ಐ.ಎನ್.ಎಸ್ ವಿರಾಟ್ (ಆರ್೨೨)

(ಐ.ಎನ್.ಎಸ್ ವಿರಾಟ್ ಇಂದ ಪುನರ್ನಿರ್ದೇಶಿತ)


ಐ.ಎನ್.ಎಸ್ ವಿರಾಟ್ (ಆರ್೨೨) (ಸಂಸ್ಕೃತ: विराट, Virāṭ. "ದೈತ್ಯ" ) ಯುದ್ಧವಿಮಾನಗಳನ್ನು ಹೊತ್ತೊಯ್ಯುವ ಸೆಂಟಾರ್ ವರ್ಗದ ನೌಕೆಯಾಗಿದೆ. ಪ್ರಸ್ತುತ ಭಾರತೀಯ ನೌಕಾ ಸೇನೆಯಲ್ಲಿ ಕಾರ್ಯನಿರತವಾಗಿರುವ ಇದು ಭಾರತೀಯ ನೌಕಾ ಪಡೆಯ ಅಗ್ರನೌಕೆಯಾಗಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿನ ೨ ವಿಮಾನಧಾರಕ ನೌಕೆಗಳಲ್ಲಿ ಒಂದಾಗಿದ್ದು, ಭಾರತದ ಹಳೆಯ ಧಾರಕ ನೌಕೆಯಾಗಿದೆ.

ವೃತ್ತಿಜೀವನ  Royal Navy  ಭಾರತೀಯ ನೌಕಾ ಸೇನೆ
ಹೆಸರು: ಐ.ಎನ್.ಎಸ್ ವಿರಾಟ್
ನಿರ್ಮಾತೃ: ವಿಕ್ಕರ್ಸ್ ನೌಕಾ ನಿರ್ಮಾಣ ಮತ್ತು ಇಂಜಿನಿಯರಿಂಗ್
ಬಿಡುಗಡೆ: ೧೬ ಫೆಬ್ರವರಿ, ೧೯೫೬
ಕಾರ್ಯಾರಂಭ: ೧೮ ನವಂಬರ್, ೧೯೫೯
ಪುನರ್-ಕಾರ್ಯಾರಂಭ: ಮೇ ೧೯೮೭ (ಯು.ಕೆ.ಯಿಂದ ಖರೀದಿಸಿದ್ದು)
ಕಾರ್ಯಸಮಾಪ್ತಿ: ೨೦೧೨ (ಅಪೇಕ್ಷೆ)[೧]
ಧ್ಯೇಯ: ಜಯಮಾ ಸಂ ಯುದ್ಧಿ ಸ್ಪರ್ಧಃ (ಸಂಸ್ಕೃತ: "ನನ್ನ ಸಂಗ ಯುದ್ಧಕ್ಕೆ ಸ್ಪರ್ಧಿಸುವವರನ್ನು ನಾನು ಸಂಪೂರ್ಣವಾಗಿ ಪರಾಜಯಗೊಳಿಸುವೆ")
ಸ್ಥಿತಿ: ಜುಲೈ ೨೦೦೯ರಿಂದ ಮರುಜೋಡಣೆಗೆ ಒಳಪಟ್ಟಿದೆ
ಸಾಮಾನ್ಯ ವಿವರಗಳು
ವರ್ಗ ಮತ್ತು ನಮೂನೆ: ಸೆಂಟಾರ್ ವರ್ಗದ ವಿಮಾನಧಾರಕ ನೌಕೆ
ನೋದನ: 2 x Parsons geared steam turbines; 4 boilers with 400 psi, 76,000 shp
ಪೂರಕ: ಗರಿಷ್ಟ ೨,೧೦೦;
೧೨೦೬ ನೌಕಾ ಸಿಬ್ಬಂದಿಗಳು,
೧೪೩ ವಾಯುಸೇನೆ ಸಿಬ್ಬಂದಿಗಳು
ಹೊತ್ತೊಯ್ಯುವ ವಿಮಾನಗಳು:

