ಚಿಲ್ಲರೆ ವ್ಯಾಪಾರ

(ಚಿಲ್ಲರೆ ಇಂದ ಪುನರ್ನಿರ್ದೇಶಿತ)

ಸರಕು ಅಥವಾ ವ್ಯಾಪಾರದ ವಸ್ತುಗಳನ್ನು ಒಂದು ನಿಗದಿತ ಸ್ಥಳದಿಂದ ಮಾರಾಟ ಮಾಡುವುದು ಚಿಲ್ಲರೆ ವ್ಯಾಪಾರ ಎಂದೆನಿಸುತ್ತದೆ. ಉದಾಹರಣೆಗೆ ಚಿಲ್ಲರೆ ಅಂಗಡಿ , ಬಟ್ಟೆ ಅಂಗಡಿ ಅಥವಾ ಕಿಯೋಸ್ಕ್ , ಅಥವಾ ಅಂಚೆಯ ರವಾನೆ , ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಖರೀದಿದಾರರಿಗೆ []ನೇರ ಆರ್ಥಿಕ ಉಳಿತಾಯ ಮಾಡಲಾಗುವುದು. ಇದು ವಿತರಣೆಯ ಅನೇಕ ಮಾರ್ಗಗಳ ಮೂಲಕ ಗ್ರಾಹಕರಿಗೆ ಗ್ರಾಹಕ ವಸ್ತುಗಳ ಅಥವಾ ಸೇವೆಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯಾಗಿದೆ. ಬೇಡಿಕೆ ಗುರುತಿಸಿ ನಂತರ ಪೂರೈಕೆ ಸರಪಳಿಯ ಮೂಲಕ ಬೇಡಿಕೆಯನ್ನು ಪೂರಕೆ ಮಾಡುತಾರೆ. ಚಿಲ್ಲರೆ ವ್ಯಾಪಾರದಲ್ಲಿ ಅಧೀನ ಸೇವೆ,ಅಂದರೆ ಸರಕು ನೀಡಿಕೆ ಸೇರಿದೆ. ಖರೀದಿಗಾರರು ವ್ಯಯಕ್ತಿಕವಾಗಿರಬಹುದು ಅಥವಾ ವ್ಯಾಪಾರದವರಾಗಿರಬಹುದು. ವಾಣಿಜ್ಯದಲ್ಲಿ , "ಚಿಲ್ಲರೆ ವ್ಯಾಪಾರಿ " ವಸ್ತುಗಳನ್ನು ಅಥವಾ ಉತ್ಪನ್ನಗಳನ್ನು ಉತ್ಪಾದಕರಿಂದ ಅಥವಾ ಆಮದು ದಾರರಿಂದ , ನೇರವಾಗಿ ಅಥವಾ ಸಗಟು ವ್ಯಾಪಾರಿ ಗಳಿಂದ ದೊಡ್ಡ ಪ್ರಮಾಣದಲ್ಲಿ ಖರೀದಿಸಿ, ನಂತರ ಅಂತಿಮ ಬಳಕೆದಾರರಿಗೆ ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡುತ್ತಾರೆ. ಚಿಲ್ಲರೆ ವ್ಯಾಪಾರಿಗಳು ಸಣ್ಣ ಸಣ್ಣ ಅಂಗಡಿಗಳನ್ನು ಹೊಂದಿರುತ್ತಾರೆ. ಚಿಲ್ಲರೆ ವ್ಯಾಪಾರಗಾರರು ಪೂರೈಕೆಯ ಸರಪಳಿಯ ಕೊನೆಯಲ್ಲಿರುತ್ತಾರೆ. ಸಗಟು ವ್ಯಾಪಾರಗಾರರು ಚಿಲ್ಲರೆ ವ್ಯಾಪಾರಿಗಳನ್ನು ತಮ್ಮ ಅವಿಭಾಜ್ಯ ಅಂಗ ಎಂದು ಹಂಚಿಕೆಯ ತಂತ್ರದಲ್ಲಿ ಅನಿವಾರ್ಯ ಎಂದು ತಿಳಿದಿರುತ್ತಾರೆ. "ಚಿಲ್ಲರೆ ವ್ಯಾಪಾರಿ " ಎಂಬ ಶಬ್ದವು, ಹಲವಾರು ವೈಯಕ್ತಿಕ ವ್ಯಕ್ತಿಗಳಿಗೆ ,ಸೇವಾ ಸೌಲಭ್ಯವನ್ನು ಒದಗಿಸುವವರಿಗೆ,ಅಂದರೆ ಸಾರ್ವಜನಿಕ ಉಪಯೋಗ , ಅಂದರೆ ವಿದ್ಯುತ್ ಶಕ್ತಿ ವಿತರಣೆ ಮಾಡುವುದನ್ನು ಒಳಗೊಂಡಿರುತ್ತದೆ.

