ಜಾರ್ಜ್ ಸೈಮನ್ ಓಮ್
ಜಾರ್ಜ್ ಸೈಮನ್ ಓಮ್ (/oʊm/, ಜರ್ಮನ್: [ˈɡeːɔʁk ˈʔoːm]; ೧೬ ಮಾರ್ಚ್ ೧೭೮೯- ೬ ಜುಲೈ ೧೮೫೪) ಒಬ್ಬ ಜರ್ಮನ್ ಭೌತಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞ. ಶಾಲಾ ಶಿಕ್ಷಕರಾಗಿ ಓಮ್ ಇಟಾಲಿಯನ್ ವಿಜ್ಞಾನಿ ಅಲೆಸ್ಸಾಂಡ್ರೊ ವೋಲ್ಟಾ ಕಂಡುಹಿಡಿದ ಹೊಸ ಎಲೆಕ್ಟ್ರೋಕೆಮಿಕಲ್ ಕೋಶದೊಂದಿಗೆ ತನ್ನ ಸಂಶೋಧನೆಯನ್ನು ಪ್ರಾರಂಭಿಸಿದನು. ಓಮ್ ತನ್ನದೇ ಆದ ರಚನೆಯ ಉಪಕರಣಗಳನ್ನು ಬಳಸಿ, ವಾಹಕದಾದ್ಯಂತ ಅನ್ವಯಿಸಲಾದ ಸಂಭಾವ್ಯ ವ್ಯತ್ಯಾಸ (ವೋಲ್ಟೇಜ್) ಮತ್ತು ವಿದ್ಯುತ್ ಪ್ರವಾಹದ ನಡುವೆ ನೇರ ಅನುಪಾತವಿದೆ ಎಂದು ಕಂಡುಹಿಡಿದರು. ಈ ಸಂಬಂಧವನ್ನು ಓಮ್ ನಿಯಮ ಎಂದು ಕರೆಯಲಾಗುತ್ತದೆ.
ಜಾರ್ಜ್ ಸೈಮನ್ ಓಮ್ | |
---|---|
ಜನನ | ಎರ್ಲಾಂಗೆನ್, ಬ್ರಾಂಡೆನ್‌ಬರ್ಗ್-ಬೇರ್ಯೂತ್ ಹೋಲಿ ರೋಮನ್ ಸಾಮ್ರಾಜ್ಯ (ಇಂದಿನ ಜರ್ಮನಿ) | ೧೬ ಮಾರ್ಚ್ ೧೭೮೯
ಮರಣ | 6 July 1854 ಮ್ಯೂನಿಚ್, ಬವೇರಿಯಾ ಸಾಮ್ರಾಜ್ಯ ಜರ್ಮನ್ ಒಕ್ಕೂಟ (ಇಂದಿನ ಜರ್ಮನಿ) | (aged 65)
ರಾಷ್ಟ್ರೀಯತೆ | ಜರ್ಮನ್ |
ಕಾರ್ಯಕ್ಷೇತ್ರ | ಭೌತಶಾಸ್ತ್ರ (ವಿದ್ಯುತ್ ಅಧ್ಯಯನಗಳು) |
ಸಂಸ್ಥೆಗಳು | ಮ್ಯೂನಿಚ್ ವಿಶ್ವವಿದ್ಯಾಲಯ |
ಅಭ್ಯಸಿಸಿದ ವಿದ್ಯಾಪೀಠ | ಎರ್ಲಾಂಗೆನ್ ವಿಶ್ವವಿದ್ಯಾಲಯ |
