ಏಳು ಸಾಮಾಜಿಕ ಪಾಪಗಳು

ಗಾಂಧಿಯ ಋಣಾತ್ಮಕ ಗುಣಗಳ ಪಟ್ಟಿ


ಏಳು ಸಾಮಾಜಿಕ ಪಾಪಗಳನ್ನು ಮೊಟ್ಟಮೊದಲಿಗೆ ಪಟ್ಟಿ ಮಾಡಿದವರು ಫ್ರೆಡ್ರಿಕ್ ಲೂಯಿಸ್ ಡೊನಾಲ್ಡ್ಸನ್. ಕ್ರೈಸ್ತ ಪಾದ್ರಿಯಾಗಿದ್ದ ಇವರು ವೆಸ್ಟ್ ಮಿನ್ಸ್ಟರ್ ಅ್ಯಬ್ಬಿಯಲ್ಲಿ ಮಾರ್ಚ್ ೨೦, ೧೯೨೬ ರಂದು ನೀಡಿದ ಉಪದೇಶದಲ್ಲಿ ಈ ಸಾಮಾಜಿಕ ಪಾಪಗಳ ಬಗ್ಗೆ ತಿಳಿಹೇಳಿದರು.[]ಎಲ್ಲೆಡೆ ಹಬ್ಬಿರುವ ತಪ್ಪು ಮಾಹಿತಿಯೇನೆಂದರೆ ಮಹಾತ್ಮ ಗಾಂಧಿಯವರು ಈ ಏಳು ಪಾಪಗಳನ್ನು ಮೊಟ್ಟಮೊದಲನೆಯ ಬಾರಿಗೆ ಪಟ್ಟಿ ಮಾಡಿದರೆಂಬುದು. ಗಾಂಧಿಯವರು ಈ ಪಟ್ಟಿಯನ್ನು ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ೧೯೨೫ ರ ಅಕ್ಟೋಬರ್ ೨೨ರಂದು ಪ್ರಕಟಿಸಿ ಪ್ರಚುರಪಡಿಸಿದರಷ್ಟೆ[]

ತಾವು ಹತ್ಯೆ ಆಗುವ ಮೊದಲು ಈ ಪಟ್ಟಿಯನ್ನು ತಮ್ಮ ಮೊಮ್ಮಗ ಅರುಣ್ ಗಾಂಧಿಯವರಿಗೆ ನೀಡಿದ್ದರು.

ಏಳು ಪಾಪಗಳು ಯಾವುವೆಂದರೆ :

೧. ದುಡಿಮೆಯಿಲ್ಲದೆ ಗಳಿಸಿದ ಸಂಪತ್ತು

೨. ಆತ್ಮಸಾಕ್ಷಿಯಿಲ್ಲದ ಭೋಗ

೩. ಚಾರಿತ್ರ್ಯವಿಲ್ಲದ ಜ್ಞಾನ

೪. ನೀತಿಯಿಲ್ಲದ ವ್ಯಾಪಾರ

೫. ಮಾನವೀಯತೆಯಿಲ್ಲದ ವಿಜ್ಞಾನ

೬. ತ್ಯಾಗವಿಲ್ಲದ ಧರ್ಮ

೭. ನೀತಿಯಿಲ್ಲದ ರಾಜಕೀಯ []

ಇತಿಹಾಸ ಮತ್ತು ಪ್ರಭಾವ

ಬದಲಾಯಿಸಿ

ಮಹಾತ್ಮ ಗಾಂಧಿಯವರು ಈ ಪಟ್ಟಿಯನ್ನು ತಮ್ಮ ಯಂಗ್ ಇಂಡಿಯಾ ವಾರಪತ್ರಿಕೆಯಲ್ಲಿ ಪ್ರಕಟಿಸುವ ಮುನ್ನ ಈ ಪಟ್ಟಿಯನ್ನು ತಮ್ಮ ಸ್ನೇಹಿತರೊಬ್ಬರಿಂದ ಪತ್ರ ಮುಖೇನ ತಿಳಿದುಕೊಂಡಿದ್ದರು. ಅಷ್ಟೇ ಅಲ್ಲ, 'ಯಂಗ್ ಇಂಡಿಯಾ ಪತ್ರಿಕೆಯ ಓದುಗರು ಬೌದ್ಧಿಕವಾಗಿಯಷ್ಟೇ ಅಲ್ಲದೆ ಹೃದಯಾಂತರಾಳದಿಂದ ಈ ಪಟ್ಟಿಯನ್ನು ಮನಗಂಡು, ಇಲ್ಲಿ ನೀಡಿರುವ ಯಾವುದೇ ಪಾಪಗಳನ್ನು ಎಸೆಯದೇ ಇರಲಿ ಎಂದು ಆಶಿಸುತ್ತಾರೆ ಈ ಪಟ್ಟಿಯನ್ನು ಕಳುಹಿಸಿಕೊಟ್ಟ ನಮ್ಮ ಸ್ನೇಹಿತರು.' ಎಂದು ತಮ್ಮ ಪತ್ರಿಕೆಯಲ್ಲಿ ಗಾಂಧಿಯವರು ಬರೆದಿದ್ದರು. [] ಹಲವಾರು ಪುಸ್ತಕಗಳಲ್ಲಿ ಈ ಏಳು ಸಾಮಾಜಿಕ ಪಾಪಗಳ ಉಲ್ಲೇಖ ಇದೆ.

