ದರ್ಬಾರಿ ಸೇಠ್
(ಜನವರಿ ೧, ೧೯೨೦, )
ದರ್ಬಾರಿ ಸೇಠ್, ಟಾಟಾ ಔದ್ಯೋಗಿಕ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ತಮ್ಮ ಅಪಾರ ಸಮಯವನ್ನು ಮುಡಿಪಾಗಿಟ್ಟಿದ್ದರು. ಟಾಟ ಇಂಡಸ್ಟ್ರಿಯ ಹಲವಾರು ಶಾಖೆಗಳನ್ನು ಅವರು ಅತ್ಯಂತ ಮುತುವರ್ಜಿಯಿಂದ ಅಭ್ಯಾಸಮಾಡಿ ಅವನ್ನು ಸಮರ್ಥವಾಗಿ ನಡೆಸುವಲ್ಲಿ ತಮ್ಮ ಅಮೋಘ ಸಲಹೆ ಮತ್ತು ತಾಂತ್ರಿಕ ನೆರವನ್ನು ನೀಡಿದ್ದಾರೆ.
ಜನನ ಮತ್ತು ಬಾಲ್ಯ
ಬದಲಾಯಿಸಿಜನವರಿ ೧, ೧೯೨೦,ರಲ್ಲಿ ಜನನ. ದರ್ಬಾರಿಸೇಠ್, ೧೯೯೫ ರಲ್ಲಿ ನಿವೃತ್ತರಾದಾಗ್ಯೂ ಟಾಟ ಗ್ರೂಪ್ ಆಫ್ ಇಂಡಸ್ಟ್ರಿಸ್, ಜೊತೆಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದರು. ಟಾಟ ಕಂಪೆನಿಗಳ ಟಾಟ ಕೆಮಿಕಲ್ಸ್, ಟಾಟ ಟಿ ಮತ್ತು ’ರ‍್ಯಾಲೀಸ್ ಇಂಡಿಯ’ , ಮುಂತಾದ ಕಂಪೆನಿಗಳನ್ನು ಸಮರ್ಥವಾಗಿ ನಡೆಸಲು ಅವರಯೋಗದಾನವಿತ್ತು. ಅವರು ಒಟ್ಟು ೨೦ ಕಂಪನಿಗಳ ಡೈರೆಕ್ಟರ್ ಆಗಿದ್ದರು. ಸೇಠ್ ಇತ್ತೀಚಿನವರೆಗೂ ೧೪ ಕಂಪನಿಗಳ ಚೈರ್ಮನ್, ಅಗಿದ್ದರು. ಅವರ ಸೇವಾವಧಿ ಮುಗಿಯಿತೆಂದು ತಿಳಿದ ಬಳಿಕ, ಬೇರೆಯವರಿಗೆ ಅವರು ತಮ್ಮ ಜಾಗವನ್ನು ಬಿಟ್ಟುಕೊಟ್ಟರು. ಆದರೂ ಟಾಟ ಕೆಮಿಕಲ್ಸ್ ಜೊತೆ ವ್ಯವಹಾರ ಇಟ್ಟುಕೊಂಡಿದ್ದರು, ಮತ್ತು ಅದರ ಛೇರ್ಮನ್-ಎಮೆರಿಟಸ್, ಆಗಿದ್ದರು. ೫೨ ವರ್ಷ, ಇಂಡಸ್ಟ್ರಿಯಲ್ಲಿ ಕೆಲಸಮಾಡಿದ ಸೇಠ್, ಅನೇಕ ಬಿರುದುಗಳನ್ನು ಪಡೆದರು.
