ಎ. ಆರ್. ಮಣಿಕಾಂತ್

ಭಾರತೀಯ ಲೇಖಕ, ಅಂಕಣ ಬರಹಗಾರ

ಮಣಿಕಾಂತ್ ಕನ್ನಡದ ಪತ್ರಕರ್ತರು ಹಾಗೂ ಬರಹಗಾರರು. ಹಾಯ್ ಬೆಂಗಳೂರ್, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಉಪಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಅವರ ಪುಸ್ತಕಗಳು ಬಹಳ ಜನಪ್ರಿಯವಾಗಿದ್ದು ದಾಖಲೆ ಸಂಖ್ಯೆಯಲ್ಲಿ ಮಾರಾಟ ಹಾಗು ಮರುಮುದ್ರಣ ಕಂಡಿವೆ.

ವಿದ್ಯಾಭ್ಯಾಸ, ಜೀವನ, ವೃತ್ತಿ

ಬದಲಾಯಿಸಿ

ಮಣಿಕಾಂತ್ ಮೂಲತಃ ಮಂಡ್ಯದವರು. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯತನಹಳ್ಳಿ ಎಂಬ ಊರಿನವರು. ಮಂಡ್ಯದ ಪಿ.ಇ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರು. ಅವರು ಪತ್ರಿಕೆಗಳಲ್ಲಿ ತಮ್ಮ ಅಂಕಣಗಳ ಮೂಲಕ ಓದುಗರ ವಲಯದಲ್ಲಿ ಪರಿಚಿತರಾದವರು. ಎಂಟು ವರ್ಷಗಳ ಕಾಲ ‘ವಿಜಯ ಕರ್ನಾಟಕ'ದಲ್ಲಿ ಕೆಲಸ ನಿರ್ವಹಿಸಿ ‘ಈ ಗುಲಾಬಿಯು ನಿನಗಾಗಿ', ‘ಮರೆಯಲಿ ಹ್ಯಾಂಗ', ‘ಉಭಯ ಕುಶಲೋಪರಿ ಸಾಂಪ್ರತ' ಹಾಗೂ ‘ಹಾಡು ಹುಟ್ಟಿದ ಸಮಯ' ಎಂಬ ಜನಪ್ರಿಯ ಅಂಕಣಗಳನ್ನು ಬರೆದಿದ್ದಾರೆ.[] ಹೆಚ್ಚು ಮಾರಾಟ ದಾಖಲೆಗಳನ್ನು ಕಂಡ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. 'ನೀಲಿಮಾ ಪ್ರಕಾಶನ' ಎಂಬುದು ಅವರ ಪುಸ್ತಕ ಪ್ರಕಾಶನ ಸಂಸ್ಥೆ.

ಕೃತಿಗಳು

ಬದಲಾಯಿಸಿ

ಇವು ನೀಲಿಮಾ ಪ್ರಕಾಶನ'ದಿಂದ ಪ್ರಕಟವಾಗಿವೆ-

  • ಈ ಗುಲಾಬಿಯು ನಿನಗಾಗಿ - ೨೦೦೬
  • ಅಮ್ಮ ಹೇಳಿದ ಎಂಟು ಸುಳ್ಳುಗಳು - ೨೦೦೯
  • ಹಾಡು ಹುಟ್ಟಿದ ಸಮಯ - ೨೦೧೦
  • ಅಪ್ಪ ಅಂದ್ರೆ ಆಕಾಶ [] - ೨೦೧೨
  • ಭಾವ ತೀರ ಯಾನ - ೨೦೧೪
  • ಮನಸು ಮಾತಾಡಿತು - ೨೦೧೬

ಉಲ್ಲೇಖಾರ್ಹ ಸಂಗತಿಗಳು

ಬದಲಾಯಿಸಿ
  • ಏಳನೇ ತರಗತಿಯ ಕನ್ನಡ ಪಠ್ಯಕ್ಕೆ ಮತ್ತು ಮಂಗಳೂರು ವಿವಿಯ ಪದವಿ ವಿಭಾಗಕ್ಕೆ ಮಣಿಕಾಂತರ ಪುಸ್ತಕದ ಅಧ್ಯಾಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
  • 'ಹಾಡು ಹುಟ್ಟಿದ ಸಮಯ' ಅಂಕಣಬರಹ ಕನ್ನಡ ಪತ್ರಿಕೋದ್ಯಮದಲ್ಲಿ ನಡೆದ ಒಂದು ಹೊಸಾ ಪ್ರಯೋಗ. ಅಲ್ಲಿನ ತನಕ ಚಿತ್ರಗೀತೆಯನ್ನು ಪೂರ್ತಿ ಕೊಟ್ಟು, ಅದರ ಸಾಹಿತ್ಯ ಯಾರದ್ದು, ಸಂಗೀತ ನಿರ್ದೇಶನ ಯಾರದ್ದು ಅಂತೆಲ್ಲಾ ವಿವರವಾದ ಪಟ್ಟಿ ಕೊಟ್ಟು, ಹಾಡುಗಳು ಸೃಷ್ಟಿಯಾದ ಸಂದರ್ಭವನ್ನು ವಿವರಿಸಿದ ಅಂಕಣ ಅಥವಾ ಬರಹ ಕನ್ನಡದಲ್ಲಿ ಬಂದಿರಲಿಲ್ಲ.
  • 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕ ದಾಖಲೆಯ ೧೬೦ ಮುದ್ರಣಗಳನ್ನು ಕಂಡು ಮಾರಾಟ ೧.೬ ಲಕ್ಷ ಪ್ರತಿಗಳ ಗಡಿ ತಲುಪಿದೆ (೨೦೨೦).
  • 'ಅಪ್ಪ ಅಂದ್ರೆ ಆಕಾಶ' ಪುಸ್ತಕ ೯೦೦೦೦, 'ಭಾವತೀರಯಾನ' ಪುಸ್ತಕ ೨೫೦೦೦ ಪ್ರತಿಗಳು ಮಾರಾಟ ಆಗಿವೆ. (೨೦೧೬ರ ಇಸವಿವರೆಗಿನೆ ಮಾಹಿತಿ).

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ
  • 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಕೃತಿಗೆ ೨೦೦೯ನೇ ಸಾಲಿನ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೧೦ ನೇ ಸಾಲಿನ ಅಮ್ಮ ಪ್ರಶಸ್ತಿ[], ೨೦೧೨ ನೇ ಸಾಲಿನ ಅವ್ವ ಪ್ರಶಸ್ತಿ ದೊರಕಿದೆ.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-04-12. Retrieved 2016-08-18.
  2. ಬದುಕಿನಲ್ಲಿ ಭರವಸೆ ಮೂಡಿಸುವ ಮಣಿಕಾಂತ್ ಅಂಕಣ: ಎಚ್‌ಎಸ್‌ವಿ, ಕನ್ನಡಪ್ರಭ, ೧೮ ಫೆಬ್ರವರಿ ೨೦೧೩
  3. ಮಣಿಕಾಂತ್ ಸೇರಿದಂತೆ ನಾಲ್ಕು ಮಂದಿಗೆ ಅಮ್ಮ ಪ್ರಶಸ್ತಿ, ಒನ್ ಇಂಡಿಯಾ  » ಕನ್ನಡ, ನವೆಂಬರ್೧೩,೨೦೧೦


ಹೊರಕೊಂಡಿಗಳು

ಬದಲಾಯಿಸಿ