ಗಾಯತ್ರಿ ಗೋವಿಂದ್, ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ನೃತ್ಯ ಸಂಯೋಜಕಿ, ನಟಿ ಮತ್ತು ೨೦೦೮ರ ಏಷ್ಯಾನೆಟ್‌ನ ವೊಡಾಫೋನ್ ಥಕದಿಮಿ ವಿಜೇತರು. []

ಗಾಯತ್ರಿ ಗೋವಿಂದ್
Born
ಗಾಯತ್ರಿ ಗೋವಿಂದ್

Occupation(s)ನೃತ್ಯಗಾರ್ತಿ, ಸಂಯೋಜಕಿ, ನಿರೂಪಕಿ, ಸಾಫ್ಟ್‌ವೇರ್ ವೃತ್ತಿಪರರು, ಉದ್ಯಮಿ
Years active೧೯೯೨–ಪ್ರಸ್ತುತ
ಗಾಯತ್ರಿ ಗೋವಿಂದ್

ಭರತನಾಟ್ಯ, ಮೋಹಿನಿಯಾಟ್ಟಂ, ಕೂಚಿಪುಡಿ, ಒಟ್ಟಂತುಲ್ಲಾಲ್, ಕಥಕ್ಕಳಿ, ಕಥಕ್ ಮತ್ತು ಕೇರಳನಾದನಂನಲ್ಲಿ ತರಬೇತಿ ಪಡೆದಿರುವ ಗಾಯತ್ರಿ ಗೋವಿಂದ್ ಅವರು, ನಾಲ್ಕನೇ ವಯಸ್ಸಿನಿಂದಲೇ ಭಾರತ ಮತ್ತು ವಿದೇಶಗಳ ವಿವಿಧ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. [] ನೃತ್ಯ ಸಂಯೋಜಕಿಯಾಗಿ ಗುರುತಿಕೊಂಡಿರುವ ಅವರು ತಿರುವನಂತಪುರದಲ್ಲಿ ಸಿಲ್ವರ್ ಸ್ಟ್ರೀಕ್ ಎಂಬ ನೃತ್ಯ ತಂಡವನ್ನು [] ಕಟ್ಟುಕೊಂಡಿದ್ದಾರೆ. ಕೈರಳಿ ಟಿವಿ, ಏಷ್ಯಾನೆಟ್, ಸೂರ್ಯ ಟಿವಿ, ಮಜವಿಲ್ ಮನೋರಮಾ, ಕೈರಳಿ ನಾವು, ಏಷ್ಯಾನೆಟ್ ನ್ಯೂಸ್, ಬಿಟಿವಿ, ದೂರದರ್ಶನ, ಎಸಿವಿ ಹೀಗೆ ಅನೇಕ ದೂರದರ್ಶನದ ಕಾರ್ಯಕ್ರಮಗಳು ಮತ್ತು ನೇರಪ್ರಸಾರ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಪ್ರಸಿದ್ಧ ಸೊಸೈಟಿ ಟೀಯ ಮಾಡೆಲ್ ಆಗಿದ್ದಾರೆ. ಚೆನ್ನೈನ ಹೆಚ್‌ಸಿಎಲ್ ಟೆಕ್ನಾಲಜೀಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿರುವ ಅವರು, ಪ್ರಸ್ತುತ[] ಚೆನ್ನೈ ಮತ್ತು ತಿರುವನಂತಪುರದಲ್ಲಿ ತಕಧಿಮಿ [] ಎಂಬ ನೃತ್ಯಶಾಲೆಯನ್ನು ನಡೆಸುತ್ತಿದ್ದಾರೆ.

ಅಕ್ಟೋಬರ್ ೧೬ರಂದು ಫಿನ್‌ಲ್ಯಾಂಡ್‌ನ ಹೆಲ್ಸಿಂಕಿಯಲ್ಲಿ ಮನರಂಜನೆ, ಮಾಧ್ಯಮ ಮತ್ತು ಸಂವಹನ ವಿಭಾಗದಲ್ಲಿ ೨೦೧೫ನೆ ಸಾಲಿನ ಗೋಲ್ಡನ್ ವುಮೆನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. []

ಗಾಯತ್ರಿ ಕೂಡ ಸೂರ್ಯ ನಿರ್ಮಾಣದ 'ಗಾಂಧರಂ' ನ ಭಾಗವಾಗಿದ್ದ ಅವರು, ೨೦೧೨ ಮತ್ತು ೨೦೧೩ರಲ್ಲಿ ಪ್ರತಿಷ್ಠಿತ ಸೂರ್ಯ ಉತ್ಸವದಲ್ಲಿ ಮೋಹಿನಿಯಾಟ್ಟಂ ಮತ್ತು ಕೂಚಿಪುಡಿ ವಾದ್ಯಗೋಷ್ಠಿಗಳನ್ನು ಪ್ರದರ್ಶಿಸಿದ್ದಾರೆ .

'ಭಾವಸಂಹಿತೆ' (ನೃತ್ಯ, ಸಂಗೀತ, ಬೆಳಕು ಮತ್ತು ಧ್ವನಿಯ ಸಮ್ಮಿಲನ), 'ಆದಿಪರಾಶಕ್ತಿ' (ಬಹುಮಾಧ್ಯಮ ನೃತ್ಯ ನಿರ್ಮಾಣ), ರಾಮ ರಾಮೇತಿ (ಎ ವಾಕ್ ವಿಥ್ ರಾಮ) ಗಾಯತ್ರಿ ಗೋವಿಂದ್ ಅವರ ನೃತ್ಯ ಕೃತಿಗಳು. ಎಸ್ಐಎಲ್‍ಯು ಕಿರುಚಿತ್ರಕ್ಕೆ ಸತ್ಯಜಿತ್ ರೇ ಗೋಲ್ಡನ್ ಆರ್ಕ್ ಫಿಲ್ಮ್ ಅವಾರ್ಡ್-೨೦೨೨ರ ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಾಲತಾಣ

ಬದಲಾಯಿಸಿ

ಶಿಕ್ಷಣ

ಬದಲಾಯಿಸಿ

ಗಾಯತ್ರಿ ಅವರು ತಿರುವನಂತಪುರದ ಹೋಲಿ ಏಂಜಲ್ಸ್ ಕಾನ್ವೆಂಟ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು ಮತ್ತು ಅಲ್ಲಿನ ಮಾರ್ ಬಸೆಲಿಯೋಸ್ ಕಾಲೇಜಿನಲ್ಲಿ ಬಿ. ಟೆಕ್ ಪದವಿ ಮುಗಿಸಿದರು. ನಂತರ ಫ್ಲೋರಿಡಾ ವಿಶ್ವವಿದ್ಯಾನಿಲಯದಿಂದ ''ಹೀಲಿಂಗ್ ವಿಥ್ ದಿ ಆರ್ಟ್ಸ್'' ಕೋರ್ಸನ್ನು ಪೂರ್ಣಗೊಳಿಸಿರುವ ಅವರು, ನೃತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಡಿಜಿಟಲ್ ಮಾಧ್ಯಮ ನಿರ್ಮಾನದ ವಿಷಯದಲ್ಲಿ ಡಿಪ್ಲೋಮಾ ಹೊಂದಿದ್ದಾರೆ.

ಪ್ರಶಸ್ತಿಗಳು

ಬದಲಾಯಿಸಿ
  • ಎಸ್ಐಎಲ್‍ಯು ಕಿರುಚಿತ್ರಕ್ಕೆ ಸತ್ಯಜಿತ್ ರೇ ಗೋಲ್ಡನ್ ಆರ್ಕ್ ಫಿಲ್ಮ್ ಅವಾರ್ಡ್ 2022 ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ.
  • ಮನರಂಜನೆ, ಮಾಧ್ಯಮ ಮತ್ತು ಸಂವಹನ ವಿಭಾಗದಲ್ಲಿ ೨೦೧೫ರ ಗೋಲ್ಡನ್ ವುಮೆನ್ ಪ್ರಶಸ್ತಿ. []
  • ೨೦೦೮ರಲ್ಲಿ ಏಷ್ಯಾನೆಟ್‌ನ ವೊಡಾಫೋನ್ ಥಕಡಿಮಿ ಪ್ರಶ‍ಸ್ತಿ. []
  • ೨೦೦೭ರಲ್ಲಿ ಧೂಮ್ ಪ್ರೋನಲ್ಲಿ ಪ್ರಥಮ ಸ್ಥಾನ. [೧೦]

ದೃಶ್ಯ ಮಾಧ್ಯಮದಲ್ಲಿ

ಬದಲಾಯಿಸಿ

ವಾಣಿಜ್ಯಗಳು/ಜಾಹೀರಾತುಗಳು

ಬದಲಾಯಿಸಿ
ಶೀರ್ಷಿಕೆ ಭಾಷೆ ನಿರ್ದೇಶಕ ಸಿನಿಮಾಟೋಗ್ರಾಫರ್
ಸೊಸೈಟಿ ಟೀ ಹಿಂದಿ, ಇಂಗ್ಲಿಷ್ ವಿಟ್ಟೋರಿಯೊ ಬಡಿನಿ ಕಾನ್ಫಲೋನಿಯರಿ ಕಾರ್ತಿಕ್ ವಿಜಯ್
ಪಂಕಜ ಕಸ್ತೂರಿ ಶ್ವಾಸಿಸೋಣ ಉಸಿರಾಡಿ ಕನ್ನಡ ರೆಜಿ ಸೈನೆ ತನು ಬಾಲಕ
ಡೊಮೆಕ್ಸ್ ತಮಿಳು, ಮಲಯಾಳಂ, ಪಂಜಾಬಿ, ಇಂಗ್ಲಿಷ್, ಕನ್ನಡ, ಹಿಂದಿ, ತೆಲುಗು ವಿಜಯ್ ವೀರಮಲ್ ರವಿ ವರ್ಮನ್
ಶ್ರೀ ಗೋಕುಲಂ ಪಬ್ಲಿಕ್ ಸ್ಕೂಲ್ ಮಲಯಾಳಂ ಕವಿತಾ ಜಯಶ್ರೀ ಮಹೇಶ್ ರಾಜ್
ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ ಮಲಯಾಳಂ ಪ್ರಕಾಶ್ ಪ್ರಭಾಕರ್ ಸಿಪಿ ಸತೀಶ್
ಪಿವಿಎಂ ಹೇರ್ ಆಯಿಲ್ ಮಲಯಾಳಂ ಸತ್ಯ