ಗರಿಷ್ಟ ೩೦
ಸಾಮಾನ್ಯವಾಗಿ ೨೮

ಐಎನ್ ಎಸ್ ವಿರಾಟ್ ಗೆ ಹೃದಯ ಸ್ಪರ್ಶಿ ವಿದಾಯ! ಬದಲಾಯಿಸಿ

  • ಸುಮಾರು 5 ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹೆಮ್ಮೆಯ ನೌಕೆ, ಮುಂಬೈ ಬಂದರಿನಿಂದ ಅಧಿಕೃತ ವಿದಾಯ
  • 24 Oct 2016:
  • ಭಾರತೀಯ ಸೇನೆ ಒಂದು ಕಾಲದ ಶಕ್ತಿ ಹಾಗೂ ವಿಶ್ವದ ‘ಗ್ರ್ಯಾಂಡ್ ಓಲ್ಡ್ ಲೇಡಿ’ ಎಂದು ಖ್ಯಾತಿ ಪಡೆದಿದ್ದ ಭಾರತೀಯ ನೌಕಾಪಡೆಯ ನೌಕೆ ಐಎನ್​ಎಸ್ ವಿರಾಟ್​ಗೆ ಭಾನುವಾರ ವಿದ್ಯುಕ್ತ ಬೀಳ್ಕೊಡುಗೆ ನೀಡಲಾಯಿತು.
  • ಕಳೆದ 5 ದಶಕಗಳಿಂದ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯುದ್ಧ ವಿಮಾನ ವಾಹಕ ಐಎನ್​ಎಸ್ ವಿರಾಟ್ (ಆರ್-22) ಜುಲೈ 23ರಂದೇ ಕಾರ್ಯಾಚರಣೆಯಿಂದ ಹೊರಗುಳಿದಿತ್ತಾದರೂ, ಭಾನುವಾರ ನೌಕೆಗೆ ಅಧಿಕೃತವಾಗಿ ವಿದಾಯ ಹೇಳಲಾಗಿದೆ. ಹಿಂದುಮಹಾಸಾಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕೆಯನ್ನು ಮುಂಬೈ ಬಂದರಿಗೆ ತರಲಾಗಿದ್ದು, ಭಾನುವಾರ ಅಧಿಕೃತವಾಗಿ ಸೇವೆಯನ್ನು ಅಂತ್ಯಗೊಳಿಸಲಾಯಿತು ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
  • ದಕ್ಷಿಣ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ನಾಡಕರ್ಣಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮೂರು ಟಗ್ ಬೋಟ್ ಗಳ ಸಹಾಯದಿಂದ ಐಎನ್ ಎಸ್ ವಿರಾಟ್ ಅನ್ನು ಸಮುದ್ರಕ್ಕೆ ಎಳೆದೊಯ್ಯಲಾಯಿತು. ಬಳಿಕ ನೌಕೆ ಕೇರಳದ ಕೊಚ್ಚಿ ಬಂದರಿನ ಎರ್ನಾಕುಲಂನಿಂದ ಪ್ರಯಾಣ ಬೆಳೆಸಿತು. ಆ ಮೂಲಕ ಐಎನ್ ಎಸ್ ವಿರಾಟ್ ತನ್ನ ಅಂತಿಮ ಪ್ರಯಾಣ ಬೆಳೆಸಿತು. ಅಲ್ಲಿಂದ ವಿಶಾಖಪಟ್ಟಣಕ್ಕೆ ತೆರಳಿರುವ ನೌಕೆ ಅಲ್ಲಿಯೇ ಲಂಗರು ಹಾಕಲಿದ್ದು, ಪ್ರವಾಸೋಧ್ಯಮ ಕಾರಣಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ನೌಕೆಯನ್ನು ಬಳಸಿಕೊಳ್ಳಲಿದೆ.
  • ವಿಶಾಖ ಪಟ್ಟಣದಲ್ಲಿ ನೌಕೆಯನ್ನು ಆಂಧ್ರಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ನೌಕಾಪಡೆ ತಿಳಿಸಿದ್ದು, ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಐಎನ್​ಎಸ್ ವಿರಾಟ್ ನೌಕೆಯನ್ನು ವಿಶಾಖಪಟ್ಟಣ ಲಂಗರುದಾಣದಲ್ಲಿ ಇಡಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ.

