ಐನ್‌ಸ್ಟೈನಿಯಮ್

(ಐನ್ಸ್ಟೈನಿಯಮ್ ಇಂದ ಪುನರ್ನಿರ್ದೇಶಿತ)




99 ಕ್ಯಾಲಿಫೋರ್ನಿಯಮ್ಐನ್‌ಸ್ಟೈನಿಯಮ್ಫೆರ್ಮಿಯಮ್
ಹೊಲ್ಮಿಯಮ್

Es

Uqe
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಐನ್‌ಸ್ಟೈನಿಯಮ್, Es, 99
ರಾಸಾಯನಿಕ ಸರಣಿactinides
ಗುಂಪು, ಆವರ್ತ, ಖಂಡ n/a, 7, f
ಸ್ವರೂಪಬೆಳ್ಳಿಯ ಬಣ್ಣ
ಅಣುವಿನ ತೂಕ 252 g·mol−1
ಋಣವಿದ್ಯುತ್ಕಣ ಜೋಡಣೆ [Rn] 5f11 7s2</sup
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32, 29, 8, 2
ಭೌತಿಕ ಗುಣಗಳು
ಹಂತಘನವಸ್ತು
ಸಾಂದ್ರತೆ (ಕೋ.ತಾ. ಹತ್ತಿರ)8.84 g·cm−3
ಕರಗುವ ತಾಪಮಾನ1133 K
(860 °C, 1580 °ಎಫ್)
ಆಕ್ಸಿಡೀಕರಣ ಸ್ಥಿತಿಗಳು2, 3, 4
ವಿದ್ಯುದೃಣತ್ವ1.3 (Pauling scale)
ಇತರೆ ಗುಣಗಳು
ಕಾಂತೀಯ ವ್ಯವಸ್ಥೆಮಾಹಿತಿ ಇಲ್ಲ
ಸಿಎಎಸ್ ನೋಂದಾವಣೆ ಸಂಖ್ಯೆ7429-92-7
ಉಲ್ಲೇಖನೆಗಳು

ಐನ್‌ಸ್ಟೈನಿಯಮ್ ಒಂದು ವಿಕಿರಣಶೀಲ ಲೋಹ ಮೂಲಧಾತು.ಇದನ್ನು ೧೯೫೨ರಲ್ಲಿ ಅಮೆರಿಕದ ಆಲ್ಬರ್ಟ್ ಗಿಯೊರ್ಸೊ ಎಂಬ ವಿಜ್ಞಾನಿ ಕಂಡುಹಿಡಿದರು.ಇದಕ್ಕೆ ಸುಮಾರು ೧೯ ಸಮಸ್ಥಾನಿಗಳು ಇರುವುದು ಇದುವರೆಗೆ ತಿಳಿದು ಬಂದಿದೆ.ಇದಕ್ಕೆ ಪ್ರಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೈನ್ ರ ಗೌರವಾರ್ಥ ನಾಮಕರಣ ಮಾಡಲಾಗಿದೆ.

ಐನ್ಸ್ಟೈನಿಯಂ ನಿಸರ್ಗದಲ್ಲಿ ಇಲ್ಲದಿರುವ ಆದರೆ ಕೃತಕವಾಗಿ ಸೃಷ್ಟಿ ಮಾಡಲಾಗಿರುವ ಯುರೇನಿಯಂ ಅತೀತ (ಟ್ರಾನ್ಸ್‌ಯುರೇನಿಯಂ) ಧಾತುಗಳಲ್ಲಿ ಒಂದು. ಪರಮಾಣು ಸಂಖ್ಯೆ 99. ಸಂಕೇತ Es. ಅತಿಸ್ಥಿರ ಸಮಸ್ಥಾನಿಯ ಭಾರ ಸಂಖ್ಯೆ 254.

ಆವಿಷ್ಕಾರ

ಬದಲಾಯಿಸಿ
 
Einsteinium was first observed in the fallout from the Ivy Mike nuclear test.