ಡಾಕ್ಟರೇಟ್ ಸಲಹೆಗಾರರು | ಕಾರ್ಲ್ ಕ್ರಿಶ್ಚಿಯನ್ ವಾನ್ ಲ್ಯಾಂಗ್ಸ್‌ಡೋರ್ಫ್ |
ಪ್ರಸಿದ್ಧಿಗೆ ಕಾರಣ | ಓಮ್‌ನ ನಿಯಮ |
ಗಮನಾರ್ಹ ಪ್ರಶಸ್ತಿಗಳು | ಕೋಪ್ಲಿ ಪದಕ (೧೮೪೧) |
ಜೀವನಚರಿತ್ರೆ
ಬದಲಾಯಿಸಿಆರಂಭಿಕ ಜೀವನ
ಬದಲಾಯಿಸಿಜಾರ್ಜ್ ಸೈಮನ್ ಓಮ್ ಅವರು ೧೬ ಮಾರ್ಚ್ ೧೭೮೯ ರಂದು ಎರ್ಲಾಂಗೆನ್ ಬ್ರಾಂಡೆನ್‌ಬರ್ಗ್-ಬೇರ್ಯೂತ್‌ನಲ್ಲಿ (ಆಗ ಪವಿತ್ರ ರೋಮನ್ ಸಾಮ್ರಾಜ್ಯದ ಭಾಗವಾಗಿತ್ತು) ಜನಿಸಿದರು.[೧] ಅವರ ತಂದೆ ಜೋಹಾನ್ ವೋಲ್ಫ್‌ಗ್ಯಾಂಗ್ ಓಮ್ ಬೀಗಗಳನ್ನು ತಯಾರಿಸುವ, ರಿಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದರು. ತಾಯಿ ಮರಿಯಾ ಎಲಿಜಬೆತ್ ಬೆಕ್. ಅವರು ಎರ್ಲಾಂಗೆನ್‌ನಲ್ಲಿರುವ ಟೈಲರ್‌ನ ಮಗಳಾಗಿದ್ದರು. ಕುಟುಂಬದ ಏಳು ಮಕ್ಕಳಲ್ಲಿ ಕೇವಲ ಮೂವರು ಮಾತ್ರ ಪ್ರೌಢಾವಸ್ಥೆಯಲ್ಲಿ ಬದುಕುಳಿದರು: ಜಾರ್ಜ್ ಸೈಮನ್, ಅವರ ಕಿರಿಯ ಸಹೋದರ ಮಾರ್ಟಿನ್, ಸಹೋದರಿ ಎಲಿಜಬೆತ್ ಬಾರ್ಬರಾ. ಸಹೋದರ ಮಾರ್ಟಿನ್ ಅವರು ಪ್ರಸಿದ್ಧ ಗಣಿತಶಾಸ್ತ್ರಜ್ಞರು. ಓಮ್ ಅವರು ಹತ್ತು ವರ್ಷದವರಾಗಿದ್ದಾಗ ಅವರ ತಾಯಿ ತೀರಿಕೊಂಡರು.
ವಿಶ್ವವಿದ್ಯಾನಿಲಯದಲ್ಲಿ ಜೀವನ
