ಅಮೃತಧಾರೆ (ಕನ್ನಡ ಧಾರಾವಾಹಿ)

ಅಮೃತಧಾರೆ ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದೆ[೧]. ಈ ಧಾರಾವಾಹಿಯು 2023ರ ಮೇ 29 ರಂದು ಝೀ ಕನ್ನಡದಲ್ಲಿ ಪ್ರಥಮ ಪ್ರದರ್ಶನಗೊಂಡಿತು[೨]. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.00 ಗಂಟೆಗೆ ಪ್ರಸಾರವಾಗುತ್ತಿದೆ [೩] [೪]. ಈ ಧಾರಾವಾಹಿಯು ಹಿಂದಿ ಭಾಷೆಯ ಬಡೇ ಅಚ್ಚೆ ಲಗ್ತೆ ಹೇ ಯ ಅಧಿಕೃತ ರೀಮೆಕ್ ಆಗಿದೆ. ಈ ಕಾರ್ಯಕ್ರಮದಲ್ಲಿ ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.


ಅಮೃತಧಾರೆ (ಕನ್ನಡ ಧಾರಾವಾಹಿ)
ಶೈಲಿದೈನಂದಿನ ಧಾರಾವಾಹಿ
ನಿರ್ದೇಶಕರುಉತ್ತಮ ಮಧು
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ಕೀರ್ತಿಕಾ ಎಂ. ರಾವ್, ಪ್ರಕಾಶ್ ಅಗರ್
ಕ್ಯಾಮೆರಾ ಏರ್ಪಾಡುಮಲ್ಟೀ ಕ್ಯಾಮೆರಾ
ನಿರ್ಮಾಣ ಸಂಸ್ಥೆ(ಗಳು)ಕೀರ್ತಿ ಅಕ್ಷಯ ನೆಟ್‌ವರ್ಕ್
ಪ್ರಸಾರಣೆ
ಮೂಲ ವಾಹಿನಿಝೀ ಕನ್ನಡ
ಮೂಲ ಪ್ರಸಾರಣಾ ಸಮಯ29 ಮೇ 2023 – ಪ್ರಸ್ತುತ

ಕಥಾವಸ್ತು ಬದಲಾಯಿಸಿ

ಧಾರಾವಾಹಿಯು ಇಬ್ಬರು ಅವಿವಾಹಿತರ ಸುತ್ತ ಸುತ್ತುತ್ತದೆ. ವಯಸ್ಸು ನಲ್ವತ್ತೈದು ಆಗಿರುವ ಉದ್ಯಮಿ ಗೌತಮ್ ಮತ್ತು ವಯಸ್ಸು ಮೂವತ್ತೈದರಲ್ಲಿರುವ ಸಾಮಾನ್ಯ ಮಧ್ಯಮ ವರ್ಗದ ಉಪನ್ಯಾಸಕಿ ಭೂಮಿಕಾಳನ್ನು ಮದುವೆಯಾಗುವ ಸಂದರ್ಭ ಬರುತ್ತದೆ.