ಹಲವಾರು ಮನೆಗಳನ್ನು ಹೊಂದಿರುವ ಕೇರಿಗಳಲ್ಲಿನ ಅಂಗಡಿಗಳು,ಅಂಗಡಿ ಕೇರಿಗಳು, ಮನೆಗಳೇ ಇಲ್ಲದ ಅಂಗಡಿ ಸಾಲುಗಳು ಅಥವಾ ಅಂಗಡಿಗಳ ಸಮುಚ್ಚಯ ಆಗಿರಬಹದು. ಅಂಗಡಿ ಬೀದಿಗಳು ಕೇವಲ ಪಾದಚಾರಿಗಳಿಗೆ ಮಾತ್ರವೇ ಆಗಿರಬಹುದು . ಕೆಲವೊಂದು ಬಾರಿ ಅಂಗಡಿ ಬೀದಿಗಳು ಸ್ವಲ್ಪ ಅಥವಾ ಪೂರ್ತಿಯಾಗಿ ಖರೀದಿದಾರರ ಸೇವೆಗೆ ಪ್ರಕ್ಷೇಪವಾಗದಂತೆ/ತರಾತುರಿಯಾಗದಂತೆ ಖರೀದಿದಾರರನ್ನು ಛಾವಣಿ ಯಂತೆ ರಕ್ಷಣೆ ನೀಡಿರಬಹುದು. ಅಂತರ್ಜಾಲದ ಮೂಲಕ ಚಿಲ್ಲರೆ ವ್ಯಾಪಾರ,ಅಂದರೆ ಗ್ರಾಹಕನಿಗೆ ವ್ಯಾಪಾರ - ಎಲೆಕ್ಟ್ರಾನಿಕ್ ವಾಣಿಜ್ಯ /ವ್ಯವಸ್ಥೆಯ ಮುಖಾಂತರವೂ (ಬಿ2ಸಿ ) ಆಗಿರಬಹುದು. ಅಂಚೆ ಸೇವೆ ವ್ಯವಹಾರ, ವ್ಯಾಪಾರ , ಅಥವಾ ಅಂಗಡಿಗಳೇ ಇಲ್ಲದ ವ್ಯಾಪಾರವೂ ಆಗಿರಬಹುದು.

ವಸ್ತುಗಳ ಖರೀದಿ ಯ ಒಂದು ಸಾಮಾನ್ಯ ವ್ಯವಸ್ಥೆಯೇ ವ್ಯಾಪಾರ . ಅಗತ್ಯಗಳಾದ ಆಹಾರ ಮತ್ತು ಬಟ್ಟೆ , ಕೆಲವು ಬಾರಿ ವಿನೋದದ ಅಥವಾ ಮನೋರಂಜನೆಯ ಬಿಕರಿಯು ವ್ಯಾಪಾರ ಆಗಿರಬಹುದು. ಮನೋರಂಜನೆಯ ವ್ಯಾಪಾರ ಕೆಲವೊಂದು ಸರ್ತಿ ಕೇವಲ ನೋಡುವುದಕ್ಕಾಗಿ ಮಾತ್ರ,ಕೊಂಡುಕೊಳ್ಳುವುದಕ್ಕೆ ಇರುವುದಿಲ್ಲ ,ಕೆಲವೊಮ್ಮೆ ಕೇವಲ ಆನಂದಕ್ಕಾಗಿ ಮಾತ್ರವಿದ್ದು ಖರೀದಿಗೆ ಅವಕಾಶವಿರುವುದಿಲ್ಲ.

ಜಾಹೀರಾತುಗಳ ಮೂಲಕ ಬೇಡಿಕೆಯನ್ನು ಹೆಚ್ಚಿಸವ ಪ್ರಯತ್ನಗಳನ್ನು ಮಾಡಲಾಗುತ್ತದೆ.ಅಂಗಡಿಗಳು ವಸತಿ ಬೀದಿಗಳಲ್ಲಿ ಕೆಲವು ಅಥವಾ ಯಾವುದೇ ಮನೆ, ಅಥವಾ ಶಾಪಿಂಗ್ ಮಾಲ್ನಲ್ಲಿ ಬೀದಿಗಳಲ್ಲಿ ಇರಬಹುದು. ಉತ್ಪನ್ನಗಳ ಖರೀದಿ ಪ್ರಕ್ರಿಯೆಗೆ ಶಾಪಿಂಗ್(ಕೊಳ್ಳುವಿಕೆ) ಎನ್ನುತಾರೆ. ಕೆಲವೊಮ್ಮೆ ಆಹಾರ ಪದಾಥ೯ ಮತ್ತು ಬಟ್ಟೆ ಮನೋರಂಜನೆಯ ಸೇರಿದಂತೆ ಅಂತಿಮ ಸರಕುಗಳು ಕೊ೦ಡುಕೊಳ್ಳುತ್ತಾರೆ. ಕೆಲವೊಮ್ಮೆ ಇದು ಒಂದು ಮನೋರಂಜನೆ ಚಟುವಟಿಕೆಯಾಗಿ ನಡೆಯುತ್ತದೆ. ಶಾಪಿಂಗ್ ಸಾಮನ್ಯವಾಗಿ ಮನರಂಜನೆಗಾಗಿ ಮಾಡುತ್ತಾರೆ (ಕೇವಲ ನೋಡುವುದು ಖರಿದಿ ಮಾಡುವುದಿಲ್ಲ) ಮತ್ತು ಬ್ರೌಸಿಂಗ್: ಇದು ಯಾವಾಗಲೂ ಖರೀದಿಗೆ ಕಾರಣವಾಗಿರುವುದಿಲ್ಲ.

ಶಬ್ದವ್ಯುತ್ಪತ್ತಿ

ಬದಲಾಯಿಸಿ
 
'ಆಪಲ್ ಸ್ಟೋರ್' ನ ಚಿಲ್ಲರೆ ವ್ಯಾಪಾರದ ಸ್ಥಳವು, ಚಿಕಾಗೋದ ಭವ್ಯವಾದ ಮೈಲಿಗಲ್ಲಾಗಿದೆ.
 
ವಿಶ್ವದ 'ಗರ್ಮಿನ್' ಒಂದೇ ರೀಟೈಲ್ ಸ್ಥಳವು , ಚಿಕಾಗೋದಲ್ಲಿನ ಸೊಗಸಾದ ಮೈಲ್ಲಿಗಲ್ಲಿನ ಸ್ಥಳವಾಗಿದೆ.