ಬದಲಾಯಿಸಿಜಾರ್ಜ್ ಓಮ್ ಅವರ ತಂದೆ ಓಮ್ ಅವರನ್ನು ಸ್ವಿಟ್ಜರ್ಲ್ಯಾಂಡ್ ಕಳುಹಿಸಿದರು. ಅಲ್ಲಿ ಸೆಪ್ಟೆಂಬರ್ ೧೮೦೬ ರಲ್ಲಿ ಓಮ್ ಗಾಟ್‌ಸ್ಟಾಡ್ಟ್ ಬೀ ನಿಡೌದಲ್ಲಿನ ಶಾಲೆಯಲ್ಲಿ ಗಣಿತ ಹುದ್ದೆಯನ್ನು ಸ್ವೀಕರಿಸಿದರು. ಕಾರ್ಲ್ ಕ್ರಿಶ್ಚಿಯನ್ ವಾನ್ ಲ್ಯಾಂಗ್ಸ್‌ಡೋರ್ಫ್ ಅವರು ೧೮೦೯ ರ ಆರಂಭದಲ್ಲಿ ಎರ್ಲಾಂಗೆನ್ ವಿಶ್ವವಿದ್ಯಾಲಯವನ್ನು ತೊರೆದು ಹೈಡೆಲ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಹುದ್ದೆಯನ್ನು ಪಡೆದರು. ಓಮ್ ತನ್ನ ಗಣಿತದ ಅಧ್ಯಯನವನ್ನು ಹೈಡೆಲ್ಬರ್ಗ್ನನಲ್ಲಿ ಲ್ಯಾಂಗ್ಸ್‌ಡೋರ್ಫ್ ಅವರೊಂದಿಗೆ ಪುನರಾರಂಭಿಸಲು ಬಯಸಿದರು. ಲ್ಯಾಂಗ್ಸ್‌ಡಾರ್ಫ್ ಅವರು ಓಮ್‌ಗೆ ಗಣಿತಶಾಸ್ತ್ರದ ಅಧ್ಯಯನವನ್ನು ಮುಂದುವರಿಸುವಂತೆ ಸಲಹೆ ನೀಡಿದರು. ಹಾಗೇ ಓಮ್ ಯೂಲರ್, ಲ್ಯಾಪ್ಲೇಸ್ ಮತ್ತು ಲ್ಯಾಕ್ರೊಯಿಕ್ಸ್ ಅವರ ಕೃತಿಗಳನ್ನು ಓದುವಂತೆ ಸೂಚಿಸಿದರು. ಓಮ್ ಅವರು ಮಾರ್ಚ್ ೧೮೦೯ರಲ್ಲಿ ಗಾಟ್‌ಸ್ಟಾಟ್ ಮಠದಲ್ಲಿ ತಮ್ಮ ಶಿಕ್ಷಕ ಹುದ್ದೆಯನ್ನು ತೊರೆದು ನ್ಯೂಚಾಟೆಲ್‌ನಲ್ಲಿ ಖಾಸಗಿ ಬೋಧಕರಾದರು ಸೇರಿದರು. ಎರಡು ವರ್ಷಗಳ ಕಾಲ ಅವರು ಬೋಧಕರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರು. ನಂತರ ಅವರು ಲ್ಯಾಂಗ್ಸ್‌ಡಾರ್ಫ್ ಅವರ ಸಲಹೆಯನ್ನು ಅನುಸರಿಸಿ ಗಣಿತಶಾಸ್ತ್ರದ ಅವರ ಖಾಸಗಿ ಅಧ್ಯಯನವನ್ನು ಮುಂದುವರೆಸಿದರು. ನಂತರ ಏಪ್ರಿಲ್ ೧೮೧೧ ರಲ್ಲಿ ಅವರು ಎರ್ಲಾಂಗೆನ್ ವಿಶ್ವವಿದ್ಯಾಲಯಕ್ಕೆ ಮರಳಿದರು.
