ಕರ್ನಾಟಕದ ಮಹಾನಗರಪಾಲಿಕೆಗಳು
ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ ೨ ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ ೧ ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ ೩ ಲಕ್ಷ ಜನಸಂಖ್ಯೆ ಇರಬೇಕು. ನಗರದ ಕಂದಾಯ ೬ ಕೋಟಿ ರೂಪಾಯಿಗಳಿಗೂ ಮಿಕ್ಕಿರಬೇಕು ಮತ್ತು ಜನಸಾಂದ್ರತೆ ಪ್ರತಿ ಚದರ ಕಿ.ಮಿ.ಗೆ ೩೦೦೦ ಮಿಕ್ಕಿರಬೇಕು.
ಕರ್ನಾಟಕದಲ್ಲಿ ೨೦೧೧ರಲ್ಲಿರುವಂತೆ ರಾಜಧಾನಿ ಬೆಂಗಳೂರು ಸೇರಿದಂತೆ ೧೧ ನಗರಗಳು ಮಹಾನಗರಪಾಲಿಕೆ ಸ್ಥಾನಮಾನ ಹೊಂದಿವೆ.
ಕರ್ನಾಟಕದಲ್ಲಿರುವ ಮಹಾನಗರಪಾಲಿಕೆಗಳು
ಬದಲಾಯಿಸಿನಗರ | ಪಾಲಿಕೆ | ಜನಸಂಖ್ಯೆ(೨೦೦೧ ಜನಗಣತಿ) | ಪಾಲಿಕೆಯಾದ ವರ್ಷ | ||
---|---|---|---|---|---|
ಬೆಂಗಳೂರು | ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ; ಬೆಂಗಳೂರು ಮಹಾನಗರ ಪಾಲಿಕೆ | ೬೮ ಲಕ್ಷ | ೨೦೦೭ | ||
ಹುಬ್ಬಳ್ಳಿ - ಧಾರವಾಡ | ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ | ೭.೮೬ ಲಕ್ಷ | ೧೯೬೨ | ||
ಮೈಸೂರು | ಮೈಸೂರು ಮಹಾನಗರ ಪಾಲಿಕೆ | ೮ ಲಕ್ಷ | ೧೯೭೭ | ||
ಮಂಗಳೂರು | ಮಂಗಳೂರು ಮಹಾನಗರ ಪಾಲಿಕೆ | ೫.೩೮ ಲಕ್ಷ | ೧೯೮೩ | ||
ಬೆಳಗಾವಿ | ಬೆಳಗಾವಿ ಮಹಾನಗರ ಪಾಲಿಕೆ | ೫.೬೪ ಲಕ್ಷ | ೧೯೮೮ | ||
ಗುಲ್ಬರ್ಗಾ | ಗುಲ್ಬರ್ಗಾ ಮಹಾನಗರ ಪಾಲಿಕೆ | ೪.೨೭ ಲಕ್ಷ | ೧೯೯೬ | ||
ಬಳ್ಳಾರಿ | ಬಳ್ಳಾರಿ ಮಹಾನಗರಪಾಲಿಕೆ | ೩.೧೭ ಲಕ್ಷ | ೨೦೦೩ | ||
ದಾವಣಗೆರೆ | ದಾವಣಗೆರೆ ಮಹಾನಗರ ಪಾಲಿಕೆ | ೩.೬೪ ಲಕ್ಷ | ೨೦೦೭ | ||
ತುಮಕೂರು | ತುಮಕೂರು ಮಹಾನಗರ ಪಾಲಿಕೆ | ೩.೪೮ ಲಕ್ಷ | ೨೦೦೯ | ||
ಶಿವಮೊಗ್ಗ | ಶಿವಮೊಗ್ಗ ಮಹಾನಗರ ಪಾಲಿಕೆ | ೩.೩೪ ಲಕ್ಷ | ೨೦೦೯ | ||
ಬಿಜಾಪುರ | ಬಿಜಾಪುರ ಮಹಾನಗರ ಪಾಲಿಕೆ | ೩.೨೮ ಲಕ್ಷ | ೨೦೧೧ | ಉಡುಪಿ
ಉಡುಪಿ ಮಹಾನಗರ ಪಾಲಿಕೆ |
.೪.೩೪ ಲಕ್ಷ
೨೦೨೩ ==ಮಹಾನಗರಪಾಲಿಕೆಗಳಾಗಿ ಭಡ್ತಿಗೊಳ್ಳಬೇಕಿರುವ ನಗರಗಳು==ಬದಲಾಯಿಸಿರಾಯಚೂರು, ಬೀದರ್ ,ಮಂಡ್ಯ ಉಡುಪಿ ಕುಂದಾಪುರ Hassan ತೆಕ್ಕಟ್ಟೆ, ನಗರಗಳು ೨ ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದ್ದು ಮುಂದಿನ ೫ ವರ್ಷಗಳಲ್ಲಿ ಭಡ್ತಿ ಹೊಂದುವ ಸಾಧ್ಯತೆ ಇವೆ. ಮುಂದಿನ ನಗರಗಳಲ್ಲಿ ಜನಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಮಹಾನಗರಪಾಲಿಕೆ ಹೊಂದುವ ಅರ್ಹತೆಯನ್ನು ಪಡೆಯಲಿವೆ. ಉಲ್ಲೇಖಗಳುಬದಲಾಯಿಸಿ[೧] Archived 2008-03-30 ವೇಬ್ಯಾಕ್ ಮೆಷಿನ್ ನಲ್ಲಿ. [೨] Archived 2009-02-13 ವೇಬ್ಯಾಕ್ ಮೆಷಿನ್ ನಲ್ಲಿ. ವರ್ಗ:ಮಹಾನಗರಪಾಲಿಕೆಗಳು |