ಕಾಲವನ್ನು ಅಳೆದ ಕಥೆ
ಪರಿಚಯ
ಬದಲಾಯಿಸಿ'ಕಾಲ' ಎಂಬ ಪದದ ಪರಿಕಲ್ಪನೆ ಪ್ರಾಚೀನ ಮಾನವನಲ್ಲೇ ಮೂಡಿತ್ತು. ತನ್ನ ಪರಿಸರದಲ್ಲಿ ತನ್ನ ಹಾಗೂ ತನ್ನ ಸಂತತಿ , ಜನಾಂಗದ ಉಳಿವಿಗಾಗಿ ದಿನನಿತ್ಯದ ಕೆಲಸಗಳಿಗಾಗಿ ಪ್ರಾಚೀನ ವ್ಯಕ್ತಿ ಕಾಲವನ್ನು ಕಲ್ಪಿಸಿಕೊಂಡ. ಪ್ರಾಕೃತಿಕವಾಗಿ ನಿರಂತರ ಘಟಿಸುವ ಎರಡು ಸಂದರ್ಭಗಳ ನಡುವಿನ ಅವಧಿಯನ್ನು ಕಾಲ ಎಂದು ಕರೆದ. ಇಂಥಾ ಲೆಕ್ಕಾಚಾರ , ಕಲ್ಪನೆಗೆ ಸಹಕಾರಿಯಾಗಿದ್ದು ದೈನಂದಿನ ಬದುಕಿನಲ್ಲಿನ ಹಗಲು, ರಾತ್ರಿ, ಬೆಳಗು, ಮುಂಜಾನೆ ಇತ್ಯಾದಿಗಳು. ದಿನದ ಆಹಾರ ಸಂಗ್ರಹಣೆ ಯಾವ ಸಮಯದಲ್ಲಿ ಮಾಡಬೇಕು, ಎಷ್ಟುಹೊತ್ತು ಮಾಡಬೇಕು. ಕಾಡುಪ್ರಾಣಿಗಳಿಂದ ಅಪಾಯ ಎದುರಾಗುವ ನಿರ್ದಿಷ್ಟ ಸಮಯ ಯಾವುದು ಇತ್ಯಾದಿ 'ಕಾಲ'ವನ್ನು ಲೆಕ್ಕ ಹಾಕುವ ಗುರುತಿಸುವ 'ಜ್ಞಾನ'ವು ಪುರಾತನ ಮನುಷ್ಯನ ಬದುಕು ಸಹನೀಯವಾಗುವಂತೆ ಮಾಡಿತು. ಕಾಲವನ್ನು ತಿಳಿಯುವುದು ಒಂದು ರೀತಿ ಭೂಮಿಯ ಮೇಲೆ ಅವನ ಉಳಿಯುವಿಕೆಯನ್ನು ಗಟ್ಟಿಗೊಳಿಸಿತು. ಪ್ರಾಚೀನ ಮಾನವ ನಿಸರ್ಗದ ಬದಲಾವಣೆಗೆ ಹೊಂದಿಕೊಂಡಂತೆ ತನ್ನ ಇಡೀ ದಿನದ ಚಟುವಟಿಕೆಗಳಿಗೆ ನಿರ್ದಿಷ್ಟ 'ಕಾಲ'ವನ್ನು ಗುರುತಿಸಿಕೊಂಡಿದ್ದ.ಸೂರ್ಯ ಹುಟ್ಟುವುದರೊಂದಿಗೆ ಪ್ರಾರಂಭವಾಗುತ್ತಿದ್ದ ಅವರ ಚಟುವಟಿಕೆ ಸಂಜೆ ಸೂರ್ಯ ಮುಳುಗುವುದರೊಂದಿಗೆ ಮುಕ್ತಾಯಗೊಳ್ಳುತ್ತಿದ್ದವು.ಮುಂದೆ ಮನುಷ್ಯ ಬೆಂಕಿ , ರಾತ್ರಿ ದೀಪಗಳನ್ನು ಬಳಸಲು ಪ್ರಾರಂಭಿಸಿದ ನಂತರ ರಾತ್ರಿ ಹೊತ್ತಿನಲ್ಲೂ ಅವನ ಚಟುವಟಿಕೆಗಳು ನಡೆಯಲಾರಂಭಿಸಿದವು. ರಾತ್ರಿ ಹೊತ್ತಲ್ಲೂ ಕಾಲವನ್ನು ಅವನು ಅಳೆಯಬೇಕಾದ ಅನಿವಾರ್ಯತೆ ಬಂದೊದಗಿತು.ಇದು ಕಾಲವನ್ನು ಅಳೆಯುವ ಹೊಸ ಸಾಧನಗಳ ಅನ್ವೇಷಣೆಗೆ ನಾಂದಿ ಹಾಡಿತು.ನಾವು ನಮ್ಮ ಜೀವನದ ಗುರಿಯನ್ನು ಮುಟ್ಟಲು ಸಾಧ್ಧ್ಯ ವಾಗಬೇಕಾದ್ದರೆ ನಾವು ಮುಖ್ಯವಾಗಿ ಸಮಯಪ್ರಜ್ಞೆಯನ್ನು ಅಂದಿನ ಕೆಲಸವನ್ನು ಅಂದೇ ಮಾಡಿಮುಗಿಸಬೇಕು.ನಾವು ಸಮಯ ಉಳಿತಾಯ ಮಾಡುವುದು ಆದಷ್ಟು ಒಳ್ಳೆಯದು ಏಕೆಂದರೆ ಇಂದಿನ ಓಡುವ ಯುಗದಲ್ಲಿ ಇರುವ ನಮ್ಮಗೆ ತುಂಬಾ ಮುಖ್ಯವಾಗುತ್ತದೆ.ಒಂದು ದಿನದಲ್ಲಿರುವುದು ಕೇವಲ ಇಪ್ಪತ್ನಾಲ್ಕು ತಾಸುಗಳುಮಾತ್ರ.ನಮ್ಮ ಜೀವನದಲ್ಲಿ ಸಮಯವು ತುಂಬಾ ಉಪಯೋಗವಾಗುತ್ತದೆ.ಸಮವಿಲ್ಲದೆ ನಮ್ಮ ಜೀವ ನಡೆಸಳು ತುಂಬಾ ಕಷ್ಟವಾಗುತ್ತದೆ ಆದ್ದುದರಿಂದ ನಾವು ಸಮಯವನ್ನು ನಮ್ಮ ಒಬ್ಬ ಅತ್ಯುತ್ತಮ ಗೆಳೆಯನಂತೆ ಪರಿಗಣಿಸಬೇಕಾಗುತ್ತದೆ.
