ಗುರುವಾರ
ಗುರುವಾರ - ವಾರದ ದಿನಗಳಲ್ಲೊಂದು. ಇದು ಬುಧವಾರ ಮತ್ತು ಶುಕ್ರವಾರದ ಮಧ್ಯದ ದಿನ.ಇದಕ್ಕೆ ಬೃಹಸ್ಪತಿವಾರವೆಂದೂ ಕರೆಯುತ್ತಾರೆ. ದೇವತೆಗಳ ಗುರು ಬೃಹಸ್ಪತ್ಯಾಚಾರ್ಯ.ಗುರುವಾರದ ಹೆಸರು ಗುರು ಗ್ರಹದಿಂದ ಬಂದಿದೆ. 'ಗುರು' ಅಂದರೆ ಭಾರ,ಮಹತ್ವಪೂರ್ಣ ಎಂಬರ್ಥ ಇದೆ.ಹೀಗಾಗಿ ಗುರುವಾರ ಗುರು ಅಂದರೆ ಆಚಾರ್ಯರಿಗೆ ಮೀಸಲಾದ ದಿನ ಕೂಡ ಹೌದು.ಈ ದಿನ ಗುರು ಸ್ಥಾನದಲ್ಲಿರುವ 'ದತ್ತಾತ್ರೇಯ','ರಾಘವೇಂದ್ರ ಸ್ವಾಮಿಗಳು','ಸಾಯಿಬಾಬಾ'ಮೊದಲಾದವರ ದರ್ಶನಕ್ಕೆ(ಮಂದಿರಗಳಲ್ಲಿ) ವಿಶೇಷ ಮಹತ್ವ ಇದೆ.ಈ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಹಾಡಿರುವ 'ಗುರುವಾರ ಬಂತಮ್ಮಾ,ಗುರುರಾಯರ ನೆನೆಯಮ್ಮಾ' ಹಾಡನ್ನು ನೆನಪಿಸಿಕೊಳ್ಳಬಹುದು.
ಭಾನುವಾರ | ಸೋಮವಾರ | ಮಂಗಳವಾರ | ಬುಧವಾರ | ಗುರುವಾರ | ಶುಕ್ರವಾರ | ಶನಿವಾರ |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |