ಕೆ.ಜಿ.ಎಫ್: ಚಾಪ್ಟರ್ ೧
ಕೆಜಿಎಫ್ ಚಾಪ್ಟರ್ ೧ ೨೦೧೮ರಲ್ಲಿ ಬಿಡುಗಡೆಯಾದ ಭಾರತೀಯ ಕನ್ನಡ ಚಲನಚಿತ್ರ. ಇದನ್ನು ಮೂಲ ಭಾಷೆಯಿಂದ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಧ್ವನಿಪಥದೊಂದಿಗೆ(ಡಬ್ ಮಾಡಿ) ಬಿಡುಗಡೆ ಮಾಡಲಾಯಿತು. ಚಲನಚಿತ್ರವನ್ನು ಉಗ್ರಂ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ [೩] ಅವರು ಬರೆದು ನಿರ್ದೇಶಿಸಿದ್ದಾರೆ ಮತ್ತು ಹೋಂಬಾಳೆ ಚಲನಚಿತ್ರಗಳ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿದ್ದಾರೆ. ಯಶ್ ಮತ್ತು ರಾಮಚಂದ್ರ ರಾಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ೨೦೧೮ ರ ಆಗಸ್ಟ್ ೧೫ ರಂದು ಈ ಚಿತ್ರದ ಚಿತ್ರೀಕರಣವು ಪೂರ್ಣಗೊಂಡು , ೨೦೧೮ ರ ಡಿಸೆಂಬರ್ ೨೧ ರಂದು ಸುಮಾರು ೨೪೫೦ ತೆರೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲಾಯಿತು. [೪]
ಕೆಜಿಎಫ್ ೧ | |
---|---|
Directed by | ಪ್ರಶಾಂತ್ ನೀಲ್ |
Written by | ಪ್ರಶಾಂತ್ ನೀಲ್ |
Screenplay by | ಪ್ರಶಾಂತ್ ನೀಲ್ |
Story by | ಪ್ರಶಾಂತ್ ನೀಲ್ |
Produced by | ವಿಜಯ್ ಕಿರಗಂದೂರ್ |
Starring | ಯಶ್ ಶ್ರೀನಿಧಿ ಶೆಟ್ಟಿ ವಶಿಷ್ಠ ಎನ್. ಸಿಂಹ ಮಾಳವಿಕಾ ಅವಿನಾಶ್ |
Cinematography | ಭುವನ್ ಗೌಡ |
Music by | ರವಿ ಬಸ್ರೂರು |
Production company | ಹೊಂಬಾಳೆ |
Distributed by | ಕನ್ನಡ - ಕೆ ಆರ್ ಜಿ ಸ್ಟುಡಿಯೊಸ್
ಹಿಂದಿ - ಎಕ್ಸಲ್ ಎಂಟರ್ ಟೇನ್‍ಮೆಂಟ್ ಮತ್ತು ಎಎ ಫ಼ಿಲಂಸ್ ತಮಿಳು - ವಿಶಾಲ್ ಫಿಲಂ ಫ್ಯಾಕ್ಟ್ರಿ ತೆಲುಗು - ವಾರಾಹಿ ಚಲನಚಿತ್ರ ಮಲಯಾಳಂ - ಗ್ಲೋಬಲ್ ಯುನೈಟೆಡ್ ಮೀಡಿಯಾ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Running time | ೨ : ೩೪ ತಾಸು |
