ಗಿಟಾರ್ ಒಂದು ಜನಪ್ರಿಯ

ಅಕೊಸ್ಟಿಕ್ ಗಿಟಾರ್

ತಂತಿ ವಾದ್ಯ. ತಂತಿಗಳನ್ನು ಬೆರಳು ಅಥವಾ ಪ್ಲೆಕ್ಟ್ರಮ್‌(ಪಿಕ್)ನಿಂದ ಮೀಟಿದಾಗ, ಅವುಗಳ ಕಂಪನದಿಂದ ಸ್ವರ ಹೊರಹೊಮ್ಮುತ್ತದೆ. ಗಿಟಾರ್‌ಗಳನ್ನು ಅಕೊಸ್ಟಿಕ್ ಅಥವಾ ಎಲಕ್ಟ್ರಿಕ್ ಅಥವಾ ಸೆಮಿ-ಅಕೊಸ್ಟಿಕ್ ಎಂದು ಸ್ಥೂಲವಾಗಿ ವರ್ಗೀಕರಿಸಬಹುದು. ಗಿಟಾರಿನ ಬಳಕೆ ೧೯ನೆ ಶತಮಾನದಿಂದ ಅತೀವ ಜನಪ್ರಿಯತೆ ಕಂಡು ಎಲ್ಲಾ ಸಂಗೀತಶೈಲಿಗಳಲ್ಲಿ ಇದರ ಬಳಕೆಯಾಗಿದೆ. ಗಿಟಾರ್ ಪಾಶ್ಚಾತ್ಯ ಸಂಗೀತಶೈಲಿಯ ಉಪವಿಭಾಗಗಳಾದ ರಾಕ್, ಮತ್ತು ಬ್ಲೂಸ್ ಶೈಲಿಗಳ ಪ್ರಮುಖ ವಾದ್ಯವಾಗಿದೆ. ಗಿಟಾರ್ ವಾದಕರನ್ನು ಗಿಟಾರಿಸ್ಟ್ ಎಂದು ಸಾಮಾನ್ಯವಾಗಿ ಸಂಭೊಧಿಸಲಾಗುತ್ತದೆ.

ಚರಿತ್ರೆಸಂಪಾದಿಸಿ

ಗಿಟಾರನ್ನು ಹೋಲುವಂಥ ವಾದ್ಯಗಳು ಸುಮಾರು ೫೦೦೦ ವರ್ಷಗಳಿಂದ ಬಳಕೆಯಲ್ಲಿದೆ. ಗಿಟಾರ್ ಮೂಲ ಹುಡುಕಿದರೆ ಕುರುಹುಗಳು ಮಧ್ಯ ಎಷಿಯಾದ ಕೆಲವು ತಂತಿ ವಾದ್ಯಗಳಿಗೆ ಕರೆತರುತ್ತವೆ. ಇರಾನಿನಲ್ಲಿ ಪತ್ತೆಯಾಗಿರುವ ಪ್ರಚೀನ ಸೂಸಾ ನಗರದ ಅವಶೇಷಗಳಲ್ಲಿ ದೊರಕಿರುವ ಕೆತ್ತನೆಗಳಲ್ಲಿ ಗಿಟಾರ್‌ನಂತಹ ವಾದ್ಯ ಕಾಣಸಿಗುತ್ತದೆ. ಗಿಟಾರ್ ಪದ ಸ್ಪ್ಯಾನಿಷ್ ಭಾಷೆಯಿಂದ ಜಗತ್ತಿನ ಇತರ ಭಾಷೆಗಳಿಗೆ ತಲುಪಿತು. ಗಿಟಾರ್ ಪದದ ಮೂಲದ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲವಾದರೂ ಅದರ ಬಗ್ಗೆ ಕೆಲವು ಸ್ಪಷ್ಟ ಅಭಿಪ್ರಾಯಗಳಿವೆ. ಅರಬ್ಬೀ ಅಥವಾ ಪಾರಸಿ ಅಥವಾ ಸಂಸ್ಕೃತ(ಸಂಗೀತ + ತಾರ್ ಯಾನೆ ತಂತಿ) ಬಾಷೆಗಳ ಪದಗಳಿಂದ ಈ ಪದ ಹುಟ್ಟಿರಬಹುದೆಂಬ ಅಭಿಪ್ರಾಯಗಳಿವೆ. ಒಟ್ಟಿನಲ್ಲಿ ಇಂಡೂ-ಯೂರೋಪಿಯನ್ ಭಾಷೆಗಳ ಪದಗಳಿಂದ ಈ ಪದ ಹುಟ್ಟಿದೆ. ಲ್ಯೂಟ್(ಪಾಶ್ಚಾತ್ಯ ಶಾಸ್ತ್ರೀಯ ಸಂಗಿತದಲ್ಲಿ ಇದರ ಬಳಕೆಯಿದೆ) ಎಂಬ ತಂತಿವಾದ್ಯ ಗಿಟಾರಿನ ಪೂರ್ವಜ ಎಂಬ ಅಭಿಪ್ರಾಯ ಕೂಡ ಇದೆ. ಎಲಕ್ಟ್ರಿಕ್ ಗಿಟಾರ್ ೧೯೩೧ರಲ್ಲಿ ಅಡಾಲ್ಫ್ ರಿಕನ್‌ಬ್ಯಾಕರ್, ಜಾರ್ಜ್ ಬ್ಯುಕ್ಯಾಂಪ್ ಮತ್ತು ಪೌಲ್ ಬರ್ತ್ ಸಹಾಯದೊಂದಿಗೆ ೧೯೩೧ರಲ್ಲಿ ಕಂಡುಹಿಡಿದ.

