ಕನ್ನಡ ಪುಸ್ತಕ ಪ್ರಾಧಿಕಾರ

ಜ್ಞಾನ ಸಂಪತ್ತು

ಕನ್ನಡ ಪುಸ್ತಕ ಪ್ರಾಧಿಕಾರ ೧೯೯೩ರಲ್ಲಿ ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಪ್ರಕಟಣಾಲಯ. ಇದು ಹಲವಾರು ಕನ್ನಡ ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ಪ್ರಕಟಿಸಿದೆ.

ಕರ್ನಾಟಕ ಸರ್ಕಾರದಿಂದ 1993 ಅಕ್ಟೋಬರ್ 20ರಂದು ಅಸ್ತಿತ್ವಕ್ಕೆ ಬಂದ ಸ್ವಾಯತ್ತ ಸಂಸ್ಥೆ.

ಉದ್ದೇಶ, ಆಶಯಗಳು

ಬದಲಾಯಿಸಿ

ಪುಸ್ತಕ ಸಂಸ್ಕೃತಿಯನ್ನು ಹುಟ್ಟುಹಾಕುವುದು, ಬೆಳೆಸುವುದು ಹಾಗೂ ಪರಿಚಲನೆಗೊಳಿಸುವುದು ಇದರ ಉದ್ದೇಶ. ವಿಶೇಷವಾಗಿ ಕನ್ನಡದಲ್ಲಿ ಲೇಖಕ, ಪ್ರಕಾಶಕ, ಮಾರಾಟಗಾರ ಹಾಗೂ ಓದುಗರ ನಡುವಿನ ಸಂಬಂಧವನ್ನು ಹೆಚ್ಚಿಸುವುದೂ ನಾಡಿನಾದ್ಯಂತ ವಾಚಕರಿಗೆ ಒಳ್ಳೆಯ ಗ್ರಂಥಗಳು ಸುಲಭ ಬೆಲೆಗೆ ದೊರೆಯುವಂತೆ ನೋಡಿಕೊಳ್ಳುವುದೂ ಈ ಮೂಲಕ ಕನ್ನಡ ಪುಸ್ತಕೋದ್ಯಮ ಪ್ರಪಂಚವನ್ನು ಜನಪರಗೊಳಿಸುವುದೂ ಇದರ ಆಶಯಗಳು. ಕನ್ನಡ ಪುಸ್ತಕ ಪ್ರಕಾಶಕರ ಆರ್ಥಿಕ ಹಾಗೂ ಬೌದ್ಧಿಕ ಶ್ರಮಕ್ಕೆ ನೆರವಾಗುವ ಸಲುವಾಗಿ ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳ ಸಗಟು ಖರೀದಿ ಮಾಡುವುದು, ಖರೀದಿಸಿದ ಕೃತಿಗಳನ್ನು ನಾಡಿನ ಸಾರ್ವಜನಿಕ ಗ್ರಂಥಾಲಯಗಳಿಗೂ ಶಾಲೆ-ಕಾಲೇಜು ಹಾಗೂ ಸಂಘ ಸಂಸ್ಥೆಗಳಿಗೂ ವಿತರಿಸುವುದು, ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ, ಮಾನವಿಕ ಮುಂತಾದ ವಿವಿಧ ಜ್ಞಾನ ಶಿಸ್ತುಗಳಲ್ಲಿ ಪರಿಣತರಾದ ವಿದ್ವಾಂಸರಿಂದ ಪುಸ್ತಕಗಳನ್ನು ಬರೆಸುವುದು, ಯುವ ಪ್ರತಿಭೆಗಳನ್ನು ಗುರುತಿಸಿ ಅವರ ಕೃತಿಗಳ ಪ್ರಕಟಣೆಗಾಗಿ ಧನಸಹಾಯ, ಸಾಲ, ಅನುದಾನ ಹಾಗೂ ಬಹುಮಾನಗಳನ್ನು ನೀಡಿ ಅವರಿಗೆ ಉತ್ತೇಜನ ನೀಡುವುದು, ಸರ್ಕಾರಿ, ಅರೆ ಸರ್ಕಾರಿ, ವಿಶ್ವವಿದ್ಯಾಲಯ ಹಾಗೂ ಖಾಸಗಿ ಸಂಘಸಂಸ್ಥೆಗಳ ಸಹಕಾರದೊಂದಿಗೆ ಪುಸ್ತಕೋದ್ಯಮದ ಆಂದೋಲನಕ್ಕೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಿ ಈ ಉದ್ಯಮವನ್ನು ವಿಸ್ತರಿಸುವುದೂ ಪ್ರಾದಿsಕಾರದ ಆಶಯವಾಗಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಕೆಲವು ಯೋಜನೆಗಳನ್ನು ರೂಪಿಸಿಕೊಂಡಿದೆ .

ಯೋಜನೆಗಳು

ಬದಲಾಯಿಸಿ

1. ಪುಸ್ತಕ ಪ್ರಕಟಣೆ: ವಿಷಯದ ಸಂವಹನದ ದೃಷ್ಟಿಯಿಂದ ಕೃತಿ ಸರಳ ವಾಗಿದ್ದು ಅದನ್ನು ಕೊಂಡು ಓದುವ ಹಾಗೆ ಮಾಡಬೇಕೆಂಬ ದೃಷ್ಟಿಯಿಂದ ಅಗ್ಗದ ಬೆಲೆಯಲ್ಲಿ ಸುಲಭವಾಗಿ ದೊರೆಯುವಂತೆ ಮಾಡುವ ಜನಪ್ರಿಯ ಪುಸ್ತಕ ಮಾಲೆ, ಎಲ್ಲರೂ ಕಡ್ಡಾಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಷಯಗಳನ್ನೊಳಗೊಂಡ ಮೂಲಭೂತ ಶೈಕ್ಷಣಿಕ ಮಾಲೆ, ವೈಜ್ಞಾನಿಕ ವಿಚಾರಗಳನ್ನು ಒಳಗೊಂಡ ವಿಜ್ಞಾನ ದೀಪಮಾಲೆ, ವಿಶೇಷವಾಗಿ ಮಕ್ಕಳ ಮನಸ್ಸನ್ನು ಅರಳಿಸಬಲ್ಲ ಹಾಗೂ ಅವರ ಪ್ರತಿಭೆಯನ್ನು ಉದ್ದೀಪನಗೊಳಿಸಬಲ್ಲ ಮಕ್ಕಳ ಪುಸ್ತಕ ಮಾಲೆ, ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳನ್ನು ಪ್ರಕಟಿಸುವ ಪಂಪ ಪ್ರಶಸ್ತಿ ಕೃತಿ ಮಾಲೆ, ನೋಬೆಲ್ ಪುರಸ್ಕೃತ ಸಾಹಿತ್ಯಮಾಲೆ, ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಮಾಲೆಗಳು ಈ ನಿಟ್ಟಿನಲ್ಲಿ ಕೆಲವು ಮುಖ್ಯ ಪ್ರಯತ್ನಗಳು. ಗ್ರಾಮ ಸಂಸ್ಕೃತಿ ಮಾಲೆ, ಸಾಮಾನ್ಯರಿಗೆ ಕಾನೂನು ಮಾಲೆಗಳ ಅಡಿಯಲ್ಲಿ ಅನೇಕ ಕೃತಿಗಳನ್ನೂ ಅನುವಾದಗಳನ್ನೂ ಪ್ರಕಟಿಸಿಲಾಗುತ್ತಿದೆ.

2. ಪುಸ್ತಕ ಸಗಟು ಖರೀದಿ ಮತ್ತು ಕೊಡುಗೆ: ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ಪ್ರಥಮಾವೃತ್ತಿ ಗ್ರಂಥಗಳನ್ನು ಸಗಟಾಗಿ ಖರೀದಿಸಿ ಲೇಖಕ ಪ್ರಕಾಶಕರಿಗೆ ನೆರವು ನೀಡುವುದು, ಹೀಗೆ ಖರೀದಿಸಿದ ಗ್ರಂಥಗಳನ್ನು ನಾಡಿನ ಸಾರ್ವಜನಿಕ ಗ್ರಂಥಾಲಯಗಳಿಗೂ ದಲಿತ ಮತ್ತು ಹಿಂದುಳಿದ ವರ್ಗಗಳು ಹಾಗೂ ಗ್ರಾಮೀಣ ಪ್ರದೇಶದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸಾಹಿತ್ಯ ಪರಿಷತ್ತಿನ ಗ್ರಂಥಾಲಯಕ್ಕೂ ಹೊರನಾಡಿನ ಕನ್ನಡ ಸಂಘ ಸಂಸ್ಥೆಗಳು ಸ್ಥಾಪಿಸಿದ ಗ್ರಂಥಾಲಯಗಳಿಗೂ ಉಚಿತವಾಗಿ ವಿತರಿಸುವುದು ಈ ಯೋಜನೆಯ ಮೂಲೋದ್ದೇಶ.

3. ಪುಸ್ತಕ ಪ್ರಕಟಣೆ ಸಹಾಯ: ಉದಯೋನ್ಮುಖ ಬರೆಹಗಾರರಿಗೆ ಮತ್ತು ಉತ್ತಮ ಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಲೇಖಕರ ಮೊದಲ ಪುಸ್ತಕ ಪ್ರಕಟಣೆಗಾಗಿ ಆರ್ಥಿಕ ನೆರವು ನೀಡಲಾಗುತ್ತದೆ. ಅಪರೂಪವÆ ಅಲಭ್ಯವÆ ಆದ ಗ್ರಂಥಗಳನ್ನೂ ಮಕ್ಕಳ ಕೃತಿಗಳನ್ನೂ ಪ್ರಾದಿsಕಾರವೇ ಪ್ರಕಟಿಸುವುದರ ಜೊತೆಗೆ ಖಾಸಗಿ ಪ್ರಕಾಶಕರಿಗೆ ವಿವಿಧ ರೂಪದ ಆರ್ಥಿಕ ಸಹಾಯ ನೀಡಲಾಗುತ್ತದೆ. ಹಾಗೆಯೇ ಸೃಜನೇತರ ಸಾಹಿತ್ಯ ಪ್ರಕಾರಗಳಾದ ಜಾನಪದ, ವಿe್ಞÁನ, ಇತಿಹಾಸ, ಸಂಶೋಧನಾತ್ಮಕ ಕೃತಿಗಳಿಗೆ ಸಹಾಯಧನ ನೀಡುವ ಯೋಜನೆಯೂ ರೂಪುಗೊಂಡಿದೆ.

4. ಪುಸ್ತಕಗಳ ಪ್ರಚಾರ ಹಾಗೂ ಮೇಳ: ವಿವಿಧ ಸಂಘ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಹಾಗೂ ಗಡಿಭಾಗಗಳಲ್ಲಿ ಪುಸ್ತಕ ಮಾರಾಟ ಆಂದೋಲನದ ಅಂಗವಾಗಿ ಒಂದುವಾರಕಾಲ ವಾರ್ಷಿಕ ಪುಸ್ತಕ ಮೇಳವನ್ನು ನಡೆಸಲಾಗುತ್ತದೆ. ಇದರಲ್ಲಿ ಎಲ್ಲ ಪುಸ್ತಕ ಪ್ರಕಾಶಕರನ್ನು ಬರಮಾಡಿಕೊಂಡು ಪುಸ್ತಕೋದ್ಯಮದ ಸಾಧಕ -ಬಾಧಕಗಳನ್ನು ಮನನ ಮಾಡಿಕೊಡುವುದೂ ಈ ಯೋಜನೆಯ ಉದ್ದೇಶವಾಗಿದೆ.

5. ಸಂಚಾರಿ ಹಾಗೂ ಗ್ರಂಥ ಸರಸ್ವತಿ ಮಳಿಗೆಗಳು: ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಕನ್ನಡ ಪುಸ್ತಕಗಳ ಮಾರಾಟ ಹಾಗೂ ಪ್ರದರ್ಶನಕ್ಕಾಗಿ ಸಂಚಾರಿ ಪುಸ್ತಕ ಮಳಿಗೆಗಳನ್ನೂ ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಗ್ರಂಥ ಸರಸ್ವತಿ ಹೆಸರಿನ ಮಳಿಗೆಗಳನ್ನೂ ಅನುಷ್ಠನಗೊಳಿಸಲಾಗಿದೆ. ಈಗಾಗಲೇ ದಾವಣಗೆರೆ ಬಸ್ ನಿಲ್ದಾಣದಲ್ಲಿ ಮಳಿಗೆ ಆರಂಭವಾಗಿದೆ. ಹಾಸನದಲ್ಲಿ ಸಂಸತ್ ಸದಸ್ಯರ ಅನುದಾನದಿಂದ ಮಳಿಗೆ ನಿರ್ಮಿಸುವ ಪ್ರಯತ್ನಗಳು ನಡೆಸಿವೆ. ಈ ಯೋಜನೆಯಿಂದ ಪುಸ್ತಕಗಳನ್ನು ವಾಚಕರಿಗೆ ಸುಲಭವಾಗಿ ಒದಗಿಸುವುದರ ಜೊತೆಗೆ ಕೆಲವರಿಗೆ ಸ್ವಾವಲಂಬಿ ಉದ್ಯೋಗಾವಕಾಶವನ್ನು ದೊರಕಿಸಿ ಕೊಡುತ್ತಿದೆ.

6. ಪುಸ್ತಕ ಸಂಸ್ಕೃತಿ ಪ್ರಸಾರಪ್ರೋತ್ಸಾಹ: ರಾಜ್ಯಾದ್ಯಂತ ವಿಚಾರ ಸಂಕಿರಣಗಳು, ಕಮ್ಮಟಗಳು, ಸಭೆಸಮಾರಂಭಗಳು ಹಾಗೂ ಸಂವಾದಗಳನ್ನು ಏರ್ಪಡಿಸುವುದರ ಮೂಲಕ ಪುಸ್ತಕ ಸಂಸ್ಕೃತಿಯ ಮಹತ್ವದ ಪರಿಚಯ ಮಾಡಿಕೊಡಲಾಗುತ್ತಿದೆ. ಸಗಟು ಹಾಗೂ ವಿಶೇಷ ಖರೀದಿ ಯೋಜನೆಯಡಿಯಲ್ಲಿ ಲೇಖಕ - ಪ್ರಕಾಶಕರಿಗೆ ಸಹಾಯ ಮಾಡುವುದು, ಅತ್ಯುತ್ತಮ ಪ್ರಕಾಶಕರನ್ನು ಗುರುತಿಸಿ 25 ಸಾವಿರ ರೂಪಾಯಿಗಳ ಮೊತ್ತ ಪ್ರಶಸ್ತಿ ನೀಡುವುದು - ಇವು ಕೂಡ ಪ್ರಾದಿsಕಾರದ ಕಾರ್ಯಭಾಗವಾಗಿದೆ. ಇದುವರೆಗೆ ಈ ಪ್ರಶಸ್ತಿಯನ್ನು ಬೆಂಗಳೂರಿನ ಕ್ರೈಸ್ಟ್‌ ಕಾಲೇಜು ಕನ್ನಡ ಸಂಘ (1998), ಮೈಸೂರಿನ ತಳುಕಿನ ವೆಂಕಣ್ಣಯ್ಯ ಸ್ಮಾರಕ ಪ್ರತಿಷಾವಿನ (1999), ಬೆಂಗಳೂರಿನ ಸಪ್ನಾ ಬುಕ್ ಹೌಸ್ (2000) ಮೈಸೂರಿನ ಸಂವಹನ ಮತ್ತು ಬಳ್ಳಾರಿಯ ಲೋಹಿಯಾ ಪ್ರಕಾಶನ ಸಂಸ್ಥೆಗಳು ಪಡೆದುಕೊಂಡಿವೆ (2003). ಅಚ್ಚುಕಟ್ಟಾಗಿ ಮುದ್ರಣಗೊಂಡ ಹಾಗೂ ಸೊಗಸಾದ ಮುಖಪುಟ ವಿನ್ಯಾಸವುಳ್ಳ ಕೃತಿಗಳಿಗೆ 15 ಸಾವಿರ ರೂಗಳ ಮೊದಲನೆಯ, 10 ಸಾವಿರ ರೂಗಳ ಎರಡನೆಯ ಹಾಗೂ 5 ಸಾವಿರ ರೂಗಳ ಮೂರನೆಯ ಬಹುಮಾನ ನೀಡಲಾಗುತ್ತಿದೆ. 5 ಸಾವಿರ ರೂಪಾಯಿಗಳ ಮೊತ್ತದ ಬಹುಮಾನವನ್ನು ವಿಶೇಷವಾಗಿ ಮಕ್ಕಳ ಪುಸ್ತಕಗಳಿಗಾಗಿಯೇ ಮೀಸಲಿರಿಸಲಾಗಿದೆ.

7. ಪ್ರಾಧಿಕಾರದ ಪದಾಧಿಕಾರಿಗಳು: ಒಬ್ಬರು ಅಧ್ಯಕ್ಷರು, ಹದಿಮೂರು ಮಂದಿ ಸದಸ್ಯರು ಮತ್ತು ಒಬ್ಬರು ಸಂಚಾಲಕರನ್ನು ಒಳಗೊಂಡಂತೆ ಪದಾದಿsಕಾರಿಗಳ ಸಮಿತಿಯ ರಚನೆಯಾಗಿರುತ್ತದೆ. ಪ್ರತಿ ಮೂರು ವರ್ಷಗಳ ಅವದಿsಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಮಾಡಲಾಗುತ್ತದೆ. ಪುಸ್ತಕ ಚಿಂತಕರು, ಪುಸ್ತಕ ಪ್ರೇಮಿಗಳು ಹಾಗೂ ವಿದ್ವಾಂಸರನ್ನೊಳಗೊಂಡಂತೆ ಸರಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ನಿರ್ದೇಶನಾಲಯದ ನಿರ್ದೇಶಕರು ಮತ್ತು ಕರ್ನಾಟಕ ಪುಸ್ತಕ ಪ್ರಕಾಶಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಇದರ ಸಂಚಾಲಕತ್ವವನ್ನು ಪ್ರಾದಿsಕಾರದ ಆಡಳಿತಾಧಿಕಾರಿಗಳಿಗೆ ವಹಿಸಿಕೊಡಲಾಗಿರುತ್ತದೆ.

ಪ್ರಶಸ್ತಿಗಳು

ಬದಲಾಯಿಸಿ
ಕ್ರ.ಸಂ ಪ್ರಶಸ್ತಿಯ ಹೆಸರು
ಅತ್ಯುತ್ತಮ ಪ್ರಕಾಶನ ಪ್ರಶಸ್ತಿ
ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ
ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ
ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ
ಪುಸ್ತಕ ಸೊಗಸು ಪ್ರಥಮ ಬಹುಮಾನ
ಪುಸ್ತಕ ಸೊಗಸು ದ್ವಿತೀಯ ಬಹುಮಾನ
ಪುಸ್ತಕ ಸೊಗಸು ತೃತೀಯ ಬಹುಮಾನ
ಪುಸ್ತಕ ಸೊಗಸು ನಾಲ್ಕನೇ ಬಹುಮಾನ (ಮುಖಪುಟ ಚಿತ್ರ ವಿನ್ಯಾಸ ಪ್ರಥಮ ಬಹುಮಾನ)
ಪುಸ್ತಕ ಸೊಗಸು ಐದನೇ ಬಹುಮಾನ (ಮುಖಪುಟ ಚಿತ್ರ ಕಲೆಯ ದ್ವಿತೀಯ ಬಹುಮಾನ)
೧೦ ಮಕ್ಕಳ ಪುಸ್ತಕ ಸೊಗಸು ಬಹುಮಾನ


