ಕಾಸರಗೋಡು ಪಟ್ನಾಶೆಟ್ಟಿ ಗೋಪಾಲ್ ರಾವ್
ಕಮೋಡೋರ್ ಕಾಸರಗೋಡು ಪಟ್ನಶೆಟ್ಟಿ ಗೋಪಾಲ್ ರಾವ್ (೧೨ ನವೆಂಬರ್ ೧೯೨೬ - ೯ ಆಗಸ್ಟ್ ೨೦೨೧) ಇವರು ಮಹಾ ವೀರ ಚಕ್ರ ಹಾಗೂ ವಿಶಿಷ್ಟ ಸೇವಾ ಪದಕ ಪುರಸ್ಕೃತರು. ಇವರು ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿಯಾಗಿದ್ದರು. ಈ ಯುದ್ದದ ಆಪರೇಷನ್ ಟ್ರೈಡೆಂಟ್ (೧೯೭೧) ಕಾರ್ಯಾಚರಣೆಯಲ್ಲಿ ಅವರು ಸಲ್ಲಿಸಿದ ಕೊಡುಗೆಗಳಿಗಾಗಿ ಅವರಿಗೆ ಮಹಾವೀರ ಚಕ್ರವನ್ನು ನೀಡಲಾಯಿತು. . [೨]
Kasargod Patnashetti Gopal Rao | |
---|---|
ಜನನ | ಮಂಗಳೂರು, ಸೌತ್ ಕೆನರಾ, ಮದ್ರಾಸ್ ಪ್ರೆಸಿಡೆನ್ಸಿ, ಬ್ರಿಟಿಷ ರಾಜ್ಯ (ಈಗ ಕರ್ನಾಟಕ) | ೧೩ ನವೆಂಬರ್ ೧೯೨೬
ಮರಣ | 9 August 2021 ಚೆನ್ನೈ, ತಮಿಳುನಾಡು, India | (aged 94)
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | Indian Navy |
ಶ್ರೇಣಿ(ದರ್ಜೆ) | ಕಮೋಡೋರ್ |
ಘಟಕ | ವೆಸ್ಟರ್ನ್ ಫ್ಲೀಟ್ (ಭಾರತ) |
ಭಾಗವಹಿಸಿದ ಯುದ್ಧ(ಗಳು) |
|
ಪ್ರಶಸ್ತಿ(ಗಳು) | Maha Vir Chakra[೧] Vishisht Seva Medal |
ಹಿನ್ನೆಲೆ
ಬದಲಾಯಿಸಿಕಮೋಡೋರ್ ಕೆಪಿ ಗೋಪಾಲ್ ರಾವ್ ರವರು ಮಂಗಳೂರಿನಲ್ಲಿ ೧೩ ನವೆಂಬರ್ ೧೯೨೬ ರಂದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.[೩] ಇವರ ತಂದೆಯ ಹೆಸರು ರಾಯ್ ಬಹದ್ದೂರ್ ಕೆ.ಪಿ.ಜನಾರ್ದನ್ ರಾವ್. ಅವರ ಹಿರಿಯ ಸಹೋದರ ಮೇಜರ್ ಕೆಪಿಎಸ್ ರಾವ್ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತೀಯ ಸೇನೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಮಿಲಿಟರಿ ವೃತ್ತಿ
ಬದಲಾಯಿಸಿಕಮೋಡೋರ್ ಕೆಪಿ ಗೋಪಾಲ್ ರಾವ್ ಅವರನ್ನು ೨೧ ಏಪ್ರಿಲ್ ೧೯೫೦ ರಂದು ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು. ಜನವರಿ ೧೯೭೧ ರಲ್ಲಿ, ಸಲ್ಲಿಸಿದ ಉನ್ನತ ಶ್ರೇಣಿಯ ಸೇವೆಗಾಗಿ ಅವರಿಗೆ ವಿಶಿಷ್ಟ ಸೇವಾ ಪದಕವನ್ನು ನೀಡಲಾಯಿತು.
