ಜಿನೊಮ್
ಆಧುನಿಕ ಆಣ್ವಿಕ ಜೀವವಿಜ್ಞಾನದಲ್ಲಿ, ಜಿನೊಮ್ ಎಂಬುದು ಜೀವಿಯೊಂದರ ಸಂಪೂರ್ಣ ಆನುವಂಶಿಕ ಮಾಹಿತಿಯಾಗಿದೆ. ಅದನ್ನು DNA ಅಥವಾ, ವೈರಸ್‌ಗಳ ಹಲವು ವಿಧಗಳಿಗೆ, RNAಯಲ್ಲಿ ಸಂಕೇತರೂಪದಲ್ಲಿದೆ.
ಜಿನೊಮ್ ವಂಶವಾಹಿಗಳು ಹಾಗೂ ಸಂಕೇತಗೊಳಿಸಿಲ್ಲದ ಅನುಕ್ರಮಗಳೆರಡನ್ನು ಒಳಗೊಂಡಿರುತ್ತದೆ.[೧] ಜರ್ಮನಿ ದೇಶದ ಹ್ಯಾಂಬರ್ಗ್ ವಿಶ್ವವಿದ್ಯಾನಿಲಯದ ಸಸ್ಯವಿಜ್ಞಾನ ಪ್ರಾಧ್ಯಾಪಕ ಹ್ಯಾನ್ಸ್ ವಿಂಕ್ಲರ್ ಈ ಉಕ್ತಿಯನ್ನು 1920ರಲ್ಲಿ ಅಳವಡಿಸಿಕೊಂಡರು. ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು, ಜಿನೊಮ್ ಪದವನ್ನು ಜೀನ್(gen e )ಹಾಗೂ ಕ್ರೋಮೋಸೋಮ್(chromosome ) ಪದಗಳನ್ನು ಸಂಯೋಜಿಸಿ ರೂಪಿಸಿದ ಪದವೆಂದು ಹೇಳುತ್ತದೆ. ಇನ್ನು ಕೆಲವು ಸಂಬಂಧಿತ ಓಂ ಪದಗಳು ಇದ್ದವು-ಉದಾಹರಣೆಗೆ ಬಯೋಮ್ ಹಾಗೂ ರಿಝೋಮ್ . ಇಲ್ಲಿ ಶಬ್ದ-ಸಂಪತ್ತಿನ ರಚನೆಯಾಗಿ ಇದರಲ್ಲಿ ಜಿನೊಮ್ ಪದವು ವ್ಯವಸ್ಥಿತವಾಗಿ ಹೊಂದಿಕೊಳ್ಳುತ್ತದೆ.[೨]
ಕೆಲವು ಜೀವಿಗಳು ವರ್ಣತಂತುಗಳ ಹಲವು ಪ್ರತಿಗಳನ್ನು ಹೊಂದಿವೆ: ಜೋಡಿ ವರ್ಣತಂತು, ತ್ರಿಗುಣಿತ, ಚತುರ್ಗುಣಿತ ಇತ್ಯಾದಿ. ಶಾಸ್ತ್ರೀಯ ತಳೀಯವಿಜ್ಞಾನದಲ್ಲಿ, ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಜೀವಿಯೊಂದರಲ್ಲಿ (ಮಾದರಿಯಾಗಿ ಯುಕಾರ್ಯಾ) ಗಮೀಟ್(ಗರ್ಭೋತ್ಪತ್ತಿ ಮಾಡುವ ಹೆಣ್ಣು ಅಥವಾ ಗಂಡು ಜೀವಾಣು) ದೈಹಿಕ ಜೀವಕೋಶದ ವರ್ಣತಂತುಗಳ ಅರ್ಧದಷ್ಟು ಸಂಖ್ಯೆಯನ್ನು ಹೊಂದಿರುತ್ತದೆ. ಗಮೀಟ್‌ನಲ್ಲಿ ಜಿನೊಮ್ ವರ್ಣತಂತುಗಳ ಸಂಪೂರ್ಣ ಗುಂಪೇ ಹೊಂದಿರುತ್ತದೆ. ಬ್ಯಾಕ್ಟೀರಿಯಾ, ಆರ್ಕಿಯಾದ ಜೀವಕೋಶಗಳು ಸೇರಿದಂತೆ ಅಗುಣಿತ ಜೀವಿಗಳಲ್ಲಿ, ಮೈಟೊಕಾಂಡ್ರಿಯಾ, ಕ್ಲೊರೊಪ್ಲಾಸ್ಟ್ ಸೇರಿದಂತೆ ಅಂಗಕಗಳು,ಅಥವಾ ಇದೇ ರೀತಿ ವಂಶವಾಹಿಗಳನ್ನು ಹೊಂದಿರುವ ವೈರಸ್‌ಗಳಲ್ಲಿ, DNAದ (ಕೆಲವು ವೈರಸ್‌ಗಳಲ್ಲಿ RNA)ಒಂಟಿ ಅಥವಾ ವೃತ್ತಾಕಾರದ ಮತ್ತು/ಅಥವಾ ರೇಖೀಯ ಸರಣಿಗಳ ಗುಂಪಿನಿಂದ ಜಿನೊಮ್ ನಿರ್ಮಾಣವಾಗುತ್ತದೆ.
