ಕುರುಬರು ಇದು ಹಿಂದು ಧರ್ಮದ ಒಂದು ಜಾತಿ. ಇವರನ್ನು ಕುರುಬ, ಕುರುಮ, ಕುರುಂಬ, ಗಾದರಿಯ ಎಂದು ಕರೆಯುತಾರೆ. ಇವರುಗಳು ಹೆಚ್ಚಾಗಿ ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಂಡುಬರುತ್ತಾರೆ. ಕರ್ನಾಟಕದಲ್ಲಿ ಇವರು ಸಂಖ್ಯಯಲ್ಲಿ ಮೂರನೇ ಒಂದರಷ್ಟರಿದ್ದಾರೆ. ಇವರ ಕುಲ ಕಸುಬು ಕುರಿಕಾಯುವುದು.[೧]

ಪೂರ್ವ ಇತಿಹಾಸ

ಕುರುಬಗೌಡ/ಹಾಲುಮತ ಗೌಡ ಜನಾಂಗ ತುಂಬಾ ಪುರಾತನವಾದ ಜನಾಂಗ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲ್ಲಿದ್ದ ಗೆಡ್ಡೆ, ಗೆಣಸು ತಿನ್ನುತಿದ್ದ. ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವುದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ಒಕ್ಕಲುತನ ಮಾಡುವನು ಒಕ್ಕಲಿಗನಾದ, ಬೇಟೆಯಾಡುವವನು ಬೇಡನಾದ, ಮಡಿಕೆ ಮಾಡುವವನು ಕುಂಬಾರನಾದ, ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನ್ನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು[೨].

ಭಾರತದ ದಕ್ಷಿಣಾಪಥದಲ್ಲಿ ದೊರೆತ ಗೋರಿ ಹಾಗೂ ಇತರೆ ಅವಶೇಷಗಳ ಆಧಾರದ ಮೇಲೆ ವಂಶಶಾಸ್ತ್ರಜ್ಞರಾದ ಹ್ಯಾಡೋನ್ ಅವರು ಕುರುಬರ ಚರಿತ್ರೆಯನ್ನು ಕ್ರಿ.ಪೂ. 4000-5000 ದಷ್ಟು ಹಿಂದಕ್ಕೆ ಒಯ್ತುತ್ತಾರೆ. ಮಧ್ಯ ಏಶಿಯಾದಿಂದ ಹೊರಟು ತಮ್ಮ ಬದುಕಿಗೆ ನೆಲೆಗಳನ್ನು ಹುಡುಕುತ್ತ ಇವರು ಬೋಲನ್ ಕಣಿವೆ ಮೂಲಕ ಭಾರತವನ್ನು ಪ್ರವೇಶಿಸಿ ಇಲ್ಲಿ ತಮ್ಮ ಸಂಸ್ಕೃತಿಯನ್ನು ರೂಪಿಸಿಕೊಂಡಿದ್ದಾರೆ.[೩]

ಕುರುಬರನ್ನು ಹಟ್ಟಿಕಾರರೆಂದೂ ಕರೆಯುತ್ತಾರೆ. ಈ ಹಟ್ಟಿಕಾರರ ಉಲ್ಲೇಖ ರುದ್ರಾಧ್ಯಾಯದಲ್ಲಿ ಬರುತ್ತದೆಯಾದ್ದರಿಂದ ಕ್ರಿ.ಶ.ಪೂ 1200-2000 ವೇಳೆಗೆ ಕುರುಬ ಸಮಾಜ ಸುವಿಖ್ಯಾತವಾಗಿತ್ತೆಂದು ಸಂಬಾ ಜೋಶೀ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕ್ರಿ.ಶ. ಮೂರನೆಯ ತಮಾನದಷ್ಟೊತ್ತಿಗೆ ಕುರುಬರು ಪ್ರಭುಗಳಾಗಿ ಅಧಿಕಾರದ ಗದ್ದುಗೆ ಏರಿದ್ದರು ಎಂದು ಸರ್ ಡಬ್ಲೂ ಇಲಿಯಟ್ ಅಭಿಪ್ರಾಯಪಡುತ್ತಾರೆ. ದಕ್ಷಿಣ ಭಾರತದಲ್ಲಿ ದೊರೆಯುವ ಅತೀ ಪ್ರಾಚೀನ ನಾಣ್ಯಗಳೆಂದರೆ ಕುರುಬರದೇ ಎನ್ನುತ್ತಾರೆ ಇಲಿಯಟ್.

