ಛಾಯಾ ಸಿಂಗ್
ಛಾಯಾ ಸಿಂಗ್ ಒಬ್ಬ ಭಾರತೀಯ ನಟಿಯಾಗಿದ್ದು , ಅವರು ಪ್ರಧಾನವಾಗಿ ತಮಿಳು ಮತ್ತು ಕನ್ನಡ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳು ಹಾಗೂ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಾರೆ. [೧] ಕನ್ನಡ ಚಲನಚಿತ್ರಗಳಲ್ಲಿ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ತಮಿಳು, ಮಲಯಾಳಂ, ತೆಲುಗು, ಬಂಗಾಳಿ ಮತ್ತು ಭೋಜ್ಪುರಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ [೨] .
ಛಾಯಾ ಸಿಂಗ್ | |
---|---|
ಇತರೆ ಹೆಸರು | ಛಾಯಾ ಕೃಷ್ಣನ್ |
ನಾಗರಿಕತೆ | ಭಾರತೀಯ |
ವೃತ್ತಿ | ನಟಿ |
ಸಂಗಾತಿ |
ಕೃಷ್ಣ (m. ೨೦೧೨) |
ಪೋಷಕ(ರು) | ಗೋಪಾಲ್ ಸಿಂಗ್, ಚಮನ್ ಲತಾ |
ಹಿಂದಿನ ಜೀವನ
ಬದಲಾಯಿಸಿಇವರು ರಜಪೂತ ಕುಟುಂಬಕ್ಕೆ ಸೇರಿದವರು ಆಗಿದ್ದಾರೆ[೩]. ಇವರು ಬೆಂಗಳೂರುನಲ್ಲಿ ಬೆಳೆದರು. ಬೆಂಗಳೂರಿನ ಲೌರ್ಡೆಸ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು ಮತ್ತು ಅಲ್ಲಿ ಹನ್ನೆರಡನೇ ತರಗತಿಯವರೆಗೆ ಅಧ್ಯಯನ ಮಾಡಿದ್ದಾರೆ[೪] .
ವೃತ್ತಿ ಜೀವನ
ಬದಲಾಯಿಸಿಮೊದಲ ಚಲನಚಿತ್ರ ಪಾತ್ರವು ಮುನ್ನೂಡಿಯಲ್ಲಿ ಆಗಿತ್ತು. [೫] ಇವರು ಗಿರೀಶ್ ಕಾಸರವಳ್ಳಿ ನಿರ್ದೇಶನದ ಹಸೀನಾ ಸೇರಿದಂತೆ ತುಂಟಾಟ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರಗಳು ಯಶಸ್ವಿಯಾದ ಬಳಿಕ ಕನ್ನಡದ ಹೆಚ್ಚಿನ ಚಲನಚಿತ್ರಗಳನ್ನು ಮಾಡಿದರು. ದಿನೇಶ್ ಬಾಬೂರ ಚಿಟ್ಟೆ ಮತ್ತು ಸಾಯಿ ಪ್ರಕಾಶ್ ಅವರ ರೌಡಿ ಅಳಿಯಾದಲ್ಲಿ ಕೂಡ ನಟಿಸಿದರು.
