ಆದಿ ಕೈಲಾಶ ಪರ್ವತದ ಹತ್ತಿರವಿರುವ ಓಂ ಪರ್ವತ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಒಂದು ಪರ್ವತ. ಇದು ಪಶ್ಚಿಮ ನೇಪಾಳದ ದಾರ್ಚುಲಾ ಜಿಲ್ಲೆ ಮತ್ತು ಉತ್ತರಾಖಂಡಪಿಥೋರಾಗಢ್ ಜಿಲ್ಲೆಯಲ್ಲಿ ನೆಲೆಗೊಂಡಿದೆ.

Om Parvat.JPG

ಹಿಂದೂಗಳು ಈ ಪರ್ವತವನ್ನು ಪವಿತ್ರವೆಂದು ಪರಿಗಣಿಸುತ್ತಾರೆ ಮತ್ತು ಇದರ ಹಿಮ ಶೇಖರಣಾ ವಿನ್ಯಾಸ ಪವಿತ್ರ ಓಂ (ॐ) ಅನ್ನು ಹೋಲುತ್ತದೆ. ಇದರ ನೋಟ ಟಿಬೆಟ್‍ನ ಕೈಲಾಶ ಪರ್ವತವನ್ನು ಸ್ಪಷ್ಟವಾಗಿ ಹೋಲುತ್ತದೆ.[೧] ಓಂ ಪರ್ವತದ ಹತ್ತಿರ ಪಾರ್ವತಿ ಸರೋವರ ಮತ್ತು ಜಾಂಗ್‍ಲಿಂಗ್‍ಕಾಂಗ್ ಸರೋವರಗಳಿವೆ. ಹಿಂದೂಗಳಿಗೆ ಮಾನಸಸರೋವರದಂತೆ ಜಾಂಗ್‍ಲಿಂಗ್‍ಕಾಂಗ್ ಸರೋವರವೂ ಪವಿತ್ರವಾಗಿದೆ. ಈ ಪರ್ವತಕ್ಕೆ ಎದುರಾಗಿ ಪಾರ್ವತಿ ಮುಹರ್ ಎಂಬ ಅದೇ ಹೆಸರಿನ ಕಣಿವೆಯಿರುವ ಪರ್ವತವಿದೆ. ಓಂ ಪರ್ವತವು ಭಾರತ ಮತ್ತು ನೇಪಾಳದ ಗಡಿರೇಖೆ ಮೇಲಿರುವುದರಿಂದ ವಿವಾದಿತವಾಗಿದೆ. ಎರಡೂ ದೇಶಗಳು ಗಡಿರೇಖೆ ಬಗ್ಗೆ ಒಪ್ಪಂದಕ್ಕೆ ಬಂದಿಲ್ಲ. ಓಂ ಚಿಹ್ನೆ ಕಾಣುವ ಪರ್ವತದ ಮುಖ ಭಾರತದಲ್ಲಿದೆ ಮತ್ತು ಪರ್ವತದ ಹಿಂಭಾಗ ನೇಪಾಳದಲ್ಲಿದೆ.

ಓಂ ಪರ್ವತ ಮತ್ತು ಆದಿ ಕೈಲಾಶ (ಬಾಬಾ ಕೈಲಾಶ್, ಛೋಟಾ ಕೈಲಾಶ್) ಒಂದೇ ಅಲ್ಲ.

ಕೈಲಾಶ್ ಮಾನಸಸರೋವರ ಯಾತ್ರೆಯ ಹಾದಿಯಲ್ಲಿ, ಇಂಡೋ-ಟಿಬೇಟನ್ ಗಡಿ ಪೋಲಿಸ್‍ನಿಂದ ರಕ್ಷಿತವಾದ ನಭಿಧಾಂಗ್ ಭಾರತ ಚೀನಾ ಗಡಿಯಲ್ಲಿನ ಲಿಪುಲೆಖ್ ಕಣಿವೆಯ ಕೆಳಗಿನ ಕೊನೆಯ ಬೀಡಿನಿಂದ ಓಂ ಪರ್ವತವನ್ನು ನೋಡಬಹುದು. ಇಲ್ಲಿ ಭಾರತದ ಕಡೆಗೆ ಲೋಕೋಪಯೋಗಿ ಇಲಾಖೆಯ ಅತಿಥಿಗೃಹವಿದೆ. ಆದಿ ಕೈಲಾಶಕ್ಕೆ ಹೋಗುವ ಅನೇಕ ಚಾರಣಿಗರು ಓಂ ಪರ್ವತವನ್ನು ವೀಕ್ಷಿಸಲು ತಿರುವು ತೆಗೆದುಕೊಳ್ಳುತ್ತಾರೆ.

ಉಲ್ಲೇಖಗಳುಸಂಪಾದಿಸಿ

  1. American Alpine Journal, 2003, pp. 365-366. Available at AAJ Online (PDF) Archived 27 September 2007 at the Wayback Machine.
"https://kn.wikipedia.org/w/index.php?title=ಓಂ_ಪರ್ವತ&oldid=908288" ಇಂದ ಪಡೆಯಲ್ಪಟ್ಟಿದೆ