ಚಲಿಸುವ ನೆರಳು
ಬದಲಾಯಿಸಿಪ್ರಕೃತಿಯಲ್ಲಿ ಪ್ರಾಚೀನ ಜನರ ಕಣ್ಣಿಗೆ ಹಗಲು ಹೊತ್ತಿನಲ್ಲಿ ಕಾಣುತ್ತಿದ್ದ ಒಂದು ಸ್ಪಷ್ಟ ವಿದ್ಯಮಾನವೆಂದರೆ,ಸೂರ್ಯ ಆಕಾಶದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಸಾಗಿದಂತೆ ಮರದ ನೆರಳು,ಕೋಡುಗಲ್ಲುಗಳ ನೆರಳು, ಬೆಟ್ಟ ದಿಬ್ಬಗಳ ನೆರಳುಗಳ ಚಲನೆ.ಒಂದೇ ಪ್ರದೇಶದಲ್ಲಿ ದಿನವೂ ಇಂಥಾ ನೆರಳು ಗಮನಿಸುತ್ತಿದ್ದ ಜನರಿಗೆ ನಿರ್ದಿಷ್ಟ ಸಮಯದಲ್ಲಿ ನೆರಳು ಕೂಡಾ ನಿಗದಿತ ಜಾಗದಲ್ಲೇ ಇರುತ್ತದೆ ಎಂಬುದು ಅನುಭವಕ್ಕೆ ಬಂದಿತು.ಆಗಲೇ ಪ್ರಾಚೀನ ಮನುಷ್ಯ ಇಂಥಾ ನೆರಳ ಮೂಲಕ ಸಮಯವನ್ನು ಅಳೆಯುವ,ತಿಳಿಯುವ ಆಲೋಚನೆ ಮಾಡಿದ.ಇದಕ್ಕಾಗಿ ನಿರ್ದಿಷ್ಟವಾದ ಉಪಕರಣಗಳನ್ನು ನಿರ್ಮಾಣ ಮಾಡುವ ಪ್ರೇರಭಣೆಯೂ ಅವನಿಗೆ ದೊರಕಿತುಪ್ರಾಚೀನ ಗ್ರೀಕರು ಕ್ರಿ.ಪೂ.೩೫೦೦ರಲ್ಲಿ,,ಕ್ರಿ.ಪೂ.೨೦೦೦ದಲ್ಲಿ ಈಜಿಪ್ಟ್ನಲ್ಲಿ ಬ್ಯಾಬಿಲೋನಿಯಾದಲ್ಲಿ ಕ್ರಿ.ಪೂ.೩೦೦ರಲ್ಲಿ ಇಂಥಾ ನೆರಳ ಗಡಿಯಾರಗಳನ್ನು ಬಳಕೆಗೆ ತರಲಾಯಿತೆಂಬ ದಾಖಲೆಗಳಿವೆ.ಹೀಗೆ ನೆರಳನ್ನು ಬಳಸಿ ಕಾಲ ಅಳೆಯುವ ಗಡಿಯಾರ ಸಾಧನಗಳನ್ನು 'ಸೌರ ಗಡಿಯಾರ'ಎಂದು ಕರೆಯಲಾಯಿತು.ಭೂಮಿಯ ಚಲನೆಯ ಕಕ್ಷೆ ಬದಲಾದಂತೆ ನೆರಳಿನ ಚಲನೆಯ ದಿಕ್ಕು ಬದಲಾಗುತ್ತದೆಂಬುದೂ ಅರಿವಿಗೆ ಬಂದಾಗ,ಅದಕ್ಕೂ ಪರಿಹಾರ ಕಂಡು ಹಿಡಿಯಲಾಯಿತು.ನಿಗದಿತ ಆಕಾರದಲ್ಲಿ ನೆರಳಿನ ಚಲನೆ ಬದಲಾಗುವ ಸಂದರ್ಭಕ್ಕನುಗುಣವಾದ ಸೌರ ಗಡಿಯಾರವನ್ನು ರೂಪಿಸಲಾಯಿತು.ಎಲ್ಲಾ ಕಾಲಕ್ಕೂ ಸರಿಯಾದ ಸಮಯ ತೋರುವ,ಕಾಲವನ್ನು ಅಳೆಯುವ ಗಡಿಯಾರವನ್ನು ಸಿದ್ಧಪಡಿಸಲಾಯಿತು.ಈ ತಯಾರಿಕೆಗೆ ಮಹತ್ವದ ಕೊಡುಗೆ ನೀಡಿದವರು ಈಜಿಪ್ಷಿಯನ್ನರು,ಬ್ಯಾಬಿಲೋನಿಯನ್ನರು,ಗ್ರೀಕರು ಮತ್ತು ಅರಬ್ಬರು.