೧೯೭೧ ರ ಭಾರತ ಪಾಕಿಸ್ತಾನ ಯುದ್ದದಲ್ಲಿ ಆಪರೇಷನ್ ಟ್ರೈಡೆಂಟ್ ಕಾರ್ಯಚರಣೆಯಲ್ಲಿ ಇವರು ಜಲಾಂತರ್ಗಾಮಿ ಗಳನ್ನು ತಡೆಯುವ ಅರ್ನಲ-ಕಾರ್ವೆಟ್‌ಗಳಾದ (ಸುಸಜ್ಜಿತ ಸಣ್ಣ ಯುದ್ದ ನೌಕೆ) ಐಎನ್‌ಎಸ್ ಕಿಲ್ತಾನ್ ಮತ್ತು ಐಎನ್‌ಎಸ್ ಕಚ್ಚಲ್‌ಗಳ ಕಮಾಂಡರ್ ಆಗಿದ್ದರು. ಇವರ ಪಡೆ ೪ನೇ ಡಿಸೆಂಬರ್ ೧೯೭೧ ರಂದು ಕರಾಚಿಯ ಬಂದರಿನ ಮೇಲೆ ದಾಳಿ ಮಾಡಿದ ಕಾರ್ಯಾಚರಣೆಯ ಭಾಗವಾಗಿತ್ತು. ಇವರ ಎರಡು ಕಾರ್ವೆಟ್‌ಗಳು ತಮ್ಮ ಅತ್ಯುತ್ತಮ ರೇಡಾರ್ ಮತ್ತು ಸ೦ಪರ್ಕ ಸಾಧನಗಳಿಂದ ಶತ್ರು ಜಲಾಂತರ್ಗಾಮಿಗಳನ್ನು ಗುರುತಿಸಿದ್ದಲ್ಲದೆ ಭಾರತದ ಜಲಾಂತರ್ಗಾಮಿಗಳಿಗೆ ರಕ್ಷಣೆ ಕೊಡುವ ಮಹತ್ತರ ಜವಾಬ್ದಾರಿ ಇವರದ್ದಾಗಿತ್ತು. ಆಪರೇಷನ್ ಟ್ರೈಡೆಂಟ್ ಕಾರ್ಯಾಚರಣೆ ಬಹುದೊಡ್ಡ ಯಶಸ್ಸನ್ನು ಗಳಿಸಿತು. ಈ ಕಾರ್ಯಚರಣೆಯಲ್ಲಿ ಎರಡು ಪಾಕಿಸ್ತಾನಿ ವಿಧ್ವಂಸಕಗಳಾದ (ಪಿಎನ್‌ಎಸ್ ಖೈಬರ್ ಮತ್ತು ಪಿಎನ್‌ಎಸ್ ಷಾ ಜೆಹಾನ್) ಗಳನ್ನು ಮುಳುಗಿಸಿದ್ದಲ್ಲದೆ ಒಂದು ಮೈನ್‌ಸ್ವೀಪರ್ ( ಪಿಎನ್‌ಎಸ್ ಮುಹಾಫಿಜ್ ), ಒಂದು ಸರಕು ಹಡಗಿನ(ಎಂವಿ ವೀನಸ್ ಚಾಲೆಂಜರ್) ತೈಲ ಶೇಖರಣೆಯನ್ನು ಬೆಂಕಿಗೆ ಆಹುತಿ ಮಾಡಿತು.[೪] [೫] ಅವರ ಅತ್ಯುತ್ತಮ ಸಾಧನೆಗೆ, ಅವರಿಗೆ ಭಾರತದ ಎರಡನೇ ಅತ್ಯುನ್ನತ ಮಿಲಿಟರಿ ಗೌರವವಾದ ಮಹಾವೀರ ಚಕ್ರವನ್ನು ನೀಡಲಾಯಿತು.
ವೈಯಕ್ತಿಕ ಜೀವನ
ಬದಲಾಯಿಸಿರಾವ್ ಅವರಿಗೆ ವಿವಾಹವಾಗಿದ್ದು, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಅವರು ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯದಿಂದ ಬಂದವರು. ಅವರು ಆಗಸ್ಟ್ ೯, ೨೦೨೧ ರಂದು ದಕ್ಷಿಣ ಭಾರತದ ನಗರವಾದ ಚೆನ್ನೈನಲ್ಲಿ ನಿಧನರಾದರು. ಆಗ ಅವರ ವಯಸ್ಸು ೯೪. [೬]
ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "CDR KP GOPAL RAO MAHA VIR CHAKRA". Gallantry Awards, Ministry of Defence, Govt of India website.
- ↑ Shivakumar, C. (9 August 2021). "Indian Navy war hero Commodore Gopal Rao who led Karachi Port attack in 1971 dies at 95". The New Indian Express. Retrieved 9 August 2021.
- ↑ "Commodore Gopal Rao -- man who brought Pakistan to its knees in 1971 Indo-Pak war". The New Indian Express. Retrieved 2022-01-12.
- ↑ "The Veer Ahir who set Karachi ablaze". Hindustan Times. 23 June 2013.
- ↑ Chakravorty, B. (1995). Stories of Heroism: PVC & MVC Winners (in ಇಂಗ್ಲಿಷ್). 180: Allied Publishers. p. 387. ISBN 9788170235163.
{{cite book}}
: CS1 maint: location (link) - ↑ "War hero who bombarded Karachi port in 1971 no more". The Indian Express (in ಇಂಗ್ಲಿಷ್). 2021-08-09. Retrieved 2021-08-10.