ಜರಾಯು (ಪ್ಲಸೆಂಟ್)

(ಜರಾಯು (ಪ್ಲಸೆಂಟ) ಇಂದ ಪುನರ್ನಿರ್ದೇಶಿತ)

ಟೆಂಪ್ಲೇಟು:Infobox Embryology ಜರಾಯು ಎಂಬುದು ಬೆಳವಣಿಗೆಯಾಗುತ್ತಿರುವ ಭ್ರೂಣವನ್ನು ಗರ್ಭಾಶಯದ ಭಿತ್ತಿಗೆ ಜೋಡಿಸುವ ಒಂದು ಅಂಗ; ಇದು ತಾಯಿಯಿಂದ ಬರುವ ರಕ್ತದ ಪೂರೈಕೆಯಿಂದ ಮಗುವು ಪೌಷ್ಟಿಕಾಂಶ ಪಡೆಯುವಿಕೆ, ವ್ಯರ್ಥ ಪದಾರ್ಥಗಳ ವಿಸರ್ಜನೆಗೆ, ಹಾಗು ಅನಿಲದ ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಜರಾಯುಗಳು ಯುಥೆರಿಯನ್ ಅಥವಾ ಜರಾಯುಯುಕ್ತ ಸಸ್ತನಿಗಳಲ್ಲಿ ಒಂದು ನಿರೂಪಿತ ಲಕ್ಷಣವಾಗಿವೆ. ಆದರೆ ಇದು ಸಸ್ತನಿಯ ಹಂತದವರೆಗೂ ವಿವಿಧ ಪ್ರಕಾರಗಳಲ್ಲಿ ಬೆಳವಣಿಗೆಯಾಗುವ ಕೆಲವು ಹಾವುಗಳು ಹಾಗು ಹಲ್ಲಿಗಳಲ್ಲಿಯೂ(ಸರಿಸೃಪಗಳು) ಸಹ ಕಂಡುಬರುತ್ತದೆ.[] ಪ್ಲಸೆಂಟ ಎಂಬ ಪದವು ಕೇಕ್ ಎಂಬ ಅರ್ಥವನ್ನು ನೀಡುವ ಲ್ಯಾಟಿನ್ ಪದದಿಂದ ವ್ಯುತ್ಪತ್ತಿ ಹೊಂದಿದೆ. ಗ್ರೀಕ್ ನ ಪ್ಲಕೋಎಂಟ/ಪ್ಲಕೌಂಟ , ಪ್ಲಕೊಯೇಯಿಸ್/ಪ್ಲಕೌಸ್ ನ ದ್ವಿತೀಯಾ ವಿಭಕ್ತಿಯಾಗಿದೆ - πλακόεις, πλακούς , ಇದು "ಚಪ್ಪಟೆಯಾದ, ಹಲಗೆಯ ಮಾದರಿ" ಎಂಬ ಅರ್ಥ ನೀಡುತ್ತದೆ.[] ಇದು ಮನುಷ್ಯರಲ್ಲಿ ಕಂಡುಬರುವ ಗುಂಡನೆಯ, ಚಪ್ಪಟೆಯಾಕಾರದ ರೂಪಕ್ಕೆ ಉಲ್ಲೇಖಿತವಾಗಿದೆ. ಪ್ರೋಥೆರಿಯ(ಮೊಟ್ಟೆಯಿಡುವ) ಹಾಗು ಮೆಟಾತೆರಿಯ(ಕೋಶವನ್ನು ಹೊಂದಿರುವ) ಸಸ್ತನಿಗಳು, ಕೊರಿಯೋವಿಟೆಲ್ಲಿನ್ ಜರಾಯುವನ್ನು ಹೊಂದಿರುತ್ತವೆ. ಇದು ಗರ್ಭಾಶಯದ ಭಿತ್ತಿಗೆ ಜೋಡಣೆಯಾದಾಗ, ಮೊಟ್ಟೆಯ ಚೀಲದಿಂದ ಪ್ರಮುಖವಾಗಿ ಉತ್ಪಾದನೆಯಾದ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಭ್ರೂಣವನ್ನು ರೂಪಿಸುವ ಅದೇ ವೀರ್ಯಾಣು ಹಾಗು ಅಂಡಾಣುಗಳಿಂದ ಜರಾಯು ಬೆಳವಣಿಗೆಯಾಗುತ್ತದೆ. ಅಲ್ಲದೇ ಎರಡು ಅಂಶಗಳೊಂದಿಗೆ ಫೀಟೊಮೇಟರ್ನಲ್ (ರಕ್ತಕೋಶಗಳ ಸಾಗಣೆ)ಅಂಗವಾಗಿ ಕಾರ್ಯನಿರ್ವಹಿಸುತ್ತದೆ. ಭ್ರೂಣದ ಭಾಗ(ಕೊರಿಯೋನ್ ಫ್ರೋನ್ಡೋಸಂ), ಹಾಗು ಮಾತೃಕ ಭಾಗ(ಡೆಸಿಡುವ ಬಸಲಿಸ್)ಎನಿಸಿದೆ.

ಮಾನವರಲ್ಲಿ, ಜರಾಯು ಸರಾಸರಿ 22 ಸೆಂ.ಉದ್ದ(9 ಇಂಚು) ಹಾಗು 2–2.5 ಸೆಂ.(0.8–1 ಇಂಚು)ದಪ್ಪಗಿರುತ್ತದೆ.(ಮಧ್ಯದಲ್ಲಿ ಬಹಳ ದಪ್ಪ, ಅಂಚಿನಲ್ಲಿ ಬಹಳ ತೆಳ್ಳಗಿರುತ್ತದೆ). ಇದು ಸಾಮಾನ್ಯವಾಗಿ ಸರಿಸುಮಾರು 500 ಗ್ರಾಂಗಳಷ್ಟು (1 lb) ತೂಗುತ್ತದೆ. ಇದು ಕಡು ಕೆಂಪು-ನೀಲಿ ಅಥವಾ ಮರೂನ್(ಕೆಂಗಂದು) ಬಣ್ಣದಲ್ಲಿರುತ್ತದೆ. ಇದು ಸರಿಸುಮಾರು 55–60 ಸೆಂ.ಉದ್ದವಿರುವ (22–24 ಇಂಚು)ಒಂದು ಹೊಕ್ಕಳುಬಳ್ಳಿಯ ಹುರಿಯ ಮೂಲಕ ಭ್ರೂಣಕ್ಕೆ ಸಂಪರ್ಕಿಸುತ್ತದೆ. ಇದು ಎರಡು ಅಪಧಮನಿಗಳು ಹಾಗು ಒಂದು ಅಭಿಧಮನಿಯನ್ನು ಒಳಗೊಂಡಿರುತ್ತದೆ.[] ಹೊಕ್ಕಳುಬಳ್ಳಿಯು ಮೇಲ್ಪದರೆನ್ನಲಾದ ಕೊರಿಯೋನಿಕ್ ಪಾರದರ್ಶಕ ಫಲಕದ ಒಳಗೆ ಸೇರಿಕೊಂಡಿರುತ್ತದೆ.(ವಿಕೇಂದ್ರಕ ಜೋಡಣೆ ಹೊಂದಿರುತ್ತದೆ). ರಕ್ತನಾಳಗಳು ಜರಾಯುವಿನ ಮೇಲ್ಮೈಯಲ್ಲಿ ಹರಡಿಕೊಂಡಿರುತ್ತವೆ; ಅಲ್ಲದೇ ಕೋಶಗಳ ಒಂದು ತೆಳು ಪದರದ ಮೂಲಕ ಮುಚ್ಚಲ್ಪಡುವಂತಹ ಜಾಲವನ್ನು ರೂಪಿಸಲು ಮತ್ತಷ್ಟು ವಿಭಜನೆಯಾಗಿರುತ್ತವೆ. ಇದು ವಿಲಸ್ ವೃಕ್ಷದ ಮಾದರಿಯ ಹೋಲಿಕೆಯ ರಚನೆಗಳಂತೆ ಕಾಣಿಸುತ್ತದೆ. ಮಾತೃಕ ಭಾಗದಲ್ಲಿ, ಈ ವಿಲಸ್ ಹೋಲಿಕೆಯ ಮಾದರಿಯ ರಚನೆಗಳು ಕಾಟಿಲೀಡನ್ಸ್(ಮೊಳಕೆ ಎಲೆ) ಎಂದು ಕರೆಯಲ್ಪಡುವ ಕಿರುಹಾಲೆಗಳಾಗಿ ಗುಂಪಾಗಿ ಸೇರಿಕೊಂಡಿರುತ್ತವೆ. ಮನುಷ್ಯರಲ್ಲಿ ಜರಾಯು ಸಾಮಾನ್ಯವಾಗಿ ಬಿಲ್ಲೆಯ ಮಾದರಿ ಇರುತ್ತದೆ. ಆದರೆ ಗಾತ್ರವು ವಿವಿಧ ಸಸ್ತನಿ ವರ್ಗಗಳ ನಡುವೆ ವ್ಯಾಪಕವಾಗಿ ಬದಲಾವಣೆಯಾಗುತ್ತದೆ.[]

ಬೆಳವಣಿಗೆ

ಬದಲಾಯಿಸಿ
 
ಮಾನವ ಭ್ರೂಣಸೃಷ್ಟಿಯ ಆರಂಭಿಕ ಹಂತಗಳು.

ಜರಾಯು, ಮೂಲ ಮಾತೃಕ ಎಂಡೋಮೆಟ್ರಿಯಂ(ಗರ್ಭಕೋಶದ ಒಳಪೊರೆ)ನೊಳಗೆ ಬ್ಲ್ಯಾಸ್ಟೋಸಿಸ್ಟ್ ನ ಅಂತರ್ನಿವೇಶನದೊಂದಿಗೆ ಬೆಳವಣಿಗೆಯಾಗಲು ಆರಂಭಿಸುತ್ತದೆ. ಬ್ಲ್ಯಾಸ್ಟೋಸಿಸ್ಟ್ ನ ಹೊರ ಪದರು ಪೋಷಕ ಪದರು ಆಗಿ ಮಾರ್ಪಡುತ್ತದೆ. ಇದು ಜರಾಯುವಿನ ಬಾಹ್ಯ ಪದರುವಿನ ರಚನೆ ಮಾಡುತ್ತದೆ. ಈ ಹೊರಪದರು ಮತ್ತೆ ಎರಡಾಗಿ ವಿಂಗಡಣೆಯಾಗಿರುತ್ತದೆ: ಕೆಳಭಾಗದಲ್ಲಿರುವ ಸೈಟೋಟ್ರೋಫೋಬ್ಲ್ಯಾಸ್ಟ್ ಪದರ ಹಾಗು ಮೇಲ್ಭಾಗದಲ್ಲಿರುವ ಸಿನ್ಸೈಟಿಯೋಟ್ರೋಫೋಬ್ಲ್ಯಾಸ್ಟ್ ಪದರು ಎಂದಾಗುತ್ತದೆ. ಸಿನ್ಸೈಟಿಯೋಟ್ರೋಫೋಬ್ಲ್ಯಾಸ್ಟ್ ನಿರಂತರ ಬಹುನ್ಯೂಕ್ಲಿಯಸ್ ಕೋಶ ಪದರವಾಗಿದ್ದು ಜರಾಯುವಿನ ಮೇಲ್ಭಾಗವನ್ನು ಮುಚ್ಚುತ್ತದೆ. ಇದು ಕೆಳಭಾಗದ ಸೈಟೋಟ್ರೋಫೋಬ್ಲ್ಯಾಸ್ಟ್ ಕೋಶಗಳ ವ್ಯತ್ಯಾಸ ಹಾಗು ಸೇರುವಿಕೆಯ ಪರಿಣಾಮದಿಂದ ರಚನೆಯಾಗಿರುತ್ತದೆ. ಈ ಪ್ರಕ್ರಿಯೆಯು ಜರಾಯುವಿನ ಬೆಳವಣಿಗೆಯುದ್ದಕ್ಕೂ ಮುಂದುವರೆಯುತ್ತದೆ. ಸಿನ್ಸೈಟಿಯೋಟ್ರೋಫೋಬ್ಲ್ಯಾಸ್ಟ್(ಸಿನ್ಸಿಟಿಯಂ ಎಂದೂ ಪರ್ಯಾಯವಾಗಿ ಕರೆಯಲ್ಪಡುತ್ತದೆ.) ಆ ಮೂಲಕ ಜರಾಯುವಿನ ಪ್ರತಿಬಂಧಕ ಕಾರ್ಯಕ್ಕೆ ನೆರವಾಗುತ್ತದೆ.

ಜರಾಯುವು ಗರ್ಭಾವಸ್ಥೆಯುದ್ದಕ್ಕೂ ಬೆಳವಣಿಗೆಯಾಗುತ್ತಿರುತ್ತದೆ. ಜರಾಯುವಿಗೆ ತಾಯಿಯ ರಕ್ತ ಸರಬರಾಜಿನ ಬೆಳವಣಿಗೆಯು, ಗರ್ಭಾವಸ್ಥೆಯ ಮೊದಲ ಮೂರು ತಿಂಗಳ ಅವಧಿಯ(ಸರಿಸುಮಾರು 12-13 ವಾರಗಳು) ಕಡೆಯಲ್ಲಿ ಪೂರ್ಣಗೊಳ್ಳುವುದೆಂದು ಅಂದಾಜಿಸಲಾಗಿದೆ.

ಜರಾಯುವಿನ ಪರಿಚಲನೆ

ಬದಲಾಯಿಸಿ

ಮಾತೃಕ ಜರಾಯುವಿನ ಪರಿಚಲನೆ

ಬದಲಾಯಿಸಿ

ಅಂತರ್ನಿವೇಶನದ ತಯಾರಿಯಲ್ಲಿ, ಗರ್ಭಾಶಯದ ಒಳಪದರವು 'ಡೆಸಿಡ್ಯುವಲೈಸೇಶನ್' (ಗರ್ಭಧರಿಸಿದ ಜೀವಕೋಶೀಯತೆಗೆ) ಒಳಗಾಗುತ್ತದೆ. ಡೆಸಿಡುವ(ಎಪಿತೀಲಕ)ದಲ್ಲಿರುವ ಸುರುಳಿಯಾಕಾರದ ಅಪಧಮನಿಗಳು ಹೊಸದಾಗಿ ರಚನೆಯಾಗುತ್ತವೆ. ಈ ರೀತಿಯಾಗಿ ಅವುಗಳು ಹೆಚ್ಚು ಸುರುಟಿಕೊಳ್ಳುವುದಿಲ್ಲ ಅಲ್ಲದೇ ಅವುಗಳ ವ್ಯಾಸವೂ ಅಧಿಕವಾಗುತ್ತದೆ. ಇದು ಜರಾಯುವಿಗೆ ತಾಯಿಯ ರಕ್ತದ ಪರಿಚಲನೆಯನ್ನು ಅಧಿಕಗೊಳಿಸುವುದರ ಜೊತೆಗೆ ರಕ್ತ ಪರಿಚಲನೆ ಹೆಚ್ಚಾಗಲು ನಿರೋಧಶಕ್ತಿಯನ್ನು ಕಡಿಮೆ ಮಾಡುತ್ತದೆ. ಇಂಟರ್ವಿಲಸ್ ಅಂತರದಲ್ಲಿ ತಾಯಿಯ ರಕ್ತವು ಈ ಸುರುಟಿಕೊಂಡ ಅಪಧಮನಿಗಳ ಮೂಲಕ ಪ್ರವೇಶಿಸಿದರೆ, ತುಲನಾತ್ಮಕವಾಗಿ ಅಧಿಕ ಒತ್ತಡದಿಂದಾಗಿ ವಿಲ್ಲಿಯು ರಕ್ತದಲ್ಲಿ ಮುಳುಗುತ್ತದೆ. ಇದರೊಂದಿಗೆ ಅನಿಲಗಳ ವಿನಿಮಯ ನಡೆಯುತ್ತದೆ. ರಕ್ತದೊತ್ತಡವು ಕಡಿಮೆಯಾದಾಗ, ನಿರಾಕ್ಸಿಜನೀಕರಿತವಾದ ರಕ್ತವು ಎಂಡೋಮೆಟ್ರಿಯಲ್ ಅಭಿಧಮನಿಗಳ ಮೂಲಕ ಹಿಮ್ಮುಖವಾಗಿ ಹರಿಯುತ್ತದೆ.