ಜಾರುವ ಮರಳು.....ಹರಿಯುವ ನೀರು:
ಬದಲಾಯಿಸಿಹಗಲು ಹೂತ್ತಿನಲ್ಲಿ ಮಾತ್ರ ಸಮಯ ಗುರುತಿಸುವ ಸೌರಗಡಿಯಾರ ಸೂರ್ಯ ಮುಳುಗಿದ ಮೇಲೆ ಕೆಲಸಕ್ಕೆ ಬಾರದಾಯಿತು. ಪ್ರಾಚೀನ ಮನುಷ್ಯನ ಜ್ಞಾನ ವಿಸ್ತರಣೆಯಾದಂತೆ, ಬೆಂಕಿಯ ಬಳಕೆ ಹೆಚ್ಚಿದಂತೆ ಅವನ ಚಟುವಟಿಕೆಗಳೂ ರಾತ್ರಿ ವಿಸ್ತರಣೆಗೊಂಡಿದ್ದವು.ಇದರಿಂದಾಗಿ ರಾತ್ರಿಯಲ್ಲೂ ಕಾಲವನ್ನು ಗುರುತಿಸುವ ಅವಶ್ಯಕತೆ ಬಂಈನ್ದೊದಗಿತ್ತು.ಇಂಥಾ ಅವಶ್ಯಕತೆಯೇ ಮರಳು ಗಡಿಯಾರ,ಜಲಗಡಿಯಾರಗಳು ಸೃಷ್ಟಿಗೆ ಕಾರಣವಾಯಿತು.ಮರಳಿನ ಕಣಗಳನ್ನು ಒಂದೊಂದಾಗಿ ಒಂದು ಪುಟ್ಟ ರಂಧ್ರದ ಮೂಲಕ ಮೇಲಿಂದ ಕೆಳಕ್ಕೆ ಬೀಳುವಂತೆ ಮಾಡುವ ಮರಳಿನ ಗಡಿಯಾರವನ್ನು ಈಜಿಪ್ಟಿನಲ್ಲಿ ಬಳಕೆಗೆ ತರಲಾಗಿತ್ತು.ಇದು ಜನಪ್ರಿಯವೂ ಆಗಿತ್ತು.ಮರಳಿನ ಕಣಗಳು ಸರಿ ಸುಮಾರು ಒಂದೇ ಗಾತ್ರದಲ್ಲಿದ್ದು ನಿರ್ದಿಷ್ಟ ಅಗಲದ ಪುಟ್ಟ ರಂಧ್ರದಿಂದ ಒಂದೊಂದೇ ಕೆಳಗೆ ಬೀಳುವ ತಂತ್ರ ಈ ಗಡಿಯಾರದ ಬಗ್ಗೆ ಎಲ್ಲರಲ್ಲೂ ನಂಬಿಕೆ ಹುಟ್ಟಿಸಿತ್ತು.ಆದರೆ,ಸಾಮಾನ್ಯವಾದ ಅಳತೆಗಷ್ಟೇಇದನ್ನು ಬಳಸಬಹುದು.ಸೂಕ್ಷ್ಮ,,ನಿಖರ ಕಾಲಮಾಪನಕ್ಕೆ ಇದು ಉಪಯೋಗವಾಗದು ಎಂಬುದು ಕೂಡಾ ಈಜಿಪ್ಟಿಯನ್ನರಿಗೆ ತಿಳಿದಿತ್ತು.ಕ್ರಿ.ಶ.೮ನೇ ಶತಮಾನದಲ್ಲಿ 'ಫ್ರಾಂಡ್' ಎಂಬಾತ ನಿರ್ದಿಷ್ಟ ಆಕಾದೊಂದಿಗೆ ಈ ಮರಳು ಗಡಿಯಾರವನ್ನು ತಯಾರಿಸಿದಮರಳು ಗಡಿಯಾರದ ಬಳಕೆಗೂ ಮುಂಚೆ ಚೀನಾದಲ್ಲಿ ಕ್ರಿ.ಪೂ.೪೦೦೦ಕ್ಕೆ ಮೊದಲು ನೀರನ್ನು ಬಲಸಿ ಕಾಲವನ್ನು ಅಳೆಯುವ ತಂತ್ರ ರೂಪಿಸಲಾಗಿತ್ತು.ಈ ನೀರಿನ ಗಡಿಯಾರಗಳು ಕರಾರುವಾಕ್ಕಾಗಿ ಸಮಯ ತೋರಿಸದಿದ್ದರೂ,ಸಣ್ಣಪುಟ್ಟ ದಿನ ಬಳಕೆಯ ಚಟುವಟಿಕೆಗೆ ಮಾರ್ಗಸೂಚಿಯಾಗಿದ್ದವು.ನೀರು ತುಂಬಿದ ಒಂದು ತಪ್ಪಲೆಯ ತಳದಲ್ಲಿ ಒಂದು ಸಣ್ಣ ರಂಧ್ರ ಕೊರೆದು ನಿಧಾನಕ್ಕೆ ನೀರನ್ನು ಹೊರಬಿಟ್ಟರೆ,ನಿರ್ಧಿಷ್ಟ ನೀರು ಹೊರಹೋಗಲು ನಿರ್ದಿಷ್ಟ ಸಮಯ ಬೇಕು ಎಂಬ ಸರಳ ನಿಯಮದ ಮೇಲೆ ಈ ನಿರಿನ ಗಡಿಯಾರವನ್ನು ರೂಪಿಸಲಾಗಿತ್ತು.ಚೈನಾದ 'ಹವಾಂಗಡಿ' ಇದನ್ನು ಮೊದಲು ತಯಾರಿಸಿ ಪಳಕೆಗೆ ತಂದವನು.ಗ್ರೀಕ್ ನಲ್ಲೂ ಇದೇ ಆಧಾರದ ಮೇಲೆ ವಿವಿಧ ರೀತಿಯ ನೀರಿನ ಗಡಿಯಾರಗಳನ್ನು ವಿನ್ಯಾಸಗೊಳಿಸಿ ಬಳಕೆಗೆ ತರಲಾಗಿತ್ತು.ಉರಿಯುವ ಮೇಣದ ಬತ್ತಿ,ದೀಪ ಮುಂತಾದವನ್ನು ಬಳಸಿಯೂ ಕಾಲವನ್ನು ಅಳೆಯು ಪದ್ಧತಿಗಳೂ ಬಳಕೆಯಲ್ಲಿದ್ದವು.ಆದರೆ ,ಜಲ ,ಮರಳು ,ದೀಪ ಈ ಯಾವನ್ನು ಬಳಸಿಯೂ ನಿಖರವಾದ ಕಾಲಮಾಪನ ಸಾಧ್ಯಾವಿಲ್ಲವೆಂಬ ಸತ್ಯ ಎಲ್ಲರ ಅರಿವಿಗೂ ಬಂದಿತ್ತು.ಈ ಅತೃಪ್ತಿಯೇ ಮನುಷ್ಯನನ್ನು ಯಾಂತ್ರಿಕ ಗಡಿಯಾರಗಳ ಸೃಷ್ಟಿಗೆ ಪ್ರೇರೇಪಿಸಿತು.