"ವಿರಾಟ" ನ ಇತಿಹಾಸ ಬದಲಾಯಿಸಿ

  • ವಿಕ್ಕರ್ಸ್ ನೌಕಾ ನಿರ್ಮಾಣ ಮತ್ತು ಇಂಜಿನಿಯರಿಂಗ್ ಕಂಪನಿ ತಯಾರಿಸಿದ್ದ ಈ ನೌಕೆ ಗರಿಷ್ಠ 30 ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು. 1956 ಫೆಬ್ರವರಿ 16ರಂದು ನೌಕೆಗೆ ಚಾಲನೆ ನೀಡಲಾಯಿತು. 1959 ನವೆಂಬರ್ 18ರಂದು ಕಾರ್ಯಾಚರಣೆ ಆರಂಭಿಸಿತ್ತು. 27 ವರ್ಷ ರಾಯಲ್ ನೇವಿ(ಬ್ರಿಟಿಷ್ ನೌಕಾದಳ)ಯಲ್ಲಿ ಸೇವೆ ಸಲ್ಲಿಸಿದ್ದ ನೌಕೆಯನ್ನು 1987 ಮೇ 12ರಂದು ಭಾರತ ಖರೀದಿಸಿತ್ತು. ಸೀ ಹ್ಯಾರಿಯರ್ (ವೈಟ್ ಟೈಗರ್) ಎಂಕೆ 51 ಮತ್ತು ಎಂಕೆ 52, ಸೀಕಿಂಗ್ 42 ಬಿ (ಜಲಾಂತರ್ಗಾಮಿ ನಿಗ್ರಹ ಕ್ಷಿಪಣಿಯುಕ್ತ ಹೆಲಿಕಾಪ್ಟರ್), ಸೀಕಿಂಗ್ 42 ಸಿ(ಕಮಾಂಡೋ ಕರಿಯರ್ ಹೆಲಿಕಾಪ್ಟರ್), ಎಚ್​ಎಎಲ್ ಚೇತಕ್, ಎಚ್​ಎಎಲ್ ಧ್ರುವ್ ಸೇರಿ 28 ಯುದ್ಧವಿಮಾನಗಳನ್ನು ಹೊತ್ತೊಯ್ಯುತ್ತಿತ್ತು.
  • ಐಎನ್​ಎಸ್ ವಿರಾಟ್​ನಲ್ಲಿ 1, 206 ನೌಕಾ ಸಿಬ್ಬಂದಿ ಮತ್ತು 143 ವಾಯು ಸೇನಾ ಸಿಬ್ಬಂದಿ ಸೇರಿದಂತೆ ಗರಿಷ್ಠ 2,100 ಮಂದಿ ಕಾರ್ಯ ನಿರ್ವಹಿಸುತ್ತಿದ್ದರು. ತನ್ನ ಸೇವಾವಧಿಯಲ್ಲಿ ನೌಕೆಯು ಆರು ವರ್ಷಕ್ಕೂ ಅಧಿಕಕಾಲ ಸರಿಸುಮಾರು 2, 250 ಗಂಟೆಗೂ ಅಧಿಕ ಸಮಯವನ್ನು ಸಮುದ್ರದಲ್ಲಿ ಕಳೆದಿದ್ದು, 5,88,288 ನಾಟಿಕಲ್ ಮೈಲು ದೂರ ಕ್ರಮಿಸಿದೆ. 27 ಬಾರಿ ಭೂಮಿಯನ್ನು ಸುತ್ತಿರುವ ಖ್ಯಾತಿ ನೌಕೆಗೆ ಇದೆ.
  • ಇನ್ನು ಐಎನ್ ಎಸ್ ವಿರಾಟ್ ಹಲವು ಜಂಟಿ ಸಮರಾಭ್ಯಾಸಗಳಲ್ಲಿ ಪಾಲ್ಗೊಂಡಿದ್ದು, ಭಾರತದ ಪರ ಇತ್ತೀಚೆಗೆ ನಡೆದ ಮಲಬಾರ್ ನಲ್ಲೂ ಪಾಲ್ಗೊಂಡಿತ್ತು. ಇದಲ್ಲದೆ ವರುಣಾ, ನಸೀಮ್ ಅಲ್ ಬಹರ್ ನಂತಹ ಪ್ರಮುಖ ತರಬೇತಿಯಲ್ಲಿ ನೌಕೆ ಪಾಲ್ಗೊಂಡಿತ್ತು. 2013ರಲ್ಲಿ ಐಎನ್​ಎಸ್ ವಿಕ್ರಮಾದಿತ್ಯ ನೌಕೆಯನ್ನು ಬೀಳ್ಕೊಟ್ಟ ನಂತರ ಬ್ರಿಟಿಷ್ ಸರ್ಕಾರ ನಿರ್ಮಾಣದ ಏಕೈಕ ನೌಕೆಯಾಗಿ ಐಎನ್​ಎಸ್ ವಿರಾಟ್ ಸೇವೆ ಸಲ್ಲಿಸುತ್ತಿತ್ತು.[೨]

