ಗ್ರೀಕ್ ಪ್ರಹಸನ
ಗ್ರೀಕ್ ಪ್ರಹಸನ : ಉತ್ತರ ಭಾರತೀಯ ಪ್ರಾಚೀನ ಭಾಷೆಗಳಾದ ಪಾಲಿ, ಅರ್ಧ ಮಾಗಧಿ, ಪ್ರಾಕೃತ, ಅಪಭ್ರಂಶ, ಸಂಸ್ಕೃತ ಪ್ರಾಧಾನ ಭಾಷಯಾದಂತೆ, ದಕ್ಷಿಣ ಭಾರತದ ಪಂಚ ದ್ರಾವಿಡ ಭಾಷೆಗಳಾದ ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ತುಳು ಅಷ್ಟೇ ಪ್ರಧಾನ ಭಾಷೆಗಳು. ಕನ್ನಡದ ಪ್ರಾಚೀನತೆಯನ್ನು ಸಾರುವ ಕನ್ನಡದ ನುಡಿ ಬಳಕೆಯ ಮೊದಲು ಎಂದು ಗುರುತಿಸಿಕೊಳ‍್ಳವ ಉಲ್ಲೇಖ ಕ್ರಿ.ಶ.೧ನೆಯ ಶತಮಾನದ ಗ್ರೀಕ್ ಪ್ರಹಸನ ಅಕ್ಸಿರಿಂಕಸ್ ಪೇಪಿರಸ್.
ಪ್ರಾಚೀನತೆ
ಬದಲಾಯಿಸಿಮಂಜೇಶ್ವರ ಗೋವಿಂದ ಪೈಯವರು ಕನ್ನಡ ಪ್ರಾಚೀನತೆಯ ಕುರಿತು ಮೊದಲು ಮಾತನಾಡಿದವರು. ಅವರ ಪ್ರಕಾರ ಕ್ರಿ.ಶ.೧೪೦ಕ್ಕೆ ಸೇರಿದ ಈಜಿಪ್ಟ್‌ನ ಗ್ರೀಕ್ ಪ್ರಹಸನಗಳಲ್ಲಿ ಕನ್ನಡ ಭಾಷೆಯ ಪದಗಳ ಬಳಕೆಯನ್ನು ಕಂಡದ್ದನ್ನು ಉಲ್ಲೇಖಿಸುತ್ತಾರೆ.[೧] ಹೀಗೆ ಸಾಕಷ್ಟು ಉಲ್ಲೇಖಗಳು ಕ್ರಿ.ಪೂ.೩ನೇ ಶತಮಾನದಿಂದಲೂ ನಾವು ಕನ್ನಡ ಭಾಷೆಯ ಪ್ರಾಚೀನತೆಯನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಕನ್ನಡ ಸಾಹಿತ್ಯದ ಪ್ರಾಚೀನತೆಯತ್ತ ಗಮನಹರಿಸಿದರೆ ಕ್ರಿ.ಶ.೪೫೦ರಿಂದ ಮುಂದುವರೆದು ಹಲ್ಮಿಡಿ, ಬಾದಾಮಿ, ಶ್ರವಣಬೆಳಗೊಳ, ತಮಟಕಲ್ಲು, ಐಹೊಳೆ, ಪಟ್ಟದಕಲ್ಲು... ಹೀಗೆ ಹಲವಾರು ಶಾಸನಗಳನ್ನು ನೋಡುತ್ತಾ ಗಮನಿಸಬಹದು.
ಆಕ್ಸಿರೈಂಚಸ್ ಪಪೈರಿ
ಬದಲಾಯಿಸಿಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದ ಗ್ರೀಕ್ ಭಾಷೆಯ ಪ್ರಹಸನಗಳಲ್ಲಿ ಕನ್ನಡ ಪದಗಳಿವೆಯೆಂದು ವಿದ್ವಾಂಸರಲ್ಲಿ ಮೊದಲಿಗರು ಎಂ.ಗೋವಿಂದ ಪೈಯವರು.[೨] ಆಕ್ಸಿರೈಂಚಸ್ ಪ್ಯಾಪಿರಿ ಅಥವಾ ಪಪೈರಸ್ ಒಕ್ಸೈರಿಂಚಸ್ ಎಂಬುದು ಈಜಿಪ್ಟಿನಲ್ಲಿ ದೊರೆತ ಒಂದು ಪ್ರಹಸನದ ಭಾಗ. ಆಕ್ಸಿರಿಂಚಸ್ ಪಪೈರಿ ಎಂಬುದು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಪ್ಯಾಪಿರಾಲಜಿಸ್ಟ್‌ಗಳಾದ ಬರ್ನಾರ್ಡ್ ಪೈನ್ ಗ್ರೆನ್‌ಫೆಲ್ ಮತ್ತು ಆರ್ಥರ್ ಸುರಿಡ್ಜ್ ಹಂಟ್ ಅವರಿಗೆ ಈಜಿಪ್ಟ್‌ನ ಆಕ್ಸಿರಿಂಚಸ್ ಬಳಿಯ ಪ್ರಾಚೀನ ಕಸದ ರಾಶಿಯಲ್ಲಿ ಸಿಕ್ಕಿದ ಪ್ರಹಸನದ ಹಸ್ತಪ್ರತಿ. ಈ ಹಸ್ತಪ್ರತಿಗಳು ಟೋಲೆಮಿಕ್(ಕ್ರಿ.ಪೂ ೩ ನೇ ಶತಮಾನ) ಮತ್ತು ಈಜಿಪ್ಟಿನ ಇತಿಹಾಸದ ರೋಮನ್ ಅವಧಿಗಳ(ಕ್ರಿ.ಪೂ ೩೨ ರಿಂದ ಕ್ರಿ.