(ಏಪ್ರಿಲ್, ೨೪, ೧೮೮೪-ಅಕ್ಟೋಬರ್, ೧೯೪೯.)

ಚಿತ್ರ:Ardeshir dalal.jpg
'ಸರ್ ಅರ್ದೇಶಿರ್ ದಲಾಲ್'

ಜನನ ಹಾಗೂ ಬಾಲ್ಯ ಸಂಪಾದಿಸಿ

ಸರ್ ಅರ್ದೇಶಿರ್ ದಲಾಲ್ ರವರು, ರಂದು ಆಗಿನ ಬೊಂಬಾಯಿನ ಒಂದು ಪಾರ್ಸಿ ವರ್ತಕರ ಮನೆಯೊಂದರಲ್ಲಿ ಜನಿಸಿದರು. ಅವರ ತಂದೆ, ’ರುಸ್ತುಂಜಿ ದಲಾರ್’ ರವರು, ’ಮುಂಬಯಿ ಸ್ಟಾಕ್ ಎಕ್ಸ್ ಚೇಂಗ್’ ನ ದಳ್ಳಾಳಿಯಾಗಿದ್ದರು. ಅರ್ದೆಶಿರ್ ದಲಾಲ್ ಬೊಂಬಾಯಿನ ಎಲ್ಫಿಸ್ಟನ್ ಕಾಲೇಜ್,’ ನಲ್ಲಿ ಪದವಿಯನ್ನು ಪ್ರಥಮ ’ಶ್ರೇಣಿಯಲ್ಲಿ ಪಡೆದು ಉತ್ತೀರ್ಣರಾದರು. ಅವರ ವಿದ್ಯಾಭ್ಯಾಸದ ಅವಧಿಯಲ್ಲಿ ಹೆಚ್ಚು ಕಡಿಮೆ ಎಲ್ಲಾ ಪಾರಿತೋಷಕಗಳನ್ನೂ ಪರೀಕ್ಷಾತ್ಮಕ ಸ್ಪರ್ಥೆಗಳಲ್ಲೂ, ಪ್ರಶಸ್ತಿ, ಪ್ರಮಾಣಪತ್ರಗಳನ್ನು ಬಿಡದೆ ಪಡೆದರು.

ಉನ್ನತ ವಿದ್ಯಾಭ್ಯಾಸಕ್ಕೆ, ಲಂಡನ್ ಗೆ ಹೋದರು ಸಂಪಾದಿಸಿ

೧೯೦೫ ರಲ್ಲಿ ರವರಿಗೆ, ’ಜೆ. ಎನ್. ಟಾಟ ಮೆರಿಟ್ ಸ್ಕಾಲರ್ ಶಿಪ್,’ ದೊರೆಯಿತು. ಇಂಗ್ಲೆಂಡ್ ಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಕೇಂಬ್ರಿಡ್ಜ್ ವಿಶ್ವವಿಧ್ಯಾಲಯಕ್ಕೆ, ಹೋದರು. ’ನ್ಯಾಚುರಲ್ ಸೈನ್ಸ್ ವಿಷಯ,’ ದಲ್ಲಿ ’ಟ್ರೈಪೋಸ್ ಪದವಿ,’ ೧೯೦೮. ರಲ್ಲಿ, ಐ.ಸಿ.ಎಸ್. ಪರೀಕ್ಷೆಗೆ ಕುಳಿತರು.