ಕುರುಬರು ಮೊದಲು ಸ್ಥಾಪನೆ ಮಾಡಿದ ಪಟ್ಟಣದ ಹೆಸರು ಪುಲಾಲ. ಈ ರಾಜ್ಯಕ್ಕೆ ಕುರುಂಬರ ನಾಡು ಎಂದು ಕರೆಯುತ್ತಿದ್ದರು. ಕೇರಳದ ಮಲಬಾರ ಜಿಲ್ಲೆಯಲ್ಲಿ ಈ ಹೆಸರಿನ ಪ್ರದೇಶ ಇಂದಿಗೂ ದೊರೆಯುತ್ತದೆ. ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಹಕ್ಕಬುಕ್ಕರು, ಕದಂಬರು, ಪಲ್ಲವರು, ದೇವಗಿರಿಯ ಯಾದವರು, ಇಂದೂರಿನ ಹೋಳ್ಕರ್, ಬಡೋದೆಯ ಗಾಯಕವಾಡರು, ರಾಷ್ಟ್ರಕೂಟ ದೊರೆಗಳು ಇವರೆಲ್ಲ ಕುರುಬರೇ ಎಂದು ಚರಿತ್ರೆಕಾರರು ನಿರ್ಣಯಿಸಿದ್ದಾರೆ. ಹೀಗೆ ಕುರುಬರ ಚರಿತ್ರೆಯೇನೋ ಬಹು ಪ್ರಾಚೀನವಾಗಿದೆ.[೪]

ಇತಿಹಾಸ

ಕುರುಬರು ಮೂಲತಃ ನಾಗಕುಲದವರು. ಪಲ್ಲವರು ಎಂದು ಕರ್ನಾಟಕದಲ್ಲಿ, ಪೊಲಿಯಾರ್/ ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ, ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಬರು ಸಿದ್ದ ಶೈವ ಶಾಖೆಯವರು. ಪಲ್ಲವರು ೫ ರಿಂದ ೭ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ[೩]. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಬರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. ೨ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವನೆಂಬ ರಾಜ ಲಿಂಗದಾರಿಯಾದ ವಿವರಗಳಿವೆ. ಕುರುಬರಲ್ಲಿ ಲಿಂಗವನ್ನು ಕರಡಿಗೆಯಲ್ಲಿ ಪೂಜಿಸುವ ಕ್ರಮವಿದೆ. ವೀರಶೈವವು ಮತವಾಗಿ ಪರಿವರ್ತಿತವಾಗುವ ಸಮಯದಲ್ಲಿ ಕುರುಬರ ಪ್ರಭಾವ ಅಪಾರವಾದದ್ದು[೫]. ಕುರುಬರ ರೇವಣಸಿದ್ದ ವೀರಶೈವ ಕುರುಬರ ಮೂಲ ಪುರುಷ. ಕುರುಬರ ಗುಡ್ಡದ ಮಲ್ಲಯ್ಯ(ಶ್ರೀ ಶೈಲ ಮಲ್ಲಿಕಾರ್ಜುನ ಸಂಪ್ರದಾಯ), ಬೀರೇಲಿಂಗೇಶ್ವರ(ವೀರಭದ್ರ ಸಂಪ್ರದಾಯ), ಕುರುಬರ ಕಾರ್ಣೀಕ ಮೈಲಾರಲಿಂಗ(ಮಹಾಂತ ಸಂಪ್ರದಾಯ), ಕುರುಬರ ದಳವಾಯಿ( ಪುರವಂತರು), ಕುರುಬರ ನೊಳಂಬ ಪಲ್ಲವ (ನೊಣಬ ಲಿಂಗಾಯತ) ಇತ್ಯಾದಿ. ಇದಲ್ಲದೆ ಕಂಚಿ ಕುರುಬ, ಮೂಳ್ಳು ಕುರುಬ, ಹಾಲುಕುರುಬ, ಹೆಂಡೆಕುರುಬ, ಕಂಬಳಿಕುರುಬ, ಹೊಸಕುರುಬ, ಹಳೆಕುರುಬ, ಕಂಬಿಕುರುಬ, ,ಸಾದಕುರುಬ, ಮೊದಲಾದ ಒಳಪ್ರಭೇಧಗಳು ಇವರಲ್ಲಿವೆ.[೬]

ಕುರಿ ಹಿಕ್ಕೆಯಲ್ಲಿಯೇ ಲಿಂಗವನ್ನು ಕಂಡು ಭಗವಂತನನ್ನು ಮರುಳು ಮಾಡಿ ಕುರಿ ಹಟ್ಟಿಯಲ್ಲಿ ಬೀರಪ್ಪ, ಮಾಳಿಂಗರಾಯನನ್ನು ಸಾಕ್ಷತ್ಕಾರ ಮಾಡಿಕೊಂಡು ಮುಗ್ಧ ಭಕ್ತಿ ಪರಂಪರೆಗೆ ಕುರುಬರು ಸಾಕ್ಷಿಯಾಗಿದ್ದಾರೆ. ಪರಿಶ್ರಮಿಕರಾದ ಕುರಿ ಕಾಯುವ ಕುರುಬರು ಸದಾ ನಿಸರ್ಗದಲ್ಲಿದ್ದು ಮಳೆ ನಕ್ಷತ್ರ, ಮಳೆ-ಬೆಳೆ, ಬರಗಾಲ, ರಾಜನೀತಿ ಮಹತ್ವದ ದಿನಮಾನಗಳನ್ನು ತಮ್ಮ ರಟ್ಟುಮತ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ[೭]

