ಎ.ಎಸ್. ಕಿರಣ್ ಕುಮಾರ್
ಡಾ. ಆಲೂರು ಸೀಳಿನ್ ಕಿರಣ್ ಕುಮಾರ್ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಹುದ್ದೆ ಹಾಗೂ ಬಾಹ್ಯಾಕಾಶ ಸಂಸ್ಥೆಯ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ ವಿಜ್ಞಾನಿಯಾಗಿದ್ದಾರೆ.[೧] ಜನವರಿ ೧೨, ೨೦೧೫ ರಿಂದ ಜನವರಿ ೨೦೧೮ ರ ವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದರು.[೨][೩] [೪] ಈ ಹುದ್ದೆ ನಿರ್ವಹಿಸಿದ ಎರಡನೇ ಕನ್ನಡಿಗ. ೧೯೭೫ರಲ್ಲಿ ಇಸ್ರೋ ಅಂಗಸಂಸ್ಥೆಯಾದ ಅಲಹಾಬಾದ್ ನ Space Application Centerನಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಕೊಂಡ ಕಿರಣ್ ಕುಮಾರ್ ಅಂದಿನಿಂದಲೂ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಸ್ರೊ ಹುದ್ದೆಗೆ ಬರುವ ಮೊದಲು ಅವರು ಅಲಹಾಬಾದಿನ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ನಿರ್ದೇಶಕರಾಗಿದ್ದರು. ಇವರು ಭಾಸ್ಕರ (೧೯೭೯), ಚಂದ್ರಯಾನ–೧ (೨೦೦೮) ಯೋಜನೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮಂಗಳಯಾನ ಯೋಜನೆ ಯಶಸ್ಸಿನಲ್ಲೂ ಅವರ ಪಾತ್ರವಿದೆ.
ಆಲೂರ್ ಸೀಳಿನ್ ಕಿರಣ್ ಕುಮಾರ್ | |
---|---|
Born | ೨೨ ಅಕ್ಟೋಬರ್ ೧೯೫೨ |
Occupation | 'ಬಾಹ್ಯಾಕಾಶ ವಿಜ್ಞಾನಿ' |
Years active | ೧೯೭೫ ರಿಂದ ಪ್ರಸ್ತುತ |
Awards | ಪದ್ಮಶ್ರೀ |
ಹುಟ್ಟು-ವಿದ್ಯಾಭ್ಯಾಸ
ಬದಲಾಯಿಸಿಎ.ಎಸ್. ಕಿರಣ್ ಕುಮಾರ್ ಹಾಸನ ಜಿಲ್ಲೆಯವರು. ಆಲೂರಿನಲ್ಲಿ ೧೯೫೨ರಲ್ಲಿ ಜನಿಸಿದರು. ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಮುಗಿಸಿ (೧೯೭೧) ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಎಂಎಸ್‌ಸಿ (೧೯೭೩) ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಫಿಸಿಕಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ. (೧೯೭೫)
ಬಾಹ್ಯಾಕಾಶ ಕ್ಷೇತ್ರದಲ್ಲಿ ಸೇವೆ