ಜಿನೊಮ್ ಎಂಬ ಪದವನ್ನು ನ್ಯೂಕ್ಲಿಯರ್ DNA (ಅರ್ಥಾತ್, '[[ನ್ಯೂಕ್ಲಿಯರ್ ಜಿನೊಮ್|ನ್ಯೂಕ್ಲಿಯರ್ ಜಿನೊಮ್]]')ನ ಸಂಪೂರ್ಣ ಗುಂಪಿಗೆ ವಿಶೇಷವಾಗಿ ಅನ್ವಯಿಸಬಹುದಾಗಿದೆ. ಮೈಟೊಕಾಂಡ್ರಿಯಲ್ ಜಿನೊಮ್ ಅಥವಾ ಕ್ಲೋರಪ್ಲಾಸ್ಟ್ ಜಿನೊಮ್‌ನಂತೆಯೇ,ಸ್ವಂತ DNAಹೊಂದಿರುವ ಅಂಗಕಗಳ ಸಂಗ್ರಹಕ್ಕೂ ಇದನ್ನು ಅನ್ವಯಿಸಬಹುದಾಗಿದೆ. ಇದಲ್ಲದೆ ಜಿನೊಮ್ ವೈರಸ್‌ಗಳು, ಪ್ಲಾಸ್ಮಿಡ್‌ಗಳು ಮತ್ತು ಸ್ಥಾನ ಬದಲಿಸುವ ಅಂಶಗಳಂತಹ ವರ್ಣತಂತುವಲ್ಲದ ಆನುವಂಶಿಕ ಅಂಶಗಳನ್ನು ಹೊಂದಿದೆ. ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಪ್ರಭೇದದ ಜಿನೊಮ್ ಅನುಕ್ರಮಗೊಳಿಸಲಾಗಿದೆ ಎಂದು ಜನರು ಹೇಳಿದರೆ, ವಿಶೇಷವಾಗಿ ಅಲಿಂಗವರ್ಣತಂತುಗಳ ಒಂದು ಗುಂಪಿನ ಅನುಕ್ರಮ ಮತ್ತು ಲಿಂಗ ವರ್ಣತಂತುಗಳ ಒಂದು ವಿಧದ ಅನುಕ್ರಮದ ಪರಿಮಾಣವನ್ನು ಅವರು ಉಲ್ಲೇಖಿಸುತ್ತಾರೆ. ಅವು ಒಟ್ಟಿಗೆ ಸಂಭವನೀಯ ಎರಡೂ ಲಿಂಗಗಳನ್ನು ಪ್ರತಿನಿಧಿಸುತ್ತವೆ. ಒಂದೇ ಲಿಂಗದಲ್ಲಿ ಅಸ್ತಿತ್ವದಲ್ಲಿರುವ ಪ್ರಭೇದಗಳಲ್ಲಿ, ಜಿನೊಮ್ ಅನುಕ್ರಮ ಎನ್ನುವುದು ವಿವಿಧ ವ್ಯಕ್ತಿಗಳ ವರ್ಣತಂತುಗಳಲ್ಲಿನ ಸಮಗ್ರ ಗುರುತಿಸುವಿಕೆಯಾಗಿದೆ. ಸಾಮಾನ್ಯ ಬಳಕೆಯಲ್ಲಿ, ಒಬ್ಬ ವ್ಯಕ್ತಿ ಅಥವಾ ಜೀವಿಯ ಜಿನೊಮ್‌ನ್ನು ಉಲ್ಲೇಖಿಸಲು 'ವಂಶವಾಹಿ ವ್ಯವಸ್ಥೆ' ಎಂಬ ಉಕ್ತಿಯನ್ನು ಕೆಲವೊಮ್ಮೆ ಸಂವಾದಾತ್ಮಕವಾಗಿ ಬಳಸಲಾಗಿದೆ. ಸಂಬಂಧಿತ ಜೀವಿಗಳ ಜಿನೊಮ್‌ಗಳ ಜಾಗತಿಕ ಗುಣಲಕ್ಷಣಗಳ ವೃತ್ತಾಂತವನ್ನು ಸಾಮಾನ್ಯವಾಗಿ ಜಿನೊಮಿಕ್ಸ್ ಎನ್ನಲಾಗಿದೆ. ಇದು ಒಂಟಿ ವಂಶವಾಹಿ ಅಥವಾ ವಂಶವಾಹಿ ಗುಂಪುಗಳ ಲಕ್ಷಣಗಳನ್ನು ಅಧ್ಯಯನ ಮಾಡುವ ವಂಶವಾಹಿ ವಿಜ್ಞಾನದಿಂದ ಬೇರ್ಪಡುತ್ತದೆ.
ಮೂಲ ಜೋಡಿಗಳು ಮತ್ತು ವಂಶವಾಹಿಗಳ ಸಂಖ್ಯೆಯು ಒಂದು ಪ್ರಭೇದದಿಂದ ಇನ್ನೊಂದಕ್ಕೆ ವ್ಯತ್ಯಾಸಗೊಳ್ಳುತ್ತದೆ. ಇವೆರಡರ ನಡುವೆ ಕೇವಲ ಸ್ಥೂಲವಾದ ಪರಸ್ಪರ-ಸಂಬಂಧವಿದೆ (ಇಂತಹ ಗಮನಕ್ಕೆ C-ಮೌಲ್ಯದ ವಿರೋಧಾಭಾಸ ಎನ್ನಲಾಗಿದೆ). ಟ್ರೈಕೊಮೋನಿಯಾಸಿಸ್ ಗೆ ಕಾರಣವಾದಪ್ರೊಟೊಸೋವದಲ್ಲಿ ಸದ್ಯ ಅತಿ ಹೆಚ್ಚು ವಂಶವಾಹಿಗಳು ಎಂದರೆ 60,000 ವಂಶವಾಹಿಗಳಿವೆ. (ಅನುಕ್ರಮವಾಗಿರುವ ಯುಕಾರ್ಯೊಟಿಕ್ ಜಿನೊಮ್‌ಗಳ ಪಟ್ಟಿಯನ್ನು ನೋಡಿ). ಬಹುತೇಕ ಮಾನವನ ಜಿನೊಮ್‌ನಲ್ಲಿರುವ ವಂಶವಾಹಿಗಳ ಸಂಖ್ಯೆಯ ಮೂರುಪಟ್ಟಿನಷ್ಟಿದೆ.
DNAನಲ್ಲಿ ಶೇಖರಿಸಲಾದ ಮಾನವ ಜಿನೊಮ್ ಗ್ರಂಥಾಲಯದಲ್ಲಿ ಶೇಖರಿಸಲಾದ ಮಾಹಿತಿ-ಸೂಚನೆಗಳಿಗೆ ಸದೃಶವಾಗಿದೆ:
- ಗ್ರಂಥಾಲಯದಲ್ಲಿ 46 ಪುಸ್ತಕಗಳುಂಟು (ವರ್ಣತಂತುಗಳು)
- ಪುಸ್ತಕಗಳು ವಿವಿಧ ಗಾತ್ರದಲ್ಲಿರುತ್ತವೆ. ಸುಮಾರು 400ರಿಂದ 3340 ಪುಟಗಳ ತನಕ (ವಂಶವಾಹಿಗಳು)
- ಅರ್ಥಾತ್ ಪ್ರತಿ ಪುಸ್ತಕದಲ್ಲಿ 48ರಿಂದ 250 ದಶಲಕ್ಷ ಅಕ್ಷರಗಳಿವೆ(A,C,G,T).
- ಹಾಗಾಗಿ, ಗ್ರಂಥಾಲಯದಲ್ಲಿ ಒಟ್ಟು ಸುಮಾರು ಆರು ಶತಕೋಟಿಗಿಂತ ಹೆಚ್ಚು ಅಕ್ಷರಗಳುಂಟು.
- ಈ ಗ್ರಂಥಾಲಯವು ಪಿನ್‌ಪಾಯಿಂಟ್ ಗಾತ್ರದಷ್ಟಿರುವ ಜೀವಕೋಶದ ಬೀಜದೊಳಗೆ ಹಿಡಿಸುತ್ತದೆ;
- ನಮ್ಮ ಶರೀರದ ಪ್ರತಿಯೊಂದು ಜೀವಕೋಶದಲ್ಲಿಯೂ ಗ್ರಂಥಾಲಯದ ತದ್ರೂಪಗಳಿರುತ್ತವೆ (ಎಲ್ಲಾ 46 ಪುಸ್ತಕಗಳೂ ಇರುತ್ತವೆ).