ಪರಮಾಣು ಸಂಖ್ಯೆ 99 ಮತ್ತು 100 ಇರುವ ಐನ್ಸ್ಟೈನಿಯಂ ಮತ್ತು ಫರ್ಮಿಯಮ್ ಧಾತುಗಳನ್ನು ಕಂಡುಹಿಡಿದ ಪ್ರಸಂಗ ಅನುದ್ದೇಶಿತ ಮತ್ತು ಅನಿರೀಕ್ಷಿತ ಆವಿಷ್ಕಾರಕ್ಕೆ ಒಂದು ಸೊಗಸಾದ ನಿದರ್ಶನ. 1952ರ ನವೆಂಬರಿನಲ್ಲಿ ಪೆಸಿಫಿಕ್ ಸಾಗರದ ಒಂದು ಚಿಕ್ಕ ದ್ವೀಪದ ಮೇಲೆ ನಡೆಸಿದ ಮೊತ್ತಮೊದಲ ಪರೀಕ್ಷಾರ್ಥ ಉಷ್ಣಬೈಜಿಕ (ಥರ್ಮೋನ್ಯೂಕ್ಲಿಯರ್) ಆಸ್ಫೋಟನೆಯ (ಹೈಡ್ರೋಜನ್ ಬಾಂಬ್) ಪರಿಣಾಮವಾಗಿ ಮೇಲೆದ್ದ ಸ್ಫೋಟನ ಮೇಘಗಳ (ಎಕ್ಸ್‌ಪ್ಲೋಷನ್ ಕ್ಲೌಡ್ಸ್‌) ಮೂಲಕ ಹಾರಾಟ ನಡೆಸಿದ ವಿಮಾನಗಳು ಸೋಸುವ ಕಾಗದದ (ಫಿಲ್ಟರ್ ಪೇಪರ್) ಮೇಲೆ ಸಂಗ್ರಹಿಸಿದ ಅವಶೇಷ ವಸ್ತುವನ್ನು ಪರೀಕ್ಷೆಗಾಗಿ ಅಮೆರಿಕದ ವಿವಿಧ ಸಂಶೋಧನಾಲಯಗಳಿಗೆ ಕಳಿಸಲಾಯಿತು. ಅದರಲ್ಲಿ ಭಾರವಾದ ಕೆಲವು ಹೊಸ ಪ್ಲುಟೋನಿಯಮ್ ಸಮಸ್ಥಾನಿಗಳು (ಐಸೊಟೋಪ್ಸ್‌) ಕಂಡುಬಂದುದರಿಂದ ಇನ್ನೂ ಭಾರವಾದ ಧಾತುಗಳು ಸಂಶ್ಲೇಷಿತವಾಗಿರಬಹುದೆಂಬ ಸಂದೇಹ ಉಂಟಾಯಿತು. ಅದನ್ನು ಪರೀಕ್ಷಿಸಿ ನೋಡುವ ಸಲುವಾಗಿ ನಡೆದ ಸ್ಥಳದ ನೆರೆಹೊರೆಯ ಹವಳದ ದಿಬ್ಬಗಳಿಂದ ನೂರಾರು ಪೌಂಡುಗಳಷ್ಟು ಹವಳವನ್ನು ಸಂಗ್ರಹಿಸಿ ತರಲಾಯಿತು. ಅದರಲ್ಲಿ 99 ಮತ್ತು 100ನೆಯ ಧಾತುಗಳನ್ನು ಘಿಯಾರ್ಸೊ ಮತ್ತು ಸಂಗಡಿಗರು ಖಚಿತವಾಗಿ ಗುರುತಿಸಿದರು. ಉಷ್ಣಬೈಜಿಕ ಆಸ್ಫೋಟನೆಯ ಸಂದರ್ಭದಲ್ಲಿ ಯುರೇನಿಯಂ-238 ಬೀಜ ಒಂದಾದ ಮೇಲೊಂದರಂತೆ ನ್ಯೂಟ್ರಾನುಗಳನ್ನು ಹೀರಿಕೊಂಡು ಕ್ಷಣಮಾತ್ರದಲ್ಲಿ ಅತ್ಯಂತ ಭಾರವಾದ ಯುರೇನಿಯಂ ಸಮಸ್ಥಾನಿಗಳಾಗಿ ಪರಿವರ್ತನೆಗೊಳ್ಳುತ್ತದೆ. ಭಾರ 255ರ ವರೆಗೂ ಉಳ್ಳ ಈ ಯುರೇನಿಯಂ ಬೀಜಗಳು ಎಲೆಕ್ಟ್ರಾನುಗಳನ್ನು ಹೊರಹಾಕಿ ಪ್ಲುಟೋನಿಯಮ್, ಅಮೆರಿಸಿಯಮ್, ಕ್ಯೂರಿಯಮ್, ಬರ್ಕೇಲಿಯಮ್, ಕ್ಯಾಲಿಫೋರ್ನಿಯಮ್ ಮತ್ತು 99, 100 ಭಾರದ ಐನ್ಸ್ಟೈನಿಯಂ, ಫರ್ಮಿಯಮ್ ಧಾತುಗಳ ಸಮಸ್ಥಾನಿಗಳಾಗಿ ಮಾರ್ಪಡುತ್ತವೆ.