ಇದುವರೆಗೆ ಪ್ರಾಧಿಕಾರ ಪ್ರಕಟಿಸಿರುವ ಪುಸ್ತಕಗಳ ಪಟ್ಟಿ

ಬದಲಾಯಿಸಿ
ಕ್ರ. ಸಂ. ಕೃತಿಯ ಶೀರ್ಷಿಕೆ ಲೇಖಕರ ಹೆಸರು ಬೆಲೆ ವರ್ಷ ದಾಸ್ತಾನು ಲಭ್ಯತೆ
1 ಜಾನಪದ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಗಳು ಡಾ. ನಿಂಗಣ್ಣ ಸಣ್ಣಕ್ಕಿ 40 ಇಲ್ಲ
2 ನಕ್ಷತ್ರ ದರ್ಶನ ಆರ್.ಎಲ್.ನರಸಿಂಹಯ್ಯ 34 ಇಲ್ಲ
3 ವಚನಾನುಭವ ಪ್ರೊ.ಜಿ.ಎನ್.ಚಕ್ರವರ್ತಿ 13 ಇಲ್ಲ
4 ಗಂಗಾಧರ ಚಿತ್ತಾಲರ ಸಮಗ್ರಕಾವ್ಯ ಎಚ್.ಎಲ್.ಪುಷ್ಪ 40 ಇಲ್ಲ
5 ದೊಡ್ಡರಂಗೇಗೌಡರ ಆಯ್ದ ಕವಿತೆಗಳು ಡಾ. ನಲ್ಲೂರು ಪ್ರಸಾದ್ 60 ಇಲ್ಲ
6 ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳು ಡಾ.ಸಿ.ಆರ್.ಚಂದ್ರಶೇಖರ್ 21 ಇಲ್ಲ
7 ಮಲ್ಲಿಗೆದಂಡೆ ಕಾಪಸೆ ರೇವಪ್ಪ 15 1994 ಇಲ್ಲ
8 ಸಮಗ್ರ ವಚನ ಸಾಹಿತ್ಯ  ಒಟ್ಟು ಸಂಪುಟ- 15 ವಿವಿಧ ಲೇಖಕರು 850 1993 ಇಲ್ಲ
9 ಕಲೆಯ ಗೊಂಚಲು ಬಿ.ವಿ.ಕೆ.ಶಾಸ್ತ್ರಿ 23 1994 ಇಲ್ಲ
10 ಪರಿಸರ ವಿಜ್ಞಾನ ಎಚ್.ಆರ್.ಕೃಷ್ಣಮೂರ್ತಿ 13 1994 ಇಲ್ಲ
11 ಶಬ್ದ-ಶ್ರವಣ ಡಿ.ಆರ್.ಬಳೂರಗಿ 13 1994 ಇಲ್ಲ
12 ಕುಟುಂಬ ಪ್ರೊ.ಎಚ್.ವಿ.ನಾಗೇಶ್ 12 1994 ಇಲ್ಲ
13 ಪ್ರೀತಿ ಗೌರೀಶ ಕಾಯ್ಕಿಣಿ 10 1994 ಇಲ್ಲ
14 ಭಾವೈಕ್ಯ ದೀಪಿಕೆ ಪ್ರೊ.ಎಲ್.ಎಸ್.ಶೇಷಗಿರಿರಾವ್ 20 1994 ಇಲ್ಲ
15 ಭೂಕಂಪನ ಡಾ.ಆರ್.ನಿಜಗುಣಪ್ಪ 14 1994 ಇಲ್ಲ
16 ಸಂಗೀತ ಕಲಾನಿಧಿ ಟಿ.ಚೌಡಯ್ಯ ಎಸ್.ಕೃಷ್ಣಮೂರ್ತಿ 10 1994 ಇಲ್ಲ
17 ವೈದ್ಯನ ವಿದೇಶ ಪ್ರವಾಸ ಡಾ.ಜಿ.ಗೋಪಾಲ್ 11 1994 ಇಲ್ಲ
18 ರೇಬೀಸ್ ಡಾ.ಎಂ.ಕೆ.ಸುದರ್ಶನ್ 14 1994 ಇಲ್ಲ
19 ಖಾಸನೀಸರ ಕಥೆಗಳು ರಾಘವೇಂದ್ರ ಖಾಸನೀಸ 14 1994 ಇಲ್ಲ
20 ಬಹುರೂಪ ವಸುಂಧರ ಗುರುಮೂರ್ತಿ ಪೆಂಡಕೂರ 16 1994 ಇಲ್ಲ
21 ಹಕ್ಕಿ ನೋಟ ದ.ಬಾ.ಕುಲಕರ್ಣಿ 10 1994 ಇದೆ
22 ಬಾಗಲೋಡಿ ದೇವರಾಯರ ಆಯ್ದ ಕಥೆಗಳು ಬಾಗಲೋಡಿ ದೇವರಾಯ 10 1994 ಇಲ್ಲ
23 ಪಂಜರವಳ್ಳಿಯ ಪಂಜು ಕಡಿದಾಳ್ ಮಂಜಪ್ಪ 18 1994 ಇಲ್ಲ
24 ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನರ ಸಾಮಾಜಿಕ ಇತಿಹಾಸ ಪಿ.ಕಮಲಾಕ್ಷ 12 1994 ಇಲ್ಲ
25 ಆಧುನಿಕ ರಸಾಯನ ಶಾಸ್ತ್ರ ಎಸ್.ವೆಂಕಟೇಶ ಮೂರ್ತಿ 19 1994 ಇಲ್ಲ
26 ಯಂತ್ರಗಳು ಎಂ.ಎಸ್.ಎಸ್.ಪ್ರಭು 30 1994 ಇಲ್ಲ
27 ತೈಲ ಪ್ರಪಂಚ ಹೆಚ್.ಜಿ.ಮುರಳೀಧರ 22 1994 ಇಲ್ಲ
28 ಭಾರತೀಯ ಚಿತ್ರಕಲೆ ಡಾ. ಶಿವರಾಮ ಕಾರಂತ 40 1995 ಇಲ್ಲ
29 ಅರ್ಥಶಾಸ್ತ್ರ ಪರಿಚಯ ಪ್ರೊ. ಎಂ.ಸಿ. ಕೊಡ್ಲಿ 19 1995 ಇಲ್ಲ
30 ಶೂನ್ಯ ಸಂಪಾದನೆಯ ಪರಾಮರ್ಶೆ ಪ್ರೊ. ಎಸ್.ಎಸ್.ಭೂಸನೂರು ಮಠ 20 1995 ಇಲ್ಲ
31 ಭಾರತೀಯ ಕಾವ್ಯ ಮೀಮಾಂಸೆ ಪ್ರೊ. ತೀ.ನಂ.ಶ್ರೀಕಂಠಯ್ಯ 15 1995 ಇಲ್ಲ
32 ಪರಾಮರ್ಶೆ ಪ್ರೊ. ಸಂ.ಶಿ.ಭೂಸನೂರು ಮಠ 20 1995 ಇಲ್ಲ
33 ಪಟ್ಟೋಲೆ ಪಳಮೆ ನಡಿಕೇರಿಯಂಡ ಚಿಣ್ಣಪ್ಪ 48 1995 ಇಲ್ಲ
34 ನಕ್ಷತ್ರ ಗಾನ ಡಿ.ಎಸ್.ಕರ್ಕಿ 11 1995 ಇಲ್ಲ
35 ಅಪೂರ್ಣ ವರ್ತಮಾನ ಕಾಲ ಡಾ.ಶಂಕರ್ ಮೊಕಾಶಿ ಪುಣೇಕರ್ 14 1995 ಇದೆ
36 ಆನ್ವಯಿಕ ಜಾನಪದ ಡಾ.ಬಿ.ಎ.ವಿವೇಕ ರೈ 16 1995 ಇದೆ
37 ಋಗ್ವೇದದಲ್ಲಿ ವಿಶ್ವ ಸಾಮರಸ್ಯ ಪ್ರೊ. ಜಿ.ಎಸ್.ಚಕ್ರವರ್ತಿ 18 1995 ಇಲ್ಲ
38 ಹೆತ್ತೊಡಲು ಡಾ.ಬೆಸಗರಹಳ್ಳಿ ರಾಮಣ್ಣ 50 1995 ಇಲ್ಲ
39 ಗಾಂಧಿ ಪ್ರಭಾವ ಸೌರಭ ಕೆ.ಎಸ್.ನಾರಾಯಣಸ್ವಾಮಿ 13 1995 ಇಲ್ಲ
40 ಭಾರತೀಯ ಸಮಾಜ ಡಾ.ಆರ್.ಇಂದಿರಾ 16 1995 ಇದೆ
41 ನಿಮಗಾಗಿ ಗಣಕಗಳು ಬಿ.ಬಿ.ಚಿನ್ಮಯಕುಮಾರ್ 18 1995 ಇಲ್ಲ
42 ವಿಶ್ವಕಿರಣಗಳ ಮಾಯಾಲೋಕ ಡಾ.ಬಿ.ಪಿ.ರಾಧಾಕೃಷ್ಣ 16 1995 ಇಲ್ಲ
43 ಸ್ಟೀಪನ್ ಹಾಕಿಂಗ್ ಡಾ.ವ್ಹಿ.ಎಂ.ಕೋರವಾರ 27 1996 ಇಲ್ಲ
44 ಭಗವಂತಂಡ ಪಾಟ್ ನಡಕೇರಿಯಂಡ ಚಿಣ್ಣಪ್ಪ 23 1996 ಇದೆ
45 ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ 50 1996 ಇದೆ
46 ಪತಿಯಲ್ಲ ಪರಮವೈರಿ ಎನ್ಕೆ 43 1996 ಇದೆ
47 ಮಹಿಳೆಯರ ಅಲಂಕಾರ ಶಾಂತಾದೇವಿ ಮಾಳವಾಡ 25 1996 ಇಲ್ಲ
48 ವರಪ್ರದಾನ ಕಂದಗಲ್ಲ ಹನಮಂತರಾಯ 21 1996 ಇದೆ
49 ಜೀವನ ಕೃಷ್ಣಕುಮಾರ 25 1996 ಇದೆ
50 ನಾಲ್ಕನೆಯ ಆಯಾಮ ಕುಸುಮಾಕರ ದೇವರಗಣ್ಣೂರು 24 1996 ಇದೆ
51 ನಗೆಮುಗಿಲು ಅ.ರಾ.ಸೇ. 18 1996 ಇಲ್ಲ
52 ಶ್ರೀ ಹರಿಚರಿತೆ ಡಾ. ಪು.ತಿ.ನ. 15 1996 ಇಲ್ಲ
53 ಸುವರ್ಣ ಪುತ್ಥಳಿ ಪ್ರೊ. ಗೋಪಾಲಕೃಷ್ಣ ಅಡಿಗ 15 1996 ಇದೆ
54 ಜನಸಂಖ್ಯೆ ಒಂದು ಅಧ್ಯಯನ ಎ.ಎಸ್.ಚಂದ್ರಮೌಳಿ 20 1996 ಇಲ್ಲ
55 ಎರಕ ಹೊಯ್ಯುವಿಕೆ ಡಾ.ಕೆ.ರಾಧಾಕೃಷ್ಣ 17 1996 ಇದೆ
56 ಸಂತಮ್ಮಣ್ಣ ಬೊಳುವಾರುಮಹಮದ್ ಕುಂಞಿ 200 1996 ಇಲ್ಲ
57 ಸೌರಶಕ್ತಿ ಕ.ರಾ.ಮೋಹನ್ 26 1996 ಇಲ್ಲ
58 ಬದಲಿ ಶಕ್ತಿ ಮೂಲಗಳು ಎ.ಒ.ಆವಲ ಮೂರ್ತಿ 21 1996 ಇಲ್ಲ
59 ಚಿಗುರು ಶಿಶು ಗೀತೆಗಳ ಸಂಕಲನ 30 1996 ಇಲ್ಲ
60 ಅರ್ನೆಸ್ಟ್‌ ರುದರ್ಫರ್ಡ್ ಪ್ರೊ. ಎಂ.ಎಸ್.ಕೊಟ್ಲಿ 32 1996 ಇದೆ
61 ವಿಲ್ಹೆಲ್ಮ್‌ ರಾಂಟೀಜನ್ ಬೆ.ಗೊ.ರಮೇಶ್ 24 1997 ಇಲ್ಲ
62 ಜಾನಪದ ಕೈಪಿಡಿ ಡಾ.ಎಚ್.ಜೆ. ಲಕ್ಕಪ್ಪ ಗೌಡ 100 1997 ಇಲ್ಲ
63 ಎಮಿಲಿ ಡಿಕಿನ್ಸನ್ - ನೂರು ಹದಿನಾಲ್ಕು ಕವನಗಳು ಕೆ. ಪದ್ಮನಾಭ ಉಡುಪ 25 1997 ಇಲ್ಲ
64 ನಮ್ಮೆಲ್ಲರ ಬಾಪು ಗಾಂಧೀಜಿ ಬಿ.ಎಂ.ಚಂದ್ರಶೇಖರಯ್ಯ 15 1997 ಇಲ್ಲ
65 ಮಹಾತ್ಮಗಾಂಧಿ ವಿ.ಎಸ್.ನಾರಾಯಣರಾವ್ 35 1997 ಇಲ್ಲ
66 ಮೂರು ನಾಟಕಗಳು ಬಿ.ಪುಟ್ಟಸ್ವಾಮಯ್ಯ 55 1997 ಇದೆ
67 ಈ ಶತಮಾನದ 100 ಇಂಗ್ಲೀಷ್ ಕವನಗಳು ಡಾ. ಬಿ.ಸಿ.ರಾಮಚಂದ್ರಶರ್ಮ 45 1997 ಇಲ್ಲ
68 ಶಂಬಾ ಜೋಶಿಯವರ ಆಯ್ದ ಲೇಖನಗಳು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ 55 1997 ಇಲ್ಲ
69 ಆಯುರ್ವೇದ ಸಾರ ಭಾಗ-1 ಪ.ರಾಮಕೃಷ್ಣಯ್ಯ 100 1997 ಇಲ್ಲ
70 ಆಯುರ್ವೇದ ಸಾರ ಭಾಗ-2 ಪ.ರಾಮಕೃಷ್ಣಯ್ಯ 100 1997 ಇಲ್ಲ
71 ಆಯ್ದ ಕವಿತೆಗಳು ಡಾ.ಸಿದ್ಧಲಿಂಗಯ್ಯ 20 1997 ಇಲ್ಲ
72 ಬೋರಿಸ್ ಪಾಸ್ತರ್ ನಾಕ್ ಕೇಶವ ಮಳಗಿ 34 1997 ಇದೆ
73 ಮಾರಿಸ್ ಮೇತರ್ ಲಿಂಕ್ ಸಂಧ್ಯಾ ಎಸ್. 31 1997 ಇದೆ
74 ಆಕ್ಟೇವಿಯಾ ಪಾಜ್ ಕೆ.ಎನ್.ವಿಜಯಲಕ್ಷ್ಮಿ 26 1997 ಇಲ್ಲ
75 ಐಸಾಕ್ ಬಾಷೆವಿಕ್ ಸಿಂಗರ್ ಲಿಂಗರಾಜು 36 1997 ಇದೆ
76 ಗೇಬ್ರಿಯಲ್ ಗಾರ್ಸಿಯಾ ಮಾಕಿರ್ವ್‌ಜ್ ಪ್ರೊ. ಬಿದರಹಳ್ಳಿ ನರಸಿಂಹಮೂರ್ತಿ 36 1997 ಇಲ್ಲ
77 ಹರ್ಮನ್ ಹೆಸ್ ಜ.ಹೊ.ನಾರಾಯಣಸ್ವಾಮಿ 32 1997 ಇಲ್ಲ
78 ಕಥೆ ಕೇಳಿ ಕನ್ನಡ ಕಲಿ ಎಸ್.ಸೀತಾಲಕ್ಷ್ಮಿ 32 1997 ಇಲ್ಲ
79 ರಾಬರ್ಟ್ ಕಾಕ್ ಡಾ.ಸ.ಜ.ನಾಗಲೋಟಿಮಠ 24 1997 ಇಲ್ಲ
80 ಥಾಮಸ್ ಆಲ್ವ ಎಡಿಸನ್ ನೇಮಿಚಂದ್ರ 30 1998 ಇಲ್ಲ
81 ರತ್ನಪಕ್ಷಿ ಸಂ: ಕೋಟಗಾನಹಳ್ಳಿ ರಾಮಯ್ಯ 70 1998 ಇಲ್ಲ
82 ಸುಶ್ರುತ ಬಿ.ಕೆ.ಮೀರಾ 45 1998 ಇಲ್ಲ
83 ಅಂತರಿಕ್ಷ ಯಾನ ಪ್ರಯೋಜನ, ಪ್ರಾಮುಖ್ಯ ಬಿ.ಆರ್.ಗುರುಪ್ರಸಾದ್ 19 1998 ಇಲ್ಲ
84 ಆಲ್ಫ್ರೆಡ್ ವೆಗನರ್ ಟ.ಆರ್.ಅನಂತರಾಮು 26 1998 ಇಲ್ಲ
85 ಆಲ್ಬರ್ಟ್ ಅಬ್ರಾಹಂ ಮೈಕಲ್ಸನ್ ಡಿ.ಆರ್.ಬಳೂರಗಿ 28 1998 ಇಲ್ಲ
86 ದಲಿತ ಸಾಹಿತ್ಯ ನೆಲೆ-ಹಿನ್ನೆಲೆ ಡಾ.ಅರವಿಂದ ಮಾಲಗತ್ತಿ 30 1998 ಇಲ್ಲ
87 ಭುಜಂಗಯ್ಯನ ದಶಾವತಾರಗಳು ಶ್ರೀ ಕೃಷ್ಣ ಆಲನಹಳ್ಳಿ 85 1998 ಇಲ್ಲ
88 ಬಾಳಸಂಜೆಯ ಹಿನ್ನೋಟ ಡಾ.ಸಿಂ.ಪಿ.ಲಿಂಗಣ್ಣ 80 1998 ಇದೆ
89 ಬೇಟೆಯ ನೆನಪುಗಳು ಕೆದಂಬಾಡಿ ಜತ್ತಪ್ಪ ರೈ 25 1998 ಇದೆ
90 ನಂದೇ ನಾನೋದಿದೆ ಜೋಳದರಾಶಿ ದೊಡ್ಡನಗೌಡ 100 1998 ಇದೆ
91 ಬಿತ್ತರ ಡಾ.ಕಮಲಾ ಹಂಪನ 60 1998 ಇದೆ
92 ರಂಗ ಅಂತರಂಗ (ಕೊಟ್ಟೂರಪ್ಪನವರ ಜೀವನವೃತ್ತಾಂತ) ಡಾ. ಕೆ.ಬಿ.ಪ್ರಭುಪ್ರಸಾದ್ 25 1998 ಇದೆ
93 ಹಸಿಮಾಂಸ ಮತ್ತು ಹದ್ದುಗಳು ಪ್ರೊ. ಗೀತಾನಾಗಭೂಷಣ 20 1998 ಇದೆ
94 ಗಾಂಧಿ ಎಂಬುವ ಹೆಸರು ಡಾ. ಚಂದ್ರಶೇಖರ್ ಪಾಟೀಲ್ / ಶ್ರೀಮತಿ ಶಶಿಕಲಾ ವೀರಯ್ಯಸ್ವಾಮಿ 75 1998 ಇದೆ
95 ಸಾಹಿತ್ಯ ಮತ್ತು ರಾಜಕಾರಣ ಪ್ರೊ. ಬರಗೂರು ರಾಮಚಂದ್ರಪ್ಪ 55 1998 ಇಲ್ಲ
96 ಹೊಸತು ಹೊಸತು (ಸಂಪ್ರಬಂಧ ಸಂಪುಟ) ಡಾ.ಎಂ.ಚಿದಾನಂದ ಮೂರ್ತಿ 110 1998 ಇಲ್ಲ
97 ಕನ್ನಡ ಸಿನಿಮಾ ಇತಿಹಾಸ ಪುಟಗಳಲ್ಲಿ ಗಂಗಾಧರ ಮೊದಲಿಯಾರ್ 275 1998 ಇಲ್ಲ
98 ಕುರುಮಯ್ಯ ಮತ್ತು ಅಂಕುಶದೊಡ್ಡಿ ಜಂಬಣ್ಣ ಅಮರಚಿಂತ 28 1998 ಇಲ್ಲ
99 ಜಾನಪದ : ಸಾಂಸ್ಕೃತಿಕ ಆಯಾಮಗಳು ಪ್ರೊ. ಹಿ.ಶಿ.ರಾಮಚಂದ್ರೇಗೌಡ 60 1998 ಇದೆ
100 ಜ್ವಾಲಾಮುಖಿ ಪ್ರೊ.ಎಸ್.ಎಸ್.ನಂಜಣ್ಣನವರ 19 1998 ಇಲ್ಲ
101 ಭಾರತದ ವ್ಯವಹಾರಿಕ ಕಾನೂನುಗಳ ಪರಿಚಯ ಎನ್.ಶಶಿರೇಖಾ    / ಪ್ರೊ. ವೆಂಕಟಕೃಷ್ಣಪ್ಪ 46 1998 ಇಲ್ಲ
102 ರತ್ನಗಳು ಪ್ರೊ. ಟಿ.ಆರ್.ಅನಂತರಾಮು 18 1998 ಇಲ್ಲ
103 ಬಾರೋ ಗೀಜಗ ಸಂ.ಕೋಟಿಗಾನಹಳ್ಳಿ ರಾಮಯ್ಯ 50 1998 ಇಲ್ಲ
104 ಲೆಪ್ರಸಿ ಡಾ.ಬಿ.ಡಿ.ಸತ್ಯನಾರಾಯಣ 28 1998 ಇಲ್ಲ
105 ಯಂತ್ರೋಪಕರಣಗಳು ಕ.ರಾ.ಮೋಹನ್ 30 1998 ಇಲ್ಲ
106 ಜೀವಕೋಶ ವಿಜ್ಞಾನ ಸಾತನೂರು ದೇವರಾಜ್ 20 1998 ಇಲ್ಲ
107 ಪ್ರೊ. ಸಿ.ಎನ್.ಆರ್.ರಾವ್ ಡಾ.ಎನ್.ಎಸ್.ಲೀಲಾ 30 1998 ಇಲ್ಲ
108 ಮೈಕೇಲ್ ಫ್ಯಾರಡೆ ಡಾ.ಬಿ.ಸಿದ್ಧಲಿಂಗಪ್ಪ 32 1998 ಇಲ್ಲ