ಶ. ೬೪೦ ರಲ್ಲಿ ಈಜಿಪ್ಟಿನ ಮುಸ್ಲಿಂ ವಿಜಯದವರೆಗೆ) ಚರಿತ್ರೆಯನ್ನು ವಿವರಿಸುತ್ತದೆ. ಇದೊಂದು ಸಾಹಿತ್ಯ ಕೃತಿಯಂತಿದ್ದು, ಪಪೈರಿಯು ಮುಖ್ಯವಾಗಿ ಸಾರ್ವಜನಿಕ ಮತ್ತು ಖಾಸಗಿ ದಾಖಲೆಗಳನ್ನು ಒಳಗೊಂಡಿವೆ: ಸಂಕೇತಗಳು, ಶಾಸನಗಳು, ರೆಜಿಸ್ಟರ್‌ಗಳು, ಅಧಿಕೃತ ಪತ್ರವ್ಯವಹಾರ, ಜನಗಣತಿ-ಆದಾಯ, ತೆರಿಗೆ-ಮೌಲ್ಯಮಾಪನ, ಅರ್ಜಿಗಳು, ನ್ಯಾಯಾಲಯ-ದಾಖಲೆಗಳು, ಮಾರಾಟ, ಗುತ್ತಿಗೆ, ಇಚ್ಚಾಶಕ್ತಿ, ಬಿಲ್‌ಗಳು, ಖಾತೆಗಳು, ದಾಸ್ತಾನುಗಳು, ಜಾತಕಗಳು ಮತ್ತು ಖಾಸಗಿ ಅಕ್ಷರಗಳು ಇದ್ದುವು.[೩]
ಪ್ರಹಸನದಲ್ಲಿರುವ ಕನ್ನಡ ಪದಗಳು
ಬದಲಾಯಿಸಿಪ್ಯಾಪಿರೈ ಒಂದಾದ ಈ ಪ್ರಹಸನದಲ್ಲಿ ಗ್ರೀಕ್ ಭಾಷೆಯದಲ್ಲದ ಕನ್ನಡದ ಪದಗಳಿದ್ದುವು. ಈ ಪ್ರಹಸನದ ಕಥೆ ಪಶ್ಚಿಮ ಕರಾವಳಿಗೆ ಸಂಬಂಧಿಸಿದ್ದು, ಈ ಕಾಲಕ್ಕೆ ಗ್ರೀಕರೂ ರೋಮನ್ನರೂ ಕನ್ನಡ ನಾಡಿನೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು. ಪ್ರಹಸನದ ಕಾಲ ಸು. ಕ್ರಿ. ಶ. ೧೫೦.
ಕನ್ನಡ ಪದಗಳು
ಬದಲಾಯಿಸಿಮಲ್ಪಿನಾಯಕ, ಕರೆವನೊ, ಲಲ್ಲೆ, ಕೊಡಗೂಸು, ಅಲ್ಲೆಮ್ಮಕ್ಕ – ಇಂತಹ ಪದಗಳು ಇದರಲ್ಲಿವೆ. ಇವು ಕನ್ನಡ ಪದಗಳೆಂದು ಶಾಮಾಶಾಸ್ತ್ರಿ, ಆರ್. ನರಸಿಂಹಾಚರ‍್ಯ, ಗೋವಿಂದ ಪೈ ಮೊದಲಾದವರು ವಾದಿಸಿದ್ದಾರೆ. ಈ ಪದಗಳು ತಮಿಳು ಅಥವಾ ತುಳು ಪದಗಳಾಗಿರಬಹುದೆಂಬ ಇನ್ನೊಂದು ವಾದವೂ ವಿದ್ವಾಂಸರಲ್ಲಿ ಇದೆ.
ಉಲ್ಲೇಖಗಳು
ಬದಲಾಯಿಸಿ- ↑ https://books.google.co.in/books?id=FKOODwAAQBAJ&pg=PA9&lpg=PA9&dq=Papyrus+Oxyrhynchus+related+in+kannada&source=bl&ots=zrtAoCk5Oc&sig=ACfU3U1OY1ZDbTrM0MxI8-fVKQUiyC3xMg&hl=en&sa=X&ved=2ahUKEwjRnsiZmM7oAhWETX0KHUstDwoQ6AEwBXoECA0QKQ#v=onepage&q=Papyrus%20Oxyrhynchus%20related%20in%20kannada&f=false
- ↑ https://tulu-research.blogspot.com/2018/09/409-non-greek-words-in-oxyrhynchus.html
- ↑ Professor Nickolaos Gonis from University College London, in a film from the British Arts and Humanities Research Council on Oxyrhynchus Papyri Project.