ಶಿಕ್ಷಕ ವೃತ್ತಿ
ಬದಲಾಯಿಸಿಓಮ್ ಅವರು ಅಕ್ಟೋಬರ್ ೨೫, ೧೮೧೧ ರಂದು ಎರ್ಲಾಂಗೆನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಅವರು ಅಲ್ಲಿ ಗಣಿತಶಾಸ್ತ್ರದ ಉಪನ್ಯಾಸಕರಾಗಿ ಸೇರಿದರು. ಮೂರು ಸೆಮಿಸ್ಟರ್‌ಗಳ ನಂತರ ಎರ್ಲಾಂಗೆನ್ ವಿಶ್ವವಿದ್ಯಾನಿಲಯವನ್ನು ತೊರೆದರು. ೧೮೧೩ ರಲ್ಲಿ ಬವೇರಿಯನ್ ಸರ್ಕಾರವು ಅವರಿಗೆ ಬ್ಯಾಂಬರ್ಗ್‌ನ ಶಾಲೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರದ ಶಿಕ್ಷಕರ ಹುದ್ದೆಯನ್ನು ನೀಡಿತು. ಜಾರ್ಜ್ ಅವರು ತನ್ನ ಸಾಮರ್ಥ್ಯಗಳನ್ನು ಸಾಬೀತುಪಡಿಸುವ ಮಾರ್ಗವಾಗಿ ರೇಖಾಗಣಿತದ ಪ್ರಾಥಮಿಕ ಪಠ್ಯಪುಸ್ತಕವನ್ನು ಬರೆಯಲು ಪ್ರಾರಂಭಿಸಿದರು. ಬ್ಯಾಂಬರ್ಗ್‌ನ ಶಾಲೆಯು ಫೆಬ್ರವರಿ ೧೮೧೬ ರಲ್ಲಿ ಮುಚ್ಚಲಾಯಿತು. ಬವೇರಿಯನ್ ಸರ್ಕಾರವು ನಂತರ ಗಣಿತಶಾಸ್ತ್ರದ ಓಮ್ ಅವರನ್ನು ಭೋದಕರಾಗಿ ಬ್ಯಾಂಬರ್ಗ್‌ನಲ್ಲಿರುವ ಮತ್ತೊಂದು ಶಾಲೆಗೆ ಕಳುಹಿಸಿತು.
ಓಮ್ ತನ್ನ ಹಸ್ತಪ್ರತಿಯನ್ನು ಪ್ರಶ್ಯದ ರಾಜ ಮೂರನೇ ವಿಲ್ಹೆಲ್ಮ್ ಗೆ ಕಳುಹಿಸಿದರು. ರಾಜನು ೧೧ ಸೆಪ್ಟೆಂಬರ್ ೧೮೧೭ ರಂದು ಕಲೋನ್‌ನ ಜೆಸ್ಯೂಟ್ ಜಿಮ್ನಾಷಿಯಂನಲ್ಲಿ ಓಮ್‌ಗೆ ಸ್ಥಾನವನ್ನು ನೀಡುತ್ತಾನೆ. ಓಮ್ ೧೮೨೭ ರಲ್ಲಿ ಡೈ ಗಾಲ್ವಾನಿಸ್ಚೆ ಕೆಟ್ಟೆ, ಗಣಿತದ ಬೇರ್‌ಬೀಟೆಟ್ (ದಿ ಗಾಲ್ವನಿಕ್ ಸರ್ಕ್ಯೂಟ್ ಇನ್ವೆಸ್ಟಿಗೇಟೆಡ್ ಮ್ಯಾಥಮೆಟಿಗೇಟೆಡ್) ಅನ್ನು ಪ್ರಕಟಿಸಿದರು. ಓಮ್ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಅವರು ನ್ಯೂರೆಂಬರ್ಗ್ ಪಾಲಿಟೆಕ್ನಿಕ್ ಸ್ಕೂಲ್‌ಗೆ ಅರ್ಜಿ ಸಲ್ಲಿಸಿದರು. ೧೮೩೩ ರಲ್ಲಿ ಪಾಲಿಟೆಕ್ನಿಕ್ ಸ್ಕೂಲ್ ಆಫ್ ನ್ಯೂರೆಂಬರ್ಗ್‌ಗೆ ಆಗಮಿಸಿದರು. ೧೮೫೨ ರಲ್ಲಿ ಅವರು ಮ್ಯೂನಿಚ್ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಭೌತಶಾಸ್ತ್ರದ ಪ್ರಾಧ್ಯಾಪಕರಾದರು.
೧೮೫೪ ರಲ್ಲಿ ಓಮ್ ಅವರು ಮ್ಯೂನಿಚ್‌ನಲ್ಲಿ ನಿಧನರಾದರು. ಆಲ್ಟರ್ ಸುಡ್‌ಫ್ರಿಡ್‌ಹೋಫ್‌ನಲ್ಲಿ ಅವರ ಸಮಾಧಿ ಮಾಡಲಾಯಿತು.