ಕನ್ನಡ ಚಿತ್ರರಂಗದಲ್ಲಿ ಕೆಲವು ಅವಕಾಶಗಳನ್ನು ಪಡೆದ ನಂತರ ಇವರು ತಮಿಳು ಚಲನಚಿತ್ರರಂಗಕ್ಕೆ ಹೋದರು [೬]. ಸಿಂಗ್ ಅವರ ಅತ್ಯಂತ ಪ್ರಸಿದ್ಧ ಚಲನಚಿತ್ರ ತಮಿಳು ಭಾಷೆಯ ತಿರುಡಾ ತಿರುಡಿ , ಇದು ಜನಪ್ರಿಯ ಹಾಡು " ಮನ್ಮಧ ರಾಸ'' ಅನ್ನು ಹೊಂದಿದೆ. [೭][೮] ಅದರ ಕನ್ನಡ ರಿಮೇಕ್ಸಖ ಸಖಿಯಲ್ಲೂ ನಟಿಸಿದರು. ಇದು ಮೂಲಕ್ಕಿಂತ ಭಿನ್ನವಾಗಿ ಯಶಸ್ವಿಯಾಗಲಿಲ್ಲ. [೯][೭][೧೦] ಚಾಯಾ ಅವರು ಅಷ್ಟೇನೂ ಪ್ರಸಿದ್ಧವಲ್ಲದ ಚಿತ್ರಗಳಾದ ಕವಿತಾಯ್ ಮತ್ತು ಜೈಸೂರ್ಯಾ ಚಿತ್ರಗಳಲ್ಲಿ ನಟಿಸಿದರು. ಅರುಲ್ ಮತ್ತು ತಿರುಪಚಿ ಚಿತ್ರಗಳಲ್ಲಿ ಐಟಂ ನಂಬರ್ಗಳನ್ನು ಮಾಡಿದರು, ಆದರೂ ಅವುಗಳನ್ನು ಮಾಡಲು ಇಷ್ಟಪಡುವುದಿಲ್ಲ ಎಂದು ಇವರು ಹೇಳಿದ್ದಾರೆ. [೧೧][೧೨] ವಲ್ಲಮೈ ತರಾಯೋ ಚಿತ್ರದೊಂದಿಗೆ ತಮಿಳು ಚಿತ್ರರಂಗಕ್ಕೆ ಮರಳಿದರು ಮತ್ತು ನಂತರ ಅಲೌಕಿಕ ರೋಮಾಂಚಕ ಚಿತ್ರ ಆನಂದಪುರತ್ತು ವೀಡು 7 ನಲ್ಲಿ ನಟಿಸಿದರು.
2008ರಲ್ಲಿ ಬಿಡುಗಡೆಯಾದ ಕನ್ನಡ ಆಕಾಶ ಗಂಗೆ ಯಲ್ಲಿಅವರು ಅಭಿನಯಿಸಿದ್ದಾರೆ. [೧೩] ಚಿತ್ರದಲ್ಲಿನ ಅವರ ಅಭಿನಯದ ಬಗ್ಗೆ ರೆಡಿಫ್ ಬರೆದಿದ್ದಾರೆಃ " ಚಿತ್ರದ ಪ್ರಮುಖ ಅಂಶವೆಂದರೆ; ತನ್ನ ಪ್ರೇಮಿಯ ಕುಟುಂಬವನ್ನು ಗೆಲ್ಲಲು ಆತನ ಮನೆಗೆ ಬರುವ ಸಂಗೀತ ಶಿಕ್ಷಕಿಯಾಗಿ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ಸಿಫೈ ಬರೆದರುಃ " ಇದು ಛಾಯಾ ಸಿಂಗ್ ಅವರ ಮತ್ತೊಂದು ಅತ್ಯುತ್ತಮ ಅಭಿನಯವಾಗಿದೆ[೧೪]. ಆಕೆ ತನ್ನ ಸುಂದರವಾದ ಕಣ್ಣುಗಳಿಂದ ಮಾತನಾಡುತ್ತಾಳೆ . ಕನ್ನಡ ಕಿರುಚಿತ್ರ ಸಿಂಪ್ಲಿ ಕೈಲಾವೆಸ್ಮ್[೧೫] ನಟಿಸಿದ್ದಾರೆ. ನಾಟಕಕಾರ ಟಿ. ಪಿ. ಕೈಲಾಸಂ ಅವರ ನಾಟಕದ ಮೇಲೆ ನಿರ್ಮಿಸಲಾದ ಈ ಕಿರುಚಿತ್ರವು ಕೈಲಾಸಂ ಮತ್ತು ಅವರ ನಾಲ್ಕು ನಾಟಕಗಳ ಮಹಿಳಾ ಪಾತ್ರಧಾರಿಗಳ ನಡುವಿನ ಸಂಭಾಷಣೆಗಳ ಸುತ್ತ ಸುತ್ತುತ್ತದೆ.. ಸಿಂಗ್ ಎಲ್ಲಾ ನಾಲ್ಕು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೋಮ್ ರೂಲ್ ನಿಂದ ವೆಂಕಮ್ಮ , ಟೊಲ್ಲುಗಟ್ಟಿಯಿಂದ ಪಾಟು, ಗಂಡಸಕತ್ರಿಯಿಂದ ಈಕೆ ಮತ್ತು ಸೂಳೆ ನಾಟಕದಿಂದ ಸೂಳೆ[೧೬].
