ಕೃಷ್ಣಪ್ಪ ಭೀಮಪ್ಪ ಕೋಳಿವಾಡ್ (ಜನನ ೧ ನವೆಂಬರ್ ೧೯೪೪)[] ಒಬ್ಬ ಭಾರತೀಯ ರಾಜಕಾರಣಿ. ಇವರು ಕರ್ನಾಟಕ ವಿಧಾನಸಭೆಯ ೨೦ ನೇ ಸಭಾಪತಿ ಮತ್ತು ಕರ್ನಾಟಕ ರಾಜ್ಯದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. ಕೋಳಿವಾಡ್ ಅವರು ಕರ್ನಾಟಕ ವಿಧಾನಸಭೆಯಲ್ಲಿ ಐದು ವರ್ಷಗಳ ಕಾಲ ಸಚಿವರಾಗಿದ್ದರು. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಸಭಾಪತಿಯಾಗಿದ್ದ ಕಾಗೋಡು ತಿಮ್ಮಪ್ಪನವರ ನಂತರ ಕರ್ನಾಟಕ ವಿಧಾನಸಭೆಯ ಸಭಾಪತಿ ಆಗಿ ಕೋಳಿವಾಡ್ ಅವರು ಜುಲೈ ೨೦೧೬ ರಲ್ಲಿ ಆಯ್ಕೆಯಾದರು. ಕೋಳಿವಾಡ್ ವಿಧಾನಸಭೆಯ ೨೦ನೇ ಸಭಾಪತಿ ಆಗಿದ್ದರು.[][][]

ಕೆ. ಬಿ. ಕೋಳಿವಾಡ್

ಅಧಿಕಾರ ಅವಧಿ
೨೦೧೬ – ೧೯ ಮೇ ೨೦೧೮
ಪೂರ್ವಾಧಿಕಾರಿ ಕಾಗೋಡು ತಿಮ್ಮಪ್ಪ
ಉತ್ತರಾಧಿಕಾರಿ ಕೆ. ಆರ್. ರಮೇಶ್ ಕುಮಾರ್
ವೈಯಕ್ತಿಕ ಮಾಹಿತಿ
ಜನನ ಕೃಷ್ಣಪ್ಪ ಭೀಮಪ್ಪ ಕೋಳಿವಾಡ
(1944-11-01) ೧ ನವೆಂಬರ್ ೧೯೪೪ (ವಯಸ್ಸು ೮೦)
ಗುಡಗೂರು,

ರಾಣೆಬೆನ್ನೂರು,
ಮೈಸೂರು ಸಾಮ್ರಾಜ್ಯ

ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಪ್ರಭಾವತಿ
ಮಕ್ಕಳು ಪ್ರಕಾಶ್ ಕೋಳಿವಾಡ್


ರಾಜಕೀಯ ಜೀವನ

ಬದಲಾಯಿಸಿ

ಕೋಳಿವಾಡ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರು ಮತ್ತು ಕರ್ನಾಟಕದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅವರು ಮೊದಲ ಬಾರಿಗೆ ೧೯೭೨ ರಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ದಿಸಿ ಬಿ.ಸಿ.ಪಾಟೀಲ್ ಅವರನ್ನು ೧೦,೦೦೦ ಮತಗಳಿಂದ ಸೋಲಿಸಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. ೧೯೮೫ರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿ ಪಾಟೀಲ ಬಸನಗೌಡ ಗುರನಗೌಡರ ವಿರುದ್ಧ ೭೦೦ ಮತಗಳಿಂದ ಜಯಗಳಿಸಿದರು. ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದ್ದರಿಂದ ಹೆಚ್ಚು ಸಂಕುಚಿತವಾಗಿತ್ತು. ೧೯೮೯ ರ ಚುನಾವಣೆಯಲ್ಲಿ ಅವರು ಜನತಾ ದಳದ ಅಭ್ಯರ್ಥಿ ಕರ್ಜಿಗಿ ವೀರಪ್ಪ ಸಣ್ಣತಮ್ಮಪ್ಪ ವಿರುದ್ಧ ಸುಮಾರು ೨೮೦೦ ಮತಗಳ ಅಂತರದಿಂದ ಗೆದ್ದರು. ೧೯೯೪ ರ ಚುನಾವಣೆಯಲ್ಲಿ ಕರ್ಜಗಿ ವೀರಪ್ಪ ಸಣ್ಣತಮ್ಮಪ್ಪ ವಿರುದ್ಧ ಸುಮಾರು ೨೫,೦೦೦ ಮತಗಳ ಅಂತರದಿಂದ ಸೋತರು. ಕೋಳಿವಾಡ್ ಅವರು ಜನತಾ ದಳ ಪಕ್ಷದ ಅಭ್ಯರ್ಥಿ ತಿಳವಳ್ಳಿ ಶಿವಣ್ಣ ಗುರಪ್ಪ ಅವರನ್ನು ಸುಮಾರು ೫೦೦೦ ಮತಗಳ ಅಂತರದಿಂದ ಸೋಲಿಸುವ ಮೂಲಕ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರವನ್ನು ಮತ್ತೊಮ್ಮೆ ಉಳಿಸಿಕೊಂಡರು. ೨೦೦೪ ಮತ್ತು ೨೦೦೮ ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದ ತಿಳವಳ್ಳಿ ಶಿವಣ್ಣ ಗುರಪ್ಪ ಅವರ ವಿರುದ್ಧ ಎರಡು ಬಾರಿ ಸೋತರು. ೨೦೧೩ ರಲ್ಲಿ ಅವರು ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿದ್ದ ಆರ್. ಶಂಕರ್ ವಿರುದ್ಧ ಸುಮಾರು ೬೦೦೦ ಮತಗಳಿಂದ ಗೆದ್ದರು.[] ಕೋಳಿವಾಡ್ ಅವರು ಕರ್ನಾಟಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಚುನಾವಣಾ ಸಮಿತಿಯ ಸದಸ್ಯರೂ ಆಗಿದ್ದಾರೆ.[]

