ರೇಡಾರ್
ಒಂದು ಬೆಟ್ಟಕ್ಕೆ ಅಭಿಮುಖ ನಿಂತು ನೀವು 'ಓ' ಎಂದು ಕೂಗಿದರೆ ನಿಮ್ಮ ಧ್ವನಿ ಸ್ವಲ್ಪ ಹೊತ್ತಿನಲ್ಲೇ ಬೆಟ್ಟದಿಂದ ಪ್ರತಿಫಲಿಸಿ ಪ್ರತಿಧ್ವನಿಯಾಗಿ ಬಂದು ನಿಮಗೆ ಕೇಳಿಸುತ್ತದೆ.ನಿಮ್ಮ ಧ್ವನಿಗೂ ಪ್ರತಿಧ್ವನಿಗೂ ನಡುವಿನ ಸಮಯದ ಅಂತರ ಬೆಟ್ಟಕ್ಕಿರುವ ದೂರವನ್ನು ಅಳತೆ ಮೂಡಲು ನೆರವಾಗುತ್ತದೆ.ರೇಡಾರ್(Radar) ಕೆಲಸ ಮೂಡುವುದೂ ಈ ವಿಧಾನದಲ್ಲಿ ವ್ಯತ್ಯಾಸವಿಷ್ಟೇ,ಧ್ವನಿ ತರಂಗಗಳ ಬದಲು ರೇಡಿಯೋ ತರಂಗಗಳನ್ನು ಪ್ರಸರಿಸಿ ಸುತ್ತಲಿನ ವಸ್ತುಗಳಿಗಿರುವ ದೂರದ ಅಂದಾಜನ್ನು ರೇಡಾರ್ ಮಾಡುತ್ತದೆ.ರೇಡಾರಿನ ಮೂಲ ಕಾರ್ಯವೇ ಈ 'ದೂರದ ಅಳತೆ".ರೇಡಾರ್ ಎಂಬ ಪದ ಬಂದಿರುವುದೇ 'ರೇಡಿಯೋ ಡಿಟೆಕ್ಷನ್ ಅಂಡ್ ರೇಂಜಿಂಗ್' ಎಂಬ ಪದ ಪುಂಜದಿಂದ ಕಣ್ಣಿಗೆ ನೇರವಾಗಿ ಕಾಣದ,ನೂರಾರು ಕಿಲೋಮೀಟರುಗಳಷ್ಟು ದೂರವಿರುವ ವಸ್ತುಗಳ ದಿಕ್ಕು,ದೂರ,ಎತ್ತರ,ಆಕಾರ ಹಾಗೂ ಅವುಗಳ ವೇಗವನ್ನು ರೇಡಿಯೋ ತರಂಗಗಳಿಂದ ಪತ್ತೆ ಹಚ್ಚುವ ತಂತ್ರ ರೇಡಾರಿನದು.೧೯೩೦ರ ಯುದ್ಧ ಪೂರ್ವ ವರ್ಷಗಳಲ್ಲಿ,ಬ್ರಿಟಿಷ್ ಸರ್ಕಾರದ ಪ್ರತಿಭಾವಂತ ವಿಜ್ಙಾನಿ ರಾಬರ್ಟ್ ವಾಟ್ಸನ್ ವಾಟ್ 'ರೇಡಿಯೋ ವಿಧಾನದಿಂದ ವಿಮಾನಗಳನ್ನು ಪತ್ತೆ ಹಚ್ಚುವ ಬಗೆಗೆ' ಪ್ರಬಂಧವನ್ನು ರಚಿಸಿ ಪ್ರಕಟಿಸಿದ.ಜರ್ಮನಿಯ ಯದ್ಧದಾಹ ರೇಡಾರ್ ಸಂಶೋಧನೆಗೆ ವಿಪರೀತದ ಒತ್ತು ಕೊಟ್ಟಿತು.ಪೂರಾ ಲೋಹದಿಂದ ತಯಾರಾದ ವಿಮಾನದತ್ತ ರೇಡಿಯೋ ತರಂಗಗಳನ್ನು ಕೇಂದ್ರಿಕರಿಸೆದರೆ ಅವು ವಿಮಾನದಿಂದ ಪ್ರತಿಫಲಿತವಾಗಿ ಹಿಂದಿರುಗುತ್ತದೆ.ಈ ಪ್ರತಿಫಲಿತ ರೇಡಿಯೋ ತರಂಗಗಳನ್ನು ಗ್ರಹಿಸಿ ಗುಣಿಸಿ ಪಟಲದ ಮೇಲೆ ಮೂಡಿಸುವ ಮೂಲಕ ಶತ್ರು ವಿಮಾನದ ದಿಶೆ,ದೂರ ಮತ್ತು ರೂಪುರೇಷೆಗಳನ್ನು ರೇಡಾರ್ ನಮಗೆ ತಿಳಿಸುತ್ತದೆ.ವಿಮಾನಗಳಷ್ಟೇ ಅಲ್ಲ ಹಡಗುಗಳಲ್ಲಿ ಕಡೆಗೆ ೫-೬ ಅಳೆತ್ತರದ ಸಮುದ್ರದ ಅಲೆಗಳ ನಡುವೆ ಇರುವ ಜಲಾಂತರ್ಗಾಮಿಯ(Submarine) ಪೆರಿಸ್ಕೋಪನ್ನು ಕೂಡಾ ರೇಡಾರ್ ಗುರುತಿಸಬಲ್ಲದು.