109 ಜೋಸೆಫ್ ಲಿಸ್ಟರ್ ಡಾ.ಎಚ್.ಡಿ.ಚಂದ್ರಪ್ಪಗೌಡ 22 1998 ಇಲ್ಲ
110 ಗೆಲಿಲಿಯೋ ಡಾ. ಬಿ.ಎಸ್.ಶೈಲಜಾ 26 1998 ಇಲ್ಲ
111 ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-1 ಎ.ಚಂದ್ರ ನಾಗಭೂಷಣಸ್ವಾಮಿ 50 1999 ಇಲ್ಲ
112 ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-2 ಎ.ಚಂದ್ರ ನಾಗಭೂಷಣಸ್ವಾಮಿ 60 1999 ಇಲ್ಲ
113 ಗ್ರಿಂ ಸಹೋದರರ ಕಿನ್ನರ ಕಥೆಗಳು ಭಾಗ-3 ಎ.ಚಂದ್ರ ನಾಗಭೂಷಣಸ್ವಾಮಿ 100 1999 ಇಲ್ಲ
114 ಬೆಳ್ದಿಂಗ್ಳಪ್ಪನ ಪೂಜೆ ಅಗ್ರಹಾರ ಕೃಷ್ಣಮೂರ್ತಿ 18 1999 ಇದೆ
115 ಸಿರಿಗನ್ನಡ ಗ್ರಂಥಕರ್ತರ ಚರಿತ್ರಕೋಶ ವೆಂಕಟೇಶ ಸಾಂಗಲಿ 70 1999 ಇದೆ
116 ಮಹಾಯಾನ ವೀ.ಚಿಕ್ಕವೀರಯ್ಯ 65 1999 ಇದೆ
117 ಅರುಣೋದಯ ನವೋದಯ ನಂತರ ಪ್ರೊ.ಹು.ಕಾ.ಜಯದೇವ್ 50 1999 ಇದೆ
118 ಕಳೆದ ಆ ದಿನಗಳು ಎನ್.ಮಲ್ಲಪ್ಪ 60 1999 ಇದೆ
119 ಸಟೀಕಿನ ಶಬ್ಧಮಂಜರಿ ಕೋಶ ಗಂಗಾಧರ ಮಡಿವಾಳೇಶ್ವರ ತುರಮರಿ 110 1999 ಇಲ್ಲ
120 ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ ಡಾ. ಕೊ.ಚೆನ್ನಬಸಪ್ಪ 100 1999 ಇಲ್ಲ
121 ಛಲದಂಕಮಲ್ಲ ಹಳ್ಳೀಕೆರೆ ಗುದ್ಲೆಪ್ಪನವರ್ ಡಾ. ಚಂದ್ರಮೌಳಿ ಎಸ್. ನಾಯ್ಕರ್ 35 1999 ಇಲ್ಲ
122 ರಾಷ್ಟ್ರಕವಿ ಕುವೆಂಪು ಡಾ. ದೇಜಗೌ 100 1999 ಇಲ್ಲ
123 ಕನ್ನಡ ಸಾಹಿತ್ಯ ಸಮೀಕ್ಷೆ ಡಾ. ಜಿ.ಎಸ್.ಶಿವರುದ್ರಪ್ಪ 45 1999 ಇಲ್ಲ
124 ಮಲೆನಾಡಿನ ವೈಷ್ಣವ ಒಕ್ಕಲಿಗರ ಸಂಸ್ಕೃತಿ ಡಾ. ಅಂಬಳಿಕೆ ಹಿರಿಯಣ್ಣ 100 1999 ಇಲ್ಲ
125 ಮೊಹರಂ ಪದಗಳು ಡಾ.ದಸ್ತಗೀರ್ ಅಲ್ಲೀಭಾಯಿ 80 1999 ಇದೆ
126 ಜಾನಪದ ಇಬ್ಬನಿಗಳು ಡಾ.ಎಂ.ಜಿ.ಈಶ್ವರಪ್ಪ 60 1999 ಇದೆ
127 ವೈದ್ಯಕೀಯ ನಂಬಿಕೆಗಳ ವಿಶ್ಲೇಷಣೆ ಡಾ.ರಾಮಲಿಂಗಯ್ಯ ಉಪ್ಪಿನಕೆರೆ 55 1999 ಇಲ್ಲ
128 ಕಂಡು ಕೇಳಿದ ಕಥೆಗಳು ಡಾ. ಮೀರಾಸಾಬಿಹಳ್ಳಿ ಶಿವಣ್ಣ 75 1999 ಇದೆ
129 ನರವ್ಯೂಹ ಕ್ರಿಯಾ ಶಾಸ್ತ್ರ ಡಾ.ಎಂ.ಬಸವರಾಜು 55 1999 ಇದೆ
130 ಪ್ರಾಣಿ ಪ್ರಾಣಿ-ಪರಿಸರ? ಪ್ರೊ.ವಿ.ಎ.ಕುಲಕರ್ಣಿ 30 1999 ಇದೆ
131 ಕಡಲಿನ ಒಡಲು ಕೆ.ವಿ.ಘನಶ್ಯಾಮ 24 1999 ಇಲ್ಲ
132 ಪರಮಾಣು ಜೀವ ಶಾಸ್ತ್ರ ಡಾ.ಎಚ್.ಕೆ.ಕೃಷ್ಣಮೂರ್ತಿ 45 1999 ಇಲ್ಲ
133 ಪಾತಾಳದಲ್ಲಿ ಪಾಪಚ್ಚಿ ನಾ.ಕಸ್ತೂರಿ 35 1999 ಇಲ್ಲ
134 ನೀಲ್ಸ್‌ ಬೋರ್ ಡಾ.ಬಿ.ಸಿದ್ಧಲಿಂಗಪ್ಪ 60 1999 ಇದೆ
135 ಅಲೆಗ್ಸಾಂಡರ್ ಪ್ಲೆಮಿಂಗ್ ಡಾ. ನಾ.ಸೋಮೇಶ್ವರ 48 1999 ಇದೆ
136 ಎನ್ರಿಕೊ ಫರ್ಮಿ ಪ್ರೊ. ಡಿ.ಆರ್.ಬಳೂರಗಿ 40 1999 ಇದೆ
137 ಶತಮಾನದ ವಿಜ್ಞಾನಿ ಡಾಕ್ಟರ್ ಯಲ್ಲಾಪ್ರಗಡ ಸುಬ್ಬರಾವ್ ಡಾ.ಎಚ್.ಡಿ.ಚಂದ್ರಪ್ಪಗೌಡ 30 1999 ಇಲ್ಲ
138 ಶಂಬಾ ಕೃತಿ ಸಂಪುಟ-1 ರಿಂದ 6  / 1. ಕಂನಾಡು – ಕರ್ನಾಟಕ  - ಸಂಪುಟ-1    / 2. ಕಂನಡ-ಕಂನುಡಿ - ಸಂಪುಟ-2   / 3. ಕರ್ನಾಟ-ಸಂಸ್ಕೃತಿ - ಸಂಪುಟ-3    / 4. ಭಾರತೀಯ ಸಂಸ್ಕೃತಿ - ಸಂಪುಟ-4    / 5. ಮಾನವ ಸಂಸ್ಕೃತಿ - ಸಂಪುಟ-5   /  6. ಸಂಸ್ಕೃತಿ ಸಾಹಿತ್ಯ - ಸಂಪುಟ-6 ಸಂ: ಪ್ರೊ. ಮಲ್ಲೇಪುಂ ಜಿ. ವೆಂಕಟೇಶ 750 1999 ಇದೆ
139 ಸಾಂಪ್ರದಾಯಿಕ ಒಕ್ಕಲುತನ ಈರಯ್ಯ ಕಿಲ್ಲೇದರ 30 2000 ಇಲ್ಲ
140 ಜಯಪ್ರಕಾಶ ನಾರಾಯಣ ಜ.ಹೊ.ನಾರಾಯಣ ಸ್ವಾಮಿ 25 2000 ಇಲ್ಲ
141 ಗ್ರಾಮೀಣ ಉಡುಗೆ ತೊಡುಗೆಗಳು ಡಾ.ದೇವೇಂದ್ರಕುಮಾರ ಹಕಾರಿ    / ಡಾ.ಕೆ.ಆರ್.ಸಂಧ್ಯಾರೆಡ್ಡಿ 60 2000 ಇಲ್ಲ
142 ನೆನಪು ಕಹಿಯಲ್ಲ ದೇ.ಜವರೇಗೌಡ 55 2000 ಇದೆ
143 ಹಳಗನ್ನಡ ಕವಿಕಾವ್ಯ ಮಹೋನ್ನತಿ ಡಾ. ಶ್ರೀನಿವಾಸ ಹಾವನೂರ 55 2000 ಇಲ್ಲ
144 ಕಲೆ ಎಂದರೇನು? ಡಾ.ಸಿ.ಪಿ.ಕೆ. 50 2000 ಇಲ್ಲ
145 ಕರ್ನಾಟಕ ಸಂಗೀತ ಮತ್ತು ಮೈಸೂರು ಒಡೆಯರು ಪ್ರೊ.ವಿ.ರಾಮರತ್ನ 70 2000 ಇಲ್ಲ
146 ಸಬರದ ಕವಿತೆಗಳು ಡಾ. ಬಸವರಾಜ ಸಬರದ 65 2000 ಇದೆ
147 ಶಿವಪ್ರಕಾಶರ ಆಯ್ದ ಕವಿತೆಗಳು ಡಾ. ಎಚ್.ಎಸ್.ಶಿವಪ್ರಕಾಶ್ 60 2000 ಇದೆ
148 ಶಿವೇಶ್ವರ ದೊಡ್ಡಮನಿ ಜೀವನ ಮತ್ತು ಸಾಹಿತ್ಯ ಡಾ. ಶ್ಯಾಮಸುಂದರ ಬಿದರಕುಂದಿ 60 2000 ಇದೆ
149 ಮರುಭೂಮಿ ಚಿಗುರಿತು ಮತ್ತಿಹಳ್ಳಿ ನಾಗರಾಜರಾವ್ 60 2000 ಇದೆ
150 ಅವಲೋಕನ-ಸಂಶೋಧನ ಪ್ರೊ.ಡಿ.ಕೆ.ಭೀಮಸೇನರಾವ್ 80 2000 ಇದೆ
151 ಗ್ರಾಮಾಂತರ ಪ್ರೊ. ಎಚ್.ವಿ.ನಾಗೇಶ್ 80 2000 ಇದೆ
152 ಗಿಲ್ಗಮೇಶ್ ಮಹಾಕಾವ್ಯ ಡಾ. ಬಸವರಾಜ ನಾಯ್ಕರ 26 2000 ಇದೆ
153 ಸತ್ಯಾನ್ವೇಷಕ  ಡಾ.ಶಂ.ಬಾ.ಜೋಶಿ ಪ್ರೊ. ಜ್ಯೋತಿ ಹೊಸುರ 45 2000 ಇಲ್ಲ
154 ಬುದ್ಧದೇವ ಜಿ.ವೆಂಕಟೇಶ್ 35 2000 ಇಲ್ಲ
155 ಕರ್ನಾಟಕ ರಂಗಭೂಮಿ ಡಾ.ಎಚ್.ಕೆ.ರಂಗನಾಥ್ 100 2000 ಇಲ್ಲ
156 ಕರ್ಣಾಟ ಭಾರತ ಕಥಾಮಂಜರಿ ಸಂ: ಕುವೆಂಪು ಮತ್ತು ಮಾಸ್ತಿ   /     ವೆಂಕಟೇಶ ಅಯ್ಯಂಗಾರ್ 90 2000 ಇಲ್ಲ
157 ಎಂ.ಎನ್.ರಾಯ್ ಡಾ.ವಿಘ್ನೇಶ್ ಎನ್.ಭಟ್ 25 2000 ಇದೆ
158 ನಾರಾಯಣ ಗುರು ಕೆ.ಕೆ.ನಾಯರ್ ಮೋಹನ್ ಕೋಟ್ಯಾನ್ 25 2000 ಇಲ್ಲ
159 ಮಂಡ್ಯ ಜಿಲ್ಲೆಯ ಜಾತ್ರೆಗಳು ಪ್ರೊ..ಜಿ.ವಿ. ದಾಸೇಗೌಡ 55 2000 ಇದೆ
160 ಹೋಳಿಯ ಹಾಡುಗಳು ಡಾ.ಮ.ಗು.ಬಿರಾದಾರ 100 2000 ಇದೆ
161 ಕರ್ನಾಟಕ ಮುಸ್ಲಿಂ ಜಾನಪದ ಡಾ.ಷಹಸೀನಾ ಬೇಗಂ 60 2000 ಇದೆ
162 ಕೊಪ್ಪಳ ಜಿಲ್ಲೆಯ ಜಾತ್ರೆಗಳು ಪ್ರೊ. ಎಸ್.ಎಸ್.ಹಿರೇಮಠ 40 2000 ಇದೆ
163 ಗ್ರಾಮೀಣ ಬೇಟೆಗಳು ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ 45 2000 ಇದೆ
164 ಗ್ರಾಮೀಣ ಪಶುಸಾಕಣೆ ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ 40 2000 ಇದೆ
165 ಗ್ರಾಮೀಣ ವೃತ್ತಿಗಳು ಡಾ. ದೇವೇಂದ್ರ ಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ 60 2000 ಇಲ್ಲ
166 ಜನಪದ ಹಾಲುಮತ ಮಹಾಕಾವ್ಯ ಡಾ.ವೀರಣ್ಣ ದಂಡೆ 220 2000 ಇಲ್ಲ
167 ಪಂಪನ ಸಮಸ್ತ ಭಾರತ ಕಥಾಮೃತ ಡಾ.ಎಲ್.ಬಸವರಾಜು 175 2000 ಇಲ್ಲ
168 ಶ್ರೀ ರಾಮಾಯಣ ದರ್ಶನಂ ಡಾ. ಕುವೆಂಪು 40 2000 ಇಲ್ಲ
169 ಜನಸಂಖ್ಯೆಯ ಬೆಳವಣಿಗೆಯ ವಿವಿಧ ಮುಖಗಳು ಪಿ.ಹನುಮಂತರಾಯಪ್ಪ 40 2000 ಇದೆ
170 ನಿಮ್ಮ ಕಣ್ಣು ಭಾಗ-1 ಡಾ.ಅನಂತ ಹುಯಿಲಗೋಳ 30 2000 ಇಲ್ಲ
171 ಪಕ್ಷಿ ಸಂಕುಲ ಸುರೇಶ ಕುಲಕರ್ಣಿ 150 2000 ಇಲ್ಲ
172 ಸರ್.ಚಾಲ್ರ್ಸ್‌ ಲಯಲ್ ಎಂ.ವೆಂಕಟಸ್ವಾಮಿ 35 2000 ಇಲ್ಲ
173 ಖಗೋಳ ವಿಜ್ಞಾನ ಡಿ.ಆರ್.ಬಳೂರಗಿ 35 2000 ಇಲ್ಲ
174 ಸುಧಾಕರ ಅವರ ಆಯ್ದ ಕಥೆಗಳು ಸುಧಾಕರ 60 2001 ಇಲ್ಲ
175 ಸಂತಾನಿಕ ಕೆ.ಪದ್ಮನಾಭ ಉಡುಪ 25 2001 ಇಲ್ಲ
176 ನೆನಪಿನ ನೌಕೆಯಿಂದ ಎಸ್.ಪಟ್ಟಾಭಿರಾಮನ್ 75 2001 ಇದೆ
177 ಭಾರತದ ಸ್ವಾತಂತ್ರ್ಯ ಚಳುವಳಿ 1857-1947 ಎ.ಪಿ.ಶ್ರೀನಿವಾಸಮೂರ್ತಿ 17 2001 ಇಲ್ಲ
178 ಮೆಕಿಯಾವೆಲ್ಲಿ ಪ್ರೊ.ಹೆಚ್.ಆರ್.ದಾಸೇಗೌಡ 25 2001 ಇಲ್ಲ
179 ಜೀವರಸಾಯನ ತಂತ್ರಜ್ಞಾನ ಪ್ರೊ. ಎಂ.ಆರ್.ಎನ್. ಮೂರ್ತಿ 25 2001 ಇಲ್ಲ
180 ಹೆಜ್ಜೆ ಗುರುತು ಡಾ.ನಲ್ಲೂರು ಪ್ರಸಾದ್ 60 2001 ಇಲ್ಲ
181 ಕಾಂತಶಕ್ತಿ ಮತ್ತು ವಿದ್ಯುಚ್ಛಕ್ತಿ ಟಿ.ತಿಪ್ಪೇರುದ್ರಪ್ಪ 14 2001 ಇಲ್ಲ
182 ಕಾಂತತೆ, ವಿದ್ಯುತ್ತು ಮತ್ತು ವಿದ್ಯುನ್ಮಾನ ಎಸ್.ಡಿ.ಪಾಟೀಲ 40 2001 ಇಲ್ಲ
183 ಚಾಲ್ರ್ಸ್‌ ಡಾರ್ವಿನ್ ಕೈವಾರ ಗೋಪಿನಾಥ್ 25 2001 ಇಲ್ಲ
184 ಚಿತ್ತ ಚಿತ್ತಾರಗಳು ಡಾ.ಶ್ರೀನಿವಾಸ್ ಕುಲಕರ್ಣಿ 45 2001 ಇದೆ
185 ಹರಪನಹಳ್ಳಿ ಬೀಮವ್ವನವರ ಹಾಡುಗಳು ಸರಿತಾ ಕುಸುಮಾಕರ ದೇಸಾಯಿ 70 2001 ಇಲ್ಲ
186 ಸಮಾಜಕಾರ್ಯ ಡಾ.ಎಚ್.ಎಂ.ಮರುಳಸಿದ್ಧಯ್ಯ 40 2001 ಇಲ್ಲ
187 ಪ್ರಹಾರ ಪಾ.ವೆಂ.ಆಚಾರ್ಯ 11 2001 ಇಲ್ಲ
188 ಪ್ರಾತಿನಿಧಿಕ ಕವನಗಳು ಕೆ.ಎಸ್.ನಿಸಾರ್ ಅಹಮದ್ 100 2001 ಇಲ್ಲ
189 ಅಲೆಮಾರಿಯ ಹೆಜ್ಜೆಗಳು (ಪ್ರವಾಸ ಕಥೆ) ಎಂ.ವೆಂಕಟಸ್ವಾಮಿ 50 2001 ಇಲ್ಲ
190 ಅನುಭಾವಃ ಸಾಂಸ್ಕೃತಿಕ ಸಮಸ್ಯೆ ಮತ್ತು ಹುಡುಕಾಟ ಡಾ.ಬಸವರಾಜ ಕಲ್ಗುಡಿ 70 2001 ಇಲ್ಲ
191 ಕಾವ್ಯಾನಂದರ ಆಯ್ದ ಕವಿತೆಗಳು ಸಂ: ಡಾ.ಶೈಲಜಾ ಉಡಚಣ 60 2001 ಇಲ್ಲ
192 ಕರ್ಣಾಟಕ ಸಂಗೀತ ವಾಹಿನಿ ಡಾ.ರಾ.ಸತ್ಯನಾರಾಯಣ 200 2001 ಇಲ್ಲ
193 ಡಾ.ಎ.ವೆಂಕಟಸುಬ್ಬಯ್ಯ ನವರ ಸಂಶೋಧನ ಲೇಖನಗಳು ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ 120 2001 ಇಲ್ಲ
194 ಶ್ರೀ ಬಸವೇಶ್ವರರು ಡಾ. ದೇ.ಜವರೇಗೌಡ 25 2001 ಇಲ್ಲ
195 ಶ್ರೀಅರವಿಂದರು ಡಾ. ಗುರುಲಿಂಗ ಕಾಪಸೆ 25 2001 ಇಲ್ಲ
196 ಲೋಕ ಚಾರುವಾಕ ಡಾ.ಎಚ್.ಎನ್.ಮಂಜುರಾಜ್ 25 2001 ಇಲ್ಲ
197 ಇಮ್ಯಾನುಎಲ್ ಕಾಂಟ್ ಡಾ.ವಿಘ್ನೇಶ್ ಎನ್.ಭಟ್ 20 2001 ಇಲ್ಲ
198 ಕೌಟಿಲ್ಯ ಪ್ರೊ. ಜೆ.ಎಸ್.ಸದಾನಂದ 25 2001 ಇಲ್ಲ
199 ಉಜ್ಜನಿ ಚೌಡಮ್ಮ ಡಾ. ಹಿ.ಚಿ.ಬೋರಲಿಂಗಯ್ಯ 70 2001 ಇದೆ
200 ಜಾನಪದ ಅಧ್ಯಯನ ಡಾ. ದೇ.ಜವರೇಗೌಡ 100 2001 ಇಲ್ಲ
201 ವಿಶ್ವಂಭರಾ ಮಾರ್ಕಂಡಪುರಂ ಶ್ರೀನಿವಾಸ 45 2001 ಇದೆ
202 ನಿಮ್ಮ ಕಣ್ಣು ಭಾಗ-2, 3, 5 ಡಾ. ಅನಂತು ಹುಯಿಲಗೋಳ 100 2001 ಇಲ್ಲ
203 ರಿಚರ್ಡ್ ಫಿಲಿಪ್ಸ್‌ ಪೈನ್ಮನ್ ಜೀವನ ಮತ್ತು ಸಾಧನೆ ಪ್ರೊ. ಬಿ.ಎಸ್.ಮಯೂರ 40 2001 ಇಲ್ಲ