'ರೀಟೈಲ್' ಎಂಬ ಶಬ್ದ ಫ್ರೆಂಚ್ ಭಾಷಾ ಶಬ್ದದ ರೀಟೈಲ್ಲರ್ ನಿಂದ ಬಂದುದಾಗಿದ್ದು,ಅಂದರೆ ಇದು "ಕತ್ತರಿಸಿ ಹಾಕು ,ಭಾಗಿಸು ಮತ್ತು ಹಂಚು " ಎಂದು ಟೈಲರಿಂಗ್ ನಲ್ಲಿ ಹೇಳಲಾಗಿದೆ.(1365). ಮೊದಲನೇ ಬಾರಿಗೆ ನಾಮಪದವಾಗಿ "ಸಣ್ಣ ಪ್ರಮಾಣದಲ್ಲಿ ವ್ಯಾಪಾರ " ಎಂದು 1433 (ಫ್ರೆಂಚ್ ) ಹೇಳಲಾಗಿದೆ. ಇದನ್ನು ಸಾಹಿತ್ಯಿಕ ಭಾಷೆಯಲ್ಲಿ ಹೇಳುವುದಾದರೆ, ರೀಟೈಲ್ ಎಂದರೆ "ಕತ್ತರಿಸಿ ತೆಗೆ , ತುಂಡು , ಸುಲಿಯುವುದು " ಎಂದರ್ಥವಾಗುತ್ತದೆ.[] ಫ್ರೆಂಚ್ ನಲ್ಲಿರುವಂತೆ , 'ರೀಟೈಲ್' ಶಬ್ದ ಡಚ್ಚ್ ಮತ್ತು ಜರ್ಮನಿಯಲ್ಲಿ (ಡೀಟೈಲ್ ಹ್ಯಾಂಡಲ್ ಮತ್ತು ಎಯಿಂಜಲ್ ಹ್ಯಾಂಡಲ್ ಕ್ರಮವಾಗಿ ), ಶಬ್ದಗಳೂ ಸಹ ಸಣ್ಣ ಪ್ರಮಾಣದಲ್ಲಿ ಸರಕುಗಳ ವ್ಯಾಪಾರವಾಗಿದೆ.

ಚಿಲ್ಲರೆ ವ್ಯಾಪಾರದಲ್ಲಿನ ಬಗೆಗಳು

ಬದಲಾಯಿಸಿ
 
ಸ್ಯಾನ್ ಜುಯನ್ ಡಿ ದಿಯೊಸ್ ಮಾರ್ಕೆಟ್ ಇನ್ ಗ್ವದಲಜಾರ , ಜಲಿಸ್ಕೋ
 
ರಷ್ಯಾದ ಒಳಗಿನ ಸೂಪರ್ ಮಾರ್ಕೆಟ್

ವಸ್ತುಗಳನ್ನು ಮತ್ತು ಸೇವೆಯನ್ನು ಬದಲಾಯಿಸುವ ಒಂದು ನಿರ್ಧಿಷ್ಟ ಜಾಗವೇ ಮಾರುಕಟ್ಟೆ ಸ್ಥಳ ಎನಿಸುತ್ತದೆ. ಸಾಂಪ್ರದಾಯಿಕವಾಗಿ ಮಾರುಕಟ್ಟೆಯ ಚೌಕ ವು, ನಗರದ ಚೌಕಾಕಾರ ಭಾಗವಾಗಿದ್ದು,ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ನಿರ್ಮಿಸಿರುವುದು, ಖರೀದಿಗಾರರು ವ್ಯಾಪಾರ ಮಾಡುವುದಾಗಿದೆ . ಈ ರೀತಿಯ ಮಾರುಕಟ್ಟೆ ತುಂಬಾ ಹಳೆಯದಾಗಿದ್ದು,ಅಂತಹ ಮಾರುಕಟ್ಟೆಗಳು ಇಡೀ ಪ್ರಪಂಚದಲ್ಲಿ ಇನ್ನೂ ಚಾಲ್ತಿಯಲ್ಲಿವೆ.

ಪ್ರಪಂಚದ ಕೆಲವು ಭಾಗಗಳಲ್ಲಿ ,ಚಿಲ್ಲರೆ ವ್ಯಾಪಾರ ಇಂದಿಗೂ ಪ್ರಭಾವಶಾಲಿಯಾಗಿದ್ದು,ಸಣ್ಣ ಸಣ್ಣ ಕುಟುಂಬಗಳು ಅವುಗಳಲ್ಲಿ ತೊಡಗಿಸಿಕೊಂಡಿವೆಯಾದರೂ, ಈ ಮಾರುಕಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ದೊಡ್ಡ ದೊಡ್ಡ ಚಿಲ್ಲರೆ ವ್ಯಾಪಾರಿಗಳುಸುಪರ್ದಿಗೆ ತೆಗೆದುಕೊಂಡಿರುತ್ತಾರೆ.

ಚಿಲ್ಲರೆ ವ್ಯಾಪಾರವನ್ನು ಸಾಮಾನ್ಯವಾಗಿ ಉತ್ಪನ್ನ ಗಳಿಗನುಗುಣವಾಗಿ ಈ ಕೆಳಕಂಡಂತೆ ವಿಭಜಿಸಬಹುದಾಗಿದೆ:

  • ಆಹಾರ ಪದಾರ್ಥಗಳು
  • ಮೃದು ವಸ್ತುಗಳು - ಬಟ್ಟೆ , ಪೋಷಾಕು , ಮತ್ತು ಇತರ ವಸ್ತ್ರದ ಜವಳಿ ಅಂಗಡಿ .
  • ಗಟ್ಟಿ ವಸ್ತುಗಳು ("ಹಾರ್ಡ್ ಲೈನ್ ರೀಟೈಲರ್ಸ್ ") - ಸಲಕರಣೆಗಳು , ವಿದ್ಯುತ್ ಸಲಕರಣೆಗಳು , ಪೀಟೋಪಕರಣಗಳು , ಕ್ರೀಡಾ ಸಾಮಗ್ರಿಗಳು , ಮುಂತಾದವು .

