ದೊಡ್ಡ ದಾಸಮಂಗಟ್ಟೆ

(ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಇಂದ ಪುನರ್ನಿರ್ದೇಶಿತ)
ದೊಡ್ಡ ದಾಸಮಂಗಟ್ಟೆ
Perched on a Mesua tree at Valparai, South India
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
B. bicornis
Binomial name
Buceros bicornis
Linnaeus, 1758
Synonyms

Buceros homrai[]
Dichoceros bicornis
Buceros cavatus
Homraius bicornis

ಗ್ರೇಟ್ ಹಾರ್ನ್ ಬಿಲ್ (ಬ್ಯುಸೆರೊಸ್ ಬೈಕಾರ್ ನಿಸ್ ), ಇದನ್ನು ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್ ಬಿಲ್ (ಬಣ್ಣಬಣ್ಣದ ಮಹಾ ಹಾರ್ನ್ ಬಿಲ್) ಎಂದು ಕೂಡ ಕರೆಯಲಾಗುತ್ತದೆ.ಕನ್ನಡದಲ್ಲಿ"ಮಂಗಟ್ಟೆ"ಎಂದು ಕರೆಯುತ್ತಾರೆ. ಹಾರ್ನ್ ಬಿಲ್ ಕುಟುಂಬದ ದೊಡ್ಡ ಪ್ರಭೇದಗಳ ಪೈಕಿ ಇದು ಒಂದಾಗಿದೆ. ಗ್ರೇಟ್ ಹಾರ್ನ್ ಬಿಲ್, ಭಾರತ, ಮಲಯ್ ಪರ್ಯಾಯ ದ್ವೀಪ ಮತ್ತು ಸುಮಾತ್ರಾ, ಇಂಡೋನೇಷ್ಯಾದ ಅರಣ್ಯಗಳಲ್ಲಿ ಕಂಡುಬರುತ್ತದೆ. ಅವುಗಳ ಆಕರ್ಷಕ ಗಾತ್ರ ಮತ್ತು ಬಣ್ಣ ಅನೇಕ ಬುಡಕಟ್ಟು ಜನಾಂಗದ ಸಂಸ್ಕೃತಿಗಳಲ್ಲಿ ಮತ್ತು ಆಚರಣೆಗಳಲ್ಲಿ ಅವುಗಳನ್ನು ಪ್ರಮುಖವಾಗಿಸಿವೆ. ಗ್ರೇಟ್ ಹಾರ್ನ್ ಬಿಲ್ ದೀರ್ಘಕಾಲದವರೆಗೆ ಜೀವಿಸುವ ಪಕ್ಷಿಯಾಗಿದ್ದು, ಸೆರೆಯಲ್ಲಿ(ಪಂಜರದಲ್ಲಿ) ೫೦ ವರ್ಷಗಳ ವರೆಗೆ ಬದುಕುಳಿಯುತ್ತವೆ. ಇವುಗಳು ಹೆಚ್ಚಾಗಿ ಫಲಾಹಾರಿಗಳಾದರೂ ಕೂಡ ಇವು ಅನುಕೂಲವರ್ತಿಗಳಾಗಿದ್ದು, ಸಣ್ಣ ಸಸ್ತನಿ, ಸರೀಸೃಪ ಮತ್ತು ಪಕ್ಷಿಗಳನ್ನು ಬೇಟೆಯಾಡುತ್ತವೆ.

ವಿವರಣೆ

ಬದಲಾಯಿಸಿ
 
ಶಿರಸ್ತ್ರಾಣದ ಕೆಳಗೆ ಒಳಗಿರುವಂತಹ ಕಣ್ಪೊರೆ ಹಾಗು ಕಣ್ಣಿನಕುಳಿಯ ಚರ್ಮದ ಬಣ್ಣಗಳು ಲಿಂಗಗಳ ನಡುವೆ ವ್ಯತ್ಯಾಸವನ್ನು ಹೊಂದಿರುತ್ತದೆ.

ಗ್ರೇಟ್ ಹಾರ್ನ್ ಬಿಲ್ (ಕನ್ನಡದಲ್ಲಿ ಮಂಗಟ್ಟೆ ಹಕ್ಕಿ ಅನ್ನುತ್ತಾರೆ )ದೊಡ್ಡ ಗಾತ್ರದ ಪಕ್ಷಿಯಾಗಿದ್ದು, ೧೫೨ ಸೆಂಟಿ ಮೀಟರ್ (೬೦ ಒಳಗೆ) ರೆಕ್ಕೆಯ ವಿಸ್ತಾರದೊಂದಿಗೆ ೯೫–೧೨೦ ಸೆಂಟಿ ಮೀಟರ್ (೩೮–೪೭ ವರೆಗೆ) ಉದ್ದವಿದೆ, ಹಾಗು ೨.೧೫–೪ ಕೆ.ಜಿ (೪.೭-೮.೮ ಪೌಂಡ್)ರಷ್ಟು ತೂಕವಿರುತ್ತದೆ. ಇದು ಅತ್ಯಂತ ಉದ್ದವಲ್ಲದ ಆದರೆ ಅತ್ಯಂತ ಭಾರದ ಏಷ್ಯನ್ ಹಾರ್ನ್ ಬಿಲ್ ಆಗಿದೆ. ಇದರ ಉದ್ದವಾದ ಕೊಕ್ಕಿನ ಮೇಲಿರುವ ಗಾಢ ಹಳದಿ ಮತ್ತು ಕಪ್ಪು ಶಿರಸ್ತ್ರಾಣ( ಕೊಕ್ಕಿನ ಮೇಲಿರುವ ರಕ್ಷಾಕವಚ) ಹಾರ್ನ್ ಬಿಲ್‌ನ ಅತ್ಯಂತ ಪ್ರಮುಖ ಗುಣಲಕ್ಷಣವಾಗಿದೆ. ಇದರ ಶಿರಸ್ತ್ರಾಣವನ್ನು ಮುಂದಿನಿಂದ ನೋಡಿದಾಗ ಅದು U- ಆಕಾರದಲ್ಲಿ ಕಂಡುಬರುತ್ತದೆ. ಹಾಗು ಮೇಲ್ಬಾಗವು ಒಳಬಾಗಿದ್ದು, ಬದಿಗಳಲ್ಲಿ ಎರಡು ಏಣುಗಳಿದ್ದು ಅವು ಮುಂಭಾಗದಲ್ಲಿ ತುತ್ತತುದಿ(ಬಿಂದು)ಯಾಗಿ ರಚನೆಯಾಗುತ್ತವೆ. ಇದನ್ನು ಲ್ಯಾಟೀನ್‌ ಪ್ರಭೇದಗಳ ಬೈಕ್ರಾನಿಸ್ ಉಪನಾಮದಲ್ಲಿ ಉಲ್ಲೇಖಿಸಲಾಗಿದೆ. ಶಿರಸ್ತ್ರಾಣವು ಟೊಳ್ಳಾಗಿದ್ದು,ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ. ಆದರೂ ಇವುಗಳನ್ನು ಕೆಲವು ಗುಣಲಕ್ಷಣಗಳಿಂದ ಕೂಡಿದ ಲಿಂಗ ಆಯ್ಕೆಯ ಫಲಿತಾಂಶವೆಂದು ನಂಬಲಾಗಿದೆ. ಗಂಡು ಹಾರ್ನ್ ಬಿಲ್‌ಗಳು ಹಾರುವಾಗ ಗಾಳಿಯಲ್ಲಿ ಪರಸ್ಪರ ಘರ್ಷಿಸುವ ಮೂಲಕ ಶಿರಸ್ತ್ರಾಣದಿಂದ ಡಿಕ್ಕಿಹೊಡೆಯುವುದರಲ್ಲಿ ನಿರತವಾಗಿರುತ್ತವೆ.[] ಹೆಣ್ಣು ಹಾರ್ನ್ ಬಿಲ್‌ಗಳು ಗಂಡಿಗಿಂತ ಚಿಕ್ಕದಾಗಿರುತ್ತವೆ. ಅಲ್ಲದೇ ಇವುಗಳ ಕಣ್ಣುಕುಳಿಯ ಚರ್ಮ ಊದ ಬಣ್ಣದಲ್ಲಿದ್ದರೂ (ಕಡುಕೆಂಪು) ಕೂಡ ಕೆಂಪು ಕಣ್ಣುಗಳ ಬದಲಿಗೆ ನಸುನೀಲಿ ಮಿಶ್ರಿತ ಬಿಳಿಬಣ್ಣದ ಕಣ್ಣುಗಳನ್ನು ಹೊಂದಿರುತ್ತವೆ. ಇತರ ಹಾರ್ನ್‌ಬಿಲ್ ಗಳಂತೆ ಇವುಗಳು ಕೂಡ ಆಕರ್ಷಕ "ಕಣ್ಣಿನ ರೆಪ್ಪೆಗಳನ್ನು" ಹೊಂದಿರುತ್ತವೆ. ಹೆಣ್ಣು ಹಾರ್ನ್ ಬಿಲ್ ಗಳಲ್ಲಿ ಶಿರಸ್ತ್ರಾಣದ ಹಿಂಭಾಗವು ನಸುಗೆಂಪಾಗಿರುತ್ತದೆ.ಗಂಡುಗಳಲ್ಲಿ ಶಿರಸ್ತ್ರಾಣದ ಮುಂಭಾಗ ಮತ್ತು ಹಿಂಭಾಗದ ಕೆಳತಲವು ಕಪ್ಪಾಗಿರುತ್ತದೆ. ಗಂಡು ಹಾರ್ನ್ ಬಿಲ್, ಪ್ರೀನ್ ಗ್ರಂಥಿಯ ಸ್ರಾವವನ್ನು ಹರಡುತ್ತದೆ. ಇದು ಹಳದಿಬಣ್ಣದಲ್ಲಿದ್ದು, ಈ ಮೂಲಕ ಹಾರುವ ರೆಕ್ಕೆಯ ಗರಿಗಳಿಗೆ ಮತ್ತು ಕೊಕ್ಕಿಗೆ ಗಾಢವಾದ ಹಳದಿ ಬಣ್ಣ ನೀಡುತ್ತದೆ.[] ಕೊಕ್ಕಿನ ಅಸ್ಥಿಸಂಧಿಯು ಕಪ್ಪು ಬಣ್ಣದಲ್ಲಿರುತ್ತದೆ. ಅಲ್ಲದೇ ದಂತುರೀಕೃತ ಮತ್ತು ವಯಸ್ಸಿನೊಂದಿಗೆ ಸವೆದುಹೋದ ತುದಿಗಳನ್ನು ಹೊಂದಿರುತ್ತದೆ. ಇವು ರೆಕ್ಕೆಗಳನ್ನು ಜೋರಾಗಿ ಬಡಿಯುತ್ತವೆ. ಅಲ್ಲದೇ ಇವುಗಳು ಹಾರುವ ಸಮಯದಲ್ಲಿ ರೆಕ್ಕೆಗಳನ್ನು ಬಡಿಯುವಾಗ ಉಂಟುಮಾಡುವ ಶಬ್ದವನ್ನು ದೂರದಿಂದಲೂ ಕೇಳಿಸಿಕೊಳ್ಳಬಹುದಾಗಿದೆ. ರೆಕ್ಕೆಗಳನ್ನು ಬಡಿಯುವಾಗ ಕೇಳಿಸುವ ಶಬ್ದವು, ಚಲಿಸಲಾರಂಭಿಸುವ ಉಗಿ ಎಂಜಿನ್ ಶಬ್ದದ ರೀತಿಯಲ್ಲಿರುತ್ತದೆ. ಅಗಲವಾಗಿ ಚಾಚಿಕೊಂಡಿರುವ ಮತ್ತು ಮೇಲಕ್ಕೆ ಸುರುಳಿಯಾಗಿ ತಿರುಚಿಕೊಂಡಂತಿರುವ ಬೆರಳುಗಳೊಂದಿಗೆ, ಪಕ್ಷಿಯ ಹಾರಾಟವು ಬಿರುಸಾದ ರೆಕ್ಕೆಗಳ ಬಡಿತದ ಹಿಂದೆಯೇ ಸರಾಗವಾಗಿರುವ ಜಾರಿಕೆಗಳನ್ನು(ತೇಲುವಿಕೆ)ಒಳಗೊಂಡಿದೆ. ಇವುಗಳು ಕೆಲವೊಮ್ಮೆ ಕಾಡಿನ ಮೇಲೆ ಅತ್ಯಂತ ಎತ್ತರದಲ್ಲಿ ಹಾರುತ್ತವೆ,ಎಂದು ಹೇಳಲಾಗುತ್ತದೆ.[][]

 
ಕಣ್ಣಿನ ರೆಪ್ಪೆಗಳನ್ನು,ಸವೆದುಹೋದ ಕೊಕ್ಕಿನ ತುದಿ ಮತ್ತು ಏಣಿನ ಬದಿಗಳೊಂದಿಗೆ ಒಳಬಾಗಿದಂತಿರುವ ಶಿರಸ್ತ್ರಾಣವನ್ನು ತೋರಿಸುವ ಮೂಲಕ ವಿವರಣೆಯನ್ನು ನೀಡುತ್ತಿರುವ T. W. ವುಡ್(1823-1903)

ಇದರ ಪ್ರಭೇದಗಳನ್ನು ಹಿಂದೆ ಪಶ್ಚಿಮ ಘಟ್ಟಗಳಿಂದ ಉಪಪ್ರಭೇದಗಳು ಕೆವಾಟಸ್ ಎಂದು ವಿಂಗಡಿಸಲಾಗಿತ್ತು; ಉಪ ಹಿಮಾಲಯದ ಕಾಡುಗಳಿಂದ ನಾಮಕರಣ ಮಾಡಲಾದ ರೂಪವನ್ನು ಉಪಪ್ರಭೇದ ಹೊಮ್ರೈ ಎಂದು ಹೆಸರಿಸಲಾಗಿದೆ. ಸುಮಾತ್ರಾದಿಂದ ಬಂದಂತಹ ಉಪಪ್ರಭೇದಗಳನ್ನು ಕೆಲವು ಕಾಲದವರೆಗೆ ನವಿಲು ಜಾತಿಯ ಕ್ರಿಸ್ಟೇಟಸ್ ಎಂದು ಪರಿಗಣಿಸಲಾಗಿತ್ತು.[] ಇವುಗಳ ಸಂಖ್ಯೆಗಳಲ್ಲಿ ವ್ಯತ್ಯಾಸವು ಮುಖ್ಯವಾಗಿ ಗಾತ್ರದಲ್ಲಿರುತ್ತದೆ. ಹಿಮಾಲಯದ ಪಕ್ಷಿಗಳು ದಕ್ಷಿಣದಿಂದ ಬರುವ ಪಕ್ಷಿಗಳಿಗಿಂತ ದೊಡ್ಡ ಗಾತ್ರದಲ್ಲಿರುತ್ತವೆ; ಮತ್ತು ಈ ಪ್ರಬೇಧಗಳನ್ನು ಈಗ ಉಳಿದಿರುವ ಏಕೈಕ ಮಾದರಿ ಎಂದು ಪರಿಗಣಿಸಲಾಗಿದೆ.[][]

ಹಾರ್ನ್ ಬಿಲ್ ಕುಟುಂಬದ ಇತರ ಪ್ರಭೇದಗಳಂತೆ ಇವು ಕೂಡ, ಅತಿಯಾದ ಟೊಳ್ಳಾದ ಮೂಳೆಗಳನ್ನು ಹೊಂದಿದ್ದು, ಟೊಳ್ಳಾದ ಗಾಳಿಗೂಡುಗಳೊಂದಿಗೆ ಅವುಗಳ ರೆಕ್ಕೆಯ ಎಲುಬಿನ ತುದಿಗಳವರೆಗೆ ವಿಸ್ತರಿಸಿದೆ. ಇದು ರಿಚರ್ಡ್ ಓವೆನ್ ರವರು ಗಮನಿಸಿದಂತಹ ಅಂಗರಚನಶಾಸ್ತ್ರದ ಗುಣಲಕ್ಷಣವಾಗಿದೆ. ಇವರು ೧೮೩೩ ರಲ್ಲಿ ಸತ್ತ ಪಕ್ಷಿಯ ಪ್ರಭೇದವನ್ನು ಲಂಡನ್ನಿನ ಪ್ರಾಣಿವಿಜ್ಞಾನ ಸಂಸ್ಥೆಯಲ್ಲಿ ಅಂಗಚ್ಛೇದ ಮಾಡಿ ಪರೀಕ್ಷಿಸಿದ್ದರು.[೧೦]

