ಜಗತ್ ಪ್ರಕಾಶ್ ನಡ್ಡಾ

ಜಗತ್ ಪ್ರಕಾಶ್ ನಡ್ಡಾ ಒಬ್ಬ ಭಾರತೀಯ ರಾಜಕಾರಣಿ ಮತ್ತು ಪ್ರಸ್ತುತ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರಾಗಿದ್ದಾರೆ.[] ಕೇಂದ್ರ ಸರ್ಕಾರದ ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿರುವ ಇವರು, ಹಿಮಾಚಲ ಪ್ರದೇಶದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈ ಹಿಂದೆ ಅವರು ಹಿಮಾಚಲ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದರು.

ಜಗತ್ ಪ್ರಕಾಶ್ ನಡ್ಡಾ
ಜಗತ್ ಪ್ರಕಾಶ್ ನಡ್ಡಾ

Assembly Member
for ಬಿಲಾಸ್ಪುರ್
ಪೂರ್ವಾಧಿಕಾರಿ '

ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರು

ಭಾರತೀಯ ಜನತಾ ಪಕ್ಷದ ಕಾರ್ಯಕಾರಿ ಅಧ್ಯಕ್ಷರು
ಹಾಲಿ
ಅಧಿಕಾರ ಸ್ವೀಕಾರ 
೧೭ ಜೂನ್ ೨೦೧೯

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
ಅಧಿಕಾರ ಅವಧಿ
೯ ನವೆಂಬರ್ ೨೦೧೪ – ೩೦ ಮೇ ೨೦೧೯
ಪ್ರಧಾನ ಮಂತ್ರಿ ನರೇಂದ್ರ ಮೋದಿ

ಹಿಮಾಚಲ ಪ್ರದೇಶದ ರಾಜ್ಯಸಭಾ ಸದಸ್ಯರು
ಹಾಲಿ
ಅಧಿಕಾರ ಸ್ವೀಕಾರ 
೩ ಏಪ್ರಿಲ್ ೨೦೧೨

ಹಿಮಾಚಲ ಪ್ರದೇಶದ ಅರಣ್ಯ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
ಅಧಿಕಾರ ಅವಧಿ
೨೦೦೭ – ೨೦೧೨

ಹಿಮಾಚಲ ಪ್ರದೇಶ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳು
ಅಧಿಕಾರ ಅವಧಿ
೧೯೯೮ – ೨೦೦೩
ಅಧಿಕಾರ ಅವಧಿ
೨೦೦೭ – ೨೦೧೨
ಅಧಿಕಾರ ಅವಧಿ
೧೯೯೩ – ೨೦೦೩
ವೈಯಕ್ತಿಕ ಮಾಹಿತಿ
ಜನನ (1960-12-02) ೨ ಡಿಸೆಂಬರ್ ೧೯೬೦ (ವಯಸ್ಸು ೬೩)
ಪಾಟ್ನಾ, ಬಿಹಾರ, ಭಾರತ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ

ಆರಂಭಿಕ ಜೀವನ

ಬದಲಾಯಿಸಿ

ಅವರು ಡಿಸೆಂಬರ್ ೨, ೧೯೬೦ ರಂದು ಡಾ. ನರೈನ್ ಲಾಲ್ ನಡ್ಡಾ ಮತ್ತು ಶ್ರೀಮತಿ ಕೃಷ್ಣಾ ನಡ್ಡಾ ದಂಪತಿಗೆ ಜನಿಸಿದರು. ಪಾಟ್ನಾದ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಶಿಕ್ಷಣ ಪಡೆದ ನಂತರ ಅವರು ತಮ್ಮ ಬಿ.ಎ. ಪದವಿಯನ್ನು ಪಾಟ್ನಾ ವಿಶ್ವವಿದ್ಯಾಲಯದಿಂದ ಮತ್ತು ಎಲ್.ಎಲ್.ಬಿ.ಯನ್ನು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಿಂದ ಪಡೆದರು. ಅದಲ್ಲದೆ ದೆಹಲಿಯಲ್ಲಿ ನಡೆದ ಅಖಿಲ ಭಾರತ ಜೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಬಿಹಾರ ರಾಜ್ಯವನ್ನು ಅವರು ಪ್ರತಿನಿಧಿಸಿದ್ದರು. ೧೧ ಡಿಸೆಂಬರ್ ೧೯೯೧ ರಂದು ವಿವಾಹವಾದರು.

ರಾಜಕೀಯ ಜೀವನ

ಬದಲಾಯಿಸಿ

೧೯೯೩ರ ಚುನಾವಣೆಯಲ್ಲಿ ನಡ್ಡಾರವರು ಮೊದಲ ಬಾರಿಗೆ ಹಿಮಾಚಲ ಪ್ರದೇಶ ವಿಧಾನಸಭೆಗೆ ಆಯ್ಕೆಯಾದರು. ನಂತರ ೧೯೯೮ರಲ್ಲಿ ಮತ್ತೆ ಆಯ್ಕೆಯಾದರು. ಅವರ ಮೊದಲ ಅವಧಿಯಲ್ಲಿ ಹಿಮಾಚಲ ಪ್ರದೇಶ ವಿಧಾನಸಭೆಯ ತಮ್ಮ ಪಕ್ಷದ ನಾಯಕರಾಗಿ ೧೯೯೪ ರಿಂದ ೧೯೯೮ ರವರೆಗೆ ಸೇವೆ ಸಲ್ಲಿಸಿದ್ದರು. ತಮ್ಮ ಎರಡನೇ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. ೨೦೦೭ರ ಚುನಾವಣೆಯಲ್ಲಿ ನಡ್ಡಾ ಅವರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಲಾಯಿತು. ಪ್ರೇಮ್ ಕುಮಾರ್ ಧುಮಾಲ್ ಸರ್ಕಾರ ರಚಿಸಿದ ನಂತರ, ಅವರು ೨೦೦೮ ರಿಂದ ೨೦೧೦ ರವರೆಗೆ ಅರಣ್ಯ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನದ ಜವಾಬ್ದಾರಿಯುತ ಕ್ಯಾಬಿನೆಟ್ ಸಚಿವರಾಗಿ ನಡ್ಡಾ ಅವರನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಂಡರು. ನಡ್ಡಾರವರು ೨೦೧೨ರಲ್ಲಿ ವಿಧಾನಸಭೆಗೆ ಸ್ಪರ್ಧಿಸಲಿಲ್ಲ, ಬದಲಿಗೆ ಭಾರತೀಯ ಸಂಸತ್ತಿನ ಮೇಲ್ಮನೆಯ ರಾಜ್ಯಸಭೆಗೆ ಆಯ್ಕೆಯಾದರು. ೨೦೧೪ರಲ್ಲಿ ಕ್ಯಾಬಿನೆಟ್ ಪುನರಚನೆಯ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಸಚಿವರಾಗಿ ನಡ್ಡಾ ಅವರನ್ನು ಆಯ್ಕೆ ಮಾಡಿದರು. ೨೦೧೯ರಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದರು.

ಪೂರಕ ಮಾಹಿತಿ

ಬದಲಾಯಿಸಿ


ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2019-06-19. Retrieved 2019-06-20.