1954ರ ವರೆಗೆ ಈ ಫಲಿತಾಂಶಗಳನ್ನು ಗೋಪ್ಯವೆಂದು ವರ್ಗೀಕರಿಸಲಾಗಿತ್ತು 1954ರಲ್ಲಿ ಸಾರ್ವಜನಿಕರ ತಿಳಿವಳಿಕೆಗಾಗಿ ಇವನ್ನು ಪ್ರಕಟಿಸುವ ವೇಳೆಗೆ ಈ ಧಾತುವನ್ನು ಇನ್ನೂ ಇತರ ವಿಧಾನಗಳಿಂದಲೂ ತಯಾರಿಸಲಾಗಿತ್ತು. ಅವುಗಳಲ್ಲಿ ಮುಖ್ಯವಾದುವೆಂದರೆ ಪ್ಲುಟೋನಿಯಂ ಧಾತುವನ್ನು 2-3 ವರ್ಷಗಳ ಕಾಲ ಸತತವಾಗಿ ರಿಯಾಕ್ಟರುಗಳಲ್ಲಿ ಉತ್ಪತ್ತಿಯಾಗುವ ತೀಕ್ಷ್ಣವಾದ ನ್ಯೂಟ್ರಾನ್ ಪ್ರವಾಹಕ್ಕೆ ಗುರಿಪಡಿಸುವುದು. ಈ ವಿಧಾನವಲ್ಲದೆ, ಯುರೇನಿಯಂ-238ನ್ನು ನೈಟ್ರೋಜನ್ ಬೀಜಗಳಿಂದ ತಾಡಿಸಿಯೂ ಐನ್ಸ್ಟೈನಿಯಮನ್ನು ಉತ್ಪತ್ತಿಮಾಡಿದ್ದಾರೆ. 246ರಿಂದ ಪ್ರಾರಂಭವಾಗಿ 256ರ ವರೆಗಿನ ಒಟ್ಟು ಹನ್ನೊಂದು ಐನ್ಸ್ಟೈನಿಯಂ ಸಮಸ್ಥಾನಿಗಳು ಪತ್ತೆಯಾಗಿವೆ. ಇವುಗಳಲ್ಲಿ ಬಹುಪಾಲು ಅಲ್ಪಾಯುಗಳು. ಆದರೆ Es-253 ಮತ್ತು Es-254 ತಕ್ಕಮಟ್ಟಿಗೆ ದೀರ್ಘಾಯುಗಳು. ಮೊದಲನೆಯದರ ಅರ್ಧಾಯು 20 ದಿವಸಗಳು; ಎರಡನೆಯದರದ್ದು ಸುಮಾರು 300 ದಿವಸಗಳು. ಎರಡೂ ಆಲ್ಫ ವಿಸರ್ಜಕಗಳು (ಆಲ್ಫ ಎಮಿಟರ್ಸ್‌), ಅಂದರೆ ಆಲ್ಫ ಕಣಗಳನ್ನು ಹೊರಸೂಸಿ ಕ್ಷಯಿಸುತ್ತವೆ. ಮೊತ್ತಮೊದಲ ಬಾರಿ ಐನ್ಸ್ಟೈನಿಯಮನ್ನು ಗುರುತಿಸಿದಾಗ ಉತ್ಪತ್ತಿಯಾಗಿದ್ದುದು ಕೇವಲ ಎಣಿಸಲು ಬರುವಷ್ಟು ಪರಮಾಣುಗಳು. ಅದಕ್ಕಾಗಿ ವಿಶೇಷ ವಿಧಾನಗಳನ್ನು ಬಳಸಲಾಯಿತು. ಆದರೆ ದೀರ್ಘಾಯುವಿನ ಎರಡು ಸಮಸ್ಥಾನಿಗಳು ಈಗ ಪತ್ತೆಯಾಗಿರುವುದರಿಂದ ಐನ್ಸ್ಟೈನಿಯಮನ್ನು ಗಣನೀಯ ಪ್ರಮಾಣದಲ್ಲಿ ತಯಾರಿಸುವುದು ಸಾಧ್ಯವಾಗಿದೆ.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: