ನೇಮಕಾತಿ
ಪೀಠಿಕೆಸಂಪಾದಿಸಿ
ನೇಮಕಾತಿಯು, ಉದ್ಯೋಗ ಬಯಸುವವರನ್ನು ಮತ್ತು ಉದ್ಯೋಗ ನೀಡುವವರನ್ನು ಒಂದು ಗೂಡಿಸುವ ಪ್ರಕ್ರಿಯೆಯಾಗಿದೆ.ಇದು ಮಾನವ ಶಕ್ತಿಯ ಮೂಲವನ್ನು ಗುರುತಿಸಿ,ಸಂಸ್ಠೆಯ ಪ್ರಸ್ತುತ ಹಾಗೂ ಭಾವಿ ಹುದ್ದೆಗಳಿಗಾಗಿ ಸಮರ್ಥ ಅಭ್ಯರ್ಥಿಗಳನ್ನು ಕಂಡುಹಿಡಿಯುತ್ತದೆ.ಇದು ಒಂದು ಸಕಾರಾತ್ಮಕ ಪ್ರಕ್ರಿಯೆಯಾಗಿದ್ದು ಸೂಕ್ತ ಜನರನ್ನು ಸೂಕ್ತ ಪ್ರಮಾಣದಲ್ಲಿ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲು ಸಹಕಾರಿಯಾಗಿದೆ.
ಅರ್ಥಸಂಪಾದಿಸಿ
ಸಂಸ್ಥೆಯಲ್ಲಿ ಪ್ರಸ್ತುತ ಖಾಲಿಯಿರುವ ಮತ್ತು ಮುಂದಿನ ದಿನಗಳಲ್ಲಿ ಸೃಷ್ಠಿಯಾಗಲಿರುವ ಹುದ್ದೆಗಳನ್ನು ಭರ್ತಿ ಮಾಡಲು, ಹೊಸ ಅಭ್ಯರ್ಥಿಗಳನ್ನು ಶೋಧಿಸುವ ಹಾಗೂ ಅವರಿಂದ ಅರ್ಜಿ ಸಲ್ಲಿಸುವಂತೆ ಆಮಂತ್ರಿಸುವ ಪ್ರಕ್ರಿಯೆಯನ್ನು ನೇಮಕಾತಿ ಎನ್ನುವರು.
ವ್ಯಾಖ್ಯೆಸಂಪಾದಿಸಿ
ಡೇಲ್ ಯೋಡರ್ರವರ ಪ್ರಕಾರ,"ಸಿಬ್ಬಂದಿ ನೇಮಕಾತಿ ಕಾರ್ಯಕ್ರಮ ಪಟ್ಟಿಯ ಅಗತ್ಯತೆಗಳನ್ನು ಪೂರೈಸಲು, ಮಾನವ ಶಕ್ತಿಯು ದೊರೆಯುವ ಮೂಲಗಳನ್ನು ಶೋಧಿಸಿ,ದಕ್ಷವಾದ ಕಾರ್ಯಪಡೆಯನ್ನು ಆಯ್ಕೆ ಮಾಡಲು ಸಹಾಯವಾಗುವಂತೆ, ಸಾಕಷ್ಟು ಸಂಖ್ಯೆಯ ಮಾನವ ಶಕ್ತಿಯನ್ನು ಸೆಳೆಯುವ, ಪರಿಣಾಮಕಾರಿ ಕ್ರಮಗಳನ್ನೊಳಗೊಂಡ ಪ್ರಕ್ರಿಯೆಯೇ ನೇಮಕಾತಿ"
ನೇಮಕಾತಿಯ ಮೂಲಗಳುಸಂಪಾದಿಸಿ
ನೇಮಕಾತಿಯ ಮೂಲಗಳನ್ನು ಕೆಳಕಂಡಂತೆ ಎರಡು ವಿಭಾಗಗಳನ್ನಾಗಿ ವಿಂಗಡಿಸಬಹುದು.
ಆಂತರಿಕ ಮೂಲಗಳುಸಂಪಾದಿಸಿ
ಯಾವುದಾದರು ಹುದ್ದೆ ಖಾಲಿಯಾದಾಗ, ಈಗಾಗಲೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಮೂಲಕ, ಹುದ್ದೆಗಳನ್ನು ಭರ್ತಿ ಮಾಡುವುದನ್ನು 'ಆಂತರಿಕ ಮೂಲ ನೇಮಕಾತಿ' ಎನ್ನುವರು.ಇದರ ಎರಡು ವಿಧಗಳೆಂದರೆ,
೧. ಬಡ್ತಿ
೨. ವರ್ಗಾವಣೆ
ಬಾಹ್ಯ ಮೂಲಗಳುಸಂಪಾದಿಸಿ
ಸಂಸ್ಥೆಗಳಿಗೆ ಅಂತರಿಕ ಮೂಲಗಳಿಂದ ಸೂಕ್ತ ಅಭ್ಯರ್ಥಿಗಳು ಸಿಗದೇ ಇರುವಾಗ, ಬಾಹ್ಯಮೂಲಗಳಿಂದ, ನೇಮಕಾತಿ ಮಾಡುವುದು ಅನಿವಾರ್ಯವಾಗುತ್ತದೆ.ಬಾಹ್ಯ ಮೂಲಗಳಿಂದ ವ್ಯಾಪಕ ಆಯ್ಕೆ ದೊರೆಯುವುದಲ್ಲದೆ, ಹೆಚ್ಚು ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯ.ಬಾಹ್ಯ ಮೂಲದ ಅನೇಕ ವಿಧಗಳು ಈ ಕೆಳಗಿನಂತಿವೆ,
೧. ನೇರ ನೇಮಕಾತಿ
೨. ನೇರ ಸ್ವೀಕೃತ ಅರ್ಜಿಗಳು
೩. ಜಾಹೀರಾತು
೪. ಉದ್ಯೋಗ ವಿನಿಮಯ ಕೇಂದ್ರಗಳು
೫. ಖಾಸಗಿ ಉದ್ಯೋಗ ನೇಮಕಾತಿ ಸಂಸ್ಥೆಗಳು
೬. ಶಿಕ್ಷಣ ಸಂಸ್ಥೆಗಳು (ಕ್ಯಾಂಪಸ್ ಸಂದರ್ಶನಗಳು)
೭. ಕಾರ್ಮಿಕ ಗುತ್ತಿಗೆದಾರರು
೮. ಟಿ.ವಿ.ಜಾಹಿರಾತು
೯. ಅಂತರಜಾಲ ವ್ಯವಸ್ಥೆ