Country | ಭಾರತ |
Language | ಕನ್ನಡ |
Budget | ₹೭೦ ಕೋಟಿ[೨] |
Box office | ೨೫೦-೩೦೦ ಕೋಟಿ |
ಕಥೆ
ಬದಲಾಯಿಸಿಬಡತನವನ್ನೇ ಹಾಸಿ-ಹೊದ್ದುಕೊಂಡು ಮಂಡ್ಯದಲ್ಲಿ ಹುಟ್ಟಿ, ಮುಂಬೈನ ಬೀದಿಗಳಲ್ಲಿ ಬೆಳೆದು, ಅಧಿಕಾರಕ್ಕೆ ಹಾತೊರೆಯುವ ಭೂಗತ ಪಾತಕಿ ರಾಕಿಯ ಬದುಕನ್ನು ೩೦ ವರ್ಷಕಾಲ ಶ್ರಮವಹಿಸಿ ಕಲೆಹಾಕಿ, ಪುಸ್ತಕ ಪ್ರಕಟಪಡಿಸಿದ್ದ ವೃದ್ಧ ಪತ್ರಕರ್ತ, ತನ್ನ ಪುಸ್ತಕವನ್ನು ಸರ್ಕಾರ ನಿಷೇಧ ಹೇರಿ ಸುಟ್ಟು ಹಾಕಿದ ನಂತರ, ತನ್ನ ಕಡೆ ದಿನಗಳಲ್ಲಿ ಟಿವಿಯೊಂದರ ಮುಖ್ಯಸ್ಥರಿಗೆ ವಿವರಿಸುವ ಮೂಲಕ ಚಿತ್ರ ಆರಂಭವಾಗುತ್ತದೆ. ೧೯೫೧ ರಲ್ಲಿ ಕೆಜಿಎಫ್ ಬಳಿ ಹೊಸ ಚಿನ್ನದ ಗಣಿಯೊಂದು ಸಿಕ್ಕ ವಿಷಯವನ್ನು ನಿಗೂಢವಾಗಿ ಇಟ್ಟ ಸೂರ್ಯವರ್ಧನ್ ಎಂಬಾತ ಜೀತದ ಆಳುಗಳನ್ನು ಬಳಸಿಕೊಂಡು, ಅಕ್ಷರಶಃ ನರಕವನ್ನು ನಿರ್ಮಿಸಿ, ಚಿನ್ನದ ಗಣಿಗಾರಿಕೆ ಕೈಗೊಂಡು, ರಾಜಕೀಯ ಮತ್ತು ಸರ್ಕಾರವನ್ನೇ ಆಡಿಸುವಷ್ಟು ಎತ್ತರಕ್ಕೆ ಬೆಳೆದ. ಪಾರ್ಶ್ವವಾಯುವಿನಿಂದ ಆತ ಹಾಸಿಗೆ ಹಿಡಿದಾಗ ಕೆಜಿಎಫ್ ಅನ್ನು ವಶಕ್ಕೆ ತೆಗೆದುಕೊಳ್ಳಲು ಹೊಂಚು ಹಾಕುವ ಬಗೆ ಮತ್ತು ಇದನ್ನು ನಿರ್ವಹಿಸಲು ಮುಂಬೈನಿಂದ ಕರೆತರುವ ರಾಕಿ ಎಂಬ ಭೂಗತ ಪಾತಕಿಯ ಬದುಕಿನ ಎಳೆಯನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ.
೧೯೭೦ ಅತ್ತು ೧೯೮೦ರ ದಶಕದಲ್ಲಿ ಚಿನ್ನದ ಆಮದು, ಕಳ್ಳಸಾಗಣೆ ಮತ್ತು ರಾಜಕೀಯ ಕಲಹಗಳನ್ನು ಗಮನದಲ್ಲಿ ಇಟ್ಟು, ಚಿತ್ರವು ಮುಂಬೈ, ಬೆಂಗಳೂರು ಮತ್ತು ಕೆಜಿಎಫ್ ನಲ್ಲಿನ ಭೂಗತ ಜಗತ್ತಿನ ನೆತ್ತರ ಬದುಕನ್ನು ನಾವರಣಗೊಳಿಸುತ್ತದೆ.ಕೆಜಿಎಫ್ ಗಣಿಯ ಚಿನ್ನದ ಲಾಲಸೆ ಹೇಗೆ ಎಲ್-ಡೊರಾಡೊ ಎಂಬ ಸಜೀವ ಮರೀಚಿಕೆಯನ್ನು ಹುಟ್ಟುಹಾಕಿದೆ ಎಂಬಲ್ಲಿಂದ ಶುರುವಾಗಿ, ಭಾರತದ ಸಮಗ್ರ ಅರ್ಥ ವ್ಯವಸ್ಥೆಯನ್ನು ನಿರ್ಧರಿಸುವಷ್ಟು ಪ್ರಬಲವಾಗಿತ್ತು ಎಂಬುದನ್ನು ಬಿಂಬಿಸುತ್ತದೆ.