ಪಾತ್ರವರ್ಗ ಬದಲಾಯಿಸಿ

ಮುಖ್ಯ ಪಾತ್ರದಲ್ಲಿ ಬದಲಾಯಿಸಿ

ಇತರೆ ಬದಲಾಯಿಸಿ

  • ವನಿತಾ ವಾಸು : ಶಕುಂತಳಾ ಪಾತ್ರದಲ್ಲಿ, ಗೌತಮ್ ಮಲತಾಯಿಯಾಗಿ.
  • ಸಿಹಿ ಕಹಿ ಚಂದ್ರು: ಸದಾಶಿವನ ಪಾತ್ರದಲ್ಲಿ, ಭೂಮಿಕಾ ಮತ್ತು ಜೀವನ್ ತಂದೆಯಾಗಿ.
  • ಚೈತ್ರ ಶೆಣೈ: ಮಂದಾಕಿಣಿ ಪಾತ್ರದಲ್ಲಿ. ಸದಾಶಿವನ ಹೆಂಡತಿಯಾಗಿ. ಭೂಮಿಕಾ ಮತ್ತು ಜೀವನ್ ತಾಯಿಯಾಗಿ.
  • ಅಮೃತ ನಾಯಕ್[೬] : ಅಪೇಕ್ಷಾ ಪಾತ್ರದಲ್ಲಿ, ಭೂಮಿಕಾ ತಂಗಿಯಾಗಿ.
  • ಸಾರಾ ಅಣ್ಣಯ್ಯ[೭]: ಮಹಿಮಾ ಪಾತ್ರದಲ್ಲಿ, ಗೌತಮ್ ತಂಗಿಯಾಗಿ. ಶಕುಂತಳಾ ಮಗಳಾಗಿ, ಜೀವನ್ ಹೆಂಡತಿಯಾಗಿ.
  • ಶಶಿ ಹೆಗ್ಗಡೆ [೮]: ಜೀವನ್ ಪಾತ್ರದಲ್ಲಿ, ಭೂಮಿಕಾ ತಮ್ಮನಾಗಿ. ಮಂದಾಕಿನಿ ಮತ್ತು ಸದಾಶಿವನ ಮಗನಾಗಿ, ಮಹಿಮಾ ಗಂಡನಾಗಿ.
  • ರಣವ್: ಜೈದೇವ್ ಪಾತ್ರದಲ್ಲಿ,
  • ಚಂದನ್: ಅಶ್ವಿನಿ ಪಾತ್ರದಲ್ಲಿ,
  • ಸ್ವಾತಿ: ಅಪರ್ಣ ಪಾತ್ರದಲ್ಲಿ, ಆನಂದ ಹೆಂಡತಿಯಾಗಿ.
  • ಆನಂದ್ [೯] : ಆನಂದ್ ಪಾತ್ರದಲ್ಲಿ, ಗೌತಮ್ ಸ್ನೇಹಿತನಾಗಿ. ಅಪರ್ಣ ಗಂಡನಾಗಿ.

ಸಂಗೀತ ಬದಲಾಯಿಸಿ

ಅಮೃತಧಾರೆಯಲ್ಲಿನ ಹಾಡುಗಳು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಧಾರವಾಹಿಯಲ್ಲಿ ಜನಪ್ರಿಯ ಹಾಡುಗಳ ಗುಚ್ಚಗಳು ಈ (JUKEBOX) ಕೆಳಗಿನಂತಿದೆ[೧೦].

  1. ನಾ ಭುವಿಯಂತೆ ಕಾದೆ
  2. ಏನೋ ನವಿರಾದ ಭಾವ
  3. ನಿನ್ನವರ ನಗುವಲಿ
  4. ಒಡನಾಡಿ ಬೇಕಿದೆ
  5. ಸನಿಹ ಸೆಳೆದಂತೆ
  6. ಬೆಳಗುವ ದೀಪವು
  7. ಜೊತೆ ಸಾಗೋ ಕನಸಿದೆ
  8. ತನ್ನವರ ಬದುಕಲಿ
  9. ಯಾರೊ ಕರೆದಂತೆ ಹೆಸರಾ

ರೂಪಾಂತರಗಳು ಬದಲಾಯಿಸಿ

ಬಾಷೆ ಶೀರ್ಷಿಕೆ ಮೂಲ ಬಿಡುಗಡೆ ವಾಹಿನಿ(ಗಳು) ಕೊನೆಯ ಪ್ರಸಾರ ಟಿಪ್ಪಣಿಗಳು
ಹಿಂದಿ Bade Achhe Lagte Hain
बडे अच्छे लगते हैं
30 May 2011 ಸೋನಿ ಎಂಟಟೈನ್ ಮೆಂಟ್ 10 ಜುಲೈ 2014 ಮೂಲ
ಮಲಯಾಳಂ Anuraga Ganam Pole
അനുരാഗ ഗാനം പോൾ[೧೧]
17 ಏಪ್ರಿಲ್ 2023 ಝೀ ಕೇರಳಂ ಪ್ರಸಾರವಾಗುತ್ತಿದೆ ರೀಮೇಕ್
ಕನ್ನಡ Amruthadhare
ಅಮೃತಧಾರೆ[೧೨]
29 ಮೇ 2023 ಝೀ ಕನ್ನಡ