ಮಾರುಕಟ್ಟೆಯ ತಂತ್ರಗಳನ್ನು ಆಧರಿಸಿ ಈ ಕೆಳಕಂಡಂತೆ ವಿಭಜಿಸಬಹುದಾಗಿದೆ:

  • ಉನ್ನತ ಮಾರುಕಟ್ಟೆ ಗಳು - ಮುಖ್ಯವಾಗಿ ಆಹಾರ ವಸ್ತುಗಳ ವಿತರಣೆ
  • ಡಿಪಾರ್ಟ್ಮೆಂಟ್ ಅಂಗಡಿಗಳು - ಸಾಮಾನ್ಯವಾಗಿ ದೊಡ್ಡದಾದ ಈ ಅಂಗಡಿಗಳಲ್ಲಿ "ಮೃದುವಾದ ಜವಳಿ " ಮತ್ತು "ಗಟ್ಟಿ ಪದಾರ್ಥಗಳಿರುತ್ತವೆ ".
  • ರಿಯಾಯಿತಿ ನೀಡುವ ಅಂಗಡಿಗಳು - ವಿವಿಧ ರೀತಿಯ ಸರಕು ಸಾಮಗ್ರಿಗಳ ಮತ್ತು ಸೇವೆಯನ್ನು ನೀದುವುದಿದ್ದು,ಬೆಲೆಗಳ ಆಧಾರದ ಮೇಲೆ ವ್ಯಾಪಾರ ಮಾಡುತ್ತದೆ.
  • ಸಾಮಾನ್ಯ ಚಿಲ್ಲರೆ ಅಂಗಡಿ - ಡಿಪಾರ್ಟ್ಮೆಂಟ್ ಅಂಗಡಿ ಮತ್ತು ರಿಯಾಯಿತಿ ನೀಡುವ ಅಂಗಡಿಗಳ ಮಧ್ಯದ ಅಂದರೆ ಮಿಶ್ರ ಸಾಲಿನ ಅಂಗಡಿಗಳು.
  • ಉಗ್ರಾಣದ ಅಂಗಡಿ/ ಮಂಡಿ -ಕಡಿಮೆ ಬೆಲೆಯ , ಉನ್ನತ ಗುಣಮಟ್ಟದ ಹೆಚ್ಚಿನ ಪ್ರಮಾಣದ ಸರಕುಗಳ ಮಳಿಗೆಗಳಲ್ಲಿ , ಸಾಮಾನುಗಳನ್ನು ಕಬ್ಬಿಣದ ಅಲೆಮಾರುಗಳಲ್ಲಿ ಜೋಡಿಸಿದ್ದು, ಮಂಡಿಗಳ ಸದಸ್ಯತ್ವ ಶುಲ್ಕವನ್ನು ಹೊಂದಿರುತ್ತವೆ.
  • ವಿಭಿನ್ನ ಅಂಗಡಿ ಅಥವಾ "ಡಾಲರ್ ಸ್ಟೋರ್ " - ಅತಂತ ಕಡಿಮೆ ಬೆಲೆಯ ಪದಾರ್ಥಗಳು ಮತ್ತು ,ಮಿತಿಯ ಆಯ್ಕೆ ಸರಕುಗಳೊಂದಿಗೆ.
  • ಡೆಮೋಗ್ರಾಫಿಕ್ - ಒಂದೇ ವಿಷಯದ ಬಗ್ಗೆ ಆದ್ಯತೆಯನ್ನು ನೀಡಿದ ಚಿಲ್ಲರೆ ವ್ಯಾಪಾರ - (ಉದಾಹರಣೆಗೆ ,ಶ್ರೀಮಂತರನ್ನು ಗಮನದಲ್ಲಿಟ್ಟುಕೊಂಡು ಮಾಡುವ ಉನ್ನತ ಶ್ರೇಣಿಯ ಚಿಲ್ಲರೆ ವ್ಯಾಪಾರ )

ಕೆಲವು ಅಂಗಡಿಕಾರರು ನಿರ್ಧಿಷ್ಟ ಗುರಿ ಯನ್ನು ಹೊಂದಿರದೆ, ಕೆಲವು ಅಂಗಡಿಕಾರರು ಮಾತ್ರ , "ಮಧ್ಯಮ -ಶ್ರೇಣಿಯ " ಅಥವಾ "ಉನ್ನತ -ಶ್ರೇಣಿ ಯಂತ್ಯದ " ವ್ಯಾಪಾರವಾಗಿದ್ದು,ಆದಾಯದ ಮಟ್ಟದಲ್ಲಿ ಎಷ್ಟ್ಟರ ಮಟ್ಟಿಗಿನ ಗುರಿಯನ್ನು ಹೊಂದಿದೆ ಎಂದು ನಿಗದಿ ಪಡಿಸಿಕೊಳ್ಳುತ್ತಾರೆ.

ಬೇರೆ ಬೇರೆ   ರೀತಿಯ ಚಿಲ್ಲರೆ ವ್ಯಾಪಾರಗಳು ಸೇರಿವೆ
  • ಸಾಮಾನ್ಯ ಅಂಗಡಿ - ಅವಶ್ಯಕವಿರುವ ಎಲ್ಲಾ ವಸ್ತುಗಳು,ಸರಕು-ಸಾಮಾನುಗಳು,ಅದರಲ್ಲೂ ಗ್ರಾಮೀಣ ಜನರ ಅವಶ್ಯಕತೆಯ ಪೂರೈಕೆ.
  • ಅನುಕೂಲಕರ ಅಂಗಡಿ - ಸಣ್ಣ ಅಂಗಡಿಯಾಗಿದ್ದು,ಹೆಚ್ಚಿನ ಸಮಯ ವ್ಯಾಪಾರ ಮಾಡುವವರೇ ಆಗಿದ್ದು,ಪ್ರತಿದಿನ ತರಿಸಿ-ಸೇರಿಸುವವರಾಗಿದ್ದು,ರಸ್ತೆ ಬದಿಯ ವಸ್ತುಗಳ ವಿಕ್ರಯವಾಗಿರುತ್ತದೆ.
  • ದೊಡ್ಡ -ಪೆಟ್ಟಿಗೆಯ ಅಂಗಡಿ ದೊಡ್ಡ ಪ್ರಮಾಣದ ಡಿಪಾರ್ಟ್ಮೆಂಟ್ ಅಂಗಡಿಗಲಾಗಿದ್ದು,ರಿಯಾಯಿತಿಯನ್ನು ನೀಡುವವರಾಗಿದ್ದು,ಬಟ್ಟೆ ವ್ಯಾಪಾರಿಗಳ ಮತ್ತು ಸರಕು ಸಾಮಗ್ರಿಗಳ ಅಂಗಡಿಗಳಾಗಿವೆ.
 
