51°03′48″N 1°18′31″W / 51.0632°N 1.3085°W / 51.0632; -1.3085

Winchester

A View of Winchester City Centre
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/United Kingdom" does not exist.
Population ೪೧,೪೨೦ []
OS grid reference SU485295
District Winchester
Shire county Hampshire
Region South East
Country ಇಂಗ್ಲೆಂಡ್
Sovereign state United Kingdom
Post town WINCHESTER
Postcode district SO22, SO23
Dialling code 01962
Police  
Fire  
Ambulance  
EU Parliament
UK Parliament Winchester
List of places
United Kingdom

ವಿಂಚೆಸ್ಟರ್ (ಪ್ರಾಚೀನವಾಗಿ ವಿನ್ ಟನ್ ಮತ್ತು ವಿನ್ ಟನ್ ಸಿಯಸ್ಟ್ರೆ ಎಂದು ಕರೆಯಲಾಗುತ್ತಿತ್ತು), ಎಂಬುದು ಐತಿಹಾಸಿಕ ಪ್ರಧಾನ ಇಗರ್ಜಿಗಳ, ಕ್ಯಾಥಡ್ರಲ್ ನಗರವಾಗಿದ್ದು, ವೆಸೆಕ್ಸ್ ಮತ್ತು ಇಂಗ್ಲೆಂಡ್ ರಾಜ್ಯದ ಪ್ರಾಚೀನ ರಾಜಧಾನಿಯಾಗಿತ್ತು. ಇದು ಆಗ್ನೇಯ ಇಂಗ್ಲೆಂಡ್ ನಲ್ಲಿರುವ ಹ್ಯಾಂಪ್ಶೈರ್ ಕೌಂಟಿಯ ರಾಜಧಾನಿ ಯಾಗಿದೆ. ಈ ನಗರದ ವೈಶಾಲ್ಯತೆ ವಿಂಚೆಸ್ಟರ್ ನಗರದ ಹೃದಯ ಭಾಗದಲ್ಲಿ ನೆಲೆಸಿದೆ. ಇದು ಸ್ಥಳೀಯ ಸರ್ಕಾರ ಹೊಂದಿದ ಜಿಲ್ಲೆಯಾಗಿದ್ದು, ಸೌತ್ ಡೌನ್ ಗಳ ಪಶ್ಚಿಮದ ಕೊನೆಯಲ್ಲಿ, ಇಚೇನ್ ನದಿಯ ಮಾರ್ಗದಲ್ಲಿದೆ.[] ಆಗ 2001 ರ ಜನಗಣತಿಯ ಸಮಯದಲ್ಲಿ ವಿಂಚೆಸ್ಟರ್ 41,420 ರಷ್ಟು ಜನಸಂಖ್ಯೆ ಹೊಂದಿತ್ತು.[] ವಿಂಚೆಸ್ಟರ್, ವೆಂಟಾ ಬೆಲ್ಗರುಮ್ ಎಂಬ ರೋಮನ್ ಪಟ್ಟಣದಿಂದ ಅಭಿವೃದ್ಧಿಪಡೆಯಿತು. ವಿಂಚೆಸ್ಟರ್ ನ ಪ್ರಧಾನ ಚರ್ಚ್ ವಿಂಚೆಸ್ಟರ್ ನ ಹೆಗ್ಗುರತಾಗಿದೆ. ಇಂಗ್ಲೆಂಡ್ ನಲ್ಲಿರುವ ಅತ್ಯಂತ ದೊಡ್ಡ ಚರ್ಚುಗಳಲ್ಲಿ ಇದೂ ಕೂಡ ಒಂದಾಗಿದ್ದು, ಅತ್ಯಂತ ಉದ್ದ ಗುಂಬ(ಪಾದ್ರಿಗಳ ಪ್ರತ್ಯೇಕ ಸ್ಥಳ) ಹೊಂದಿದೆಯಲ್ಲದೇ ಯುರೋಪ್ ನಲ್ಲಿರುವ ಎಲ್ಲಾ ಗೊತಿಕ್ ಶೈಲಿಯ ಚರ್ಚ್ ಗಳ ಗುಂಬಗಳಿಗಿಂತ ಅಧಿಕ ಉದ್ದಳತೆ ಹೊಂದಿದೆ. ಪಟ್ಟಣವು ವಿಂಚೆಸ್ಟರ್ ವಿಶ್ವವಿದ್ಯಾನಿಲಯ ಮತ್ತು ವಿಂಚೆಸ್ಟರ್ ಕಾಲೇಜಿನ ತವರಾಗಿದೆ- ಇದು ಪ್ರಸಿದ್ಧ ಪಬ್ಲಿಕ್ ಶಾಲೆಯಾಗಿವೆ. ಲಂಡನ್ ವಾಟರ್ ಲೂ, ವೆ ಮೌತ್, ಪೋರ್ಟ್ಸ್ ಮೌತ್, ಸೌತ್ ಅಂಪ್ಟನ್ ಮತ್ತು ಉತ್ತರದಿಂದ ಬರುವ ರೈಲುಗಾಡಿಗಳು ವಿಂಚೆಸ್ಟರ್ ರೈಲು ನಿಲ್ದಾಣದ ಮೂಲಕ ಸಾಗುತ್ತವೆ. ನಗರದ ವಾಸ್ತುಶಿಲ್ಪೀಯ ಮತ್ತು ಐತಿಹಾಸಿಕ ಆಸಕ್ತಿ, ಹಾಗು ಇತರ ಪಟ್ಟಣಗಳು ಮತ್ತು ನಗರಗಳೊಂದಿಗೆ ಇದು ಹೊಂದಿರುವ ಶೀಘ್ರ ಸಂಪರ್ಕಗಳಿಂದಾಗಿ, ವಿಂಚೆಸ್ಟರ್ ರಾಷ್ಟ್ರದ ಅತ್ಯಂತ ದುಬಾರಿ ಮತ್ತು ಎಲ್ಲರೂ ಬಯಸುವ ಪ್ರದೇಶವಾಗಿದೆ.[] ವಿಂಚೆಸ್ಟರ್ ನಲ್ಲಿ ವಾಸಿಸುತ್ತಿರುವ ಅಥವಾ ಅಲ್ಲಿಯವನಾಗಿರುವ ವ್ಯಕ್ತಿಯನ್ನು ಸ್ಥಳೀಯವಾಗಿ ವಿನ್ಟೊನಿಯನ್ ಎಂದು ಕರೆಯಲಾಗುತ್ತದೆ.

ಇತಿಹಾಸ

ಬದಲಾಯಿಸಿ

ಆರಂಭಿಕ ಇತಿಹಾಸ

ಬದಲಾಯಿಸಿ

ಈ ಪ್ರದೇಶದಲ್ಲಿ ನೆಲೆಸುವಿಕೆಯು ಕಬ್ಬಿಣ ಯುಗದ ಸಂಸ್ಕೃತಿಯೊಂದಿಗೆ ಅಥವಾ ಒರಮ್ಸ್ ಆರ್ಬರ್ ಹಿಲ್ ಫೋರ್ಟ್(ಒಂದು ರೀತಿಯ ಮಣ್ಣಿನ ದಿಬ್ಬ) ನೊಂದಿಗೆ, ಪೂರ್ವ ರೋಮನ್ ಅವಧಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತದೆ. ಈ ಹಿಲ್ ಪೋರ್ಟ್ ಸದ್ಯ-ನಗರದ ಪಶ್ಚಿಮ ದಿಕ್ಕಿನಲ್ಲಿದೆ. ಬ್ರಿಟನ್ ಅನ್ನು ರೋಮನ್ನರು ಗೆದ್ದುಕೊಂಡ ನಂತರ ಸಿವಿಟಸ್ ಅನ್ನು, ವೆಂಟಾ ಬೆಲ್ಗರುಮ್ ಎಂದು ಕರೆಯಲಾಯಿತು, ಅಥವಾ "ಬೆಲ್ಗೆ" ಬುಡಕಟ್ಟು ಜನಾಂಗದ ಮಾರುಕಟ್ಟೆಯೆಂದು ಕರೆಯಲಾಯಿತು. ಅಲ್ಲದೇ ಇದು ಗಮನಾರ್ಹವಾದ ಪ್ರಾಮುಖ್ಯತೆ ಹೊಂದಿತ್ತು.[] ರೋಮನ್ನರ ಆಕ್ರಮಣದ ನಂತರ ನಗರವು ಕೇರ್ಗ್ ವಿಂಟ್ಗ್ವಿಕ್ ಅಥವಾ ಕೇರ್ಗ್ ವಿಂಟ್ (ಅಕ್ಷರಶಃ" ಶ್ವೇತ ಕೋಟೆ" ಎಂಬ ಅರ್ಥ ಕೊಡುತ್ತದೆ) ಅನ್ನು ಹೊಂದಿದ್ದಾಗಿರಬಹುದೆಂದು ಇತಿಹಾಸಕಾರ ನೆನ್ನಿಯಸ್ ದಾಖಲಿಸಿದ್ದಾರೆ.[] ಆಂಗ್ಲೋ-ಸ್ಯಾಕ್ಸನ್ನರು ಈ ಪ್ರದೇಶವನ್ನು 519 ರಲ್ಲಿ ವಶಪಡಿಸಿಕೊಂಡ ನಂತರ ಈ ಹೆಸರನ್ನು ವಿಂಟನ್ ಸೆಯೆಸ್ಟ್ರೆ ಎಂದು ತಿದ್ದುಪಡಿ ಮಾಡಲಾಯಿತು. ಆಗ 3ನೇ ಶತಮಾನದ ಆರಂಭದಲ್ಲಿ ವಿಂಚೆಸ್ಟರ್ ಗೆ ಸುರಕ್ಷಿತ ಕಲ್ಲಿನ ಗೋಡೆಗಳನ್ನು ಕಟ್ಟಲಾಯಿತು.[] ಈ ಸಮಯದಲ್ಲಿ ನಗರವು 144 acres (58 ha) ಯಷ್ಟು ಪ್ರದೇಶವನ್ನು ಒಳಗೊಂಡಿತ್ತು. ಇದು ನಗರವನ್ನು ರೋಮನ್ನರ ಬ್ರಿಟನ್ ನಲ್ಲೇ 5 ನೇ ಅತ್ಯಂತ ದೊಡ್ಡ ನಗರವನ್ನಾಗಿಸಿತು. ಇದರ ಗೋಡೆಗಳ ಹೊರಗೆ ಸ್ವಲ್ಪ ಸಂಖ್ಯೆಯ ಉಪನಗರಗಳು ಕೂಡ ಇದ್ದವು.[] ಅದೇನೇ ಆದರೂ, ಇತರ ರೋಮನ್ ಪಟ್ಟಣಗಳಂತೆ ವಿಂಚೆಸ್ಟರ್ ಕೂಡ 4 ನೇ ಶತಮಾನದಲ್ಲಿ ಅವನತಿ ಹೊಂದಿತು.[]

ಆಂಗ್ಲೋ-ಸ್ಯಾಕ್ಸನ್ ಅವಧಿ

ಬದಲಾಯಿಸಿ
 
ಹ್ಯಾಮೊ ಥ್ರೋನಿಕ್ರಾಫ್ಟ್ ನಲ್ಲಿರುವ ವಿಂಚೆಸ್ಟರ್ ನ ಸರ್ವಶ್ರೇಷ್ಠ ರಾಜ ಅಲ್ಫ್ರೆಡ್ ನ ಪ್ರತಿಮೆ.