ಬದಲಾಯಿಸಿ'ಭಾಸ್ಕರ ಟಿವಿ ಪೇಲೋಡ್' ನಿಂದ ತಮ್ಮ ಕೆಲಸ ಆರಂಭಿಸಿದ ಕಿರಣ್ ಕುಮಾರ್, ಭಾರತದ ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನ ಯೋಜನೆಗಳಲ್ಲಿ ಭಾಗವಹಿಸಿದ್ದಾರೆ. ಭಾರತದ ಮೊಟ್ಟ ಮೊದಲ ದೂರಸಂವೇದಿ ಉಪಗ್ರಹ (Remote Sensing satellite) ಭಾಸ್ಕರ(೧೯೭೯)ದ ಯಶಸ್ಸಿನಲ್ಲೂ ಕುಮಾರ್ ಕೊಡುಗೆ ನೀಡಿದ್ದಾರೆ. ಭೂಮಿ ಮತ್ತು ಸಮದ್ರದ ನಡುವಿನ ನಕ್ಷೆ ಮತ್ತು ಇದನ್ನು ಬಣ್ಣಗಳ ಆಧಾರ ಇಟ್ಟುಕೊಂಡು ಗುರುತು ಹಾಕುವುದರಲ್ಲಿ ಕುಮಾರ್ ನೈಪುಣ್ಯ ಸಾಧಿಸಿದ್ದು ದೇಶದ ನೆರವಿಗೆ ಬಂದಿತು. ಇದಲ್ಲದೇ 'ಇನ್ಸಾಟ್ 3ಡಿ', 'ಮೈಕ್ರೋ ಸೆಟ್ಲೈಟ್', 'ಭೂ ಪ್ರದೇಶ ಮಾಪನಾ ಕ್ಯಾಮರಾ ತಂತ್ರಜ್ಞಾನ'ದಲ್ಲಿ ಕಿರಣ್ ಕುಮಾರ್ ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ. ಮಂಗಳಯಾನಕ್ಕೆ ಸಂಬಂಧಿಸಿದ ಐದು ಉಪಕರಣ ತಯಾರಿಕೆಯ ಮೇಲ್ವಿಚಾರಣೆಯನ್ನು ಕಿರಣ್ ಕುಮಾರ್ ಹೊತ್ತುಕೊಂಡಿದ್ದರು. ಇವರ ನೇತೃತ್ವದಲ್ಲಿ ಇಸ್ರೋ ಒಂದೇ ಉಡಾಹಕದ ಮೂಲಕ ೧೦೪ ಉಪಗ್ರಹಗಳನ್ನು ವಿವಿಧ ಕಕ್ಷೆಗೆ ಸೇರಿಸಿ ವಿಶ್ವದಾಖಲೆ ಬರೆದಿದೆ.[೫]
ಪ್ರಶಸ್ತಿ-ಪುರಸ್ಕಾರಗಳು-ಮನ್ನಣೆಗಳು
ಬದಲಾಯಿಸಿ- ಇಂಡಿಯನ್ ಸೊಸೈಟಿಯ ರಿಮೋಟ್ ಸೆನ್ಸಿಂಗ್ ಪ್ರಶಸ್ತಿ (೧೯೯೪),
- ವಾಸ್ವಿಕ್ (VASVIK) ಪ್ರಶಸ್ತಿ (Electronic sciences and technology) (೧೯೯೮)
- ಇಸ್ರೋದಿಂದ ವೈಯಕ್ತಿಕ ಸೇವಾ ಪ್ರಶಸ್ತಿ (೨೦೦೬)
- Indian Society of Remote Sensing ಇಂದ ಭಾಸ್ಕರ ಪ್ರಶಸ್ತಿ (೨೦೦೭)
- ಇಸ್ರೋದಿಂದ ಉತ್ತಮ ಸೇವಾ ಪ್ರಶಸ್ತಿ (೨೦೦೮)
- ಅಂತಾರಾಷ್ಟ್ರೀಯ ಗಗನಯಾನ ಸಂಸ್ಥೆಯಿಂದ ಉತ್ತಮ ತಂಡ ಸಾಧಕ (Team Achievement) ಪ್ರಶಸ್ತಿ (೨೦೦೮) (Cartosat)
- ಅಂತಾರಾಷ್ಟ್ರೀಯ ಗಗನಯಾನ ಸಂಸ್ಥೆಯಿಂದ ಉತ್ತಮ ತಂಡ ಸಾಧಕ (Team Achievement) ಪ್ರಶಸ್ತಿ (೨೦೧೩) (Chandrayaan-1)
- ಸರ್ ಎಂ. ವಿಶ್ವೇಶ್ವರಾಯ ಪ್ರಶಸ್ತಿ (೨೦೧೩)
- ಪದ್ಮಶ್ರೀ ಪುರಸ್ಕಾರ (೨೦೧೪)