ಸರಿಸುಮಾರು 600–700 ml/ಪ್ರತಿ ನಿಮಿಷಕ್ಕೆ ತಾಯಿಯ ರಕ್ತ ಪರಿಚಲನೆಯು ನಡೆಯುತ್ತದೆ.

ಫೀಟೋಪ್ಲಸೆಂಟಲ್ ಪರಿಚಲನೆ

ಬದಲಾಯಿಸಿ

ಭ್ರೂಣದ ನಿರಾಕ್ಸಿಜನೀಕರಿತ ರಕ್ತವು, ಹೊಕ್ಕಳಿನ ಅಪಧಮನಿಗಳ ಮೂಲಕ ಜರಾಯುವಿಗೆ ಹರಿದುಹೊಗುತ್ತದೆ. ಹೊಕ್ಕಳುಬಳ್ಳಿ ಹಾಗು ಜರಾಯು ಸೇರುವ ಸ್ಥಾನದಲ್ಲಿ, ಹೊಕ್ಕಳಿನ ಅಪಧಮನಿಗಳು, ಕೊರಿಯೋನಿಕ್ ಅಪಧಮನಿಗಳನ್ನು ರಚಿಸಲು ತ್ರಿಜ್ಯಾಕಾರವಾಗಿ ಹರಡಿಕೊಂಡಿರುತ್ತವೆ. ಇದಕ್ಕೆ ಪ್ರತಿಯಾಗಿ, ಕೊರಿಯೋನಿಕ್ ಅಪಧಮನಿಗಳು, ಕಾಟಿಲಿಡನ್ ಅಪಧಮನಿಗಳಲ್ಲಿ ಪಸರಿಸುತ್ತವೆ. ವಿಲೈನಲ್ಲಿ(ತೆಳುವಾದ ನಾಳದಂತಹ ಚಾಚಿಕೆ), ಈ ನಾಳಗಳು ಅಂತಿಮವಾಗಿ ಒಂದು ವ್ಯಾಪಕ ಆರ್ಟೆರಿಯೋಕ್ಯಾಪಿಲ್ಲರಿ ಸಿರೆ ವ್ಯವಸ್ಥೆಯನ್ನು ರೂಪಿಸಲು ಪ್ರಸರಿಸುತ್ತವೆ. ಇದು ಭ್ರೂಣದ ರಕ್ತವನ್ನು ತಾಯಿಯ ರಕ್ತಕ್ಕೆ ಬಹಳ ನಿಕಟವಾಗಿ ತರುತ್ತದೆ; ಆದರೆ ಭ್ರೂಣದ ಹಾಗು ತಾಯಿಯ ರಕ್ತವು ಪರಸ್ಪರ ಮಿಶ್ರಣಗೊಳ್ಳುವುದಿಲ್ಲ.("ಜರಾಯು ಪ್ರತಿಬಂಧಕ"[])

ಎಂಡೋಥೆಲಿನ್ ಹಾಗು ಪ್ರಾಸ್ಟನಾಯಿಡ್ ಜರಾಯು ಅಪಧಮನಿಗಳಲ್ಲಿ ವಾಸೋಕನ್ಸ್ಟ್ರಿಕ್ಶನ್ ಉಂಟುಮಾಡಿದರೆ, ನೈಟ್ರಿಕ್ ಆಕ್ಸೈಡ್ ವಾಸೋಲಿಡೆಶನ್ ಗೆ ಕಾರಣವಾಗುತ್ತದೆ.[] ಮತ್ತೊಂದು ಕಡೆಯಲ್ಲಿ, ಯಾವುದೇ ನರವ್ಯೂಹದ ನಾಳೀಯ ನಿಯಂತ್ರಣವಿರುವುದಿಲ್ಲ, ಜೊತೆಗೆ ಕಾಟೆಕೊಲಮೈನ್ ಗಳು ಹೆಚ್ಚಿನ ಪರಿಣಾಮ ಬೀರುವುದಿಲ್ಲ.[]

ಕಾರ್ಯಚಟುವಟಿಕೆಗಳು

ಬದಲಾಯಿಸಿ

ಪೋಷಣೆ ಹಾಗು ಪ್ರತಿರಕ್ಷಕ ಗುಣ

ಬದಲಾಯಿಸಿ

ತಾಯಿಯ ರಕ್ತದೊಂದಿಗೆ ಜರಾಯುವಿನ ಇಂಟರ್ವೀಲಸ್ ಅಂತರದ ವ್ಯಾಪಕತೆ, ತಾಯಿಯಿಂದ ಭ್ರೂಣಕ್ಕೆ ಪೌಷ್ಟಿಕಾಂಶಗಳ ಹಾಗು ಆಮ್ಲಜನಕದ ವರ್ಗಾವಣೆ ಮಾಡುತ್ತದೆ. ಅಲ್ಲದೇ ವರ್ಜಿತ ಪದಾರ್ಥಗಳು ಹಾಗು ಇಂಗಾಲದ ಡೈ ಆಕ್ಸೈಡ್ ನ್ನು ಭ್ರೂಣದಿಂದ ತಾಯಿಗೆ ವರ್ಗಾವಣೆ ಮಾಡುತ್ತದೆ. ಭ್ರೂಣಕ್ಕೆ ಪೌಷ್ಟಿಕಾಂಶದ ವರ್ಗಾವಣೆಯು ಸಾಂದರ್ಭಿಕ ಸಕ್ರಿಯ ಹಾಗು ನಿಷ್ಕ್ರಿಯವಾಗಿ ಪ್ರೋಟೀನುಗಳ ಮೂಲಕ ಎರಡೂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಜರಾಯು ಕೋಶದೊಳಗೆ ಕಳುಹಿಸಲಾಗುವ ಇದನ್ನು ಪೌಷ್ಟಿಕದ್ರವ್ಯಗಳ ವಾಹಕವೆಂದು ಕರೆಯಲಾಗುತ್ತದೆ[ಸೂಕ್ತ ಉಲ್ಲೇಖನ ಬೇಕು].