ಈ ನಗರ ಐತಿಹಾಸಿಕ ಮಹತ್ವ ಹೊಂದಿದೆ. ಇದನ್ನು ಸುಮಾರು 686 ರಲ್ಲಿ ವೆಸೆಕ್ಸ್ ನ ಕ್ಯಾಡ್ವಾಲ್ಲಾ ರಾಜ ವ್ಯೇಟ್ ನ ಅಟ್ ವ್ಯಾಲ್ಡ್ ರಾಜನನ್ನು ಸೋಲಿಸಿದ ನಂತರ, ಡೊರ್ಚೆಸ್ಟರ್-ಆನ್-ಥೇಮ್ಸ್ ಬದಲಿಗೆ ಈ ನಗರವನ್ನು ವೆಸೆಕ್ಸ್ ನ ನಿಜವಾದ ರಾಜಧಾನಿಯನ್ನಾಗಿಸಲಾಯಿತು. ಇದು ಆ ಸಮಯದಲ್ಲಿ ರಾಜಧಾನಿಯಾಗಿದ್ದ ಏಕಮಾತ್ರ ನಗರವಲ್ಲದಿದ್ದರೂ ಕೂಡ, ಇದನ್ನು 827 ರಲ್ಲಿ ಎಗ್ಬರ್ಟ್ ರಾಜ ತನ್ನ ರಾಜ್ಯದ ಪ್ರಧಾನ ನಗರವನ್ನಾಗಿ ಸ್ಥಾಪಿಸಿದ. ಸೇಂಟ್ ಸ್ವಿಥುನ್, 9 ನೇ ಶತಮಾನದ ಮಧ್ಯಾವಧಿಯಲ್ಲಿ ವಿಂಚೆಸ್ಟರ್ ನ ಬಿಷಪ್ ಆಗಿದ್ದರು. ಅಲ್ಫ್ರೆಡ್ ದಿ ಗ್ರೇಟ್ ಸಿದ್ಧಪಡಿಸಿದ ಸ್ಯಾಕ್ಸನ್ ನ ಬೀದಿಗಳ ಯೋಜನೆಯು ಇಂದೂ ಕೂಡ ಸ್ಪಷ್ಟವಾಗಿದೆ:ಪಟ್ಟಣದ ಆಗಿನ ಪ್ರಮುಖ ಸಂಪ್ರದಾಯಕ್ಕೆ ಸರಿಹೊಂದುವ ಶಿಲುಬೆಯಾಕಾರದ ಬೀದಿಯ ವ್ಯವಸ್ಥೆ- ಇದನ್ನು ಮೊದಲು ಅಸ್ತಿತ್ವದಲ್ಲಿದ್ದ ರೋಮನ್ ಬೀದಿಯ ಯೋಜನೆಯ ಮೇಲೆ ಯೋಜಿಸಲಾಯಿತು.(ದಕ್ಷಿಣ-ಪೂರ್ವದಲ್ಲಿ ಚರ್ಚಿನ ಭಾಗವನ್ನು ಒಟ್ಟಿಗೆ ಸೇರಿಸಲಾಯಿತು; ದಕ್ಷಿಣ-ಪಶ್ಚಿಮದಲ್ಲಿ ನ್ಯಾಯಿಕ ವ್ಯಾಪ್ತಿಗೆ ಸೇರಿಸಲಾಯಿತು; ಉತ್ತರ-ಪೂರ್ವದಲ್ಲಿ ಕುಶಲಕರ್ಮಿಗಳನ್ನು ಒಟ್ಟುಗೂಡಿಸಲಾಯಿತು). ಈ ಪಟ್ಟಣವು, ದಕ್ಷಿಣ ತೀರದೊಂದಿಗೆ ಹಲವು ಕೋಟೆಗಳ ನಿರ್ಮಾಣದ ಭಾಗವಾಗಿತ್ತು. ಈ ಕೋಟೆಗಳನ್ನು ಅಲ್ಫ್ರೆಡ್, ರಾಜ್ಯದ ರಕ್ಷಣೆಗಾಗಿ ನಿರ್ಮಿಸಿದ್ದನು. ಇವುಗಳನ್ನು 'ಬುರ್' ಗಳೆಂದು ಕರೆಯುತ್ತಿದ್ದರು. ಹಳೆಯ ರೋಮನ್ ಗೋಡೆಗಳ ಮೇಲೆ ಕಟ್ಟಲಾದ ಮಧ್ಯಕಾಲೀನ ನಗರದ ಗೋಡೆಗಳು ಈ ಸ್ಥಳಗಳಲ್ಲಿ ಕಂಡುಬರುತ್ತವೆ. ಮೂಲ ರೋಮನ್ ಗೋಡೆಗಳ ಕೇವಲ ಒಂದೇ ಒಂದು ವಿಭಾಗ ಮಾತ್ರ ಉಳಿದಿದೆ. ನಾಲ್ಕು ಪ್ರಮುಖ ದ್ವಾರಗಳನ್ನು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದಲ್ಲಿ ಸ್ಥಾಪಿಸಲಾಗಿದೆ. ಇದರೊಂದಿಗೆ ಎಳೆಯುವ ಬಾಗಿಲು ಮತ್ತು ರಾಜನ ದ್ವಾರವಿದೆ. ವಿಂಚೆಸ್ಟರ್, ನಾರ್ಮನ್ ವಿಜಯದ ನಂತರ ರಾಜಧಾನಿಯನ್ನು ಲಂಡನ್ ಗೆ ಬದಲಾಯಿಸಿದಾಗ ಕೆಲಕಾಲದ ವರೆಗೆ ವೆಸೆಕ್ಸ್ ನ ರಾಜಧಾನಿಯಾಗಿ, ಅನಂತರ ಇಂಗ್ಲೆಂಡ್ ನ ರಾಜಧಾನಿಯಾಗಿ ಉಳಿಸಿಕೊಂಡಿತ್ತು. ದಾಖಲೆ ಎನಿಸಿದ ಡೂಮ್ಸ್ ಡೇ ಗ್ರಂಥವನ್ನು ಹಿಂದೆ ವಿಲಿಯಂ ದಿ ಕಾಂಕ್ವರರ್ ನ ಪ್ರದೇಶದಲ್ಲಿದ್ದ ನಗರದಲ್ಲಿ ಸಂಕಲಿಸಲಾಗಿದೆ.

ಮಧ್ಯಕಾಲೀನ ಮತ್ತು ಅನಂತರದ ಅವಧಿ

ಬದಲಾಯಿಸಿ
ಚಿತ್ರ:WinchesterHighStreetHampshireRobertMudieauthor18532ndattempt.jpg
19 ನೇ ಶತಮಾನದಲ್ಲಿದ್ದ ವಿಂಚೆಸ್ಟರ್ ನ ಹೈ ಸ್ಟ್ರೀಟ್

ಇದರ ಶೀಘ್ರ ಅವನತಿಗೆ, 1141 ರಲ್ಲಿ ಉಂಟಾದ ಬೆಂಕಿ ಅನಾಹುತವೇ ಕಾರಣವಾಯಿತು. ಆದರೂ, ವೈಕೆಹ್ಯಾಮ್ ನ ವಿಲಿಯಂ (1320–1404) ನಗರದ ಪುನಃ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಂಚೆಸ್ಟರ್ ನ ಬಿಷಪ್ ರಾಗಿದ್ದುಕೊಂಡು, ಚರ್ಚಿನ ಪ್ರಸ್ತುತದ ವಿನ್ಯಾಸಕ್ಕೆ ಹೆಚ್ಚು ಹೊಣೆಗಾರರಾಗಿದ್ದಾರೆ. ಅಲ್ಲದೇ ಅವರು ಇಂದು ಅಸ್ತಿತ್ವದಲ್ಲಿರುವ ಪಬ್ಲಿಕ್ ಶಾಲೆ ವಿಂಚೆಸ್ಟರ್ ಕಾಲೇಜನ್ನು ಸ್ಥಾಪಿಸಿದರು. ನಗರವು ನಿಧಾನವಾಗಿ ಅವನತಿಯ ಕಡೆ ಸಾಗುವ ಮೊದಲು, ಮಧ್ಯಾವಧಿಯ ಸಂದರ್ಭದಲ್ಲಿ ಉಣ್ಣೆಯ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. ಗಂಟೆ ಗೋಪುರದ ಮೇಲಿದ್ದ ಕರ್ಫ್ಯೂ ಗಂಟೆಯನ್ನು (ಚಿತ್ರದಲ್ಲಿ ಗಡಿಯಾರದ ಪಕ್ಕದಲ್ಲಿದೆ), ಇಂದೂ ಕೂಡ ಪ್ರತಿ ರಾತ್ರ್ರಿ ಸರಿಯಾಗಿ 8.00pm ಗೆ ಅನುರಣಿಸಲಾಗುತ್ತದೆ. ಕರ್ಪ್ಯೂ ಎಂಬುದು, ಮುಂಜಾವಿನವರೆಗೂ ಎಲ್ಲಾ ಮನೆಗಳ ಅಗ್ನಿಯನ್ನು ಆರಿಸುವ ಸಮಯವಾಗಿದೆ. ಆಗ 1770 ರಲ್ಲಿ ಥಾಮಸ್ ಡುಮ್ಮರ್, ಸಿಟಿಕ್ರಾಸ್ ಅನ್ನು (ಇದನ್ನು ಬಟರ್ ಕ್ರಾಸ್ ಎಂದೂ ಕರೆಯಲಾಗುತ್ತದೆ.)ವಿಂಚೆಸ್ಟರ್ ನ ನಗರಸಭೆಯಿಂದ ಖರೀದಿಸಲಾಗಿತ್ತು. ಇದನ್ನು ಔಟರ್ ಬರ್ನ್ ಸಮೀಪದ ಕ್ರಾನ್ಬರಿ ಪಾರ್ಕ್ ನಲ್ಲಿ ಪುನಃ ಸ್ಥಾಪಿಸುವ ಉದ್ದೇಶದಿಂದಾಗಿ ಅದನ್ನು ಕೊಂಡುಕೊಂಡಿದ್ದರು. ಅವರ ಕೆಲಸಗಾರರು ಕ್ರಾಸ್ ಅನ್ನು ಕೆಡವಲು ಬಂದಾಗ, ಅವರನ್ನು ನಗರದ ಜನ ಕೆಡವದಂತೆ ತಡೆದರು. ಈ ಜನರು "ಸಣ್ಣ ದೊಂಬಿಯನ್ನೇ ಮಾಡಿದರು "[]. ಅಲ್ಲದೇ ಇದನ್ನು ಬಿಟ್ಟುಬಿಡುವಂತೆ ಅವರನ್ನು ಒತ್ತಾಯಿಸಲಾಯಿತು. ನಗರದೊಂದಿಗೆ ಮಾಡಿಕೊಳ್ಳಲಾದ ಒಪ್ಪಂದವನ್ನು ರದ್ದುಪಡಿಸಲಾಯಿತು. ಅಲ್ಲದೇ ಡಮ್ಮರ್, ಅದರ ಪ್ರತಿರೂಪದ ಲಾತ್ ಅಂಡ್ ಪ್ಲ್ಯಾಸ್ಟರ್ ಅನ್ನು ಸ್ಥಾಪಿಸಿದರು. ಇದು ಹವಾಮಾನದ ವೈಪರಿತ್ಯದಿಂದ ನಾಶವಾಗುವ ಮೊದಲು ಸುಮಾರು ಅರವತ್ತು ವರ್ಷಗಳ ಕಾಲ ಪಾರ್ಕ್ ನಲ್ಲಿ ಸ್ಥಿರವಾಗಿತ್ತು.[೧೦] ಬಟರ್ ಕ್ರಾಸ್, ಹೈ ಸ್ಟ್ರೀಟ್ ನಲ್ಲಿ ಇನ್ನೂ ನಿಂತಿದೆ. ಪ್ರಸಿದ್ಧ ಕಾದಂಬರಿಕಾರ ಜೇನ್ ಆಸ್ಟೆನ್ ವಿಂಚೆಸ್ಟರ್ ನಲ್ಲಿ 1817 ರ ಜುಲೈ 18 ರಂದು ಸಾವನ್ನಪ್ಪಿದರು. ಅಲ್ಲದೇ ಇವರನ್ನು ಚರ್ಚಿನಲ್ಲಿಯೇ ಸಮಾಧಿ ಮಾಡಲಾಗಿದೆ. ರಮ್ಯ ಕವಿ ಜಾನ್ ಕೀಟ್ಸ್, ಆಗಸ್ಟ್ ನ ಮಧ್ಯಾವಧಿಯಿಂದ 1819 ರ ಅಕ್ಟೋಬರ್ ನ ವರೆಗೆ ವಿಂಚೆಸ್ಟರ್ ನಲ್ಲಿದ್ದರು. ವಿಂಚೆಸ್ಟರ್ ನಲ್ಲಿಯೇ ಕಿಟ್ಸ್ "ಇಸಬೆಲ್ಲಾ", "ಸೇಂಟ್. ಆಗ್ನೆಸ್' ಈವ್", "ಟು ಆಟಮ್" ಮತ್ತು "ಲ್ಯಾಮಿಯ" ಗಳನ್ನು ಬರೆದಿದ್ದರು. "ಹೈಪರಿಯನ್" ನ ಭಾಗಗಳನ್ನು ಮತ್ತು ಐದು ಅಂಕಗಳ ಕಾವ್ಯ ದುರಂತ "ಒಥೋ ದಿ ಗ್ರೇಟ್" ಗಳನ್ನು ಕೂಡ ವಿಂಚೆಸ್ಟರ್ ನಲ್ಲಿಯೇ ರಚಿಸಲಾಗಿದೆ.

