ಗಂಗಾಧರ ಚಿತ್ತಾಲರು ನವೋದಯ ಕಾಲದ ಪ್ರಮುಖ ಕವಿಗಳು. ಇವರು ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲಿ ೧೯೨೩ ನವೆಂಬರ್ ೧೨ರಂದು ಜನಿಸಿದರು. ಕನ್ನಡದ ಮತ್ತೋರ್ವ ಖ್ಯಾತ ಲೇಖಕ ಯಶವಂತ ಚಿತ್ತಾಲರು ಇವರ ಅಣ್ಣಂದಿರು.

Gangadhar Vithoba Chittal
ಜನನ(೧೯೨೩-೧೧-೧೨)೧೨ ನವೆಂಬರ್ ೧೯೨೩
ಗೋಕರ್ಣದ, ಹನಹಳ್ಳಿ,ಉತ್ತರ ಕನ್ನಡ, ಕರ್ನಾಟಕ
ಮರಣ28 January 1987(1987-01-28) (aged 63)
ಮುಂಬಯಿ
ವೃತ್ತಿಕವಿ, ಭಾರತೀಯ ಆಡಿಟ್ ಮತ್ತು ಖಾತೆ ಸೇವೆ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕವನ
ವಿಷಯಕನ್ನಡ
ಬಾಳ ಸಂಗಾತಿಮೀರಾ ಕೃಷ್ಣ

ಪ್ರಭಾವಗಳು
  • ಯಶವಂತ್ ಚಿತ್ತಾಲ್

ಪ್ರಭಾವಿತರು
  • ವಿ. ಕೆ. ಗೊಕಾಕ್,ರಂ. ಶ್ರೀ. ಮುಗಳಿ

ಶಿಕ್ಷಣ

ಬದಲಾಯಿಸಿ

೧೯೪೦ರಲ್ಲಿ ಕುಮಟಾದ ಗಿಬಸ್ ಹೈ ಸ್ಕೂಲಿನಿಂದ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಗೆ ಕುಳಿತ ಚಿತ್ತಾಲರು ಮುಂಬಯಿ ವಿಶ್ವವಿದ್ಯಾಲಯಕ್ಕೆ ಹೊಸ ವಿಕ್ರಮ ಸ್ಥಾಪಿಸಿ, ಪ್ರಥಮ ಸ್ಥಾನ ಪಡೆದರು. ೧೯೪೨ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾಲೇಜಿನಿಂದ ಡಿಬಾರ್ ಆದರು. ಕಾಲೇಜು ಶಿಕ್ಷಣವನ್ನು ಮುಂದುವರಿಸಿದಾಗಲೂ ಕೂಡ ಎಂ.ಎನ್.ರಾಯ್ ಅವರ ಪಕ್ಷದೊಂದಿಗೆ ಸಂಬಂಧವಿಟ್ಟುಕೊಂಡ ಚಿತ್ತಾಳರು , ವಿದ್ಯಾರ್ಥಿ ಯೂನಿಯನ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ೧೯೪೫ರಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು, ಮುಂಬಯಿ ವಿಶ್ವವಿದ್ಯಾಲಯದ ಬಿ.ಎ. (ಆನರ್ಸ್) ಪದವಿ ಪಡೆದರು.

ವೃತ್ತಿ

ಬದಲಾಯಿಸಿ
  • ೧೯೪೮ರಲ್ಲಿ ಐ.ಎಸ್. ಮತ್ತು ಎ.ಎಸ್. ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ , ಮುಂಬಯಿಯಲ್ಲಿ ಸಹಾಯಕ ಮಹಾಲೇಖಪಾಲಕರಾಗಿ ನೇಮಕಗೊಂಡರು.
  • ೧೯೫೫-೧೯೫೮ರ ಕಾಲಾವಧಿಯಲ್ಲಿ ವಾಷಿಂಗ್ಟನ್ ದಲ್ಲಿ ಡೆಪ್ಯುಟಿ ಡೈರೆಕ್ಟರ್ ಆಫ್ ಆಡಿಟ್ಸ್ ಆಗಿ ಕಾರ್ಯ ನಿರ್ವಹಿಸಿದರು.
  • ೧೯೬೬-೧೯೬೭ರ ಕಾಲಾವಧಿಯಲ್ಲಿ ಲಂಡನ್ದಲ್ಲಿ ಡೈರೆಕ್ಟರ್ ಆಫ್ ಆಡಿಟ್ಸ್ ಆಗಿ ಸೇವೆ ಸಲ್ಲಿಸಿದರು
  • ಗಂಗಾಧರ ಚಿತ್ತಾಲರು ೧೯೭೭ರಲ್ಲಿ ನಿವೃತ್ತರಾದರು ;
  • ೧೯೮೭ರಲ್ಲಿ ನಿಧನರಾದರು.

ಕೃತಿಗಳು

ಬದಲಾಯಿಸಿ

ಕವನ ಸಂಕಲನ

ಬದಲಾಯಿಸಿ
  • ಕಾಲದ ಕರೆ
  • ಮನುಕುಲದ ಹಾಡು
  • ಹರಿವ ನೀರಿದು
  • ಸಂಪರ್ಕ
  • ಸಮಗ್ರ ಕಾವ್ಯ

ಪುರಸ್ಕಾರ

ಬದಲಾಯಿಸಿ

೧೯೮೨ರಲ್ಲಿ ಗಂಗಾಧರ ಚಿತ್ತಾಲರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಉಲ್ಲೇಖ

ಬದಲಾಯಿಸಿ