ಚಲನಚಿತ್ರಗಳು

ಬದಲಾಯಿಸಿ
ಶೀರ್ಷಿಕೆ ನಿರ್ದೇಶಕ ಸಿನಿಮಾಟೋಗ್ರಾಫರ್
ಜಿನ್ ಸಿದ್ಧಾರ್ಥ್ ಭರತನ್ ಗಿರೀಶ್ ಗಂಗಾಧರನ್
ಖೋ ಖೋ ರಾಹುಲ್ ರಿಜಿ ನಾಯರ್ ಟೋಬಿನ್ ಥಾಮಸ್
ಅಂತಾಕ್ಷರಿ ವಿಪಿನ್ ದಾಸ್ ಬಬ್ಲು ಅಜು
ಹೆಸರಿಲ್ಲದ ಶಾಲಿನ್ ಜೋಯಾ ಶರತ್ ಕುಮಾರ್

ಜಾಲ ಸರಣಿ

ಬದಲಾಯಿಸಿ
ಶೀರ್ಷಿಕೆ ನಿರ್ದೇಶಕ
ಅಂಗನೇ ಅಂಗನೇ ಅನು ಗಾಯತ್ರಿ ಗೋವಿಂದ್

ಕಿರುಚಿತ್ರಗಳು

ಬದಲಾಯಿಸಿ
ಶೀರ್ಷಿಕೆ ನಿರ್ದೇಶಕ
ಶ್ವೇತವಾಣಿ ನಿಧಿನ್ ಸಿ
ಎಸ್‍ಐಎಲ್‍ಯು ಗಾಯತ್ರಿ ಗೋವಿಂದ್

ಧ್ವನಿಮುದ್ರಣಗಳು

ಬದಲಾಯಿಸಿ
ಶೀರ್ಷಿಕೆ ಭಾಷೆ ನಿರ್ದೇಶಕ
ಚಿತ್ಹಾ ಮಲಯಾಳಂ ಅರುಣ್ ಕುಮಾರ್
ಡೊಮೆಕ್ಸ್ ತಮಿಳು ವಿಜಯ್ ವೀರಮಲ್

ಉಲ್ಲೇಖಗಳು

ಬದಲಾಯಿಸಿ
  1. "Dancing queen". The Hindu. Thiruvananthapuram. 27 ಜೂನ್ 2008. Archived from the original on 4 ಜುಲೈ 2008. Retrieved 24 ಜನವರಿ 2012.
  2. "In seventh heaven". The Hindu. Thiruvananthapuram. 28 ಜೂನ್ 2008. Archived from the original on 3 ಡಿಸೆಂಬರ್ 2013. Retrieved 24 ಜನವರಿ 2012.
  3. Chris (4 ನವೆಂಬರ್ 2011). "A techie wedded to dance". Deccan Chronicle. Archived from the original on 9 ಡಿಸೆಂಬರ್ 2011. Retrieved 24 ಜನವರಿ 2012.
  4. "Team work Silver Streak won the Dhoom Pro competition". The Hindu. Metro Plus Thiruvananthapuram. 7 ಜೂನ್ 2007. Archived from the original on 3 ಡಿಸೆಂಬರ್ 2013. Retrieved 24 ಜನವರಿ 2012.
  5. "Natana Talent of Month". Technopark, Trivandrum. 2010. Archived from the original on 31 ಮಾರ್ಚ್ 2012. Retrieved 24 ಜನವರಿ 2012.
  6. "Feat of perfection". The Hindu. Metro Plus Thiruvananthapuram. 27 ಡಿಸೆಂಬರ್ 2012. Retrieved 28 ಡಿಸೆಂಬರ್ 2012.
  7. "Golden Women Awards Results". Golden Women Awards 2015. Retrieved 18 ಅಕ್ಟೋಬರ್ 2015.
  8. "Golden Women Awards Results". Golden Women Awards 2015. Retrieved 18 ಅಕ್ಟೋಬರ್ 2015."Golden Women Awards Results".
  9. "In seventh heaven". The Hindu. Thiruvananthapuram. 28 ಜೂನ್ 2008. Archived from the original on 3 ಡಿಸೆಂಬರ್ 2013. Retrieved 24 ಜನವರಿ 2012."In seventh heaven".
  10. "Team work Silver Streak won the Dhoom Pro competition". The Hindu. Metro Plus Thiruvananthapuram. 7 ಜೂನ್ 2007. Archived from the original on 3 ಡಿಸೆಂಬರ್ 2013. Retrieved 24 ಜನವರಿ 2012."Team work Silver Streak won the Dhoom Pro competition".