ಮುಂದಿನ ಕಲಿಕೆಗಾಗಿ

ಬದಲಾಯಿಸಿ

ನಗರದ ವಸ್ತು ಸಂಗ್ರಹಾಲಯವು ಗ್ರೇಟ್ ಮಿನಸ್ಟರ್ ಸ್ಟ್ರೀಟ್ ನ ಮೂಲೆಯಲ್ಲಿದೆ. ಅಲ್ಲದೇ ಈ ಚೌಕವು ವಿಂಚೆಸ್ಟರ್ ನ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಒಳಗೊಂಡಿದೆ. ಪ್ರಮಾಣಕ ಸಾಮರ್ಥ್ಯದ ವಿಂಚೆಸ್ಟರ್ ಮಾಪನದ ಆರಂಭಿಕ ಉದಾಹರಣೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಪ್ರಸ್ತುತ ವಿಂಚೆಸ್ಟರ್, ವಿಂಚೆಸ್ಟರ್ ಅಂಡ್ ಚಾಂಡ್ಲರ್ಸ್ ಫೊರ್ಡ್ ಪಾರ್ಲಿಮೆಂಟರಿ ಕಾನ್ ಸ್ಟಿಟ್ಯೂಯೆನ್ಸಿ ಯ ಮೂಲಕ ಇಂಗ್ಲೆಂಡ್ ನ ಹೌಸ್ ಆಫ್ ಕಾಮನ್ಸ್ ನಲ್ಲಿ ಪ್ರತಿನಿಧಿಸುತ್ತಿದೆ. ಇದನ್ನು ಮಾರ್ಟೀನ್ ಟಾಡ್ ರವರ ನಂತರ ಲಿಬರಲ್ ಡೆಮಾಕ್ರ್ಯಾಟ್ ಅನ್ನು ಸೋಲಿಸಿ, ಕನಸರ್ವೇಟಿವ್ ನ ಸ್ಟೀವ್ ಬ್ರೈನ್ ರವರು ಪ್ರತಿನಿಧಿಸುತ್ತಿದ್ದಾರೆ.[೧೧] ಮಾರ್ಕ್ ಒಟೇನ್ ರವರು ಕೂಡ ಲಿಬರಲ್ ಡೆಮೊಕ್ರ್ಯಾಟ್ ಪಕ್ಷಕ್ಕೆ ಸೇರಿದ್ದು, ಹಿಂದೆ 1997 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ಅವರು ಹಿಂದಿನ ಜಾನ್ ಮೇಜರ್ ರವರ ಮುರಿದು ಬಿದ್ದ ಸರ್ಕಾರದಿಂದ ಕನ್ ಸರ್ವೇಟಿವ್ ಪಕ್ಷದ ಆರೋಗ್ಯ ಮಂತ್ರಿ ಗೆರಿ ಮ್ಯಾಲೊನ್ ರವರನ್ನು ಸೋಲಿಸಿದ್ದರು. ನಗರಾಡಳಿತ ಮಂಡಳಿಗಳಲ್ಲಿ ಚುನಾವಣೆಗಳನ್ನು, ಪ್ರತಿ ಚುನಾವಣೆಗಳಲ್ಲಿ ಚುನಾಯಿತರಾದ ಮೂರನೆ ಒಂದು ಭಾಗದಷ್ಟು ನಗರ ಸಭೆಯ ಸದಸ್ಯರೊಂದಿಗೆ ಪ್ರತಿ ನಾಲ್ಕು ವರ್ಷಗಳಿಗೆ ಮೂರು ಬಾರಿ ನಡೆಸಲಾಗುತ್ತದೆ. ಹಿಂದೆ 2006 ರ ಚುನಾವಣೆಯಲ್ಲಿ ಬಹುಮತ ಗಳಿಸಿದ ಕನ್ ಸರ್ವೇಟಿವ್ ಪಕ್ಷವು [೧೨], 2010 ರ ಚುನಾವಣೆಯಲ್ಲಿ ಲಿಬರಲ್ ಡೆಮಾಕ್ರ್ಯಾಟ್ ಅಧಿಕಾರಕ್ಕೆ ಬರುವವರೆಗೂ ಈ ಮಂಡಳಿಯನ್ನು ನಿಯಂತ್ರಿಸುತ್ತಿತ್ತು.

ಹೆಗ್ಗುರುತುಗಳು

ಬದಲಾಯಿಸಿ

ಪ್ರಧಾನ ಚರ್ಚ್ (ದಿ ಕ್ಯಾಥಡ್ರಲ್)

ಬದಲಾಯಿಸಿ
 
ವಿಂಚೆಸ್ಟರ್ ಚರ್ಚಿನ ಒಂದು ನೋಟ.

ಯುರೋಪ್ ನಲ್ಲೇ ಅತ್ಯಂತ ಉದ್ದವಾದ ವಿಂಚೆಸ್ಟರ್ ಚರ್ಚ್ ಅನ್ನು ಮೂಲತಃ 1079 ರಲ್ಲಿ ಕಟ್ಟಲಾಯಿತು. ಇದು 11 ನೇ ಶತಮಾನದಿಂದ 16 ನೇ ಶತಮಾನದ ವರೆಗೂ ವ್ಯಾಪಿಸುವ ಉತ್ತಮ ವಾಸ್ತುಶಿಲ್ಪ ಹೊಂದಿದೆ. ಅಲ್ಲದೇ ಇದು ವಿಂಚೆಸ್ಟರ್ ನ ಅನೇಕ ಬಿಷಪ್ ಗಳ ಸಮಾಧಿಗಳನ್ನು ಹೊಂದಿರುವ ಸ್ಥಳವಾಗಿದೆ.(ಉದಾಹರಣೆಗೆ ವೈಕ್ ಹ್ಯಾಮ್ ನ ವಿಲಿಯಂ ನ ಸಮಾಧಿ),ಆಂಗ್ಲೋ-ಸ್ಯಾಕ್ಸನ್ ದೊರೆಗಳು(ಉದಾಹರಣೆಗೆ ವೆಸೆಕ್ಸ್ ನ ಎಗ್ಬರ್ಟ್) ಹಾಗು ಕನುಟೆ,ವಿಲಿಯಂ ರುಫುಸ್,[೧೩] ಮತ್ತು ಜೇನ್ ಆಸ್ಟಿನ್ ನಂತಹ ಅನಂತರದ ರಾಜರುಗಳ ಸಮಾಧಿಗಳನ್ನು ಕೂಡ ಹೊಂದಿದೆ. ಒಂದು ಕಾಲದಲ್ಲಿ ಇದು ಬಹುಮುಖ್ಯ ಯಾತ್ರಾ ಕೇಂದ್ರವಾಗಿತ್ತು. ಅಲ್ಲದೇ ಇದುಸೇಂಟ್ ಸ್ವಿಥುನ್ ರ ಸಮಾಧಿ ಸ್ಥಳದ ದೇಗುಲಕ್ಕೆ ಅವಕಾಶ ಮಾಡಿಕೊಟ್ಟಿದೆ. ಆಗ ಕ್ಯಾಂಟರ್ಬರಿ ಗೆ ಪ್ರಯಾಣ ಬೆಳೆಸಲು ಇದ್ದ ಪ್ರಾಚೀನ ಯಾತ್ರಾ ಮಾರ್ಗವು ವಿಂಚೆಸ್ಟರ್ ನಿಂದ ಪ್ರಾರಂಭವಾಗುತ್ತಿತ್ತು. ಹಿಂದಿನ ಹಳೆಯ ಚರ್ಚ್,ಓಲ್ಡ್ ಮಿನಸ್ಟರ್ ನ ಯೋಜನೆಯನ್ನು ಚರ್ಚಿಗೆ ಸೇರಿದಂತೆ ಹುಲ್ಲುಮೈದಾನದಲ್ಲಿ ನಿರ್ಮಿಸಲಾಯಿತು. ನ್ಯೂ ಮಿನಸ್ಟರ್ (ಅಲ್ಫ್ರೆಡ್ ದಿ ಗ್ರೇಟ್ ಮತ್ತು ಎಡ್ವರ್ಡ್ ದಿ ಎಲ್ಡರ್[೧೩] ನ ನಿಜವಾದ ಸಮಾಧಿಯ ಸ್ಥಳ) ಕೂಡ ಈ ಯೋಜನೆಯ ಹಿಂದಿತ್ತು. ಈ ಚರ್ಚ್, ಹುಡುಗಿಯರ ಮತ್ತು ಹುಡುಗರ ಗಾಯಕವೃಂದವನ್ನು ಹೊಂದಿತ್ತು. ಈ ಗಾಯಕವೃಂದವು ಚರ್ಚಿನಲ್ಲಿನ ನಿರಂತರ ಧಾರ್ಮಿಕ ಕಾರ್ಯಕ್ರಮಗಳ ಆಧಾರದ ಮೇಲೆ ಹಾಡುತ್ತಿತ್ತು. ಇದನ್ನು ಜನಪ್ರಿಯ ಚಲನಚಿತ್ರ ದಿ ಡಾ ವಿನ್ಸಿ ಕೋಡ್ ನಲ್ಲಿಯು ಕೂಡ ಚಿತ್ರಿಸಲಾಗಿದೆ. ಇದರಲ್ಲಿ ಟಾಮ್ ಹ್ಯಾಂಕ್ಸ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಇದನ್ನು ಡ್ಯಾನ್ ಬ್ರೌನ್ ನ ಪುಸ್ತಕದ ಆಧಾರದ ಮೇಲೆ ಚಿತ್ರೀಕರಿಸಲಾಗಿದೆ. ಲಂಡನ್ ಚರ್ಚ್ ನ ಒಳಗೆ ಚಿತ್ರೀಕರಿಸಲಾದ ದೃಶ್ಯಕ್ಕೆ ಇದರ ಒಳಾಂಗಣವನ್ನು ಬಳಸಲಾಗಿದೆ.