ಪ್ರಕಾಶತೆ
ಬದಲಾಯಿಸಿರೇಡಾರ್ ಅಲೆಯು ತನ್ನ ಸ್ವಂತ ಪ್ರಕಾಶತೆಯನ್ನು ಪ್ರಸರಣದ ಮೇಲೆ ಅವಲಂಬಿಸಿದೆ. ಇದು ಇತರೆ ಬೆಳಕಿನ ಹಾಗೆ ಅಂದರೆ ಸೂರ್ಯ, ಚಂದ್ರರಿಂದ ಅಥವಾ ಇನ್ನೀತರ ಯಾವುದೇ ವಿದ್ಯುತ್ ಕಾಂತೀಯ ವಿಕಿರಣದ ಹಾಗೆ ಅಲ್ಲ. ಈ ರೀತಿಯ ನೇರ ವಿಧಾನದ ಮೂಲಕ ರೇಡಿಯೋ ಅಲೆಗಳನ್ನು ಒಂದು ವಸ್ತುವಿನಡೆಗೆ ಪ್ರಸರಿಸುವಂತೆ ಮಾಡುವದಕ್ಕೆ ಅದರ ಪ್ರಕಾಶತೆ ಎನ್ನುತ್ತೇವೆ. ಇಷ್ಟಾದರೂ ಸಹ ರೇಡಿಯೋ ಅಲೆಗಳು ಮಾನವನಿಗೆ ಅಗೋಚರ, ಇವು ಕಣ್ಣಿಗೆ ಕಾಣಿಸದ ಬೆಳಕಿನ ತರಂಗಗಳಾಗಿವೆ. ಹಾಗೆಯೇ ಕ್ಯಾಮರಗಳ ಮಸೂರೆಗಳಿಗೂ ಸಹ ಇವು ಸಿಗದೇ ಅಥವಾ ಸೆರೆಯಾಗದೇ ಪ್ರಸರಿಸುತ್ತವೆ.
ಪ್ರತಿಫಲನೆ
ಬದಲಾಯಿಸಿಪ್ರತಿಫಲನೆ ಎಂದರೆ ಬೆಳಕು ಅಥವಾ ಯಾವುದೇ ಒಂದು ತರಂಗ ರೂಪದ ವಸ್ತುವು ಒಂದು ವಸ್ತುವಿನ ಮೇಲ್ಮೈಗೆ ತಾಕಿದಾಗ ಅಲೆಗಳ ಪ್ರಸರಣಕ್ಕೆ ಅಡೆ-ತಡೆ ಉಂಟಾಗಿ ಅದು ಸಾಧ್ಯವಿರುವ ಎಲ್ಲಾ ದಿಕ್ಕುಗಳಲ್ಲೂ ಸಹ ಪ್ರಸರಿಸುವದಕ್ಕೆ ಪ್ರತಿಫಲನ ಎನ್ನುವರು. ಅದೇ ರೀತಿ ರೇಡಾರ್ ಅಲೆಗಳು ಸಹ ವಿದ್ಯುತ್‍ವಾಹಕ ವಸ್ತುಗಳಾದ ಲೋಹ, ಇಂಗಾಲದ ದೃಗ್ನಾರು (ಫೈಬರ್) ಇತರೆ ವಸ್ತುಗಳ ಮೆಲ್ಮೈಗೆ ಬಡಿದಾಗ ಪ್ರತಿಫಲನಕ್ಕೆ ಒಳಪಡುತ್ತದೆ. ಆದ ಕಾರಣದಿಂದಲೇ ರೇಡಾರ್ ಸಾಧನವು ವಿಮಾನ ಮತ್ತು ಹಡಗುಗಳ ದೂರ, ಕೋನ, ವೇಗ, ಮತ್ತು ಅವುಗಳ ವ್ಯಾಪ್ತಿ ನಿರ್ಧರಿಸಲು ಅತ್ಯಂತ ಸೂಕ್ತವಾದ ಉಪಕರಣವಾಗಿದೆ, ರೇಡಾರ್ ಸಾಧನವು ಲೋಹದ ರೋಧಕ ಶಕ್ತಿಯನ್ನು ಹಾಗೆಯೇ ಕೆಲವೊಮ್ಮೆ ಕಾಂತೀಯ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಆದ ಕಾರಣದಿಂದಲೇ ಇದು ಶೀಘ್ರವಾಗಿ ವಸ್ತುಗಳನ್ನು ಗುರುತಿಸಲು ಸಹಾಯಕವಾಗಿದೆ. ರೇಡಿಯೋ ಅಲೆಗಳು ಬಹುವಿಧವಾಗಿ ಪ್ರತಿಫಲಿತಗೊಳ್ಳುತ್ತವೆ. ಈ ಪ್ರತಿಫಲನವು, ರೇಡಿಯೋ ಅಲೆಗಳ ತರಂಗಾಂತರ ಮತ್ತು ಗುರಿಯಿಟ್ಟು ವಸ್ತುವಿನ ಗಾತ್ರ, ಆಕಾರದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ರೇಡಿಯೋ ಅಲೆಗಳ ತರಂಗಾಂತರ ವಸ್ತುವಿನ ಆಕಾರ, ಗಾತ್ರಕ್ಕಿಂತ ಕಿರಿದಾಗಿದ್ದರೆ ಪ್ರತಿಫಲಿತ ಅಲೆಗಳು ಬಹಳವಾಗಿ ಹಿಂತುರುಗುತ್ತವೆ. ಹಾಗೆಯೇ ವಸ್ತುವು ಬಹಳ ಚಿಕ್ಕದ್ದಾಗಿದ್ದು ತರಂಗಾಂತರ ಬಹಳ ಹೆಚ್ಚಿನದಾಗಿದ್ದರೆ ಆಗ ಪ್ರತಿಫಲನಗೊಳ್ಳುವ ಸಂಭವ ತೀರ ಕಡಿಮೆ ಏಕೆಂದರೆ ತರಂಗಗಳು ವಸ್ತುವನ್ನು ದಾಟಿ ಮುಂದಕ್ಕೆ ಸುಲಭವಾಗಿ ಸಾಗಲ್ಪಡುತ್ತವೆ.ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆ ತರಂಗಾಂತರ ರೇಡಿಯೋ ಅಲೆಗಳನ್ನು ಬಳಸಿಕೊಳ್ಳಲಾಗುತ್ತದೆ, ಕೇವಲ ಸೆಂಟಿ ಮೀಟರ್‍ಗಳಷ್ಟೇ ತರಂಗಾಂತರವನ್ನು ಹೊಂದಿರುವ ರೇಡಿಯೋ ಅಲೆಗಳನ್ನು ಬಳಸಲಾಗುತ್ತವೆ. ಕಡಿಮೆ ತರಂಗದೂರದ ಅಲೆಗಳು ವಸ್ತುವಿನ ಅಂಚು ಅಥವಾ ಮೋನಚಾದ ತಿರುವುಗಳಿಂದಲೂ ಸಹ ಪ್ರತಿಫಲನಗೊಳ್ಳುತ್ತವೆ.
