಮತ್ತು ಅವರ ಜೀವನಸ್ತರದಲ್ಲಿ ಆದಾಯ ಹೆಚ್ಚಿಸುವ ಕಾರ್ಯಗಳು. 'NCPA', 'TIFR' ಗಳ ಸ್ಥಾಪನೆ. 'National Institute for Advanced Studies', ಬೆಂಗಳೂರಿನಲ್ಲಿ. ಭಾರತದ ಪ್ರಥಮ ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆ. Tata Memorial Hospital for Cancer Research & Treatment, ತಮ್ಮ ೪೦ ನೆಯ ವಯಸಿನಲ್ಲಿ ವಿವಿಧೋದ್ದೇಶಗಳ ಪೂರೈಕೆಗಾಗಿ, 'JRD Tata Trust', ಸ್ಥಾಪನೆಯಾಯಿತು. ತಮ್ಮ ಟಾಟಾ ಸನ್ಸ್ ನಲ್ಲಿದ್ದ ,ಮತ್ತು ಇತರ ಟಾಟಾ ಕಂಪೆನಿಗಳಲ್ಲಿದ, ಶೇರ್ ಗಳನ್ನು ಮಾರಿ, ಮಕ್ಕಳು , ಹಾಗೂ ಸ್ರೀಯರಿಗಾಗಿ, ಒಂದು ಸ್ವಂತ ಟ್ರಸ್ಟ್, 'JRD Tata Trust & Thelma Tata Trust' ಮಾಡಿದರು. ನೆಹರು ರವರ ಸ್ನೇಹ ಅವರಿಗೆ ದೊರೆಯಿತು.
'ಜೆ.ಆರ್.ಡಿ' ತಯಾರಿಸಿದ ಚಾರಿತ್ರ್ಯಿಕ "ಬಾಂಬೆ ಪ್ಲಾನ್"
ಬದಲಾಯಿಸಿಎರಡನೆಯ ವಿಶ್ವಯುದ್ಧದ ತರುವಾಯ, ಭಾರತ ದೇಶದಲ್ಲಿ ಯಂತ್ರೀಕರಣದಿಂದ ಉತ್ಪಾದನೆ ಹೆಚ್ಚಿಸಲು, 'ಜೆ ' ರವರ ಮನಸ್ಸು ಹಾತೊರೆಯುತ್ತಿತ್ತು. ತಮ್ಮ ಜೊತೆಗೆ, ಆಗಿನ ಭಾರತದ ಸುಪ್ರಸಿದ್ಧ ಉದ್ಯಮಿಗಳಾದ, 'ಜಿ.ಡಿ.ಬಿರ್ಲ, 'ಕಸ್ತುರ್ ಭಾಯ್ ಲಾಲ್ ಭಾಯ್' ಮುಂತಾದವರನ್ನು ಸೇರಿಸಿ ಕೊಂಡರು. ಟೆಕ್ನೋಕ್ರಾಟ್, 'ಜಾನ್ ಮಥಾಯ್', ಅರ್ದೇಶಿರ್ ದಲಾಲ್, ಎ.ಡಿ.ಶ್ರಾಫ್, ೧೯೪೪ ರ ಜನವರಿಯಲ್ಲಿ ಬಾಂಬೆ ಪ್ಲಾನ್, ತಯಾರಿಸಿದರು. ಇದು "Plan of Economic Development for India ", ಎಂದು ಪ್ರಸಿದ್ಧಿಯಾಗಿದೆ. ಜನವರಿ ೧೯೪೪ ರಲ್ಲಿ ಒಂದು ರಿಪೊರ್ಟ್, ಮತ್ತೊಂದು ೧೯೪೪ ರಲ್ಲಿ ಮತ್ತೊಂದು ವರದಿ ತಯಾರಾಯಿತು. ಜೆ. ಆರ್. ಡಿ. ಯವರಿಗೆ ಸಂದ ಪ್ರಶಸ್ತಿಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಅವರಿಗೆ ಭಾರತ ಸರ್ಕಾರದ ಅತಿಹೆಚ್ಚಿನ ಬಹುಮಾನ, "ಭಾರತರತ್ನ ಪ್ರಶಸ್ತಿ", ೧೯೯೨ ರಲ್ಲಿ ದೊರೆಯಿತು.[೯]