ಕ್ಯಾಥಡ್ರಲ್ ಕ್ಲೋಸ್

ಬದಲಾಯಿಸಿ

ಪ್ರಧಾನ ಇಗರ್ಜಿಯ ಹೊರಭಾಗವು ಕ್ಯಾಥಡ್ರಲ್ ಕ್ಲೋಸ್, ಚರ್ಚು ಪ್ರಯರಿ (ಮಠ)ಆಗಿದ್ದ ಕಾಲದಲ್ಲಿ ನಿರ್ಮಿಸಿದ ಐತಿಹಾಸಿಕ ಕಟ್ಟಡಗಳನ್ನು ಒಳಗೊಂಡಿದೆ. ಅಲ್ಲದೇ ಇದರ ಜೊತೆಯಲ್ಲಿ ಹದಿಮೂರನೆ ಶತಮಾನಕ್ಕೆ ಸೇರಿದ (ಭವನ)ಡೀನರಿ ಯನ್ನು ಒಳಗೊಂಡಿದೆ. ಮೂಲತಃ ಇದು ಚರ್ಚಿನ ಅಧಿಕಾರಿಯ ನಿವಾಸವಾಗಿದೆ. ಅಲ್ಲದೇ 1486 ರಲ್ಲಿ ವೇಲ್ಸ್ ನ ರಾಜನಾದ ಅರ್ಥುರ್ ನ ಜನ್ಮಸ್ಥಳವೂ ಆಗಿದೆ. ಹತ್ತಿರದಲ್ಲಿಯೇ ಚೆಯ್ನೆ ಅಂಗಣ ವಿದೆ. ಇದು ಹದಿನೈದನೆಯ ಶತಮಾನದ ಮಧ್ಯಾವಧಿಗೆ ಸೇರಿದ ಮರದ ಚೌಕಟ್ಟಿನಲ್ಲಿ ನಿರ್ಮಿತ ಸೌಧವಾಗಿದ್ದು, ಮುಖ್ಯ ದ್ವಾರ ಕಾಯುವ ದ್ವಾರಪಾಲಕನ ವಾಸಸ್ಥಳವಾಗಿದೆ. ಇದು ಬಿಷಪ್ ನ ನ್ಯಾಯಸ್ಥಾನದ ಕಟ್ಟಡವಾಗಿತ್ತು. ಇನ್ನೂ ಇಂಗ್ಲೆಂಡ್ ನಲ್ಲಿರುವ ಅತ್ಯಂತ ಹಳೆಯ ಚಾಚು-ತೊಲೆಯ ಕಟ್ಟಡವಿದೆ. ಕ್ಯಾಥಡ್ರಲ್ ಕ್ಲೋಸ್ ನಲ್ಲಿ ಡೀನ್ ಉದ್ಯಾನ ಕೂಡಾ ಇದೆ. ಇದನ್ನು ಯಾತ್ರಿಕರ ಭವನ ಎಂದು ಕರೆಯಲಾಗುತ್ತದೆ. ಇದು ಸೇಂಟ್ ಸ್ವಿಥುನ್ ರವರ ಪ್ರಾರ್ಥನಾ ಮಂದಿರಕ್ಕೆ ಬರುವ ಯಾತ್ರಿಕರಿಗೆ ತಂಗಲು ಬಳಸುವ ಅಥಿತಿಗೃಹದ ಭಾಗವಾಗಿದೆ. ಈ ಭವನದಲ್ಲಿ ರಾತ್ರಿಯನ್ನು ಕಳೆಯಲು ಸ್ವಾಗತಿಸಲಾದ ಯಾತ್ರಿಕರಿಗೆ, ಚರ್ಚಿನ ಮುಖ್ಯಾಧಿಕಾರಿ ಏರ್ಪಡಿಸುವ ಭೋಜನ ಕೂಟದಲ್ಲಿ ಪುಷ್ಕಳ ಭೋಜನ ನೀಡಲಾಗುತ್ತದೆ. ವಿಂಚೆಸ್ಟರ್ ನಗರ ಸಭೆಯು ಇದನ್ನು 1308 ರಲ್ಲಿ ನಿರ್ಮಿಸಿದೆ ಎಂದು ಭಾವಿಸಲಾಗುತ್ತದೆ. ಈಗ ಇದು ಯಾತ್ರಿಕರ ಶಾಲೆಯ ಭಾಗವಾಗಿದೆ. ಸಭಾಂಗಣವನ್ನು ಶಾಲೆಯು, ಬೆಳಗ್ಗೆಯ ಹೊತ್ತಿನಲ್ಲಿ ಒಟ್ಟಾಗಿ ಸೇರಲು,ನಾಟಕ ಪಾಠಗಳನ್ನು ಹೇಳಿಕೊಡಲು, ಆಟಗಳಿಗಾಗಿ,ವಾದ್ಯವೃಂದದ ಅಭ್ಯಾಸಗಳಿಗಾಗಿ,ಚರ್ಚಿನ ವೇನ್ ಫ್ಲೆಟ್ ತಂಡದ ಪೂರ್ವಭ್ಯಾಸಕ್ಕಾಗಿ ಹಾಗು ಶಾಲೆಯ ಹಿರಿಯ ವಿದ್ಯಾರ್ಥಿಗಳ ಗಾನಗೋಷ್ಠಿಯ ಪೂರ್ವಭ್ಯಾಸಕ್ಕಾಗಿ ಬಳಸುತ್ತದೆ.

ವೊಲ್ವ್ ಸೆ ಭದ್ರಕೋಟೆ ಮತ್ತು ಅರಮನೆ

ಬದಲಾಯಿಸಿ

ವೊಲ್ವ್ ಸೆ ಕೋಟೆಯು ನಾರ್ಮನ್ ಬಿಷಪ್ ನ ಅರಮನೆಯಾಗಿದ್ದು, 1110 ನೇ ಕಾಲಮಾನಕ್ಕೆ ಸೇರಿದೆ. ಆದರೆ ಹಿಂದಿನ ಸ್ಯಾಕ್ಸನ್ ರಚನೆ ಮೇಲೆ ನಿಂತಿರುವ ವಿನ್ಯಾಸದಲ್ಲಿ ಇದು ಕಂಡುಬರುತ್ತದೆ. ಇದನ್ನು ಹೆನ್ರಿ ಡೆ ಬ್ಲಾಯ್ಸ್, ರಾಜನಾಗಿದ್ದ ಆತನ ಸಹೋದರ ಸ್ಟೆಫನ್ ನ ಆಳ್ವಿಕೆಯಲ್ಲಿದ್ದ ಅರಾಜಕತೆಯ ಸಂದರ್ಭದಲ್ಲಿ ನಿರ್ಮಿಸಿದ್ದನು. ಅವರನ್ನು ಅಲ್ಲಿ ಕೆಲವು ದಿನಗಳ ವರೆಗೆ ಮುತ್ತಿಗೆ ಹಾಕಿ ಪೀಡಿಸಲಾಗಿತ್ತು. ಆಗ 16 ನೇ ಶತಮಾನದಲ್ಲಿ, ರಾಣಿ ಮೇರಿ ಟುಡಾರ್ ಮತ್ತು ರಾಜ ಸ್ಪ್ಯೇನ್ ನ ಫಿಲಿಪ್ II ಅವರ ವಿವಾಹ ಚರ್ಚಿನಲ್ಲಿ ನಡೆಯುವ ಸ್ವಲ್ಪಕಾಲದ ಮೊದಲು ಅವರು ಈ ಅರಮನೆಯ ಅತಿಥಿಗಳಾಗಿದ್ದರು. ಕಟ್ಟಡವು ಈಗ ಪಾಳು ಬಿದ್ದಿದೆ. (ಇದನ್ನು ಇಂಗ್ಲೀಷ್ ಹೆರಿಟೇಜ್ ನೋಡಿಕೊಳ್ಳುತ್ತಿದೆ), ಆದರೆ 1680 ರ ಸುಮಾರಿಗೆ ನಿರ್ಮಿಸಿದ ಹೊಸ ಅರಮನೆಗೆ ಖಾಸಗಿ ಪೂಜಾ ಮಂದಿರವನ್ನು ಸೇರಿಸಲಾಗಿತ್ತು. ಈಗ ಇದರ ಒಂದು ಭಾಗಮಾತ್ರ ಉಳಿದುಕೊಂಡಿದೆ.

ವಿಂಚೆಸ್ಟರ್ ನ ಕೋಟೆ

ಬದಲಾಯಿಸಿ
 
ಗ್ರೇಟ್ ಹಾಲ್ ನಲ್ಲಿರುವ "ವಿಂಚೆಸ್ಟರ್ ದುಂಡು ಮೇಜು".ಇದನ್ನು 1275 ನೇ ಇಸವಿಗೆ ಸೇರಿದೆಂದು ತಿಳಿಸುತ್ತಿರುವ ವೃಕ್ಷಕಾಲಗಣನ ಶಾಸ್ತ್ರ

ವಿಂಚೆಸ್ಟರ್ ಅದರ ಕೋಟೆಯ ಗ್ರೇಟ್ ಹಾಲ್ (ಸಭಾಂಗಣ)ಗಾಗಿ ಹೆಸರುವಾಸಿಯಾಗಿದೆ. ಈ ಭವನವನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಗ್ರೇಟ್ ಹಾಲ್ ಅನ್ನು 1222 ಮತ್ತು 1235 ನಡುವಿನ ಕಾಲದಲ್ಲಿ ಪುನಃ ನಿರ್ಮಿಸಲಾಗಿದ್ದು, ಇದೇ ಆಕಾರದಲ್ಲಿಯೇ ಇನ್ನೂ ಉಳಿದಿದೆ. ಇದು ರಾಜ ಅರ್ಥುರ್ ನ ದುಂಡು ಮೇಜಿಗಾಗಿ ಪ್ರಸಿದ್ಧವಾಗಿದೆ. ಈ ಮೇಜನ್ನು ಸುಮಾರು 1463 ರಿಂದ ಸಭಾಂಗಣದಲ್ಲಿ ತೂಗುಹಾಕಲಾಗಿದೆ. ಮೂಲತಃ ಈ ಮೇಜು 13 ನೇ ಶತಮಾನಕ್ಕೆ ಸೇರಿದ್ದಾಗಿದೆ. ಒಂದುವೇಳೆ ಹಾಗೇನಾದರೂ ಸೇರಿದ್ದಲ್ಲಿ ಇದು ಅರ್ಥುರ್ ನ ಸಮಕಾಲೀನವಾಗಿರುವುದಿಲ್ಲ. ಈ ಗೊಂದಲವನ್ನು ಹೊರತುಪಡಿಸಿ ಇಂದೂ ಕೂಡ ಇದು ಗಮನಾರ್ಹ ಐತಿಹಾಸಿಕ ಆಸಕ್ತಿಯಾದ್ದು, ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮೂಲತಃ ಮೇಜಿಗೆ ಬಣ್ಣವನ್ನು ಬಳಿದಿರಲಿಲ್ಲ. ಆದರೆ 1522 ರಲ್ಲಿ ರಾಜ ಹೆನ್ರಿ VIII ಗಾಗಿ ಇದಕ್ಕೆ ಬಣ್ಣ ಬಳಿಯಲಾಯಿತು. ದುಂಡು ಮೇಜಿನ ಪ್ರಮುಖ ಸೈನಿಕರ ಹೆಸರುಗಳನ್ನು, ರಾಜ ಅರ್ಥುರ್ ಆತನ ಸಿಂಹಾಸನದ ಮೇಲೆ ಜಯಿಸಿದ ಗುರುತುಗಳ ಬಗೆಗೆ ಮೇಜಿನ ಸುತ್ತಲಿನ ತುದಿಯಲ್ಲಿ ಕೆತ್ತುವ ಮೂಲಕ ಬರೆಯಲಾಗಿದೆ. ಮೇಜಿನ ಎದುರಿಗೆ ಪ್ರಿನ್ಸ್ ಚಾರ್ಲ್ಸ್ ರವರ 'ವಿವಾಹ ದ್ವಾರಗಳಿವೆ'. ಗ್ರೇಟ್ ಹಾಲ್ ನ ನೆಲದಲ್ಲಿ ಮಧ್ಯಕಾಲೀನ ಯುಗದ ಉದ್ಯಾನವನ್ನು ಪುನಃ ನಿರ್ಮಿಸಲಾಗಿದೆ. ಸಭಾಂಗಣದ ಹೊರತಾಗಿ, ಉತ್ಖನಿಸಲಾದ ಆಧುನಿಕ ನ್ಯಾಯಸ್ಥಾನಗಳಲ್ಲಿ, ಪ್ರಬಲವಾಗಿರುವ ಇನ್ನೂ ಉಳಿದುಕೊಂಡು ಬಂದಿರುವ ಕೆಲವೇ ಕೆಲವು ನ್ಯಾಯ ಸ್ಥಾನಗಳಿವೆ. ಈ ಕಟ್ಟಡಗಳನ್ನು ರಾಜನ ಅರಮನೆಯು ದುರಾಕ್ರಮಣದ ಮೂಲಕ ಆಕ್ರಮಿಸಿಕೊಂಡಿತ್ತು. ಈಗ ಇವುಗಳನ್ನು ಸೈನಿಕರ ಅನೇಕ ವಸ್ತು ಸಂಗ್ರಹಾಲಯಗಳಿರುವ ಪೆನಿನ್ಸುಲಾ ಬರಾಕ್ ಗೆ ಸೇರಿಸಲಾಗಿದೆ. ವಿಂಚೆಸ್ಟರ್, ಆರ್ಮಿ ಟ್ರೈನಿಂಗ್ ರೆಜಿಮೆಂಟ್ ವಿಂಚೆಸ್ಟರ್ ನ ತವರಾಗಿದೆ. ಅಲ್ಲದೇ ಇದನ್ನು ಸರ್ ಜಾನ್ ಮೋರ್ ಬರಾಕ್ ಗಳೆಂದು ಕೂಡ ಕರೆಯಲಾಗುತ್ತದೆ. ಇಲ್ಲಿ ತರಬೇತಿಯ ಒಂದು ಹಂತದ ಮೂಲಕ ಸೈನಿಕ ನೇಮಕಾತಿಗಳನ್ನು ಮಾಡಲಾಗುತ್ತದೆ.

