ಹಾಯ್ ಬೆಂಗಳೂರ್ ಕನ್ನಡದ ಕಪ್ಪು ಸುಂದರಿ ಎಂದೇ ಪ್ರಚಲಿತದಲ್ಲಿರುವ ಕನ್ನಡ ವಾರಪತ್ರಿಕೆ.ಕನ್ನಡದ ಪ್ರತಿಭಾವಂತ ಲೇಖಕ ಹಾಗೂ ಪ್ರಭಾವಿ ಪತ್ರಕರ್ತರಾದ ರವಿ ಬೆಳಗೆರೆ ಯವರ ಸಾರಥ್ಯದಲ್ಲಿ ಮುನ್ನೆಡೆಯುತ್ತಿದೆ.

ಸ್ಥಾಪನೆಸಂಪಾದಿಸಿ

೧೯೯೫ರಲ್ಲಿ ಬೆಂಗಳೂರಿನ ಪದ್ಮನಾಭ ನಗರದಲ್ಲಿನ ಕಛೆರಿಯಲ್ಲಿ ರವಿ ಬೆಳಗೆರೆಯವರ ಸಾರಥ್ಯದಲ್ಲಿ ಹಾಗೂ ಆರ್.ಟಿ.ವಿಠಲಮೂರ್ತಿ, ರಾ.ಸೊಮನಾಥ,ಜೋಗಿ ಮತ್ತು ಇ.ಹೆಚ್.ಸಂಗಮದೇವರವರುಗಳ ಸಮಕ್ಷಮದಲ್ಲಿ ಪ್ರಕಟಗೊಂಡಿತು.

ಸಾರ ಸಂಗ್ರಹಸಂಪಾದಿಸಿ

  1. ಲವ್ ಲವಿಕೆ.
  2. ಬಾಟಮ್ ಐಟಂ.
  3. ಖಾಸ್ ಬಾತ್.

ಪತ್ರಿಕಾ ಲೋಕದಲ್ಲೇ ಸಂಚಲನ ಮೂಡಿಸಿ ಐದು ವರ್ಷಗಳವರೆಗು ಹೆಚ್ಚು ಪ್ರಕಟವಾಗಿದ್ದು ಪಾಪಿಗಳ ಲೋಕದಲ್ಲಿ ,ಇದರ ಪ್ರಮುಖ ವಿಷಯ ಪಾತಕ ಲೋಕದ ಸುದ್ದಿಯಾಗಿತ್ತು.

ಇತರೆ ಸಾರ ಸಂಗ್ರಹಗಳುಸಂಪಾದಿಸಿ

  1. ಹಗರಣಗಳು.
  2. ವ್ಯವಹಾರಗಳು.
  3. ರಾಜಕೀಯ ಹಿನ್ನೆಲೆಗಳು.
  4. ಕೊಲೆ.
  5. ಅಪರಾಧ.

ಹೀಗೆ ಮುಂತಾದುವುಗಳನ್ನು ಸಮಾಜದ ಕಣ್ಣಿಗೆ ಅತಿ ಸೂಕ್ಷ್ಮವಾಗಿ ಪರಿಚಯಿಸಿದ ಹಿಗ್ಗಳಿಕೆ ಈ ಪತ್ರಿಕೆಯಾಗಿದೆ ಈ ಎಲ್ಲಾ ಸಾರಸಂಗ್ರಹ ಲೇಖನಗಳನ್ನು ಹೊರೆತು ಪಡೆಸಿ ಮನೋವಿಜ್ಣಾನ ಕ್ಷೇತ್ರ, ಕ್ರೀಡೆ, ವಿಜ್ಣಾನ ಮತ್ತು ಸಿನೆಮಾ ಕ್ಷೇತ್ರಗಳನ್ನು ಒಳಗೊಂಡ ವಾರ ಪತ್ರಿಕೆಯಾಗಿದೆ.

ಮಾರುಕಟ್ಟೆಯ ಜಾಹಿರಾತುಗಳಿಲ್ಲದೇ ಪ್ರಕಾಶಿತವಾಗುತ್ತಿರುವ ಕನ್ನಡ ಪತ್ರಿಕೆಗಳಲ್ಲೊಂದು.