ಹರಡುವಿಕೆ ಮತ್ತು ಆವಾಸಸ್ಥಾನ

ಬದಲಾಯಿಸಿ

ಹಾರ್ನ್ ಬಿಲ್ ಜಾತಿಗಳ ಹರಡುವಿಕೆಯನ್ನು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಅವುಗಳು ಎಷ್ಟು ಪ್ರಮಾಣದಲ್ಲಿವೆ ಎಂಬುದರ ಮೇಲೆ ಪ್ರತ್ಯೇಕಿಸಲಾಗುತ್ತದೆ. ದಕ್ಷಿಣ ಏಷ್ಯಾದಲ್ಲಿ , ಅವುಗಳು ಪಶ್ಚಿಮ ಘಟ್ಟದ ಕೆಲವೇ ಕೆಲವು ಕಾಡುಪ್ರದೇಶಗಳಲ್ಲಿ ಹಾಗು ಹಿಮಾಲಯದ ಸಮೀಪದಲ್ಲಿರುವ ಕಾಡುಗಳಲ್ಲಿ ಕಂಡುಬರುತ್ತವೆ. ಅವುಗಳ ಹರಡುವಿಕೆಯು ಥೈಲ್ಯಾಂಡ್, ಬರ್ಮಾ, ಮಲಯ ಮತ್ತು ಸುಮಾತ್ರಗಳವರೆಗು ವಿಸ್ತರಿಸಿದೆ.[೧೧] ಎತ್ತರ ಪ್ರದೇಶಗಳಲ್ಲಿರುವ ಅನೇಕ ವರ್ಷಗಳಿಂದ ದಟ್ಟವಾಗಿ ಬೆಳೆದ(ಮರಗಳನ್ನು ಕಡಿಯದಂತಹ) ಅರಣ್ಯಗಳು ಇವುಗಳ ಆವಾಸಸ್ಥಾನವಾಗಿವೆ.[೧೨][೧೩] ಇವು ಅನೇಕ ಚಿಕ್ಕ ಹಾರ್ನ್ ಬಿಲ್‌ಗಳಂತಿರದೆ, ಕಾಡಿನ ವಿಸ್ತಾರವಾದ ಹರವಿಗೆ ಅವಲಂಬಿಸಿರುವಂತೆ ಕಂಡುಬರುತ್ತವೆ .[೧೪]

ಥೈಲ್ಯಾಂಡ್‌ನಲ್ಲಿ ಸಂತಾನವೃದ್ಧಿಯ ಋತುವಿನಲ್ಲಿ ಗಂಡು ಪಕ್ಷಿಗಳ ಆವಾಸ ಸ್ಥಾನಗಳನ್ನು ಸುಮಾರು ೩.೭ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ನೋಡಬಹುದಾಗಿದೆ.ಸಂತಾನವೃದ್ಧಿ ಮಾಡದ ಇತರ ಋತುವಿನಲ್ಲಿ ೧೪.೭ ಚದರ ಕಿಲೋಮೀಟರ್‌ವರೆಗೆ ಕಾಣಬಹುದಾಗಿದೆ.[೧೫]

ನಡವಳಿಕೆ ಮತ್ತು ಪರಿಸರವೃತ್ತಾಂತ

ಬದಲಾಯಿಸಿ

ಆಹಾರ ಮತ್ತು ಆಹಾರ ತಿನ್ನಿಸುವುದು

ಬದಲಾಯಿಸಿ
 
ರೋಟರ್ ಡ್ಯಾಮ್ ನಲ್ಲಿ ಸೆರೆಯಲ್ಲಿ ಆಹಾರವನ್ನು ತಿನ್ನಿಸುತ್ತಿರುವುದು

ಗ್ರೇಟ್ ಹಾರ್ನ್ ಬಿಲ್‌ಗಳು ಸಾಮಾನ್ಯವಾಗಿ ಸಣ್ಣ ಗುಂಪುಗಳಲ್ಲಿ ಕಂಡುಬರುತ್ತವೆ. ದೊಡ್ಡ ಗುಂಪುಗಳು ಕೆಲವು ಬಾರಿ ಹಣ್ಣಿನ ಮರಗಳಲ್ಲಿ ಒಟ್ಟಾಗಿ ಸೇರುತ್ತವೆ. ಭೂತಾನ್‌ನ ಆಗ್ನೇಯ ಭಾಗದಲ್ಲಿ ೧೫೦ರಿಂದ ೨೦೦ರ ವರೆಗೆ ಒಟ್ಟಿಗೆ ಸೇರಿದ ಪಕ್ಷಿಗಳ ಸಮೂಹವನ್ನು ದಾಖಲಿಸಲಾಗಿದೆ.[] ಕಾಡುಗಳಲ್ಲಿ, ಗ್ರೇಟ್ ಹಾರ್ನ್ ಬಿಲ್‌ನ ಆಹಾರವು ಪ್ರಧಾನವಾಗಿ ಹಣ್ಣುಗಳನ್ನು ಒಳಗೊಂಡಿರುತ್ತದೆ. ಅಂಜೂರವು ಅತ್ಯಂತ ಪ್ರಮುಖ ಆಹಾರದ ಮೂಲಗಳಾಗಿವೆ.[೧೬] ವೈಟೆಕ್ಸ್ ಅಲ್ಟಿಸಿಮ ವನ್ನು ಮತ್ತೊಂದು ಪ್ರಮುಖ ಪ್ರಭೇದವೆಂದು ಪರಿಗಣಿಸಲಾಗಿದೆ. ಇವುಗಳು ಪರ್ಸಿಯ ಆಲ್ಸಿಯೊಡಾಫೆನೆ ಮತ್ತು ಮೈರಿಸ್ಟಿಕಾ ದಂತಹ ಮೈರಿಸ್ಟಿಕ್ಯಾಸಿಯ ಮತ್ತು ಲಾರೆಸಿಯಾ ಕುಟುಂಬಕ್ಕೆ ಸೇರಿದ ಮೇದಸ್ಸು ಸಮೃದ್ಧವಾಗಿರುವ ಹಣ್ಣುಗಳನ್ನು ಕೂಡ ಸೇವಿಸುತ್ತವೆ.[೧೭] ಅವುಗಳಿಗೆ ಅಗತ್ಯವಾಗಿರುವ ನೀರನ್ನು ಅವುಗಳು ಸೇವಿಸುವಂತಹ ಹಣ್ಣುಗಳ ಆಹಾರದಿಂದಲೇ ಸಂಪೂರ್ಣವಾಗಿ ಪಡೆಯುತ್ತವೆ. ಇವುಗಳು ಕಾಡಿನಲ್ಲಿರುವ ಮರದ ಅನೇಕ ಪ್ರಬೇಧಗಳನ್ನು ಮುಖ್ಯವಾಗಿ ಹರಡುತ್ತವೆ.[೧೮] ಇವುಗಳು ಸಣ್ಣ ಸಸ್ತನಿಗಳನ್ನು, ಪಕ್ಷಿಗಳನ್ನು,[೧೯] ಸಣ್ಣ ಸರೀಸೃಪಗಳನ್ನು ಮತ್ತು ಕೀಟಗಳನ್ನು ಕೂಡ ತಿನ್ನುತ್ತವೆ.[೨೦] ಈ ಹಾರ್ನ್ ಬಿಲ್‌ಗಳ ಜೊತೆಯಲ್ಲಿ ಮಕ್ಯಾಕ್(ಸಿಂಹದ ರೀತಿಯ ಬಾಲವುಳ್ಳ ಮಕಾಕ ಕುಲದ ಕೋತಿ) ಕೂಡ ಆಹಾರಕ್ಕಾಗಿ ಹುಡುಕುವುದನ್ನು ಗಮನಿಸಲಾಗಿದೆ.[೨೧]