ವಿಂಚೆಸ್ಟರ್ ನ ವಿಶ್ವವಿದ್ಯಾನಿಲಯ

ಬದಲಾಯಿಸಿ

ವಿಂಚೆಸ್ಟರ್ ವಿಶ್ವವಿದ್ಯಾನಿಲಯವು (ಹಿಂದೆ ರಾಜ ಆಲ್ಫ್ರೆಡ್ ಕಾಲೇಜು) ಬ್ರಿಟಿಷ್ ಪಬ್ಲಿಕ್ ವಿಶ್ವವಿದ್ಯಾನಿಲಯವಾಗಿದ್ದು, ಇದು ಇಂಗ್ಲೆಂಡ್ ನ ಹ್ಯಾಂಪ್ಶೈರ್ ನಲ್ಲಿರುವ ವಿಂಚೆಸ್ಟರ್ ನಲ್ಲಿದೆ. ವಿಶ್ವವಿದ್ಯಾನಿಲಯವನ್ನು 1840 ರಲ್ಲಿ ಸ್ಥಾಪಿಸಲಾಗಿತ್ತು - ಮೂಲತಃ ಇದನ್ನು ಬಿಷಪ್ಪಿನ ತರಬೇತಿ ಕೇಂದ್ರವಾಗಿ ಆರಂಭಿಸಲಾಗಿತ್ತು. ವಿಂಚೆಸ್ಟರ್ ನ ವಿಶ್ವವಿದ್ಯಾನಿಲಯವು ಶಿಕ್ಷಕರ ತರಬೇತಿ ಕಾಲೇಜಿನ ರೂಪದಲ್ಲಿ ತನ್ನ ಕಾರ್ಯ ಆರಂಭಿಸಿತ್ತು. ಇದನ್ನು ನಗರ ಕೇಂದ್ರದ ಬಳಿ ಉದ್ದೇಶಿತ ಆವರಣದಲ್ಲಿ ನಿರ್ಮಿಸಲಾಗಿದೆ. ವಿಂಚೆಸ್ಟರ್ ಸ್ಕೂಲ್ ಆಫ್ ಆರ್ಟ್, ಸೌತ್ ಆಂಪ್ಟನ್ ವಿಶ್ವವಿದ್ಯಾನಿಲಯದ ಭಾಗವಾಗಿದೆ.

ವಿನ್‌ಚೆಸ್ಟರ್ ಕಾಲೇಜು

ಬದಲಾಯಿಸಿ

ವೈಕ್ ಹ್ಯಾಮ್ ನ ವಿಲಿಯಂ ಸ್ಥಾಪಿಸಿದ ವಿಂಚೆಸ್ಟರ್ ಕಾಲೇಜಿನ ಕಟ್ಟಡಗಳನ್ನು ಮತ್ತು ಪಬ್ಲಿಕ್ ಶಾಲೆಯನ್ನು 1382 ರಲ್ಲಿ ನಿರ್ಮಿಸಲಾಗಿದೆ. ಇದು ಎರಡು ಒಳಾಂಗಣಗಳನ್ನು, ಗೇಟ್ ಹೌಸ್, ಸನ್ಯಾಸಿ ಗೃಹ, ಸಭಾಂಗಣ, ಕಾಲೇಜಿನ ಭವ್ಯವಾದ ಖಾಸಗಿ ಪೂಜಾ ಮಂದಿರ ಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಇದು ಇಚೇನ್ ನದಿಯ ಭಾಗವಾಗಿರುವ "ನೀರಾವರಿ ಜಮೀನನ್ನು" ಕೂಡ ಒಳಗೊಂಡಿದೆ. ಇದು ಆಕ್ಸ್ ಫರ್ಡ್ ನ ಹೊಸ ಕಾಲೇಜಿಗೆ ಮತ್ತು ಚರ್ಚಿನ ಜೀವನಕ್ಕೆ ತೆರಳುವ ಮೊದಲು ಈ ಬಡಮಕ್ಕಳಿಗೆ ತರಬೇತಿ ನೀಡುವ ಯೋಜನೆ ಹಾಕಿಕೊಂಡಿದೆ.

ಸೆಂಟ್ ಕ್ರಾಸ್ ನ ಆಸ್ಪತ್ರೆ

ಬದಲಾಯಿಸಿ

ಸೆಂಟ್ ಕ್ರಾಸ್ ನ ಆಸ್ಪತ್ರೆಯ, ಭಿಕ್ಷುಕ ಗೃಹಗಳು ಮತ್ತು ದೊಡ್ಡ ನಾರ್ಮನ್ ಶೈಲಿಯ ಖಾಸಗಿ ಪ್ರಾರ್ಥನಾ ಮಂದಿರವನ್ನು 1130 ರಲ್ಲಿ ಹೆನ್ರಿ ಡೆ ಬ್ಲಾಯ್ಸ್, ನಗರ ಕೇಂದ್ರದ ಹೊರಗೆ ಸ್ವಲ್ಪ ದೂರದಲ್ಲಿ ಸ್ಥಾಪಿಸಿದ್ದರು. ಇದು 14 ನೇ ಶತಮಾನದಿಂದ ಇಲ್ಲಿಯ ವರೆಗೂ ಸೇವೆ ಸಲ್ಲಿಸುತ್ತ ಬಂದಿದೆ. ಏಲ್ ಸಂತೋಷಕೂಟದ ಏರ್ಪಾಡು, 'ದಾರಿಹೋಕರ ಬಟ್ಟೆ' ಮತ್ತು ಆಹಾರ ನೀಡಿ ಅವರ ಬವಣೆಗಳನ್ನು ದೂರ ಮಾಡುವ ಸಹಾಯವನ್ನು ಅಲ್ಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಕ್ಯಾಂಟರ್ಬರಿಗೆ ಹೋಗುತ್ತಿರುವ ಯಾತ್ರಿಕರ ಮಾರ್ಗ ಮಧ್ಯದಲ್ಲಿ ಅವರಿಗೆ ಸಹಾಯಮಾಡಲು ತೆರೆಯಲಾಗಿತ್ತು.

 
1871 ರ ವಿಂಚೆಸ್ಟರ್ ಗಿಲ್ಡ್ ಹಾಲ್.

ಇತರ ಕಟ್ಟಡಗಳು

ಬದಲಾಯಿಸಿ

ಇತರ ಪ್ರಮುಖ ಐತಿಹಾಸಿಕ ಕಟ್ಟಡಗಳು 1871 ರಲ್ಲಿ ನಿರ್ಮಿಸಲಾದ, ಗಾತಿಕ್ ರಿವೈವಲ್ ಶೈಲಿಯಲ್ಲಿ ಕಟ್ಟಲಾದ ಪುರಭವನವನ್ನು ಒಳಗೊಂಡಿವೆ.[೧೪] ಅಲ್ಲದೇ ವಿಲಿಯಂ ಬಟರ್ ಫೀಲ್ಡ್ ನಿಂದ ವಿನ್ಯಾಸಗೊಳಿಸಲಾದ ರಾಯಲ್ ಹ್ಯಾಂಪ್ಶೈರ್ ಕೌಂಟಿ ಆಸ್ಪತ್ರೆಯನ್ನು ಮತ್ತು ಇಚೇನ್ ನದಿ ಯ ಅನೇಕ ಕಾಲುವೆಗಳಲ್ಲಿ ಚಾಲ್ತಿಯಲ್ಲಿರುವ ನಗರದ ಅನೇಕ ವಾಟರ್ ಮಿಲ್ ಗಳಲ್ಲಿ ಇದೂ ಒಂದನ್ನು ಒಳಗೊಂಡಿದೆ. ಇದನ್ನು ನಗರ ಕೇಂದ್ರದ ಮೂಲಕ ನಿರ್ವಹಿಸಲಾಗುತ್ತದೆ. ವಿಂಚೆಸ್ಟರ್ ಸಿಟಿ ಮಿಲ್ ಅನ್ನು ಇತ್ತೀಚೆಗಷ್ಟೇ ಪುನಃ ನಿರ್ಮಿಸಲಾಗಿದ್ದು, ಇದು ಮತ್ತೆ ಜಲಶಕ್ತಿಯ ಮೂಲಕ ಧಾನ್ಯಗಳನ್ನು ಪುಡಿಮಾಡುವ ಕೆಲಸ ಮಾಡುತ್ತಿದೆ. ಈ ಮಿಲ್ ನ್ಯಾಷನಲ್ ಟ್ರಸ್ಟ್ನ ಒಡೆತನದಲ್ಲಿದೆ. ವಿಂಚೆಸ್ಟರ್ ನಗರದ ಮೇಲೆ ಮಹಾಯುದ್ಧ IIರಿಂದ ಯಾವ ದುಷ್ಪಪರಿಣಾಮಗಳು ಉಂಟಾಗದಿದ್ದರೂ ಕೂಡ, ಆಧುನಿಕ ಕಚೇರಿಯ ಅಗತ್ಯತೆಗಳಿಗೆ(ಪ್ರತ್ಯೇಕವಾಗಿ ಹ್ಯಾಂಪ್ಶೈರ್ ನ ಕೌಂಟಿ ಕೌನ್ಸಿಲ್ ಮತ್ತು ವಿಂಚೆಸ್ಟರ್ ನ ನಗರ ಸಭೆ) ಸರಿಹೊಂದುವ ಕಟ್ಟಡಗಳನ್ನು ಕಟ್ಟಲೆಂದು ಓಲ್ಡ್ ಟೌನ್ ನ ಮೂವತ್ತು ಪ್ರತಿಶತದಷ್ಟು ಭಾಗವನ್ನು ನಾಶ ಮಾಡಲಾಯಿತು. 1980ರ ಉತ್ತರಾರ್ಧದಿಂದ ನಗರವು, ಓಲ್ಡ್ ಟೌನ್ ನ ಮಧ್ಯಯುಗೀನ ನಗರ ಪ್ರಗತಿಯೆಡೆ ಹೆಚ್ಚು ಒಲವಿರುವ, ಸಮಕಾಲೀನ ಅಭಿವೃದ್ಧಿಗಳಿಗಾಗಿ ಈ ಯುದ್ಧ ಪೂರ್ವದ ಅಸಭ್ಯ ವಿನ್ಯಾಸಗಳ ನಿರಂತರ ಬದಲಾವಣೆಗಳನ್ನು ಕಂಡಿದೆ.

ಶಿಕ್ಷಣ

ಬದಲಾಯಿಸಿ
 
ವಿಂಚೆಸ್ಟರ್ ಕಾಲೇಜ್ ವಾರ್ ಕ್ಲಾಯ್ಸ್ ಟರ್

ವಿಂಚೆಸ್ಟರ್ ನಲ್ಲಿ ಅನೇಕ ಸಂಖ್ಯೆಯ ಶೈಕ್ಷಣಿಕ ಸಂಸ್ಥೆಗಳಿವೆ. ಮೂರು ಹಂತದ ಸೆಕೆಂಡರಿ ಶಾಲೆಗಳಿವೆ: ಕಿಂಗ್ಸ್ ಸ್ಕೂಲ್ ವಿಂಚೆಸ್ಟರ್, ದಿ ವೆಸ್ಟ್ ಗೇಟ್ ಸ್ಕೂಲ್ ಮತ್ತು ಹೆನ್ರಿ ಬೋಫೋರ್ಟ್ ಸ್ಕೂಲ್ಇತ್ಯಾದಿ. ಈ ಎಲ್ಲಾ ಶಾಲೆಗಳು ಖ್ಯಾತಿ ಗಳಿಸಿವೆ. ಸಿಕ್ಸ್ ತ್ ಫಾರ್ಮ್ ಪೀಟರ್ ಸೈಮಂಡ್ ಕಾಲೇಜ್, ವಿಂಚೆಸ್ಟರ್ ಗೆ ಸೇವೆಸಲ್ಲಿಸುತ್ತಿರುವ ಪ್ರಧಾನ ಕಾಲೇಜಾಗಿದೆ; ಇದನ್ನು ಅಗ್ರ ಮತ್ತು UK ಯಲ್ಲಿರುವ ಅತ್ಯಂತ ದೊಡ್ಡ ಸಿಕ್ಸ್ ತ್ ಫಾರ್ಮ್ ಕಾಲೇಜ್ ಗಳಲ್ಲಿ ಒಂದೆಂದೂ ಪರಿಗಣಿಸಲಾಗುತ್ತದೆ. ಖಾಸಗಿಯಾಗಿ ನಡೆಸುವ ಪ್ರಾಥಮಿಕ ಶಾಲೆಗಳಲ್ಲಿ ಕೆಳಕಂಡವು ಪ್ರಮುಖವಾಗಿವೆ:ದಿ ಪಿಲಿಗ್ರೀಮ್ಸ್ ಸ್ಕೂಲ್ ವಿಂಚೆಸ್ಟರ್, ಟ್ವೈ ಫೋರ್ಡ್ ಶಾಲೆ, ಪ್ರಿನ್ಸ್ ಮೀಡ್ ಶಾಲೆ ಇತ್ಯಾದಿ. ಅಲ್ಲದೇ 13 ರಿಂದ 18 ವರ್ಷದ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ವಿಂಚೆಸ್ಟರ್ ಕಾಲೇಜ್, ಬ್ರಿಟನ್ ನಲ್ಲಿರುವ ಅತ್ಯುತ್ತಮ ಪಬ್ಲಿಕ್ ಶಾಲೆಗಳಲ್ಲಿ ಒಂದಾಗಿದೆ.ಅಲ್ಲದೇ ಇದರ ಅನೇಕ ವಿದ್ಯಾರ್ಥಿಗಳು ಆನೇಕ ಗೌರವಾನ್ವಿತ ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಂಟ್ ಸ್ವಿಥುನ್ಸ್ ಹುಡುಗಿಯರಿಗಾಗಿ ಇರುವ ಪಬ್ಲಿಕ್ ಶಾಲೆಯಾಗಿದ್ದು, GCSE ಮತ್ತು A-ಮಟ್ಟದ ಫಲಿತಾಂಶಗಳಿಗಾಗಿ ಆಗಾಗ ಲೀಗ್ ಟೇಬಲ್ ನಲ್ಲಿ ಕಂಡುಬರುತ್ತದೆ.