ಸಮುದ್ರದಾಳದಲ್ಲಿ ‘ವಿರಾಟ್‌’ ಸ್ಮಾರಕ ಬದಲಾಯಿಸಿ

  • 21 Mar, 2017
  • ಮಹಾರಾಷ್ಟ್ರದ ಕೊಂಕಣ ತೀರದಲ್ಲಿನ ಸಿಂಧುದುರ್ಗದ ಬಳಿ ಸಮುದ್ರದಲ್ಲಿ ಐಎನ್‌ಎಸ್‌ ವಿರಾಟ್‌ ಅನ್ನು ಮುಳುಗಿಸಲಾಗುವುದು. ನಂತರ ಆ ಸ್ಥಳದಲ್ಲಿ ಸ್ಕೂಬಾ ಡೈವಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ, ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವ ಇರಿಸಿದೆ.
  • ಭಾರತೀಯ ನೌಕಾಪಡೆಯ ಸೇವೆಯಿಂದ ನಿವೃತ್ತವಾಗಿರುವ ಐಎನ್‌ಎಸ್‌ ವಿರಾಟ್‌ ಯುದ್ಧವಾಹಕ ನೌಕೆಯನ್ನು ಸಮುದ್ರದಾಳದ ಸ್ಮಾರಕವಾಗಿ ರೂಪಿಸಲು ಮಹಾರಾಷ್ಟ್ರ ಸರ್ಕಾರ ಆಸಕ್ತಿ ತೋರಿಸಿದೆ. ‘ಮಹಾರಾಷ್ಟ್ರದ ಕೊಂಕಣ ತೀರದಲ್ಲಿನ ಸಿಂಧುದುರ್ಗದ ಬಳಿ ಸಮುದ್ರದಲ್ಲಿ ಐಎನ್‌ಎಸ್‌ ವಿರಾಟ್‌ ಅನ್ನು ಮುಳುಗಿಸಲಾಗುವುದು. ನಂತರ ಆ ಸ್ಥಳದಲ್ಲಿ ಸ್ಕೂಬಾ ಡೈವಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ, ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವ ಇರಿಸಿದೆ. ಮುಖ್ಯಮಂತ್ರಿ ದೇವೇಂದ್ರ ಪಢಣವೀಸ್‌ ಅವರು ಈ ಪ್ರಸ್ತಾವದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಪ್ರಸ್ತಾವದ ವಿವರ ಬದಲಾಯಿಸಿ

