ಜಾನ್ ಅಲ್ಬೆರಿ ಎಫ್.ಆರ್.ಎಸ್ (೫ ಏಪ್ರಿಲ್ ೧೯೩೬-೩ ಡಿಸೆಂಬರ್ ೨೦೧೩) ಇವರು ಬ್ರಿಟಿಷ್ ಭೌತಶಾಸ್ತ್ರದ ರಸಾಯನಶಾಸ್ತ್ರಜ್ಞ .

ಜಾನ್ ಅಲ್ಬೆರಿ
ಜನನ(೧೯೩೬-೦೪-೦೫)೫ ಏಪ್ರಿಲ್ ೧೯೩೬
United Kingdom
ಮರಣ3 December 2013(2013-12-03) (aged 77)
ರಾಷ್ಟ್ರೀಯತೆBritish
ಕಾರ್ಯಕ್ಷೇತ್ರPhysical chemistry
ಸಂಸ್ಥೆಗಳುUniversity College, Oxford, Imperial College London
ಅಭ್ಯಸಿಸಿದ ವಿದ್ಯಾಪೀಠBalliol College, Oxford
ಡಾಕ್ಟರೇಟ್ ಸಲಹೆಗಾರರುRonnie Bell

ಆರಂಬಿಕ ಜೀವನ

ಬದಲಾಯಿಸಿ

ಜಾನ್ ಅಲ್ಬೆರಿ ಯವರು ೫ ಏಪ್ರಿಲ್ ೧೯೩೬ ರಂದು ಜನಿಸಿದರು. ಅವರು ವಿಂಚೆಸ್ಟರ್ ಕಾಲೇಜ್ ಹಾಗೂ ಆಕ್ಸ್ಫರ್ಡ್ ನ ಬಲಿವೋಲ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದರು. ಹಾಗೆ ಅಲ್ಬೆರಿ ಯವರು ಡಿ.ಫಿಲ್ ಅನ್ನು ೧೯೬೦ ರಲ್ಲಿ ಪ್ರಾರಂಭವಾದ ಆಕ್ಸ್ಫರ್ಡ್ ನ ರೋನಿ ಬೆಲ್ ನಲ್ಲಿ ಕೈಗೊಂಡರು.

