ಹಲ್ಮಿಡಿ
ಹಲ್ಮಿಡಿ ಕರ್ನಾಟಕದ ಹಾಸನ ಜಿಲ್ಲೆಯ ಒಂದು ಹಳ್ಳಿ. ಕ್ರಿ. ಶ. ೪೫೦ರ ಕಾಲದ, ಕನ್ನಡದ ಮೊಟ್ಟಮೊದಲ ಶಾಸನ ಇದೇ ಹಳ್ಳಿಯಲ್ಲಿ ದೊರಕಿತು. ಹಿಟ್ಟುಗಲ್ಲಿನಿಂದ ಕೆತ್ತಿಸಿದ ಈ ಶಾಸನವನ್ನು ೧೯೩೦ರ ಸುಮಾರಿಗೆ ಪತ್ತೆಹಚ್ಚಲಾಯಿತು. ಕದಂಬರ ಅರಸ ಕಾಕುಸ್ಥವರ್ಮ ಬರೆಸಿದ ಶಾಸನ ಇದಾಗಿದೆ.
ಹಲ್ಮಿಡಿ
Halmidi | |
---|---|
town | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ISO 3166 code | IN-KA |
ಜಾಲತಾಣ | karnataka |
ಹಾಸನ-ಬೇಲೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ ೧೩ ಕಿ.ಮೀ ಅಂತರದಲ್ಲಿ ’ಹಲ್ಮಿಡಿ’ ಗೆ ಹೋಗುವ ದಾರಿಯ ದೊಡ್ಡ ಫಲಕ ಕಾಣುತ್ತದೆ. ಅಲ್ಲಿಂದ ಒಳಗೆ ೬ ಕಿ.ಮೀ. ತೆರಳಿದರೆ, ಹಲ್ಮಿಡಿಯನ್ನು ತಲುಪಬಹುದು. ಶಾಸನದ ಸ್ಥಳವನ್ನು ಸ್ಥಳೀಯರು ತೋರಬಲ್ಲರು. ಇಲ್ಲಿ ದೊರೆತಿರುವ ಈ ಶಿಲಾ ಶಾಸನ, ಇದೇ ಪ್ರದೇಶದ ವಿವರಗಳನ್ನೊಳಗೊಂಡಿರುವುದರಿಂದ ಈ ಊರಿಗೂ ಪ್ರಾಮುಖ್ಯತೆ ಬಂದಿದೆ.[೧]
ಹಲ್ಮಿಡಿ ಶಾಸನ
ಬದಲಾಯಿಸಿಕನ್ನಡ ಭಾಷೆಯಲ್ಲಿರುವ ಅತ್ಯಂತ ಹಳೆಯ ಶಾಸನ ಶಿಲ್ಪ ಇಲ್ಲಿ ದೊರೆತಿದೆ. ಕ್ರಿ.ಶ. ೪೫೦ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ. ಇದು ಕದಂಬರ ಕಾಕುತ್ಸ್ಥವರ್ಮನ ಕಾಲದ್ದು. ಈ ಶಾಸನ ಆಗಿನ ಕಾಲದ ಕನ್ನಡಭಾಷೆಯ ಪ್ರೌಢ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.ಈ ಶಾಸನದ ಪ್ರಾರ್ಥನಾ ಪದ್ಯ ಸಂಸ್ಕೃತದಲ್ಲಿದೆ. ಉಳಿದ ಭಾಗದಲ್ಲಿ ಹೇರಳವಾದ ಸಂಸ್ಕೃತ ಪದಗಳೂ, ಸಮಾಸಗಳೂ ತುಂಬಿವೆ. ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ. ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹವಾದ ಎರಿದು,ಕೊಟ್ಟಾರ್,ಅದಾನ್ ಮೊದಲಾದ ಪದಗಳು, ಇದರ ಭಾಷೆ "ಪೂರ್ವದ ಹಳೆಗನ್ನಡ" ಎಂಬುದನ್ನು ಸೂಚಿಸುತ್ತವೆ.[೨][೩]
ಉಲ್ಲೇಖಗಳು
ಬದಲಾಯಿಸಿ- ↑ Language of the Inscriptions - Sanskrit and Dravidiian - Archaeological Survey of India
- ↑ "ಆರ್ಕೈವ್ ನಕಲು". Archived from the original on 2007-10-01. Retrieved 2016-12-14.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Halmidi inscription proves antiquity of Kannada date 24 October 2004". Archived from the original on 1 ಡಿಸೆಂಬರ್ 2004. Retrieved 14 ಡಿಸೆಂಬರ್ 2016.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)