ನಿಧನ
ಬದಲಾಯಿಸಿ೧೯೯೩ ಯಲ್ಲಿ, 'ಜೆ.ಆರ್.ಡಿ' ಯವರು, ಹವಾ ಬದಲಾವಣೆಗೆ ಜಿನಿವಾ ನಗರಕ್ಕೆ ಹೋಗಿದ್ದರು. ಅಲ್ಲಿ, ಅವರ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗಿ, ಅಲ್ಲಿನ ಆಸ್ಪತ್ರೆಯೊಂದರಲ್ಲಿ ತೀರಿಕೊಂಡರು. ಅವರ ಅಂತಿಮ ಸಮಯದಲ್ಲಿ ಅವರ ಬಳಿ ಆಪ್ತರ್ಯಾರೂ ಇರಲಿಲ್ಲ. ಅವರ ಪ್ರೀತಿಯ ಮಡದಿ, ಥೆಲ್ಲಿ ಟಾಟಾ ಯವರು ಮುಂಬಯಿನಲ್ಲಿ, 'ಸತತವಾಗಿ Coma ಸ್ತಿತಿಯಲ್ಲಿದ್ದು', ಭಾರತದ ಸಂಪತ್ತನ್ನು ಹೆಚ್ಚಿಸಿ ಔದ್ಯೋಗಿಕರಣಕ್ಕೆ ನಾಂದಿಯನ್ನು ಹಾಕಿ, ಉದ್ಯೋಗಕ್ಷೇತ್ರಕ್ಕೆ ಮಾದರಿಯಾದ ಮಾರ್ಗದರ್ಶನ ಮಾಡಿದ ಬಹುತೇಕ ಟಾಟಾ ಡೈರೆಕ್ಟರ್ ಗಳಂತೆ, 'ಜೆ.ಆರ್.ಡಿ 'ಯವರೂ, ಯೂರೋಪ್ ನಲ್ಲಿ ಮರಣಹೊಂದಿದರು . 'ಭಾರತೀಯ ಸಂಸತ್ತು', ಶೋಕಾಚರಣೆಯ ಪ್ರಯುಕ್ತ, ಮೂರು ದಿನಗಳ ಕಾಲ ಮುಚ್ಚಲ್ಪಟ್ಟಿತ್ತು.
ಜೆ.ಆರ್.ಡಿ.ನಡೆದು ಬಂದ ಹಾದಿ
ಬದಲಾಯಿಸಿ೧೯೦೪ ಪ್ಯಾರಿಸ್ ನಲ್ಲಿ ಜನನ.
- ೧೯೦೯ ಫ್ರಾನ್ಸಿನಲ್ಲಿ ವಾಸಿಸುತ್ತಿದ್ದಾಗ ನೆರೆಯ ವೈಮಾನಿಕ Louis Bleriotರವರಿಂದ ವಿಮಾನದ ಬಗ್ಗೆ ಆಸಕ್ತಿ ಹುಟ್ಟಿತು.
- ೧೯೦೯-೧೭ ಮುಂಬಯಿಯ ಕೆಥೆಡ್ರೆಲ್ ಶಾಲೆಯಲ್ಲಿ ವಿದ್ಯಾಭ್ಯಾಸ.
- ೧೯೧೭-೧೮ ಜಪಾನಿನ ಯಾಕೋಹಾಮದಲ್ಲಿ ವಾಸ.
- ಇಂಗ್ಲೆಂಡ್ ನ ಕ್ರಾಮರ್ ಶಾಲೆಯಲ್ಲಿ ಒಂದು ವರ್ಷ ವಾಸ್ತವ್ಯ. ತಾಯಿ ಸೂನಿಮರಣ.
- ೧೯೨೪ ಫ್ರೆಂಚ್ ಸೈನ್ಯದಲ್ಲಿ ಒಂದು ವರ್ಷ ದುಡಿಮೆ.