- ರಾಜ್ಯೋತ್ಸವ ಪ್ರಶಸ್ತಿ (೨೦೧೫)
- ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.[೬]
- ಈ ಸಂಸ್ಥೆಗಳ ಗೌರವ ಸದಸ್ಯ (ಫೆಲ್ಲೊ)
- Indian National Academy of Engineering
- Indian Society of Remote Sensing
- Institution of Electronics & Telecommunication Engineers
- Indian Meteorological Society; ಹಾಗೂ
- International Academy of Astronautics ಸಂಸ್ಥೆಯ ಸದಸ್ಯ
ಉಲ್ಲೇಖಗಳು
ಬದಲಾಯಿಸಿ- ↑ The Hindu, January 13, 2015, 'New Space Secretary, and ISRO chief'
- ↑ ಕನ್ನಡಿಗ ಕಿರಣ್ ಕುಮಾರ್ ಇಸ್ರೊ ಅಧ್ಯಕ್ಷರಾಗಿ ನೇಮಕ, ಪ್ರಜಾವಾಣಿ, ೧೩ಜನವರಿ೨೦೧೫
- ↑ ಇಸ್ರೋ ಅಧ್ಯಕ್ಷರಾಗಿ ಕಿರಣ್ ಕುಮಾರ್ ಅಧಿಕಾರ ಸ್ವೀಕಾರ - ಉದಯವಾಣಿ - ೧೫ಜನವರಿ೨೦೧೫
- ↑ ಕನ್ನಡಿಗ ಎ.ಎಸ್.ಕಿರಣ್ ಕುಮಾರ್ ಇಸ್ರೋ ಅಧ್ಯಕ್ಷ - ಒನ್ ಇಂಡಿಯಾ, ೧೩ಜನವರಿ೨೦೧೫
- ↑ ಇಸ್ರೋ ವಿಶ್ವ ವಿಕ್ರಮ Archived 2017-02-20 ವೇಬ್ಯಾಕ್ ಮೆಷಿನ್ ನಲ್ಲಿ., ವಿಜಯವಾಣಿ ಸುದ್ದಿಜಾಲ, 16.02.2017
- ↑ ತುಮಕೂರು ವಿಶ್ವವಿದ್ಯಾಲಯ ೮ನೇ ಘಟಿಕೋತ್ಸವ - ಕನ್ನಡ ವೆಬ್ ದುನಿಯಾ - ೨೪ಜನವರಿ೨೦೧೫
ಇವುಗಳನ್ನೂ ನೋಡಿ
ಬದಲಾಯಿಸಿಹೊರಕೊಂಡಿಗಳು
ಬದಲಾಯಿಸಿ- A. S. KIRAN KUMAR PROFILE: iitg.ernet.in
- ಇಸ್ರೋ ಸಂಸ್ಥೆಯ ಜಾಲತಾಣದಲ್ಲಿ ಕಿರಣ್ ಕುಮಾರ್ ಅವರ ಪರಿಚಯ Archived 2016-12-31 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಜಾಲತಾಣದಲ್ಲಿ ಕಿರಣ್ ಕುಮಾರ್ ಅವರ ಪರಿಚಯ Archived 2014-09-12 ವೇಬ್ಯಾಕ್ ಮೆಷಿನ್ ನಲ್ಲಿ.
- Ten ways ISRO has transformed under Kiran Kumar, By Harsha Vardhan, geospatialworld.net
- ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಜಾಲತಾಣ Archived 2015-01-29 ವೇಬ್ಯಾಕ್ ಮೆಷಿನ್ ನಲ್ಲಿ.
- ಇಸ್ರೋ ಸಂಸ್ಥೆಯ ಕನ್ನಡ ಜಾಲತಾಣ