ಗೋಪುರ ಗಡಿಯಾರಗಳು:
ಬದಲಾಯಿಸಿಕಾಲ ಕಳೆದಂತೆ ಮನುಷ್ಯನ ಬುದ್ಧಿವಂತಿಕೆ, ಜ್ಞಾನ ವಿಕಾಸವಾದಂತೆ,ನಿಖರವಾದ ಕಾಲಮಾಪನದ ಅಗತ್ಯಯೂ ಹೆಚ್ಚಾಯಿತು.ವಿವಿಧ ಸಾಧನೆಗಳು ನಿರ್ಮಾಣದಲ್ಲಿ ತಾಂತ್ರಿಕವಾಗಿಯೂ ಜ್ಞಾನ ಸಂಪಾದಿಸಿದ್ದ ಮನುಷ್ಯನಿಗೆ ೧೩ನೇ ಶತಮಾನದ ಹೊತ್ತಿಗೆ ನಿಖರ ಕಾಲಮಾಪನಕ್ಕಾಗಿ ಯಾಂತ್ರಿಕ ಗಡಿಯಾರಗಳನ್ನು ನಿರ್ಮಿಸುವುದು ಸಾಧ್ಯಾವಾಯಿತು.ಮುಂದೆ ವಿಜ್ಞಾನಿ ಗೆಲಿಲಿಯೋ ಲೋಲಕವನ್ನು ಕಂಡುಹಿಡಿದ ಮೇಲೆ ಗೋಪುರ ಗಡಿಯಾರಗಳು ಎಲ್ಲೆಲ್ಲೂ ಬಳಕೆಗೆ ಬಂದವು.ಈ ಗಡಿಯಾರಗಳಲ್ಲಿ ವಿವಿಧ ಗಾತ್ರದ ಕಚ್ಚು ಗಾಡಿಗಳನ್ನು ಬಳಸಲಾಗುತ್ತಿತ್ತು.ತೂಕದ ಗುಂಡುಗಳನ್ನು ಇಳಿಬಿಟ್ಟು ಆ ಒತ್ತಡಕ್ಕೆ ಗಡಿಯಾರ ಚಾಲನೆಗೊಳ್ಳುವಂತೆ ಮಾಡಲಾಗುತ್ತಿತ್ತು.
ಯಾಂತ್ರಿಕಗಡಿಯಾರದ ನಿರ್ಮಾಣ
ಬದಲಾಯಿಸಿಪ್ರಾರಂಭದಲ್ಲಿ ದೊಡ್ಡ ಗಾತ್ರದಲ್ಲೇ ಆಯಿತು.ಅಂದರೆ ಗೋಪುರ ಗಡಿಯಾರವಾಗಿ ಇದು ಕಾಣಿಸಿಕೊಂಡಿತು.ಇಡೀ ಯೂರೋಪಿನಲ್ಲಿ ಯಾಂತ್ರಿಕ ಗಡಿಯಾರದ ಗುಂಗು ಕಾಣಿಸಿಕೊಂಡಿತು.೧೪ನೇ ಶತಮಾನದ ಮಧ್ಯ ದ ಹೊತ್ತಿಗೆ ದೊಡ್ಡ ದೊಡ್ಡ ನಗರಗಳ ಟೌನ್ ಹಾಲ್ ಕ್ಲಾಕ್ ಗಳು ಪ್ರತಿಷ್ಟೆಯ ಸಂಕೇತವಾಗಿ ಕಾಣಿಚಿಕೊಂಡವು.೧೩೩೫ರಲ್ಲಿ ಮೊಟ್ಟಮೊದಲ ಗೋಪುರ ಗಡಿಯಾರ ಇಟಲಿಯ ಮಿಲಾನ್ ನಗರದಲ್ಲಿ ಸ್ಥಾಪನೆಯಾಯಿತು.೧೮೫೦ರಲ್ಲಿ ವಿಶ್ವದ ಅತ್ಯಂತ ದೊಡ್ದಗೋಪುರ ಗಡಿಯಾರದ ನಿರ್ಮಾಣವಾಯಿತು.ಇದೇ ಲಂಡನ್ನಿನ 'ಬಿಗ್ ಬೆನ್' ಗಡಿಯಾರ.ನಿರ್ಮಾಣವಾಗಿ ಗಡಿಯಾರ ಇಂಪಾದ ಗಂಟೆ ಬಾರಿಸುತ್ತದೆ ಕೂಡಾ.ಮನುಷ್ಯನ ನಾಗರಿಕತೆ,ಆಧುನಿಕತೆ ಬೆಳೆದಂತೆಲ್ಲಾ,ವ್ .ಯಕ್ತಿಕವಾಗಿ ಸಮಯ ಪಾಲನೆ ಮಾಡಬೇಕಾದ ಅಗತ್ಯತೆ ಹೆಚ್ಚಾಯಿತು.