ಅವು ಕೊಂಬೆಗಳಲ್ಲಿ ನೆಗೆಯುತ್ತಾ ಮುಂದೆ ಸಾಗಿ ಕೀಟಗಳು, ಗೂಡಿನಲ್ಲಿರುವ ಮರಿಹಕ್ಕಿಗಳು, ಸಣ್ಣ ಹಲ್ಲಿಗಳಿಗೆ ಹುಡುಕುತ್ತಾ, ತೊಗಟೆಗಳನ್ನು ಹರಿದು ಪರೀಕ್ಷಿಸುತ್ತವೆ. ಅವುಗಳ ಬೇಟೆ ಸಿಕ್ಕಲ್ಲಿ ಅದನ್ನು ಗಾಳಿಯಲ್ಲಿ ಮೇಲಕ್ಕೆಸೆದು ನುಂಗಿ ಬಿಡುತ್ತವೆ. ಅಪರೂಪದ ಅಳಿಲು, ಟ್ರ್ಯಾವೆನ್‌ಕೋರ್(ತಿರುವನಂತಪುರ) ಹಾರುವ ಅಳಿಲಾದ ಪೆಟಿನೊಮಿಸ್ ಫಸ್‌ಕೊ ಕ್ಯಾಪಿಲಸ್ ಕೂಡ ಈ ಪ್ರಭೇದಗಳ ಆಹಾರವೆಂದು ಗಮನಿಸಲಾಗಿದೆ. ಕೊಲಾರೆಡ್ ಸ್ಕಾಪ್ಸ್ ಗೂಬೆ ಒಟಸ್ ಬ್ಯಾಕ್ಕಮೊಯೆನ , ಜಂಗಲ್ ಔಲೆಟ್ (ಕಾಡಿನ ಮರಿಗೂಬೆ) ಗ್ಲಾಸಿಡಿಯಮ್ ರೇಡಿಯಾಟಂ ಮತ್ತು ಮುಂಭಾಗದಲ್ಲಿ ಬೂದುಬಣ್ಣವುಳ್ಳ ಹೊಂದಿರುವ ಹಸಿರು ಪಾರಿವಾಳಟೆರನ್ ಪಾಮ್ ಪೊಂಪಡೋರಾ , ಇವುಗಳನ್ನು ಪಶ್ಚಿಮ ಘಟ್ಟಗಳಲ್ಲಿ ಈ ಪ್ರಭೇದಗಳಿಗೆ ಬೇಟೆ ಹಕ್ಕಿಗಳೆಂದು ಪರಿಗಣಿಸಲಾಗಿದೆ.[೨೨]

ಸಂತಾನವೃದ್ಧಿ

ಬದಲಾಯಿಸಿ
 
ಗೂಡಿನೊಳಗೆ ಗಂಡು ಪಕ್ಷಿಯು ಹೆಣ್ಣು ಪಕ್ಷಿಗೆ ಆಹಾರವನ್ನು ನೀಡುತ್ತಿರುವುದು

ಸಂತಾನವೃದ್ಧಿ ಕಾಲದಲ್ಲಿ ಅವು ಹೆಚ್ಚಾಗಿ ಶಬ್ದ ಮಾಡುತ್ತವೆ. ಅವುಗಳು ದೊಡ್ಡ ದನಿಯಲ್ಲಿ ಹಾಡುತ್ತವೆ. ಈ ಕರೆಗಳು ಸೆಕೆಂಡಿಗೊಂದು ಬಾರಿ ಗಂಡು ಪಕ್ಷಿ "ಕಾಕ್" ಎಂದು ದೊಡ್ಡ ದನಿಯಲ್ಲಿ ಕೂಗುವುದರೊಂದಿಗೆ ಪ್ರಾರಂಭವಾಗುತ್ತದೆ. ಅನಂತರ ಇದರ ಜೊತೆಯಲ್ಲಿ ಹೆಣ್ಣು ಪಕ್ಷಿ ಸೇರಿಕೊಳ್ಳುತ್ತದೆ. ತದನಂತರ ಈ ಜೋಡಿ ಅರಚುವ ಮತ್ತು ಕಿರಿಚಾಡುವ ದನಿಯ ತೀವ್ರಗತಿಯ ಮಿಶ್ರಣದೊಂದಿಗೆ ಒಟ್ಟಾಗಿ ಕೂಗುತ್ತವೆ.[೨೨] ಗೂಡುಕಟ್ಟಲು ಅವು ದಟ್ಟವಾಗಿ ಬೆಳೆದ ಕಾಡುಗಳಿಗೆ ಆದ್ಯತೆ ನೀಡುತ್ತವೆ. ದೊಡ್ಡದಾದ ಉದ್ದವಾಗಿರುವ ಮತ್ತು ಹಳೆಯ ಮರಗಳು,ಅದರಲ್ಲು ವಿಶೇಷವಾಗಿ ಮೇಲಾವರಣಕ್ಕಿಂತ ಎತ್ತರದಲ್ಲಿ ಹೊರಹೊಮ್ಮಿದಂತಹ ಮರಗಳ ಮೇಲೆ ಗೂಡು ಕಟ್ಟಲು ಆದ್ಯತೆ ನೀಡುತ್ತವೆ.[೨೩][೨೪]

ಗ್ರೇಟ್ ಹಾರ್ನ್ ಬಿಲ್‌ಗಳು ಏಕ ಸಂಗಾತಿ ಜೋಡಿ ಸಂಬಂಧವನ್ನು ಹೊಂದಿರುತ್ತವೆ. ಅಲ್ಲದೇ ೨-೪೦ ರಂತೆ ಪ್ರತ್ಯೇಕವಾಗಿ ಸಣ್ಣ ಗುಂಪುಗಳಲ್ಲಿ ಜೀವಿಸುತ್ತವೆ. ಸುಮಾರು ೨೦ ಪಕ್ಷಿಗಳನ್ನು ಒಳಗೊಂಡಂತೆ ಗುಂಪಿನಲ್ಲಿನ ಪ್ರಣಯವನ್ನು ಗಮನಿಸಲಾಗಿದೆ.[೨೫]

ಹೆಣ್ಣು ಹಾರ್ನ್ ಬಿಲ್‌ಗಳು ದೊಡ್ಡ ದೊಡ್ಡ ಮರಗಳ ಕಾಂಡದಲ್ಲಿರುವ ಪೊಟರೆಗಳಲ್ಲಿ ಗೂಡನ್ನು ಕಟ್ಟುತ್ತವೆ. ಅಲ್ಲದೇ ಪ್ರವೇಶವನ್ನು ಹಿಕ್ಕೆಯಿಂದ ತಯಾರಾದ ಅಂಟಿನ ಮೂಲಕ ಮುಚ್ಚಲಾಗಿರುತ್ತದೆ.[][೨೬][೨೭] ಮರಿಗಳು ಆಂಶಿಕವಾಗಿ ಬೆಳೆಯುವವರೆಗು ಹೆಣ್ಣು ಹಕ್ಕಿ ಗೂಡಿನೊಳಗೆಯೇ ಇರುತ್ತದೆ. ಅಲ್ಲದೇ ಅದರ ಆಹಾರಕ್ಕಾಗಿ ಗಂಡನ್ನು ಅವಲಂಬಿಸಿರುತ್ತದೆ. ಈ ಕಾಲಾವಧಿಯ ಸಂದರ್ಭದಲ್ಲಿ ಹೆಣ್ಣು ಹಕ್ಕಿಯ ಗರಿಗಳು ಸಂಪೂರ್ಣವಾಗಿ ಉದುರಿಹೋಗುತ್ತವೆ. ಎಳೆ ಮರಿಗಳಿಗೆ ಇನ್ನೂ ಗರಿಗಳು ಮೂಡಿರದೇ ಮಾಂಸದ ಮುದ್ದೆಗಳಂತೆ ಕಂಡುಬರುತ್ತವೆ. ಗೂಡಿನಲ್ಲಿ ಮಾಡಲಾದ ಸಣ್ಣ ರಂಧ್ರದ ಮೂಲಕ ಹೆಣ್ಣು ಪಕ್ಷಿಗೆ ಅದರ ಸಂಗಾತಿ ಆಹಾರವನ್ನು ನೀಡುತ್ತದೆ. ಕಾವಿನ ಮೊಟ್ಟೆಗಳು ಒಂದು ಅಥವಾ ಎರಡು ಮೊಟ್ಟೆಗಳನ್ನು ಒಳಗೊಂಡಿದ್ದು, ಹೆಣ್ಣು ಹಕ್ಕಿಯುವ ೩೮ ರಿಂದ ೪೦ ದಿನಗಳ ವರೆಗೆ ಕಾವುಕೊಡುತ್ತದೆ. ಗೂಡಿನಲ್ಲಿರುವ ರಂಧ್ರದ ಮೂಲಕ ಹೆಣ್ಣು ಹಕ್ಕಿ ಅದರ ಹಿಕ್ಕೆಯನ್ನು ವಿಸರ್ಜಿಸುತ್ತದೆ. ಅಲ್ಲದೇ ಎಳೆ ಮರಿಗಳು ಅವುಗಳಿಗೆ ಎರಡು ವಾರಗಳು ತುಂಬಿದ ಕೂಡಲೇ ಅವು ಕೂಡ ಇದೇ ಗೂಡು ನಿರ್ಮಲೀಕರಣ ನಡವಳಿಕೆಯನ್ನು ಅನುಸರಿಸುತ್ತವೆ.[೨೨] ಹೆಣ್ಣು ಹಕ್ಕಿಯು ಗೂಡಿನಿಂದ ಒಮ್ಮೆ ಹೊರಬಂದರೆ ಮತ್ತೆ ಅದನ್ನು ಮರಿಗಳು ಮುಚ್ಚುತ್ತವೆ.[]