ವಿ. ಕೆ. ಪ್ರಕಾಶ್ ನಿರ್ದೇಶನದ ಮುಲ್ಲವಲ್ಲಿಯುಂ ತೆನ್ಮವುಂ ಮತ್ತು ಪೊಲೀಸ್ ಎಂಬ ಎರಡು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ[೧೭] . 2008ರ ಆಕೆ ಎರಡು ಭೋಜ್ಪುರಿ ಚಲನಚಿತ್ರಗಳಲ್ಲಿ ನಟಿಸುತ್ತಿದ್ದರು[೧೮]. ಮೊದಲ ಭೋಜ್ಪುರಿ ಬಿಡುಗಡೆಯ ಚಿತ್ರ ಮಹಾಮಾಯಿ [೧೯] ಆಗಿದೆ. ಬಂಗಾಳಿ ಚಲನಚಿತ್ರವನ್ನೂ ನಿರ್ದೇಶಿಸಿದ್ದಾರೆ [೨೦].
ಈ- ಟಿವಿಯ ಸರೋಜಿನಿ ಮತ್ತು ಪ್ರೇಮ ಕಥೆಗಲ್ಲು ಮುಂತಾದ ಕನ್ನಡ ಟಿವಿ ಕಾರ್ಯಕ್ರಮಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿದ್ದಾರೆ[೨೧] . ಸನ್ ಟಿವಿ ಪ್ರಸಾರವಾಗುವ ತಮಿಳು ಧಾರಾವಾಹಿ ನಾಗಮ್ಮ ನಟಿಸಿದ್ದಾರೆ[೨೨]. ಕನ್ನಡ ದೂರದರ್ಶನ ವಾಹಿನಿಯಲ್ಲಿ ಕುಣಿಯೋಣ ಬಾರಾ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದರು [೨೩]. 2012 ಆಕೆ ಮಾ ಟಿವಿ ಪ್ರಸಾರವಾಗುತ್ತಿರುವ ತೆಲುಗು ಧಾರಾವಾಹಿ " ಕಾಂಚನಾ ಗಂಗಾ " ದಲ್ಲಿ ನಟಿಸುತ್ತಿದ್ದಾರೆ[೨೪]. ಕೆಲವು ವರ್ಷಗಳಿಂದ ಆಕೆ ಕೆಲವು ತಮಿಳು ಚಲನಚಿತ್ರಗಳನ್ನು ಮಾಡುತ್ತಿದ್ದಾರೆ [೨೫] .
ವೈಯಕ್ತಿಕ ಜೀವನ
ಬದಲಾಯಿಸಿಛಾಯಾ ಸಿಂಗ್ ಅವರ ಪೋಷಕರು ಗೋಪಾಲ್ ಸಿಂಗ್ ಮತ್ತು ಚಮನ್ ಲತಾ. [೨೬] ಜೂನ್ 2012 ರಲ್ಲಿ ತಮಿಳು ನಟ ದೈದೈವಮಗಲ್ ಖ್ಯಾತಿಯ ಕೃಷ್ಣ ಅವರನ್ನು ವಿವಾಹವಾದರು.
ಚಲನಚಿತ್ರಗಳ ಪಟ್ಟಿ
ಬದಲಾಯಿಸಿವರ್ಷ | ಸಿನಿಮಾ | ಪಾತ್ರ | ಭಾಷೆ | ಇತರೆ ಟಿಪ್ಪಣಿಗಳು |
---|---|---|---|---|
2000 | ಮುನ್ನುಡಿ | ಉನ್ನಿಸ | ಕನ್ನಡ | |
2001 | ಚಿಟ್ಟೆ | ಶಾಂತಿ | ||
2001 | ರಾಷ್ಟ್ರಗೀತೆ | ಅತಿಥಿ ಪಾತ್ರ | ||
2002 | ಗುಟ್ಟು | ಶ್ರೇಯ | ||
2002 | ತುಂಟಾಟ | ಪ್ರಿಯಾ | ||
2002 | ಬಲಗಾಲಿಟ್ಟು ಒಳಗೆ ಬಾ | ಗೌರಿ | ||
2003 | ಪ್ರೀತಿಸಲೇಬೇಕು | ? | ||
2003 | ತಿರುಂಡ ತಿರುಡಿ | ವಿಜಯಲಕ್ಷ್ಮೀ (ವಿಜಿ) | ತಮಿಳು | |
2003 | ಮುಲ್ಲವಲಿಯಂ ತೆನಮಾವಂ | ರಾಜಶ್ರೀ | ಮಲಯಾಳಂ | |
2004 | ಕವಿತಾಯೈ | ಸುಬ್ಬಲಕ್ಷ್ಮೀ | ತಮಿಳು | |
2004 | ರೌಡಿ ಅಳಿಯ | ಕುಪ್ಪಮ್ಮ | ಕನ್ನಡ | |
2004 | ಅರುಲ್ | ಪೊನ್ನಿ | ತಮಿಳು | ವಿಶೇಷ ಪಾತ್ರ ಮುರುದ ಮಲಯೈ ಆದಿವಾರಂ ಹಾಡು |
2004 | ಅಮ್ಮ ಅಪ್ಪ ಚೇಲಮ್ | ನಂದಿತಾ | ||
2004 | ಜೈಸೂರ್ಯ | ಚಾರುಪ್ರಿಯ | ||
2005 | ತಿರುಪಾಚಿ | ಸ್ವತಃ | ವಿಶೇಷ ಪಾತ್ರ ಕುಂಬ್ಡು ಪೊನ ದೇವಿಂ ಹಾಡು | |
2005 | ಸಖ ಸಖೀ | ವಿಜಿ | ಕನ್ನಡ | |