ಆಗ ಹುಟ್ಟಿಕೊಂಡದ್ದು ಯಾಂತ್ರಿಕವಾಗಿಯೇ ಕಾರ್ಯ ನಿರ್ವಹಿಸುವ ಯಕ್ತಿಕ ಪುಟ್ಟ ಗಾತ್ರದ ಗಡಿಯಾರದ ಸೃಷ್ಟಿಯ ಕನಸು! ಪುಟ್ಟ ಪುಟ್ಟ ಗಡಿಯಾರಗಳು:ಯಾಂತ್ರಿಕ ಗಡಿಯಾರಗಳು ಕರಾರುವಾಕ್ಕಾದ ಸಮಯ ತೋರಿಸಬಲ್ಲವೆಂಬುದು ಗೋಪುರ ಗಡಿಯಾರಗಳ ಕಾರ್ಯಕ್ಷಮತೆಯ ಮೂಲಕ ತಿಳಿದುಬರುತ್ತಿದ್ದಂತೆ,ಯಾಂತ್ರಿಕವಾದ ಪುಟ್ಟಗಾತ್ರದ್ದುಕಾಲಮಾಪನ ಗಡಿಯಾರಗಳನ್ನೇಕೆ ತಯಾರಿಸಬಾರದೆಂಬ ಆಲೋಚನೆ ಶುರುವಾಯಿತು.ಅದರ ಫಲವೇ ಒಬ್ಬವ್ಯಕ್ತಿ ತನ್ನ ಬಲಿಯೇ ಇಟ್ಟುಕೊಂಡು,ಒಂದೆಡೆಯಿಂದ ಇನ್ನೊಓದೆಡೆಗೆ ಕೊಂಡೊಯ್ಯಬಲ್ಲಗಡಿಯಾರದ ಕಲ್ಪನೆ ಮೂಡಿತು.೧೫೦೦ರಲ್ಲಿ ಜರ್ಮನಿಯ 'ಪೀಟರ್ ಹಿನ್ಲಿನ್' ಎಂಬಾತ ಈರುಳ್ಳಿ ಗಾತ್ರದ ಪುಟ್ಟ ಯಾಂತ್ರಿಕ ಗಡಿಯಾರವನ್ನು ವಿನ್ಯಾಸಗೊಳಿಸಿದ.ಇದರಲ್ಲಿನ ಗಮನೇಯ ಬದಲಾವಣೆಯೆಂದರೆ ಯಂತ್ರಕ್ಕೆ ಚಾಲನಶಕ್ತಿ ನೀಡಲು ತೂಕದ ಬಟ್ಟುಗಳಿಗೆ ಬದಲಾಗಿ,ಸುರುಳಿ ಸುತ್ತಿದ ಸ್ವ್ರಿಂಗ್ ಗಳನ್ನು ಬಳಸಿಕೊಳ್ಳಲಾಯಿತು.ಈ ಪೇಟರ್ ಹೆನ್ಲಿನ್ ನ 'ಈರುಳ್ಳಿ' ಗಡಿಯಾರಗಳು ಆ ಕಾಲಕ್ಕೆ ತುಂಬಾ ಜನಪ್ರಿಯವಾದವು)ಇದರ ಬೆನ್ನ ಹೆಂದೆಯೇ ವಿವಿಧ ರೀತಿಯ ಪುಟ್ಟ ಯಾಂತ್ರಿಕ ಗಡಿಯಾರಗಳು ಕಾಲಮಾಪನಕ್ಕಾಗಿ ವಿನ್ಯಾಸಗೊಂಡವು. ವೀಕ್ಷಣಾಲಯದಲ್ಲಿ ವೈಜ್ಞಾನಿಕ ಉದ್ದೇಶಗಳಿಗೆ ಬಳಸಲು 'ಕೋನಾ ಮೀಟರ್' ಸಮುದ್ರಯಾನದಲ್ಲಿ 'ಗ್ರೇನ್ ವಿಚ್' ಕಾಲಮಾನವನ್ನು ತೋರಿಸಬಲ್ಲ ಪುಟ್ಟ ಗಡಿಯಾರಗಳು ನಿರ್ಮಾಣವಾದವು. ಪುಟ್ಟ ಪುಟ್ಟ ಕಚ್ಚುಗಾಲಿಗಳನ್ನು, ಸುರುಳಿ ಸುತ್ತಿದ ಸ್ಪ್ರಿಂಗ್ ಅನ್ನು ಬಳಸಿದ ಕೋಟಿನ ಜೇಬಿನಲ್ಲಿ ಸೊಂಟಕ್ಕೆ ಇಟ್ಟುಕೊಳ್ಳಬಲ್ಲ , ಕೈಗೆ ಕಟ್ಟೀಕೋಳಬಲ್ಲ ಗಡಿಯಾರಗಳು ಎಲ್ಲರು ಬಲಕೆಗಾಗಿ ಮಾರುಕಟ್ಟೆಗೆ ಬಂದವು. ಬೇಕೆಂದಾಗ ಪ್ರಾರಂಭವಾಗುವ, ಬೇಡವೆಂದಾಗ ತಟ್ಟನೆ ನಿಂತು ಬಿಡುವ ಸೆಕೆಂಡಿನ ಮುಳ್ಳೊ ಇದ್ದು,ನಿರ್ದಿಷ್ಟ ಕಾಲ ಅಳೆಯುವ ಪುಟ್ಟ 'ಸ್ಟಾಪ್ ವಾಚ್'ಗಳನ್ನು ಪ್ರಯೋಗಾಲಯಗಳಲ್ಲಿ ಬಳಸಲು ತಯಾರಿಸಲಾಯಿತು.
