ಗ್ವಾಲಿಯರ್ ಕೋಟೆ ಭಾರತದ ಮಧ್ಯ ಪ್ರದೇಶಗ್ವಾಲಿಯರ್ ಹತ್ತಿರವಿರುವ ಒಂದು ಗಿರಿಕೋಟೆಯಾಗಿದೆ. ಈ ಕೋಟೆಯು ಕನಿಷ್ಠಪಕ್ಷ ೧೦ ನೇ ಶತಮಾನದಿಂದ ಅಸ್ತಿತ್ವದಲ್ಲಿದೆ, ಮತ್ತು ಈಗ ಕೋಟೆ ಆವರಣವೆಂದೆನಿಸಿಕೊಳ್ಳುವುದರ ಒಳಗೆ ಕಂಡುಬರುವ ಶಾಸನಗಳು ಹಾಗೂ ಸ್ಮಾರಕಗಳು ಇದು ೬ನೇ ಶತಮಾನದ ಆರಂಭದಷ್ಟು ಮುಂಚಿತವಾಗಿಯೇ ಅಸ್ತಿತ್ವದಲ್ಲಿದ್ದಿರಬಹುದೆಂದು ಸೂಚಿಸುತ್ತವೆ. ಇದರ ಇತಿಹಾಸದಲ್ಲಿ ಕೋಟೆಯನ್ನು ಅನೇಕ ವಿಭಿನ್ನ ಆಳ್ವಿಕೆಗಾರರು ನಿಯಂತ್ರಿಸಿದ್ದಾರೆ.

ವಿಶ್ವದಲ್ಲಿ"ಸೊನ್ನೆ"ಯ ಎರಡನೇ ಅತಿ ಹಳೆಯ ದಾಖಲೆಯು ಒಂದು ಸಣ್ಣ ದೇವಾಲಯದಲ್ಲಿ ಕಂಡುಬಂದಿತು. ಇದು ಈ ಕೋಟೆಯ ಮೇಲ್ಭಾಗಕ್ಕೆ ಹೋಗುವ ದಾರಿಯಲ್ಲಿ ಸ್ಥಿತವಾಗಿದೆ. ಈ ಶಿಲಾಶಾಸನವು ಆಧುನಿಕ ದಶಮಾನ ಸಂಕೇತ ಪದ್ಧತಿಯಲ್ಲಿರುವಂತೆ ಸ್ಥಾನ ಮೌಲ್ಯವನ್ನು ಹೊಂದಿರುವ ಸಂಖ್ಯಾತ್ಮಕ ಸೊನ್ನೆ ಸಂಕೇತದ ಅತಿ ಹಳೆಯ ದಾಖಲೆಯನ್ನು ಹೊಂದಿದೆ. ಈ ಶಾಸನವು ಸುಮಾರು ೧೫೦೦ ವರ್ಷಗಳಷ್ಟು ಹಳೆಯದಾಗಿದೆ.[][]

ಗೋಪಾಚಲ

ಗೋಪಾಚಲ ಗಿರಿಯಲ್ಲಿ ಸುಮಾರು ೧೫೦೦ ವಿಗ್ರಹಗಳಿವೆ.

ಇದನ್ನು ೧೯೭೦ ಮತ್ತು ೧೯೮೦ರ ದಶಕದ ಅವಧಿಯಲ್ಲಿ ನಿರ್ಮಿಸಲಾಯಿತು. ಈ ಸ್ಥಳದಲ್ಲಿ ೬ನೇ ಸಿಖ್ ಗುರು ಹರ್‌ಗೋಬಿಂದ್ ಸಾಹಿಬ್‍ರನ್ನು ಮುಘಲ್ ಸಾಮ್ರಾಟ ಜಹಾಂಗೀರ್ ಬಂಧಿಸಿ ಸೆರೆಯಿಟ್ಟನು.

ರಚನೆಗಳು

ಬದಲಾಯಿಸಿ
 
ಕಲ್ಲಿನಲ್ಲಿ ಕೆತ್ತಿದ ತೀರ್ಥಂಕರರ ವಿಗ್ರಹಗಳು.

ಕೋಟೆ ಮತ್ತು ಅದರ ಆವರಣವನ್ನು ಚೆನ್ನಾಗಿ ಕಾಪಾಡಲಾಗಿದೆ ಮತ್ತು ಅರಮನೆಗಳು, ದೇವಾಲಯಗಳು ಹಾಗೂ ಕೊಳಗಳು ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ.

