ಎ.ಎನ್ ರಾಯ್(೧೯೧೨-೨೦೧೦) ಅಜಿತ್ ನಾತ್ ರಾಯ್ ಅವರು ಭಾರತದ ೧೪ನೇ ಮುಖ್ಯ ನ್ಯಾಯಾಧೀಶರಾಗಿ ಜನವರಿ ೨೨ ೧೯೭೧ರಂದು ಅಧಿಕಾರ ಸ್ವೀಕರಿಸಿದರು. ಇವರ ಆಯ್ಕೆ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಹಾಗು ಮುಖ್ಯ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೆ ಒಂದು ಕಪ್ಪು ಚುಕ್ಕೆಯಾಗಿ ನಿಂತು ಬಿಟ್ಟಿತು.ಆದರೂ ಇವರು ಜನವರಿ ೨೮ ೧೯೭೭ ರವರೆಗೂ ಮುಖ್ಯ ನ್ಯಾಯಾಧೀಶರಾಗಿ ಮುಂದುವರೆದರು.ಇವರ ನೇಮಕಾತಿ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಿರುಗಾಳಿಯನ್ನೆಬ್ಬಿಸಿ ದೊಡ್ದ ಚರ್ಚೆಗೆ ಈಡು ಮಾಡಿತು. ಏಕೆಂದರೆ, ಇವರ ನೇಮಕಾತಿ ಆಗಸ್ಟ್ ೧೯೬೯ರಲ್ಲಿ ನ್ಯಾಯಾಧೀಶರಾಗಿ ಆಗಿತ್ತು. ಆದರೆ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ್ದು ಏಪ್ರಿಲ್ ೧೯೭೩ರಲ್ಲಿ.ಈ ಆಯ್ಕೆ ಇವರಿಗಿಂತ ಸೇವಾ ಹಿರಿತನದಲ್ಲಿದ್ದ ಜಯ್ ಶಂಕರ್ ಮಣಿಲಾಲ್ ಶಿಲಾತ್, ಎ ಎನ್ ಗ್ರೊವೆರ್ ಮತ್ತು ಕೆ ಎಸ್ ಹೆಗಡೆಯವರ ಅಧಿಕಾರವನ್ನು ಮೊಟಕುಗೊಳಿಸಿದ ಹಾಗೂ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ವಿಚಾರವಾಗಿತ್ತು.ಇದು ಭಾರತೀಯ ಕಾನೂನಿನ ಇತಿಹಾಸದಲ್ಲಿ ಅಗತ್ಯವಿಲ್ಲದ ಪ್ರಕ್ರಿಯೆ ಆಗಿತ್ತು. ಹಾಗಾಗಿ ಇದನ್ನು ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದ ಕಪ್ಪು ಚುಕ್ಕೆಯಾಗಿ ಇತಿಹಾಸದಲ್ಲಿ ದಾಖಲಾಗಿದೆ. ಇದರ ವಿರುದ್ಧವಾಗಿ ಕಾನೂನಿನ ಗುಂಪುಗಳು ಮತ್ತು ಬಾರ್ ಅಸ್ಸೊಸಿಯೇಶನ್ಸ್ ಗಳು ಹಾಗೂ ಸಂಘಟನೆಗಳು ಭಾರತಾದ್ಯಂತ ಪ್ರತಿಭಟನೆಯನ್ನು ಚಳುವಳಿಯಾಗಿ ಹಲವಾರು ತಿಂಗಳುಗಳು ನಡೆದವು ಮತ್ತು ತಮ್ಮ ಕಾನೂನು ಚಟುವಟಿಕೆಗಳನ್ನು ನಿಲ್ಲಿಸಿದರು. ದೇಶದ ಜನತೆ ಎ ಎನ್ ರಾಯ್ ಅವರು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಪ್ರಭಾವಕ್ಕೆ ಒಳಪಟ್ಟು ನ್ಯಾಯಾಂಗವನ್ನು ನಡೆಸುತ್ತಿದ್ದರು ಎನ್ನುವ ಅಪವಾದಗಳನ್ನು ಹೊರಬೇಕಾಗಿ ಬಂತು.ಇದಕ್ಕೆ ಇಂಬು ಕೊಡುವಂತೆ ರಾಯ್ ಅವರು ಕೂಡ ಪದೇ ಪದೇ ಪ್ರಧಾನಮಂತ್ರಿಗಳಿಗೆ ಕರೆಮಾಡಿ ಸಣ್ಣ ಪುಟ್ಟ ವಿಷಯಗಳಿಗೂ ಅವರ ಸಲಹೆಯನ್ನು ಪಡೆಯುತ್ತಿದ್ದರು. ಈ ಸಲಹೆಗಳು ನ್ಯಾಯಾಲಯದ ದಾವೆಗಳ ಮೇಲೆ ಪ್ರಭಾವ ಬೀರುತ್ತಿತ್ತುನೇಮಕಾತಿಯ ಅಧಿಕಾರದ ವಿಧಿ ವಿಧಾನಗಳನ್ನು ಮೊರಾರ್ಜಿ ದೇಸಾಯಿ ಅವರ ಸರ್ಕಾರದ ಕಾನೂನಿನ ಮಂತ್ರಿಯಾಗಿದ್ದ ಶಾಂತಿ ಭೂಶಣ್ ರವರಿಂದ ಪುನರ್ ನಿರ್ಮಾಣವಾಯಿತು.[೧]

ಚಿತ್ರ:A n ray.jpg
ಎ.ಎನ್.ರಾಯ್

ಉಲ್ಲೇಖಗಳು ಬದಲಾಯಿಸಿ