ಮುಂಬಯಿಗೆ ವಾಪಸ್ ಬಂದು ಸರ್ಕಾರಿ ನೌಕರಿ ಗಳಿಸಿದರು ಸಂಪಾದಿಸಿ

ಸರ್ ಅರ್ದೇಶಿರ್ ದಲಾಲ್, 'ಮುಂಬಯಿ ಗವರ್ನ್ ಮೆಂಟ್' ನಲ್ಲಿ ಸುಮಾರು ೧೩ ವರ್ಷಗಳ ಕಾಲ, ಅನೇಕ ಉನ್ನತ ಹುದ್ದೆಗಳನ್ನು ನಿರ್ವಹಿಸಿದ ಮೇಲೆ, ’ಕಲೆಕ್ಟರ್,’ ಆಗಿ ಮಹಾರಾಷ್ಟ್ರ ರಾಜ್ಯದ ಅನೇಕ ತಾಲ್ಲೂಕುಗಳಲ್ಲಿ ದುಡಿದರು. ೧೯೨೮ ರಲ್ಲಿ ಅವರು ’ಬೊಂಬಾಯಿನ ಮುನಿಸಿಪಲ್ ಕಮೀಶನರ್,’ ಆಗಿ ನಿಯುಕ್ತಿಗೊಂಡರು. ಆಗಿನ ಕಾಲದಲ್ಲಿ ಯೂರೋಪಿಯನ್ ಅಲ್ಲದ ಒಬ್ಬ ಭಾರತೀಯನಿಗೆ ಸಿಕ್ಕ ಪ್ರಥಮ ಹುದ್ದೆಯಾಗಿತ್ತು. ೨೩ ವರ್ಷಗಳ ಸರಕಾರಿ ಸೇವೆಯನಂತರ, ಜನವರಿ, ೧೯೪೬, ರಲ್ಲಿ ರಾಜೀನಾಮೆ ಸಲ್ಲಿಸಿ 'ಟಾಟ ಸಂಸ್ಥೆಗೆ ಪಾದಾರ್ಪಣೆ'ಮಾಡಿದರು ಅಲ್ಲಿ ಅವರು ತಮ್ಮ ಕೊನೆಯವರೆಗೆ ಅಕ್ಟೋಬರ್ ೧೯೪೯. ಸೇವೆಸಲ್ಲಿಸಿದರು.

’ಟಾಟ ಸನ್ಸ್’ ಸಂಸ್ಥೆಗೆ ಪಾದಾರ್ಪಣೆ ಸಂಪಾದಿಸಿ

೧೯೩೧ ರಲ್ಲಿ 'ಸರ್ ಅರ್ದೇಶಿರ್ ದಲಾಲ್,' ’ಟಾಟ ಸನ್ಸ್’ ಸಂಸ್ಥೆಗೆ ಪಾದಾರ್ಪಣೆಮಾಡಿದರು. ’ಟಿಸ್ಕೊ ಕಂಪೆನಿಯ ರೆಸಿಡೆಂಟ್ ಡೈರೆಕ್ಟರ್’ , ಆಗಿ, ಬೊಂಬಾಯಿನ ’ಟಾಟ ಹೌಸ್ ಆಫ್ ಡೈರೆಕ್ಟರ್’ ಮತ್ತು ಜಮ್ ಶೆಡ್ ಪುರ್ ನ ಮ್ಯಾನೇಜ್ ಮೆಂಟ್ ಜೊತೆ, ಸಂಪರ್ಕಸ್ಥಾಪಿಸುವ ಗುರುತರ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಡಲಾಯಿತು. ತಮ್ಮ ಆಡಳಿತಾವಧಿಯಲ್ಲಿ ಅನೇಕ ಸುಧಾರಣೆಗಳನ್ನು, ಸ್ಟೀಲ್ ಕಂಪೆನಿಯ ಕೆಲಸಗಾರರಿಗೆ, ಮತ್ತು ಕಾರ್ಮಿಕರಿಗೆ, ಅವುಗಳಲ್ಲಿ ಮುಖ್ಯವಾದದ್ದು, ಬೋನಸ್, ಕಂಪೆನಿಯ ಲಾಭದಲ್ಲಿ ಕಾರ್ಮಿಕರಿಗೂ ಪಾಲನ್ನು ಕೊಡುವ ವಿಧೇಯಕ, ಇಂತಹ ವಿಚಾರಗಳು ಭಾರತೀಯ ಉದ್ಯಮ ವಲಯಗಳಲ್ಲಿ ಯಾವ ಉನ್ನತ ಅಧಿಕಾರಿಗಳ ತಲೆಗೂ ಬಂದಿರದ, ಮನೋಭಾವನೆಗಳನ್ನು ಕಾರ್ಯರೂಪಕ್ಕೆ ತಂದರು. ಅಂತಹ ಸವಲತ್ತುಗಳನ್ನು ಭಾರತೀಯ ದೃಷ್ಟಿಕೋನದಿಂದ ಸುಧಾರಿಸುವ, ಹಾಗೂ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲ ಉದ್ಯಮ ವಲಯಗಳಿಗೂ ಮಾದರಿಯಾದರು. ೩೦ ರ ದಶಕದಲ್ಲಿ ವಿಶ್ವದಾದ್ಯಂತ ತಲೆದೋರಿದ ಆರ್ಥಿಕ ಮುಗ್ಗಟ್ಟು ಭಾರತವನ್ನೂ ಆವರಿಸಿತ್ತು. ಆದರೆ, ರವರು, ವಿಪತ್ತಿನಿಂದ ತಪ್ಪಿಸಿ, ’ಟಾಟ ಸನ್ಸ್ ಸಂಸ್ಥೆ,’ ಯನ್ನು ಪ್ರಗತಿಯ ಕಡೆಗೆ ಒಯ್ದರು.