  • - ಭಾರತದಲ್ಲಿ ರೆಕ್‌ ಡೈವಿಂಗ್‌ ಇಲ್ಲ
  • - ಈ ಯೋಜನೆ ಕಾರ್ಯಗತವಾದರೆ ಪ್ರವಾಸಿಗರನ್ನು ಆಕರ್ಷಿಸಲಿದೆ
  • - ಇದು ಜಗತ್ತಿನ ಎರಡನೇ ಅತಿದೊಡ್ಡ ಕೃತಕ ರೆಕ್‌ ಡೈವಿಂಗ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ
  • - ನೌಕೆಯನ್ನು ಗುಜರಿಗೆ ಹಾಕುವುದಕ್ಕಿಂತ ಸಮುದ್ರದಾಳದ ಸ್ಮಾರಕವಾಗಿ ಬದಲಿಸಿದರೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಒಟ್ಟು 4,500 ಉದ್ಯೋಗಗಳು ಸೃಷ್ಟಿಯಾಗುತ್ತವೆ

ರೆಕ್ ಡೈವಿಂಗ್ ಬದಲಾಯಿಸಿ

  • ಸಮುದ್ರದಾಳದಲ್ಲಿರುವ ಹಡಗುಗಳ ಅವಶೇಷಗಳ ಬಳಿ ಸ್ಕೂಬಾ ಡೈವಿಂಗ್‌ ಮಾಡುವುದನ್ನು ‘ರೆಕ್ ಡೈವಿಂಗ್‌’ ಎಂದು ಕರೆಯಲಾಗುತ್ತದೆ. ವಿಶ್ವದ ಹಲವೆಡೆ ಇಂತಹ ಅವಶೇಷಗಳಿವೆ. ಆದರೆ ಮೊದಲ ಬಾರಿ ಉದ್ದೇಶಪೂರ್ವಕವಾಗಿ ಹಡಗುಗಳನ್ನು ಮುಳುಗಿಸಿ, ರೆಕ್‌ ಡೈವಿಂಗ್‌ಗೆ ಅವಕಾಶ ಸಲ್ಲಿಸಿದ್ದು ಅಮೆರಿಕ. ಅಮೆರಿಕ ನೌಕಾಪಡೆ ಸೇವೆಯಿಂದ ನಿವೃತ್ತಿಯಾಗಿದ್ದ ಯುಎಸ್‌ಎಸ್‌ ಒರಿಸ್ಕನಿ ನೌಕೆಯನ್ನು ಫ್ಲಾರಿಡಾದ ಪೆನ್ಸಕೋಲಾ ಬಳಿ ಸಮುದ್ರದಲ್ಲಿ ಮುಳುಗಿಸಲಾಗಿದೆ. ಇದು ಈಗ ಜಗತ್ತಿನ ಜನಪ್ರಿಯ ರೆಕ್‌ ಡೈವಿಂಗ್‌ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗೆ ಮುಳುಗಿರುವ ಹಡಗುಗಳು ದೀರ್ಘಕಾಲದಲ್ಲಿ ಕೃತಕ ಹವಳದ ದಿಬ್ಬಗಳಾಗಿ ಬದಲಾಗುತ್ತವೆ.[೩]

ಉಲ್ಲೇಖಗಳು ಬದಲಾಯಿಸಿ

  1. INS Viraat not to anchor before 2012-India-The Times of India
  2. ಐಎನ್ ಎಸ್ ವಿರಾಟ್ ಗೆ ಹೃದಯ ಸ್ಪರ್ಶಿ ವಿದಾಯ!;ಸುಮಾರು 5 ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹೆಮ್ಮೆಯ ನೌಕೆ, ಮುಂಬೈ ಬಂದರಿನಿಂದ ಅಧಿಕೃತ ವಿದಾಯ; 24 Oct 2016[ಶಾಶ್ವತವಾಗಿ ಮಡಿದ ಕೊಂಡಿ]
  3. ಸಮುದ್ರದಾಳದಲ್ಲಿ ‘ವಿರಾಟ್‌’ ಸ್ಮಾರಕ;ಪಿಟಿಐ;21 Mar, 2017