- ೧೯೨೫ ಭಾರತಕ್ಕೆ ಬರಲು ಕರೆ ; ಅಪ್ರೆಂಟಿಸ್ ಅಗಿ ಟಾಟಾ ಸಂಸ್ಥೆಯಲ್ಲಿ ಸೇರ್ಪಡೆ.
- ೧೯೨೬ ಜಮ್ ಸೆಟ್ ಪುರದಲ್ಲಿ ಒಂದು ವರ್ಷ. ತಂದೆ ಫ್ರಾನ್ಸ್ ನಲ್ಲಿ ಮರಣ. ಟಾಟಾ ಕಂಪೆನಿಗೆ ಡೈರೆಕ್ಟರ್ ಆಗಿ ನೇಮಕ.
- ೧೯೨೯ ಭಾರತದ ಪ್ರಥಮ ಪೈಲೆಟ್ ಅಗಿ ಲೈಸೆನ್ಸ್ ಪ್ರಾಪ್ತಿ
- ೧೯೩೦'ಅಗಾಖಾನ್ ಏವಿಯೆಷನ್' ಪ್ರತಿನಿಧಿಸಿದ ಎರಡನೆಯ ಪೈಲೆಟ್, ಇಂಡಿಯ ಮತ್ತು ಯು.ಕೆ ಮಧ್ಯೆ.
- ೧೯೩೦ ಥೆಲ್ಮ ವಿಕಾಜಿಯವರ ಜೊತೆ ಮದುವೆ.
- ೧೯೩೨ ಟಾಟಾ ಎರ್ ಲೈನ್ಸ್ ಸ್ಥಾಪನೆ- ಕರಾಚಿ- ಮುಂಬಯಿ ಮಧ್ಯೆ ಪ್ರಥಮ ಹಾರಾಟ.
೧೯೩೮ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಶರಾಗಿ ನೇಮಕ.
- ೧೯೪೪ Bombay Planತಯಾರಿ.
- ೧೯೪೫, "Tata Institute of Fundamental Research," ಸ್ಥಾಪಿಸಲು ಪ್ರಯತ್ನ. ಭಾರತದ nuclear programmes, leads the first delegation of industrialists to the UK and USA.
- ೧೯೪೭ " Doctor of Science, " (Honoris Causa), ಅಲಹಾಬಾದ್ ವಿಶ್ವ ವಿದ್ಯಾಲಯ.
- ೧೯೪೮, Air India ಒಟ್ಟಾಗಿ ಪರಿವರ್ತನೆ.
- ೧೯೫೩ "International Management Man" by The National Association of Foremen", Milwaukee ಚುನಾಯಿತರಾದರು.
- ೧೯೫೩ "Air India," nationalised, ಜೆ. ಆರ್. ಡಿ. ಟಾಟಾ ಚೇರ್ ಮನ್ ಆಗಿ ಆಯ್ಕೆ.
- ೧೯೫೪ Officer of the Legion of Honour ಫ್ರೆಂಚ್ ಸರ್ಕಾರದ ಪ್ರಶಸ್ತಿ.
- ೧೯೫೫ ಭಾರತ ಸರ್ಕಾರದ , ಪದ್ಮವಿಭೂಷಣ ಪ್ರಶಸ್ತಿ.
- ೧೯೫೮-೫೯ IATA ಅಧ್ಯಕ್ಷ ರಾಗಿ ಆಯ್ಕೆ.
- ೧೯೬೨, 30 ನೆಯ ವರ್ಷದ civil aviation in India ದಿನದಂದು " Re-enacted flight Karachi-Bombay " ಜ್ಞಾಪಕಾರ್ಥವಾಗಿ.
- ೧೯೬೪ Knight Commander of the Order of Gregory the Great, (Papal Honour)
- ೧೯೬೬ ಗೌರವ " Air Commodore, Indian Air Force "
- ೧೯೭೪ ಗೌರವ "Air Vice-Marshal, Indian Air Force," ಆಗಿ ನೇಮಕಾತಿ.
- ೧೯೭೫ "Sir Jehangir Ghandy Medal for Industrial Peace", ಪ್ರಶಸ್ತಿ.