ತಯಾರಿಕೆ
ಬದಲಾಯಿಸಿ೨೫ ಜೂನ್ ೨೦೧೭ ರ ವೇಳೆಗೆ ಯೋಜನೆಯು ೫೦ ಪ್ರತಿಶತದಷ್ಟು ಪೂರ್ಣಗೊಂಡಿತ್ತು ಮತ್ತು ಭಾರಿ ಮಳೆಯಿಂದಾಗಿ ಅವುಗಳು ಕೊಚ್ಚಿಹೋದ ಕಾರಣ, ನಂತರ ಸೆಟ್‍ಗಳು ಮರುನಿರ್ಮಿಸಲ್ಪಟ್ಟ ನಂತರ ತಯಾರಿಕೆ ಪುನರಾರಂಭವಾಯಿತು. ಎರಡನೆಯ ವೇಳಾಪಟ್ಟಿಯನ್ನು ಮೈಸೂರಿನಲ್ಲಿ ಪ್ರಾರಂಭಿಸಲಾಯಿತು. ಈ ಚಿತ್ರವು ಮುಂಬೈ, ಕೋಲಾರ, ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರೀಕರಣಗೊಂಡಿದೆ. ಕೆಜಿಎಫ್ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು. ಇದು ಸಂಪೂರ್ಣ ಅವಧಿಯ ನಾಟಕವಾಗಿದ್ದು, ೭೦ ರ ದಶಕ ಮತ್ತು ೮೦ ರ ದಶಕದ ಆರಂಭದಲ್ಲಿ ನಡೆದ ಕಥೆಯನ್ನು ಹೊಂದಿದೆ. ಯಶ್ ಮತ್ತು ಶ್ರೀನಿಧಿ ಶೆಟ್ಟಿಯವರಲ್ಲದೆ, ಅನಂತ್ ನಾಗ್ ,ಅಚ್ಯುತ್ ಕುಮಾರ್, ವಶಿಷ್ಠ ಎನ್ ಸಿಂಹ,ಮಾಳವಿಕ ಅವಿನಾಶ್, ನಾಗಾಭರಣ, ಅಯ್ಯಪ್ಪ ಮತ್ತು ಬಿ ಸುರೇಶಾ ನಟಿಸಿದ್ದಾರೆ . ಛಾಯಾಗ್ರಾಹಕ ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಕಲಾ ನಿರ್ದೇಶಕ ಶಿವಕುಮಾರ್ ಒಳಗೊಂಡ ತಾಂತ್ರಿಕ ತಂಡ ಕೆಲಸ ಮಾಡಿದೆ. ಕೆಜಿಎಫ್‌ನ ಟೀಸರ್ ನಟ ಯಶ್‌ರ ಹುಟ್ಟುಹಬ್ಬದ ದಿನಾಂಕ ೮ ಜನವರಿ ೨೦೧೮ ಬಿಡುಗಡೆಯಾಯಿತು.[೫][೬][೭]
ಪಾತ್ರಗಳು
ಬದಲಾಯಿಸಿ- ಯಶ್ - ರಾಕಿ ಅಲಿಯಾಸ್ ರಾಜ ಕೃಷ್ಣಪ್ಪ ಭೈರ್ಯ
- ಅನ್ಮೊಲ್ ವಿಜಯ್ -ಬಾಲಕ ರಾಕಿ
- ಶ್ರೀನಿಧಿ ಶೆಟ್ಟಿ - ರೀನಾ , ರಾಜೇಂದ್ರ ದೇಸಾಯಿ ಮಗಳು