ಕುಲ ಮತ್ತು ಸಾಲು

ಇವರುಗಳಲ್ಲಿ ಸಾವಂತಕುಲ, ಗೌಡಕುಲ, ಬಸರಿಕುಲ, ಬೇಲಕುಲ,ಬಳೆಗಾರಕುಲ, ಬೆಣಛುಕುಲ, ಬೇವುಕುಲ, ಬೀರಕುಲ, ಬಾನಕುಲ, ಬೆಣ್ಣೆಕುಲ, ಗಾಳಿಕುಲ, ಗರಿಕೆಕುಲ, ಗೊಬ್ಬರಕುಲ, ಗುಡಿಕುಲ, ಹೊನ್ನಕುಲ, ಜೀರಿಗೆಕುಲ, ತುಂಬೆಕುಲ, ವನಕುಲ, ಲಕ್ಷ್ಮಿಕುಲ, ಗಣ ಕಕುಲ, ಬಡಗಕುಲ, ಬಾಳೆಕುಲ, ಆಡುಕುಲ, ಆನೆಕುಲ, ಆಣ್ಣಿಕುಲ, ಅರಿಶಿನಕುಲ, ಆಲುಕುಲ, ಅತ್ತಿಕುಲ, ಬಂಡಿಕುಲ, ಎಮ್ಮೆಕುಲ, ಆವರೆಕುಲ, ಚಂದನಕುಲ ಎಮ ಕುಲಗಳಿದ್ದು ಕುಲದಹೊರಗಡೆ ವಿವಾಹ ಬಾಂಧವ್ಯ ನಡೆಸುತ್ತಾರೆ. ಜೊತೆಗೆ 'ದೊಡ್ಡಮ್ಮನ ಸಾಲು', 'ಚಿಕ್ಕಮ್ಮನ ಸಾಲು' ಎಂಬ ಸಾಲುಗಳೂ ಇದ್ದು, ಈ ಸಲುಗಳ ನಡುವೆ ರಕ್ತ ಸಂಬಂಧ ಬೆಳೆಯುವುದಿಲ್ಲ. ಹಾಲು ಕ್ರುಬರಲ್ಲೇ 'ಹತ್ತಿಕಂಕಣದವರು', 'ಉಣ್ಣೇಕಂಕಣದವರು' ಎಂಬ ಒಳಭೇಧ ಇದೆ. ವಿವಾಹ ಸಂಧರ್ಭದಲ್ಲಿ ಕಂಕಣ ಕಟ್ಟುವಾಗ ಮಾತ್ರ ಸಾಲುಗಳನ್ನು ಗಮನಿಸುತ್ತಾರೆ. ಇಲ್ಲಿ ಜಾತಿ ಪಂಚಾಯಿತಿಗಳು ಅಸ್ತಿತ್ವದಲ್ಲಿದ್ದು, ಹಬ್ಬವಾರುಗಳ ನಿಷ್ಕರ್ಷೆಕ್ಕೆ ಮಾತ್ರ ಒಂದೆಡೆ ಸೇರುತ್ತಾರೆ.[೮][೯][೧೦]

ಸಂಪ್ರದಾಯ

ಕುರುಬ ಉಪ ಜಾತಿಗಳು[೧೭]