ರೇಡಾರ್‍ಗೆ ಸಂಬಂಧಿಸಿದಂತೆ ಸೂತ್ರ
ಬದಲಾಯಿಸಿರೇಡಾರ್ನಿಂದ ಉತ್ಸರ್ಜಿತವಾದ ರೇಡಿಯೋ ಅಲೆಗಳು ವಸ್ತುವಿನಿಂದ ಪ್ರತಿಫಲಿತಗೊಂಡು ಪತ್ತೆಕಾರಿಯಲ್ಲಿ ಪುನಃ ಸೆರೆಹಿಡಿಯಲ್ಪಡುತ್ತದೆ, ಆದರೆ ಪೂರ್ಣಪ್ರಮಾಣದ ಅಲೆಗಳು ಪ್ರತಿಫಲಿತಗೊಳ್ಳಲಾರರು, ಪ್ರತಿಫಲನಗೊಳ್ಳುವ ತರಂಗಗಳ ಶಕ್ತಿಮೊತ್ತವನ್ನು ನಿರೂಪಿಸಲು ಅಥವಾ ಕಂಡುಹಿಡಿಯಲು ಈ ಕೆಳಗಿನ ಸಮೀಕರಣ ಸೂತ್ರ ಸಹಾಯಕವಾಗಿದೆ. Pr=p+g+Ar-f4 (4^) 2R2+R2r
ಈ ಸೂತ್ರದಲ್ಲಿ Pr ಎಂದರೆ ಪ್ರತಿಫಲನ ಶಕ್ತಿ. Pr ಎಂದರೆ ಪ್ರಸರಕ ಶಕ್ತಿ (ರೇಡಿಯೋ ಅಲೆಗಳನ್ನು) G+ ಎಂದರೆ ಪ್ರಸಾರಕ ಆ್ಯಂಟೆನಾದ ಉಳಿಕೆ (ಎತ್ತರ) Ar ಎಂದರೆ ಪತ್ತೇಕಾರಿ ಆ್ಯಂಟೆನಾದ ವಿಸ್ತೀರ್ಣ ~ ಎಂದರೆ ರೇಡಾರ್ ಅಲೆಗಳ ಚದುರುವಿಕೆಯ ಸಹಾಯಕ F ಎಂದರೆ ಪ್ರಸರಣ ಮಾದರಿಯ ಅಪವರ್ತನ R+ ಎಂದರೆ ಪ್ರೇಷಕ ಮತ್ತು ವಸ್ತುವಿನ ನಡುವಿನ ದೂರ Rr ಎಂದರೆ ಪತ್ತೆಕಾರಿ ಮತ್ತು ವಸ್ತುವಿನ ನಡುವಿನ ದೂರ R ಎಂದರೆ ವ್ಯಾಪ್ತಿ ಎಂದರ್ಥ. ಈ ಸೂತ್ರವನ್ನು ಗಮನಿಸಿದಾಗ ಪ್ರತಿಫಲಿತ ಶಕ್ತಿ ವ್ಯಾಪ್ತಿಯ ನಾಲ್ಕರ ಘಾತಾಂಕದಷ್ಟು ಕುಸಿತಗೊಂಡಿರುವುದು ಕಾಣಬಹುದು, ಇದರರ್ಥ ಪ್ರತಿಫಲಿತ ತರಂಗವು ಬಹಳ ಕಡಿಮೆ ಇರುತ್ತದೆ ಎಂದರ್ಥ. ಅಂದರೆ ದೂರದ ವಸ್ತುವಿನಿಂದ ಪ್ರತಿಫಲಿತಗೊಂಡ ರೇಡಿಯೋ ಅಲೆಗಳು ಬಹಳ ಕಡಿಮೆ ಮತ್ತು ದುರ್ಬಲವಾಗಿರುತ್ತವೆ. ಆದ್ದರಿಂದಲೇ ಇವುಗಳನ್ನು ಪುನಃ ವರ್ಧಿ¸ಬೇಕು. ರೇಡಾರ್‍ನಲ್ಲಿ ವಸ್ತುವಿನ ದೂರವನ್ನು ಕಂಡುಹಿಡಿಯುವುದು. ರೇಡಾರ್ ಸಾಧನದಿಂದ ವಸ್ತುವಿನ ದೂರವನ್ನು ನಾವು ಕಂಡುಹಿಡಿಯಬಹುದಾಗಿದ್ದು ಅದಕ್ಕೆ ಒಂದು ಸೂತ್ರವಿದೆ ಅದೇನೆಂದರೆ d=v+v 2 ದೂರ = ವೇಗ+ ತೆಗೆದುಕೊಂಡ ಸಮಯ ಇಲ್ಲಿ (ವಿ) ಎಂದರೆ ವೇಗ: ರೇಡಿಯೋ ಅಲೆಯ ಪ್ರಸರಣ ವೇಗ ಪ್ರತಿ ಸೆಕೆಂಡಿಗೆ (ಟಿ) ತೆಗೆದುಕೊಂಡ ಸಮಯ ಎಂದರೆ- ಪ್ರೇಷಕದಿಂದ ಉತ್ಸರ್ಜಸಲ್ಪಟ್ಟ ರೇಡಿಯೋ ಅಲೆಯು ಪ್ರತಿಫಲಿತಗೊಂಡು ಪುನಃ ಸ್ವೀಕಾರಿ/ಪತ್ತೆಕಾರಿಯಲ್ಲಿ ಸರೆಯಾಗುವವರೆಗಿನ ಸಮಯ. ಈ ಮೇಲಿನ ಸೂತ್ರ ಉಪಯೋಗಿಸಿ ವಸ್ತುವು ನಮ್ಮಿಂದ ಎಷ್ಟು ದೂರದಲ್ಲಿದೆ ಎಂದು ತಿಳಿಯಬಹುದಾಗಿದೆ. ರೇಡಿಯೋ ಅಲೆಗಳು ಒಂದು ಸೆಕೆಂಡಿಗೆ ಎಷ್ಟು ವೇಗದಲ್ಲಿ ಚಲಿಸುತ್ತವೆ ಎಂಬುದನ್ನು ಅವುಗಳು ಉತ್ಸರ್ಜನೆ ಪ್ರತಿಫಲನಗೊಳ್ಳುವವರೆಗೆ ತೆಗೆದುಕೊಂಡ ಕಾಲದಿಂದ ಗುಣಿಸಿ ಎರಡರಿಂದ ಭಾಗಿಸಿದಾಗ ವಸ್ತುವು ನಮ್ಮಿಂದ ಇರುವ ದೂರದ ಅಳತೆ ಸಿಗುತ್ತದೆ.
ರೇಡಾರ್ ಕಂಬಗಳ ವಿನ್ಯಾಸ
ಬದಲಾಯಿಸಿರೇಡಾರ್ ಕಂಬಗಳು ಎತ್ತರವಾಗಿದ್ದು ಎಲ್ಲಾ ದಿಕ್ಕೂಗಳಲ್ಲಿ ರೇಡಿಯೋ ಅಲೆಗಳನ್ನು ಉತ್ಸರ್ಜಿಸುವಂತೆ ಮತ್ತು ಪ್ರತಿಫಲಿತ ತರಂಗಳನ್ನು ಸ್ವೀಕರಿಸುವಂತೆ ವಿನ್ಯಾಸಗೊಂಡಿರಬೇಕಾಗಿರುತ್ತವೆ. ಇಲ್ಲದಿದ್ದರೆ ಕೇವಲ ಕೆಲವೆ ದಕ್ಕುಗಳ ವಸ್ತುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಬಹುದು ಕಂಬದ ಎತ್ತರವು ರೇಡಾರ್ ಸಾಧನದ ಅವಶ್ಯಕತೆಗೆ ಅನುಗುಣವಾಗಿ ನಿರ್ಧರಿತವಾಗಿರುತ್ತವೆ. ರೇಡಾರ್ ಸಾಧನದ ಉಪಯೋಗಗಳು ರೇಡಾರ್ ಸಾಧನಗಳು ಪ್ರಸ್ತುತ ದಿನಗಳಲ್ಲಿ ಬಹಳ ಉಪಯುಕ್ತವಾಗಿದ್ದು ಅದರ ಕೊಡುಗೆ ಈ ಕೆಳಗಿಂತಿದೆ.
- ಚಲಿಸುತ್ತಿರುವ ಅಥವಾ ಸ್ಥಿರ ವಸ್ತುವಿನ ದೂರವನ್ನು ಕಂಡುಹಿಡಿಯಲು ಬಳಸುತ್ತಾರೆ.
- ರಕ್ಷಣಾ ಅಥವಾ ಸೇನೆಗಳಲ್ಲಿ ಇದರ ಉಪಯುಕ್ತತೆ ತುಂಬಾ ಇದೆ, ಏಕೆಂದರೆ ಸಾಗರ ಅಥವಾ ಜಲಮಾರ್ಗ, ವಾಯುಮಾರ್ಗ, ಭೂಮಾರ್ಗಗಳಿಂದಾಗಬಹುದಾದ ಕ್ಷಿಪಣಿ ದಾಳಿ, ವಿಮಾನ ದಾಳಿ ಇತ್ಯಾದಿ ಕೃತ್ಯಗಳನ್ನು ಪತ್ತೆಹಚ್ಚಿ ತಡೆಗಟ್ಟಲು ಅನುಕೂಲಕರ.
- ವಿಮಾನಗಳ ಹಾರಾಟದ ದಿಕ್ಕು, ವೇಗ, ಮತ್ತು ಅವುಗಳ ನಿಯಂತ್ರಣದಲ್ಲಿ ರೇಡಾರ್ ತಂತ್ರಜ್ಞಾನ ಬಳಕೆಯಾಗುತ್ತವೆ.