- ವಶಿಷ್ಠ ಎನ್. ಸಿಂಹ - ಕಮಲ್ , ಭಾರ್ಗವನ ಮಗ
- ರಮೇಶ್ ಇಂದಿರ - ಸೂರ್ಯವರ್ಧನ್
- ಲಕ್ಶ್ಮಣ - ರಾಜೇಂದ್ರ ದೇಸಾಯಿ
- ಅರ್ಚನ ಜೋಯ್ಸ - ರಾಕಿ ತಾಯಿ[೮]
- ರಾಮಚಂದ್ರ ರಾಜು - ಗರುಡ, ಸೂರ್ಯವರ್ಧನ್ ಹಿರಿಯ ಮಗ
- ವಿನಯ್ ಬಿದ್ದಪ್ಪ - ವಿರಾಟ್ , ಸೂರ್ಯವರ್ಧನ್ ಕಿರಿಯ ಮಗ
- ಸಂಜಯ ದತ್- ಅಧೀರ, ಸೂರ್ಯವರ್ಧನ್ ಸಹೋದರ
- ಬಿ ಎಸ್ ಅವಿನಾಶ್ - ಆಂಡ್ರೀವ್ಸ್
- ತಾರಕ್ ಪೊನ್ನಪ್ಪ - ದಯಾ , ಆಂಡ್ರೀವ್ಸ್ ಸಹಾಯಕ
- ಅಚ್ಯುತ್ ಕುಮಾರ್ - ಗುರುಪಾಂಡಿಯನ್, ರಾಜಕಾರಣಿ
- ಅಯ್ಯಪ್ಪ ಪಿ ಶರ್ಮಾ - ವಾನರಂ , ಗರುಡನ ಸಹಾಯಕ
- ದಿನೇಶ್ ಮಂಗಳೂರು - ಶೆಟ್ಟಿ , ಬಾಂಬೆ ಡಾನ್
- ಅನಾಮಿಕ - ಇನಾಯತ್ ಖಲೀಲ್, ದುಬೈ ಡಾನ್
- ಅನಾಮಿಕ - ರಿಮಿಕ ಸೇನ್ , 1981 ರಲ್ಲಿ ಭಾರತದ ಪ್ರಧಾನಿ
- ಜಾನ್ ಕೊಕ್ಕೆನ್ - ಜಾನ್, ಕೆಜಿಎಫ್ ಮೇಲ್ವಿಚಾರಕ
- ಬಿ ಸುರೇಶ್ - ಕೆಜಿಎಫ್ ಗುಲಾಮ
- ಟಿ ಎನ್ ಶ್ರೀನಿವಾಸ್ ಮೂರ್ತಿ - ಕೆಜಿಎಫ್ ಗುಲಾಮ
- ರೂಪ ರಾಯಪ್ಪ - ಶಾಂತಿ , ಕೆಜಿಎಫ್ ಗುಲಾಮಿ
- ಮೋಹನ್ ಜುನೇಜ - ಯುವ ಆನಂದ್ ಇಂಗಳಗಿಯ ಸುದ್ದಿ ಮೂಲ
- ಹರೀಶ್ ರೈ - ಶೆಟ್ಟಿ ಸಹಾಯಕ
- ಮಾಳವಿಕಾ ಅವಿನಾಶ್ - ದೀಪಾ ಹೆಗ್ಡೆ, ಸುದ್ದಿ ಚಾನೆಲ್ ಹೋಸ್ಟ್
- ಟಿ ಎಸ್ ನಾಗಾಭರಣ - ಸುದ್ದಿ ಚಾನೆಲ್ ಮಾಲಿಕ
- ಅನಂತ್ ನಾಗ್ - ಆನಂದ್ ಇಂಗಳಗಿ , ಹಿರಿಯ ಪತ್ರಕರ್ತ
- ಅಶೋಕ್ ಶರ್ಮ - ಯುವ ಆನಂದ್ ಇಂಗಳಗಿ
- ಗೋವಿಂದೆ ಗೌಡ - ಸುದ್ದಿ ಚಾನಲ್ ಕಚೇರಿಯಲ್ಲಿ ಸಹಾಯಕ.
