ಜೇನು ಕುರುಬ
ಜೇನು ಕುರುಬರು ಕರ್ನಾಟಕದಲ್ಲಿ ನೆಲೆಗೊಂಡ ಜನರಲ್ಲಿ ಮೊದಲಿಗರು. ಇವರಿಗೆ ಸಾವಿರಾರು ವರುಷಗಳ ಇತಿಹಾಸವಿದೆ, ಹಾಗೂ ನೂರಾರು ವರುಷಗಳಿಂದ ಇವರು ಜೀವನ ಸಾಗಿಸುವ ರೀತಿ ಹೆಚ್ಚಾಗಿ ಬದಲಾಗದೆ ಯಥಾವತ್ತಾಗಿ ಉಳಿದುಕೊಂಡು ಬಂದಿದೆ. ಕರ್ನಾಟಕದ ಇಂದಿನ ನಮಗೆಲ್ಲ ಈ ಜೇನು ಕುರುಬರೆ ಪೂರ್ವಿಕರೆಂದರೆ ಅತಿಶೋಕ್ತಿಯಾಗಲಾರದು. ಇವರ ಹೆಸರೇ ಸೂಚಿಸುವಂತೆ ಕುರುಬ ಎಂದರೆ ಹುಡುಕುವವನು ಅಥವಾ ಅರಿಸುವವನು. ಜೇನು ಕುರುಬ ಎಂದರೆ ಜೇನನ್ನು ಹುಡುಕುವವನು. ಇವರು ಕಾಡನ್ನೇ ನಂಬಿ, ಅದರಲ್ಲಿ ಸಿಗುವ ಪದಾರ್ಥಗಳನ್ನು ಸೇವಿಸಿ ಬಾಳುವವರು. ಮಾನವನು ಹಳ್ಳಿಗಳಲ್ಲಿ ನೆಲೆಸುವ ಮೊದಲು ಕಾಡುಗಳಲ್ಲಿ ಅಲೆದು, ಬೇಟೆಯಾಡಿ ಬದುಕುತ್ತಿದ್ದನೋ ಆದನ್ನು ಜೇನು ಕುರುಬರು ಇನ್ನು ಮಾಡಿಕೊಡು ಬರುತಿದ್ದಾರೆ ಹಾಗೂ ನೆಮ್ಮದಿಯ ಬಾಳ್ವೆ ಮಾಡುತಿದ್ದಾರೆ. ಇವರಿಗೆ ಕಾಡನ್ನು ಬಿಟ್ಟು ನಾಡಿಗೆ ಬರಬೇಕು ಎಂಬ ಯೋಚನೆಯೇ ಇಲ್ಲ, ಇಂದಿನ ಕಂಪ್ಯೂಟರ್ ಯುಗದಲ್ಲಿ, ತಮ್ಮ ಬಳಿ ಆಧುನಿಕ ಬದುಕಿಗೆ ಬೇಕಾದ ಯಾವುದೇ ವಸ್ತುಗಳಿಲ್ಲದೆ ಮತ್ತು ಅವಕ್ಕೆ ಆಸೆ ಪಡದೆ ಮುಗ್ಧ ಜೀವನವನ್ನು ನಡಿಸಿಕೊಂಡು ಬಂದವರು. ಇವರಿಗೆ ಮಲೆ ಮಾದೇಶ್ವರನೆ ಕುಲ ದೇವರು. ಇವರು ಇಂದಿನ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಕಾಡುಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಕಾಡಿನಲ್ಲಿ ವಾಸಿಸುವ ಜನರನ್ನು ನಾಡಿಗೆ ತಂದು ನೆಲಸಿಸುವ ಯೋಜನೆಯಡಿ ತುಂಬ ಜನ ಕಾಡು ಕುರುಬರು, ಸೋಲಿಗರು ಹಾಗೂ ಜೇನು ಕುರುಬರನ್ನು ತಾವೇ ಸಾವಿರಾರು ವರುಷಗಳಿಂದ ವಾಸಿಸುತ್ತಿದ್ದ ಕಾಡುಗಳಿಂದ ಒಕ್ಕಲೆಬ್ಬಿಸುತ್ತಿದ್ದಾರೆ. ಜೇನು ಕುರುಬರು ಆನೆಗಳನ್ನು ಪಳಗಿಸುವುದರಲ್ಲಿ ನಿಪುಣರು, ತುಂಬ ಜನ ಜೇನು ಕುರುಬರು ಮಾವುತರಾಗಿ ಮೈಸೂರು ದಸರಾ ಹಬ್ಬದ ಸಮಯ ಪಾಲ್ಗೊಳ್ಳುತ್ತಾರೆ, ಹಾಗೂ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಕಾಡಿನ ರಕ್ಷಣೆಗೆ ಕೆಲಸಕ್ಕೆ ಸೇರಿದ್ದಾರೆ.
ಉಲ್ಲೇಖ
ಬದಲಾಯಿಸಿ<references >
Subscribe to unchia x madara