ಟಾಟಸಂಸ್ಥೆಗೆ ದರ್ಬಾರಿ ಸೇಠ್ ರವರ ಯೋಗದಾನ
ಬದಲಾಯಿಸಿಅಮೆರಿಕದ 'ಸಿನ್ ಸಿನ್ನಾಟಿ ವಿಶ್ವವಿದ್ಯಾಲಯ,'ದಲ್ಲಿ 'ಕೆಮಿಕಲ್ ಎಂಜಿನೀರಿಂಗ್ ಪದವಿ' ಪಡೆದರು. ಶ್ರೀ ಸೇಠ್ ೫೦ ವರ್ಷಗಳಕಾಲ 'ಟಾಟಾ ಕಂಪೆನಿ'ಯ ಜೊತೆ ಸಂಬಂಧ ಬೆಳೆಸಿದ್ದರು. [೧] ೧೯೯೫ ರಲ್ಲಿ, "ಚೇರ್ಮನ್ ಆಫ್ ಟಾಟ ಕೆಮಿಕಲ್ಸ್ ಅಂಡ್ ಡೈರೆಕ್ಟರ್ ಆಫ್ ಟಾಟ ಸನ್ಸ್," ಪದವಿಯಿಂದ ನಿವೃತ್ತರಾದರು. ಖಾಸಗಿ ಕಂಪೆನಿಗಳಲ್ಲಿ ನಿವೃತ್ತಿಯ ಬಗ್ಗೆ ಹೊಸ ಕಾನೂನನ್ನು ಜಾರಿಗೊಳಿಸಿದಾಗ ಅವರೇ ಪದವಿಯನ್ನು ಬಿಟ್ಟುಕೊಟ್ಟರು. ಬಹುಕಾಲ, ಜೆ.ಆರ್.ಡಿ.ಟಾಟರವರ ಆಪ್ತಸಲಹೆಗಾರರಾಗಿದ್ದವರು. ಸೇಠ್, 'ಟಾಟ ಸನ್ಸ್' ರವರ ಪ್ರಖ್ಯಾತ, "ಟಾಟ ಎನರ್ಜಿ ರಿಸರ್ಚ್ ಇನ್ಸ್ಟಿ ಟ್ಯೂಟ್" , '(TERI)' ಯ 'ಛೇರ್ಮನ್ ಆಫ್ ದ ಟೆರ್ರಿ (TERI) ಗವರ್ನಿಂಗ್ ಕೌನ್ಸಿಲ್, ಅವರ ಮರಣದವರೆಗೆ, ಇತ್ತು. ದರ್ಬಾರಿ ಸೇಠ್', 'ಟಾಟ ಕಂಪೆನಿ'ಯ ಒಬ್ಬ ಪ್ರಸಿದ್ಧ ವ್ಯಕ್ತಿ. [೨] ಲಂಡನ್ ನಲ್ಲಿ ಹೃದಯಾಘಾತದಿಂದ ಮೃತರಾದರು. ೭೯ ವರ್ಷ ಆಯುಸ್ಸಿನ ಸೇಠ್ ರವರ ಪತ್ನಿ ಬದುಕಿದ್ದಾರೆ, ೩ ಜನ ಹೆಣ್ಣುಮಕ್ಕಳು, ಒಬ್ಬ ಮಗ-ಮನು ಸೇಠ್, ರವರನ್ನು ಬಿಟ್ಟು ಮರಣಿಸಿದ್ದಾರೆ. 'ಮನು ಸೇಠ್', ತಂದೆಯವರ ನಿವೃತ್ತಿಯನಂತರ, 'ಟಾಟ ಕೆಮಿಕಲ್ಸ್' ನ 'ಮ್ಯಾನೇಜಿಂಗ್ ಡೈರೆಕ್ಟರ್' ಆಗಿದ್ದರು.
ಗೌರವ ಪ್ರಶಸ್ತಿಗಳು
ಬದಲಾಯಿಸಿ- TERI ಗವರ್ನಿಂಗ್ ಕೌನ್ಸಿಲ್ ನಲ್ಲಿ , ಮರಣದ ವರೆಗೂ ಸೇವೆ ಸಲ್ಲಿಸಿದರು. TERI, ದರ್ಬಾರಿ ಸೇಠ್ ರವರನ್ನು, " ಒಬ್ಬ ಅಸಾಧಾರಣ, ಅಮಿತ ದೂರದೃಷ್ಟಿಹೊಂದಿರುವ ವ್ಯಕ್ತಿ," ಎಂದು ಬಣ್ಣಿಸಿತು.
- ಕಾರ್ಪೊರೇಟ್ ಬಾಡಿಗಳಲ್ಲಿ ಅವರು "ವಿಖ್ಯಾತ ಕೆಮಿಕಲ್ ಎಂಜಿನಿಯರ್" - ಎಂದು, The Indian Institute of Chemical Engineers, ಪ್ರದಾನಮಾಡಿದ, ಪ್ರಶಸ್ತಿಪತ್ರದಲ್ಲಿ ಪ್ರಶಂಸಿಸಿತು.
- ಕೆಮ್ ಟೆಕ್, ಫೌಂಡೇಶನ್, ವತಿಯಿಂದ, " ಹಾಲ್ ಆಫ್ ಫೇಮ್ ಆವಾರ್ಡ್, " ಪ್ರಶಸ್ತಿ ದೊರೆತಿದೆ.