ಭಾರತದಲ್ಲಿ ಆಹಾರ ಪಧಾರ್ಥಗಳನ್ನು ಮಾರುವವ
 
'ಅಡಿದಾಸ್ ಸ್ಟೋರ್' - ಟೆಲ್ ಅವೀವ್ , ಇಸ್ರೇಲ್

ವ್ಯಾಪಾರದ ಸರಕು

ಬದಲಾಯಿಸಿ

ವ್ಯಾಪಾರದ ಸರಕುಗಳ ಬಡ್ತಿಯಾಗಿದ್ದು , ವಿಸ್ತಾರವಾದ ಕ್ರಿಯೆಯಾಗಿದ್ದು,ಮಾರುಕಟ್ಟೆಯ ಸಂಶೋಧನೆಯಿಂದ ಕೂಡಿದ್ದು,ಹೊಸ ಹೊಸ ವಸ್ತುಗಳ ಅಭಿವೃದ್ಧಿ,ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿನ ಸಹಕಾರ,ಪ್ರಭಾವ ಪೂರ್ಣ ಜಾಹೀರಾತು ಹಾಗು ವ್ಯಾಪಾರವಾಗಿರುತ್ತದೆ.

ಚಿಲ್ಲರೆ ವ್ಯಾಪಾರದ ದರ

ಬದಲಾಯಿಸಿ

ಚಿಲ್ಲರೆ ವ್ಯಾಪಾರದಲ್ಲಿ ಸಾಮಾನ್ಯವಾಗಿ ದರವು ಮೂಲ-ಬೆಲೆಯ ಹೆಚ್ಚುವರಿಯಾಗಿರುತ್ತದೆ. . ಇದರಲ್ಲಿ ಗುರಿಮಟ್ಟದ/ಲಾಭದ ಮೊತ್ತ ( ಅಥವಾ ಶೇಕಡಾವಾರು ಪ್ರಮಾಣ ) ಇಂತಿಷ್ಟೆ ಎಂದು ಆಗಿದ್ದು, ಮತ್ತೊಂದು ಸಾಮಾನ್ಯ ತಂತ್ರವೆಂದರೆ, ಖರೀದಿದಾರರ ಆಯ್ಕೆಯ ಬೆಲೆ ಯಾಗಿರುತ್ತದೆ. ಉತ್ಪಾದಕರು ಗುರುತಿಸಿದ ದರ ಉತ್ಪಾದನೆಯ ವಸ್ತು ವಿನ ಮೇಲೆ ಗುರುತಿಸಲಾಗಿದ್ದು,ಅದರಂತೆ ವ್ಯಾಪಾರ ಮಾಡಲಾಗುತ್ತದೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ , ಚಿಲ್ಲರೆ ವ್ಯಾಪಾರದ ದರ ವನ್ನು ಮಾನಸಿಕ ದರ ಅಥವಾ ಬೆಸ ಸಂಖೆಯ ದರ ಎಂದು ಕರೆಯಲಾಗಿದೆ. ದರಗಳನ್ನು ಸ್ಪಷ್ಟವಾಗಿ ನಿಗದಿ ಪಡಿಸಿ ಚಿನ್ಹೆ ಅಥವಾ ಗುರುತು ಚೀಟಿ ಅಂಟಿಸಲ್ಪಟ್ಟಿರುತ್ತದೆ . ಬದಲಾಗಿ , ಬೆಲೆಗಳನ್ನು ನಮೂದಿಸದೆ ಇದ್ದ ಪಕ್ಷದಲ್ಲಿ , ಬೆಲೆಯ ವ್ಯತ್ಯಯ ಆಗಬಹುದಾಗಿದ್ದು,ಮಾರಾಟದ ದರವು ಖರೀದಿದಾರನ ಮನೋ ಇಂಗಿತದ ಆಧಾರದ ಮೇಲೆ ಆಗುತ್ತಿದೆ. ಉದಾಹರಣೆಗೆ ,ಖರೀದಿದಾರನು ಮಾರಾಟಗಾರನ ತೆಕ್ಕೆಗೆ ಬಿದ್ದು,ಹೆಚ್ಚಿನ ದರ ನೀಡಿ ಪಡೆಯಬೇಕಾಗುತ್ತದೆ. ಮತ್ತೊಂದು ಉದಾಹರಣೆ ಎಂದರೆ,ಕೆಲವೊಮ್ಮೆ ಯುವಕರಿಗೆ ಅಥವಾ ವಿದ್ಯಾರ್ಥಿಗಳಿಗೆ ರಿಯಾಯಿತಿ ಇರುತ್ತದೆ.