2005 | ಪೋಲಿಸ್ 2005 | ಕೀರ್ತಿ | ಮಲಯಾಳಂ | |
2005 | No (ನೋ) | ಪ್ರಿಯಾ | ತೆಲುಗು | |
2008 | ಮಲ್ಲಮೈ ತಾರಾಯೋ | ನಂದಿತಾ | ತಮಿಳು | |
2008 | ಆಕಾಶ ಗಂಗೆ | ಬೀನಾ/ಲಕ್ಷ್ಮೀ | ಕನ್ನಡ | |
2010 | ಅನ್ನದಪುರತ್ತು ವೀಡು | ರೇವತಿ ಬಾಲ | ತಮಿಳು | |
2012 | ಕೀ ಕೊರೆ ಬೋಜಾಬೊ ಟುಮ್ಕೆ | ಸ್ವಪ್ನ | ಬಂಗಾಳಿ | ನಿರ್ದೇಶಕಿಯಾಗಿ ಕೂಡ |
2014 | ಇದು ಕಾಂತಿವಿಲನ್ ಕಾದಾಲ್ | ವಿನೀತ್ರ | ತಮಿಳು | |
2016 | ಉಯಿರೆ ಉಯಿರೆ | ದಿವ್ಯ | ||
2017 | ಪವರ್ ಪಾಂಡಿ | ಪ್ರೇಮಲತಾ | ||
2017 | ಮುಫ್ತಿ | ವೇದಾವತಿ | ಕನ್ನಡ | |
2017 | ಉಲ್‌ಕುಥು | ರಾಜನ್ ಸೋದರಿಯಾಗಿ | ತಮಿಳು | |
2018 | ಇರುವುಕ್ಕು ಆಯಿರಾಮ್ ಕಾಂಗಲ್ | ರೂಪಲ್ | ||
2018 | ಪಟ್ಟಿನ್‌ಪಾಕಮ್ಮ್ | ಶಿಬಾ | ||
2019 | ಆಕ್ಷ್ಯನ್ 2019 | ಕಾವ್ಯಲ್‌ವಿಝಿ | ||
2020 | ಖಾಕಿ 2020 | ಛಾಯ | ಕನ್ನಡ | |
2022 | ಲಿಲ್ಲಿ ರಾಣಿ | ರಾಣಿ | ತಮಿಳು | |
2023 | ತಮಿಳ್ ಅರಸನ್ | ತಮಿಳು |
ದೂರದರ್ಶನ
ಬದಲಾಯಿಸಿವರ್ಷ | ಶಿರ್ಷೀಕೆ | ಪಾತ್ರ | ವಾಹಿನಿ | ಭಾಷೆ |
---|---|---|---|---|
ಸರೋಜಿನಿ | ಸರೋಜಿನಿ | ಝೀ ಕನ್ನಡ | ಕನ್ನಡ | |
ಪ್ರೇಮ ಕಥೆಗಳು | ಕಲರ್ಸ್ ಕನ್ನಡ | |||
2011–2012 | ನಾಗಮ್ಮ | ನಾಗಮ್ಮ | ಸನ್ ಟಿವಿ | ತಮಿಳು |
2012 | ಕುಣಿಯೋಣಾ ಬಾರಾ | ತೀರ್ಪುಗಾರ್ತಿ | ಝೀ ಕನ್ನಡ | ಕನ್ನಡ |
ಹಾಲು ಜೇನು ನಾನು ನೀನು | ನಿರೂಪಕಿ | |||
2012–2014 | ಕಾಂಚನ ಗಂಗ | ಸ್ಟಾರ್ ಮಾ | ತೆಲುಗು | |
2019–2020 | ರನ್ | ದಿವ್ಯ | ಸನ್ ಟಿವಿ | ತಮಿಳು |
ನಂದಿನಿ | ನಂದಿನಿ / ಜನನಿ | ಉದಯ ಟಿವಿ | ಕನ್ನಡ | |
2021–2022 | ಪೂವೆ ಉನ್‌ಕ್ಕಾಗ | ರಂಜನ | ಸನ್ ಟಿವಿ | ತಮಿಳು |
2021 | ಪೂವ ತಾಲಯ್ಯ | ಅತಿಥಿ | ||
ವನಕ್ಕಂ ತಾಮಿಝ | ಸ್ವತಃ | |||
2022 | ನಮ್ಮ ಮಧುರೈ ಸಿಸ್ಟರ್ಸ್ | ಇಂದ್ರಾಣಿ | ಕಲರ್ಸ್ ತಮಿಳು | |
ವನಕಂ ತಾನುಝಾ | ಸ್ವತಃ | ಸನ್ ಟಿವಿ | ||
2023–ಪ್ರಸ್ತುತ | ಅನು ಅನೇ ನೀನು | ಅಕ್ಷರ | ಜೆಮಿನಿ ಟಿವಿ | ತೆಲುಗು |
2023–ಪ್ರಸ್ತುತ | ಅಮೃತಧಾರೆ | ಭೂಮಿಕಾ | ಝೀ ಕನ್ನಡ | ಕನ್ನಡ |
ಉಲ್ಲೇಖಗಳು
ಬದಲಾಯಿಸಿ- ↑ Priyanka Dasgupta, TNN 25 October 2008, 12.00am IST (25 October 2008). "Chaya back in films!". The Times of India. Archived from the original on 11 ಸೆಪ್ಟಂಬರ್ 2013. Retrieved 11 ಸೆಪ್ಟಂಬರ್ 2013.