ಕ್ರೀಡೆ

ಬದಲಾಯಿಸಿ

ವಿಂಚೆಸ್ಟರ್, ಅಸೋಸಿಯೇಷನ್ ಫುಟ್ ಬಾಲ್ ಲೀಗ್ ಅನ್ನು ಮತ್ತು ವಿಂಚೆಸ್ಟರ್ ಸಿಟಿ F.C., ಯಂತಹ ಎರಡು ಪ್ರಸಿದ್ಧ ಕ್ಲಬ್ ಗಳನ್ನು ಒಳಗೊಂಡಿದೆ. ಅಲ್ಲದೇ 2004 ರ FA ವೇಸ್ ನಲ್ಲಿ ವಿಜೇತರಾದವರು ಈ ಕ್ಲಬ್ ಅನ್ನು 1884 ರಲ್ಲಿ ಸ್ಥಾಪಿಸಿದ್ದರು. ಅಲ್ಲದೇ "ಮೆನಿ ಇನ್ ಮೆನ್, ಒನ್ ಇನ್ ಸ್ಪಿರಿಟ್" (ನಾವು ಹಲವರು ಆದರೆ ನಮ್ಮ ಧ್ಯೇಯ ಒಂದೇ)ಎಂಬ ಧ್ಯೇಯವಾಕ್ಯ ಹೊಂದಿದ್ದರು. ವೆಸೆಕ್ಸ್ ಲೀಗ್ ಮತ್ತು ವಿಂಚೆಸ್ಟರ್ ಕ್ಯಾಸ್ಟಲ್ F.C. ಯಲ್ಲಿ ಜಯಗಳಿಸಿದ ನಂತರ, ಪ್ರಸ್ತುತ ದಕ್ಷಿಣ ಭಾಗದಲ್ಲಿರುವ ವಿಭಾಗ1 S&E ನಲ್ಲಿ ಆಡಿದ್ದರೆ. ಇವರು 1971 ರಿಂದ ಹ್ಯಾಂಪ್ಶೈರ್ ಲೀಗ್ ನಲ್ಲಿ ಆಡಿದ್ದರು. ರೀಡಿಂಗ್ನ ಮಧ್ಯ ಮೈದಾನದ ಆಟಗಾರ ಬ್ರೈನ್ ಹೊವಾರ್ಡ್ ಹಾಗು ಡಾನ್ ಕ್ಯಾಸ್ಟರ್ ರೋವರ್ಸ್ ಕ್ಲಬ್ ನ ಮತ್ತು ವೇಲ್ಸ್ ಇಂಟರ್ ನ್ಯಾಷನಲ್ ನ ಮಧ್ಯ ಮೈದಾನದ ಆಟಗಾರ ಬ್ರೈನ್ ಸ್ಟಾಕ್ ವಿಂಚೆಸ್ಟರ್ ನಲ್ಲಿ ಹುಟ್ಟಿದವರಾಗಿದ್ದಾರೆ. ವಿಂಚೆಸ್ಟರ್,'ವಿಂಚೆಸ್ಟರ್ ಆಲ್ ಸ್ಟಾರ್ಸ್' ಎಂಬ ಫುಟ್ ಬಾಲ್ ತಂಡಕ್ಕೆ ಹೆಸರುವಾಸಿಯಾಗಿದೆ. ವಿಂಚೆಸ್ಟರ್ ಆಲ್ ಸ್ಟಾರ್ಸ್, ಈಸ್ಟ್ ಲೀಗ್ ನಲ್ಲಿ ನಡೆದ 5 ಅಸೈಡ್ ಲೀಗ್ ನಲ್ಲಿ ಆಡಿತು. ವಿಂಚೆಸ್ಟರ್ ನ ಮಹಿಳೆಯರು ಕೂಡ ವಿಂಚೆಸ್ಟರ್ ನಗರದ ಮಹಿಳಾ FCಯೊಂದಿಗೆ ಯಶಸ್ವಿ ಕ್ರೀಡಾ ತಂಡ ಹೊಂದಿದ್ದಾರೆ. ಇದು ಪ್ರಸ್ತುತದಲ್ಲಿ ಹ್ಯಾಂಪ್ಶೈರ್ ಕೌಂಟಿ ಲೀಗ್ ವಿಭಾಗ 1 ರಲ್ಲಿ ಆಡುತ್ತಿದ್ದು, ಇತ್ತೀಚೆಗಷ್ಟೇ ಸೋಲನ್ನು ಕಾಣದ ಲೀಗ್ ಚಾಂಪಿಯನ್ ಷಿಪ್ ಅನ್ನು ಪಡೆದುಕೊಂಡಿತು. ಕ್ಲಬ್ ಸರ್ವ ಸಾಮರ್ಥ್ಯ ಹೊಂದಿರುವ ಮತ್ತು ಎಲ್ಲಾ ವಯಸ್ಸಿನ ಆಟಗಾರರಿಗೆ ಸೌಕರ್ಯ ಒದಗಿಸುತ್ತದೆ. [೧] Archived 2018-04-09 ವೇಬ್ಯಾಕ್ ಮೆಷಿನ್ ನಲ್ಲಿ. ವಿಂಚೆಸ್ಟರ್ ರಗ್ಬಿ ಒಕ್ಕೂಟ ತಂಡವನ್ನು ಕೂಡ ಒಳಗೊಂಡಿದೆ. ಇದನ್ನು ವಿಂಚೆಸ್ಟರ್ RFC ಎಂದು ಕರೆಯಲಾಗುತ್ತದೆ. ಅಲ್ಲದೇ ಅಭಿವೃದ್ಧಿ ಹೊಂದುತ್ತಿರುವ ಕ್ರೀಡಾಪಟುಗಳ ಕ್ಲಬ್ ಅನ್ನು ವಿಂಚೆಸ್ಟರ್ ಮತ್ತು ಡಿಸ್ಟ್ರಿಕ್ಟ್ AC ಎಂದು ಕರೆಯಲಾಗುತ್ತದೆ. ವಿಂಚೆಸ್ಟರ್, ಹತ್ತು ಜನ ಪುರುಷರು ಮತ್ತು ಮೂರು ಜನ ಮಹಿಳೆಯರ ತಂಡಗಳೊಂದಿಗೆ ಅಭಿವೃದ್ಧಿಹೊಂದುತ್ತಿರುವ ಯಶಸ್ವಿ ಹಾಕಿ ಕ್ಲಬ್ ಅನ್ನು ಕೂಡ ಹೊಂದಿದೆ[೧೫]. ಅಲ್ಲದೇ ಇದು ಎಲ್ಲಾ ವಯಸ್ಸಿನವರಿಗೆ ಮತ್ತು ಸಾಮರ್ಥ್ಯ ಹೊಂದಿರುವವರಿಗೆ ನೆರವು ನೀಡುತ್ತದೆ. ನಗರವು ಬೆಳೆಯುತ್ತಿರುವ ರೋಲರ್ ಹಾಕಿ ತಂಡನ್ನೂ ಸಹ ಹೊಂದಿದೆ. ಈ ತಂಡಕ್ಕೆ ರಿವರ್ ಪಾರ್ಕ್ ಲೀಷರ್ ಸೆಂಟರ್ ನಲ್ಲಿ ತರಬೇತಿ ನೀಡಲಾಗುತ್ತದೆ. ಹುಲ್ಲು ಮೈದಾನದ ಬೌಲ್ ಆಟವನ್ನು ಅನೇಕ ಹಸಿರು ಮೈದಾನಗಳಲ್ಲಿ(1812 ನೇ ಇಸವಿಗೆ ಸೇರಿದ ಅತ್ಯಂತ ಹಳೆಯ ಹೈಡೆ ಆಬಿ(ಮಠ)) ಬೇಸಿಗೆಯ ತಿಂಗಳುಗಳಲ್ಲಿ ಆಡಿದರೆ, ಚಳಿಗಾಲದಲ್ಲಿ ರಿವರ್ ಸೈಡ್ ಇನ್ ಡೋರ್ ಬೌಲಿಂಗ್ ಕ್ಲಬ್ ನಲ್ಲಿ ಆಡಲಾಗುತ್ತದೆ. ವಿಂಚೆಸ್ಟರ್ ಕಾಲೇಜ್ ಅನ್ನು ಗುರುತಿಸಿ ಅದಕ್ಕೆ ವಿಂಚೆಸ್ಟರ್ ಕಾಲೇಜ್ ಫುಟ್ ಬಾಲ್ ಎಂಬ ಹೆಸರನ್ನು ಇಡಲು ಕಾಲೇಜು ಅನುಮತಿಸಿದೆ. ಇದು ಕಾಲೇಜ್ ನಲ್ಲಿ ಮತ್ತು ಕೆಲವು ಸಣ್ಣ ಆಫ್ರಿಕನ್/ದಕ್ಷಿಣ ಅಮೇರಿಕನ್ ಸಮುದಾಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ.

ನ್ಯಾಯಾಲಯಗಳು

ಬದಲಾಯಿಸಿ

ವಿಂಚೆಸ್ಟರ್ ನ ಸಂಯುಕ್ತ ನ್ಯಾಯಾಲಯ ಕೇಂದ್ರಗಳು ಕ್ರೌನ್ ನ್ಯಾಯಾಲಯ ಮತ್ತು ಕೌಂಟಿ ನ್ಯಾಯಾಲಯಗಳನ್ನು ಹೊಂದಿವೆ. ಇದನ್ನು ಹರ್ ಮೆಜೆಸ್ಟೀಸ್ ಕೋರ್ಟ್ ಸರ್ವೀಸ್ ನಿರ್ವಹಿಸುತ್ತದೆ. ಇದು ಕಾನೂನು ವಿಭಾಗದ ನಿರ್ವಹಣಾ ನಿಯೋಗವಾಗಿದೆ. ವಿಂಚೆಸ್ಟರ್ ಎಂಬುದು ಮೊದಲ ಸುತ್ತಿನ ನ್ಯಾಯಾಲಯ ಕೇಂದ್ರವಾಗಿದ್ದು, ಕ್ರಿಮಿನಲ್ ಕೇಸ್ ಮತ್ತು ಸಿವಿಲ್ ಕೇಸ್ ಗಳಿಗಾಗಿ(ಉಚ್ಚ ನ್ಯಾಯಾಲಯದ ಜಿಲ್ಲಾ ದಾಖಲಾತಿಯಲ್ಲಿ) ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಇಲ್ಲಿಗೆ ಭೇಟಿಕೊಡುತ್ತಾರೆ. ಇಲ್ಲಿ ತೀರ್ಪು ನೀಡಲಾದ, 1995ರಲ್ಲಿ ನಡೆದ ರೋಸ್ ವೆಸ್ಟ್ ನ ಕೊಲೆ ವಿಚಾರಣೆಯು, ಅತ್ಯಂತ ಪ್ರಸಿದ್ಧ ಪ್ರಕರಣವೆನಿಸಿದೆ. ವಿಂಚೆಸ್ಟರ್, ಉಚ್ಚ ನ್ಯಾಯಾಲಯದ ಭಾಗವಾದ, ಪ್ರತ್ಯೇಕ ಜಿಲ್ಲಾ ಪ್ರಮಾಣೀಕರಿಸುವ ನೊಂದಣಿ ದಾಖಲಾತಿ ವಿಭಾಗವನ್ನೂ ಕೂಡ ಹೊಂದಿದೆ.[೧೬]