ಶೈಕ್ಷಣಿಕ ವೃತ್ತಿ

ಬದಲಾಯಿಸಿ

೧೯೬೨ ಅಕ್ಟೋಬರ್ ಅಲ್ಬೆರಿ ಯನ್ನು ವೆಯಿರ್ ಜೂನಿಯರ್ ರಿಸರ್ಚ್ ಫೆಲೋಶಿಪ್ ಗೆ ನೇಮಕ ಮಾಡಲಾಯಿತು. ಅಕ್ಟೋಬರ್ ೧೯೬೩ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಫೆಲೋಶಿಪ್ ಮತ್ತು ಪ್ರೆಲೆಕ್ಟರ್ಶಿಪ್ಗೆ ನೇಮಿಸಲಾಯಿತು. ಅಲ್ಲಿ ಅವರು ಇ.ಜಿ ಬೋವೆನ್ ನ ಸಹೋದ್ಯೋಗಿಯಾಗಿದ್ದರು. ಅವರು ಯುನಿವರ್ಸಿಟಿ ಯಲ್ಲಿ ಜೂನಿಯರ್ ಡೀನ್ ಮತ್ತು ಡೀನ್ ಆಗಿ ಸೇವೆ ಸಲ್ಲಿಸಿದರು. ೧೯೬೮ರಿಂದ ೧೯೭೫ರವರೆಗೆ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯು ೧೯೭೫ರಲ್ಲಿ ನಾರ್ರಿಂಗ್ಟನ್ ಯುನಿವರ್ಸಿಟಿ ಕಾಲೇಜಿನಲ್ಲಿ ಅಂತ್ಯಗೊಂಡಿತು. ಅಲ್ಬೆರಿ ಮೂಲತಃ ನಾಟಕೀಯ ಕುಟುಂಬದಿಂದ ಬಂದ ಇವರು ಕಾಲೇಜ್ ಕೊಠಡಿಯಲ್ಲಿ ನಡೆದ ಯುನಿವರ್ಸಿಟಿ ಕಾಲೇಜ್ ಪ್ಲೇಯರ್ಸ್ ಯೂನಿವರ್ ರೆವ್ಯೂನ ಸಂಘಟಕರಾಗಿದ್ದರು. ಹಾಗೆ ಹಿರಿಯ ಸಂಘಟಕರಾಗಿದ್ದರು. ಮತ್ತು ಎಕ್ಸ್ಟೈಮೆಂಟಲ್ ಥಿಯೇಟರ್ ಕ್ಲಬ್ನ ನ ಚಿತ್ರಕಥೆಗಾರರಾಗಿದ್ದರು. ಇವರು ವೃತ್ತಿ ಜೀವನದ ಆರಂಭದಲ್ಲಿ ೧೯೬೨ರಲ್ಲಿ ಬಿಟ್ ವಿಡಂಬನಾತ್ಮಕ ಹಾಸ್ಯ ದೂರದರ್ಶನ ಕಾರ್ಯಕ್ರಮವಾದ ದಟ್ ವಾಸ್ ದ ವೀಕ್ ದಟ್ ವಾಸ್ ಅಲ್ಬೆರಿ ಬರೆದಿದ್ದಾರೆ. ಆಕ್ಸ್ಫರ್ಡ್ ನಂತರ ಅಲ್ಬೆರಿ ೧೯೭೮ರಿಂದ ಲಂಡನ್ ನ ಇಂಪೀರಿಯಲ್ ಕಾಲೇಜಿನಲ್ಲಿ ಶಾರೀರಿಕ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಇದಾದ ನಂತರ ಅಲ್ಬೆರಿ ಇಂಪೀರಿಯರ್ ಕಾಲೇಜಿನಲ್ಲಿ ರಸಾಯನಶಾಸ್ತ್ರದ ಬ್ಯಾರೆರ್ ವ್ಯಕ್ತಿ ಆದರು. ಹಾಗೆ ರಾಯಲ್ ಸೊಸೈಟಿ ಯ ಭಾಗವಾಗಿದ್ದರು. ವಿಶ್ವವಿದ್ಯಾಲಯ ಕಾಲೇಜಿನ ಮೊದಲ ಮಾಸ್ಟರ್ ಆಗಿದ್ದರು. ಅವರು ಆಕ್ಸ್ಫರ್ಡ್ ಕಾಲೇಜಿನ ಗೌರವಾನಿತ್ವಕ ವ್ಯಕ್ತಿ ಆಗಿದ್ದರು. ಹಾಗೆ ಅವರ ೭೫ನೇ ಹುಟ್ಟುಹಬ್ಬವನ್ನು ಆಕ್ಸ್ಫರ್ಡ್ ಕಾಲೇಜಿನಲ್ಲಿ ನಡೆಸಲಾಗಿತ್ತು.

ಅಲ್ಬೆರಿ ೩ ಡಿಸೆಂಬರ್ ೨೦೧೩ರಂದು ಕ್ಯಾನ್ಸರ್ ಕಾರಣದಿಂದ ನಿಧನರಾದರು. ೫ ಏಪ್ರಿಲ್ ೨೦೧೪ರಲ್ಲಿ ಲೆಸ್ಸಿ ಮಿಂಚೆಲ್ ಮತ್ತು ರಾಬರ್ಟ್ ಹಿಲ್ಮನ್ರವರ ಗೌರವದೊಂದಿಗೆ ಆಕ್ಸ್ಫರ್ಡ್ ನಲ್ಲಿ ವರ್ಜಿನ ವಿಶ್ವವಿದ್ಯಾಲಯ ಚರ್ಚ್ ಸೇಂಟ್ ಮೇರಿಯಲ್ಲಿ ಸ್ಮಾರಕ ಸ್ಥಾಪಿಸಿದರು.

ಪುಸ್ತಕಗಳು

ಬದಲಾಯಿಸಿ
  • ರಿಂಗ್-ಡಿಸ್ಕ್ ಎಲೆಕ್ಟ್ರೋಡ್ಸ್,ಎಮ್.ಎಲ್. ಹಿಚ್ಮನ್,ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ,೧೯೭೧(ಐ.ಎಸ್. ಬಿ.ನ್ ೦-೧೯-೮೫೫೩೪೯-೮)
  • ಎಲೆಕ್ಟ್ರೋಡ್ ಕೈನೆಟಿಕ್ಸ್ ಪ್ರೆಸ್ ,ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ,೧೯೭೫(ಐ.ಎಸ್.ಬಿ.ನ್ ೦-೧೯-೮೫೫೪೩೩-೮)

ಉಲ್ಲೇಖಗಳು

ಬದಲಾಯಿಸಿ