204 ಶಾಖ ಪ್ರೊ.ಡಿ.ಆರ್.ಬಳೂರಗಿ 30 2001 ಇಲ್ಲ
205 ವಿಕಿರಣಪಟುತ್ವ ಎಸ್.ಡಿ.ಪಾಟೀಲ್ 30 2001 ಇಲ್ಲ
206 ಬೆಳಕು ಮತ್ತು ವಿದ್ಯುತ್ಕಾಂತೀಯ ವಿಕಿರಣ ಡಿ.ಆರ್.ಬಳೂರಗಿ 35 2001 ಇಲ್ಲ
207 ಶಬ್ದ ಡಿ.ಆರ್.ಬಳೂರಗಿ 30 2001 ಇಲ್ಲ
208 ಶಕ್ತಿ ಡಿ.ಆರ್.ಬಳೂರಗಿ 30 2001 ಇಲ್ಲ
209 ವಿದ್ಯುತ್ಕಾಂತತೆ ಮತ್ತು ವಿದ್ಯುನ್ಮಾನ ಎಸ್.ಡಿ.ಪಾಟೀಲ 40 2001 ಇಲ್ಲ
210 ಬಲ ಮತ್ತು ಚಲನೆ ಡಿ.ಆರ್.ಬಳೂರಗಿ 30 2001 ಇಲ್ಲ
211 ಡಾ.ವಿ.ಆರ್.ನಾರ್ಲ ಅವರ ವೈಚಾರಿಕ ಬರಹಗಳು ಪ್ರೊ. ಗಂಗಾಧರಮೂರ್ತಿ 25 2001  / 2003 ಇಲ್ಲ
212 ಸಂಸ್ಕೃತಿ ಕಥನ ಅಗ್ರಹಾರ ಕೃಷ್ಣಮೂರ್ತಿ 200 2002 ಇಲ್ಲ
213 ಸಂವಹನ ಸುಜನಾ 200 2002 ಇದೆ
214 ಪ್ರಾಚೀನ ಕನ್ನಡ ಗ್ರಂಥ ಸಂಪಾದನೆ ಬಿ.ಎಸ್.ಸಣ್ಣಯ್ಯ 200 2002 ಇಲ್ಲ
215 ಶಾಸ್ತ್ರ ಭಾರತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ 100 2002 ಇದೆ
216 ಆವರ್ತಕ ಕೋಷ್ಟಕ ಪ್ರೊ. ಎಂ.ಆರ್.ನಾಗರಾಜು 25 2002 ಇದೆ
217 ಕನ್ನಡ ನಿಘಂಟು ಪರಿವಾರ ಪ್ರೊ. ಜಿ.ವೆಂಕಟಸುಬ್ಬಯ್ಯ 200 2002 ಇಲ್ಲ
218 ಕನ್ನಡ ಮೂಲಭೂತ ತಾಂತ್ರಿಕ ಚಿತ್ರ ರಚನಾಭ್ಯಾಸ ಈಶ್ವರಾಚಾರ್ಯ 150 2002 ಇದೆ
219 ಕೋಟಿ ಚೆನ್ನಯ ಪಾರ್ದನ ಸಂಪುಟ ದಾಮೋದರ ಕಲ್ಮಾಡಿ 200 2002 ಇದೆ
220 ತಪನಿಂದ ತಾವರೆ ಡಾ. ಬಸವರಾಜ ಸಾದರ 100 2002 ಇದೆ
221 ಭೂಮಿ, ಸೂರ್ಯ ಮತ್ತು ಆಕಾಶ ಎಂ.ಕೆ.ರಾಮಸ್ವಾಮಿ 40 2002 ಇಲ್ಲ
222 ಸ್ವಾಮಿ ವಿವೇಕಾನಂದ ಜಾ.ಹೋ.ನಾರಾಯಣ ಸ್ವಾಮಿ 30 2002 ಇಲ್ಲ
223 ಸ್ವಾತಂತ್ರ್ಯ ಸಂಗ್ರಾಮದ ನೋವು ನಲಿವುಗಳು ನರಸಿಂಹ ದಾಬಡೆ 40 2002 ಇಲ್ಲ
224 ಪಾಲಿಮರುಗಳು ಮತ್ತು ಮನೆ ಬಳಕೆ ಪ್ಲಾಸ್ಟಿಕ್ ವಸ್ತುಗಳು ಸರ್ವೋತ್ತಮ ಅಂಬೇಡ್ಕರ 30 2002 ಇಲ್ಲ
225 ಶತಮಾನದ ವಿಜ್ಞಾನ ಸಾಧನೆ ಪ್ರೊ.ಡಿ.ಆರ್.ಬಳೂರಗಿ 250 2002 ಇಲ್ಲ
226 ಮಿಥಿಲೆಯನ್ನಾಳಿದ ಕರ್ನಾಟರು ಸದಾನಂದ ಕನವಳ್ಳಿ 100 2002 ಇಲ್ಲ
227 ಶ್ರೀ ವಿಠ್ಠಲ ಒಂದು ಮಹಾ ಸಮನ್ವಯ ಚಂದ್ರಕಾಂತ್ ಪೋಕಳೆ 200 2002 ಇಲ್ಲ
228 ಮಹಾತ್ಮ ಯೇಸುಕ್ರಿಸ್ತ ಡಾ.ಬಿ.ಎಸ್.ತಲ್ವಾಡಿ 25 2002 ಇಲ್ಲ
229 ಅದ್ಭುತ ದ್ರವ ನೀರು ಎ.ಒ.ಅವಲಮೂರ್ತಿ 40 2002 ಇಲ್ಲ
230 ಜೀವನಪ್ರೀತಿ ಡಾ.ಕಾಳೇಗೌಡ ನಾಗವಾರ 100 2002 ಇಲ್ಲ
231 ಕಾರ್ಲ್ ಗೆಸ್ಟೋವ್ ಯೂಂಗ್ ಪ್ರೊ.ಪಿ.ನಟರಾಜ್ 40 2002 ಇಲ್ಲ
232 ದಲಿತ ಮಾರ್ಗ ಡಾ. ಅರವಿಂದ ಮಾಲಗತ್ತಿ 150 2002 ಇಲ್ಲ
233 ಶ್ರೀನಿವಾಸ ರಾಮಾನುಜನ್ ಡಾ.ಎನ್.ಬಾಲಚಂದ್ರಾರಾವ್ 28 2003 ಇದೆ
234 ಲೇಸರ್ ಕಿರಣ ಡಾ.ಬಿ.ಸಿದ್ಧಲಿಂಗಪ್ಪ 100 2003 ಇಲ್ಲ
235 ಸಮಗ್ರ ನೋಟ ಬಿ.ಜಿ.ಬಣಕಾರ್ 200 2003 ಇಲ್ಲ
236 ಸಾಮಾಜಿಕ ನೆಲೆ ಶಿವರಾಮ ಕಾಡನಕುಪ್ಪೆ 100 2003 ಇದೆ
237 ಶಾಸ್ತ್ರ ಕುತೂಹಲ ಪ್ರೊ. ಗಗ್ರೇಶ್ವರಿ ವೆಂಕಟಸುಬ್ಬಯ್ಯ 150 2003 ಇದೆ
238 ಬದ್ಧವಣ ಪ್ರೊ. ಕಮಲಾಹಂಪನ 100 2003 ಇದೆ
239 ವರ್ಣದಿಂದ ವರ್ಗದ ಕಡೆಗೆ ಆರ್.ವಿ.ಭಂಡಾರಿ 100 2003 ಇಲ್ಲ
240 ವಾಗ್ಭೂಷಣ ಪ್ರೊ.ಟಿ.ಕೇಶವ ಭಟ್ಟ 200 2003 ಇದೆ
241 ಅನನ್ಯ ಹಂಪ ನಾಗರಾಜಯ್ಯ 150 2003 ಇದೆ
242 ಆಚಾರ್ಯತ್ರಯರು ಡಾ.ಕೆಳದಿ ವೆಂಕಟೇಶ ಜೋಯಿಸ್ 25 2003 ಇದೆ
243 ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು ಕೆ. ಪುಟ್ಟಸ್ವಾಮಿ 40 2003 ಇದೆ
244 ಜಾನಪದ ಸಂಭ್ರಮ ಡಾ.ಪಿ.ಕೆ.ರಾಜಶೇಖರ 100 2003 ಇದೆ
245 ಜಾನಪದ-ಶಿಷ್ಟಪದ ಡಾ.ಡಿ.ಕೆ.ರಾಜೇಂದ್ರ 120 2003 ಇದೆ
246 ಇಂಗ್ಲೀಷ್ ಕವಿತೆಗಳು ಸಿ.ಎನ್.ಶ್ರೀನಾಥ್ 50 2003 ಇಲ್ಲ
247 KUVEMPU’S THREE PLAYS Dr. Prabhu Shankara 100 2003 ಇದೆ
248 ಒಡನಾಟ ಡಾ.ಕೆ.ಮರುಳಸಿದ್ದಪ್ಪ 100 2003 ಇದೆ
249 ಒಡಿಶಿಯಸ್ ಎಲೀತಿಸ್ ಪ್ರೊ. ವಿಜಯಾ ಗುತ್ತಲ 40 2003 ಇದೆ
250 ಕೈಗಾರಿಕಾ ತಂತ್ರಜ್ಞಾನ ವಿ.ಉಮೇಶ್ 50 2003 ಇದೆ
251 ತುಳು ಪಾಡ್ದನ ಬಂಧ ಮತ್ತು ವಿನ್ಯಾಸ ಪ್ರೊ. ಎ.ವಿ.ನಾವಡ 100 2003 ಇದೆ
252 ತುಮಕೂರು ಜಿಲ್ಲಾ ಜಾತ್ರೆಗಳು ಡಾ.ಚಿಕ್ಕಣ್ಣ ಯಣ್ಣೆಕಟ್ಟೆ 40 2003 ಇದೆ
253 ಸರ್ವಜ್ಞನ ವಚನಗಳು ಡಾ.ರಾ.ಗೌ. 70 2003 ಇಲ್ಲ
254 ಪರಿಸರ ನ್ಯಾಯದ ತಕ್ಕಡಿಯಲ್ಲಿ ಶಾರದಾ ಗೋಪಾಲ 80 2003 ಇಲ್ಲ
255 ಪಕ್ಷಿ ವಿಜ್ಙನಾದ ಪಿತಾಮಹ ಸಲೀಂ ಅಲಿ ಡಾ.ಎಚ್.ಎಸ್.ನಿರಂಜನಾರಾಧ್ಯ 40 2003 ಇಲ್ಲ
256 ಫೆಡರಿಕ್ ಏಂಗೆಲ್ಸ್‌ ಜಿ.ರಾಮಕೃಷ್ಣ 40 2003 ಇಲ್ಲ
257 ಮಹಿಳಾ ಸಂಕಥನ ಡಾ. ಗಾಯತ್ರಿ ನಾವಡ 80 2003 ಇಲ್ಲ
258 ಆಯ್ದ ಮಕ್ಕಳ ಸಾಹಿತ್ಯ ಪ್ರೊ. ಸಿದ್ದಣ್ಣ ಬಿ. ಉತ್ನಾಳ್ 200 2003 ಇಲ್ಲ
259 ಜೀವ ವಿಕಾಸ ಡಾ.ಎನ್.ಎಸ್.ಲೀಲಾ 60 2003 ಇಲ್ಲ
260 ಜೀವ ವರ್ಗೀಕರಣ ವಿ.ಕಮಲ 60 2003 ಇಲ್ಲ
261 ಎಡ್ವರ್ಡ್ ಸೈದ್ ಡಾ.ಸಿ.ಎನ್.ರಾಮಚಂದ್ರನ್ 40 2003 ಇಲ್ಲ
262 ಕರ್ನಾಟಕ ನಾಣ್ಯ ಪರಂಪರೆ ಪ್ರೊ. ಎ.ವಿ.ನರಸಿಂಹಮೂರ್ತಿ 200 2003 ಇಲ್ಲ
263 ಕನ್ನಡ ಸಾಹಿತ್ಯ ಸಂಶೋಧನೆಯ ಇತಿಹಾಸ ಡಾ. ಸಂಗಮೇಶ ಸವದತ್ತಿಮಠ 40 2003 ಇಲ್ಲ
264 ಕೋವೂರ್ ಕಂಡ ವೈಜ್ಞಾನಿಕ ಸತ್ಯ ಕೆ.ಮಾಯಿ ಗೌಡ 224 2003 ಇಲ್ಲ
265 ಡೆರಿಡಾ ಡಾ. ಮಾಧವ ಪೆರಾಜೆ 40 2003 ಇಲ್ಲ
266 ದಾಸ ಸಾಹಿತ್ಯ ಮತ್ತು ಸಂಸ್ಕೃತಿ ಸಾ.ಕೃ.ರಾಮಚಂದ್ರರಾವ್ 150 2003 ಇಲ್ಲ
267 ವೇದಕಾಲೀನ ಚಿಂತಕರು ಡಾ.ಮೀರಾ ಚಕ್ರವರ್ತಿ 20 2003 ಇಲ್ಲ
268 ಸಾವಿಗೆ ಆಹ್ವಾನ ಷ.ಶೆಟ್ಟರ್ 200 2004 ಇಲ್ಲ
269 ಸೂಫಿ ಸಂಪ್ರದಾಯ ತತ್ವಜ್ಞಾನ ಮತ್ತು ಕಾರ್ಯ ವಿಠಲರಾವ್ ಗಾಯಕ್ವಾಡ್ 60 2004 ಇಲ್ಲ
270 ಸಕ್ಕರೆಯ ಸೀಮೆ ಡಾ.ಕೆ.ಅನಂತರಾಮು 200 2004 ಇದೆ
271 ನುಡಿ ಶೋಧ ಕೃಷ್ಣಮೂರ್ತಿ ಅನೂರು 80 2004 ಇದೆ
272 ಮುಂಡ ಮತ್ತು ಅವರ ದೇಶ ಪ್ರೊ. ಎನ್.ಚಂದ್ರಪ್ಪ 150 2004 ಇದೆ
273 ಮರಾಠಿ ಕೈದಿಗಳ ಕವಿತೆಗಳು ಡಿ.ಎಸ್.ಚೌಗಲೆ 30 2004 ಇದೆ
274 ಅನಾವರಣ ಪ್ರೊ. ಪ್ರಧಾನ್ ಗುರುದತ್ 200 2004 ಇದೆ
275 ಅರವಿಂದ ಮಾಲಗತ್ತಿ ಅವರ ಆಯ್ದ ಕವಿತೆಗಳು ಡಾ.ಎಚ್.ಎಸ್.ರಾಘವೇಂದ್ರರಾವ್ 100 2004 ಇದೆ
276 ಆಳ್ವರ ಹಾಡುಗಳು ಪ್ರೊ. ನಾ.ಗೀತಾಚಾರ್ಯ 100 2004 ಇದೆ
277 ಆಧುನಿಕ ಪೂರ್ವ ಗದ್ಯಕೋಶ ಡಾ.ಜಿ.ಆರ್.ತಿಪ್ಪೇಸ್ವಾಮಿ 60 2004 ಇದೆ
278 ಒಳಹರಿವು ಡಾ.ಪಿ.ವಿ.ನಾರಾಯಣ 100 2004 ಇದೆ
279 ಗುನ್ನಾರ್ ಎಕ್ಲೋಫನ ಆಯ್ದ ಕವಿತೆಗಳು ಆರ್.ವಿಜಯರಾಘವನ್ 50 2004 ಇದೆ
280 ಸಂಗೊಳ್ಳಿ ರಾಯಣ್ಣ ಡಾ. ಸೂರ್ಯನಾಥ ಕಾಮತ್ 60 2004 ಇಲ್ಲ
281 ಪ್ರಜ್ಞೆ-ಪರಿಸರ ಡಾ.ಯು.ಆರ್.ಅನಂತಮೂರ್ತಿ 300 2004 ಇಲ್ಲ
282 ಹಿಮಾಚಲವನ್ನಾಳಿದ ಕರ್ನಾಟಕ ಸೇನರು ಪ್ರೊ. ಸದಾನಂದ ಕನವಳ್ಳಿ 50 2004 ಇದೆ
283 ಯುಗಪಲ್ಲಟ ಡಾ.ಯು.ಆರ್.ಅನಂತಮೂರ್ತಿ 300 2004 ಇಲ್ಲ
284 ಕಾವ್ಯಗಾಯನ ಕಲಾ ಸಂಗ್ರಹ ಗಮಕಿ ಎಂ. ರಾಘವೇಂದ್ರರಾವ್ 50 2004 ಇಲ್ಲ
285 ಕಿಟಕಿಗಳು ಕನ್ನಡಿಗಳು ನಿ.ಮುರಾರಿ ಬಲ್ಲಾಳ 100 2004 ಇದೆ
286 ತಳಿವಿಜ್ಞಾನದ ಮೂಲ ತತ್ವಗಳು ಸಾತನೂರು ದೇವರಾಜು 60 2004 ಇಲ್ಲ
287 ಸಮಣ ಸುತ್ತಂ ಜಿ.ಎಸ್.ವಸಂತಮಾಲ 10 2005 ಇದೆ
288 ಸಾಮ್ರಾಟ್ ಶ್ರೇಣಿಕ ಬಿಂಬಸಾರ ಎಸ್.ಬಿ.ಶಾಂತಮ್ಮ 10 2005 ಇದೆ
289 ಶ್ರೀ ಕುಂದ ಕುಂದಾಚಾರ್ಯರು ಡಾ.ಪ್ರೀತಿ ಶ್ರೀಮಂಧರ್ ಕುಮಾರ್ 10 2005 ಇದೆ
290 ಮಹಾಪುರಾಣ ಪ್ರೊ. ಜೀವಂಧರ ಕುಮಾರ್ 10 2005 ಇದೆ
291 ಮಹಾವೀರ ವಾಣಿ ವಿಮಲ ಸುಮತಿ ಕುಮಾರ್ 10 2005 ಇದೆ
292 ಅನೇಕಾಂತವಾದ ‘ನಾ’ ವುಜಿರೆ 10 2005 ಇದೆ
293 ಅಹಿಂಸೆ ಪ್ರೊ. ಶುಭಚಂದ್ರ 10 2005 ಇದೆ
294 ಆಧುನಿಕ ವಿರಾಟ ಪುರುಷ ಶ್ರೀರಂಗ ಪ್ರೊ. ಜಿ.ಎಸ್.ಅಮೂರ 150 2005 ಇದೆ
295 ಹೇಮಚಂದ್ರ ಎಸ್.ಬಿ.ವಸಂತರಾಜಯ್ಯ 10 2005 ಇದೆ
296 ಚಂದನಾಂಬಿಕೆ ಶ್ರೀಮತಿ ಎಚ್.ಡಿ.ಜಯಪದ್ಮಕುಮಾರ್ 10 2005 ಇದೆ
297 ಏಕೀಕರಣ ಒಂದು ಕಥನ ಡಾ.ಎಸ್.ಚಂದ್ರಶೇಖರ್ 15 2005 ಇಲ್ಲ
298 ಟಾಲ್ಸ್ಟಾಯ್ ಅವರ ಕಥೆಗಳು ಎಲ್.ಗುಂಡಪ್ಪ 100 2005 ಇಲ್ಲ
299 ಕಾಪಾಲಿಕರು ಮತ್ತು ಕಾಳಾಮುಖರು ವಿರೂಪಾಕ್ಷ ಕುಲಕರ್ಣಿ 100 2005 ಇಲ್ಲ
300 ಯಶವಂತನ ಯಶೋಗೀತೆ ಆರ್.ವಿ. ಭಂಡಾರಿ 35 2006 ಇಲ್ಲ
301 ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ ಬೊಳುವಾರು ಮಹಮದ್ ಕುಂಞಿ 90 2006 ಇಲ್ಲ
302 ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಡಾ. ಎಸ್.ವಿದ್ಯಾಶಂಕರ 180 2006 ಇದೆ
303 ಕನ್ನಡ ಸಂಸ್ಕೃತಿ-ನಮ್ಮ ಹೆಮ್ಮೆ ಡಾ. ವಿದ್ಯಾಶಂಕರ್ 180 2006 ಇಲ್ಲ
304 ನಿರ್ಮಲ ಕರ್ನಾಟಕ ಡಾ.ಎಚ್.ಮರುಳಸಿದ್ಧಯ್ಯ 60 2006 ಇಲ್ಲ
305 ಪ್ರಾಚ್ಯ ಜಾನಪದ ಡಾ.ಟಿ.ಗೋವಿಂದರಾಜು 60 2006 ಇದೆ
306 ಲಂಬಾಣಿ ಬುಡಕಟ್ಟಿನ ದೃಶ್ಯ ಮತ್ತು ಪ್ರದರ್ಶನ ಕಲೆಗಳು ಡಾ.ಪಿ.ಕೆ.ಖಂಡೋಬಾ 50 2006 ಇಲ್ಲ
307 ಪ್ರೀತಿ ಮತ್ತು ನಿರ್ಭೀತಿ ಕಾಳೇಗೌಡ ನಾಗವಾರ 50 2006 ಇಲ್ಲ
308 ಲೋಹಿಯಾ ಸಾಮಾಜವಾದ ದರ್ಶನ ಡಿ.ಎಸ್.ನಾಗಭೂಷಣ 40 2006 ಇದೆ
309 ಸುಸ್ಥಿರ ಕೃಷಿ ಡಾ.ಬಿ.ಎಸ್.ಸಿದ್ಧರಾಮಯ್ಯ   / ಡಾ. ಉಷಾಕಿರಣ್ 60 2006 ಇಲ್ಲ
310 ಮಕ್ಕಳ ನಾಟಕಗಳು ಭಾಗ-1 ಬೊಳುವಾರು ಮಹಮ್ಮದ್ ಕುಂಞಿ 60 2006 ಇಲ್ಲ