- ತಮನ್ನ ಭಾಟಿಯ - ಮಿಲ್ಕಿ , "ಜೋಕೆ ನಾನು ಬಳ್ಳಿಯ ಮಿಂಚು" ಹಾಡಿನಲ್ಲಿ ವಿಶೇಷ ಪಾತ್ರ
ಚಲನಚಿತ್ರದ ಮಾದರಿ ತುಣುಕು
ಬದಲಾಯಿಸಿಕನ್ನಡ-ಮಲಯಾಳಂ ಟ್ರೇಲರ್ ಅನ್ನು ಹೊಂಬಾಳೆ ಪ್ರೊಡಕ್ಷನ್ ,ವಿಶಾಲ್ ಫಿಲಂ ಫ್ಯಾಕ್ಟರಿಯಿಂದ ತಮಿಳು, ವರಾಹಿ ಪ್ರೊಡಕ್ಷನ್ನಿಂದ ತೆಲುಗು, ಎಎ ಫಿಲಂ ನಿಂದ ಹಿಂದಿ ಟ್ರೇಲರ್ ೯ ನವೆಂಬರ್ ೨೦೧೮ ರಂದು ಬಿಡುಗಡೆಯಾಯಿತು.[೯]
ಸ್ವಾರಸ್ಯ
ಬದಲಾಯಿಸಿ- ಸಂಸ್ಕೃತದಲ್ಲಿ ಅಕ್ಕಸಾಲಿಗನ ತಕ್ಕಡಿ ಎಂಬ ಅರ್ಥ ಇರುವ ಪದ ನರಾಚಿ. ಅಕ್ಕನನ್ನೂ ಬಿಡ ಅಕ್ಕಸಾಲಿಗ ಎಂಬ ಗಾದೆಮಾತಿನಂತೆ, ದುರಾಸೆ ಮತ್ತು ಹಣದ ಹಪಾಹಪಿಯನ್ನು ಬಿಂಬಿಸುವ ನರಾಚಿ ಪದವನ್ನೇ ಚಿತ್ರದಲ್ಲಿ ಗಣಿಗಾರಿಕೆ ಕಂಪನಿಗೆ ಬಳಸಲಾಗಿದೆ.
- ಹಿಂದಿ ಆವೃತ್ತಿಯಲ್ಲಿ ಮೌನಿ ರಾಯ್ ಮತ್ತು ದಕ್ಷಿಣ ಭಾರತದ ಆವೃತ್ತಿಗಳಲ್ಲಿ ತಮನ್ನಾ ಭಾಟಿಯಾ, ಐಟಂ ಕುಣಿತಕ್ಕೆ ಹೆಜ್ಜೆ ಹಾಕಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ https://timesofindia.indiatimes.com/entertainment/kannada/movies/news/kgf-release-postponed-to-december/articleshow/66137174.cms
- ↑ "KGF was produced on a reported budget of ₹50 crore". hindustantimes (in english). 25 December 2018.
{{cite web}}
: CS1 maint: unrecognized language (link) - ↑ Filmy Beat ಕನ್ನಡ
- ↑ "KGF to be multilingual film".
- ↑ Sharadhaa, A (25 June 2017). "Storm or shine, Rocking star Yash's KGF stays on schedule". The New Indian Express. Retrieved 30 June 2017.
- ↑ "Vasishta joins KGF set".
- ↑ "KGF a period film".
- ↑ KGF CAST www.filmibeat.com
- ↑ ನಟ ಯಶ್ ಅಭಿನಯದ ಕೆಜಿಎಫ್ ಚಿತ್ರದ ಟ್ರೇಲರ್ ಐದು ಭಾಷೆಗಳಲ್ಲಿ ಬಿಡುಗಡೆ www.vijayavani.net[permanent dead link]