ಎಳೆಯ ಮರಿಗಳಲ್ಲಿ ಶಿರಸ್ತ್ರಾಣ(ರಕ್ಷಾಕವಚ)ದ ಗುರುತು ಕಾಣಿಸುವುದಿಲ್ಲ. ಎರಡನೆ ವರ್ಷದ ನಂತರ, ಮುಂಭಾಗದ ತುದಿಯು ಕಲ್ಮೆನ್ ಏಣಿಂದ ಪ್ರತ್ಯೇಕಗೊಳ್ಳುತ್ತದೆ ಹಾಗು ಮೂರನೆ ವರ್ಷದಲ್ಲಿ ಹೊರಮುಖವಾಗಿ ಮತ್ತು ಕೆಳಮುಖವಾಗಿ ಬೆಳೆಯುವ ಎರಡು ತುದಿಗಳೊಂದಿಗೆ ಅಡ್ಡಡ್ಡವಾದ ಶಿರಸ್ತ್ರಾಣ(ರಕ್ಷಾಕವಚ) ಬೆಳೆಯುತ್ತದೆ. ಇದೇ ಸಮಯದಲ್ಲಿ ಹಿಂಭಾಗದ ಅಗಲವನ್ನು ಸರಿತೂಗಿಸಲು ಮುಂಭಾಗವು ಅಗಲವಾಗುತ್ತದೆ. ಇದು ಸಂಪೂರ್ಣವಾಗಿ ಬೆಳೆಯಲು ಐದು ವರ್ಷಗಳು ತೆಗೆದುಕೊಳ್ಳುತ್ತದೆ[೨೮]

ವಿಶ್ರಮಿಸುವುದು

ಬದಲಾಯಿಸಿ

ವಿಶ್ರಮಿಸುವ ಸ್ಥಳಗಳನ್ನು ನಿಯಮಿತವಾಗಿ ಬಳಸಲಾಗುತ್ತದೆ. ಅಲ್ಲದೇ ಪಕ್ಷಿಗಳು ಪ್ರತಿದಿನವು ಒಂದೇ ಹಾದಿಯನ್ನು ಅನುಸರಿಸುತ್ತ ದೂರದ ಸ್ಥಳಗಳಿಂದ ಸೂರ್ಯಾಸ್ತದ ವೇಳೆಗೆ ಸರಿಯಾಗಿ ಬರುತ್ತವೆ. ಹತ್ತಿರದಲ್ಲಿರುವಂತಹ ಉದ್ದವಾದ ಅನೇಕ ಮರಗಳನ್ನು ವಿಶ್ರಮಿಸಲು ಇವು ಬಳಸಬಹುದು. ಸ್ವಲ್ಪ ಎಲೆಗಳಿರುವಂತಹ ಅತ್ಯಂತ ಎತ್ತರದಲ್ಲಿರುವ ಕೊಂಬೆಯನ್ನು ಪಕ್ಷಿಗಳು ಆಯ್ದುಕೊಳ್ಳುತ್ತವೆ. ಹೆಚ್ಚು ಮುಸುಕು ಕವಿಯುವವರೆಗು ಅವುಗಳು ಸ್ಥಳಕ್ಕಾಗಿ ಪೈಪೋಟಿ ನಡೆಸುತ್ತ ಇರುತ್ತವೆ. ವಿಶ್ರಮಿಸುವಾಗ ಅವುಗಳ ಕುತ್ತಿಗೆಯನ್ನು ಹಿಂದಕ್ಕೆ ಎಳೆದುಕೊಂಡು, ಕೊಕ್ಕನ್ನು ಮೇಲಕ್ಕೆ ಕೋನಾಕೃತಿಯಲ್ಲಿ ಚಾಚುತ್ತವೆ.[]

ಸೆರೆ(ಪಂಜರದಲ್ಲಿ)

ಬದಲಾಯಿಸಿ
 
ಸ್ಪೇನ್‌ನ ಪ್ಯಾಲ್ ಮಿಟಾಸ್ ಉದ್ಯಾನದಲ್ಲಿ

ಕೇವಲ ಕೆಲವೇ ಕೆಲವು ಹಾರ್ನ್ ಬಿಲ್ ಗಳನ್ನು ಸೆರೆಯಲ್ಲಿಡಲಾಗಿದೆಯಲ್ಲದೇ, ಅವುಗಳಲ್ಲಿ ಕೆಲವು ಚೆನ್ನಾಗಿ ಸಂತಾನವೃದ್ಧಿ ಮಾಡಿವೆ. ಗೂಡಿನಲ್ಲಿರುವ ಹೆಣ್ಣು ಪಕ್ಷಿಗಳನ್ನು ಬಂಧಿಸುವುದು ಸುಲಭ. ಅಲ್ಲದೇ ಕಾಡಿನಿಂದ ಪಕ್ಷಿಗಳನ್ನು ಹಿಡಿಯುವಾಗ ಹೆಣ್ಣು ಹಕ್ಕಿಗಳನ್ನು ಹಿಡಿಯಲು ಒಲವು ತೋರಿಸಲಾಗುತ್ತದೆ. ಸೆರೆಯಲ್ಲಿ ಅವುಗಳ ಸಂತಾನವೃದ್ಧಿಯು ನಿಜಕ್ಕೂ ಕಷ್ಟಕರವಾಗಿದ್ದು, ಹನ್ನೆರಡಕ್ಕಿಂತ ಕಡಿಮೆ ಪ್ರಯತ್ನಗಳು ಯಶಸ್ವಿಯಾಗಿವೆ. ಅವುಗಳು ಸಂಗಾತಿಯನ್ನು ಆಯ್ಕೆ ಮಾಡುವ ವಿಪರೀತ ಗುಣದಿಂದಾಗಿ ಮತ್ತು ದೀರ್ಘ ಮತ್ತು ಪ್ರಬಲ ಜೋಡಿ ಸಂಬಂಧಗಳಿಂದಾಗಿ, ತಳಿ ಬೆಳೆಸುವುದಕ್ಕೆ ಅವುಗಳನ್ನು ನಿರ್ವಹಿಸುವುದು ಕಷ್ಟಕರವಾದ ಕೆಲಸವಾಗಿದೆ.[೨೯][೩೦][೩೧][೩೨]

ಸೆರೆಯಲ್ಲಿ ಹಾರ್ನ್ ಬಿಲ್‌ಗಳು ಹಣ್ಣುಗಳನ್ನು ಮತ್ತು ಮಾಂಸವನ್ನು ತಿನ್ನುತ್ತವೆ. ಅಲ್ಲದೇ ಕೆಲವು ಭಾಗಗಳಲ್ಲಿ ಹಣ್ಣುಗಳು ಮತ್ತು ಪ್ರೋಟೀನ್ ಮೂಲಗಳಿಂದ ಆರೋಗ್ಯಕರ ಆಹಾರಕ್ರಮವನ್ನು ಬೆಳೆಸಿಕೊಂಡಿವೆ. ಕೆಲವು ಮಾತ್ರ ಸೆರೆಯಲ್ಲಿ ಪಳಗುತ್ತವೆ . ಆದರೆ ಸೆರೆಯಲ್ಲಿ ಹಾರ್ನ್ ಬಿಲ್‌ನ ನಡವಳಿಕೆ ಅತ್ಯಂತ ದುಗುಡ ದಿಂದ ಕೂಡಿರುತ್ತವೆ ಎಂದು ವಿವರಿಸಲಾಗಿದೆ. ಸೆರೆಯಲ್ಲಿಡಲಾದ ಹಾರ್ನ್ ಬಿಲ್ ಗಳು ತಮ್ಮ ರೆಕ್ಕೆಗಳನ್ನು ಹೊರಚಾಚಿಕೊಂಡು ಬಿಸಿಲು ಕಾಯಿಸಿಕೊಳ್ಳಬಹುದು.[೩೩]