- ೧೯೭೮ Morarji ದೇಸಾಯ್,"Chairmanship of Air India", ವಜಾ ಮಾಡಿದರು.
- ೧೯೭೮ ಗೌರವ, "Knight Commander's Cross of the Order of Germany."
- ೧೯೭೯ 'Tony Jannus' ಪ್ರಶಸ್ತಿ."
- ೧೯೮೧ "Doctor of Laws" (Honoris Causa), ಬಾಂಬೆ ವಿಶ್ವವಿದ್ಯಾಲಯ.
- ೧೯೮೨, Karachi-Bombay flight " Golden Jubilee of Indian civil aviation," ಜ್ಞಾಪಕಾರ್ಥವಾಗಿ
- ೧೯೮೩ "Commander of the Legion of Honour" ಪ್ರಶಸ್ತಿ.
- ೧೯೮೫. " Gold Air Medal, by the Federation Aeronautique Internationale" ಪ್ರಶಸ್ತಿ.
- ೧೯೮೬ "Bessemer Medal of the Institute of Metals, London" ಪ್ರಶಸ್ತಿ .
- ೧೯೮೬ "Edward Warner Award by the International Civil Aviation Organisation, ಪ್ರಶಸ್ತಿ ಪಡೆದರು.
- ೧೯೮೮ " Daniel Guggenheim Medal Award " ಪಡೆದರು.
- ೧೯೮೮ "Dadabhai Naoroji Memorial" ಪ್ರಶಸ್ತಿ.
- ೧೯೯೧ "Chairmanship of Tata Sons Limited", ನಿಂದ ನಿವೃತ್ತಿ. ರತನ್ ಟಾಟಾ ರವರಿಗೆ ಯಜಮಾನಿಕೆ ಒಪ್ಪಿಸಿದರು.
- ೧೯೯೨ " ಭಾರತರತ್ನ ಪ್ರಶಸ್ತಿ. " [೧೦]
- ೧೯೯೨ " UN Population ಪ್ರಶಸ್ತಿ".
- ೧೯೯೨ " Doctor of Engineering " (Honoris Causa), ರೂರ್ಕಿ ವಿಶ್ವವಿದ್ಯಾಲಯ.
- ೧೯೯೩ "Doctor of Literature" (Honoris Causa), Tata Institute of Social Sciences ನ ವತಿಯಿಂದ.
- ೧೯೯೩, ಜಿನಿವಾ ದಲ್ಲಿ ನಿಧನ.
ಬಾಹ್ಯ ಸಂಪರ್ಕಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಭಾರತೀಯ ವಾಯುಯಾನದ ಹರಿಕಾರರು". Archived from the original on 2013-09-13. Retrieved 2014-05-12.
- ↑ http://www.britannica.com/EBchecked/topic/584078/JRD-Tata
- ↑ "ಟಾಟಾ ಸ್ಟೀಲ್ ಲಿಮಿಟೆಡ್". Archived from the original on 2019-10-30. Retrieved 2014-05-12.
- ↑ http://www.zoroastrian.org.uk/vohuman/Article/JRD%20Tata%20--%20On%20the%20Islands%20of%20Tata,%20In%20the%20Ocean%20of%20India.htm
- ↑ http://www.financialexpress.com/old/ie/daily/19990817/ige17034p.html
- ↑ http://www.slideshare.net/kavithapat/jrd-tata-personal-life
- ↑ "ಭಾರತದ ಏವಿಯೇಷನ್ ಪಿತಾಮಹ". Archived from the original on 2013-10-09. Retrieved 2014-05-03.
- ↑ ನಾಗರಿಕ ವಿಮಾನಯಾನದ ಐತಿಹಾಸಿಕ ಪುರುಷರು
- ↑ "ಆರ್ಕೈವ್ ನಕಲು". Archived from the original on 2014-03-13. Retrieved 2014-05-12.
- ↑ "ಭಾರತರತ್ನ ಪ್ರಶಸ್ತಿ". Archived from the original on 2014-08-30. Retrieved 2014-05-12.