311 ಮಕ್ಕಳ ನಾಟಕಗಳು ಭಾಗ-2 ಬೊಳುವಾರು ಮಹಮ್ಮದ್ ಕುಂಞಿ 60 2006 ಇಲ್ಲ
312 ಮಕ್ಕಳ ನಾಟಕಗಳು ಭಾಗ-3 ಬೊಳುವಾರು ಮಹಮದ್ ಕುಂಞಿ 60 2006 ಇಲ್ಲ
313 ಕಲಾಂ ಮೇಷ್ಟ್ರು ಎಚ್.ಆರ್.ರಾಮಕೃಷ್ಣರಾವ್ 60 2006 ಇಲ್ಲ
314 ತೀ.ನಂ.ಶ್ರೀ ಸಮಗ್ರ ಗದ್ಯ ತೀ.ನಂ.ಶ್ರೀ 275 2006 ಇಲ್ಲ
315 ಕನ್ನಡ ಕನ್ನಡಿಗ ಕರ್ನಾಟಕ ಸಂ: ಡಾ.ಎಂ.ಚಿದಾನಂದಮೂರ್ತಿ 90 2006 ಇಲ್ಲ
316 ಕಂಜಂಭಟ್ಟ ಜೆ.ವಿ.ಬಗಾಡೆ 70 2007 ಇಲ್ಲ
317 ವಿ.ಎನ್.ಕಾಗಲಕರ್ ಶ್ರೀನಿವಾಸ್ ಸಿರನೂರಕರ್ 65 2007 ಇದೆ
318 ಮರೆಯಲಾಗದ ನಾಟಕಕಾರ ಮರಡಿಹಳ್ಳಿ ಸೀತಾರಾಮರೆಡ್ಡಿ ಡಾ.ಮೀರಾಸಾಬಿನಹಳ್ಳಿ ಶಿವಣ್ಣ 60 2007 ಇದೆ
319 ಅಂಚೆಚೀಟಿಗಳಲ್ಲಿ ಆರೋಗ್ಯ ಡಾ.ಎ.ಟಿ.ಪಾಟೀಲ್ 40 2007 ಇದೆ
320 ಆಫ್ರಿಕಾದ ಧರ್ಮ ಮತ್ತು ಸಂಸ್ಕೃತಿ ಒಂದು ಅವಲೋಕನ ಅಮಚವಾಡಿ ಅರಸು 50 2007 ಇದೆ
321 ಜನಪದ ಕಾವ್ಯಮೀಮಾಂಸೆ ಹಾಗೂ ವಿಮರ್ಶಾ ಪ್ರಸ್ಥಾನಗಳು ಡಾ.ವೀರಣ್ಣ ದಂಡೆ 100 2007 ಇದೆ
322 ಜಾನಪದ ಕಥಾ ಕಣಜ ಈರಬಡಪ್ಪ ಮಲ್ಲಿಕಾರ್ಜುನ ಕಲಮರಹಳ್ಳಿ 24 2007 ಇದೆ
323 ಹುಯಿಲಗೋಳ ನಾರಾಯಣರಾಯರು ರಾಧಾ ಕುಲಕರ್ಣಿ 95 2007 ಇದೆ
324 ಕುಸ್ತಿಲೋಕದ ಧ್ರುವತಾರೆ ಪೈಲ್ವಾನ್ ನಂಜಪ್ಪ ಟಿ.ಆರ್. ರಾಧಾಕೃಷ್ಣ 45 2007 ಇದೆ
325 ಕ್ಲಾರಿಯೋನೆಟ್ ಮಾಂತ್ರಿಕ ಪಂಡಿತ್ ಡಾ. ನರಸಿಂಹಲು ಪಡಿವಾಟಿಯವರ ಬದುಕು-ಸಾಧನೆ ಹರಿಕೃಷ್ಣ 80 2007 ಇದೆ
326 ಕಾಗೋಡು ಒಂದು ನೆನಪು ಸಿ.ಬಿ.ಚಂದ್ರಶೇಖರ್ 40 2007 ಇದೆ
327 ಲೋಹಿಯಾ ಕೆ.ಪಿ.ಪುರ್ಣಚಂದ್ರ ತೇಜಸ್ವಿ   /  ಎಂ.ಡಿ.ನಂಜುಂಡ ಸ್ವಾಮಿ 45 2007 ಇಲ್ಲ
328 ನಟನೆಯ ಪಾಠಗಳು ಪ್ರಸನ್ನ 150 2007 ಇಲ್ಲ
329 ಡಾ.ಎಸ್.ಸಿ.ನಂದಿಮಠದ ಲೇಖನಗಳು ಡಾ.ಬಿ.ವ್ಹಿ.ಶಿರೂರ 400 2007 ಇಲ್ಲ
330 ಚಾಪ್ಲಿನ್ ಕುಂ.ವೀರಭದ್ರಪ್ಪ 120 2007 ಇಲ್ಲ
331 ವೃದ್ಧಾಪ್ಯದಲ್ಲಿ ಆರೋಗ್ಯ ಡಾ.ಇ.ವಿ.ವೆಂಕಟರಾಮ ಗುಪ್ತ 75 2007 ಇಲ್ಲ
332 ಶಿಶು ಸಂರಕ್ಷಣೆ ಡಾ.ಕರವೀರ ಪ್ರಭು ಕ್ಯಾಲಕೊಂಡ 75 2007 / 1999 ಇದೆ
333 ಲೂಯಿ ಪಾಸ್ಚರ್ ಜೆ.ಆರ್.ಲಕ್ಷ್ಮಣರಾವ್ 60 2008
334 KANNADA AS A CLASSICAL LANGUAGE ಡಾ. ಎಂ.ಚಿದಾನಂದ ಮೂರ್ತಿ    / ಪ್ರೊ. ಎಲ್.ಎಸ್.ಶೇಷಗಿರಿರಾವ್ 200 2008 ಇದೆ
335 ಕರ್ನಾಟಕ ಬರನಿರೋಧಕ ಜಾಣ್ಮೆಗಳು ಶ್ರೀ ಪಡ್ರೆ 90 2008 ಇಲ್ಲ
336 ತಾವರೆ ಎಲೆ ಮೇಲಿಟ್ಟ ತುತ್ತು ಬಿ.ಎಸ್.ಸೋಮಶೇಖರ್ 60 2008 ಇಲ್ಲ
337 ನಿರ್ಮಾಣ ಕಲೆ ಆನಂದತೀರ್ಥ ಪ್ಯಾಟಿ  / ನರೇಂದ್ರ ರೈ ದೇರ್ಲ 60 2008 ಇದೆ
338 ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ ಜಿ.ಕೆ.ಗೋವಿಂದರಾವ್ 100 2008 ಇದೆ
339 ಮಾಧ್ಯಮ-ಉದ್ಯಮ ಡಾ.ಬಿ.ಕೆ.ರವಿ   /  ಸತ್ಯಪ್ರಕಾಶ್ ಎಂ.ಆರ್. 70 2008 ಇಲ್ಲ
340 ಆಹಾರ ಮತ್ತು ಆರೋಗ್ಯ ಡಾ. ವಸುಂಧರಾ ಭೂಪತಿ 60 2008 ಇಲ್ಲ
341 ಆಕಾಶ ದೀಪ ಡಾ. ಎ.ಎಸ್.ಶಂಕರನಾರಾಯಣ 75 2008 ಇದೆ
342 ಇತಿಹಾಸ ಸಂಶೋಧಕ ಹುಲ್ಲೂರು  ಶ್ರೀನಿವಾಸ ಜೋಯಿಸರು ಡಾ.ಬಿ.ರಾಜಶೇಖರಪ್ಪ 40 2008 ಇದೆ
343 ಕುವೆಂಪು ಒಲವು ನಿಲುವು ಪುಸ್ತಕಮನೆ ಹರಿಹರಪ್ರಿಯ 150 2008 ಇದೆ
344 ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾ ದೇವು ಪತ್ತಾರ 45 2008 ಇದೆ
345 ತಿರುಳ್ಗನ್ನಡ ಪುಲಿಗೆರೆ ಪ್ರೊ. ಸದಾನಂದ ಕನವಳ್ಳಿ   / ಪ್ರೊ. ಸಿ.ವಿ.ಕೆರಿಮನಿ 50 2008 ಇದೆ
346 ದಲಿತ ತತ್ವಪದಕಾರ ಕಾಶೀನಾಥ ಪಂಚಶೀಲ ಗವಾಯಿ ಡಾ.ಮಲ್ಲಿಕಾರ್ಜುನ ಜೆ.ಅಮ್ಣೆ 40 2008 ಇದೆ
347 ದಮ್ಮಪದಸಾರ ಡಾ.ಡಿ.ಬಿ.ರಾಮಚಂದ್ರಾಚಾರ್ 40 2008 ಇದೆ
348 ದುತ್ತರಗಿ ಅವರ ಆಯ್ದ ನಾಟಕಗಳು ಗುಡಿಹಳ್ಳಿ ನಾಗರಾಜ 150 2008 ಇದೆ
349 ದೆಹಲಿ ನೋಟ ದಿನೇಶ್ ಅಮಿನ್ ಮಟ್ಟು 100 2008 ಇದೆ
350 ಪುರಾಣ ಭಾರತ ಕೋಶ ಯಜ್ಞನಾರಾಯಣ ಉಡುಪ 200 2008 ಇಲ್ಲ
351 ಡಾ.ಬಿ.ಆರ್.ಅಂಬೇಡ್ಕರ್ ವರ್ತಮಾನದೊಂದಿಗೆ ಮುಖಾಮುಖಿ ಡಾ.ಬಿ.ಯು.ಸುಮಾ 75 2008 ಇಲ್ಲ
352 ಬೈಲಪತ್ತಾರ ವಿಶ್ವಾನಾಥ ಎಲ್.ಬೈರಪತ್ತಾರ    / ಜಗನ್ನಾಥ, ಎಂ.ಬೈರಪತ್ತಾರ 55 2008 ಇದೆ
353 ಸುಡುಗಾಡು ಸಿದ್ಧ ಎಂ.ಎಸ್.ಗಂಟಿ 60 2008 ಇದೆ
354 ಪಾರ್ಧಿ ಡಾ.ಲಕ್ಕಿ ಪೃಥ್ವಿರಾಜ್   / ಎಚ್.ಪಿ.ಶಿಕಾರಿ ರಾಮು 65 2008 ಇದೆ
355 ಬುಡ್ಗಜಂಗಮ ಬಾಲಗುರುಮೂರ್ತಿ   /  ಪ್ರತಾಪ. ರಾ.ಬಹುರೂಪಿ 90 2008 ಇದೆ
356 ಸಿಂಧೊಳ್ಳು ಡಾ.ದೊಡ್ಡಮನಿ    / ಲೋಕರಾಜ ಶ್ರೀನಿವಾಸ್  / ಎಸ್.ರಾವುಲೋಳ್ 75 2008 ಇದೆ
357 ಸಿಕ್ಲಿಗರ ಡಾ.ಚಲವಾದಿ ಬಸವರಾಜ   / ಶೇಖರಸಿಂಗ್ ಎಸ್. 40 2008 ಇದೆ
358 ಶಿಳ್ಳೇಕ್ಯಾತ ಡಾ.ಸಣ್ಣವೀರಣ್ಣ ದೊಡ್ಡಮನಿ   /  ಪಿ.ಮಹೇಂದ್ರರರಾವ್ ಸಾಸ್ನೀಕ್ 100 2008 ಇದೆ
359 ಅಲೆಮಾರಿ ಕುರುಬ ಡಾ.ಯರ್ರಪ್ಪ ಡಿ. 95 2008 ಇದೆ
360 ರಾಜಗೊಂಡ ಡಾ.ಕೆ.ಎಂ.ಮೇತ್ರಿ    / ಸುದರ್ಶನ್ ಸೆಡ್ಮಾಕಿ 65 2008 ಇದೆ
361 ಹಂಡಿ ಜೋಗಿ ಚಂದ್ರಪ್ಪ ಎಂ.ದುಷಂತ್ 55 2008 ಇದೆ
362 ಹಕ್ಕಿಪಿಕ್ಕಿ ಕುಮುದಾ ಬಿ. ಸುಶೀಲಪ್ಪ 90 2008 ಇದೆ
363 ಕಂಜರಭಾಟ ಜೆ.ವ್ಹಿ.ಬಾಗಡೆ 70 2008 ಇದೆ
364 ಕಾಡುಗೊಲ್ಲ ಡಾ.ಎಂ.ಗುರುಲಿಂಗಯ್ಯ   / ವಿ.ನಾಗಪ್ಪ 80 2008 ಇದೆ
365 ಕೊರಮ ಮಲ್ಲಿಕಾರ್ಜುನ ಬಿ. ಮಾನ್ಪಡೆ 85 2008 ಇದೆ
366 ಡುಂಗ್ರಿ ಗರಾಸಿಯ ಜಗದೀಶ್ ಕೆ.ಕೆ. 85 2008 ಇದೆ
367 ಗೋಸಂಗಿ ಅಪ್ಪಾಜಿ.ಎಸ್.ಸಿಂಧೆ   /  ಕೆ.ಚಾವಡೆ ಲೋಕೇಶ್ 75 2008 ಇದೆ
368 ಗೋಂಧಳಿ ಶಿವಾನಂದ.ಲ.ಪಾಚಂಗಿ 65 2008 ಇದೆ
369 ಘಿಸಾಡಿ ಡಾ. ಬಸವರಾಜ   / ಎಸ್.ಹಿರೇಮಠ / ಅಂಜಲಿ ಸಾಳುಂಕಿ 75 2008 ಇದೆ
370 ದಕ್ಕಲಿಗ ಜಾನಕಲ್ ರಾಜಣ್ಣ.ಎಂ. 75 2008 ಇದೆ
371 ಚೆನ್ನದಾಸರ ಡಾ.ಯಲ್ಲಪ್ಪ ಬಿ. ಹಿಮ್ಮಡಿ 100 2008 ಇದೆ
372 ದೊಂಬಿದಾಸ ಕುಪ್ಪೆ ನಾಗರಾಜ 85 2008 ಇದೆ
373 ಬೀಜ ಕೃಷ್ಣಪ್ರಸಾದ್ 50 2008 ಇದೆ
374 ಮಣ್ಣು ಮತ್ತು ನೀರು ಶ್ರೀಪಡ್ರೆ 90 2008 ಇಲ್ಲ
375 ಅರಣ್ಯ ಶಿವಾನಂದ ಕಳವೆ 60 2008 ಇದೆ
376 ಆಹಾರ ಮತ್ತು ಆರೋಗ್ಯ ಬಿ.ಎಸ್.ಸೋಮಶೇಖರ್ 60 2008 ಇಲ್ಲ
377 ಜಾನುವಾರು ಡಾ.ಎಂ.ನಾರಾಯಣ ಸ್ವಾಮಿ 50 2008 ಇದೆ
378 ಕುರಿಸಾಕಣೆ ಡಾ.ಸಿ.ಎಸ್.ರಘುಪತಿ 35 2008 ಇಲ್ಲ
379 ಕೃಷಿ ಆಚರಣೆ ಮಲ್ಲಿಕಾರ್ಜುನ ಹೊಸಪಾಳ್ಯ 50 2008 ಇದೆ
380 ಕೃಷಿ ಉಪಕರಣ ಗಾಣದಾಳು ಶ್ರೀಕಂಠ 60 2008 ಇದೆ
381 ಕೀಟ/ರೋಗ ವಿಜಯ ಅಂಗಡಿ 50 2008 ಇಲ್ಲ
382 ತೋಟಗಾರಿಕೆ ಪುರ್ಣಪ್ರಜ್ಞ ಬೇಳೂರು 90 2008 ಇಲ್ಲ
383 ಭರತೇಶನ ದಿನಚರಿ    ಸರಸದ ದಿನಗಳು ಪಿ.ಕೆ.ನಾರಾಯಣ 50 2009 ಇಲ್ಲ
384 ಭರತೇಶನ ದಿನಚರಿ    ತಪಸ್ಸಿನ ದಿನಗಳು ಪಿ.ಕೆ.ನಾರಾಯಣ 75 2009 ಇಲ್ಲ
385 ಭರತೇಶನ ದಿನಚರಿ   ವಿಜಯದ ದಿನಗಳು ಪಿ.ಕೆ.ನಾರಾಯಣ 75 2009 ಇಲ್ಲ
386 ಭಾರತೀಯ ಕಲೆ ಎನ್. ಮರಿಶಾಮಾಚಾರ್ 80 2009 ಇದೆ
387 ಲಾಡ ಜನಾಂಗದ ನೆಲೆ ಹಾಗು ಸಂಸ್ಕೃತಿ ಜಯಪ್ರಕಾಶ್ ಎನ್.ಡಿ.ಲಾಡ್ 58 2009 ಇದೆ
388 ಪರಸ್ಪರ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ 130 2009 ಇದೆ
389 ವಿಜ್ಞಾನಿಗಳ ಬೆಳಕು ಶಶಿಧರ್ ವಿಶ್ವಾಮಿತ್ರ 120 2009 ಇದೆ
390 ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ ಇಂದಿರಾ ಹೆಗ್ಗಡೆ 200 2009 ಇಲ್ಲ
391 ಲಿಪಿಯ ಹುಟ್ಟು ಮತ್ತು ಬೆಳವಣಿಗೆ ಡಾ. ದೇವರಕೊಂಡಾ ರೆಡ್ಡಿ 200 2009 ಇದೆ
392 ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ 50 2009 ಇದೆ
393 ಮ್ಯಾಸ ಮಂಡಲ ಡಾ. ಮೀರಾಸಾಬಿಹಳ್ಳಿ ಶಿವಣ್ಣ 80 2009 ಇದೆ
394 ಮ್ಯಾಸಬೇಡರು ಡಾ.ಕೃಷ್ಣಮೂರ್ತಿ ಹನೂರು 120 2009 ಇದೆ
395 ಅಜ್ಜನ ಅಂದದ ಕಥೆಗಳು ಕಾಂಚ್ಯಾಣಿ ಶರಣಪ್ಪ 50 2009 ಇದೆ
396 ಗೊಂಚಲು ಹೊರೆಯಾಲ ದೊರೆಸ್ವಾಮಿ 80 2009 ಇದೆ
397 ಮೈಸೂರು ಚಾಮುಂಡೇಶ್ವರಿ ದೇವಸ್ಥಾನ ಮಹೇಶ್ ತಿಪ್ಪಶೆಟ್ಟಿ 40 2009 ಇದೆ
398 ಕಲೆವಾಲ (ಫಿನ್ಲೆಂಡಿನಜನಪದ ಮಹಾಕಾವ್ಯ) ಕೆ.ಆರ್.ಸಂಧ್ಯಾರೆಡ್ಡಿ 70 2009 ಇದೆ
399 ಹೆಳವರು ಎಂ.ಎಸ್.ಹೆಳವರು 65 2009 ಇದೆ
400 ಶ್ರೀವತ್ಸ ನಿಘಂಟು ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ 150 2009 ಇದೆ
401 ವಚನ ಭಾರತ ಪ್ರೊ. ಎ.ಆರ್.ಕೃಷ್ಣಶಾಸ್ತ್ರಿ 150 2009 ಇಲ್ಲ
402 ಗುರುನಾನಕ್ ಡಾ.ಡಿ.ಬಿ.ರಾಮ ಚಂದ್ರಾಚಾರ್ 50 2009 ಇದೆ
403 ಸಾಹಿತ್ಯ ರತ್ನ ಸಂಪುಟ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ 150 2010 ಇದೆ
404 ಲೋಕ ಮಿತ್ರರ ನಡುವೆ ಡಾ.ಎಚ್.ಟಿ.ಪೋತೆ 80 2010 ಇದೆ
405 ಸಸ್ಯ ಸಂಜೀವಿನಿ ಡಾ.ಶೈಲೇಶ್ ಎಂ.ಡಿ. 120 2010 ಇದೆ
406 ಸಂಕಥನ ಡಾ.ಕರೀಗೌಡ ಬೀಚನಹಳ್ಳೀ 80 2010 ಇದೆ
407 ದಿನಕರ ದೇಸಾಯಿ ಆಯ್ದ ಕವಿತೆಗಳು ವಿಷ್ಣು ನಾಯಕ್ 100 2010 ಇದೆ
408 ನಾಡೋಜ ಡಾ.ಎಸ್.ಕೆ. ಕರೀಂಖಾನ್ ಡಾ. ಪ್ರಕಾಶ್ ಬೊಮ್ಮಣ್ಣ ನಾಯ್ಕ 75 2010 ಇದೆ
409 ಪುಸ್ತಕ ಪ್ರಕಾಶನ ಡಾ. ರಮಾಕಾಂತ ಜೋಶಿ 100 2010 ಇದೆ
410 ಪರಿಸರ ಪರಿಜ್ಞಾನ ಡಾ.ಬಿ.ಎಸ್.ಸಿದ್ಧರಾಮಯ್ಯ  /  ಶ್ರೀಮತಿ ನಳಿನಿ ವೆಂಕಪ್ಪ  / ಡಾ.ಎಂ.ಎ.ನಾರಾಯಣ ರೆಡ್ಡಿ 50 2010 ಇದೆ