೧೯೩೯ ರಲ್ಲಿ ’ಸರ್ ಪದವಿ,’ ಸಂಪಾದಿಸಿ

೧೯೪೪ ರಲ್ಲಿ ವಾರ್ಷಿಕ ’ಜನರಲ್ ಬಾಡಿ ಮೀಟಿಂಗ್,’ ನಲ್ಲಿ ಜೆ.ಆರ್.ಡಿ ಟಾಟರವರು ಅರ್ದೇಶಿರ್ ದಲಾಲ್ ರವರ ಸೇವೆಯನ್ನು ಕೊಂಡಾಡಿದರು. ೧೩ ವರ್ಷಗಳ ಕಾಲಾವಧಿಯಲ್ಲಿ ಕಂಪೆನಿಯನ್ನು ಸಮರ್ಥವಾಗಿ ಮುನ್ನಡಸಿ, ಸರ್ವತೋಮುಖ ಬೆಳವಣಿಗೆಗೆ ಮಾಡಿದ ಯಶಸ್ವಿ-ಕಾರ್ಯಗಳನ್ನು ಶ್ಲಾಘಿಸಿದರು. ಅವರ ಯಜಮಾನಿಕೆ, ಮುಂದಾಲೋಚನೆ, ಆದ್ಯತೆಗಳನ್ನು ಗುರುತಿಸಿ, ತೀರ್ಮಾನ ತೆಗೆದುಕೊಳ್ಳುವ ರೀತಿ, ಮುಂದಾಳತ್ವ, ಮುನ್ನುಗ್ಗುವಿಕೆ, ಎಲ್ಲಕ್ಕೂ ಹೆಚ್ಚಿನದು,ವಿಶ್ವಸನೀಯತೆ ಶಿಸ್ತು, ಹಾಗೂ ಸಂಯಮಗಳನ್ನು, ಟಾಟ ಸಂಸ್ಥೆಯ ಕೆಲಸಗಾರರೆಲ್ಲಾ ಒಮ್ಮತದಿಂದ ಕೊಂಡಾಡಿದರು.

'ವೈಸ್ರಾಯ್, ಲಾರ್ಡ್ ವವೆಲ್', ಸಂತುಷ್ಟರಾಗಿದ್ದರು ಸಂಪಾದಿಸಿ

ಜೂನ್, ೧೯೪೪ ರಲ್ಲಿ, ’ವೈಸ್ರಾಯ್ ಲಾರ್ಡ್ ವವೆಲ್,’ಅರ್ದೇಶಿರ್ ದಲಾಲ್ ರವರನ್ನು ಕಾರ್ಯಕಾರಿ ಕೌಸಿಲ್ ಗೆ ಸದಸ್ಯರಾಗಿ, ’ಪ್ಲಾನಿಂಗ್ ಅಂಡ್ ಡೆವೆಲಪ್ ಮೆಂಟ್ ಶಾಖೆ,’ ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಆಹ್ವಾನಿಸಿದರು. ೧೯೪೫ ರಲ್ಲಿ ಭಾರತ ಸರ್ಕಾರ ಹೊರತಂದ ಯೋಜನೆಯ ನಿರ್ಮಾಪಕರೊಬ್ಬರೆಂದು ಗುರುತಿಸಲ್ಪಟ್ಟು, ದಲಾಲ್ ರವರು ಹೆಸರಾಗಿದ್ದಾರೆ. ೧೯೪೪ ರಲ್ಲಿ ಪ್ರಕಟಿತವಾದ ’ಮುಂಬಯಿ ಪ್ಲಾನ್’, ಎಂಬ ನೀಲನಕ್ಷೆಯನ್ನು ಪ್ರತಿಪಾದಿಸಿ ಬರೆದು ಪ್ರಕಟಿಸಿದ ೮ ಪ್ರಸಿದ್ಧ ಲೇಖಕರಲ್ಲಿ ಒಬ್ಬರೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.ಅರ್ದೇಶಿರ್ ದಲಾಲ್ ರವರ ಸೂಕ್ಷ್ಮಮತಿ , ಹಾಗೂ ಅಪಾರ ಜ್ಞಾನವನ್ನು ಸರ್ಕಾರ ಹಾಗೂ ಯಂತ್ರೋದ್ಯಮವಲಯಗಳಲ್ಲಿನ ಕಾರ್ಯಭಾರ ಪ್ರಭುತ್ವ, ಜಾಣತನಗಳನ್ನು ಸರ್ಕಾರ ಹಾಗೂ ಯಂತ್ರೋದ್ಯಮ ವಲಯಗಳಲ್ಲಿ ಕಾರ್ಯಭಾರ ಪ್ರಭುತ್ವ, ಹಾಗೂ ದಕ್ಷತೆ, ಟಿಸ್ಕೋ ಬೃಹತ್ ಉದ್ಯೋಗ ಸ್ಥಾವರದಲ್ಲಿ ಮಾಡಿದ ಅದ್ಭುತ ಬದಲಾವಣೆ, ಕಲ್ಯಾಣ ಕಾರ್ಯಗಳು, ಅಂದಿನ ಭಾರತದ ಬಹುಮುಖ ಪ್ರತಿಭೆಯ ದಕ್ಷ ಮೇಧಾವಿ ಇಂಜಿನಿಯರ್, ಭಾರತರತ್ನ, ಸರ್, ಎಂ. ವಿಶ್ವೇಶ್ವರಯ್ಯನವರನ್ನೂ ದಂಗುಗೊಳಿಸಿತು. ದಲಾಲ್ ರವರ ಕಾರ್ಯಾವಧಿಯಲ್ಲಿ, ಸ್ಟೀಲ್ ಉದ್ಯಮಕ್ಕೆ, ದೊರಕಿಸಿದ ಪ್ರಭುತ್ವ ಮತ್ತು ಶಿಸ್ತು, ನೀತಿ ನಿಯಮಗಳು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