ಕಾರ್ಟ್ಸ್ ಗಡಿಯಾರಗಳು:
ಬದಲಾಯಿಸಿ15 ನೇ ಶತಮಾನದಲ್ಲಿ ಕಾಣಿಸಿಕೊಂಡವು ಇದು ವಸಂತ ಚಾಲಿತ ಗಡಿಯಾರಗಳು, 17 ನೇ ಶತಮಾನದಲ್ಲಿ. ಮೊದಲ ಕೈಗಡಿಯಾರಗಳು ಕಟ್ಟುನಿಟ್ಟಾಗಿ ಯಾಂತ್ರಿಕ ಇದ್ದರು. ತಂತ್ರಜ್ಞಾನ ಮುಂದುವರಿದಂತೆ, ಸಮಯ ಅಳೆಯಲು ಬಳಸಲಾಗುತ್ತದೆ ವ್ಯವಸ್ಥೆಯ ಹೊಂದಿವೆ ಕೆಲವು ಒಂದು ಗಡಿಯಾರ ವಿಶಿಷ್ಟವಾಗಿ ಮಣಿಕಟ್ಟಿನ ಮೇಲೆ ಎರಡೂ ಧರಿಸುತ್ತಾರೆ ಅಥವಾ ಒಂದು ಸರಣಿ ಮೇಲೆ ಲಗತ್ತಿಸಲಾದ ಮತ್ತು ಒಂದು ಕಿಸೆಯಲ್ಲಿ ನಡೆಸಿತು ಸಣ್ಣ ಗಡಿಯಾರ, ಆಗಿದೆ; ಕೈಗಡಿಯಾರಗಳಮೆಲಿನ ಅಚ್ಚು, ಹೇಗಾದರೂ, ಬಳಸಿದ ಗಡಿಯಾರ ಅತ್ಯಂತ ಸಾಮಾನ್ಯ ವಿಧ ಇಂದು. ಸಂದರ್ಭಗಳಲ್ಲಿ ವಿಕಸನ ವಾಚಸ್, ಸ್ಫಟಿಕ ಕಂಪನಗಳನ್ನು ಅಥವಾ ವಿದ್ಯುತ್ಕಾಂತೀಯ ಕಾಳುಗಳು ಬಳಕೆ ಬದಲಿಗೆ ಮತ್ತು ಸ್ಫಟಿಕ ಚಲನೆ ಕರೆಯಲಾಗುತ್ತದೆ. ಮೊದಲ ಡಿಜಿಟಲ್ ಎಲೆಕ್ಟ್ರಾನಿಕ್ ಗಡಿಯಾರ 1970 ರಲ್ಲಿ ಅಭಿವೃದ್ಧಿಪಡಿಸಿದರು ಕೈಗಡಿಯಾರಗಳಮೆಲಿನ ಅಚ್ಚು ೧೯೨೦ ರಲ್ಲಿ ಜನಪ್ರಿಯವಾಗುವ ಮೊದಲೇ, ಹೆಚ್ಚಿನ ಕೈಗಡಿಯಾರಗಳು ಸಾಮಾನ್ಯವಾಗಿ ಕವರ್ ಹೊಂದಿತ್ತು ಮತ್ತು ಒಂದು ಕಿಸೆಯಲ್ಲಿ ನಡೆದವು ಮತ್ತು ಒಂದು ವೀಕ್ಷಣಾ ಸರಣಿ ಲಗತ್ತಿಸಲಾದ ಅಥವಾ ವಂಚಿಸು ವೀಕ್ಷಿಸಲು ಇದು ಪಾಕೇಟ್ ವಾಚ್ , ಇದ್ದರು . ೧೯೯೦ ರ ಆರಂಭದಲ್ಲಿ, ಕೈಗಡಿಯಾರ , ಮೂಲತಃ ಮಹಿಳೆಯರಿಗೆ ಮೀಸಲಾಗಿವೆ ಮತ್ತು ಗಂಭೀರ ಗಡಿಯಾರದ ಕೊಂಚ ಒಲವಿನ ಹೆಚ್ಚು ಪರಿಗಣಿಸಲಾಗಿತ್ತು , ಒಂದು ಕಡಗ ಎಂಬ . ಯುದ್ಧಭೂಮಿಯಲ್ಲಿ ಸೈನಿಕರ ಅಪ್ರಾಯೋಗಿಕ ಎಂದು ಒಂದು ಪಾಕೆಟ್ ಗಡಿಯಾರ ಬಳಸಿಕೊಂಡು ಕಂಡುಬಂದಿಲ್ಲ , ಆದ್ದರಿಂದ ಯಾವಾಗ ಪಾಕೇಟ್ ವಾಚ್ ನಡೆಸಿದ್ದಾರೆಂದು ರಿಯಲ್ ಪುರುಷರು , ವಾಸ್ತವವಾಗಿ ಅವರು " ಒಂದು ಕೈಗಡಿಯಾರ ಧರಿಸುತ್ತಾರೆ ಎಂದು ಬೇಗ ಸ್ಕರ್ಟ್ ಧರಿಸುತ್ತಾರೆ" ಎಂದು ಹೇಳಿದ್ದರೆಂದು ಮಾಡಲಾಯಿತು . ಈ ಎಲ್ಲಾ ಮಹಾಯುದ್ಧದಲ್ಲಿ ಬದಲಾಗಿದೆ ನಾನು ಅವರು ಲಗತ್ತಿಸಲಾದ ಪಾಕೆಟ್ ಒಂದು ಬಟ್ಟಲಿನ ಚರ್ಮದ ಪಟ್ಟಿ ತಮ್ಮ ಮಣಿಕಟ್ಟಿಗೆ ವೀಕ್ಷಿಸಲು . ಇದು ಗಿರಾರ್ಡ್ - ನೌಕಾ ದಾಳಿಗಳು ಸಿಂಕ್ರೊನೈಸ್ ಮತ್ತು ಫಿರಂಗಿ ಗುಂಡಿನ ಸಂದರ್ಭದಲ್ಲಿ ಬಳಸಲಾಯಿತು , ಆರಂಭಿಕ 1880 ಎಂದು ಇದೇ ರೀತಿಯಲ್ಲಿ ಜರ್ಮನ್ ಇಂಪೀರಿಯಲ್ ನೌಕಾಪಡೆಯ ಸುಸಜ್ಜಿತ ಎಂದು ನಂಬಲಾಗಿದೆ.ಪ್ರಕೃತಿಯಲ್ಲಿ ದೊರೆಯುವ ಹೇರಳವಾದ ಬೆಣಚುಕಲ್ಲಿನ ಶುದ್ದ ರೂಪ 'ಕ್ವಾರ್ಟ್ಸ್' ಹರಳನ್ನು ಬಳಸಿಕೊಂಡು ತಯಾರಿಸಿದ ಕಾಲಮಾಪನ ಗಡಿಯಾರಗಳಿವು.'ಕ್ವಾರ್ಟ್ಸ್' ಹರಳನ್ನು ವಿದ್ಯುತ್ ಸರ್ಕ್ಯೂಟ್ ಗೆ ಅಳವಡಿಸಿದಾಗ ಒಂದು ಸೆಕೆಂಡಿಗೆ ೩೨ ಸಾವಿರದಷ್ಟು ಕಂಪನಗಳನ್ನು ಸೃಷ್ಟಿಸುತ್ತದೆ.ಈ ಗುಣವನ್ನೇ ಬಳಸಿಕೊಂಡು ಕ್ವಾರ್ಟ್ಸ್ ಹರಳಿನ ಕಂಪನಗಳನ್ನು ನಿಯಂತ್ರಿಸಿ)ಸೆಕೆಂಡಿಗೆ ಒಂದು ಬಾರಿಯಂತೆ ಕಂಪಿಸುವಂತೆ ಏರ್ಪಾಟು ಮಾಡಿ ಗಡಿಯಾರ ನಿರ್ಮಿಸುತ್ತಾರೆ. ಕ್ವಾರ್ಟ್ಸ್ ಗಡಿಯಾರ ಹಗುರ ಮತ್ತು ಕರಾರುವಾಕ್ಕಾಗಿ ಕಾಲವನ್ನು ಅಳೆಯುತ್ತದೆ. ಸ್ಷ್ರಿಂಗ್ ಗಡಿಯಾರಗಳಂತೆ ಈ ಗಡಿಯಾರಗಳಿಗೆ ಕೀ ಕೊಡುವ ಅಗತ್ಯವಿರುವುದಿಲ್ಲ. ನೀವು ಗಮನೀಸದೆಯೇ ಸಾಕಷ್ಟು ದೀರ್ಘ ಗಡಿಯಾರ ಚಾಲನೆಯಲ್ಲಿರುತ್ತದೆ. ಕ್ವಾರ್ಟ್ಸ್ ಅನ್ನು ಗೋಡೆ ಗಡಿಯಾರ, ಕೈಗಡಿಯಾರ, ಗೋಪುರ ಗಡಿಯಾರ ಎಲ್ಲವುಗಳಲ್ಲೂ ಅಳವಡಿಸಬಹುದಾಗಿದೆ. ಈ ಆಧುನಿಕ ಕಾಲದಂತೂ ಕೈ ಗಡಿಯಾರಗಳೆಲ್ಲಾ ಬಹುತೇಕ ಕ್ವಾರ್ಟ್ಸ್ನಲ್ಲೇ ಆಗಿರುತ್ತವೆ. ಈ ಕಾಲಮಾಪನ ಗಡಿಯಾರಗಳು ಇಂದಿನ ಕಾಲ್ಲಕ್ಕೆ ಆಧುನಿಕ ಜಗತ್ತಿನ ಮಹತ್ತರ ಕೊಡುಗೆ ಎನ್ನಬಹುದಾಗಿದೆ.