ಸಂರಕ್ಷಣಾ ಸ್ಥಿತಿಗತಿ

ಬದಲಾಯಿಸಿ

ಆವಾಸ ಸ್ಥಾನದ ಕೊರತೆಯಿಂದಾಗಿ ಮತ್ತು ಕೆಲವು ಪ್ರದೇಶಗಳಲ್ಲಿ ಇವುಗಳನ್ನು ಬೇಟೆಯಾಡುವುದರಿಂದಾಗಿ ಗ್ರೇಟ್ ಹಾರ್ನ್ ಬಿಲ್ ಗಳನ್ನು, ಅಪಾಯದ ಅಂಚಿನಲ್ಲಿರುವ ಪಕ್ಷಿಜಾತಿಗಳ IUCN ಕೆಂಪು ಪಟ್ಟಿಯಲ್ಲಿದ್ದು, ಹತ್ತಿರದ ಭವಿಷ್ಯದಲ್ಲಿ ಅಳಿದುಹೋಗುವ ಅಪಾಯದಲ್ಲಿದೆ ಎಂದು ನಿರ್ಣಯಿಸಲಾಗಿದೆ.[] ಇದನ್ನು CITES ನ ಅಪೆಂಡಿಕ್ಸ್I ರಲ್ಲಿ ಪಟ್ಟಿಮಾಡಲಾಗಿದ್ದು, ಕಾಂಬೋಡಿಯಾದಂತಹ ಪ್ರದೇಶಗಳಲ್ಲಿ ಇವುಗಳ ಸಂತತಿ ನಶಿಸಿ ಹೋಗುತ್ತಿರುವುದನ್ನು ಗಮನಿಸಲಾಗಿದೆ.[೩೪] ಇವುಗಳ ಸಂತತಿಯ ವೈವಿಧ್ಯತೆಯ ಮೇಲಿನ ಅಧ್ಯಯನಕ್ಕೆ ಆಣ್ವಿಕ ಮಾರ್ಗಗಳ ಪ್ರಯತ್ನ ನಡೆದಿದೆ.[೩೫]

ಸಂಸ್ಕೃತಿಯಲ್ಲಿ

ಬದಲಾಯಿಸಿ
 
ನಿಷಿ ಬುಡಕಟ್ಟು ಜನಾಂಗದ ವ್ಯಕ್ತಿ ಹಾರ್ನ್ ಬಿಲ್ ನ ಕೊಕ್ಕನ್ನು ಹೊಂದಿರುವ ಸಾಂಪ್ರದಾಯಿಕ ತಲೆ ಉಡುಗೆಯನ್ನು ತೊಟ್ಟಿರುವುದು

ಬುಡಕಟ್ಟು ಜನಾಂಗದವರು ಗ್ರೇಟ್ ಇಂಡಿಯನ್ ಹಾರ್ನ್ ಬಿಲ್‌‌ನ ವಿವಿಧ ಅಂಗಾಂಗಗಳ ಆಸೆಯಿಂದ ಅವುಗಳ ಸಂತತಿಗೆ ಅಪಾಯವೊಡ್ಡಿದ್ದಾರೆ. ಅದರ ಕೊಕ್ಕುಗಳನ್ನು ಮತ್ತು ತಲೆಯನ್ನು ಸೌಂದರ್ಯವನ್ನು ಹೆಚ್ಚಿಸಲು ಬಳಸಿದರೆ, ಅದರ ಮಾಂಸವು ಔಷಧೀಯ ಗುಣಗಳನ್ನು ಹೊಂದಿರುವುದಾಗಿ ನಂಬಲಾಗಿದೆ. ಎಳೆ ಮರಿಗಳು ರುಚಿಯಾದ ತಿನಿಸು ಎಂದು ಪರಿಗಣಿಸಲಾಗಿದೆ.[] ಭಾರತದ ಮತ್ತು ಬೊರ್ನಿಯೋದ ಈಶಾನ್ಯ ಭಾಗದಲ್ಲಿರುವ ಬುಡಕಟ್ಟು ಜನಾಂಗದವರು ಅವರ ತಲೆಯ ಅಲಂಕಾರಕ್ಕೆ ಅವುಗಳ ರೆಕ್ಕೆಗಳನ್ನು ಬಳಸುತ್ತಾರೆ. ಅಲ್ಲದೇ ಅವುಗಳ ತಲೆಬುರುಡೆಗಳನ್ನು ಹೆಚ್ಚಾಗಿ ಅಲಂಕಾರಗಳಿಗೆ ಬಳಸಲಾಗುತ್ತದೆ.[೩೬][೩೭] ಇದರ ಮಾಂಸವನ್ನು ನಾಗಾಸ್ ಬುಡಕಟ್ಟು ಜನಾಂಗವು ತಿನ್ನಲು ಯೋಗ್ಯವಲ್ಲ ಎಂದು ಪರಿಗಣಿಸಿದೆ. ಏಕೆಂದರೆ ಅವುಗಳನ್ನು ತಿಂದರೆ ಪಕ್ಷಿಯಲ್ಲಿರುವಂತೆ ಅವರ ಪಾದಗಳಲ್ಲಿ ಹುಣ್ಣಾಗುತ್ತದೆ ಎಂಬ ನಂಬಿಕೆ ಇರಿಸಿಕೊಂಡಿದ್ದಾರೆ. ಹಾರ್ನ್ ಬಿಲ್ ರೆಕ್ಕೆಗಳೊಂದಿಗೆ ನೃತ್ಯಮಾಡುವಾಗ ತರಕಾರಿಗಳನ್ನು ತಿನ್ನುವುದಿಲ್ಲ. ಆಗಲೂ ಕೂಡ ಪಾದಗಳಲ್ಲಿ ಹುಣ್ಣಾಗಬಹುದು ಎಂದು ಅವರು ನಂಬಿದ್ದಾರೆ.[೩೮] ಪಕ್ಷಿ ಸಂರಕ್ಷಣಾ ಕಾರ್ಯಕ್ರಮಗಳು ಸೆರೆಹಿಡಿದ ಹಾರ್ನ್‌ಬಿಲ್‌ಗಳ ರೆಕ್ಕೆಗಳನ್ನು ಬುಡಕಟ್ಟು ಜನಾಂಗಗಳಿಗೆ ಒದಗಿಸುವುದಕ್ಕೆ ಮತ್ತು ನಿಸರ್ಗದತ್ತ ಪಕ್ಷಿಗಳ ಶಿರಸ್ತ್ರಾಣದ ಬದಲಿಗೆ ಸೆರಾಮಿಕ್ ಶಿರಸ್ತ್ರಾಣಗಳನ್ನು ಒದಗಿಸಲು ಪ್ರಯತ್ನಿಸಿದೆ .[ಸೂಕ್ತ ಉಲ್ಲೇಖನ ಬೇಕು]

ನೇಪಾಳದಲ್ಲಿ ಹಾರ್ನ್ ಬಿಲ್ ಗಳನ್ನು "ಹೊಂರೈ" (ಅದರ ಉಪಪ್ರಭೇದದ ಹೆಸರನ್ನು ನೀಡಲಾಗಿದೆ) ಮತ್ತು "ಬ್ಯಾನ್ರಾವ್" ಎಂದು ಕರೆಯಲಾಗುತ್ತದೆ. ಇವು "ಕಾಡಿನ ರಾಜ" ಎಂಬ ಅರ್ಥವನ್ನು ನೀಡುತ್ತವೆ.[೩೯]

ಚಿಹ್ನೆಯ ರೀತಿಯಲ್ಲಿ ಬಳಕೆ

ಬದಲಾಯಿಸಿ
 
"ವಿಲಿಯಂ" ನ ಚಿತ್ರ. ಇದು ಬಾಂಬೆ ಪ್ರಕೃತಿ ಚರಿತ್ರೆ ಸಮಾಜ(ನ್ಯಾಚುರಲ್ ಹಿಸ್ಟರಿ ಸೊಸೈಟಿ)ಯಲ್ಲಿ ಬದುಕಿತ್ತು. ಅಲ್ಲದೇ ಸೊಸೈಟಿಯ ಚಿಹ್ನೆಗೆ ಇದು ಸ್ಪೂರ್ತಿಯಾಗಿದೆ.[೪೦]