'ಇಲ್ಯುಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ ,' ದಲ್ಲಿ, ಸಂಪಾದಕರ ಮೆಚ್ಚುಗೆ ಸಂಪಾದಿಸಿ

ಆಗಿನ ಸುಪ್ರಸಿದ್ಧ ವಾರ-ಪತ್ರಿಕೆ, ’ ಇಲ್ಯುಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ ,' ದಲ್ಲಿ, ಸಂಪಾದಕ, ಮೈಖೇಲ್ ಬ್ರೌನ್ ಬರೆದ ಪಂಕ್ತಿಗಳು,

" ಅವರು ಎತ್ತರದ ವ್ಯಕ್ತಿ, ಅತ್ಯಂತ ಒಳ್ಳೆಯ ಸ್ವಭಾವಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅಷ್ಟೇನೂ ಮಯಿಟ್ಟುಕೊಂಡಿಲ್ಲ, ಆದರೆ, ಕಣ್ಣಾಳಿಗಳಲ್ಲಿ  ತಮ್ಮ ಯೋಜನೆಗಳನ್ನೆಲ್ಲಾ  ತುಂಬಿಕೊಂಡಿರುವ, ಮೆಲುದನಿಯ, ಕನಸುಗಾರ, ಅವರು ", ಎಂದಿದ್ದಾರೆ.
ಅವರ ಹಾವ-ಭಾವಗಳು, ತಾವುಮಾಡಬೇಕೆಂದಿರುವ ನಿಖರವಾಗಿ ಕಾರ್ಯಗಳನ್ನು ಒತ್ತಿಹೇಳುತ್ತವೆ. ಸರ್ ಅರ್ದೇಶಿರ್ ದಲಾಲ್ ರವರು ಸೇದುತ್ತಿದ್ದ 'ಚೆರೋಟ್ ,' ನ  ಹೊರಹೊಮ್ಮುವ ಬೂದಿಯನ್ನು ಹೇಗೆ ಆಶ್ ಟ್ರೇನಲ್ಲೇ ಬೀಳಿಸಬೇಕು ಎಂದು ಅದನ್ನು ನಿಯಂತ್ರಿಸುವ ಅವರ ಮನೋಭಾವವನ್ನು ಅವು ತಿಳಿಸುತ್ತವೆ.

ಅವರ ಕಾರ್ಯ ವೈಖರಿಗಳನ್ನು ಅವಲೋಕಿಸಿದ, ಒಬ್ಬ ಪತ್ರಿಕೋದ್ಯಮಿ, ಅಮೆರಿಕದ ಭಾರಿ-ಉದ್ಯೋಗಪತಿಯಲ್ಲಿರಬೇಕಾದ ಸಮಯ-ಪ್ರಜ್ಞೆ, ಹಾಗೂ ನಿಲುವನ್ನು ಅವರಲ್ಲಿ ಕಾಣಬಹುದೆಂದು ಅಭಿಪ್ರಾಯಪಟ್ಟಿದ್ದರು.

ಮರಣ ಸಂಪಾದಿಸಿ

'ಸರ್ ಅರ್ದೇಶಿರ್ ದಲಾಲ್ ರವರು', ಅಕ್ಟೋಬರ್, ೧೯೪೯ ರಲ್ಲಿ, ರಲ್ಲಿ ನಿಧನರಾದರು.[೧]

ಉಲ್ಲೇಖಗಳು ಸಂಪಾದಿಸಿ

  1. No : 11, Obituary, Sir Ardeshir Dalal