{{cite web}}
: CS1 maint: multiple names: authors list (link) CS1 maint: numeric names: authors list (link) - ↑ "Feline, fast and favourite". The Hindu. 20 September 2004. Archived from the original on 31 ಅಕ್ಟೋಬರ್ 2004. Retrieved 10 October 2008.
- ↑ "A new year by any other name". Daily News and Analysis. 23 March 2012. Retrieved 11 September 2013.
- ↑ "Metro Plus Kochi / Cinema : Staple diet: comics". The Hindu. 18 ಏಪ್ರಿಲ್ 2005. Archived from the original on 20 ಏಪ್ರಿಲ್ 2005. Retrieved 11 September 2013.
- ↑ Media, Sampurn. "Chaya Singh's holy matrimony". The New Indian Express. Archived from the original on 2014-08-26. Retrieved 11 ಸೆಪ್ಟಂಬರ್ 2013.
- ↑ "Chaya Singh in Malayalam". IndiaGlitz. 12 May 2005. Archived from the original on 24 ಮೇ 2005. Retrieved 10 October 2008.
- ↑ ೭.೦ ೭.೧ Daithota, Madhu (31 October 2006). "'I'm not bothered about my image'". The Times of India. Retrieved 10 October 2008.
- ↑ "Saka Sakhi review". Rediff.com. 19 December 2005. Retrieved 11 September 2013.
- ↑ "Chaya Singh: Nobody can replace me". IndiaGlitz. 6 November 2004. Archived from the original on 9 ಡಿಸೆಂಬರ್ 2004. Retrieved 10 October 2008.
- ↑ "Metro Plus Kochi / Cinema : Staple diet: comics". The Hindu. 18 April 2005. Archived from the original on 20 ಏಪ್ರಿಲ್ 2005. Retrieved 11 ಸೆಪ್ಟಂಬರ್ 2013.. The Hindu. 18 ಏಪ್ರಿಲ್ 2005. Archived from the original Archived 2005-04-20 ವೇಬ್ಯಾಕ್ ಮೆಷಿನ್ ನಲ್ಲಿ. on 20 April 2005. Retrieved 11 September 2013.
- ↑ V Lakshmi, TNN 9 July 2010, 12.00am IST (9 July 2010). "I don't watch Tamil serials: Chaya". The Times of India. Archived from the original on 11 ಸೆಪ್ಟಂಬರ್ 2013.