ವಿಧಗಳು
ಬದಲಾಯಿಸಿವೈರಸ್ಗಿಂತಲೂ ಇನ್ನಷ್ಟು ಸಂಕೀರ್ಣವಾದ ಹಲವು ಜೈವಿಕ ಜೀವಿಗಳು, ತಮ್ಮ ವರ್ಣತಂತುಗಳಲ್ಲಿರುವ ಆನುವಂಶಿಕ ವಸ್ತುಗಳಲ್ಲದೆ, ಕೆಲವೊಮ್ಮೆ ಅಥವಾ ಯಾವಾಗಲೂ ಹೆಚ್ಚುವರಿ ಆನುವಂಶಿಕ ವಸ್ತುಗಳನ್ನು ಹೊತ್ತಿರುತ್ತವೆ. ರೋಗಕಾರಕ ಸೂಕ್ಷ್ಮಜೀವಿಯೊಂದರ ಜಿನೊಮ್‌ನ್ನು ಆನುಕ್ರಮಗೊಳಿಸುವಂತಹ ಇನ್ನು ಕೆಲವು ಸಂದರ್ಭಗಳಲ್ಲಿ, ಜಿನೊಮ್ ಎಂಬುದು ಇಂತಹ ಪ್ರಮುಖ ವಸ್ತುಗಳಲ್ಲಿ ಶೇಖರಿಸಲಾದ ಮಾಹಿತಿಯನ್ನೂ ಸಹ ಒಳಗೊಂಡಿರಬಹುದು, ಪ್ಲಾಸ್ಮಿಡ್‌ಗಳಲ್ಲಿ ಇವು ನಿಕ್ಷೇಪವಾಗಿರುತ್ತವೆ. ಇಂತಹ ಸನ್ನಿವೇಶಗಳಲ್ಲಿ, ಜಿನೊಮ್ ಎಂಬುದು ಎಲ್ಲಾ ವಂಶವಾಹಿಗಳನ್ನು ವಿವರಿಸುತ್ತದೆ ಮತ್ತು ಉಪಸ್ಥಿತವಿರಲು ಸಮರ್ಥವಾದ ಸಂಕೇತವಿಲ್ಲದ DNA ಕುರಿತು ಎಲ್ಲಾ ಮಾಹಿತಿಯನ್ನು ನೀಡುತ್ತದೆ.
ಗಿಡಗಳು, ಪ್ರೊಟೊಜೊವಾ ಮತ್ತು ಪ್ರಾಣಿಗಳಂತಹ ಯುಕಾರ್ಯೊಟ್‌ಗಳಲ್ಲಿ ಜಿನೊಮ್ ಕೇವಲ ವರ್ಣತಂತುವಿನ DNA ಕುರಿತು ಮಾದರಿಯ ಮಾಹಿತಿಯನ್ನು ಮಾತ್ರ ಒಯ್ಯುತ್ತದೆ. ಹಾಗಾಗಿ, ಈ ಜೀವಿಗಳು ಕ್ಲೋರಪ್ಲಾಸ್ಟ್‌ಗಳು ಹಾಗೂ, ಸ್ವಂತ DNA ಹೊಂದಿರುವ ಮೈಟೊಕಾಂಡ್ರಿಯಾಗಳನ್ನು ಹೊಂದಿದ್ದರೂ, ಇಂತಹ ಅಂಗಕಗಳೊಳಗೆ DNA ಹೊಂದಿರುವ ಆನುವಂಶೀಯ ಮಾಹಿತಿಯನ್ನು ಜಿನೊಮ್‌ನ ಅಂಗ ಎಂದು ಪರಿಗಣಿಸಲಾಗಿಲ್ಲ. ಕೆಲವೊಮ್ಮೆ ಮೈಟೊಕಾಂಡ್ರಿಯಾಗಳು ಸಹ ತಮ್ಮದೇ ಜಿನೊಮ್ ಹೊಂದಿದ್ದು, ಇವನ್ನು ಮೈಟೊಕಾಂಡ್ರಿಯಲ್ ಜಿನೊಮ್ ಎನ್ನಲಾಗುತ್ತದೆ. ಕ್ಲೋರಪ್ಲಾಸ್ಟ್‌ನೊಳಗಿರುವ DNAನ್ನು ಪ್ಲಾಸ್ಟೋಮ್ ಎನ್ನಲಾಗುತ್ತದೆ.
ಜಿನೊಮ್‌ಗಳು ಮತ್ತು ಆನುವಂಶಿಕ ಮಾರ್ಪಾಟು
ಬದಲಾಯಿಸಿಪ್ರಭೇದವೊಂದರ ಆನುವಂಶಿಕ ವೈವಿಧ್ಯ ಅಥವಾ ಆನುವಂಶಿಕ ಬಹುರೂಪತೆಯನ್ನು ಜಿನೊಮ್ ಹಿಡಿಯಲಾರದು ಎಂಬುದನ್ನು ಗಮನಿಸಬೇಕಾಗಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯ ಜೀವಕೋಶದ DNAದಲ್ಲಿನ ಅರ್ಧದಷ್ಟು ಮಾಹಿತಿಯನ್ನು ಪಡೆದು ಮಾನವ ಜಿನೊಮ್ ಅನುಕ್ರಮವನ್ನು ತಾತ್ತ್ವಿಕವಾಗಿ ನಿರ್ಣಯಿಸಬಹುದಾಗಿದೆ. ನಿರ್ದಿಷ್ಟ ಗುಣಲಕ್ಷಣಗಳು ಮತ್ತು ರೋಗಗಳಿಗೆ ಮೂಲಾಧಾರವಾದ ಆನುವಂಶಿಕ ಮಾಹಿತಿಯ ವ್ಯತ್ಯಾಸಗಳನ್ನು ಅರಿಯಲು ವ್ಯಕ್ತಿಗಳ ನಡುವಿನ ಹೋಲಿಕೆಗಳ ಅಗತ್ಯ ಕಂಡುಬರುತ್ತದೆ. ಈ ಅಂಶವು ಜಿನೋಮ್ ಸಾಮಾನ್ಯ ಬಳಕೆಯನ್ನು ವಿವರಿಸುತ್ತದೆ(ಇದು ವಂಶವಾಹಿಯ ಸಾಮಾನ್ಯ ಬಳಕೆಗೆ ಸಮಾನಾಂತರವಾಗಿದೆ). ಇದು ಯಾವುದೇ ವಿಶಿಷ್ಟ DNA ಅನುಕ್ರಮದಲ್ಲಿನ ಮಾಹಿತಿಯನ್ನು ಉಲ್ಲೇಖಿಸುವುದಿಲ್ಲ, ಆದರೆ ಜೀವವೈಜ್ಞಾನಿಕ ಪ್ರಸಂಗವನ್ನು ಹಂಚಿಕೊಳ್ಳುವ ಇಡೀ ಅನುಕ್ರಮಗಳ ಕುಟುಂಬವನ್ನು ಉಲ್ಲೇಖಿಸುತ್ತದೆ.
ಈ ಪರಿಕಲ್ಪನೆಯು ಇಂದ್ರಿಯಜನ್ಯ ಜ್ಞಾನಕ್ಕೆ ವಿರುದ್ಧವಾಗಿ ಕಂಡುಬಂದರೂ,ಇದೇ ಪರಿಕಲ್ಪನೆಯು ಚಿರತೆಯ ಆಕಾರವನ್ನು ಹೋಲುವ ಯಾವುದೇ ನಿರ್ದಿಷ್ಟ ರೂಪವಿಲ್ಲ ಎಂದು ಹೇಳುತ್ತದೆ. ಚಿರತೆಗಳು ಒಂದಕ್ಕಿಂತ ಇನ್ನೊಂದು ವ್ಯತ್ಯಾಸವಾಗುತ್ತವೆ, ಅದರಂತೆ ಅವುಗಳ ಜಿನೊಮ್‌ಗಳ ಅನುಕ್ರಮಗಳೂ ಬದಲಾಗುತ್ತವೆ. ಆದರೆ ಪ್ರತಿಯೊಂದು ಪ್ರಾಣಿಗಳು ಮತ್ತು ಅವುಗಳ ಅನುಕ್ರಮಗಳು ಸಾಮ್ಯತೆಗಳನ್ನು ಹಂಚಿಕೊಳ್ಳುತ್ತವೆ. ಅದರಿಂದಾಗಿ, ಚಿರತೆಗಳು ಮತ್ತು ಚಿರತೆಯ ಗುಣಲಕ್ಷಣದ ಪ್ರಾಣಿಗಳ ಒಂದು ಉದಾಹರಣೆಯಿಂದ ಅವುಗಳ ಬಗ್ಗೆ ಕಲಿಯಬಹುದು.
