ಕೃತಿಕಾ ಜಯಕುಮಾರ್ ಭಾರತೀಯ ನಟಿ ಮತ್ತು ಶಾಸ್ತ್ರೀಯ ನೃತ್ಯಗಾರ್ತಿ. ಅವರು ದಕ್ಷಿಣ ಭಾರತದ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕೃತಿಕಾ ರವರು ಕವಚ, ಇಂಟ್ಲೋ ದೆಯ್ಯಂ ನಾಕೆಂ ಬಯಂ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕೃತಿಕಾ ಅವರ ಹಿಂದಿನ ಚಿತ್ರ ೨೦೧೯ ರಲ್ಲಿ ತೆರೆಕಂಡ ಕವಚ ಚಿತ್ರವಾಗಿದೆ.[೧]

ಕೃತಿಕಾ ಜಯಕುಮಾರ್
Born
Occupation(s)ನಟಿ, ಶಾಸ್ತ್ರೀಯ ನೃತ್ಯಗಾರ್ತಿ
Years active೨೦೧೪-ಪ್ರಸ್ತುತ

ವೃತ್ತಿ ಬದಲಾಯಿಸಿ

ಕೃತಿಕಾ ಜಯಕುಮಾರ್ ಕರ್ನಾಟಕದ ಬೆಂಗಳೂರಿನಲ್ಲಿ ತಮಿಳು ಮಾತನಾಡುವ ಕುಟುಂಬದಿಂದ ಬಂದವರು. ಕೃತಿಕಾ ಏಳನೇ ವಯಸ್ಸಿನಿಂದ ಭರತನಾಟ್ಯವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು. ಮತ್ತು ಬೆಂಗಳೂರಿನಲ್ಲಿ ಶ್ರೀ ಮಿಥುನ್ ಶ್ಯಾಮ್ ಅವರ ಬಳಿ ತರಬೇತಿ ಪಡೆದು ತಿರುವನಂತಪುರಂನಲ್ಲಿ ಪ್ರದರ್ಶನವೊಂದರಲ್ಲಿ ಭಾಗವಹಿಸುತ್ತಿದ್ದಾಗ ಮಲಯಾಳಂ ಚಲನಚಿತ್ರ ನಿರ್ದೇಶಕ ಬಾಲು ಕಿರಿಯಾತ್ ಅವರನ್ನು ಗುರುತಿಸಿ ಚಿತ್ರರಂಗಕ್ಕೆ ಪ್ರವೇಶಿಸುವಂತೆ ಮನವರಿಕೆ ಮಾಡಿದರು. ನಂತರ ಅವರು ಆಯ್ಕೆಯಾದರು. ಮತ್ತು ಮಲಯಾಳಂ ಚಿತ್ರ ದೃಶ್ಯಂನ ತೆಲುಗು ರಿಮೇಕ್ ಆಗಿರುವ ದೃಶ್ಯಂನಲ್ಲಿ ವೆಂಕಟೇಶ್ ದಗ್ಗುಬಾಟಿ ಅವರ ಮಗಳ ಪಾತ್ರಕ್ಕೆ ಆಯ್ಕೆಯಾದರು. [೧]

ಚಿತ್ರಕಥೆ ಬದಲಾಯಿಸಿ

ವರ್ಷ ಶೀರ್ಷಿಕೆ ಪಾತ್ರ ಭಾಷೆ ಟಿಪ್ಪಣಿಗಳು
೨೦೧೪ ದೃಶ್ಯಮ್ ಅಂಜು ತೆಲುಗು
೨೦೧೫ ಬಾಕ್ಸರ್ ಲಕ್ಷ್ಮಿ ಕನ್ನಡ
೨೦೧೫ ವಿನವಯ್ಯ ರಾಮಯ್ಯ ಜಾನಕಿ ತೆಲುಗು
೨೦೧೬ ದಿನುಲು ಮರಾಯಿ ಆದ್ಯಾ
೨೦೧೬ ಇಂತ್ಲೊ ದೆಯ್ಯಂ ನಾಕೆಂ ಭಯಂ ಇಂಧುಮತಿ
೨೦೧೯ ಕವಚ ರೇವತಿ ಕನ್ನಡ
೨೦೨೧ ದೃಶ್ಯಂ ೨ ಅಂಜು ತೆಲುಗು ಅಮೆಜಾನ್ ಪ್ರೈಮ್ ವಿಡಿಯೋ ಬಿಡುಗಡೆ

ಉಲ್ಲೇಖಗಳು ಬದಲಾಯಿಸಿ

  1. "Drushyam review. Drushyam Telugu movie review, story, rating". IndiaGlitz. Retrieved 22 ಮೇ 2015.

ಬಾಹ್ಯ ಕೊಂಡಿಗಳು : ಬದಲಾಯಿಸಿ