411 ಪರಿಗ್ರಹಣ ಡಾ. ಸಿ.ಪಿ.ಕೃಷ್ಣಕುಮಾರ್ 140 2010 ಇದೆ
412 ವೀರಶೈವ ಸಾಹಿತ್ಯ ಸಮೀಕ್ಷೆ ಪ್ರೊ. ಸದಾನಂದ ಕನವಳ್ಳಿ  &    ಪ್ರೊ. ಸಿ.ವಿ.ಕೆರಿಮನಿ 300 2010 ಇದೆ
413 ಪಂಪ ಮಹಾಕವಿಯ ವಿಕ್ರಮಾರ್ಜುನ ವಿಜಯ ಪ್ರೊ. ಎಚ್.ವಿ.ಶ್ರೀನಿವಾಸ್ ಶರ್ಮ 150 2010 ಇದೆ
414 ಬೀದರ್ ಜನಪದ ಸಿರಿ ಎಸ್.ಎಂ.ಜನವಾಡಾಕರ್ 65 2010 ಇದೆ
415 ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ ಡಾ.ಎಂ.ಚಿದಾನಂದ  ಮೂರ್ತಿ 15 2010 ಇದೆ
416 ಮಂಡ್ಯ ಜಿಲ್ಲೆಯ ದೇವಾಲಯಗಳು : ಒಂದು ಸಮೀಕ್ಷೆ ತೈಲೂರು ವೆಂಕಟಕೃಷ್ಣ 80 2010 ಇದೆ
417 ವಕೀಲರೊಬ್ಬರ ವಗೈರೆಗಳು ಸಿ.ಎಚ್.ಹನುಮಂತರಾಯ 350 2010 ಇಲ್ಲ
418 ಚಿಕ್ಕೋಳು ಈರಾಭಿ ಸಾ.ಚಾ.ಮಹದೇವನಾಯಕ್ 40 2010 ಇದೆ
419 ಅಧಿಕ ರಕ್ತದೊತ್ತಡ ಡಾ.ವಿ.ಪರಮೇಶ್ವರ 65 2010 ಇಲ್ಲ
420 ಜನಪದ ಶರಣ ಕಾವ್ಯಗಳು ಡಾ.ಪಿ.ಕೆ.ರಾಜಶೇಖರ್ 400 2010 ಇದೆ
421 ಕರ್ನಾಟಕ “ನಾಡಗೀತೆ” : ಒಂದು ವಿಶ್ಲೇಷಣೆ ಡಾ.ಎಂ.ಚಿದಾನಂದಮೂರ್ತಿ 10 2010 ಇದೆ
422 ಕವಿ ಕನಕದಾಸರು ಕಟ್ಟಿ ಶೇಷಾಚಾರ್ಯರು 100 2010 ಇದೆ
423 ಕುಸ್ತಿರಂಗದ ದಿಗ್ಗಜರು ಎಂ.ನರಸಿಂಹಮೂರ್ತಿ 55 2010 ಇದೆ
424 ಕುಮಾರವ್ಯಾಸನ ಕಾವ್ಯ ಚಿತ್ರಗಳು ಡಾ. ಎ.ವಿ.ಪ್ರಸನ್ನ 300 2010 ಇದೆ
425 ಕಥನ ಕವನಗಳು ಡಾ.ಚನ್ನಣ್ಣ ವಾಲೀಕಾರ 110 2010 ಇದೆ
426 ಡಾ.ಎಚ್.ತಿಪ್ಪೇರುದ್ರಸ್ವಾಮಿಯವರ ಸಾಹಿತ್ಯ ವಿಮರ್ಶೆಯ ತತ್ವಗಳು ಪ್ರೊ. ಶೈಲಜ ಎಚ್.ಟಿ. 120 2010 ಇದೆ
427 ಗದಗ ಜಿಲ್ಲೆ : ಒಂದು ಅಧ್ಯಯನ ಪ್ರೊ. ಸಿ.ವಿ.ಕೆರಿಮನಿ 200 2010 ಇದೆ
428 ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು ಡಾ. ವಸುಂಧರಾ ಭೂಪತಿ 80 2010 ಇದೆ
429 ಸಾಂಕ್ರಮಿಕ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಎನ್.ವಿಶ್ವರೂಪಾಚಾರ್ 60 2010 ಇದೆ
430 ನಾವು ಆರೋಗ್ಯ ಪೂರ್ಣವಾಗಿರಲು ನಮ್ಮ ಪರಿಸರ ಹೇಗಿರಬೇಕು? ಡಾ.ಬಿ.ಜಿ.ಚಂದ್ರಶೇಖರ್ 85 2010 ಇದೆ
431 ನಾವು ಆರೋಗ್ಯವಾಗಿರಲು ನಮ್ಮ ಆಹಾರ ಹೇಗಿರಬೇಕು? ಡಾ. ನಾ. ಸೋಮೇಶ್ವರ 80 2010 ಇದೆ
432 ನಮ್ಮ ಹೃದಯ ಅತೀ ಅಮೂಲ್ಯ ಆಸ್ತಿ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ 60 2010 ಇದೆ
433 ನೇತ್ರದಾನ ಮಹಾದಾನ ಡಾ.ಡಿ.ರವಿ ಪ್ರಕಾಶ್ 40 2010 ಇದೆ
434 ನಿಮ್ಮ ದೇಹದ ಬಗ್ಗೆ ನಿಮಗೆಷ್ಟು ಗೊತ್ತು? ಡಾ.ಕೆ.ಪಿ.ಪುತ್ತೂರಾಯ 75 2010 ಇದೆ
435 ಪಂಚೇದ್ರಿಯಗಳ ಆರೋಗ್ಯ ರಕ್ಷಣೆ ಡಾ.ಎಚ್.ಎಸ್.ಮೋಹನ್ 80 2010 ಇದೆ
436 ಶ್ವಾಸಕೋಶ ಉಸಿರಾಟದ ವ್ಯವಸ್ಥೆ ಡಾ.ಪಿ.ಎಸ್.ಶಂಕರ್ 70 2010 ಇದೆ
437 ಮನಸ್ಸು ಮಿದುಳು ಮತ್ತು ನರಮಂಡಲ ಆರೋಗ್ಯ ಡಾ.ಸಿ.ಆರ್.ಚಂದ್ರಶೇಖರ್ 45 2010 ಇದೆ
438 ಮೂಳೆಕೀಲುಗಳ ಆರೋಗ್ಯ ಡಾ.ಎಸ್.ಎಸ್.ಪಾಟೀಲ್ 80 2010 ಇದೆ
439 ಮಗು ನಿಮ್ಮ ಮನೆಯ ಬೆಳಕು ಡಾ.ಟಿ.ವೀಣಾ 55 2010 ಇದೆ
440 ಅಂದ ಚಂದ ಆರೋಗ್ಯಪೂರ್ಣ ಹಲ್ಲುಗಳು ನಿಮ್ಮದಾಗಬೇಕೆ? ಡಾ.ಕೆ.ಎಸ್.ನಾಗೇಶ್ 50 2010 ಇದೆ
441 ಜನಾರೋಗ್ಯಕ್ಕೆ ರೋಗಗ್ರಸ್ಥ ಔಷಧಿಗಳೇ? ಡಾ. ಪ್ರಕಾಶ್ ಸಿ.ರಾವ್ 50 2010 ಇದೆ
442 ಆರೋಗ್ಯ ಮಾಹಿತಿಯ ಸದುಪಯೋಗ ಡಾ.ಎಸ್.ಎನ್.ಗೋಪಾಲಕೃಷ್ಣ 60 2010 ಇದೆ
443 ಆರೋಗ್ಯ ಅನಾರೋಗ್ಯದ ಬಗ್ಗೆ ನಮ್ಮ ಮೂಡನಂಬಿಕೆಗಳು ಡಾ.ಎಂ.ವಿ.ರೇಣುಕಾರ್ಯ 25 2010 ಇದೆ
444 ಇಳಿವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಡಾ.ಸಿ.ಜಿ.ಕೇಶವಮೂರ್ತಿ 70 2010 ಇದೆ
445 ಹೃದಯಾಘಾತಕ್ಕೆ ಚಿಕಿತ್ಸೆ ಹಾಗೂ ನಿವಾರಣೆ ಡಾ. ಚಂದ್ರಕಾಂತ್ ಬಿ. ಪಾಟೀಲ್ 35 2010 ಇದೆ
446 ಕುಷ್ಠರೋಗ ಭಯಬೇಡ ಡಾ.ಬಿ.ಡಿ.ಸತ್ಯನಾರಯಣ 50 2010 ಇದೆ
447 ಕಣ್ಣುಗಳ ಆರೋಗ್ಯ ರಕ್ಷಣೆ ಡಾ.ಸಿ.ಆರ್.ತಿರುಮಲಾಚಾರ್ 50 2010 ಇದೆ
448 ಡಯಾಬಿಟೀಸ್ ಜೊತೆಗೆ ಸಹಬಾಳ್ವೆ ಡಾ.ಕೆ.ರಾಮಚಂದ್ರ 50 2010 ಇದೆ
449 ಗರ್ಭಕೋಶದ ಕಾಯಿಲೆಗಳಿಗೆ ಚಿಕಿತ್ಸೆ ಡಾ.ಎಚ್.ಗಿರಿಜಮ್ಮ 40 2010 ಇದೆ
450 ಗರ್ಭಧಾರಣೆಯಿಂದ ಪ್ರಸೂತಿಯವರೆಗೆ ಗರ್ಭಿಣಿ ಮತ್ತು ಭಾಣಂತಿಯ ಆರೈಕೆ ಡಾ ಸುನಂದ ರಾ. ಕುಲಕರ್ಣಿ 75 2010 ಇದೆ
451 ಚರ್ಮದ ಕಾಯಿಲೆಗಳು ಡಾ.ಬಿ.ಆರ್.ಸುಹಾಸ್ 65 2010 ಇದೆ
452 ಪಿ.ಕೆ.ನಾರಾಯಣ ಅವರ ಆಯ್ದ ಕವನಗಳು ಡಾ. ವರದಾ ಶ್ರೀನಿವಾಸ 80 2011 ಇದೆ
453 ಪ್ರೀತಿಯ ಕಾಳು ವಿಠ್ಠಲ್ ಭಂಡಾರಿ 100 2011 ಇದೆ
454 ಸಮಗ್ರ ಮಕ್ಕಳ ಕಾವ್ಯ ಶಂಭು ಬೀರಾದಾರ್ 80 2011 ಇದೆ
455 ಸಂಗಾತಿ ಡಾ.ಕೆ.ಮರುಳಸಿದ್ಧಪ್ಪ 100 2011 ಇದೆ
456 ನಾಟಕಗಳು ಇಂದಿನವರೆಗೆ ಎಚ್.ಎಸ್. ಶಿವಪ್ರಕಾಶ್ 400 2011 ಇದೆ
457 ಪಾಷಾಣದ ಹಂಗು ಡಾ.ಟಿ.ಎಸ್.ವಾಸುದೇವ ಮೂರ್ತಿ 100 2011 ಇದೆ
458 ಪುರಾತತ್ವ ಪಿತಾಮಹ ಬಿ.ಎಲ್.ರೈಸ್ ಜೀವನ -ಸಾಧನೆ ಡಾ. ಎಸ್.ಎಲ್.ಶ್ರೀನಿವಾಸ ಮೂರ್ತಿ 150 2011 ಇದೆ
459 ಶಬ್ಧ ಬೋದೆ ನಾನಾರ್ಥ ನಿಘಂಟು-ತತ್ವನಿರ್ಣಯ ಮತ್ತು ಆರೋಗ್ಯ ನಿರ್ಣಯ ಡಾ.ಎಸ್.ಆರ್. ವಿಘ್ನರಾಜ್ 80 2011 ಇದೆ
460 ಬುದ್ಧ ಬಸವ ಮತ್ತು ಬಾಬಾ ಸಾಹೇಬ್ ಮಹಾಬಲೇಶ್ವರ ಕಾಟ್ರಹಳ್ಳಿ 100 2011 ಇದೆ
461 ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ ಡಾ. ಅನಸೂಯ ಕೆ. ಕಾಂಬಳೆ 120 2011 ಇದೆ
462 ಹೊಸ ಅಲೆಗೆ ನಾಂದಿ ಎಂ.ಆರ್.ರಕ್ಷಿತ್ 25 2011 ಇದೆ
463 ಕಾಸರಗೋಡಿನ ಕನ್ನಡ ಹೋರಾಟ ಬಾ ಸದಾನಂದ ಪೆರ್ಲ 150 2011 ಇದೆ
464 ಕನಸಿಗೊಂದು ಕಣ್ಣು ಶೂದ್ರ ಶ್ರೀನಿವಾಸ್ 80 2011 ಇದೆ
465 ಕನ್ನಡ ಭಾಗವತ ಕಾವ್ಯ ಸಮೀಕ್ಷೆ ಡಾ.ಎಂ.ಬಿ. ಪ್ರಮಿಳಾಬಾಯ್ 125 2011 ಇದೆ
466 ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ ಡಾ. ಬಿ.ಟಿ.ಅನುರಾಧ 120 2011 ಇದೆ
467 ಕಯ್ಯಾರ ಗದ್ಯ ಸೌರಭ ರಾಧಾಕೃಷ್ಣ ಕೆ. ಉಳಿಯತ್ತಡ್ಕ 150 2011 ಇದೆ
468 ಕಾಡಿನ ಮಕ್ಕಳ ಒಡನಾಟದಲ್ಲಿ ಕ್ಷೀರಸಾಗರ 75 2011 ಇದೆ
469 ಹೊಸಗನ್ನಡದ ಅರುಣೋದಯ ಡಾ.ಶ್ರೀನಿವಾಸ ಹಾವನೂರ 350 2011 ಇಲ್ಲ
470 ಆರೋಗ್ಯ ಜೀವನಕ್ಕೆ ಅನುಪಾನ ಡಾ.ಪಿ.ಎಸ್.ಶಂಕರ್ 80 2011 ಇದೆ
471 ಜೋಳದರಾಶಿ ದೊಡ್ಡನಗೌಡರು ಡಾ. ಶಂಭು ಬಳಿಗಾರ 70 2012 ಇದೆ
472 ಬಾರೋ ಬಾರೋ ಚಂದ್ರಮ ಎ.ಕೆ. ರಾಮೇಶ್ವರ & ಪ್ರೊ. ಸಿ.ವಿ.ಕೆರಿಮನಿ 150 2012 ಇದೆ
473 ಬೋಧ ಒಂದೇ ಬ್ರಹ್ಮನಾದ ಒಂದೇ ಡಾ.ಮಂಜುಳಾ ಅಶೋಕ್ಕುಮಾರ್ ಮಲ್ಹಾರಿ 120 2012 ಇದೆ
474 ಭಕ್ತ ಅಂಬರೀಷ ಎಂ.ವಿ.ಸುಬ್ಬಯ್ಯನಾಯ್ಡು 65 2012 ಇದೆ
475 ನಾ ಕಂಡ ಪುಟ್ಟಣ್ಣ ಕಣಗಾಲ್ ಡಾ. ಡಿ.ಬಿ.ಬಸವೇಗೌಡ 150 2012 ಇದೆ
476 ನೆಲಸಂಪಿಗೆ ಸಂಪುಟ-1 ಡಾ.ಚಂದ್ರಶೇಖರ ಕಂಬಾರ 400 2012 ಇದೆ
477 ವಿ. ಶಿವಾನಂದರ ಸಂಶೋದನ ಪ್ರಬಂಧಗಳು ಡಾ. ವೀರಣ್ಣ ರಾಜುರ್ 120 2012 ಇದೆ
478 ಜನಪದ ಸಾಹಿತ್ಯದಲ್ಲಿ ಪವಾಡಗಳು ಡಾ.ಸರಸ್ವತಿ ಶ್ರೀಕಂಠಯ್ಯ 160 2012 ಇದೆ
479 ರಾಷ್ಟ್ರೀಯತೆ ಮತ್ತು ಕಾವ್ಯ ಡಾ. ನಿರುಪಮ ಲಲಿತಾ ಶಾಸ್ತ್ರಿ 100 2012 ಇದೆ
480 ರಾಜಾ ವಿಕ್ರಮ ಹೆಚ್.ಕೆ. ಯೋಗಾನರಸಿಂಹ 70 2012 ಇದೆ
481 ರಾಘವ ಅವರ ಗೇಯಕವನಗಳು ಡಾ. ದೊಡ್ಡರಂಗೇಗೌಡ 65 2012 ಇದೆ
482 ಕಣ್ಣಿಕಿತ್ತ ಹಸು ಮತ್ತು ಇತರೆ ಕಥೆಗಳು ಪ್ರೊ. ಸುಧಾಕರ 130 2012 ಇದೆ
483 ಡಾ. ಲಕ್ಷ್ಮಣದಾಸ್ ಗುಡಿಹಳ್ಳಿ ನಾಗರಾಜ 50 2012 ಇದೆ
484 ತೆರೆದ ಪಠ್ಯ ನಟರಾಜ್ ಹುಳಿಯಾರ್ 175 2012 ಇದೆ
485 ಶಾಸ್ತ್ರೀಯಭಾಷೆ ನಡೆದುಬಂದ ದಾರಿ ಜೆ.ಎನ್.ಶ್ಯಾಮರಾವ್ 120 2012 ಇದೆ
486 ಸಾವಳಗಿ ಮಹ್ಮದಸಾಬ ಶ್ರೀ ಎ.ಕೆ.ರಾಮೇಶ್ವರ 70 2012 ಇದೆ
487 ಪ್ರಭುರಾವ್ ಕಂಬಳಿವಾಲೆ ಡಾ. ರಘುಶಂಕ ಭಾತಂಬ್ರಾ 50 2012 ಇದೆ
488 ಪದ್ಮಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳು ಬಿ. ಸಿದ್ಧಗಂಗಯ್ಯ ಕಂಬಾಳು 50 2012 ಇದೆ
489 ಪ್ರೊ. ಎಸ್.ಎಸ್. ಭೂಸನೂರಮಠ ಡಾ.ಮಲ್ಲಿಕಾರ್ಜುನ ಕಂಬಾರ 60 2012 ಇದೆ
490 ಬಸವರಾಜ ಕಟ್ಟೀಮನಿ ಕೊತ್ತಲ ಮಹಾದೇವಪ್ಪ 60 2012 ಇದೆ
491 ಬುದ್ಧಿವಂತ ಶೆಟ್ಟಿ ಡಾ.ವ್ಹಿ.ಜಿ.ಪೂಜಾರ 60 2012 ಇದೆ
492 ಬಿ.ಎಂ.ಶ್ರೀಕಂಠಯ್ಯ ಟಿ.ಎಸ್.ದಕ್ಷಿಣಾಮೂರ್ತಿ 60 2012 ಇದೆ
493 ಸಿದ್ಧನಾಥ ಬಳ್ಳಾರಿ ಡಾ.ಶಂಕುಂತಲಾ ಎಂ. ಹೆಗಡೆ 60 2012 ಇದೆ
494 ಶಿವರುದ್ರಪ್ಪ ಸೋಮಪ್ಪ ಕುಲಕರಣಿ ಡಾ.ಎಸ್.ಆರ್.ಗುಂಜಾಲ್ 50 2012 ಇದೆ
495 ಸರ್ ಸಿದ್ಧಪ್ಪ ಕಂಬಳಿ ಪ್ರೊ.ಸಿ.ವಿ.ಕೆರಿಮನಿ 70 2012 ಇದೆ
496 ಮ.ರಾಮಮೂರ್ತಿ ಡಾ.ಸಿ.ಆರ್. ಗೋವಿಂದರಾಜು 50 2012 ಇದೆ
497 ಮಂಗಳವೇಡೆ ಶ್ರೀನಿವಾಸರಾಯರು ಶ್ರೀಮತಿ ಕವಿತಾ ಕುಲಕರ್ಣಿ 40 2012 ಇದೆ
498 ಜಯತೀರ್ಥ ರಾಜ ಪುರೋಹಿತ ಡಾ. ಬಸವರಾಜ ಸಬರದ 50 2012 ಇದೆ
499 ಜಯದೇವಿತಾಯಿ ಲಿಗಾಡೆ ಡಾ.ಸೋಮನಾಥ ಯಾಳವಾರ 60 2012 ಇದೆ
500 ಆರ್. ನರಸಿಂಹಾಚಾರ್ಯ ಡಾ.ಜಿ.ಆರ್.ತಿಪ್ಪೇಸ್ವಾಮಿ 50 2012 ಇದೆ
501 ಆರ್.ನಾಗನಗೌಡ ಡಾ.ಎಫ್.ಟಿ.ಹಳ್ಳಿಕೇರಿ 60 2012 ಇದೆ
502 ಜಿ.ಎಂ.ಗುರುಸಿದ್ಧ ಶಾಸ್ತ್ರಿಗಳು ಎ.ಕೆ.ರಾಮೇಶ್ವರ 70 2012 ಇದೆ
503 ರಂಗ ಅಭಿನೇತ್ರಿ ರಹಮಾನವ್ವ ಕಲ್ಮನಿ ಹೆಚ್.ಎಸ್.ಪಾಟೀಲ್ 60 2012 ಇದೆ