ಪ್ರಧಾನ ಸ್ಮಾರಕಗಳು

ಬದಲಾಯಿಸಿ

ಜೈನ ದೇವಾಲಯಗಳು

ಬದಲಾಯಿಸಿ

ಸಿದ್ಧಾಚಲ ಜೈನ ದೇವಾಲಯ ಗುಹೆಗಳನ್ನು ೭ ರಿಂದ ೧೫ ನೇ ಶತಮಾನಗಳ ನಡುವೆ ನಿರ್ಮಿಸಲಾಯಿತು.[]

ಮುಖ್ಯ ದೇವಾಲಯ

ಉರ್ವಹಿ

 
ಗ್ವಾಲಿಯರ್ ಕೋಟೆಯ ಉರ್ವಹಿ ಪ್ರವೇಶದ್ವಾರದ ಹತ್ತಿರ ಬಂಡೆಯಲ್ಲಿ ಕೆತ್ತಿದ ಜೈನ ವಿಗ್ರಹಗಳು

ಗ್ವಾಲಿಯರ್ ಕೋಟೆಯ ಐದು ಪ್ರದೇಶಗಳಲ್ಲಿ ಒಂದಾದ ಉರ್ವಹಿ ಪ್ರದೇಶದಲ್ಲಿ ಪದ್ಮಾಸನ ಭಂಗಿಯಲ್ಲಿರುವ ತೀರ್ಥಂಕರರ ೨೪ ಮೂರ್ತಿಗಳು, ಕಾಯೋತ್ಸರ್ಗ ಭಂಗಿಯಲ್ಲಿರುವ ೪೦ ಮೂರ್ತಿಗಳು, ಮತ್ತು ಗೋಡೆಗಳು ಹಾಗೂ ಕಂಬಗಳ ಮೇಲೆ ಕೆತ್ತಲಾದ ೮೪೦ ಮೂರ್ತಿಗಳಿವೆ.

 
ಭಗವಾನ್ ಆದಿನಾಥನ ೫೮ ಅಡಿ ೪ ಅಂಗುಲ ಎತ್ತರದ ವಿಗ್ರಹ.

ಮುಘಲ್ ದಾಳಿ : ೧೫೨೭ರಲ್ಲಿ, ಬಾಬರ್‌ನ ಸೇನೆಯು ಗ್ವಾಲಿಯರ್ ಕೋಟೆಯ ಮೇಲೆ ದಾಳಿ ಮಾಡಿ ಈ ವಿಗ್ರಹಗಳನ್ನು ವಿರೂಪಗೊಳಿಸಿತು.

ತೇಲಿ ಕಾ ಮಂದಿರ್

ಬದಲಾಯಿಸಿ
 
ಪ್ರತೀಹಾರ ಸಾಮ್ರಾಟ ಮಿಹಿರ ಭೋಜ ಕಟ್ಟಿದ ತೇಲಿ ಕಾ ಮಂದಿರ್a.[]

ತೇಲಿ ಕಾ ಮಂದಿರ್ ಕೋಟೆಯ ಅತ್ಯಂತ ಹಳೆಯ ಭಾಗವಾಗಿದ್ದು ದಕ್ಷಿಣ ಮತ್ತು ಉತ್ತರ ಭಾರತದ ವಾಸ್ತುಶೈಲಿಯ ಮಿಶ್ರಣವಾಗಿದೆ.

ಗರುಡ ಸ್ಮಾರಕ

ಬದಲಾಯಿಸಿ

ತೇಲಿ ಕಾ ಮಂದಿರ್ ಹತ್ತಿರ ಗರುಡ ಸ್ಮಾರಕವಿದೆ. ಇದು ವಿಷ್ಣುವಿಗೆ ಸಮರ್ಪಿತವಾಗಿದ್ದು ಕೋಟೆಯಲ್ಲಿ ಅತಿ ಎತ್ತರದ ಸ್ಥಳವಾಗಿದೆ.