{{cite web}}
: CS1 maint: multiple names: authors list (link) CS1 maint: numeric names: authors list (link) - ↑ Priyanka Dasgupta, TNN 25 ಅಕ್ಟೋಬರ್ 2008, 12.00am IST (25 ಅಕ್ಟೋಬರ್ 2008). "Chaya back in films!". The Times of India. Archived from the original on 2013-09-11. Retrieved 11 ಸೆಪ್ಟಂಬರ್ 2013.
{{cite web}}
: CS1 maint: multiple names: authors list (link) CS1 maint: numeric names: authors list (link)Priyanka Dasgupta, TNN 25 October 2008, 12.00am IST (25 ಅಕ್ಟೋಬರ್ 2008). . 'ದಿ ಟೈಮ್ಸ್ ಆಫ್ ಇಂಡಿಯಾ. Archived from the original Archived 2013-09-11 at Archive.is on 11 ಸೆಪ್ಟಂಬರ್ 2013. Retrieved 11 ಸೆಪ್ಟಂಬರ್ 2013.{{cite web}}
: CS1 maint: multiple names: authors list (link) CS1 maint: numeric names: authors list (link) - ↑ "Akasha Gange: A whiff of fresh air". The Times of India. 19 June 2008. Archived from the original on 11 ಸೆಪ್ಟಂಬರ್ 2013. Retrieved 11 ಸೆಪ್ಟಂಬರ್ 2013.
- ↑ "Movie Review : Akasha Gange". Sify. Archived from the original on 5 ಸೆಪ್ಟಂಬರ್ 2014. Retrieved 11 ಸೆಪ್ಟಂಬರ್ 2013.
- ↑ "Karnataka / Bangalore News : Awesome act by 'Simply Kailawesome'". The Hindu. 24 May 2011. Archived from the original on 11 ಸೆಪ್ಟಂಬರ್ 2013. Retrieved 11 ಸೆಪ್ಟಂಬರ್ 2013.
- ↑ "Looking at Simply Kailawesome". Rediff.com. 6 October 2010. Retrieved 11 ಸೆಪ್ಟಂಬರ್ 2013.
- ↑ "Metro Plus Kochi / Cinema : 'The Police' all over the city". The Hindu. 21 May 2005. Archived from the original on 7 ನವೆಂಬರ್ 2007. Retrieved 11 September 2013.
- ↑ "Friday Review Bangalore / Cinema : Gandhinagar Gossip". The Hindu. 20 June 2008. Archived from the original on 5 ಮೇ 2009. Retrieved 11 ಸೆಪ್ಟಂಬರ್ 2013.
- ↑ "Chaya Singh to direct a film?". Sify. Archived from the original on 7 ಸೆಪ್ಟಂಬರ್ 2014. Retrieved 11 September 2013.
- ↑ S.R. Ashok Kumar (1 ಮೇ 2011). "Wielding the megaphone". The Hindu. Retrieved 11 ಸೆಪ್ಟಂಬರ್ 2013.
- ↑ "Chaya Singh". Geocities.ws. Retrieved 11 September 2013.
- ↑ V Lakshmi, TNN 22 March 2011, 12.00am IST (22 ಮಾರ್ಚ್ 2011). "Chaya Singh on small screen". The Times of India. Archived from the original on 11 ಸೆಪ್ಟಂಬರ್ 2013. Retrieved 11 ಸೆಪ್ಟಂಬರ್ 2013.
{{cite web}}
: CS1 maint: multiple names: authors list (link) CS1 maint: numeric names: authors list (link) - ↑ "Chaya wants to wield the megaphone". The Times of India. 6 ಜೂನ್ 2008. Archived from the original on 11 ಸೆಪ್ಟಂಬರ್ 2013. Retrieved 11 September 2013.
- ↑ T. Lalith Singh (4 July 2012). "Engrossing fare on Telugu telly". The Hindu. Retrieved 11 September 2013.
- ↑ "Chaya Singh returns to big screen". The Times of India. 26 February 2013. Archived from the original on 28 ಸೆಪ್ಟಂಬರ್ 2013. Retrieved 11 ಸೆಪ್ಟಂಬರ್ 2013.
- ↑ M Suganth, TNN 15 June 2012, 06.33PM IST (15 June 2012). "Actress Chaya Singh marries TV actor Krishna". The Times of India. Archived from the original on 16 ಆಗಸ್ಟ್ 2013. Retrieved 11 ಸೆಪ್ಟಂಬರ್ 2013.
{{cite web}}
: CS1 maint: multiple names: authors list (link) CS1 maint: numeric names: authors list (link)