ಮಾಧ್ಯಮ ಮತ್ತು ಸಂಸ್ಕೃತಿ

ಬದಲಾಯಿಸಿ

ಸುಮಾರು 1974 ರಿಂದ ವಿಂಚೆಸ್ಟರ್ ವಾರ್ಷಿಕ ಹ್ಯಾಟ್ ಫೇರ್ ಉತ್ಸವವನ್ನು ಏರ್ಪಡಿಸುತ್ತದೆ. ಇದು ಬೀದಿ ನಾಟಕದೊಂದಿಗೆ, ಪ್ರದರ್ಶನ, ಕಾರ್ಯಾಗಾರ ಮತ್ತು ನಗರದ ಸುತ್ತಲೂ ಅನೇಕ ಕಡೆಗಳಲ್ಲಿ ಜನರು ಒಟ್ಟಿಗೆ ಸೇರುವುದನ್ನು ಒಳಗೊಂಡಿದೆ. ವಿಂಚೆಸ್ಟರ್ UK ಯ ಅತ್ಯಂತ ದೊಡ್ಡ ಮತ್ತು ಅತ್ಯಂತ ಯಶಸ್ವಿ ಕೃಷಿಕರ ಮಾರುಕಟ್ಟೆಗಳನ್ನು ಒದಗಿಸುತ್ತದೆ. ಇದರಲ್ಲಿ ಸುಮಾರು 100 ಅಥವಾ ಅದಕ್ಕೆ ಸಮೀಪದ ಸಂಖ್ಯೆಯಷ್ಟು ಅಂಗಡಿಗಳಿರುತ್ತವೆ. ಅಲ್ಲದೇ ಇವು FARMA ನಿಂದ ಪ್ರಮಾಣೀಕರಿಸಲ್ಪಟ್ಟಿರುತ್ತವೆ. ನಗರದ ಕೇಂದ್ರದಲ್ಲಿ ಪ್ರತಿ ತಿಂಗಳ ಎರಡನೆಯ ಮತ್ತು ಕೊನೆಯ ಭಾನುವಾರದಂದು ಕೃಷಿಕರ ಮಾರುಕಟ್ಟೆಯನ್ನು ನಡೆಸಲಾಗುತ್ತದೆ. ಚಾನೆಲ್ 4 ದೂರದರ್ಶನ ಕಾರ್ಯಕ್ರಮದಲ್ಲಿ ದಿ ಬೆಸ್ಟ್ ಅಂಡ್ ವರ್ಸ್ಟ್ ಪ್ಲೇಸಸ್ ಟು ಲಿವ್ ಇನ್ ದಿ UK ಯನ್ನು 2006 ರ ಅಕ್ಟೋಬರ್ 26 ರಂದು ಪ್ರಸಾರ ಮಾಡಲಾಯಿತು. ಅದರಲ್ಲಿ ವಿಂಚೆಸ್ಟರ್ ಅನ್ನು "UK ಯಲ್ಲಿ ಬದುಕಲು ಅತ್ಯುತ್ತಮ ಸ್ಥಳವಾಗಿದೆ: 2006" ಎಂದು ಕರೆಯಲಾಯಿತು.[] ಇದೇ ಕಾರ್ಯಕ್ರಮದ 2007 ರ ಆವೃತ್ತಿಯಲ್ಲಿ, ವಿಂಚೆಸ್ಟರ್ ಅನ್ನು ಎಡಿನ್ ಬರ್ಗ್ ನಂತರ ಉತ್ತಮವಾಗಿ ಜೀವಿಸಲು ಇರುವ ಎರಡನೆಯ ಅತ್ಯುತ್ತಮ ಸ್ಥಳವೆಂದು ಕರೆಯಲಾಯಿತು. ಆದರೆ 2003ರಲ್ಲಿ, UK ಯಲ್ಲಿರುವ 50 'ಕಲುಷಿತ ನಗರಗಳಲ್ಲಿ' ವಿಂಚೆಸ್ಟರ್ 5 ನೇ ಸ್ಥಾನ ಪಡೆದುಕೊಂಡಿದೆ. ಇದನ್ನು ಐಡ್ಲರ್ ನಿಯತಕಾಲಿಕೆಯ ಓದುಗರು ನಾಮನಿರ್ದೇಶಿಸಿದ್ದಾರೆ.[೧೭] ಪಂಕ್ ರಾಕ್ ನ ಗಾಯಕ-ಹಾಡು ಬರಹಗಾರ ಫ್ರಾಂಕ್ ಟರ್ನರ್ ವಿಂಚೆಸ್ಟರ್ ನಿಂದ ಬಂದಿದ್ದು, ಇದನ್ನು ಹೆಚ್ಚಾಗಿ ಗಾನಗೋಷ್ಠಿಗಳಲ್ಲಿ ಮತ್ತು ಅವರ ಹಾಡುಗಳಲ್ಲಿ ಹೇಳಿಕೊಂಡಿದ್ದಾರೆ. TV ನಿರೂಪಕ/ರೂಪದರ್ಶಕ ಅಲೆಕ್ಸಾ ಚುಂಗ್ ವಿಂಚೆಸ್ಟರ್ ನಲ್ಲಿ ಸಿಕ್ಸ್ ತ್ ಫಾರ್ಮ್ ನಲ್ಲಿ ಓದಿದ್ದಾರೆ. ಪೊಲ್ಲಿ ಮತ್ತು ಬಿಲ್ಲೆಟ್ಸ್ ಡಾಕ್ಸ್ ವಾದ್ಯವೃಂದವನ್ನು ವಿಂಚೆಸ್ಟರ್ ನಲ್ಲಿ ರಚಿಸಲಾಗಿದ್ದು, ಇದು ಈಗಲೂ ಅಲ್ಲಿದೆ. ಗಾಯಕ, ಹಾಡು ಬರಹಗಾರ, ಡ್ರಮ್ಮರ್ ರಾಜೊರ್ ಲೈಟ್ ಆಂಡಿ ಬುರೋಸ್ ವಿಂಚೆಸ್ಟರ್ ನವರಾಗಿದ್ದಾರೆ. ವಿದೂಷಕ ಜ್ಯಾಕ್ ಡೀ, ವಿಂಚೆಸ್ಟರ್ ನ ಪೀಟರ್ ಸೈಮಂಡ್ ಕಾಲೇಜ್ ನಲ್ಲಿ ಓದಿದವರಾಗಿದ್ದಾರೆ. ಕೊಲೀನ್ ಫರ್ತ್ ಕೂಡ ವಿಂಚೆಸ್ಟರ್ ನಿಂದಲೇ ಬಂದವರಾಗಿದ್ದಾರೆ.