ಗರ್ಭಾವಸ್ಥೆಯ ಪ್ರತಿಕೂಲ ಪರಿಸ್ಥಿತಿಗಳಾದ, ತಾಯಿಗಿರುವ ಮಧುಮೇಹ ಅಥವಾ ಬೊಜ್ಜು, ಜರಾಯುವಿನಲ್ಲಿ ಪೌಷ್ಟಿಕ ದ್ರವ್ಯಗಳ ಸಾಗಣೆ ಮಟ್ಟವನ್ನು ಹೆಚ್ಚಿಸುತ್ತವೆ, ಅಥವಾ ಕಡಿಮೆಗೊಳಿಸುತ್ತವೆ. ಇದು ಭ್ರೂಣದ ಅಧಿಕ ಬೆಳವಣಿಗೆ ಅಥವಾ ಸೀಮಿತ ಬೆಳವಣಿಗೆಗೆ ಕಾರಣವಾಗುತ್ತದೆ[ಸೂಕ್ತ ಉಲ್ಲೇಖನ ಬೇಕು].

IgG ಪ್ರತಿಕಾಯಗಳು ಮಾನವ ಜರಾಯುವಿನ ಮೂಲಕ ಹಾದು ಹೋಗಬಹುದು. ಆ ಮೂಲಕ ಗರ್ಭಕೋಶದಲ್ಲಿರುವ ಭ್ರೂಣಕ್ಕೆ ರಕ್ಷಣೆ ಒದಗಿಸಬಹುದು[].


ಅಂತಃಸ್ರಾವಕ ಗ್ರಂಥಿಯ ಕಾರ್ಯಚಟುವಟಿಕೆ

ಬದಲಾಯಿಸಿ

ಮನುಷ್ಯರಲ್ಲಿ, ಭ್ರೂಣಕ್ಕೆ ಆಮ್ಲಜನಕ ಹಾಗು ಪೌಷ್ಟಿಕಾಂಶಗಳನ್ನು ನಳಿಕೆ ಮೂಲಕ ಒದಗಿಸುವುದರ ಜೊತೆಯಲ್ಲಿ, ಜರಾಯು ಗರ್ಭಾವಸ್ಥೆಯಲ್ಲಿ ಮುಖ್ಯವಾಗುವ ಹಾರ್ಮೋನುಗಳನ್ನು ಸ್ರವಿಸುತ್ತದೆ.(ಕೊರಿಯೋನಿಕ್ ವಿಲ್ಲಿಯ ಸಿನ್ಸಿಟಿಯಲ್ ಪದರ/ಸಿನ್ಸಿಟಿಯೋಟ್ರೋಫೋಬ್ಲ್ಯಾಸ್ಟ್ ನಿಂದ ಸ್ರವಿಸುತ್ತದೆ).

ಹಾರ್ಮೋನುಗಳು:

ಹ್ಯೂಮನ್ ಕೊರಿಯೋನಿಕ್ ಗೋನಡೋಟ್ರೋಪಿನ್ (hCG) .(ಗರ್ಭಾವಸ್ಥೆಯಲ್ಲಿರುವಾಗ ಮಾನವರಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಗಳು) ಉತ್ಪತ್ತಿಯಾದ ಮೊದಲ ಜರಾಯು ಹಾರ್ಮೋನ್ hCGಯಾಗಿದೆ. ಇದು ತಪ್ಪಿಹೋದ ಮುಟ್ಟಿನ ದಿನಗಳ ಆರಂಭದಲ್ಲಿ ತಾಯಿಯ ರಕ್ತ ಹಾಗು ಮೂತ್ರದಲ್ಲಿ,(ಅಂತರ್ನಿವೇಶನವಾದ ಸ್ವಲ್ಪ ಸಮಯದ ನಂತರ) ಗರ್ಭಾವಸ್ಥೆಯ ಸುಮಾರು 100ನೇ ದಿನದವರೆಗೂ ಕಂಡುಬರುತ್ತವೆ. ಈ ಹಾರ್ಮೊನನ್ನು ಗರ್ಭಧರಿಸಿರುವ ಪರಿಸ್ಥಿತಿಯ ತಪಾಸಣೆಯ ಮೂಲಕ ವಿಶ್ಲೇಷಿಸಲಾಗುತ್ತದೆ. ಈ ಅವಧಿಯ ನಂತರ ಗರ್ಭ ತಪಾಸಣೆಯಿಂದ ಒಂದು ತಪ್ಪುಗ್ರಹಿಕೆಯ-ನಕಾರಾತ್ಮಕ ಫಲಿತಾಂಶವನ್ನು ಪಡೆಯಬಹುದು. ಮಗುವಿನ ಜನನದ ನಂತರ ಒಂದರಿಂದ ಎರಡು ವಾರಗಳ ಕಾಲ ತಾಯಿಯ ರಕ್ತದ ಸೀರಮ್ ಸಂಪೂರ್ಣವಾಗಿ ನಕಾರಾತ್ಮಕವಾಗಿರುತ್ತದೆ. ಜರಾಯುವಿನ ಎಲ್ಲ ಅಂಗಾಂಶವು ಹೆರಿಗೆಯಲ್ಲಿ ಹೊರಬಿದ್ದಿರುವುದಕ್ಕೆ hCG ತಪಾಸಣೆಯು ಸಾಕ್ಷಿಯಾಗುತ್ತದೆ. hCG ಗರ್ಭಾವಸ್ಥೆಯ ಸಮಯದಲ್ಲಿ ಮಾತ್ರ ಕಂಡುಬರುತ್ತದೆ, ಏಕೆಂದರೆ ಇದನ್ನು ಜರಾಯು ಸ್ರವಿಸುತ್ತದೆ, ಸಹಜವಾಗಿ ಜರಾಯು ಸಹ ಕೇವಲ[] ಗರ್ಭಾವಸ್ಥೆಯ ಸಮಯದಲ್ಲಿ ಮಾತ್ರ ಕಂಡುಬರುತ್ತದೆ. ಋತುಚಕ್ರದ ನಿಲುಗಡೆಯ ನಂತರವೂ hCG ಕಾರ್ಪಸ್ ಲುಟೇಯುಂ ಪ್ರೋಜೆಸ್ಟೋರಾನ್ ಹಾಗು ಈಸ್ಟ್ರೋಜನ್ ನನ್ನು ಸ್ರವಿಸುವುದನ್ನು ಮುಂದುವರೆಯುವಂತೆ ಮಾಡುತ್ತದೆ. ಪ್ರೋಜೆಸ್ಟೋರೋನ್ ಗರ್ಭಾವಸ್ಥೆಯಲ್ಲಿ ಬಹಳ ಮುಖ್ಯವಾಗಿದೆ. ಏಕೆಂದರೆ ಇದರ ಸ್ರಾವವು ಕಡಿಮೆಯಾದಾಗ, ಗರ್ಭಕೋಶದ ಒಳಪದರು ಕಳಚಿ,ಗರ್ಭಪಾತವಾಗುತ್ತದೆ. hCG ತಾಯಿಯ ಪ್ರತಿರಕ್ಷಕ ಪ್ರಕ್ರಿಯೆಯನ್ನು ನಿರೋಧಿಸುತ್ತದೆ, ಇದರಿಂದಾಗಿ ಜರಾಯು ಉಳಿಯುತ್ತದೆ.