504 ರಾಮಜಾಧವ ಡಾ.ರಾಮಕೃಷ್ಣ ಮರಾಠೆ 50 2012 ಇದೆ
505 ರಂಗನಾಥ ದಿವಾಕರ ಮನೋಜಾ ಪಾಟೀಲ್ 70 2012 ಇದೆ
506 ಹುಯಿಲಗೋಳ ನಾರಾಯಣರಾಯರು ಪ್ರೊ.ಸಂಪದಾ ಸುಭಾಷ್ 60 2012 ಇದೆ
507 ಕ.ವೆಂ.ರಾಘವಾಚಾರ್ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ 60 2012 ಇದೆ
508 ಕ.ಹು.ಬಿಜಾಪುರ ಡಾ.ಅರ್ಜುನ್ ಗೊಳಸಂಗಿ 40 2012 ಇದೆ
509 ಕೂಡಲಿ ಚಿದಂಬರಂ ಹೊರೆಯಾಲ ದೊರೆಸ್ವಾಮಿ 60 2012 ಇದೆ
510 ಕೂತಂಡ ಪಾರ್ವತಿ ಪೂವಯ್ಯ ಡಾ.ಎಂ.ಪಿ.ರೇಖಾ 50 2012 ಇದೆ
511 ಕಡಣಿಯ ಕಲ್ಲಪ್ಪ ಶ್ರೀಮತಿ ಸರ್ವಮಂಗಳಾ ದೇವಿ ಕಿ.ಬಾಂದೇಕರ 60 2012 ಇದೆ
512 ಕೋಟಾ ರಾಮಕೃಷ್ಣ ಕಾರಂತ ಡಾ. ವಸಂತಕುಮಾರ ಪೇರ್ಲ 60 2012 ಇದೆ
513 ಡಾ.ಬೆಟಗೇರಿ ಕೃಷ್ಣಶರ್ಮ ಡಾ.ನಿಜಲಿಂಗಪ್ಪ ಮಟ್ಟಿಹಾಳ್ 60 2012 ಇದೆ
514 ಡಾ.ಆರ್.ಸಿ.ಹಿರೇಮಠ ಪ್ರೊ.ಎಸ್.ಬಿ.ಕರಿಭರಮಗೌಡರು 60 2012 ಇದೆ
515 ಡಾ.ಎಂ.ಬಿ.ನೇಗಿನಹಾಳ ಪ್ರಕಾಶ ಕಲ್ಲಪ್ಪ ಗಿರಿಮಲ್ಲವರ 60 2012 ಇದೆ
516 ಖಾದ್ರಿ ಶಾಮಣ್ಣ ಹೆಚ್.ಆರ್. ಶ್ರೀಶ 70 2012 ಇದೆ
517 ತಾಳಕೇರಿ ಬಸವರಾಜ ಡಾ.ದಸ್ತಗೀರಸಾಬ್ ದಿನ್ನಿ 50 2012 ಇದೆ
518 ಚನ್ನಬಸವ ಬೆಟ್ಟದೂರು ಡಾ. ಸ್ವಾಮಿರಾವ್ ಕುಲಕರ್ಣಿ 40 2012 ಇದೆ
519 ದೊಡ್ಡಪ್ಪ ಅಪ್ಪ ಡಾ.ಎಸ್.ಎಂ.ಹಿರೇಮಠ 60 2012 ಇದೆ
520 ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ(ವಡ್ಡಾರಾಧನೆ) ಡಾ. ಶಾಂತಿನಾಥ ದಿಬ್ಬದ 220 2012 ಇದೆ
521 ನಯಸೇನ ವಿರಚಿತ ಧರ್ಮಾಮೃತ ಡಾ. ಶುಭಚಂದ್ರ 300 2012 ಇದೆ
522 ನಾರಾಯಣಶರ್ಮ ವಿರಚಿತ ಮುದ್ರಾಮಂಜೂಷವು ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ 280 2012 ಇದೆ
523 ನಿಜಗುಣ ಶಿವಯೋಗಿ ವಿರಚಿತ ವಿವೇಕ ಚಿಂತಾಮಣಿ ಡಾ. ಶಿವಲಿಂಗಯ್ಯ ಜಿ.ಎ. 200 2012 ಇದೆ
524 ಮುದ್ದಣ ವಿರಚಿತ ರಾಮಾಶ್ವಮೇಧಂ ಡಾ. ಗಾಯತ್ರಿ ನಾವಡ 160 2012 ಇದೆ
525 ಹರಿಹರ ವಿರಚಿತ ಕನ್ನಡ ಶರಣರ ಕಥೆಗಳು ಡಾ. ಎಂ.ಎಂ. ಕಲಬುರ್ಗಿ 200 2012 ಇದೆ
526 ತಿರುಮಲಾರ್ಯ ವಿರಚಿತ ಚಿಕ್ಕದೇವರಾಯ ವಂಶಾವಳಿ ಡಾ. ಹೆಚ್.ಎಂ. ನಾಗರಾಜರಾವ್ 100 2012 ಇದೆ
527 ಚಾವುಂಡರಾಯ ವಿರಚಿತ ಚಾವುಂಡರಾಯ ಪುರಾಣ ಡಾ. ಎಂ.ಎ. ಜಯಚಂದ್ರ 250 2012 ಇದೆ
528 ದುರ್ಗಸಿಂಹ ವಿರಚಿತ ಕರ್ನಾಟಕ ಪಂಚತಂತ್ರಂ ಡಾ. ಪಿ.ವಿ.ನಾರಾಯಣ 150 2012 ಇದೆ
529 ದೇವಚಂದ್ರ ವಿರಚಿತ ರಾಜಾವಳಿ ಕಥೆ ಡಾ. ರಾಮೇಗೌಡ (ರಾಗೌ) 260 2012 ಇದೆ
530 ಲೈಂಗಿಕತೆ ಮತ್ತು ಆಯುರ್ವೇದ ಡಾ. ವಸುಂಧರಾ ಭೂಪತಿ 80 2012 ಇದೆ
531 ಸಾಮಾನ್ಯ ಔಷಧಿ ಬಳಕೆ ಡಾ.ಕಿರುಗಾವಲು ರಮೇಶ್ 2012 ಇಲ್ಲ
532 ಸಮಾಜ ಮತ್ತು ಆರೋಗ್ಯ ಡಾ.ಎಂ.ಎಸ್.ರಾಜಣ್ಣ 60 2012 ಇದೆ
533 ನಮ್ಮ ಒಡಲ ವಿಸರ್ಜನಾಂಗಗಳು ಡಾ.ನಾ.ಸೋಮೇಶ್ವರ 90 2012 ಇದೆ
534 ನಮಗರಿವಿಲ್ಲದೆ ಬರುವ ಆರು ರೋಗಗಳು ಮತ್ತಿತರ ವೈದ್ಯ ಲೇಖನಗಳು ಡಾ.ನಾ.ಸೋಮೇಶ್ವರ 75 2012 ಇದೆ
535 ನಗು-ಅತ್ಯುತ್ತಮ ಔಷಧಿ ಡಾ.ಕೆ.ಪಿ.ಪುತ್ತೂರಾಯ 50 2012 ಇದೆ
536 ನೋವಿನ ಮಂಡಿ ಡಾ.ಜಾನ್ ಎಬಿನೇಜರ್ 50 2012 ಇದೆ
537 ನಿತ್ಯ ಜೀವನದಲ್ಲಿ ಆರೋಗ್ಯದ ಅರಿವು ಡಾ.ಕೆ.ಎನ್.ಪ್ರಸಾದ್ 120 2012 ಇದೆ
538 ಪ್ರಾಣ ಉಳಿಸಲು ಪ್ರಥಮ ಚಿಕಿತ್ಸೆ ಡಾ.ಬಿ.ಜಿ.ಚಂದ್ರಶೇಖರ್ 100 2012 ಇದೆ
539 ಬಡವರ ಬಾದಾಮಿ - ಹೋಮಿಯೋಪತಿ ಡಾ.ಬಿ.ಟಿ.ರುದ್ರೇಶ್ 50 2012 ಇದೆ
540 ಲಸಿಕಾ ಲೋಕ ಡಾ. ಕರವೀರಪ್ರಭು ಕ್ಯಾಲಕೊಂಡ 90 2012 ಇದೆ
541 ಮನಸ್ಸು ಮತ್ತು ಆರೋಗ್ಯ ಡಾ.ಅ.ಶ್ರೀಧರ 70 2012 ಇದೆ
542 ಮನಸ್ಸಿನ ಸುಖ – ದುಃಖ ಡಾ.ಸಿ.ಆರ್.ಚಂದ್ರಶೇಖರ್ 80 2012 ಇದೆ
543 ಮೂತ್ರ ರೋಗಗಳ ಶಸ್ತ್ರಕ್ರಿಯೆ ಡಾ. ಎಸ್.ಎಸ್.ನರಸಣಗಿ 80 2012 ಇದೆ
544 ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಡಾ. ಶಮಂತಕಮಣಿ ನರೇಂದ್ರನ್ 60 2012 ಇದೆ
545 ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಡಾ.ಸಿ.ಆರ್.ಚಂದ್ರಶೇಖರ್ 80 2012 ಇದೆ
546 ವೈದ್ಯ ಪದಗಳ ಅರ್ಥ ವಿವರಣಕೋಶ ಶ್ರೀ ಎನ್.ವಿಸ್ವರೂಪಾಚಾರ್ 70 2012 ಇದೆ
547 ವೈದ್ಯ-ವಿಜ್ಞಾನದ ರೋಗ ಪತ್ತೆ ಪರೀಕ್ಷೆಗೆ ಇತಿ-ಮಿತಿಗಳು ಡಾ. ಎಸ್.ದ್ವಾರಕನಾಥ್ 60 2012 ಇದೆ
548 ಆರೋಗ್ಯ ಆಧಾರ ನೈರ್ಮಲ್ಯ ಡಾ.ಪ್ರಕಾಶ್ ಸಿ.ರಾವ್ 60 2012 ಇದೆ
549 ಇಂದಿನ ಮಹಿಳೆಯ ಮಾನಸಿಕ ಸವಾಲುಗಳು ಡಾ.ಕೆ.ಎಸ್.ಪವಿತ್ರ 100 2012 ಇದೆ
550 ರೈತರ ಮತ್ತು ಕಾರ್ಮಿಕರ ಆರೋಗ್ಯ ಸಮಸ್ಯೆಗಳು ಡಾ. ಎಂ.ಬಿ.ರಾಮಮೂರ್ತಿ 140 2012 ಇದೆ
551 ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಡಾ.ಎ.ಆರ್.ಸೋಮಶೇಖರ್ 60 2012 ಇದೆ
552 ಉದ್ಯೋಗಸ್ಥ ಮಹಿಳೆಯರ ತೊಂದರೆಗಳು ಮತ್ತು ಆರೋಗ್ಯ ಡಾ. ಸುನಂದಾ ಕುಲಕರ್ಣಿ 60 2012 ಇದೆ
553 ಏಡ್ಸ್‌-50 ಪ್ರಶ್ನೆಗಳು ಮತ್ತು ಪ್ರಚಲಿತ ಸಮಸ್ಯೆಗಳು ಡಾ.ಎಚ್.ಎಸ್.ಮೋಹನ್ 60 2012 ಇದೆ
554 ಹೃದಯ ಜ್ಯೋತಿ ಡಾ.ಪಿ.ಎಸ್.ಶಂಕರ್ 90 2012 ಇದೆ
555 ಹೃದ್ರೋಗಗಳು – 80 ಪ್ರಶ್ನೆಗಳು ಡಾ.ಸಿ.ಜಿ.ಕೇಶವಮೂರ್ತಿ 40 2012 ಇದೆ
556 ಹೊಟ್ಟೆಯ ಬೇನೆಗಳು ಅರವಿಂದ ಡಗಲಿ 70 2012 ಇದೆ
557 ಕ್ಯಾನ್ಸರ್ ಡಾ.ಪಿ.ಕೇಶವ ಮೂರ್ತಿ 60 2012 ಇದೆ
558 ದುಶ್ಚಟಗಳಿಂದ ದೂರವಿರಿ ಡಾ.ಕೆ.ಆರ್.ಶ್ರೀಧರ 70 2012 ಇದೆ
559 ಚರ್ಮ ಮತ್ತು ಲೈಂಗಿಕ ರೋಗಗಳು ಕಾರಣ ಮತ್ತು ಪರಿಹಾರ ಡಾ.ಬಿ.ಡಿ.ಸತ್ಯನಾರಾಯಣ 80 2012 ಇದೆ
560 ದೇಹವೆಂಬ ದೇವವೀಣೆ ಡಾ.ವಸಂತ ಅ. ಕುಲಕರ್ಣಿ 100 2012 ಇದೆ
561 ಅಜ್ಞಾತನೊಬ್ಬನ ಆತ್ಮಚರಿತ್ರೆ ಡಾ. ಕೃಷ್ಣಮೂರ್ತಿ ಹನೂರು 110 2015 ಇದೆ
562 ಪ್ರಾಚೀನ ಕಾವ್ಯ ಚಿಂತನ ಡಾ. ರಾಗೌ 200 2015 / 2007 ಇದೆ
563 ಡಾ. ಶಿ.ಚ. ನಂದೀಮಠ ಡಾ. ರಾಜಶೇಖರ ಇಚ್ಚಂಗಿ 75 2016 ಇದೆ
564 ಸಾಪೇಕ್ಷೆತಾ ಸಿದ್ಧಾಂತ ಡಾ. ಬಿ. ಸಿದ್ದಲಿಂಗಪ್ಪ 180 2016 ಇದೆ
565 ಆಕಾಶವಾಣಿಯ ಅಂತರಾಳ ಶ್ರೀಮತಿ ನೂತನ ಎಂ. ದೋಶೆಟ್ಟಿ 105 2016 ಇದೆ
566 ಪೆರಿಯಾರ್ ಚಿಂತನೆ ಡಾ. ಸಿ. ಚಂದ್ರಪ್ಪ 100 2016 ಇದೆ
567 ‘ನೇಗಿಲಯೋಗಿ’ಯ ದಾರಿಯ ಬುತ್ತಿ ಶ್ರೀ ವಿಷ್ಣು ನಾಯ್ಕ 95 2016 ಇದೆ
568 ಸಾವಿತ್ರಿ ಬಾಯಿ ಫುಲೆ ಡಾ. ಎಚ್.ಎಸ್. ಅನುಪಮಾ 50 2016 ಇದೆ
569 ಒಳ್ಳೆಯದನ್ನು ಪ್ರೀತಿಸು ಶ್ರೀ ಎಂ.ಡಿ. ಗೋಗೇರಿ 60 2016 ಇದೆ
570 ಮಲೆನಾಡು : ದೀವರ ಸಾಂಸ್ಕೃತಿಕ ಸಂಕಥನ ಶ್ರೀ ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ 175 2016 ಇದೆ
571 ಮಲೆನಾಡಿನ ಹಳೆಪೈಕರು ಶ್ರೀ ಎನ್. ಹುಚ್ಚಪ್ಪ ಮಾಸ್ಟರ್ ಕುಗ್ವೆ  / ಎನ್. ಶಿವಾನಂದ ಕುಗ್ವೆ 250 2016 ಇದೆ
572 ಚಪ್ಪರ್ ಬಂದ್ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ 120 2016 ಇದೆ
573 ಇಸ್ಲಾಂ ಸಂಸ್ಕೃತಿ ಪ್ರೊ.  ಮಹಮ್ಮದ್ ಅಬ್ಬಾಸ್ ಷೂಸ್ತ್ರಿ  / ಶ್ರೀ ಬಿ.ಎಂ. ಶ್ರೀಕಂಠಯ್ಯ 150 2016 ಇದೆ
574 ಷೇಕ್ಸ್ ಪಿಯರ್ ಮಹಾನಾಟಕಗಳು ಸಂಪುಟ-1 ಪ್ರೊ. ಕೆ.ಎಸ್. ಭಗವಾನ್ 200 2016 ಇದೆ
575 ಷೇಕ್ಸ್ ಪಿಯರ್ ಮಹಾನಾಟಕಗಳು ಸಂಪುಟ-2 ಪ್ರೊ. ಕೆ.ಎಸ್. ಭಗವಾನ್ 200 2016 ಇದೆ
576 ಮಾಂಗ್ ಗಾರುಡಿ ಡಾ. ಆರ್.ಬಿ. ಕುಮಾರ್ 75 2016 ಇದೆ
577 ತಿಂತಿಣಿ ಮೌನೇಶ್ವರರ ವಚನಗಳು  (ತಾತ್ಪರ್ಯ ಸಹಿತ) ಡಾ. ವೀರೇಶ ಬಡಿಗೇರ 170 2016 ಇದೆ
578 ಮಹಾತ್ಮ ಜ್ಯೋತಿಬಾ ಫುಲೆ ಶ್ರೀ ಸದಾಶಿವ ಮರ್ಜಿ 75 2016 / 2010 ಇದೆ
579 ಪ್ರೊ. ಬಿ. ಕೃಷ್ಣಪ್ಪ ಚಿಂತನೆಗಳು - ಬರಹಗಳು ಪ್ರೊ. ಬಿ. ಕೃಷ್ಣಪ್ಪ 145 2017 ಇದೆ
580 ಮೊರಸನಾಡು ಕಥೆಗಳು ಶ್ರೀ ಸ ರಘುನಾಥ   / ಶ್ರೀ ಆರ್ ವಿಜಯರಾಘವನ 150 2017 ಇದೆ
581 ಗಂಟಿಚೋರ್ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ 120 2017 ಇದೆ
582 ಶಾಂತವೇರಿ ಗೋಪಾಲಗೌಡ ಡಾ. ನಾ. ಡಿಸೋಜ 40 2017 ಇದೆ
583 ಭಾಷಾ ಚಳವಳಿಗಳು ಡಾ. ಸಿ.ಆರ್. ಗೋವಿಂದರಾಜು 70 2017 ಇದೆ
584 ರೈತ ಚಳವಳಿಗಳು ಡಾ. ಬಿ.ಸಿ. ಸವಿತ 75 2017 ಇದೆ
585 ಕರಡಚ್ಚು ತಿದ್ದುವಿಕೆ ಮತ್ತು ಕನ್ನಡ ಭಾಷೆ ಪ್ರೊ. ಜಿ. ಅಶ್ವತ್ಥನಾರಾಯಣ 170 2017 ಇದೆ
586 ಕಾಯಕ ಜೀವಿಗಳ ಕಣ್ಮಣಿ ಕಾಮ್ರೇಡ್ ಸೂರಿ ಶ್ರೀ ಎಸ್. ಆರ್. ಆರಾಧ್ಯ 75 2017 ಇದೆ
587 ಅಂಚೆ ಪೇದೆಯ ಆತ್ಮ ಕಥನ ಶ್ರೀ ವಿಡಂಬಾರಿ 85 2017 ಇದೆ
588 ಶ್ರೀಮತಿ ಮಾಲತಿಸರೋಜ್ ಬಿ. ಶಿವಾನಂದ 95 2017 ಇದೆ
589 ಪುಲಿಗೆರೆ ಸೋಮಕವಿಯ ಸೋಮೇಶ್ವರ ಶತಕಂ ಡಾ. ಅಕ್ಕಮಹಾದೇವಿ 150 2017 ಇದೆ
590 ಶ್ರೀ ವಿಜಯನ ಕವಿರಾಜಮಾರ್ಗಂ ಡಾ. ಆರ್ವಿಯಸ್ ಸುಂದರಂ 250 2017 ಇದೆ
591 ಬೈಬಲ್ ಮಾದರಿಯ ವಚನ ಸಂಪುಟಗಳು ಡಾ. ಎಂ.ಎಂ. ಕಲಬುರ್ಗಿ 600 2017 ಇದೆ
592 ಬರ್ಕ್ ವೈಟ್ ಕಂಡ ಭಾರತ ಡಾ. ಕೆ.ಆರ್. ಸಂಧ್ಯಾರೆಡ್ಡಿ 120 2017 / 2011 / 2007 / 2001 ಇದೆ
593 ಪದ್ಮಭೂಷಣ ಡಾ. ಎಚ್. ನರಸಿಂಹಯ್ಯನವರು (ಸಂಕ್ಷಿಪ್ತ ಜೀವನ ಚಿತ್ರಣ) ಪ್ರೊ. ಬಿ. ಗಂಗಾಧರಮೂರ್ತಿ 75 2017 / 2014 / 2013 ಇದೆ

ಬಾಹ್ಯ ಸಂಪರ್ಕಗಳು

ಬದಲಾಯಿಸಿ