ಸಾಹಿತ್ಯದಲ್ಲಿ ವಿಂಚೆಸ್ಟರ್

ಬದಲಾಯಿಸಿ

ಮಧ್ಯಕಾಲೀನ ಯುಗದಲ್ಲಿ ಬರೆದ ಪದ್ಯದಲ್ಲಿ ಸರ್ ಆರ್ಫೆವೊ, ಈ ಪದ್ಯದ ಪ್ರಮುಖ ಪಾತ್ರ ಸರ್ ಆರ್ಫೆವೊ ತ್ರೇಸ್ ನವನೆಂದು ಸೂಚಿಸಲಾಗಿದ್ದರೂ ಕೂಡ, ಈತ ವಿಂಚೆಸ್ಟರ್ ನ ರಾಜನಾಗಿದ್ದನು. ಆಗಿನ 12ನೇ ಶತಮಾನದ ವಿಂಚೆಸ್ಟರ್, ಕೆನ್ ಫೊಲೆಟ್ ನ ಪಿಲ್ಲರ್ಸ್ ಆಫ್ ದಿ ಅರ್ಥ್ ಪುಸ್ತಕದಲ್ಲಿ ವಿವರಿಸಲಾದ ಸ್ಥಳಗಳಲ್ಲಿ ಒಂದಾಗಿದೆ. ವಿಂಚೆಸ್ಟರ್, ಸ್ಯಾಮ್ಯೂಲ್ ಯಾಡ್ ನ ಪ್ರಳಯ ಪೂರ್ವ ಸೂಚಕ ವೈಜ್ಞಾನಿಕ ಕಾದಂಬರಿಯ ಸರಣಿಗಳಾದ ಸ್ವಾರ್ಡ್ ಆಫ್ ದಿ ಸ್ಪಿರಿಟ್ ನ ಪ್ರಮುಖ ಸ್ಥಳವಾಗಿದೆ. ಈ ಪುಸ್ತಕಗಳನ್ನು ಅಂಕಿತನಾಮ ಜಾನ್ ಕ್ರಿಸ್ಟೋಫರ್ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಮರ್ಲಿನ್ ಚಲನಚಿತ್ರದಲ್ಲಿ, ರಾಜ ಅಥರ್, ಆರಂಭಿಸಿದ ಬ್ರಿಟನ್ ನ ಮೊದಲ ದಂಡಯಾತ್ರೆ ವಿಂಚೆಸ್ಟರ್ ನಿಂದ ಪ್ರಾರಂಭವಾಗುತ್ತದೆ. ಕಾದಂಬರಿಗಳಲ್ಲಿ ಚಿತ್ರಿಸಲಾದ ವಿಂಚೆಸ್ಟರ್, ಹ್ಯಾರ್ಡಿಯ ಟೆಸ್ ಆಫ್ ದಿ ಡಿ' ಅರ್ಬರ್ ವಿಲ್ಲೆಸ್ ನಲ್ಲಿರುವ ವಿನ್ ಟನ್ ಸೆಸ್ಟರ್ ನಂತೆ ಕಾಣಿಸಿಕೊಂಡಿದೆ. ಅಲ್ಲದೇ ಅಂಥೋಣಿ ಟ್ರೋಲೋಪ್ ರ ಬರ್ಸೆಟ್ ಶೈರ್ ಕಾದಂಬರಿಗಳ ಸರಣಿಯಲ್ಲಿರುವ ಬಾರ್ಚೆಸ್ಟರ್ ಗಾಗಿ ಮಾದರಿಯ ಭಾಗವಾಗಿದೆ. ಇವರು ವಿಂಚೆಸ್ಟರ್ ನ ಕಾಲೇಜಿನಲ್ಲಿ ಓದಿದ್ದರು; ಇವರ ದಿ ವಾರ್ಡನ್ ಕಾದಂಬರಿಯು ಸೆಂಟ್ ಕ್ರಾಸ್ ಆಸ್ಪತ್ರೆಯಲ್ಲಿ ನಡೆದ ಹಗರಣವನ್ನು ಆಧರಿಸಿದೆ ಎಂದು ಹೇಳಲಾಗುತ್ತದೆ. ಫಿಲಿಪ್ ಪುಲ್ ಮ್ಯಾನ್ ರ ಕಾದಂಬರಿ ದಿ ಸಬ್ ಟಲ್ ನೈಫ್ ನಲ್ಲಿ ಅಭಿನಯಿಸಿರುವ (ಹೀಸ್ ಡಾರ್ಕ್ ಮೇಟಿರಿಯಲ್ಸ್ ನಾಟಕದ ಭಾಗವಾಗಿದೆ)ಪ್ರಧಾನ ಪುರುಷ ಪಾತ್ರಧಾರಿ ವಿಲ್ ಪ್ಯಾರಿ,ಇದರಲ್ಲಿ ವಿಂಚೆಸ್ಟರ್ ನಿಂದ ಬಂದವರಾಗಿದ್ದಾರೆ. ಅದೇನೇ ಆದರೂ ಪುಸ್ತಕದ ಸ್ವಲ್ಪ ಭಾಗವನ್ನು ಅಲ್ಲಿ ಚಿತ್ರಿಸಲಾಗಿದೆ. ಜಪಾನೀಯರ ಕಾಮಿಕ್ ಚಿತ್ರ ಡೆತ್ ನೋಟ್ ನಲ್ಲಿ, ವಾಮ್ಮಿಯ ಮನೆಯು, ಕ್ವಿಲ್ಷ್ ವಾಮ್ಮಿ ಸ್ಥಾಪಿಸಿದ ಅನಾಥಾಲಯವಾಗಿದ್ದು, ಇಲ್ಲಿ ಪತ್ತೆದಾರ L ನ ಉತ್ತರಾಧಿಕಾರಿಗಳು(ಮೆಲ್ಲೊ, ನೀಯರ್ ಮತ್ತು ಮ್ಯಾಟ್) ಬೆಳೆದು ದೊಡ್ಡವಾರಗುತ್ತಾರೆ. ಈ ಅನಾಥಾಲಯವು ವಿಂಚೆಸ್ಟರ್ ನಲ್ಲಿರುತ್ತದೆ. ವಿಂಚೆಸ್ಟರ್ ನ ಬಳಿಯಿರುವ ಕಲ್ಪಿತ ಎಸ್ಟೇಟ್ ಪ್ರದೇಶವು, ಸರ್ ಅರ್ಥುರ್ ಕಾನನ್ ಡೊಯ್ಲೆಯವರು ಬರೆದಿರುವ ಶೆರ್ಲಾಕ್ ಹೋಮ್ಸ್ ನ ಸಾಹಸಮಯ ಕಾದಂಬರಿ ದಿ ಪ್ರಾಬ್ಲಮ್ ಆಫ್ ದಿ -ಥೋರ್ ಬ್ರಿಡ್ಜ್ ನ ದೃಶ್ಯವಾಗಿದೆ. ಅವರ ದಿ ಅಡ್ವೆಂಚರ್ ಆಫ್ ದಿ ಕಾಪರ್ ಬೀಚ್ ನಲ್ಲಿರುವ ಕೆಲವು ಸಾಹಸಮಯ ದೃಶ್ಯಗಳು ಈ ನಗರದಲ್ಲಿ ನಡೆದಿರುವಂತೆ ಚಿತ್ರಿಸಲಾಗಿದೆ. ವಿಲಿಯಂ ಮೇಕ್ ಪೀಸ್ ಥ್ಯಾಕ್ರೆಯ, ಹೆನ್ರಿ ಎಸ್ಮಂಡ್ ನ ದೃಶ್ಯದಲ್ಲಿ ವಿಂಚೆಸ್ಟರ್ ಚರ್ಚಿನ ಗಾಯಕವೃಂದವಿದೆ. ವಿಂಚೆಸ್ಟರ್ ನ ಚರ್ಚ್ ಅನ್ನು ಜೇಮ್ಸ್ ಹರ್ಬರ್ಟ್ ರ ಭಯಾನಕ ಕಾದಂಬರಿ ದಿ ಫಾಗ್ ನಲ್ಲಿ ಚಿತ್ರಿಸಲಾಗಿದೆ. ಗೆರ್ರಿ ಅಂಡರ್ಸನ್ ರವರ 1967 ಮತ್ತು 1968 ರ ಕಾರ್ಯಕ್ರಮ ಕ್ಯಾಪ್ಟನ್ ಸ್ಕಾರ್ ಲೆಟ್ ಅಂಡ್ ದಿ ಮಿಸ್ಟ್ರಾನ್ಸ್ ನಲ್ಲಿ, ಪ್ರಕಟಿತ ಅಥವಾ ಅನುಮತಿಯೊಂದಿಗೆ ಪ್ರಕಟಿಸಲಾದ ಹಿನ್ನೆಲೆ ವಸ್ತುಗಳು,ಪ್ರಮುಖ ಪಾತ್ರಧಾರಿ ಕ್ಯಾಪ್ಟನ್ ಸ್ಕಾರ್ಲೆಟ್ ರವರ ಜನ್ಮ ಸ್ಥಳದ ರೂಪದಲ್ಲಿ ವಿಂಚೆಸ್ಟರ್ ಅನ್ನು ಗುರುತಿಸುತ್ತವೆ. ಪೌಲ್ ಮೆಟ್ ಕಾಲ್ಫೆ ಇವರ ನಿಜವಾದ ಹೆಸರಾಗಿದೆ. ಆಗ 1141 ರಲ್ಲಿ ನಡೆದ ವಿಂಚೆಸ್ಟರ್ ನ ಮುತ್ತಿಗೆಯು, ಕಿಂಗ್ ಸ್ಟೆಫನ್ ಮತ್ತು ಸಮ್ರಾಜ್ಞಿ ಮಾಟಿಲ್ಡ್ ನಡುವೆ ನಡೆದ ಇಂಗ್ಲೀಷ್ ಆಂತರಿಕ ಕದನದ ಭಾಗವಾಗಿದೆ. ಇದು ಪತ್ತೆದಾರಿ ಕಾದಂಬರಿ ಆನ್ ಎಕ್ಸ್ ಲೆಂಟ್ ಮಿಸ್ತ್ರಿ ಯಲ್ಲಿ ವಸ್ತು ವಿಷಯವಾಗಿದೆ. ಅಲ್ಲದೇ ಎಡಿತ್ ಪ್ಯಾರ್ಗೆಟರ್ ನ ಬ್ರದರ್ ಕ್ಯಾಡ್ ಫೆಲ್ ಚರಿತ್ರೆಯ ಭಾಗವಾಗಿದೆ. ಇದನ್ನು ಎಲ್ಲಿಸ್ ಪೀಟರ್ ಎಂಬ ಹೆಸರಿನಲ್ಲಿ ಬರೆಯಲಾಗಿದೆ.

ಅಂತರರಾಷ್ಟ್ರೀಯ ಸಂಬಂಧಗಳು

ಬದಲಾಯಿಸಿ

ಅವಳಿ ಪಟ್ಟಣಗಳು — ಉಪನಗರಗಳು

ಬದಲಾಯಿಸಿ

ವಿಂಚೆಸ್ಟರ್ ಇಸ್ ಟ್ವಿನ್ಡ್ ವಿತ್:[೧೮]

ವಿಂಚೆಸ್ಟರ್ ಡಿಸ್ಟ್ರಿಕ್ಟ್ ಇಸ್ ಟ್ವಿನ್ಡ್ ವಿತ್

ಈ ನಗರವು ವರ್ಜಿನಿಯಾದ ವಿಂಚೆಸ್ಟರ್ ನ ಅವಳಿ ನಗರವಾಗಿದೆ. ವಿಂಚೆಸ್ಟರ್(UK) ನ ಮೇಯರ್ ಗೆ ಪ್ರತಿವರ್ಷದ ವಸಂತ ಕಾಲದಲ್ಲಿ ವಿಂಚೆಸ್ಟರ್(VA) ನಲ್ಲಿ ನಡೆಯುವ ಶೆನೆನ್ ಡೊಹ ಅಪಲ್ ಬ್ಲಾಸಮ್ ಉತ್ಸವದಭಾಗವಾಗಲು ಆಹ್ವಾನ ನೀಡಲಾಗುತ್ತದೆ. ವರ್ಜಿನಿಯಾ ಪಟ್ಟಣ ಕೂಡ ಇಂಗ್ಲೆಂಡ್ ನಲ್ಲಿ ವಿಂಚೆಸ್ಟರ್ ನಿಂದ ಅದರ ಹೆಸರನ್ನು ಪಡೆದುಕೊಂಡಿದೆ. ವಿಂಚೆಸ್ಟರ್ ನಗರವು ಅದರ ಹೆಸರನ್ನು ಫ್ರಾನ್ಸ್ಪ್ಯಾರೀಸ್ ನಲ್ಲಿರುವ ಉಪನಗರಕ್ಕೆ ನೀಡಿದೆ. ಅದನ್ನು ಲೆ ಕ್ರೆಮ್ ಲಿನ್-ಬೈಸೆಟ್ರೆ (23,724 ನಿವಾಸಿಗಳು) ಎಂದು ಕರೆಯಲಾಗುತ್ತದೆ, ಇಲ್ಲಿ ಪಾನ್ ಟಾಯ್ಸ್ ನ ಜಾನ್, ವಿಂಚೆಸ್ಟರ್ ನ ಬಿಷಪ್ 13 ನೇ ಶತಮಾನದ ಕೊನೆಯಲ್ಲಿ ಉಳಿಗಮಾನ್ಯ ಪದ್ದತಿಯನ್ನು ಜಾರಿಗೆ ತಂದರು.

ಇವನ್ನೂ ಗಮನಿಸಿ‌

ಬದಲಾಯಿಸಿ
  • ವಿಂಚೆಸ್ಟರ್ ನಿಂದ ಬಂದ ಜನರ ಪಟ್ಟಿ
  • ವಿಂಚೆಸ್ಟರ್ ಹ್ಯಾಟ್ ಫೇರ್ ಉತ್ಸವ
  • ವಿಂಚೆಸ್ಟರ್ ನ ಸಂಗ್ರಹ

ಉಲ್ಲೇಖಗಳು‌

ಬದಲಾಯಿಸಿ
ಟಿಪ್ಪಣಿಗಳು
  1. ೧.೦ ೧.೧ "KS01 Usual resident population: Census 2001, Key Statistics for urban areas". National Statistics. Retrieved 2009-04-23. {{cite journal}}: Cite journal requires |journal= (help)
  2. Landranger 185: Winchester & Basingstoke. Ordnance Survey. 2005. ISBN 9780319228845.
  3. ೩.೦ ೩.೧ "Winchester: Best and Worst Places to Live in the UK 2006 from channel4.com/4homes". Channel4.com. Archived from the original on 2008-02-12. Retrieved 2009-05-06.
  4. "Roman Britain.org Venta Belgarum". Archived from the original on 2010-01-16. Retrieved 2011-03-03.
  5. ಲಿಸ್ಟ್ ಆಫ್ ರೋಮನ್ ಪ್ಲೇಸಸ್ ನೇಮ್ಸ್ ಇನ್ ಬ್ರಿಟನ್
  6. ವಿಂಚೆಸ್ಟರ್ ರೋಮನ್ ವಾಲ್ಸ್
  7. "PJO archaeology". Archived from the original on 2010-10-09. Retrieved 22.1.11. {{cite web}}: Check date values in: |accessdate= (help)
  8. ವಿಂಚೆಸ್ಟರ್ ರೋಮನ್ ಹಿಸ್ಟ್ರಿ
  9. "The Buttercross, Winchester". City of Winchester. 1998. Retrieved 23 September 2009.
  10. Yonge, Charlotte M. (1898). "Old Otterbourne". John Keble's Parishes – Chapter 8. www.online-literature.com. Retrieved 23 September 2009.
  11. By Andrew Napier (2010). "Tories sweep in but lose control of city council". Newsquest Media Group. Retrieved 2010-08-07. {{cite web}}: Unknown parameter |month= ignored (help)
  12. "Winchester". BBC News Online. 2008-04-19. Retrieved 2010-02-04. {{cite news}}: Italic or bold markup not allowed in: |publisher= (help)
  13. ೧೩.೦ ೧೩.೧ ಡಾಡ್ ಸನ್, ಏಡನ್. ದಿ ರಾಯಲ್ ಟಾಮ್ಸ್ ಆಫ್ ಗ್ರೇಟ್ ಬ್ರಿಟನ್. ಲಂಡನ್: ಗೆರಾಲ್ಡ್ ಡಕ್ ವರ್ತ್ ಅಂಡ್ ಕೋ. 2004.
  14. "ಹಿಸ್ಟ್ರಿ ಆಫ್ ವಿಂಚೆಸ್ಟರ್ ಗಿಲ್ಡ್ ಹಾಲ್". Archived from the original on 2010-10-14. Retrieved 2011-03-03.
  15. http://www.winchesterhc.co.uk/
  16. "The Probate Service - Registries". Her Majesty's Courts Service. Archived from the original on 2011-06-06. Retrieved 2010-10-10.
  17. "UK's 'worst 50' towns revealed". BBC. 2003-10-02. Retrieved 2003-10-02.
  18. ೧೮.೦ ೧೮.೧ ೧೮.೨ "Twin Towns in Hampshire". www3.hants.gov.uk. Archived from the original on 2009-11-30. Retrieved 2009-11-06.
  19. "Home". www.winchestertwinning.org.uk. Archived from the original on 2010-12-08. Retrieved 2009-11-06.


ಬಾಹ್ಯ ಕೊಂಡಿಗಳು

ಬದಲಾಯಿಸಿ