ಬದಲಾವಣೆ/ವರ್ಗಾವಣೆಯ ತಂತ್ರ

ಬದಲಾಯಿಸಿ

ಚಿಲ್ಲರೆ ವ್ಯಾಪಾರಿಗರಿಂದ ಹಲವು ರೀತಿಯಾಗಿ ಖರೀದಿದಾರರು ಖರೀದಿಸಬಹುದಾಗಿದೆ:

  • ಕಿಟಕಿ ಸೇವೆ ,ಇದರಲ್ಲಿ ಸರಕು ಸರಂಜಾಮುಗಳು ಖರೀದಿಗಾರರಿಂದ ದೂರವೇ ಇದ್ದು, ವ್ಯಾಪಾರಿಯೇ ತಂದುಕೊಡುತ್ತಾನೆ. ಈ ರೀತಿಯ ಚಿಲ್ಲರೆ ವ್ಯಾಪಾರದಲ್ಲಿ ಸಾಮಾನ್ಯವಾಗಿ ಕಡಿಮೆ ಮಟ್ಟದ, ಹೆಚ್ಚಿನ ಬೆಲೆಯುಳ್ಳವುಗಳಾಗಿದ್ದು , (ಉದಾ: ಚಿನ್ನ ) ಮತ್ತು ನಿಯಂತ್ರಣದ ಸರಕುಗಳು ಅಂದರೆ ಔಷಧಗಳು ಮತ್ತು ಮಧ್ಯ. ಇದು 1900 ಕ್ಕಿಂತ ಮುಂಚಿನಿಂದಲೂ ಅಮೆರಿಕಾದಲ್ಲಿ ಚಾಲ್ತಿಯಲ್ಲಿದ್ದು , ಹಾಗು ಇದು ಅಮೆರಿಕಾದಂತಹ ಬೇರೆ ದೇಶಗಳಲ್ಲಿಯೂ ಸಾಮಾನ್ಯವಾಗಿ ಈ ಪದ್ಧತಿ ಇದೆ. [which?]
  • ವಿಕ್ರಯ/ಬಟವಾಡೆ ಮಾಡು (ವಾಣಿಜ್ಯ ), ಇಲ್ಲಿ ಸರಕು ಸರಂಜಾಮುಗಳನ್ನು ನೇರವಾಗಿ ಖರೀದಿದಾರರ ಮನೆಗೆ ಅಥವಾ ಅವರ ಕೆಲಸದ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಅಂಚೆ ಸೇವೆಯನ್ನು ಮುದ್ರಣದ ಸೌಕರ್ಯದೊಂದಿಗೆ 1744 ರಲ್ಲಿ ಕಂಡುಹಿಡಿದಿದ್ದು,ನಂತರ 1800 ಹಾಗೂ 1900 ರ ಆರಂಭದಲ್ಲಿ ಇವು ಸಾಮಾನ್ಯವಾಗಿದ್ದವು. ದೂರವಾಣಿ ಯ ಮುಖಾಂತರ, ತಮ್ಮ 'ಬೇಕು'ಗಳನ್ನು ಕೇಳುವುದು ಈಗ ಸಾಮಾನ್ಯವಾಗಿದೆ.ವಿಷಯ ಕ್ರಮಣಿಕೆಯನ್ನು ದಿನಪತ್ರಿಕೆ , ದೂರದರ್ಶನ ಜಾಹೀರಾತು ಅಥವಾ ಸ್ಥಳೀಯ ಹೋಟೆಲ್ಲುಗಳಲ್ಲಿ ದೊರೆಯುವ ತಿನಿಸು-ಪಟ್ಟಿ ಗಳ ಮೂಲಕ ತತ್ ಕ್ಷಣದ ಸರಬರಾಜಿನ ಸೇವೆಗೆ ವ್ಯವಸ್ಥೆಯಾಗಿದೆ. (ಅದರಲ್ಲೂ ವಿಶೇಷವಾಗಿ ಪಿಜ್ಜಾ ಬಟವಾಡೆಗೆ /ವಿಕ್ರಯಕ್ಕೆ ). ನೇರ ಮಾರುಕಟ್ಟೆ ,ಯಲ್ಲಿ ದೂರದರ್ಶನದ ಮಾರುಕಟ್ಟೆ ಮತ್ತು ದೂರದರ್ಶನದ ಅಂಗಡಿ ಚಾನಲ್ ಗಳು ಸಹ ಚಾಲ್ತಿಯಲ್ಲಿದ್ದು, ಇವೆಲ್ಲವೂ ದೂರವಾಣಿಯ ಮುಖಾಂತರವೇ ವ್ಯಾಪಾರವಾಗುತ್ತದೆ. 2000 ದಿಂದ ಈಚೆಗೆ ಆನ್ ಲೈನ್ ಮಾರುಕಟ್ಟೆ ಯ ಮುಖಾಂತರವೇ ಅಂದರೆ ಅಂತರ್ಜಾಲದ ಮುಖಾಂತರ ವ್ಯಾಪಾರ ನಡೆಯುತ್ತದೆ.
  • ಮನೆ-ಮನೆ -ಬಾಗಿಲಿನ ವ್ಯಾಪಾರದಲ್ಲಿ ,ಮಾರಾಟ ಪ್ರತಿನಿಧಿಯು ಕೆಲವು ವೇಳೆ ಪ್ರಯಾಣ ನಡೆಸಿ, ಸರಕುಗಳನ್ನು ವ್ಯಾಪಾರ ಮಾಡುತ್ತಾನೆ.
  • ವೈಯಕ್ತಿಕ -ಸೇವೆ ಯಲ್ಲಿ ಖರೀದಿಗೆ ಮುಂಚೆಯೇ ವಸ್ತುಗಳನ್ನು ಪರೀಕ್ಷಿಸಿ, ನಂತರ ಖರೀದಿಸುವ ಪದ್ಧತಿ 1920 ರಿಂದ ಈಚೆಗೆ ಸಾಮಾನ್ಯವಾಗಿದೆ.

ದ್ವಿತೀಯ ದರ್ಜೆ ಚಿಲ್ಲರೆ ವ್ಯಾಪಾರ

ಬದಲಾಯಿಸಿ

ಕೆಲವು ಅಂಗಡಿಗಳು ಎರಡನೇ ದರ್ಜೆಯ ವಸ್ತುಗಳ ವ್ಯಾಪಾರ ಮಾಡುತ್ತವೆ. ಲಾಭವಿಲ್ಲದ /ಲಾಭ ಮಾಡಿಕೊಳ್ಳದ ಅಂಗಡಿಗಳಿಗೆ ,ಸಾರ್ವಜನಿಕರು ತಮ್ಮ ಸರಕುಗಳನ್ನು ಮಾರಾಟ ಮಾಡಲು ಅಂಗಡಿಗಳಿಗೆ ದಾನ ನೀಡುತ್ತಾರೆ. ಕೊಡುವ -ಅಂಗಡಿ ಗಳಲ್ಲಿ, ಸರಕುಗಳನ್ನು ಉಚಿತವಾಗಿ ಪಡೆಯಬಹುದು.

ಇನ್ನು ಕೆಲವು ಒತ್ತೆ-ಅಂಗಡಿಗಳು ,ಪಡೆದ ಸಾಲಗಳ ನೆರವಾಗಿ ವಸ್ತುಗಳ ವಿಕ್ರಯ ಮಾಡುತ್ತವೆ. ಕೆಲವು ಅಂಗಡಿಗಳಲ್ಲಿ "ಮಾಲನ್ನು " ಕಳುಹಿಸಿಕೊಟ್ಟು, ಅದನ್ನು ಪಡೆದ ವ್ಯಕ್ತಿಯು ಅದನ್ನು ತನ್ನ ಅಂಗಡಿಯಲ್ಲಿಟ್ಟು , ಅದು ವ್ಯಾಪಾರವಾದರೆ, ಅವನು ಮೂಲ ಮಾರಾಟಗಾರರಿಗೆ ವ್ಯಾಪಾರವಾದ ಮೊತ್ತದಲ್ಲಿ ಶೇಕಡ ಹಣವನ್ನು ನೀಡುತ್ತಾನೆ. ಈ ರೀತಿಯ ವ್ಯಾಪಾರದಿಂದ ದೊಡ್ಡ ದೊಡ್ಡ ಅಭಿವೃದ್ಧಿ ಹೊಂದಿದ ಅಂಗಡಿಗಳು,ಹೆಚ್ಚು ಶಕ್ತಿಯುತವಾಗಿರುವ ಖರೀದಿದಾರರಿಗೆ ಅವಕಾಶ ಮಾಡಿಕೊಡುತ್ತಾರೆ.

ವ್ಯಾಪಾರದ ತಂತ್ರ

ಬದಲಾಯಿಸಿ

ಚಿಲ್ಲರೆ ವ್ಯಾಪಾರದ ಹಿಂದೆ,ಬೇರೊಂದು ಕೆಲಸವೇ ನಡೆದಿರುತ್ತದೆ. ನಗರ ಸಭೆಯವರು ಹಾಗು ಸ್ವಂತ ಅಂಗಡಿ ಮಾಲೀಕರು ತಮ್ಮ ಸ್ಪರ್ಧಿಗಳ ಜೊತೆ ಕಣಕ್ಕೆ ಇಳಿದಿರುತ್ತಾರೆ. ಒಂದು ರೀತಿಯಲ್ಲಿ ಇದಕ್ಕಾಗಿಯೇ ವ್ಯಾಪಾರದ ಸರಕುಗಳನ್ನು ಬಾಡಿಗೆ ಪಡೆದು, ಚಿಲ್ಲರೆ ಅಂಗಡಿಗಳನ್ನು ಅಲಂಕರಿಸಿ,ಖರೀದಿದಾರರನ್ನು ಹೆಚ್ಚು ಆಕರ್ಷಿಸುವ ಹಾಗೆ ಮಾಡುವರು. ರಾಷ್ಟ್ರದ ಬಹುದೊಡ್ಡ ಚಿಲ್ಲರೆ ಮಾರಾಟಗಾರರು ಪ್ರತೀ ವರ್ಷ ಕೋಟ್ಯಾಂತರ ರೂಪಾಯಿಗಳನ್ನು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿ, ಋತುವಾರು ಹಾಗು ಬಡ್ತಿವಾರು ಬದಲಾವಣೆಗಳ ಕಾರ್ಯಕ್ರಮವು ಇರುತ್ತದೆ. ವಸ್ತುಗಳ ಬದಲಾವನೆಯಾದಂತೆ,ಚಿಲ್ಲರೆ ವ್ಯಾಪಾರವು ಬದಲಾವಣೆಯಾಗುತ್ತಾ ಹೋಗುತ್ತದೆ. ಚಿಲ್ಲರೆ ವ್ಯಾಪಾರಗಾರರು ಹೊರಗಿನ ಪ್ರದರ್ಶನ/ಮೇಲ್ಮೈ ಚೆನ್ನಾಗಿಲ್ಲದೆ ಇದ್ದರೂ, ಚೆನ್ನಾಗಿರುವಂತೆ ಪ್ರದರ್ಶಿಸುವ ಕಲೆ /ತಂತ್ರಗಳು ಕೆಲವು ಚಿಲ್ಲರೆ ವ್ಯಾಪಾರಿಗಳಿಗೆ ಇದೆ.

ಕೆಲವು ಗುರಿ ಹೊಂದಿರುವ ಅಂಗಡಿಗಳು / ವ್ಯಾಪಾರಿಗರು, ಖರೀದಿಗಾರರಿಗೆ ಪ್ರಯಾಣದ ಆಸೆಯನ್ನು ತೋರಿ ,ಕರೆದುಕೊಂಡು ಹೋಗಿ ದೊಡ್ಡ ಪ್ರಮಾಣದಲ್ಲಿ ಗುರಿ ಮುಟ್ಟುತ್ತಾರೆ. ಇಂತಹ ಅಂಗಡಿಯ ವ್ಯಾಪಾರಿಗರು ಸಾಮಾನ್ಯವಾಗಿ "ಪ್ರಚಾರಕಾಗಿ " ಅಂಗಡಿ ಸಮುಚ್ಚಯಗಳನ್ನು ಅಥವಾ ಪ್ಲಾಜಾಗಳನ್ನು ಬಳಸಿ,ಕಾಲುನಡಿಗೆಯ ಖರೀದಿಗಾರರನ್ನು ಆಕರ್ಷಿಸಿ,ಸಣ್ಣ ಚಿಲ್ಲರೆ ವ್ಯಾಪಾರಿಗಳ ಮೇಲೆ ಅಂಕುಶ ಹಾಕುತ್ತಾರೆ.