ಗ್ರೇಟ್ ಹಾರ್ನ್ ಬಿಲ್, ವಿಲಿಯಂ (ಚಿತ್ರದಲ್ಲಿರುವ) ಎಂಬ ಹೆಸರಿನಲ್ಲಿ ಮುಂಬಯಿ ಪ್ರಕೃತಿ ಚರಿತ್ರೆ ಸಮಾಜದ ಚಿಹ್ನೆಯಾಗಿದೆ. ಹಾರ್ನ್ ಬಿಲ್ ಹೌಸ್ ಎಂಬುದು ಅವರ ಕೇಂದ್ರಕಛೇರಿ ಕಟ್ಟಡದ ಹೆಸರಾಗಿದೆ. ಸರ್ ನಾರ್ಮನ್ ಕಿನ್ನಿಯರ್, ವಿಲಿಯಂಅನ್ನು W S ಮಿಲ್ಲರ್ಡ್ ನ ನಿಧನವಾರ್ತೆಯಲ್ಲಿ ಕೆಳಗಿನಂತೆ ಬಣ್ಣಿಸಿದ್ದಾರೆ. “ಅಪೋಲೋ ಬೀದಿಯಲ್ಲಿರುವ ಈ ಸಮಾಜದ ಕೊಠಡಿಗಳಿಗೆ ಭೇಟಿನೀಡುವ ಪ್ರತಿ ಪ್ರವಾಸಿಗರು ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅನ್ನು ಸ್ಮರಿಸುತ್ತಾರೆ, "ಆಫೀಸ್ ಕನೇರಿ" ಎಂದು ಹೆಸರಾಗಿದ್ದ ಇದು ಫಿಪ್‌ಸನ್ ಅಂಡ್ ಕಂಪನಿಯ ಕಛೇರಿಯಲ್ಲಿದ್ದ ಮಿಲ್ಲರ್ಡ್‌ನ ಕುರ್ಚಿಯ ಹಿಂಬದಿಯಲ್ಲಿದ್ದ ಪಂಜರದಲ್ಲಿ ಸುಮಾರು ೨೬ ವರ್ಷಗಳ ವರೆಗೆ ಇದು ಬದುಕಿತು ಹಾಗು ೧೯೨೦ ರಲ್ಲಿ ಮೃತಪಟ್ಟಿತು. ವೈರ್‌ನ ಒಂದು ತುಂಡನ್ನು ನುಂಗಿದ್ದು ಇದರ ಸಾವಿಗೆ ಕಾರಣವೆಂದು ಹೇಳಲಾಗಿದೆ. ಆದರೆ ಹಿಂದೆ "ವಿಲಿಯಂ" ಉರಿಯುತ್ತಿದ್ದ ಸಿಗಾರ್ ತುಂಡನ್ನು ನುಂಗಿತ್ತಾದರು ಅದಕ್ಕೇನು ದುಷ್ಪರಿಣಾಮ ಆಗಿರಲಿಲ್ಲ. ಆದ್ದರಿಂದ ಅದರ ಹಳೆಯ ಸ್ನೇಹಿತನ ಸಾವು ಅದಕ್ಕೆ ಮುಖ್ಯ ಕಾರಣವೆಂದು ಭಾವಿಸುವೆ." [೪೧][೪೨]

ಗ್ರೇಟ್ ಹಾರ್ನ್ ಬಿಲ್, ಚೀನಾದ ಮ್ಯಾನ್ಮಾರ್ ನ ಚಿನ್ ರಾಜ್ಯ ಹಾಗು ಭಾರತಕೇರಳ ಮತ್ತು ಅರುಣಾಚಲದ ನಾಡ ಪಕ್ಷಿಯಾಗಿದೆ.

ಇತರ ಮೂಲಗಳು

ಬದಲಾಯಿಸಿ

http://thatskannada.oneindia.in/column/bhat//2010/0218-saving-the-hornbill-pilai-poonswad-way.html[permanent dead link]