ಗಿಟಾರಿನ ಭಾಗಗಳುಸಂಪಾದಿಸಿ

 
ಗಿಟಾರಿನ ಭಾಗಗಳು

ಗಿಟಾರಿನ ಕೆಲವು ಭಾಗಗಳು ಹೀಗಿವೆ.

೧. ಹೆಡ್ ಸ್ಟಾಕ್
೨. ನಟ್
೩. ಮಷೀನ್ ಹೆಡ್ಸ್ (ತಿರುಪುಗಳು)
೪. ಫ್ರೆಟ್ಸ್ (ಮೆಟ್ಟಿಲುಗಳು)
೫. ಟ್ರಸ್ಸ್ ರಾಡ್
೬. ಇನ್‌ ಲೇಸ್
೭. ನೆಕ್
೮. ನೆಕ್ ಜಾಯಿಂಟ್
೯. ಬಾಡಿ
೧೦. ಪಿಕ್ಕಪ್ಸ್
೧೧. ಎಲಕ್ಟ್ರಾನಿಕ್ಸ್
೧೨. ಬ್ರಿಡ್ಜ್
೧೩. ಪಿಕ್‌ಗಾರ್ಡ್

ಗಿಟಾರಿನಲ್ಲಿ ಸಾಮಾನ್ಯವಾಗಿ ಆರು ತಂತಿಗಳಿರುತ್ತವೆ ಆದರೆ ಹಲವು ವ್ಯತ್ಯಯಗಳಿವೆ. ೧೨ ತಂತಿ, ೭ ತಂತಿ, ೪ ತಂತಿಯ (ಉದಾ. ಬೇಸ್ ಗಿಟಾರ್) ಕೂಡ ಪ್ರಚಲಿತದಲ್ಲಿವೆ. ಈಗಿನ ಕಾಲದ ಗಿಟಾರ್‌ಗಳು ವಿಶ್ಶಿಷ್ಟ ಆಕಾರ (ಉದಾ. ಎರಡು ನೆಕ್‌ವುಳ್ಳ ಗಿಟಾರ್)ಹಾಗು ವರ್ಣಗಳಲ್ಲಿ ಲಭ್ಯವಿದೆ. ತಗ್ಗಿನ ಸ್ಥಾಯಿಯ ಸ್ವರಗಳನ್ನು ಹೊಮ್ಮಿಸುವ ತಂತಿಗಳು ದಪ್ಪವಿದ್ದು ಮೇಲಿನ ಸ್ಥಾಯಿಯ ಸ್ವರಗಳನ್ನು ಹೊಮ್ಮಿಸುವ ತಂತಿಗಳು ತೆಳ್ಳಗಿರುತ್ತವೆ.

 
ರೆಸಿಫೆಯ ಬ್ರೆಜಿಲಿಯನ್ ಜಾನಪದ ಸಂಗೀತವನ್ನು ನುಡಿಸುವ ವ್ಯಕ್ತಿ

ಗಿಟಾರ್ ಶೃತಿಸಂಪಾದಿಸಿ

ಗಿಟಾರನ್ನು ಹಲವಾರು ವಿಧಗಳ ಶೃತಿಗೆ ಅಳವಡಿಸಬಹುದು ಆದರೆ ಸಾಮಾನ್ಯವಾಗಿ ಬಳಸುವ ಗಿಟಾರ್ ಶೃತಿ(ಇಎಡಿಜಿಬಿಇ) ಪಾಶ್ಚಾತ್ಯ ಸ್ವರ ಪದ್ದತಿಯಲ್ಲಿ ಹೀಗಿದೆ.

ಆರನೆ(ತಗ್ಗಿನ ಸ್ಥಾಯಿ) ತಂತಿ: ಇ (ಕಂಪಾನಾಂಕ ೮೨.೪ ಹರ್ಟ್ಜ್)
ಐದನೆ ತಂತಿ: ಎ (ಕಂಪಾನಾಂಕ ೮೨.೪ ಹರ್ಟ್ಜ್)
ನಾಲ್ಕನೆ ತಂತಿ: ದಿ (ಕಂಪಾನಾಂಕ ೧೪೬.೮ ಹರ್ಟ್ಜ್)
ಮೂರನೆ ತಂತಿ: ಗಿ (ಕಂಪಾನಾಂಕ ೧೯೬.೦ ಹರ್ಟ್ಜ್)
ಎರಡನೆಯ ತಂತಿ: ಬಿ (ಕಂಪಾನಾಂಕ ೨೪೬.೯೨ ಹರ್ಟ್ಜ್)
ಮೊದಲ (ತಗ್ಗಿನ ಸ್ಥಾಯಿ) ತಂತಿ: ಇ (ಕಂಪಾನಾಂಕ ೩೨೯.೬ ಹರ್ಟ್ಜ್)

ಪ್ರಸಿದ್ಧ ಗಿಟಾರ್ ವಾದಕರುಸಂಪಾದಿಸಿ

ಜಿಮ್ಮಿ ಹೆಂಡ್ರಿಕ್ಸ್
ಎರಿಕ್ ಕ್ಲ್ಯಾಪ್ಟನ್
ಜೆಫ್ ಬೆಕ್
ಜಿಮ್ಮಿ ಪೇಜ್
ರಿಚಿ ಬ್ಲ್ಯಾಕ್‌ಮೋರ್
ಎಡ್ಡಿ ವ್ಯಾನ್‌ಹೆಲೆನ್
ಜೋ ಸಾಟ್ರಿಯಾನಿ
ಸ್ಟೀವ್ ವಾಯ್
ಯಿಂಗ್ವೇ ಮಾಮ್‌ಸ್ಟೀನ್
ಸ್ಲ್ಯಾಷ್
ಬಿ ಬಿ ಕಿಂಗ್
ಚೆಟ್ ಆಟ್ಕಿನ್ಸ್
ಜಾರ್ಜ್ ಹ್ಯಾರಿಸನ್
ಕೀತ್ ರಿಚರ್ಡ್ಸ್
ಆಲ್ ಡಿ ಮಿಯೋಲ
ನೂನೊ ಬೆಟ್ಟನ್‌ಕೊರ್ಟ್
ಜಾನ್ ಪೆಟ್ರೂಚಿ
ಸ್ಟೀವೀ ರೇ ವಾನ್
ಕರ್ಲೋಸ್ ಸ್ಯಾಂಟಾನ
ಜಾನ್ ಮ್ಯಕ್ಲಾಕ್ಲಿನ್
ಮಾರ್ಕ್ ನಾಫ್ಲರ್
ಎರಿಕ್ ಜಾನ್ಸನ್
ಕರ್ಟ್ ಕೊಬೈನ್
ಕರ್ಕ್ ಹ್ಯಾಮೆಟ್ಟ್

ಬಾಹ್ಯ ಸಂಪರ್ಕ ಕೊಂಡಿಗಳುಸಂಪಾದಿಸಿ


"https://kn.wikipedia.org/w/index.php?title=ಗಿಟಾರ್&oldid=1096161" ಇಂದ ಪಡೆಯಲ್ಪಟ್ಟಿದೆ