ಗುಣಮಟ್ಟಕ್ಕಿಂತ ಮಿಶ್ರ ಮಾರುಕಟ್ಟೆಯ ತಂತ್ರ ಗ್ರಾಹಕರ ನಂಬಿಕೆಯನ್ನು ಮೇಲೆ ಮಹತ್ವದ ಮತ್ತು ಧನಾತ್ಮಕ ಅಸೋಸಿಯೇಷನ್ ಹೊಂದಿವೆ.ಚಿಲ್ಲರೆ ಮಿಶ್ರಣವನ್ನು, ಉತ್ಪನ್ನ, ಗುಣಮಟ್ಟ ಹಾಗೂ ಮೌಲ್ಯ, ಪ್ರಚಾರಗಳು, ಸ್ಥಳ ಮತ್ತು ಬೆಲೆ ಸೈದ್ಧಾಂತಿಕ ಉಪಕರಣಗಳು ಮೂಲಕ ಚಿಲ್ಲರೆ ತಂತ್ರ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ.

ಗ್ರಾಹಕರ ಸೇವೆ

ಬದಲಾಯಿಸಿ

"ಡಿಸ್ಕವರಿ - ಬೇಸ್ಡ್ ರೀಟೈಲ್ "[]ಪುಸ್ತಕದ ಪ್ರಕಾರ ಗ್ರಾಹಕರ ಸೇವೆ ಎಂದರೆ " ಕ್ರಯ ಮತ್ತು ವಸ್ತುಗಳ ಒಟ್ಟು ಸಮೂಹದಿಂದ ಖರೀದಿದಾರರಿಗೆ ಏನು ಬೇಕೋ ಅದನ್ನು ಸಣ್ಣ ಚಿಲ್ಲರೆ ಅಂಗಡಿಯಿಂದ ಪಡೆಯುವ ದಾರಿಯೇ ಆಗಿರುತ್ತದೆ."

ಚಿಲ್ಲರೆ ವಿಕ್ರಯ

ಬದಲಾಯಿಸಿ

ಚಿಲ್ಲರೆ ಮಾರಾಟದ ವಿಕ್ರಯ ವರದಿಯನ್ನು ಪ್ರತೀ ತಿಂಗಳು ಪ್ರಕಟಿಸಲಾಗುತ್ತದೆ. ಗ್ರಾಹಕನ ಖರ್ಚು ಎಷ್ಟು ಆಗಿದೆ ಎಂಬುದನ್ನು ತಿಳಿಯುವುದೇ ಅಮೆರಿಕಾದ ಜಿಡಿಪಿ ಯ ಮುಖ್ಯ ಉದ್ದೇಶ.ಡಾಲರ್ ಬೆಲೆಯಲ್ಲಿ ಚಿಲ್ಲರೆ ವ್ಯಾಪಾರಗಾರರು ಲಕ್ಕ ನೀಡಿ ಪುಸ್ತಕದಲ್ಲಿ ಧಾಖಲಿಸುತ್ತಾರೆ. 12000 ಅಂಗಡಿಗಳು ಅಂತಿಮವಾಗಿ ನಡೆದ ಲೆಕ್ಕದ ಅಳತೆ/ಮೋಜಣಿ ಯ ಪ್ರಕಾರ 5000 ಅಂಗಡಿಗಳು ಮಾದರಿಯಲ್ಲಿವೆ. ಮುಂಗಡ ದರಪಟ್ಟಿಯ ಲಕ್ಕವು ಉಪ ಮಾದರಿಯ ಅಮೆರಿಕಾದ ಸಿಬಿ ಮೇಲೆ ಪೂರ್ಣ ಚಿಲ್ಲರೆ ವ್ಯಾಪಾರವಾಗಿದ್ದು, ಆಹಾರ ಪದಾರ್ಥದ ಸೇವೆ ಗಳು ಮಾದರಿಯಾಗಿರುತ್ತದೆ.[]

1951 ರಲ್ಲೇ ಅಮೆರಿಕಾದ ಸೆನ್ಸಸ್ ಬ್ಯುರೋ ಇದನ್ನು ಪ್ರಕಟಿಸುತ್ತಾ ಬಂದಿದೆ.

ಗ್ರಂಥಸೂಚಿ

ಬದಲಾಯಿಸಿ
  • Krafft, Manfred (2006). Retailing in the 21st century: current and future trends. New York: Springer Verlag. ISBN 3540283994. {{cite book}}: Unknown parameter |coauthors= ignored (|author= suggested) (help)

ಇವನ್ನೂ ನೋಡಿ

ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

ಟಿಪ್ಪಣಿಗಳು

ಬದಲಾಯಿಸಿ
  1. "Distribution Services". Foreign Agricultural Service. 2000-02-09. Retrieved 2006-04-04.
  2. Harper, Douglas. "retail". Online Etymology Dictionary. Retrieved 2008-03-16.
  3. ಫಿಲಿಪ್ ಹೆಚ್. ಮಿತ್ಚೆಲ್ 2008, ಡಿಸ್ಕವರಿ -ಬೇಸ್ಡ್ ರೀಟೈಲ್ , ಬಸ್ಕಾಂ ಹಿಲ್ ಪಬ್ಲಿಷಿಂಗ್ ಗ್ರೂಪ್ ಐ ಎಸ್ ಬಿ ಎನ್ 9780979846793
  4. ಅಮೆರಿಕಾದ ಸೆನ್ಸಸ್ ಬ್ಯುರೋ ರೀಟೈಲ್ ಸೇಲ್ಸ್ ರೀಟೈಲ್ ಸೇಲ್ಸ್ರೀಟೈಲ್ ಸೇಲ್ಸ್ ಡೆಫ್ನೇಶನ್

ಬಾಹ್ಯ ಕೊಂಡಿಗಳು

ಬದಲಾಯಿಸಿ