ಹ್ಯೂಮನ್ ಪ್ಲಸೆಂಟಲ್ ಲ್ಯಾಕ್ಟೋಜನ್(hPL[ಹ್ಯೂಮನ್ ಕೊರಿಯೋನಿಕ್ ಸೋಮಟೋಮಮ್ಮೋಟ್ರೋಪಿನ್] ). ಈ ಹಾರ್ಮೋನು ಹಾಲೂರಿಕೆಯನ್ನು ಮಾಡುವುದರ ಜೊತೆಗೆ ಬೆಳವಣಿಗೆಯನ್ನು ಉತ್ತೇಜಿಸುವ ಗುಣಗಳನ್ನು ಹೊಂದಿದೆ. ಇದು ತಾಯಿಯಲ್ಲಿ, ಹಾಲುಣಿಸುವಿಕೆಗೆ ಸಿದ್ಧವಾಗಲು ಸ್ತನಗ್ರಂಥಿಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತಾಯಿಯ, ಗ್ಲುಕೋಸ್, ಪ್ರೋಟೀನ್, ಕೊಬ್ಬಿನ ಮಟ್ಟಗಳನ್ನು ನಿಯಂತ್ರಿಸುವುದರ ಜೊತೆಗೆ ಇದು ಭ್ರೂಣಕ್ಕೆ ಯಾವಾಗಲೂ ದೊರಕುತ್ತದೆ.

ಈಸ್ಟ್ರೊಜನ್ (ಮದಜನಕ) ಇದನ್ನು "ಮಹಿಳೆಯರ ಹಾರ್ಮೋನು" ಎಂದು ಸೂಚಿಸಲಾಗುತ್ತದೆ. ಏಕೆಂದರೆ ಇದು ಮಹಿಳೆಯರ ಗೋಚರ ಚರ್ಯೆಯ ಮೇಲೆ ಪ್ರಭಾವಬೀರುತ್ತದೆ. ಇದು ಮಹಿಳೆಯ ಹಾಲುಣಿಸುವಿಕೆ ತಯಾರಿಯಲ್ಲಿ ಸ್ತನಗ್ರಂಥಿಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಬೆಳವಣಿಗೆಯಾಗುತ್ತಿರುವ ಭ್ರೂಣಕ್ಕೆ ಸ್ಥಳಾವಕಾಶ ನೀಡಲು ಗರ್ಭಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಪ್ರೊಜೆಸ್ಟೋರೋನ್ (ತಾಯಿಯ ಹಾರ್ಮೋನ್) ಇದನ್ನು "ತಾಯಂದಿರ ಹಾರ್ಮೋನು" ಎಂದು ಉಲ್ಲೇಖಿಲಾಗುತ್ತದೆ. ಏಕೆಂದರೆ ಗರ್ಭಾವಸ್ಥೆಯ ಸಂದರ್ಭದಲ್ಲಿ ಗರ್ಭಾಶಯದ ಒಳಪದರನ್ನು ಉಳಿಸಿಕೊಂಡು ಬರುವ ಅಗತ್ಯವಿರುತ್ತದೆ. ಈ ಹಾರ್ಮೋನು ಮಯೋಮೆಟ್ರಿಯಲ್ (ಗರ್ಭಾಶಯದ ಬಾಹ್ಯ ಪದರಿನ)ಸಂಕೋಚನ ತಗ್ಗಿಸುವ ಮೂಲಕ ಅವಧಿ ಮುಂಚಿನ ಪ್ರಸವವನ್ನು ತಡೆಗಟ್ಟುತ್ತದೆ. ಈ ಹಾರ್ಮೊನಿನ ಪ್ರಮಾಣವು ಗರ್ಭಾವಸ್ಥೆಯ ಸಮಯದಲ್ಲಿ ಅಧಿಕವಾಗಿರುತ್ತದೆ.

ತಾಯಿಯ ಪ್ರತಿರಕ್ಷಕ ವ್ಯವಸ್ಥೆಯಿಂದ ಮರೆಯಾಗುವುದು

ಬದಲಾಯಿಸಿ

ಜರಾಯು ಹಾಗು ಭ್ರೂಣವನ್ನು ತಾಯಿಯ ಒಳಗಿರುವ ಒಂದು ಬಾಹ್ಯ ಸಮಜಾತಿ ಕಸಿ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ತಾಯಿಯ ಪ್ರತಿರಕ್ಷಣಾ ವ್ಯವಸ್ಥೆಯಿಂದ ಆಕ್ರಮಿತವಾಗುವುದರಿಂದ ತಪ್ಪಿಸಿಕೊಳ್ಳುತ್ತದೆ.

ಈ ಉದ್ದೇಶಕ್ಕಾಗಿ, ಜರಾಯು ಹಲವಾರು ವಿಧಾನಗಳನ್ನು ಬಳಸಿಕೊಳ್ಳುತ್ತದೆ:

  • ಇದು ಫೋಸ್ಫೋಕೋಲಿನ್ ಅಣುಗಳನ್ನು ಒಳಗೊಂಡ ನ್ಯೂರೋಕಿನಿನ್ Bಯನ್ನು ಸ್ರವಿಸುತ್ತದೆ. ಈ ರೀತಿಯಾದ ವಿಧಾನವನ್ನು ಪರಾವಲಂಬಿ ನೆಮಟೋಡ್ ಗಳು(ವಲಯಗಳಿಲ್ಲದ ಉರುಳೆಯಾಕಾರದ ಉದ್ದವಾದ ಹುಳಗಳನ್ನೊಳಗೊಂಡ ಒಂದು ಜೀವಿವರ್ಗ) ತಮ್ಮ ಪರಪೋಷಿಗಳ ಪ್ರತಿರಕ್ಷಣಾ ವ್ಯವಸ್ಥೆಯ ಮೂಲಕ ಪತ್ತೆಯಾಗುವುದರಿಂದ ತಪ್ಪಿಸಿಕೊಳ್ಳಲು ಬಳಸುತ್ತವೆ.[]
  • ಅಲ್ಲದೇ, ಭ್ರೂಣದಲ್ಲಿ ಸಣ್ಣ ದುಗ್ಧಕಣದ ನಿರೋಧಕ ಕೋಶಗಳಿರುತ್ತವೆ, ಇವುಗಳು ಇಂಟರ್ಲ್ಯುಕಿನ್ 2ಗೆ ಪ್ರತಿಕ್ರಿಯೆಯಾಗಿ ನಿರೋಧಿಸಲ್ಪಡುವ ತಾಯಿಯ ಸೈಟೋಟಾಕ್ಸಿಕ್ T ಕೋಶಗಳನ್ನು ನಿರೋಧಿಸುತ್ತವೆ.[೧೦]

ಆದಾಗ್ಯೂ, ಜರಾಯು ಪ್ರತಿಬಂಧಕವು ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುವ ಏಕೈಕ ಮಾರ್ಗವಲ್ಲ. ಏಕೆಂದರೆ ಜರಾಯು ಪ್ರತಿಬಂಧಕದ ಇತರ ಭಾಗದಲ್ಲಿ, ತಾಯಿಯ ರಕ್ತ ಪರಿಚಲನೆಯಲ್ಲಿ ಬಾಹ್ಯ ಭ್ರೂಣ ಕೋಶಗಳೂ ಸಹ ಇರುತ್ತವೆ.[೧೧]

ಇತರ ಕ್ರಿಯೆಗಳು

ಬದಲಾಯಿಸಿ

ಜರಾಯು ಭ್ರೂಣಕ್ಕೆ ರಕ್ತದ ದ್ರವಾಶಯವನ್ನೂ ಸಹ ಒದಗಿಸುತ್ತದೆ. ರಕ್ತ ಸಂಚಯದ ಸಂಚಾಯಕಕ್ಕೆ ಹೋಲಿಸಿದರೆ ಕಡಿಮೆ ರಕ್ತದೊತ್ತಡ ಹಾಗು ಅದರ ವಿರುದ್ಧದ ಪರಿಸ್ಥಿತಿಗಳಲ್ಲಿ ರಕ್ತ ರವಾನೆ ಮಾಡುತ್ತದೆ.[೧೨]

ಗರ್ಭಾಶಯದ ಗೋಡೆಯಿಂದ ಶಾರೀರಿಕ ಬೇರ್ಪಡುವಿಕೆಯೊಂದಿಗೆ ಜರಾಯುವಿನ ಹೊರದೂಡಲ್ಪಡುವಿಕೆಯು ಉಂಟಾಗುತ್ತದೆ. ಜರಾಯು ಹೊರತಳ್ಳಲ್ಪಟ್ಟ ಸ್ವಲ್ಪ ಸಮಯದ ನಂತರ ಭ್ರೂಣವು ಹೊರತಳ್ಳಲ್ಪಡುವ ಅವಧಿಯನ್ನು ಪ್ರಸವದ ಮೂರನೇ ಹಂತ ವೆಂದು ಕರೆಯಲಾಗುತ್ತದೆ. ಮಗು ಜನನವಾದ 15-30 ನಿಮಿಷದೊಳಗೆ ಸಾಮಾನ್ಯವಾಗಿ ಜರಾಯು ಹೊರತಳ್ಳಲ್ಪಡುತ್ತದೆ.