ಬಾಹ್ಯಕೊಂಡಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "ಜೀ ಕನ್ನಡದಲ್ಲಿ ಮತ್ತೊಂದು ಮಧ್ಯ ವಯಸ್ಸಿನ ಲವ್‌ಸ್ಟೋರಿ ಅಮೃತಧಾರೆ". ಸುವರ್ಣ ನ್ಯೂಸ್. Retrieved 20 ಏಪ್ರಿಲ್ 2023.
  2. "ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!". News18 Kannada. Retrieved 17 ಮೇ 2023.
  3. "New soap opera Amruthadhaare to premiere on monday". The Times of India. Retrieved 27 ಮೇ 2023.
  4. "ಭೂಮಿಕಾ-ಗೌತಮ್ ಕಲ್ಯಾಣೋತ್ಸವ, 'ಅಮೃತಧಾರೆ'ಯಲ್ಲಿ ಸಂಭ್ರಮಮೋ ಸಂಭ್ರಮ". News18 Kannada. Retrieved 5 ಸೆಪ್ಟಂಬರ್ 2023.
  5. "'If you want to reach the audience, you have to take different measures': Chaya Singh". The New Indian Express. Retrieved 22 ಜೂನ್ 2023.
  6. "ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿದ್ದ ಅಮೃತಧಾರೆ ಸೀರಿಯಲ್ ನಟಿ ಅಪೇಕ್ಷಾ!". News18 Kannada. Retrieved 29 ಜೂನ್ 2023.
  7. "ಮಹಿಮಾ ಆಗಿ 'ಅಮೃತಧಾರೆ'ಗೆ ಎಂಟ್ರಿ ಕೊಟ್ಟ ಸಾರಾ, ಮತ್ತೆ ಮೋಡಿ ಮಾಡ್ತಾರಾ ವರು?". News18 Kannada. Retrieved 17 ಮೇ 2023.
  8. "ಕೊರೊನಾ ಸಮಯದಲ್ಲಿ ಸಾತ್ ನೀಡಿದ್ದ ಭಾವಿ ಪತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟಿ ಲಾವಣ್ಯ". Retrieved 10 ಸೆಪ್ಟಂಬರ್ 2023.
  9. "ನನ್ನ ಹೆಂಡತಿ ಬದುಕಿ ಇರೋದು ಮಿರಾಕಲ್; ಅಮೃತಧಾರೆ ಧಾರಾವಾಹಿ ನಟ". ವಿಜಯ ಕರ್ನಾಟಕ. Retrieved 10 ಸೆಪ್ಟಂಬರ್ 2023.
  10. "ಅಮೃತಧಾರೆ ಮೆಚ್ಚಿದವರಿಗೆ ಹಾಡುಗಳ ಗುಚ್ಚ ಬಿಡುಗಡೆ, ಕಿರುತೆರೆ ಇತಿಹಾಸದಲ್ಲೇ ಮೊದಲ ಪ್ರಯೋಗ". ಸುವರ್ಣ ನ್ಯೂಸ್. Retrieved 31 ಜುಲೈ 2023.
  11. "Anuraga Ganam Pole Serial Zee Keralam Launching on 17 April at 09:00 PM Everyday". Retrieved 2023-05-24.
  12. "Amruthadhare Kannada Serial Story, Star Cast, Telecast Time – Zee Kannada Launching The Show From 29 May". Retrieved 2023-05-24.