ಅನುಕ್ರಮಗೊಳಿಸುವಿಕೆ ಮತ್ತು ಮಾಪನ
ಬದಲಾಯಿಸಿಮಾನವ ಜಿನೊಮ್‌ನ್ನು ಮಾಪನ ಮಾಡಲು ಹಾಗೂ ಅನುಕ್ರಮಗೊಳಿಸಲು ಮಾನವ ಜಿನೊಮ್ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು. ಹೆಗ್ಗಣ, ಅಕ್ಕಿ, ಅರಬಿಡಾಪ್ಸಿಸ್ ತಾಳಿಯಾನಾ ಗಿಡ, ಬುದ್ದಲಿ ಮೀನು, ಇ.ಕೊಲಿಯಂತಹ ಬ್ಯಾಕ್ಟೀರಿಯಾ ಇತ್ಯಾದಿ ಜೀವಿಗಳು ಇತರೆ ಜಿನೊಮ್ ಯೋಜನೆಗಳ ಅಂಗವಾಗಿತ್ತು. ಇಸವಿ 1976ರಲ್ಲಿ, ಬೆಲ್ಜಿಯಮ್ ದೇಶದ ಘೆಂಟ್ ವಿಶ್ವವಿದ್ಯಾನಿಲಯದಲ್ಲಿ ವಾಲ್ಟರ್ ಫಯರ್ಸ್, ವೈರಲ್ RNA ಜಿನೊಮ್ ಬ್ಯಾಕ್ಟೀರಿಯೊಫೇಜ್ MS2ನ ಸಂಪೂರ್ಣ ನೂಕ್ಲಿಯೊಟೈಡ್ ಅನುಕ್ರಮವನ್ನು ಸ್ಥಿರಪಡಿಸುವಲ್ಲಿ ಮೊದಲಿಗರಾಗಿದ್ದರು. ಫೇಜ್ Φ-X174 ಸಂಪೂರ್ಣವಾದ ಮೊದಲ DNA-ಜಿನೊಮ್ ಯೋಜನೆಯಾಗಿತ್ತು. ಇದರಲ್ಲಿ ಕೇವಲ 5386 ಮೂಲ ಜೋಡಿಗಳಿದ್ದು, 1977ರಲ್ಲಿ ಫ್ರೆಡ್ ಸ್ಯಾಂಗರ್ ಇದನ್ನು ಅನುಕ್ರಮಗೊಳಿಸಿದ್ದರು. ಇಸವಿ 1995ರಲ್ಲಿ ಜಿನೊಮಿಕ್ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಗಳ ತಂಡವು ಸಂಪೂರ್ಣಗೊಳಿಸಿದ ಹಿಮೊಫಿಲಸ್ ಇಂಫ್ಲುಯೆನ್ಜೇ ಮೊದಲ ಬ್ಯಾಕ್ಟೀರಿಯ ಜಿನೋಮ್ ಆಗಿತ್ತು.
ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯು ಅನುಕ್ರಮಗೊಳಿಸುವಿಕೆಯ ಜಟಿಲತೆ ಮತ್ತು ವೆಚ್ಚಗಳನ್ನು ಗಮನಾರ್ಹವಾಗಿ ಕಡಿಮೆಗೊಳಿಸಿ, ಸಂಪೂರ್ಣವಾದ ಜಿನೊಮ್ ಅನುಕ್ರಮಗಳು ತ್ವರಿತವಾಗಿ ಹೆಚ್ಚುತ್ತಿವೆ. ಹಲವು ಜಿನೊಮ್ ದತ್ತಾಂಶಸಂಗ್ರಹದ ಸ್ಥಳಗಳಲ್ಲಿ, US ನ್ಯಾಷನಲ್ ಇನ್ಸ್‌ಟಿಟ್ಯೂಟ್ಸ್ ಆಫ್ ಹೆಲ್ತ್ ನಿರ್ವಹಿಸುತ್ತಿರುವ ಸಂಗ್ರಹವೂ ಸಹ ಸೇರಿದೆ.[೩]
ಈ ಹೊಸ ತಂತ್ರಜ್ಞಾನಗಳು ವೈಯಕ್ತಿಕ ಜಿನೊಮ್ ಅನುಕ್ರಮವನ್ನು ಪ್ರಮುಖ ರೋಗನಿರ್ಣಯ ಸಾಧನವಾಗಿ ಬಳಸುವ ಸಾಧ್ಯತೆಯನ್ನು ಹೆಚ್ಚಿಸಿದೆ. DNA ಹರಿಕಾರ ಜೇಮ್ಸ್ ಡಿ. ವಾಟ್ಸನ್‌ರ ಸಂಪೂರ್ಣ ಜಿನೊಮ್‌ನ್ನು ಭೇದಿಸಿರುವುದಾಗಿ ಬಗ್ಗೆ ಮೇ 2007ರಲ್ಲಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಣೆಯು ಈ ಗುರಿಯತ್ತ ಪ್ರಮುಖ ಹೆಜ್ಜೆಯಾಗಿತ್ತು.[೪]
ಜಿನೊಮ್ ಅನುಕ್ರಮವು ಜಿನೊಮ್‌ನಲ್ಲಿನ ಪ್ರತಿ DNA ಬೇಸ್‌ನ ಕ್ರಮವನ್ನು ಪಟ್ಟಿಮಾಡಿದರೆ, ಜಿನೊಮ್ ನಕ್ಷೆಯು ಹೆಗ್ಗುರುತುಗಳನ್ನು ಪತ್ತೆಮಾಡುತ್ತವೆ. ಜಿನೊಮ್ ನಕ್ಷೆಯು ಜಿನೊಮ್ ಅನುಕ್ರಮಕ್ಕಿಂತ ಕಡಿಮೆ ವಿಸ್ತೃತಿ ಹೊಂದಿದೆ. ಇದು ಜಿನೊಮ್ ಸುತ್ತಲು ಚಲಿಸಲು ನೆರವಾಗುತ್ತದೆ.[೫][೬]
ವಿವಿಧ ಜಿನೊಮ್ ಗಾತ್ರಗಳ ಹೋಲಿಕೆ
ಬದಲಾಯಿಸಿಬ್ಯಾಕ್ಟೀರಿಯೊಫೇಜ್ MS2 | 3,569 | 0.000002 | ಅನುಕ್ರಮಗೊಳಿಸಲಾದ ಮೊದಲ RNA-ಜಿನೊಮ್[೭] | |
SV40 | 5,224 |
18 | ||
ಫೇಜ್ Φ-X174 | 5,386 | ಅನುಕ್ರಮಗೊಳಿಸಲಾದ ಮೊದಲ DNA-ಜಿನೊಮ್[೮] | ||
HIV | 9749[೯] | |||
ಫೇಜ್ λ | 48,502 | |||
ಮಿಮಿವೈರಸ್ | 1,181,404 | ಗೊತ್ತಾದ ಅತಿದೊಡ್ಡ ವೈರಲ್ ಜಿನೊಮ್ | ||
ಬ್ಯಾಕ್ಟೀರಿಯಮ್ | ಹೀಮೊಫಿಲಿಯಸ್ ಇನ್ಫ್ಲೂಯೆಂಜೆ | 1,830,000 | ಬದುಕುಳಿದಿರುವ ಜೀವಿಯ ಮೊದಲ ಜಿನೊಮ್, ಜುಲೈ 1995[೧೦] | |
ಬ್ಯಾಕ್ಟೀರಿಯಮ್ | ಕಾರ್ಸನೆಲ್ಲಾ ರುಡ್ಡಿ | 159,662 | ಅತಿ ಚಿಕ್ಕ ವೈರಸೇತರ ಜಿನೊಮ್.[೧೧] | |
ಬ್ಯಾಕ್ಟೀರಿಯಮ್ | ಬುಚ್ನೇರಾ ಅಫಿಡಿಕೊಲ | 600,000 | ||
ಬ್ಯಾಕ್ಟೀರಿಯಮ್ | ವಿಗ್ಲ್‌ಸ್‌ವರ್ತಿಯಾ ಗ್ಲಾಸಿನಿಡಿಯಾ | 700,000 | ||
ಬ್ಯಾಕ್ಟೀರಿಯಮ್
ಇಸ್ಕರಿಚಿಯಾ ಕೊಲಿ |
4,600,000 | [೧೨] | ||
ಬ್ಯಾಕ್ಟೀರಿಯಮ್ | ಸೊಲಿಬ್ಯಾಕ್ಟರ್ ಉಸಿಟಾಟಸ್ (ಸ್ಟ್ರೇನ್ ಎಲಿನ್ 6076) | 9,970,000 | ಗೊತ್ತಾದ ಅತಿದೊಡ್ಡ ಬ್ಯಾಕ್ಟೀರಿಯಲ್ ಜಿನೊಮ್ | |
ಅಮೀಬಾಯ್ಡ್ | ಪಾಲಿಕಾವೊಸ್ ಡುಬಿಯಮ್ ("ಅಮೀಬಾ" ಡುಬಿಯಾ ) | 670,000,000,000 | 737 | ಗೊತ್ತಿರುವ ಅತಿದೊಡ್ಡ ಜಿನೊಮ್.[೧೩] |
ಅರಬಿಡಾಪ್ಸಿಸ್ ತಾಳಿಯಾನಾ | 157,000,000 | ಅನುಕ್ರಮಗೊಳಿಸಲಾದ ಗಿಡದ ಮೊದಲ ಜಿನೊಮ್, ಡಿಸೆಂಬರ್ 2000.[೧೪] | ||
ಜೆನ್‌ಲಿಸಿಯಾ ಮಾರ್ಗರೆಟೇ | 63,400,000 | ದಾಖಲಾದ ಅತಿ ಚಿಕ್ಕ ಹೂಬಿಡುವ ಗಿಡದ ಜಿನೊಮ್, 2006.[೧೪] | ||
ಫ್ರಿಟಿಲೆರಿಯಾ ಅಸ್ಸಿರಿಕಾ | 130,000,000,000 | |||
ಪಾಪ್ಯುಲಸ್ ಟ್ರೈಕೊಕಾರ್ಪಾ | 480,000,000 | ಮರದ ಮೊದಲ ಜಿನೊಮ್, ಸೆಪ್ಟೆಂಬರ್ 2006 | ||
ಹಾವಚಿ | ಫಿಸ್ಕೊಮಿಟ್ರೆಲ್ಲಾ ಪಾಟೆನ್ಸ್ | 480,000,000 | ಪಾಚಿಯೊಂದರ ಮೊದಲ ಜಿನೊಮ್, ಜನವರಿ 2008 [೧೫] | |
ಸಾಕರೊಮೈಸೆಸ್ ಸೆರೆವಿಸಿಯೆ | 12,100,000 | [೧೬] | ||
ಶಿಲೀಂಧ್ರ | ಅಸ್ಪರ್ಗಿಲಸ್ ನಿಡುಲಾನ್ಸ್ | 30,000,000 | ||
ನೆಮಟೊಡ್ | ಸಿನೊರ್ಹಾಬ್ಡಿಟಿಸ್ ಎಲಿಗನ್ಸ್ | 100,300,000 | ಮೊದಲ ಬಹುಜೀವಕೋಶೀಯ ಪ್ರಾಣಿಯ ಜಿನೊಮ್, ಡಿಸೆಂಬರ್ 1998[೧೭] | |
ನೆಮಟೋಡ್ | ಪ್ರಾಟಿಲೆಂಚಸ್ ಕಾಫಿಯೇ | 20,000,000 | ಗೊತ್ತಾದ ಅತಿ ಚಿಕ್ಕ ಪ್ರಾಣಿಯ ಜಿನೊಮ್[೧೮] | |
ಡ್ರೊಸೊಫಿಲಾ ಮೆಲಾನೊಗ್ಯಾಸ್ಟರ್ (ಹಣ್ಣು ನೊಣ) | 130,000,000 | [41] | ||
ಬಾಂಬಿಕ್ಸ್ ಮೊರಿ (ರೇಷ್ಮೆ ಹುಳು) | 530,000,000 | |||
ಎಪಿಸ್ ಮೆಲ್ಲಿಫೆರಾ (ಜೇನು ಹುಳು) | 236,000,000 | |||
ಟೆಟ್ರಾಒಡಾನ್ ನಿಗ್ರೊವಿರಿಡಿಸ್ (ಬುದ್ದಲಿ ಮೀನಿನ ಒಂದು ವಿಧ) | 385,000,000 | ಗೊತ್ತಿರುವ ಮೊದಲ ಅತಿಚಿಕ್ಕ ಕಷೇರುಕ ಪ್ರಾಣಿಯ ಜಿನೊಮ್ | ||
ಸಸ್ತನಿ | ಹೊನೊ ಸಾಪಿಯೆನ್ಸ್ | 3,200,000,000 | 3 | |
ಪ್ರೊಟೊಪ್ಟೆರಸ್ ಏಥಿಯೊಪಿಕಸ್ (ಮಾರ್ಬಲ್ಡ್ ಲಂಗ್ಫಿಷ್) | 130,000,000,000 | 143 | ಗೊತ್ತಾದ ಅತಿ ದೊಡ್ಡ ಕಷೇರುಕ ಪ್ರಾಣಿಯ ಜಿನೊಮ್ |
ಗಮನಿಸಿ: ಏಕೈಕ ದ್ವಿಗುಣಿತ ಮಾನವ ಜೀವಕೋಶದಲ್ಲಿ DNAನ ಎಲ್ಲಾ 46 ವರ್ಣತಂತುಗಳನ್ನು ಒಂದಕ್ಕೊಂದು ತುದಿಗಳಲ್ಲಿ ಸಂಪರ್ಕಿಸಿ ನೇರಗೊಳಸಿದರೆ, ~2 m ಉದ್ದ ಹಾಗೂ ~2.4 ನ್ಯಾನೊಮೀಟರ್‌ಗಳಷ್ಟು ಅಗಲವಿರುತ್ತದೆ.