ಸಹಸ್ತ್ರಬಾಹು (ಸಾಸ್-ಬಹು) ದೇವಾಲಯ

ಬದಲಾಯಿಸಿ

ಇದನ್ನು ಕಚ್ಛಪಘಾತ ರಾಜವಂಶವು 1092-93ರಲ್ಲಿ ನಿರ್ಮಿಸಿತು ಮತ್ತು ವಿಷ್ಣುವಿಗೆ ಸಮರ್ಪಿತವಾಗಿದೆ.

ಗುರುದ್ವಾರಾ ದಾತಾ ಬಂದಿ ಛೋರ್

ಬದಲಾಯಿಸಿ
 

ಮಾನ್ ಮಂದಿರ್ ಅರಮನೆ

ಬದಲಾಯಿಸಿ

ಇದನ್ನು ತೋಮರ್ ರಾಜವಂಶದ ಮಹಾರಾಜ ಮಾನ್ ಸಿಂಗ್ ೧೫ನೇ ಶತಮಾನದಲ್ಲಿ ತನ್ನ ಅಚ್ಚುಮೆಚ್ಚಿನ ರಾಣಿ ಮೃಗ್‍ನಯನಿಗಾಗಿ ನಿರ್ಮಿಸಿದನು.

ಹಾಥಿ ಪೋಲ್

ಬದಲಾಯಿಸಿ

ಆಗ್ನೇಯ ದಿಕ್ಕಿನಲ್ಲಿ ಸ್ಥಿತವಾಗಿರುವ ಹಾಥಿ ಪೋಲ್ ಪ್ರವೇಶದ್ವಾರವು ಮಾನ್ ಮಂದಿರ್ ಅರಮನೆಗೆ ಕರೆದೊಯ್ಯುತ್ತದೆ.

ಕರನ್ ಮೆಹೆಲ್

ಬದಲಾಯಿಸಿ

ಇದನ್ನು ತೋಮರ್ ರಾಜವಂಶದ ಎರಡನೇ ರಾಜ ಕೀರ್ತಿ ಸಿಂಗ್ ನಿರ್ಮಿಸಿದನು.

ವಿಕ್ರಮ್ ಮೆಹೆಲ್

ಬದಲಾಯಿಸಿ

ಇದನ್ನು ಮಹಾರಾಜ ಮಾನ್‍ಸಿಂಗ್‍ನ ಹಿರಿಮಗ ವಿಕ್ರಮಾದಿತ್ಯ ಸಿಂಗ್ ನಿರ್ಮಿಸಿದನು. ಇದು ಶಿವ ದೇವಾಲಯವನ್ನು ಹೊಂದಿತ್ತು.

ಭೀಮ್ ಸಿಂಗ್ ರಾಣಾನ ಛತ್ರಿ

ಬದಲಾಯಿಸಿ

ಈ ಛತ್ರಿಯನ್ನು (ಗುಮ್ಮಟ ಗೋಪುರ) ಗೋಹದ್‍ ರಾಜ್ಯದ ಅರಸ ಭೀಮ್ ಸಿಂಗ್ ರಾಣಾನ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು.

ವಸ್ತು ಸಂಗ್ರಹಾಲಯ

ಬದಲಾಯಿಸಿ

ಗುಜರಿ ಮೆಹೆಲ್‌ನ್ನು ರಾಜ ಮಾನ್ ಸಿಂಗ್ ತೋಮರ್ ತನ್ನ ರಾಣಿಗಾಗಿ ನಿರ್ಮಿಸಿದನು. ಈಗ ಇದು ವಸ್ತುಸಂಗ್ರಹಾಲಯವಾಗಿದೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. You Can Visit the World’s Oldest Zero at a Temple in India, Smithsonian magazine.
  2. Joseph, George Gheverghese (2016). Indian Mathematics: Engaging with the World from Ancient to Modern Times. World Scientific. ISBN 1786340631. In a temple on the path up to Gwalior Fort [...] where we find a circular zero in the terminal position.
  3. Kurt Titze; Klaus Bruhn (1998). Jainism: A Pictorial Guide to the Religion of Non-violence. Motilal Banarsidass. pp. 106–110. ISBN 978-81-208-1534-6.
  4. K. D. Bajpai (2006). History of Gopāchala. Bharatiya Jnanpith. p. 31. ISBN 978-81-263-1155-2.

ಗ್ರಂಥಸೂಚಿ

ಬದಲಾಯಿಸಿ

ಹೊರಗಿನ ಕೊಂಡಿಗಳು

ಬದಲಾಯಿಸಿ