ಕುರುಬ ಇತಿಹಾಸ ಕತೆಗಳು

ಕುರುಬ ಜನಪದ ಕಲೆಗಳು

ಕುರುಬ ಧರ್ಮಕ್ಷೇತ್ರಗಳು

  • ಶ್ರೀ ಹಾಲ ಮರಡಿಸಿದ್ದೇಶ್ವರ ದೇವಸ್ಥಾನ ಹೊನವಾಡ

ಇತಿಹಾಸ ಪುರುಷರು

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

  1. Murty, M.L.K. (1993-02). "Ethnohistory of pastoralism: A study of Kuruvas and Gollas". Studies in History (in ಇಂಗ್ಲಿಷ್). 9 (1): 33–41. doi:10.1177/025764309300900102. ISSN 0257-6430. {{cite journal}}: Check date values in: |date= (help)
  2. Thurston, Edgar; Rangachari, K. (1909). Castes and tribes of southern India. University of California Libraries. Madras : Government Press.
  3. ೩.೦ ೩.೧ eleyloo (2024-04-12). Kurumba History | History of Kuruba Community | Ancient Tamil Tribes | Tamil Civilization | eleyloo. Retrieved 2024-07-18 – via YouTube.
  4. "Castes and Tribes of Southern India/Kuruba - Wikisource, the free online library". en.wikisource.org (in ಇಂಗ್ಲಿಷ್). Retrieved 2024-07-18.
  5. Va (2013-09-04). "Kuruba Gowda: Kuruba Lingayats". Kuruba Gowda. Retrieved 2024-07-18.
  6. https://www.worldwidejournals.com/paripex/recent_issues_pdf/2014/July/July_2014_1405423027__72.pdf
  7. https://www.researchgate.net/publication/259532832_Baluvu_A_Ritual_among_Kadu_Kuruba_Tribe_of_Karnataka
  8. "Castes and Tribes of Southern India/Kuruba - Wikisource, the free online library". en.wikisource.org (in ಇಂಗ್ಲಿಷ್). Retrieved 2024-07-18.
  9. https://www.ncbc.nic.in/Writereaddata/addkar25a.pdf
  10. https://socialjustice.gov.in/public/ckeditor/upload/40091673325296.pdf
  11. http://medbox.iiab.me/kiwix/wikipedia_kn_all_maxi_2020-01/A/%E0%B2%B6%E0%B3%8D%E0%B2%B0%E0%B3%80_%E0%B2%B2%E0%B2%95%E0%B3%8D%E0%B2%B7%E0%B3%80%E0%B2%A6%E0%B3%87%E0%B2%B5%E0%B2%BF_%E0%B2%A6%E0%B3%87%E0%B2%B5%E0%B2%B8%E0%B3%8D%E0%B2%A5%E0%B2%BE%E0%B2%A8_%E0%B2%95%E0%B3%86%E0%B2%B0%E0%B3%86%E0%B2%B8%E0%B2%82%E0%B2%A4%E0%B3%86_%E0%B2%95%E0%B2%A1%E0%B3%82%E0%B2%B0%E0%B3%81_%E0%B2%A4%E0%B2%BE_%E0%B2%9A%E0%B2%BF%E0%B2%95%E0%B3%8D%E0%B2%95%E0%B2%AE%E0%B2%97%E0%B2%B3%E0%B3%82%E0%B2%B0%E0%B3%81_%E0%B2%9C%E0%B2%BF
  12. ೧೨.೦ ೧೨.೧ ೧೨.೨ ೧೨.೩ ೧೨.೪ https://kanaja.karnataka.gov.in/ebook/wp-content/uploads/2022/kanaja/halumatha-adhyayana.docx
  13. ವಾರ್ತೆ, ​ಪ್ರಜಾವಾಣಿ. "ಸಂಭ್ರಮದ ಬೀರದೇವರ ಜಾತ್ರೆ". Prajavani. Retrieved 2024-07-18. {{cite web}}: zero width space character in |first= at position 1 (help)
  14. "Kanaka Dasa Jayanti 2023: Date, Significance and Celebration". The Times of India. 2023-11-30. ISSN 0971-8257. Retrieved 2024-07-18.
  15. "ಮೈಲಾರಲಿಂಗ – Mailaralinga – खंडोबा – మల్లన్న". ಮೈಲಾರಲಿಂಗ - Mailaralinga - खंडोबा - మల్లన్న (in ಇಂಗ್ಲಿಷ್). 2017-02-16. Retrieved 2024-07-18.
  16. Bharat, E. T. V. (2022-04-16). "9 ವರ್ಷಗಳ ಬಳಿಕ ನಡೆದ ಬಿಳಿಗಿರಿರಂಗನಾಥ ಜಾತ್ರೆ : ಸಾವಿರಾರು ಭಕ್ತರು ಭಾಗಿ". ETV Bharat News. Retrieved 2024-07-18.
  17. Thurston, Edgar; Rangachari, K. (1909). Castes and tribes of southern India. University of California Libraries. Madras : Government Press.
  18. "Indian Folk Epics: The epic of Haalumatha". Indian Literature, Folk Epics. 2004-07-10. Retrieved 2024-07-18.
  19. "ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಹದೇಶ್ವರ ಬೆಟ್ಟ - ವಿಕಿಸೋರ್ಸ್". kn.wikisource.org. Retrieved 2024-07-18.
"https://kn.wikipedia.org/w/index.php?title=ಕುರುಬ&oldid=1235691" ಇಂದ ಪಡೆಯಲ್ಪಟ್ಟಿದೆ