ಓಮ್‌ನ ನಿಯಮದ ಅನ್ವೇಷಣೆ
ಬದಲಾಯಿಸಿಓಮ್ನ ನಿಯಮವನ್ನು ಜಾರ್ಜ್ ಓಮ್ ಅವರು ಡೈ ಗಾಲ್ವಾನಿಸ್ಚೆ ಕೆಟ್ಟೆ, ಗಣಿತಶಾಸ್ತ್ರದ ಬೇರ್‌ಬೀಟೆಟ್ (ದಿ ಗಾಲ್ವಾನಿಕ್ ಸರ್ಕ್ಯೂಟ್ ಇನ್ವೆಸ್ಟಿಗೇಟೆಡ್ ಮ್ಯಾಥಮೆಟಿಗೇಟೆಡ್) (೧೮೨೭) ಎಂಬ ಪುಸ್ತಕದಲ್ಲಿ ಬರೆದಿದ್ದರು. ಇದರಲ್ಲಿ ಅವರು ಸಂಪೂರ್ಣ ವಿದ್ಯುತ್ ಸಿದ್ಧಾಂತವನ್ನು ನೀಡಿದ್ದರು. ವಿದ್ಯುನ್ಮಂಡಲದ ಶಕ್ತಿಗೆ ಸಂಬಂಧಿಸಿದಂತೆ ಅವರ ನಿಯಮವು ಒಂದು ಸರ್ಕ್ಯೂಟ್‌ನ ಯಾವುದೇ ಭಾಗದ ನಡುವಿನ ವರ್ತನೆಯು ಪ್ರಸಕ್ತ ಸಾಮರ್ಥ್ಯದ ಉತ್ಪನ್ನವಾಗಿದೆ ಮತ್ತು ಸರ್ಕ್ಯೂಟ್‌ನ ಆ ಭಾಗವನ್ನು ಪ್ರತಿರೋಧಿಸುತ್ತದೆ. ಓಮ್ ಅನ್ನು Ω ಚಿಹ್ನೆಯಿಂದ ಸೂಚಿಸಲಾಗುತ್ತದೆ.[೨]
ಅಧ್ಯಯನ ಮತ್ತು ಪ್ರಕಟಣೆಗಳು
ಬದಲಾಯಿಸಿ೧೮೨೬ ರಲ್ಲಿ ಅವರು ಫೋರಿಯರ್‌ನ ಶಾಖ ವಾಹಕತೆಯ ಅಧ್ಯಯನದ ಮಾದರಿಯಲ್ಲಿ ಸರ್ಕ್ಯೂಟ್‌ಗಳಲ್ಲಿ ವಹನದ ವಿವರಣೆಯನ್ನು ನೀಡಿದರು. ೧೮೨೭ ರಲ್ಲಿ ಬರ್ಲಿನ್‌ನಲ್ಲಿ ಡೈ ಗಾಲ್ವಾನಿಸ್ಚೆ ಕೆಟ್ಟೆ ಗಣಿತಶಾಸ್ತ್ರದ ಬೇರ್‌ಬೀಟೆಟ್ ಎಂಬ ಅವರ ಕರಪತ್ರವನ್ನು ಪ್ರಕಟಿಸಿದರು.
೧೮೪೧ ರಲ್ಲಿ ರಾಯಲ್ ಸೊಸೈಟಿಯು ಓಮ್ ಅವರಿಗೆ ಕಾಪ್ಲೆ ಪದಕದ ಪ್ರಶಸ್ತಿ ನೀಡಿತು.[೩] ೧೮೪೨ ರಲ್ಲಿ ಓಮ್ ಅವರು ರಾಯಲ್ ಸೊಸೈಟಿಯ ವಿದೇಶಿ ಸದಸ್ಯರಾದರು. ೧೮೪೫ ರಲ್ಲಿ ಅವರು ಬವೇರಿಯನ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಹ್ಯುಮಾನಿಟೀಸ್‌ನ ಸದಸ್ಯರಾದರು.