ಸಚಿವಾಲಯ

ಬದಲಾಯಿಸಿ

ಕೋಳಿವಾಡ್ ಅವರು ೨೦೦೨ ರಲ್ಲಿ ಎಸ್.ಎಮ್.ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಕುಡಿಯುವ ನೀರು ಸರಬರಾಜು ಸಚಿವರಾಗಿ ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು.[] ಅವರು ಕರ್ನಾಟಕ ವಿಧಾನಸಭೆಯಲ್ಲಿ ಹಲವು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆಯ ಸಭಾಪತಿ ಆಗಿದ್ದರು. ಅವರು ಇನ್ನೂ ಕೆರೆ ಸಮಿತಿಯ ಅಧ್ಯಕ್ಷರಾಗಿದ್ದಾರೆ.[][][೧೦][೧೧][೧೨]

ವೈಯಕ್ತಿಕ ಜೀವನ

ಬದಲಾಯಿಸಿ

ಕೋಳಿವಾಡ್ ಅವರು ಪ್ರಭಾವತಿಯವರನ್ನು ವಿವಾಹವಾಗಿದ್ದಾರೆ. ಮತ್ತು ಅವರಿಗೆ ಐದು ಮಕ್ಕಳಿದ್ದಾರೆ.[] ಅವರ ಪುತ್ರ ಪ್ರಕಾಶ ಕೋಳಿವಾಡ್ ಉದ್ಯಮಿಯಾಗಿದ್ದಾರೆ. ಅವರು ಮೋಡ ಬಿತ್ತನೆ ಕಂಪನಿ ನಡೆಸುತ್ತಿದ್ದಾರೆ. ಅವರು ಎನ್ಜಿಒ ಪಿಕೆಕೆ ಸಂಸ್ಥೆ ಅನ್ನು ನಡೆಸುತ್ತಾರೆ. ಅಲ್ಲಿ ಅವರು ಆರೋಗ್ಯ ಶಿಬಿರಗಳು, ಗಾಯನ ಸ್ಪರ್ಧೆಗಳು, ಉದ್ಯೋಗ ಮೇಳಗಳು, ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಉಚಿತ ಆಂಬ್ಯುಲೆನ್ಸ್ ಸೇವೆಗಳನ್ನು ಆಯೋಜಿಸುವ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ.[೧೩] ಕೋಳಿವಾಡ ಅವರು ಉತ್ತರ ಕರ್ನಾಟಕದಲ್ಲಿ ಪ್ರಬಲ ಜಾತಿಯಾಗಿರುವ ರಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ.[೧೪]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "K. B. Koliwad bio" (PDF). kla.kar.nic.in. Retrieved 3 ಫೆಬ್ರವರಿ 2018.
  2. "Congress MLA KB Koliwad unanimously elected as Karnataka Assembly Speaker". firstpost.com. Retrieved 3 ನವೆಂಬರ್ 2016.
  3. "Koliwad elected Karnataka Assembly Speaker". Deccan Herald. Retrieved 3 ನವೆಂಬರ್ 2016.
  4. "Sri. K B Koliwad Hon`ble Speaker". kla.kar.nic.in. Retrieved 3 ನವೆಂಬರ್ 2016.
  5. "Sitting and previous MLAs from Ranibennur Assembly Constituency". .elections.in. Retrieved 3 ನವೆಂಬರ್ 2016.
  6. "kpcc" (PDF). .kpcc.harryandlouit.com. Archived from the original (PDF) on 5 ನವೆಂಬರ್ 2016. Retrieved 5 ನವೆಂಬರ್ 2016.
  7. "minister of state for Drinking Water Supply". The Hindu. 1 ಜುಲೈ 2002. Retrieved 3 ನವೆಂಬರ್ 2016.[ಮಡಿದ ಕೊಂಡಿ]
  8. "chairmanship of the lake committee". Deccan Chronicle. Retrieved 3 ನವೆಂಬರ್ 2016.
  9. "All builders have encroached land: KB Koliwad". Deccan Chronicle. Retrieved 3 ನವೆಂಬರ್ 2016.
  10. "Book the babus and builders, says Assembly Speaker". India Today. Retrieved 3 ನವೆಂಬರ್ 2016.
  11. "Halt construction near lakes till re-survey is done: Koliwad committee". The Times of India. Retrieved 3 ನವೆಂಬರ್ 2016.
  12. "Lake panel report will ignore NGT's new guidelines: Koliwad". The Times of India. Retrieved 5 ನವೆಂಬರ್ 2016.
  13. "son Prakash Koliwad". Deccan Chronicle. Retrieved 3 ನವೆಂಬರ್ 2016.
  14. "Lingayats lead in north Karnataka region". Deccan Herald. Archived from the original on 4 ನವೆಂಬರ್ 2016. Retrieved 3 ನವೆಂಬರ್ 2016.