ಲೋಲಕ
ಲೋಲಕ ಎಂದರೆ ಮುಕ್ತವಾಗಿ ಜೋಲಾಡಲು ಆಗುವಂತೆ ತಿರುಗಣೆಯಿಂದ ತೂಗಿಬಿಡಲಾಗುವ ಭಾರ.[೧] ಅದರ ವಿಶ್ರಾಂತಿ ಸ್ಥಾನ, ಅಥವಾ ಸಮತೋಲನ ಸ್ಥಾನದಿಂದ ಲೋಲಕವನ್ನು ಪಾರ್ಶ್ವಕ್ಕೆ ಸ್ಥಳಾಂತರಿಸಿದಾಗ, ಅದು ಗುರುತ್ವದ ಕಾರಣ ಪುನಃಸ್ಥಿತಿಗೆ ತರುವ ಬಲಕ್ಕೆ ಒಳಪಡುತ್ತದೆ. ಇದರ ಕಾರಣ ಆ ಲೋಲಕವು ಸಮತೋಲನ ಸ್ಥಾನದತ್ತ ವೇಗಗೊಂಡು ಸಾಗುತ್ತದೆ. ಬಿಡುಗಡೆಗೊಳಿಸಿದಾಗ, ಲೋಲಕದ ದ್ರವ್ಯರಾಶಿಯ ಮೇಲೆ ಕಾರ್ಯನಿರ್ವಹಿಸುವ ಪುನಃಸ್ಥಿತಿ ಬಲವು ಅದು ಸಮತೋಲನ ಸ್ಥಾನದ ಸುತ್ತಮುತ್ತ ಓಲಾಡುವಂತೆ ಮಾಡುತ್ತದೆ, ಹಾಗಾಗಿ ಅದು ಹಿಂದೆ ಮುಂದೆ ತೂಗಾಡುತ್ತದೆ. ಒಂದು ಸಂಪೂರ್ಣ ಆವರ್ತ, ಅಂದರೆ ಒಂದು ಎಡ ತೂಗಾಟ ಮತ್ತು ಒಂದು ಬಲ ತೂಗಾಟಕ್ಕೆ ಬೇಕಾದ ಸಮಯವನ್ನು ಆವರ್ತಕಾಲವೆಂದು ಕರೆಯಲಾಗುತ್ತದೆ. ಆವರ್ತಕಾಲವು ಲೋಲಕದ ಉದ್ದ ಮತ್ತು ಸ್ವಲ್ಪ ಮಟ್ಟಿಗೆ ಲೋಲಕದ ತೂಗಾಟದ ಅಗಲವಾದ ವೈಶಾಲ್ಯವನ್ನು ಅವಲಂಬಿಸಿರುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "Pendulum". Miriam Webster's Collegiate Encyclopedia. Miriam Webster. 2000. p. 1241. ISBN 978-0-87779-017-4.
Pendulums ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.