- ವಾತಾವರಣ ಮಾಹಿತಿಗಾಗಿ ರೇಡಾರ್ ತಂತ್ರಜ್ಞಾನ ಬಳಕೆಯಾಗುತ್ತದೆ.
- ಸಂಚಾರಿ ವಾಹನ ದಟ್ಟಣೆ ನಿಯಂತ್ರಣದಲ್ಲಿ ಇದರ ಉಪಕಾರ ಬಳಕೆಯಾಗುತ್ತದೆ.
- ಅತಿ ವೇಗವಾಗಿ ಚಲಿಸುವ ವಾಹನಗಳ ದೂರ ಮತ್ತು ವೇಗವನ್ನು ಕಂಡುಹಿಡಿಯಲು ರೇಡಾರ್‍ಗನ್ ಎಂಬ ಸಾಧನಯೊಂದಿದ್ದು ಇದರಿಂದ ಅತೀ ವೇಗವಾಗಿ ಚಲಿಸುವ ವಾಹನಗಳನ್ನು ಗುರುತಿಸಲು ಬಹಳ ಸಹಾಯಕವಾಗಿದೆ.
- ಸಾಗರಾಳದಲ್ಲಿ ಸಹ ರೇಡಾರ್ ತಂತ್ರಜ್ಞಾನದಿಂದ ಹಡುಗು ಹಡಗುಗಳ ನಡುವಿನ ದೂರ, ಅವುಗಳ ಸ್ಥಾನ ಇತ್ಯಾದಿಗಳನ್ನೂ ನಿಖರವಾಗಿ ತಿಳಿಯಲು ಸಹಾಯಕವಾಗಿದೆ.
ಪವನ ವಿಜ್ಞಾನಿಗಳು ಸಹ ರೇಡಾರ್ ತಂತ್ರಜ್ಞಾನದಿಂದ ಗಾಳಿಯ ಬೀಸುವಿಕೆ, ವೇಗ ಇತ್ಯಾದಿಗಳನ್ನು ದಾಖಲಿಸಿಕೊಳ್ಳಲು ಸಹಾಯಕವಾಗಿದೆ. ಅಷ್ಟೇ ಅಲ್ಲದೆ ಚಂಡಮಾರುತ, ಬಿರುಗಾಳಿ, ಹವಮಾನ ವರದಿಗೂ ಉಪಯುಕ್ತವಾಗಿದೆ.
- ಭೂ ವಿಜ್ಞಾನಿಗಳು ಸಹ ಭೂಮಿಯಲ್ಲಿ ಹಾದುಹೋಗುವ ರೇಡಾರ್ ಅಲೆ ತಂತ್ರಜ್ಞಾನಿದಿಂದ ಭೂಭಾಗದ ಅಧ್ಯಯನ ನಡೆಸುತ್ತಿದ್ದಾರೆ. ಹೀಗೆ ರೇಡಾರ್ ತಂತ್ರಜ್ಞಾನವು ಬಹಳ ಉಪಯುಕ್ತ ಸಾಧನವಾಗಿ ಎಲ್ಲಾ ವಿಭಾಗಗಳಲ್ಲೂ ಕಾರ್ಯ ನಿರ್ವಹಿಸುತ್ತಿದೆ.
ಪರಾಮರ್ಶನ ಕೃತಿಗಳು
ಬದಲಾಯಿಸಿಲೇಖಕರು
ಬದಲಾಯಿಸಿಡಾ|ಕೆ.ಎಂ.ಸುರೇಶ್,ಸಾಮಾನ್ಯ ವಿಜ್ಞಾನ,2015 5ನೇ ಆವೃತ್ತಿ,ಸ್ಪರ್ಧಾ ವಿಜೇತ ಪ್ರಕಾಶನ,ಬೆಂಗಳೂರು
ಎ.ಬಾಲರಾಜ,ಸಾಮಾನ್ಯ ವಿಜ್ಞಾನ,2014,ಎಸ್.ಎಂ.ಪ್ರಕಾಶನ, ಕೋಲಾರ
ಪೆನಲೇ,ಬಿಲ್ ಮತ್ತು ರೇಡಾರ್ ಆರಂಭಿಕ,2002
ಜೋನಾಥನ್,ಇತಿಹಾಸ ಒಂದು ಪೀಠಿಕೆ