  • [] ಪುಸ್ತಕದಲ್ಲಿ ಪೀಟರ್. ಜೆ. ಗೋಮ್ಸ್ ರವರು ಬರೆಯುತ್ತಾರೆ - "ಗಾಂಧೀಯವರು ಪಟ್ಟಿಮಾಡಿರುವ ಏಳು ಪಾಪಗಳನ್ನು ನಾವು ತಡೆಯದಿದ್ದರೆ ಅವು ಮನುಷ್ಯರನ್ನೂ ದೇಶಗಳನ್ನೂ ಹಾನಿ ಮಾಡುತ್ತವೆಯೆಂದು ಬಹಳ ವರ್ಷಗಳ ಹಿಂದೆಯೇ ಕಂಡುಕೊಂಡೆನು. ಈ ಏಳು ಪಾಪಗಳು ಗಾಂಧಿಯವರ ಕಾಲದಲ್ಲಿ ಎಷ್ಟು ವ್ಯಾಪಕವಾಗಿತ್ತೋ ಅಷ್ಟೇ ಪ್ರಮಾಣದಲ್ಲಿ ಈಗಲೂ ವ್ಯಾಪಕವಾಗಿವೆ. ಈ ಪಾಪಗಳ ವಿರುದ್ಧ ಯುದ್ಧ ಇಂದಿಗೂ ಪ್ರಸ್ತುತ."
  • Mobilizing hope: Faith-inspired activism for a post-civil rights generation ಪುಸ್ತಕದಲ್ಲಿ ಆ್ಯಡಮ್ ಟೇಯ್ಲರ್ ಎರಡು ಪಾಪಗಳನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ -"ಇತ್ತೀಚನ ಜಾಗತಿಕ ಹಣಕಾಸು ಹಿಂಜರಿತವು ಗಾಂಧಿಯವರು ಪ್ರತಿಪಾದಿಸಿದ್ದ ಏಳು ಸಾಮಾಜಿಕ ಪಾಪಗಳನ್ನು ನೆನಪಿಗೆ ತರುತ್ತದೆ. 'ದುಡಿಮೆಯಿಲ್ಲದೆ ಗಳಿಸಿದ ಸಂಪತ್ತು' ಮತ್ತು 'ನೀತಿಯಿಲ್ಲದ ವ್ಯಾಪಾರ' ಗಳ ಅಪಾಯದ ಬಗ್ಗೆ ಗಾಂಧಿ ಎಂದೋ ಎಚ್ಚರಿಸಿದ್ದರು."
  • The Cambridge companion to Gandhi ಯಲ್ಲಿ 141ನೇ ಪುಟದಲ್ಲಿ ಈ ಏಳು ಪಾಪಗಳ ಪಟ್ಟಿ ಇದ್ದು ಉಲ್ಲೇಖವೇನೆಂದರೆ "ಇವು ಮತ್ತು ಗಾಂಧಿಯವರ ಬರಹಗಳು ಏನು ಹೇಳುತ್ತವೆಯೆಂದರೆ ಗಾಂಧಿಯವರು ತಮ್ಮ ಜೀವನವನ್ನು ಒಂದು ಚೌಕಟಿನಲ್ಲಿ ಬಂಧಿಸಿಡಲಿಲ್ಲ. ಅವರಿಗೆ ರಾಜಕೀಯ, ನೀತಿ ಹಾಗೂ ಧರ್ಮವನ್ನೊಳಗೊಂಡ ಆರ್ಥಿಕತೆ ಒಂದು ಅವಿಭಾಜ್ಯ ಅಂಗವಾಗಿತ್ತು."
  • Fifty key thinkers of development ಅಲ್ಲಿ, "ಈ ಪಾಪಗಳ ಹೊರತಾದ ಆದರ್ಶಗಳು ಇಂದಿಗೆ ಹೆಚ್ಚು ಪ್ರಸ್ತುತ." ಎಂದು ಹೇಳಲಾಗಿದೆ.

ಉಲ್ಲೇಖಗಳು

ಬದಲಾಯಿಸಿ

ಇವನ್ನೂ ನೋಡಿ

ಬದಲಾಯಿಸಿ
  1. Seven Social Sins#cite note-yi1925 10 22-3
  2. SEVEN DEADLY SINS As per Mahatma Gandhi

ಉಲ್ಲೇಖ

ಬದಲಾಯಿಸಿ