ಜಿನೊಮ್‌ಗಳು ಮತ್ತು ಅವುಗಳ ಜೀವಿಗಳು ಬಹಳ ಸಂಕೀರ್ಣವಾಗಿರುವ ಕಾರಣ, ಒಂದು ಜಿನೊಮ್‌ನಲ್ಲಿರುವ ವಂಶವಾಹಿಗಳನ್ನು ಅತಿ ಕನಿಷ್ಠಗೊಳಿಸಿ, ಆದರೂ ಆ ಜೀವಿಯು ಬದುಕುಳಿಯುವಂತ ಮಾಡುವುದು ಒಂದು ಸಂಶೋಧನಾ ಕಾರ್ಯತಂತ್ರವಾಗಿದೆ. ಒಂಟಿ ಜೀವಕೋಶದ ಜೀವಿಗಳಿಗೆ ಕನಿಷ್ಠ ಜಿನೊಮ್‌ಗಳು ಹಾಗೂ ಬಹು-ಜೀವಕೋಶೀಯ ಜೀವಿಗಳ ಕನಿಷ್ಠ ಜಿನೊಮ್‌ಗಳ ಮೇಲೆ ಪ್ರಾಯೋಗಿಕ ಕಾರ್ಯಗಳನ್ನು ಮಾಡಲಾಗಿದೆ (ಅಭಿವೃದ್ಧಿ ಜೀವವಿಜ್ಞಾನ ನೋಡಿ). ಇದನ್ನು ವಿವೊದಲ್ಲಿ (ಜೀವಿಗಳ ದೇಹದಲ್ಲಿ ಪ್ರಯೋಗ) ಹಾಗೂ ಸಿಲಿಕೊದಲ್ಲಿ (ಜೀವಿಗಳ ಹೊರಗೆ ಪ್ರಯೋಗ) ನಡೆಸಲಾಗಿದೆ.[೧೯][೨೦]
ಜಿನೊಮ್ ವಿಕಸನ
ಬದಲಾಯಿಸಿಜಿನೊಮ್ಗಳು ಜೀವಿಯೊಂದರ ವಂಶವಾಹಿಗಳ ಒಟ್ಟು ಸಂಖ್ಯೆಗಿಂತಲೂ ಹೆಚ್ಚಾಗಿವೆ. ಯಾವುದೇ ವಿಶಿಷ್ಟ ವಂಶವಾಹಿಗಳು ಮತ್ತು ಅವುಗಳ ಉತ್ಪನ್ನಗಳ ವಿವರಗಳ ಉಲ್ಲೇಖವಿಲ್ಲದೆ ಮಾಪನಮಾಡಿ, ಅಧ್ಯಯನ ಮಾಡಬಹುದಾದ ಗುಣಲಕ್ಷಣಗಳನ್ನು ಹೊಂದಿವೆ. ಇಂದು ಆಸ್ತಿತ್ವದಲ್ಲಿರುವ ವಿಭಿನ್ನ ವಿಧಗಳ ಜಿನೊಮ್‌ಗಳು ಯಾವ ವ್ಯವಸ್ಥೆಗಳಿಂದ ಸೃಷ್ಟಿಯಾಯಿತು ಎಂದು ನಿರ್ಣಯಿಸಲು, ವರ್ಣತಂತು ಸಂಖ್ಯೆ (ಕಾರ್ಯೊಟೈಪ್), ಜಿನೊಮ್ ಗಾತ್ರ, ವಂಶವಾಹಿ ಕ್ರಮ, ಕೊಡಾನ್ ಬಳಕೆಯ ಪಕ್ಷಪಾತ ಹಾಗೂ GC-ಅಂಶದಂತಹ ಗುಣಲಕ್ಷಣಗಳನ್ನು ಸಂಶೋಧಕರು ಹೋಲಿಸುತ್ತಾರೆ (ಇತ್ತೀಚೆಗಿನ ಸ್ಥೂಲ ಮೇಲ್ನೋಟಕ್ಕಾಗಿ, ಬ್ರೌನ್ 2002; ಸ್ಯಾಕೋನ್ ಮತ್ತು ಪೆಸೊಲೆ 2003; ಬೆನ್ಫ್ರೆ ಮತ್ತು ಪ್ರೊಟೊಪಾಪಾಸ್ 2004; ಜಿಬ್ಸನ್ ಮತ್ತು ಮ್ಯೂಸ್ 2004; ರೀಸ್ 2004; ಗ್ರೆಗರಿ 2005 ನೋಡಿ).
ಜಿನೊಮ್‌ಗೆ ರೂಪಾಕಾರ ನೀಡುವುದರಲ್ಲಿ ದ್ವಿಗುಣೀಕರಣಗಳು(ನಕಲು ತಯಾರಿಸುವಿಕೆ) ಪ್ರಮುಖ ಪಾತ್ರವಹಿಸುತ್ತವೆ. ದ್ವಿಗುಣೀಕರಣಗಳು ಸಂಕ್ಷಿಪ್ತ ಏಕಸಾಲು ಪುನರಾವರ್ತನೆಗಳ ವಿಸ್ತರಣೆಯಿಂದ ಹಿಡಿದು, ವಂಶವಾಹಿಗಳ ಗುಂಪುಗಳ ದ್ವಿಗುಣೀಕರಣಗಳ ತನಕ ನಡೆಯಬಹುದು. ಇಡೀ ವರ್ಣತಂತುಗಳು ಅಥವಾ ಇಡೀ ಜಿನೊಮ್‌ಗಳು ಸಹ ದ್ವಿಗುಣೀಕರಣವಾಗಬಹುದು. ಆನುವಂಶೀಯ ನವೀನತೆಯ ಸೃಷ್ಟಿಗಾಗಿ ಇಂತಹ ದ್ವಿಗುಣೀಕರಣಗಳು ಬಹುಶಃ ಮೂಲಭೂತವಾಗಿವೆ.
ಸಾಮಾನ್ಯವಾಗಿ ಬಹಳ ದೂರದ ಸಂಬಂಧ ಹೊಂದಿರುವ ಎರಡು ಜೀವಿಗಳ ಜಿನೊಮ್‌ಗಳಲ್ಲಿ ಸಣ್ಣ ಭಾಗಗಳ ನಡುವೆ ಬಹಳಷ್ಟು ಸಾಮ್ಯತೆ ಹೇಗೆ ಎಂದು ವಿವರಿಸಲು ಹಾರಿಜಾಂಟಲ್ ವಂಶವಾಹಿ ವರ್ಗಾವಣೆಯನ್ನು(ಬೇರೆ ಜೀವಿಯಿಂದ ಆನುವಂಶಿಕ ಅಂಶ ವರ್ಗಾವಣೆ) ಆವಾಹನೆ ಮಾಡಲಾಗಿದೆ. ಹಾರಿಜಾಂಟಲ್ ವಂಶವಾಹಿ ವರ್ಗಾವಣೆಯು ಹಲವು ಸೂಕ್ಷ್ಮಜೀವಿಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬಂದಿದೆ. ಜೊತೆಗೆ, ಯುಕಾರ್ಯೊಟಿಕ್ ಜೀವಕೋಶಗಳಲ್ಲಿ ಕ್ಲೋರಪ್ಲಾಸ್ಟ್ ಹಾಗೂ ಮೈಟೊಕಾಂಡ್ರಿಯ ಜಿನೊಮ್‌ಗಳಿಂದ ಅವುಗಳ ನ್ಯೂಕ್ಲಿಯರ್ ವರ್ಣತಂತುಗಳಿಗೆ ಕೆಲವು ಆನುವಂಶಿಕ ವಸ್ತುಗಳ ವರ್ಗಾವಣೆಯ ಅನುಭವ ಪಡೆದಿವೆ.
ಇವನ್ನೂ ಗಮನಿಸಿ
ಬದಲಾಯಿಸಿ- ಸಂಪೂರ್ಣ ಜಿನೊಮ್ ಅನುಕ್ರಮಕರಣ
- ವಂಶವಾಹಿ
- ವಂಶವಾಹಿ ಕುಟುಂಬ
- ಜಿನೊಮ್ ಹೋಲಿಕೆ
- ಮಾನವ ಜಿನೊಮ್
- ಮಾನವ ಅತಿಸೂಕ್ಷ್ಮ ಬಯೊಮ್ ಯೋಜನೆ
- ಜೀವವಿಜ್ಞಾನದಲ್ಲಿ ಆಮಿಕ್ಸ್ ವಿಷಯಗಳ ಪಟ್ಟಿ
- ಅನುಕ್ರಮಗೊಳಿಸಲಾದ ಯುಕ್ಯಾರ್ಯೊಟಿಕ್ ಜಿನೊಮ್‌ಗಳ ಪಟ್ಟಿ
- ಅನುಕ್ರಮಗೊಳಿಸಲಾದ ಬ್ಯಾಕ್ಟೀರಿಯಾದ ಜಿನೊಮ್‌ಗಳ ಪಟ್ಟಿ
- ಅನುಕ್ರಮಗೊಳಿಸಲಾದ ಆರ್ಕಿಯಲ್ ಜಿನೊಮ್‌ಗಳು
- ಅನುಕ್ರಮಗೊಳಿಸಲಾದ ಪ್ಲ್ಯಾಸ್ಟೊಮ್ಗಳ ಪಟ್ಟಿ
- ಅತಿ ಸಣ್ಣ ಜಿನೊಮ್ ಯೋಜನೆ
- ಮೈಟೊಕಾಂಡ್ರಿಯಾದ ಜಿನೊಮ್
- ಆಣ್ವಿಕ ವರ್ಗೀಕರಣ
- ಆಣ್ವಿಕ ವಿಕಸನ
- ಬಹುಜಿನೊಮೀಯ ಜೀವಿ
- ಜೇನುಹುಳು ಜಿನೊಮ್ ಅನುಕ್ರಮದ ಸಹಕಾರ ಕೂಟ
- ರಾಷ್ಟ್ರೀಯ ಮಾನವ ಜಿನೊಮ್ ಸಂಶೋಧನಾ ಸಂಸ್ಥೆ
ಆಕರಗಳು
ಬದಲಾಯಿಸಿ- ↑ ರಿಡ್ಲೆ, ಎಂ. (2006). ಜಿನೊಮ್ . ನ್ಯೂಯಾರ್ಕ್, NY: ಹಾರ್ಪರ್ ಪೆರೆನಿಯಲ್. ISBN 0-8423-5115-9.
- ↑ Joshua Lederberg and Alexa T. McCray (2001). "'Ome Sweet 'Omics -- A Genealogical Treasury of Words" (PDF). The Scientist. 15 (7). Archived from the original (PDF) on 2006-09-29. Retrieved 2010-05-31.
- ↑ http://www.ncbi.nlm.nih.gov/sites/entrez?db=Genome&itool=toolbar
- ↑ Wade, Nicholas (2007-05-31). "Genome of DNA Pioneer Is Deciphered". The New York Times. Retrieved 2010-04-02.
- ↑ http://www.genomenewsnetwork.org/resources/whats_a_genome/Chp3_1.shtml
- ↑ http://www.ncbi.nlm.nih.gov/About/primer/mapping.html
- ↑ Fiers W; et al. (1976). "Complete nucleotide-sequence of bacteriophage MS2-RNA - primary and secondary structure of replicase gene". Nature. 260 (5551): 500–507. doi:10.1038/260500a0. PMID 1264203.
{{cite journal}}
: Explicit use of et al. in:|author=
(help) - ↑ Sanger F, Air GM, Barrell BG, Brown NL, Coulson AR, Fiddes CA, Hutchison CA, Slocombe PM, Smith M (1977). "Nucleotide sequence of bacteriophage phi X174 DNA". Nature. 265 (5596): 687–695. doi:10.1038/265687a0. PMID 870828.
{{cite journal}}
: CS1 maint: multiple names: authors list (link) - ↑ VIROLOGY - HUMAN IMMUNODEFICIENCY VIRUS AND AIDS, STRUCTURE: The Genome AND PROTEINS of HIV
- ↑ Fleischmann R, Adams M, White O, Clayton R, Kirkness E, Kerlavage A, Bult C, Tomb J, Dougherty B, Merrick J (1995). "Whole-genome random sequencing and assembly of Haemophilus influenzae Rd". Science. 269 (5223): 496–512. doi:10.1126/science.7542800. PMID 7542800.
{{cite journal}}
: CS1 maint: multiple names: authors list (link) - ↑ Nakabachi A, Yamashita A, Toh H; et al. (2006). "The 160-kilobase genome of the bacterial endosymbiont Carsonella". Science (journal). 314 (5797): 267. doi:10.1126/science.1134196. PMID 17038615.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Frederick R. Blattner, Guy Plunkett III; et al. (1997). "The Complete Genome Sequence of Escherichia coli K-12". Science. 277 (5331): 1453–1462. doi:10.1126/science.277.5331.1453. PMID 9278503.
{{cite journal}}
: Explicit use of et al. in:|author=
(help) - ↑ Parfrey, L.W. (2008). "The Dynamic Nature of Eukaryotic Genomes". Molecular Biology and Evolution. 25 (4): 787. doi:10.1093/molbev/msn032. PMID 18258610.
{{cite journal}}
: Unknown parameter|coauthors=
ignored (|author=
suggested) (help) - ↑ ೧೪.೦ ೧೪.೧ Greilhuber, J., Borsch, T., Müller, K., Worberg, A., Porembski, S., and Barthlott, W. (2006). "Smallest angiosperm genomes found in Lentibulariaceae, with chromosomes of bacterial size". Plant Biology. 8 (6): 770–777. doi:10.1055/s-2006-924101. PMID 17203433.
{{cite journal}}
: CS1 maint: multiple names: authors list (link) - ↑ ಡೇನಿಯಲ್ ಲ್ಯಾಂಗ್, ಆಂಡ್ರಿಯಾಸ್ ಡಿ. ಜಿಮರ್, ಸ್ಟೆಫಾನ್ ಎ. ರೆನ್ಸಿಂಗ್, ರಾಲ್ಫ್ ರೆಸ್ಕಿ(2008): ಎಕ್ಸ್‌ಪ್ಲೋರಿಂಗ್ ಪ್ಲ್ಯಾಂಟ್ ಡೈವರ್ಸಿಟಿ ಬಯೊಡೈವರ್ಸಿಟಿ: ದಿ ಫಿಸ್ಕೊಮಿಟ್ರೆಲಾ ಜಿನೊಮ್ ಅಂಡ್ ಬಿಯಾಂಡ್. ಟ್ರೆಂಡ್ಸ್ ಇನ್ ಪ್ಲ್ಯಾಂಟ್ ಸೈಯನ್ಸ್ 13, 542-549. [೧]
- ↑ http://www.yeastgenome.org/
- ↑ The C. elegans Sequencing Consortium (1998). "Genome sequence of the nematode C. elegans: a platform for investigating biology". Science. 282 (5396): 2012–2018. doi:10.1126/science.282.5396.2012. PMID 9851916.
{{cite journal}}
: Unknown parameter|quotes=
ignored (help) - ↑ "Gregory, T.R. (2005). Animal Genome Size Database. http://www.genomesize.com".
- ↑ Glass JI, Assad-Garcia N, Alperovich N, Yooseph S, Lewis MR, Maruf M, Hutchison CA 3rd, Smith HO, Venter JC (2006). "Essential genes of a minimal bacterium". Proc Natl Acad Sci USA. 103 (2): 425–30. doi:10.1073/pnas.0510013103. PMC 1324956. PMID 16407165.
{{cite journal}}
: CS1 maint: multiple names: authors list (link) CS1 maint: numeric names: authors list (link) - ↑ Forster AC, Church GM (2006). "Towards synthesis of a minimal cell". Mol Syst Biol. 2:45: 45. doi:10.1038/msb4100090. PMC 1681520. PMID 16924266.
ಹೆಚ್ಚಿನ ಮಾಹಿತಿಗಾಗಿ
ಬದಲಾಯಿಸಿ- Benfey, P. (2004). Essentials of Genomics. Prentice Hall.
{{cite book}}
: Unknown parameter|coauthors=
ignored (|author=
suggested) (help) - Brown, Terence A. (2002). Genomes 2. Oxford: Bios Scientific Publishers. ISBN 978-1859960295.
{{cite book}}
: Cite has empty unknown parameter:|coauthors=
(help) - Gibson, Greg (2004). A Primer of Genome Science (Second ed.). Sunderland, Mass: Sinauer Assoc. ISBN 0-87893-234-8.
{{cite book}}
: Unknown parameter|coauthors=
ignored (|author=
suggested) (help) - Gregory, T. Ryan (ed) (2005). The Evolution of the Genome. Elsevier. ISBN 0-12-301463-8.
{{cite book}}
:|first=
has generic name (help); Cite has empty unknown parameter:|coauthors=
(help) - Reece, Richard J. (2004). Analysis of Genes and Genomes. Chichester: John Wiley & Sons. ISBN 0-470-84379-9.
{{cite book}}
: Cite has empty unknown parameter:|coauthors=
(help) - Saccone, Cecilia (2003). Handbook of Comparative Genomics. Chichester: John Wiley & Sons. ISBN 0-471-39128-X.
{{cite book}}
: Unknown parameter|coauthors=
ignored (|author=
suggested) (help) - Werner, E. (2003). "In silico multicellular systems biology and minimal genomes". Drug Discov Today. 8 (24): 1121–1127. doi:10.1016/S1359-6446(03)02918-0. PMID 14678738.
{{cite journal}}
: Cite has empty unknown parameter:|coauthors=
(help) - Witzany, G. (2006). "Natural Genome Editing Competences of Viruses". Acta Biotheoretica. 54 (4): 235–253. doi:10.1007/s10441-006-9000-7. PMID 17347785.
{{cite journal}}
: Cite has empty unknown parameter:|coauthors=
(help)
ಹೊರಗಿನ ಕೊಂಡಿಗಳು
ಬದಲಾಯಿಸಿ- ಸಮ್ ಕಂಪ್ಯಾರಿಟಿವ್ ಜಿನೊಮ್ ಸೈಜಸ್
- DNA ಇಂಟರಾಕ್ಟಿವ್: ದಿ ಹಿಸ್ಟರಿ ಆಫ್ DNA ಸೈಯನ್ಸ್
- DNA ಫ್ರಂ ದಿ ಬಿಗಿನಿಂಗ್
- ಆಲ್ ಎಬೌಟ್ ದಿ ಹ್ಯುಮನ್ ಜಿನೊಮ್ ಪ್ರಾಜೆಕ್ಟ್ - genome.gov ಇಂದ
- ಎನಿಮಲ್ ಜಿನೊಮ್ ಸೈಜ್ ಡಾಟಾಬೇಸ್
- ಪ್ಲಾಂಟ್ ಜಿನೊಮ್ ಸೈಜ್ ಡಾಟಾಬೇಸ್
- GOLD: ಜಿನೊಮ್ಸ್ ಆನ್ಲೈನ್ ಡಾಟಾಬೇಸ್
- ದಿ ಜಿನೊಮ್ ನ್ಯೂಸ್ ನೆಟ್ವರ್ಕ್
- NCBI ಎಂಟ್ರೆಜ್ ಜಿನೊಮ್ ಪ್ರೊಜೆಕ್ಟ್ ಡಾಟಾಬೇಸ್
- NCBI ಜಿನೊಮ್ ಪ್ರೈಮರ್
- BBC ನ್ಯೂಸ್ - ಫೈನಲ್ ಜಿನೊಮ್ ಚ್ಯಾಪ್ಟರ್ ಪಬ್ಲಿಷ್ಡ್
- The Plant Genome
- IMG ದಿ ಇಂಟೆಗ್ರೇಟೆಡ್ ಮೈಕ್ರೊಬಿಯಲ್ ಜಿನೊಮ್ಸ್ ಸಿಸ್ಟಮ್, ಫಾರ್ ಜಿನೊಮ್ ಅನಾಲಿಸಿಸ್ ಬಯ ದಿ DOE-JGI.
- CAMERA Archived 2010-07-01 ವೇಬ್ಯಾಕ್ ಮೆಷಿನ್ ನಲ್ಲಿ. ಸೈಬರ್ಇಂಫ್ರಾಸ್ಟ್ರಕ್ಚರ್ ಫಾರ್ ಮೆಟಾಜಿನೊಮಿಕ್ಸ್, ಡಾಟಾ ರಿಪಾಸಿಟರಿ ಅಂಡ್ ಬಯೊಇಂಫರ್ಮ್ಯಾಟಿಕ್ಸ್ ಟೂಲ್ಸ್ ಫಾರ್ ಮೆಟಾಜಿನೊಮಿಕ್ ರಿಸರ್ಚ್
- GeneCards ಮಾನವ ವಂಶವಾಹಿಗಳ ಸಮಗ್ರ ದತ್ತಾಂಶಮಾಹಿತಿ.
- Genome@IGIB ಜಿಬ್ರಾಫಿಷ್ ಜಿನೊಮ್ ಪ್ರಾಜೆಕ್ಟ್ @ IGIB ಕುರಿತು ಮೂಲಗಳು ಮತ್ತು ವಾರ್ತೆಗಳು.
- GeKnome Technologies Next-Gen Sequencing Data Analysis
ನೆಕ್ಸ್ಟ್-ಜೆನ್ ಸಿಕ್ವೆನ್ಸಿಂಗ್ ಡಾಟಾ ಅನಲಿಸಿಸ್ ಫಾರ್ ಇಲ್ಯುಮಿನಾ ಅಂಡ್ 454 ಸರ್ವಿಸ್ ಫ್ರಮ್ ಜಿನೊಮ್ ಟೆಕ್ನಾಲಜೀಸ್.
- ವಾಟ್ ಜಿನೊಮ್ಸ್ ಕ್ಯಾನ್ ಟೆಲ್ ಅಸ್ ಎಬೌಟ್ ದಿ ಪಾಸ್ಟ್ Archived 2009-01-30 ವೇಬ್ಯಾಕ್ ಮೆಷಿನ್ ನಲ್ಲಿ. - ಸಿಡ್ನಿ ಬ್ರೆನರ್ ಅವರಿಂದ ಉಪನ್ಯಾಸ