  • ಕಣ್ಣನ್,R (೧೯೯೪) ಎಕಾಲಜಿ ಅಂಡ್ ಕನ್ ಸರ್ವೇಷನ್ ಗ್ರೇಟ್ ಪೈಡ್ ಹಾರ್ನ್ ಬಿಲ್ (ಬ್ಯೂಸೆರೋಸ್ ಬೈಕಾರ್ನಿಸ್ ) ಇನ್ ದಿ ವೆಸ್ಟರ್ನ್ ಘಾಟ್ಸ್ ಆಫ್ ಸದರನ್ ಇಂಡಿಯಾ. Ph.D. ಪ್ರಬಂಧ, ಆರ್ಕಾನ್ಸಸ್ ವಿಶ್ವವಿದ್ಯಾನಿಲಯ, ಫಯೆಟ್ ವಿಲ್ಲೆ.
  • ಕಣ್ಣನ್,ರಘುಪತಿ(೧೯೯೪) ಕನ್‌ಸರ್ವೇಷನ್ ಎಕಾಲಜಿ ಆಫ್ ದಿ ಗ್ರೇಟ್ ಹಾರ್ನ್ ಬಿಲ್ ಇನ್ ದಿ ವೆಸ್ಟರ್ನ್ ಘಾಟ್ಸ್, ಸದರನ್ ಇಂಡಿಯಾ. OBC ಬುಲ್. ೧೯:೧೩.
  • ಪೂನ್ ಸ್ವ್ಯಾಡ್, P. ೧೯೯೫. ಥೈಲ್ಯಾಂಡ್ ನಲ್ಲಿರುವ ಕಾಹೊ ಯೈ ರಾಷ್ಟ್ರೀಯ ಉದ್ಯಾನದಲ್ಲಿ ಹಾರ್ನ್ ಬಿಲ್ ಗಳ ನಾಲ್ಕು ಸಿಂಪ್ಯಾಟ್ರಿಕ್(ಯಾವುದೇ ಅಂತರಸಂತಾನವೃದ್ಧಿ ಇಲ್ಲದೇ ಒಂದೇ ಸ್ಥಳವನ್ನು ಆಕ್ರಮಿಸುವುದು) ಪ್ರಭೇದಗಳ ಗೂಡು ಕಟ್ಟುವ ಸ್ಥಳದ ಗುಣಲಕ್ಷಣಗಳು. Ibis ೧೩೭: ೧೮೩-೧೯೧.
  • ಪೂನ್ ಸ್ವ್ಯಾಡ್, P. ಮತ್ತು A. ಸ್ಯೂಜಿ. ೧೯೯೪. ರೇಜಂಸ್ ಆಫ್ ದಿ ಮೇಲ್ಸ್ ಆಫ್ ದಿ ಗ್ರೇಟ್ ಹಾರ್ನ್ ಬಿಲ್ (ಬ್ಯುಸೆರೋಸ್ ಬೈಕಾರ್ನಿಸ್ ), ಬ್ರೌನ್ ಹಾರ್ನ್ ಬಿಲ್ (ಪ್ಟಿಲೊಲ್ಯಾಮಸ್ ಟಿಕೆಲ್ಲಿ ) ಮತ್ತು ರೀದನ್ಡ್ ಹಾರ್ನ್ ಬಿಲ್ (ರಿದಿಸೆರೋಸ್ ಅನ್ ಡಲ್ಟಸ್ ) ಇನ್ ಕಾಹೋ ಯೈ ರಾಷ್ಟ್ರೀಯ ಉದ್ಯಾನವನ, ಥೈಲ್ಯಾಂಡ್. Ibis ೧೩೬: ೭೯-೮೬.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ BirdLife International (2008). Buceros bicornis. In: IUCN 2008. IUCN Red List of Threatened Species. Retrieved 3 Oct 2009.
  2. Hodgson,BH (1833). "Description of the Buceros Homrai of the Himalaya". Asiat. Res. 18 (2): 169–188.
  3. Raman, T R S (1998). "Aerial casque-butting in the Great Hornbill Buceros bicornis" (PDF). Forktail. 13. Archived from the original (PDF) on 2007-10-07. Retrieved 2011-02-01.
  4. Kemp, A. C. (2001). "Family Bucerotidae (hornbills)". In del Hoyo, J; Elliott A & J Sargatal (ed.). Handbook of the birds of the world. Vol. 6. Mousebirds to hornbills. Lynx Edicions, Barcelona. pp. 436–523.{{cite book}}: CS1 maint: multiple names: editors list (link)
  5. ೫.೦ ೫.೧ ೫.೨ ೫.೩ Ali, S & S D Ripley (1983). Handbook of the birds of India and Pakistan. Vol. 4 (2 ed.). Oxford University Press. pp. 143–146. ISBN 978-0-19-562063-4.
  6. Blanford WT (1895). Fauna of British India. Birds. Vol. 3. Taylor and Francis, London. pp. 142–146.
  7. ೭.೦ ೭.೧ Baker, ECS (1927). Fauna of British India. Birds. Vol. 4 (2 ed.). Taylor and Francis, London. pp. 284–285.
  8. ೮.೦ ೮.೧ Rasmussen, PC & JC Anderton (2005). Birds of South Asia: The Ripley Guide. Volume 2. Smithsonian Institution and Lynx Edicions. pp. 273–274.
  9. Deignan, HG (1945). "The birds of northern Thailand". Bulletin of the United States National Museum. 186.
  10. Owen, Richard (1836). "On the Anatomy of the concave Hornbill, Buceros cavatus, Lath". Trans. Zool. Soc. London. 1: 117–122. doi:10.1111/j.1096-3642.1835.tb00609.x. {{cite journal}}: Unknown parameter |part= ignored (help)
  11. Robinson, H.C.; & Chasen, F.N. (1939). The Birds of the Malay Peninsula. Volume IV: The Birds of the Low-Country Jungle and Scrub (PDF). Witherby: London. pp. 90–91. Archived from the original (PDF) on 2012-05-23. Retrieved 2011-02-01.{{cite book}}: CS1 maint: multiple names: authors list (link)
  12. Datta, A. (1998). "Hornbill abundance in unlogged forest, selectively logged forest and a forest plantation inArunachal Pradesh, India". Oryx. 32: 285–294. doi:10.1046/j.1365-3008.1998.d01-58.x.
  13. Whistler, Hugh (1949). Popular handbook of Indian birds (4 ed.). Gurney and Jackson, London. pp. 304–306. ISBN 978-1-4067-4576-4.
  14. Raman T R Shankar & D Mudappa (2003). "Correlates of hornbill distribution and abundance in rainforest fragments in the southern Western Ghats, India". Bird Conservation International. 13: 199–212. doi:10.1017/S0959270903003162.
  15. Poonswad, P. & Tsuji, A. (1994). "Ranges of males of the Great Hornbill Buceros bicornis, Brown Hornbill Ptilolaemus tickelli, and Wreathed Hornbill Rhyticeros undulatus in Khao Yai National Park, Thailand". Ibis. 136: 79–86. doi:10.1111/j.1474-919X.1994.tb08133.x.{{cite journal}}: CS1 maint: multiple names: authors list (link)
  16. Datta, Aparajita Datta & G. S. Rawat (2003). "Foraging Patterns of Sympatric Hornbills during the Nonbreeding Season in Arunachal Pradesh, Northeast India". Biotropica. 35 (2): 208–218. doi:10.1646/02103.
  17. Kannan, Ragupathy Kannan and Douglas A. James (1999). "Fruiting Phenology and the Conservation of the Great Pied Hornbill (Buceros bicornis) in the Western Ghats of Southern India". Biotropica. 31 (1): 167–177.
  18. Sethi, Pia& Howe H (2009). "Recruitment of Hornbill-Dispersed Trees in Hunted and Logged Forests of the Indian Eastern Himalaya". Conservation Biology. 23 (3): 710–718. doi:10.1111/j.1523-1739.2008.01155.x. PMID 19220369.
  19. Wood,WS (1927). "Is the Large Hornbill Dichoceros bicornis carnivorous?". J. Bombay Nat. Hist. Soc. 32 (2): 374.
  20. Poonswad, Pilai, Atsuo Tsuji and Narong Jirawatkavi (2004). "Estimation of nutrients delivered to nest inmates by four sympatric species of hornbills in Khao Yai National Park, Thailand" (PDF). Ornithol. Sci. 3: 99–112. doi:10.2326/osj.3.99. Archived from the original (PDF) on 2011-05-25. Retrieved 2011-02-01.{{cite journal}}: CS1 maint: multiple names: authors list (link)
  21. Fooden Jack (1975). "Taxonomy and evolution of liontail and pigtail macaques (Primates:Cercopithecidae)". Fieldiana Zoology. 67: 84.
  22. ೨೨.೦ ೨೨.೧ ೨೨.೨ Kannan, Ragupathy; James,Douglas A (1997). "Breeding biology of the Great Pied Hornbill (Buceros bicornis) in the Anaimalai Hills of southern India". J. Bombay Nat. Hist. Soc. 94 (3): 451–465.{{cite journal}}: CS1 maint: multiple names: authors list (link)
  23. James, DA & R Kannan (2009). "Nesting habitat of the Great Hornbill (Buceros bicornis) in the Anaimalai Hills of southern India". Wilson Journal of Ornithology. 121 (3): 485–492. doi:10.1676/08-022.1.
  24. Bingham,CT (1879). "Notes on the nidification of some Hornbills". Stray Feathers. 8 (6): 459–463.
  25. Hutton,Angus F (1986). "Mass courtship display by Great Pied Hornbill Buceros bicornis". J. Bombay Nat. Hist. Soc. 83 (4): 209–210.
  26. James, D.A., Kannan, R. (2007). "Wild Great Hornbills (Buceros bicornis) do not use mud to seal nest cavities". Wilson Journal of Ornithology. 119 (1): 118–121. doi:10.1676/06-064.1.{{cite journal}}: CS1 maint: multiple names: authors list (link)
  27. Poulsen, Holger (1970). "Nesting Behaviour of the Black-Casqued Hornbill Ceratogymna atrata (Temm.) and the Great Hornbill Buceros bicornis L." Ornis Scandinavica. 1 (1): 11–15. doi:10.2307/3676330.
  28. Tickell,SR (1864). "On the hornbills of India and Burmah". Ibis. 6 (2): 173–182. doi:10.1111/j.1474-919X.1864.tb07860.x.
  29. Crofoot, M; M Mace; J Azua; E MacDonald & NM Czekala (2003). "Reproductive Assessment of the Great Hornbill (Buceros bicornis) by Fecal Hormone Analysis" (PDF). Zoo Biology. 22: 135–145. doi:10.1002/zoo.10083. Archived from the original (PDF) on 2011-09-27. Retrieved 2011-02-01.{{cite journal}}: CS1 maint: multiple names: authors list (link)
  30. Bohmke BW (1987). "Breeding the great Indian hornbill at the St. Louis Zoological Park, USA". Avicultural Magazine. 93: 159–61.
  31. de Ruiter M (1998). "The great Indian hornbill: a breeding attempt". AFAWatchbird. 25: 34–35.
  32. Golding RR, Williams MG (1986). "Breeding the great Indian hornbill at the CotswoldWild Life Park". Internation Zoo Yearbook. 24/25: 248–52.
  33. Ellison,BC (1923). "Notes on the habits of a young Hornbill". J. Bombay Nat. Hist. Soc. 29 (1): 280–281.
  34. Setha, Tan (2004). "The status and conservation of hornbills in Cambodia". Bird Conservation International. 14 (1): S5–S11.
  35. Chamutpong, S., Saito, D., Viseshakul, N., Nishiumi, I., Poonswad, P., & Ponglikitmongkol, M. (2009). "Isolation and characterization of microsatellite markers from the great hornbill, Buceros bicornis". Molecular Ecology Resources. 9 (2): 591–593. doi:10.1111/j.1755-0998.2008.02447.x.{{cite journal}}: CS1 maint: multiple names: authors list (link)
  36. Hastings, James (1910). Encyclopaedia of Religion and Ethics. Vol. 3. T&T Clark, Edinburgh. p. 442. ISBN 978-0-567-06512-4.
  37. Hastings, James (1908). Encyclopaedia of Religion and Ethics. Vol. 1. T&T Clark, Edinburgh. p. 505. ISBN 978-0-567-06512-4.
  38. Hutton, JH (1921). The Sema Nagas. Macmillan and Co, London. p. 92.
  39. Bingham,CT (1897). "The great indian hornbill in the wild state". J. Bombay Nat. Hist. Soc. 11 (2): 308–310.
  40. [85]
  41. Kinnear, N.B. (1952). "W. S. Millard". Journal of Bombay Nat. Hist. Soc. 50: 910–913.
  42. Phipson,HM (1897). "The great indian hornbill in captivity". J. Bombay Nat. Hist. Soc. 11 (2): 307–308.

ಬಾಹ್ಯ ಕೊಂಡಿಗಳು

ಬದಲಾಯಿಸಿ