ಜರಾಯುವಿನ ಹೊರದೂಡಲ್ಪಡುವಿಕೆಯನ್ನು ಸಕ್ರಿಯವಾಗಿ ನಿಭಾಯಿಸಬಹುದು. ಉದಾಹರಣೆಗೆ ಸ್ನಾಯುವಿನೊಳಗೆ ಆಕ್ಸಿಟೋಸಿನ್ ಚುಚ್ಚುಮದ್ದನ್ನು ನೀಡಿದರೆ ಹೊಕ್ಕಳುಬಳ್ಳಿಯ ಸೆಳೆತ ಉಂಟಾಗುತ್ತದೆ. ಇದು ಜರಾಯುವನ್ನು ಹೊರತಳ್ಳಲು ಸಹಕಾರಿಯಾಗಿದೆ. ಪರ್ಯಾಯವಾಗಿ, ಇದನ್ನು ನಿರೀಕ್ಷಿಸುವ ಮೂಲಕವೂ ನಿಭಾಯಿಸಬಹುದು. ಯಾವುದೇ ವೈದ್ಯಕೀಯ ನೆರವಿಲ್ಲದೆ ಜರಾಯುವನ್ನು ಹೊರತಳ್ಳಬಹುದು. ಕೋಚ್ರನ್ ದತ್ತಾಂಶ ಸಂಗ್ರಹದ ಅಧ್ಯಯನವು[೧೩], ಪ್ರಸವದ ಮೂರನೇ ಹಂತವನ್ನು ಅನುಭವಿಸುವ ಮಹಿಳೆಯರಲ್ಲಿ ರಕ್ತದ ನಷ್ಟ ಹಾಗು ಪ್ರಸವಾನಂತರ ಉಂಟಾಗುವ ರಕ್ತಸ್ರಾವದ ಅಪಾಯ ಕಡಿಮೆಯಿರುತ್ತದೆಂದು ಸೂಚಿಸುತ್ತದೆ.

ರೋಗಶಾಸ್ತ್ರ

ಬದಲಾಯಿಸಿ
 
ಜರಾಯುವಿಗೆ ತಗುಲಿದ ಸೈಟೋಮೆಗಲೋವೈರಸ್(CMV)ಸೋಂಕಿನ ಮೈಕ್ರೋ ಛಾಯಾಚಿತ್ರ(CMV ಪ್ಲಸೆಂಟಿಟಿಸ್).CMV ಸೋಂಕಿತ ಕೋಶದ ದೊಡ್ಡ ಬೀಜಕಣಗಳ ವೈಲಕ್ಷಣವು ಚಿತ್ರದ ಕೆಳಗಡೆ ಬಲಭಾಗದಲ್ಲಿ ಅಕೇಂದ್ರೀಯವಾಗಿ ಕಂಡುಬರುತ್ತಿದೆ. H&E ಕಲೆ.(ಹೆಮೊಟಾಕ್ಸಿಲಿನ್ ಮತ್ತು ಎಯೊಸಿನ್ ಚಿಕೆತ್ಸೆ)

ಹಲವಾರು ರೋಗಲಕ್ಷಣಗಳು ಜರಾಯುವಿನ ಮೇಲೆ ಪರಿಣಾಮವನ್ನುಂಟುಮಾಡಬಹುದು.

ಜರಾಯು ಬಹಳ ಆಳವಾಗಿ ಗರ್ಭಕೋಶದ ಗೋಡೆಗೆ ಅಂಟಿಕೊಂಡಾಗ:

  • ಜರಾಯು ಅಕ್ರೀಟ
  • ಜರಾಯು ಪ್ರಾವಿಯ
  • ಜರಾಯುವಿನ ತಡೆಯೊಡ್ಡುವಿಕೆ/ಅಬ್ರಪ್ಶಿಯೋ ಪ್ಲಸೆಂಟಿ

ಜರಾಯುವಿಗೆ ತಗುಲಬಹುದಾದ ಸೋಂಕುಗಳು

  • ಪ್ಲಸೆಂಟಿಟಿಸ್, ಉದಾಹರಣೆಗೆ ನಂಜುಕಾರಕ TORCH ಸೋಂಕುಗಳು.
  • ಕೊರಿಯೋಆಮ್ನಿಯೋನಿಟಿಸ್.

ಸಾಂಸ್ಕೃತಿಕ ಆಚರಣೆಗಳು ಹಾಗು ನಂಬಿಕೆಗಳು

ಬದಲಾಯಿಸಿ

ಜರಾಯು ಸಾಮಾನ್ಯವಾಗಿ ಮಾನವರ ವಿಭಿನ್ನ ಸಂಸ್ಕೃತಿಗಳಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಹಲವು ಸಮುದಾಯಗಳು ಇದನ್ನು ಹೊರಹಾಕಲು ಕೆಲವು ಆಚರಣೆಗಳನ್ನು ಪಾಲಿಸುತ್ತವೆ. ಪಾಶ್ಚಿಮಾತ್ಯ ಜಗತ್ತಿನಲ್ಲಿ, ಜರಾಯುವನ್ನು ಬಹುತೇಕವಾಗಿ ದಹನಮಾಡಲಾಗುತ್ತದೆ.[೧೪]

ಹಲವು ಸಮುದಾಯಗಳು ವಿವಿಧ ಕಾರಣಗಳಿಗಾಗಿ ಜರಾಯುವನ್ನು ಹೂಳುತ್ತಾರೆ. ನ್ಯೂಜಿಲೆಂಡ್ ನ ಮಾಓರಿ ಸಮುದಾಯದಲ್ಲಿ ಸಾಂಪ್ರದಾಯಿಕವಾಗಿ ನವಜಾತ ಶಿಶುವಿನ ಜರಾಯುವನ್ನು ಹೂತು ಹಾಕಿ, ಮಾನವ ಹಾಗು ಭೂಮಿಯ ನಡುವಿನ ಸಂಬಂಧಕ್ಕೆ ಪುಷ್ಟಿ ನೀಡುತ್ತಾರೆ.[೧೫] ಅದೇ ರೀತಿಯಲ್ಲಿ, ನವಾಜೋ ಸಮುದಾಯದಲ್ಲಿ ಜರಾಯು ಹಾಗು ಹೊಕ್ಕಳುಬಳ್ಳಿಯನ್ನು ನಿರ್ದಿಷ್ಟ ಸ್ಥಳದಲ್ಲಿ ಹೂತು ಹಾಕುತ್ತಾರೆ.[೧೬] ಅದರಲ್ಲೂ ವಿಶೇಷವಾಗಿ ಶಿಶುವು ಜನಿಸುವ ಸಮಯದಲ್ಲಿ ಸಾವನ್ನಪ್ಪಿದರೆ ಈ ರೀತಿಯ ಆಚರಣೆಯನ್ನು ಪಾಲಿಸುತ್ತಾರೆ.[೧೭] ಕಾಂಬೋಡಿಯಾ ಹಾಗು ಕೋಸ್ಟ ರಿಕಾದಲ್ಲಿ, ಜರಾಯುವಿನ ಹೂಳುವಿಕೆಯು ಶಿಶು ಹಾಗು ತಾಯಿಯ ಆರೋಗ್ಯವನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.[೧೮] ಪ್ರಸವದ ಸಮಯದಲ್ಲಿ ತಾಯಿಯು ಸಾವನ್ನಪ್ಪಿದರೆ, ಬೊಲಿವಿಯಾದ ಅಯ್ಮಾರ ಸಮುದಾಯವು, ಜರಾಯುವನ್ನು ಗೋಪ್ಯ ಸ್ಥಳದಲ್ಲಿ ಹೂತು ಹಾಕುತ್ತದೆ. ಈ ರೀತಿಯಾಗಿ ತಾಯಿಯ ಆತ್ಮವು ತನ್ನ ಮಗುವಿನ ಜೀವವನ್ನು ಮರು ಪಡೆಯಲು ಹಿಂದಿರುಗುವುದಿಲ್ಲವೆಂದು ನಂಬುತ್ತಾರೆ.[೧೯]

ಕೆಲವು ಸಮುದಾಯಗಳಲ್ಲಿ ಜರಾಯು, ಶಿಶುವಿನ ಅಥವಾ ಅದರ ತಂದೆತಾಯಿಗಳ ಜೀವದ ಮೇಲೆ ಅಧಿಕಾರ ಹೊಂದಿರುತ್ತದೆಂದು ಪರಿಗಣಿಸಲಾಗುತ್ತದೆ. ಬ್ರಿಟಿಶ್ ಕೊಲಂಬಿಯಾದ ಕ್ವಾಕಿಯುಟ್ಲ್ ಸಮುದಾಯವು ಹೆಣ್ಣು ಮಗುವಿನ ಜರಾಯುವನ್ನು ಹೂತು ಹಾಕಿದರೆ, ಮೃದ್ವಂಗಿಗಳ ಮಾದರಿ ಶೋಧನೆ ಮಾಡುವ ಕೌಶಲವು ಹೆಣ್ಣು ಶಿಶುವಿಗೆ ದೊರಕುತ್ತದೆಂದು ನಂಬುತ್ತದೆ. ಅಲ್ಲದೇ ಗಂಡು ಮಗುವಿನ ಜರಾಯುವನ್ನು ಡೊಂಬ ಕಾಗೆಗಳಿಗೆ ಆಹಾರವಾಗಿ ನೀಡಿದರೆ, ಅದು ಮುಂದಿನ ದಿನಗಳಲ್ಲಿ ಹುಡುಗನಿಗೆ ಭವಿಷ್ಯಹೇಳುವ ಸೂಕ್ಷ್ಮ ಅಂತರ್ದೃಷ್ಟಿಗೆ ಉತ್ತೇಜನಕಾರಿ ಎಂದು ನಂಬಲಾಗುತ್ತದೆ. ಟರ್ಕಿಯಲ್ಲಿ, ಜರಾಯು ಹಾಗು ಹೊಕ್ಕಳುಬಳ್ಳಿಯ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಮುಗುವಿಗೆ ಭವಿಷ್ಯದಲ್ಲಿ ಧಾರ್ಮಿಕತೆಯನ್ನು ಉತ್ತೇಜಿಸುತ್ತದೆಂದು ನಂಬಲಾಗಿದೆ. ಉಕ್ರೈನ್, ಟ್ರ್ಯಾನ್ಸಿಲ್ವೇನಿಯ ಹಾಗು ಜಪಾನಿನಲ್ಲಿ, ಹೊರಹಾಕಲ್ಪಟ್ಟ ಜರಾಯುವಿನೊಂದಿಗಿನ ಪಾರಸ್ಪರಿಕ ಕ್ರಿಯೆಯು, ಪೋಷಕರ ಭವಿಷ್ಯದ ಫಲವಂತಿಕೆಯ ಮೇಲೆ ಪ್ರಭಾವ ಬೀರುತ್ತದೆಂದು ಪರಿಗಣಿಸಲಾಗಿದೆ.

ಹಲವು ಸಂಸ್ಕೃತಿಗಳಲ್ಲಿ ಜರಾಯು ಅಸ್ತಿತ್ವದಲ್ಲಿರುತ್ತದೆಂದು ಅಥವಾ ಜೀವಂತವಾಗಿರುತ್ತದೆಂದು ನಂಬಲಾಗುತ್ತದೆ, ಸಾಮಾನ್ಯವಾಗಿ ಇದು ಮಗುವಿನೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ನೇಪಾಳಿಗಳು, ಜರಾಯು ಮಗುವಿನ ಒಡನಾಡಿಯೆಂದು ನಂಬಿದರೆ; ಮಲೇಷಿಯಾದ ಒರಂಗ್ ಅಸ್ಲಿ ಸಮುದಾಯವು ಇದನ್ನು ಮಗುವಿನ ಅಗ್ರಜನೆಂದು ಪರಿಗಣಿಸುತ್ತದೆ. ನೈಜೀರಿಯಾದ ಇಬೋ ಸಮುದಾಯವು, ಜರಾಯುವನ್ನು ಮಗುವಿನ ತೀರಿಕೊಂಡ ಅವಳಿ ಎಂದು ಪರಿಗಣಿಸಲಾಗುತ್ತದೆ, ಜೊತೆಗೆ ಇದಕ್ಕೆ ಸಂಪೂರ್ಣವಾಗಿ ಶವಸಂಸ್ಕಾರವನ್ನು ನಡೆಸಲಾಗುತ್ತದೆ.[೧೮] ಹವಾಯಿ ಮೂಲನಿವಾಸಿಗಳು, ಜರಾಯುವನ್ನು ಮಗುವಿನ ಒಂದು ಅಂಗವೆಂದು ಪರಿಗಣಿಸುತ್ತಾರೆ, ಜೊತೆಗೆ ಇದನ್ನು ಸಾಂಪ್ರದಾಯಿಕವಾಗಿ ಒಂದು ಗಿಡದೊಂದಿಗೆ ನೆಡುತ್ತಾರೆ, ಈ ರೀತಿಯಾಗಿ ಮಗುವು ಬೆಳವಣಿಗೆಯಾಗುತ್ತಿದ್ದಂತೆ ಮರವೂ ಬೆಳೆಯುತ್ತಿರುತ್ತದೆ.[೧೪]

ಕೆಲವು ಸಂಸ್ಕೃತಿಗಳಲ್ಲಿ, ಜರಾಯುವನ್ನು ಸೇವಿಸಲಾಗುತ್ತದೆ, ಈ ಅಭ್ಯಾಸವನ್ನು ಪ್ಲಸೆಂಟೋಫಜಿ ಎಂದು ಕರೆಯಲಾಗುತ್ತದೆ. ಕೆಲವು ಸಂಸ್ಕೃತಿಗಳಲ್ಲಿ, ಉದಾಹರಣೆಗೆ ಚೀನಾ ಹಾಗು ಹಾಂಗ್ ಕಾಂಗ್ ನಲ್ಲಿ, ಜರಾಯು ಬಹಳ ಆರೋಗ್ಯಕರವೆಂದು ಪರಿಗಣಿಸಿ ಔಷಧಗಳಲ್ಲಿ ಹಾಗು ಹಲವಾರು ಔಷಧೀಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.[೨೦]