ಆಧುನಿಕ ಕಾಲಮಾಪನ:
ಬದಲಾಯಿಸಿವಿಜ್ಞಾನ ತಂತ್ರಜ್ಞಾನಗಳು ಅಭಿವೃದ್ದಿಯಾದಂತೆ ಕಾಲವನ್ನು ಅಳೆಯುವ ಗಡಿಯಾರ ಮುಂತಾದ ಸಾಧನಗಳ ಸೂಕ್ಷ್ಮತೆ ಹೆಚ್ಚ ತೊಡಗಿತು. ಡಿಜಿಟಲ್ ತಂತ್ರಜ್ಞಾನದಿಂದಾಗಿ ಹೆಚ್ಚು ಹಗುರವಾದ ಯಂತ್ರಗಳ ಬಳಕೆ, ಹೆಚ್ಚು ನಿಖರವಾದ ಕಾಲದ ಅಳತೆ ಈಗ ಸಾಧ್ಯವಾಗಿದೆ. ವೈವಿಧ್ಯಮಯ ಹೈಟೆಕ್ ಕಾಲಮಾಪನ ಯಂತ್ರಗಳು ಈಗ ಬಳಕೆಗೆ ಬಂದಿದೆ. ನಿಮಗೆ ಬೇಕಾದಾಗ ಗಂಟೆ, ನಿಮಿಷ, ಕ್ಷಣಗಳನ್ನು ಕೂಗಿ ನಿಮಗೆ ಹೇಳಬಲ್ಲ ಮಾತನಾಡುವ ಗಡಿಯಾರಗಳನ್ನು ಈಗ ತಯಾರಿಸಲಾಗಿದೆ. ಜಪಾನಿನಲ್ಲಾಗಲೇ ಆ ದೇಶದ ದೂರದರ್ಶನ ಬಿತ್ತರಿಸುವ ಕಾರ್ಯಾಕ್ರಮಗಳನ್ನು ನೋಡಲು ಟಿ.ವಿ. ಪರದೆ ಇರುವ ಗಡಿಯಾರ ಮಾರುಕಟ್ಟೆಗೆ ಬಂದು ಬಹಳ ಕಾಲವಾಯಿತು. ಕಿವುಡರಿಗಾಗಿ, ಕುರುಡರಿಗಾಗಿ ವಿಶಿಷ್ಟ ಬಗೆಯ ಕಾಲೆಮಾಪನದ ಗಡಿಯಾರ ಯಂತ್ರಗಳನ್ನು ತಯಾರಿಸಲಾಗಿದೆ.ತೀರಾ ಈಚಿನ ಬೆಳವಣೆಗೆಗಳೆಂದರೆ,' ಸ್ವಿಚ್ ಟಾಕ್ ' ಎಂಬ ಗಡಿಯಾರ ನಿಮ್ಮ ಕೈಯಲ್ಲಿರುವ ಈ ಗಡಿಯಾರ ಟೆಲಿಫೋನಂತೆ ಅಥವ ಮೊಬೈಲ್ ಫೋನ್ನಂತೆಯೂ ಕೆಲಸ ಮಾಡುತ್ತದೆ. ಕಾಲವನ್ನು ಅತ್ಯಂತ ನಿಖರವಾಗಿ ತೋರಬಲ್ಲ, ನ್ಯಾನೋ ಸೆಕೆಂಡನ್ನೂ (೧ ಸೆಕೆಂಡಿನ ೧೦ ಲಕ್ಷದಲ್ಲಿ ಒಂದು ಭಾಗವೇ ೧ ನ್ಯಾನೋ ಸೆಕೆಂಡ್ !) ಅಳೆಯಬಲ್ಲ ಪರಮಾಂಣು ಗಡಿಯಾರ ಇಂದಿನ ಆತ್ಯಾಧುನಿಕ ವಿಜ್ಞಾನ ತಂತ್ರಜ್ಞಾನ ಕೂಡುಗೆಯಾಗಿದೆ. ಇದರ ನಿಖರತೆ ಎಷ್ಟೆಂದರೆ ೩೦,೦೦೦ ವರ್ಷಗಳಲ್ಲಿ ೧ ಸೆಕೆಂಡನಷ್ಟು ಮಾತ್ರ ವ್ಯತ್ಯಾಸವಾಗಬಹುದಷ್ಟೆ ! ಅಮೆರಿಕಾದ ವಿಜ್ಞನಿ ಡಾ|| ಹೈಲಾಡ್ ಪ್ರಥಮ ಬಾರಿಗೆ ಈ ಪರಮಾಣು ಗಡಿಯಾರವನ್ನು ೧೯೪೯ರಲ್ಲಿ ನಿರ್ವಿಸಿದರು. ನಾಗರಿಕತೆಯ ಬೆಳವಣೆಗೆಯಲ್ಲಿ ಕಾಲವನ್ನು ಅಳೆಯಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ ಮನುಷ್ಯ ತನ್ನ ನಿರಂತರ ಶೋಧನೆಯಿಂದ ನಿಖರವಾದ ಕಾಲಮಾಪನವನ್ನು ಅರಿತುಕೊಂಡ. ಕಾಲದ ನಿಖರ ಅಳತೆಯು ಸಾಧ್ಯಾವಾಗಿದ್ದರಿಂದ ಮನುಕುಲದ ಆಭಿವೃದ್ದ್ಧಿಯ ವೇಗವೊ ಹೆಚ್ಚಿತು. ಟಿಕ್.... ಟಿಕ್.... ಗಡಿಯಾರದ ಸದ್ದು ಒಂದು ರೀತಿಯಲ್ಲಿ ಮನುಷ್ಯನ ಅನ್ವೇಷಣೆಯ ಜಾಗೃತ ಹೃದಯದ ಸಪ್ಪಳ ಅನ್ನಬಹುದಲ್ಲವೇ ?
ಛಾಯಾಚಿತ್ರಶಾಲೆ
ಬದಲಾಯಿಸಿ-
ಕ್ವಾರ್ಟ್ಜ್ ಕೈ ಗಡಿಯಾರ
-
ಟ್ರಿಟಿಯಂ ಕೈ ಗಡಿಯಾರ
-
ಆಟೋಮಾಟಿಕ್ ೨೧ ಜೂವೆಲ್ಸು ವಾಚ್
-
ಡಿಜಿಟಲ್ ಕೈ ಗಡಿಯಾರ
-
ಕುಡ್ಯ ಗಡಿಯಾರ
-
ಟೇಬುಲ್ ಕ್ಲಾಕ್