ಅಧಿಕ ಚಿತ್ರಗಳು

ಬದಲಾಯಿಸಿ

ಇವನ್ನೂ ನೋಡಿ

ಬದಲಾಯಿಸಿ
  • ಭ್ರೂಣ
  • ಮಗು ಜನನ
  • ಗರ್ಭಕೋಶ

ಉಲ್ಲೇಖಗಳು

ಬದಲಾಯಿಸಿ
  1. ಪೌಗ್ಹ್ ಮತ್ತಿತರರು 1992. ಹರ್ಪೆಟಾಲಜಿ: ಮೂರನೇ ಆವೃತ್ತಿ ಪಿಯರ್ಸನ್ ಪ್ರೆನ್ಟಿಸ್ ಹಾಲ್: ಪಿಯರ್ಸನ್ ಎಜುಕೇಶನ್ Inc., 2002.
  2. ಹೆನ್ರಿ ಜಾರ್ಜ್ ಲಿಡ್ಡೆಲ್, ರಾಬರ್ಟ್ ಸ್ಕಾಟ್, "ಏ ಗ್ರೀಕ್-ಇಂಗ್ಲಿಷ್ ಲೆಕ್ಸಿಕಾನ್" ಪೆರ್ಸೆಯುಸ್ ನಲ್ಲಿ
  3. "ಜರಾಯುವಿನ ತಪಾಸಣೆ". Archived from the original on 2011-10-16. Retrieved 2011-02-01.
  4. http://www.vivo.colostate.edu/hbooks/pathphys/reprod/placenta/structure.html Archived 2016-02-11 ವೇಬ್ಯಾಕ್ ಮೆಷಿನ್ ನಲ್ಲಿ. ಜರಾಯುವಿನ ರಚನೆ ಹಾಗು ವಿಂಗಡಣೆ
  5. "ಜರಾಯುವಿನ ರಕ್ತ ಪರಿಚಲನೆ". Archived from the original on 2017-07-04. Retrieved 2011-02-01.
  6. ೬.೦ ೬.೧ doi:10.1002/pd.1062
    This citation will be automatically completed in the next few minutes. You can jump the queue or expand by hand
  7. ಸಿಮಿಸ್ಟರ್, N.E., ಹಾಗು ಸ್ಟೋರಿ, C.M. 1997. "ಮಾನವ ಜರಾಯುವಿನ ಫಕ್ ಗ್ರಾಹಕಗಳು ಹಾಗು ತಾಯಿಯಿಂದ ಭ್ರೂಣಕ್ಕೆ ಪ್ರತಿಕಾಯಗಳ ಸಂವಹನೆ." ಜರ್ನಲ್ ಆಫ್ ರಿಪ್ರೋಡಕ್ಟೀವ್ ಇಮ್ಮ್ಯುನಾಲಜಿ 37: 1-23.
  8. ಪಿಲ್ಲಿಟ್ಟೆರಿ, ಅಡೆಲೆ(2010). ಮೇಟರ್ನಲ್ ಅಂಡ್ ಚೈಲ್ಡ್ ಹೆಲ್ತ್ ನರ್ಸಿಂಗ್(6ನೇ ಆವೃತ್ತಿ [ಫಿಲಿಪೀನ್ ಆವೃತ್ತಿ]): ಲಿಪ್ಪಿನ್ಕಾಟ್ ವಿಲಿಯಮ್ಸ್ & ವಿಲ್ಕಿನ್ಸ್
  9. "Placenta 'fools body's defences'". BBC News. 10 November 2007.
  10. Clark DA, Chaput A, Tutton D (1986). "Active suppression of host-vs-graft reaction in pregnant mice. VII. Spontaneous abortion of allogeneic CBA/J x DBA/2 fetuses in the uterus of CBA/J mice correlates with deficient non-T suppressor cell activity". J. Immunol. 136 (5): 1668–75. PMID 2936806. Archived from the original on 2020-05-31. Retrieved 2011-02-01. {{cite journal}}: Unknown parameter |month= ignored (help)CS1 maint: multiple names: authors list (link)
  11. Williams Z, Zepf D, Longtine J; et al. (2008). "Foreign fetal cells persist in the maternal circulation". Fertil. Steril. 91 (6): 2593–5. doi:10.1016/j.fertnstert.2008.02.008. PMID 18384774. {{cite journal}}: Explicit use of et al. in: |author= (help); Unknown parameter |month= ignored (help)CS1 maint: multiple names: authors list (link)
  12. PMID 11299282 (PubMed)
    Citation will be completed automatically in a few minutes. Jump the queue or expand by hand
  13. doi:10.1002/14651858.CD000007
    This citation will be automatically completed in the next few minutes. You can jump the queue or expand by hand
  14. ೧೪.೦ ೧೪.೧ "Why eat a placenta?". BBC. 18 April 2006. Retrieved 8 January 2008.
  15. ಮೆಟ್ಗೆ, ಜೋಆನ್. 2005. "ವರ್ಕಿಂಗ್ ಇನ್/ಪ್ಲೇಯಿಂಗ್ ವಿಥ್ ತ್ರೀ ಲಾಂಗ್ವೇಜಸ್: ಇಂಗ್ಲೀಷ್, ಟೆ ರೆಯೋ ಮಾಓರಿ, ಅಂಡ್ ಮಾಓರಿ ಬೋಡ್ ಲಾಂಗ್ವೇಜ್." ಸೈಟ್ಸ್ ನಲ್ಲಿ N.S ಸಂಪುಟ. 2, No 2:83-90.
  16. Francisco, Edna (3 December 2004). "Bridging the Cultural Divide in Medicine". Minority Scientists Network. Archived from the original on 19 ಡಿಸೆಂಬರ್ 2007. Retrieved 7 January 2008.
  17. Shepardson, Mary (1978). "Changes in Navajo Mortuary Practices and Beliefs". American Indian Quarterly. University of Nebraska Press. Retrieved 7 January 2008.
  18. ೧೮.೦ ೧೮.೧ Buckley, Sarah J. "Placenta Rituals and Folklore from around the World". Mothering. Archived from the original on 6 January 2008. Retrieved 7 January 2008.
  19. Davenport, Ann (2005). "The Love Offer". Johns Hopkins Magazine. Retrieved 7 January 2008. {{cite web}}: Unknown parameter |month= ignored (help)
  20. Falcao, Ronnie. "Medicinal Uses of the Placenta". Retrieved 25 November 2008.


ಬಾಹ್ಯ ಕೊಂಡಿಗಳು

ಬದಲಾಯಿಸಿ


  • ದಿ ಪ್ಲಸೆಂಟ Archived 2012-05-04 ವೇಬ್ಯಾಕ್ ಮೆಷಿನ್ ನಲ್ಲಿ., gynob.com, ವಿಲಿಯಮ್ಸ್ ಅಬ್ಸ್ಟೆಟ್ರಿಕ್ಸ್ ನಿಂದ ಆಯ್ದ ಉಲ್ಲೇಖಗಳೊಂದಿಗೆ, 18ನೇ ಆವೃತ್ತಿ, F. ಗ್ಯಾರಿ ಕನ್ನಿಂಗ್ಹ್ಯಾಮ್, M.D., ಪಾಲ್ C. ಮ್ಯಾಕ್ ಡೊನಾಲ್ಡ್, M.D., ನಾರ್ಮನ್ F. ಗ್ರ್ಯಾಂಟ್, M.D., ಆಪಲ್ಟನ್ & ಲಾಂಗೆ, ಪ್ರಕಾಶಕರು.